For Quick Alerts
ALLOW NOTIFICATIONS  
For Daily Alerts

ಓಟ್ಸ್ ಬಿಸಿಬೇಳೆಬಾತ್

|

ದಕ್ಷಿಣಭಾರತೀಯ ತಿಂಡಿಗಳಲ್ಲಿ ಪ್ರಸಿದ್ಧವಾದ ಒಂದು ತಿಂಡಿ ಬಿಸಿಬೇಳೆಬಾತ್. ಬಿಸಿ ಬಿಸಿಯಾಗಿ ಒಂದಿಷ್ಟು ಮೊಸರುಬಜ್ಜಿ ಅಥವ ಕಾರಬೂಂದಿಯೊಂದಿಗೆ ಬಿಸಿಬೇಳೆಬಾತ್ ಮುಂದಿಟ್ಟರೆ ಬೇಡ ಅನ್ನೋರುಂಟೆ? ನೀವೆಲ್ಲ ಅಕ್ಕಿ ಅಥವ ಅನ್ನದ ಬಿಸಿಬೇಳೆಬಾತ್ ತಿಂದಿರ್ತೀರಿ. ಆದರೆ ನಾವಿಲ್ಲಿ ಹೇಳಿಕೊಡಲು ಹೊರಟಿರುವುದು ಓಟ್ಸ್ ಬಿಸಿಬೇಳೆಬಾತ್! ಓಟ್ಸ್ ನಲ್ಲಾ ಅಂತ ಹುಬ್ಬೇರಿಸಬೇಡಿ. ಹೇಗೆ ಮಾಡಬೇಕು ಹೇಳ್ತೀವಿ ಟ್ರೈ ಮಾಡಿ. ಓಟ್ಸ್ ಆರೋಗ್ಯಕ್ಕೆ ಕೂಡ ಒಳ್ಳೆಯದು.

ಅಕ್ಕಿಗೆ ಬದಲು ಓಟ್ಸ್ ಉಳಿದಂತೆ ಬಿಸಿಬೇಳೆಬಾತಿಗೆ ಬಳಸುವ ಸಾಮಗ್ರಿಗಳೆಲ್ಲ ಒಂದೇ. ಬೇಳೆ, ತರಕಾರಿ, ಮಸಾಲೆ ಹಾಕಿದ ರುಚಿಯಾದ ಪೌಷ್ಟಿಕಾಂಶಭರಿತ ಬೆಳಗಿನ ಉಪಹಾರ ರೆಡಿ. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಸುಮಾರು 20 ನಿಮಿಷ ಮತ್ತು ಇದನ್ನು ಬೇಯಿಸಿ ಸಿದ್ಧ ಮಾಡಲು 24 ನಿಮಿಷ ಸಾಕು.

Oats bisibelebath recipe for Breakfast

ಸುಮಾರು ಮೂರು ಮಂದಿಗೆ ಸಾಕಾಗುವಷ್ಟು ಬಿಸಿಬೇಳೆಬಾತಿಗೆ ಬೇಕಾಗುವ ಸಾಮಗ್ರಿಗಳು ಏನು ಬನ್ನಿ ನೋಡೋಣ.
ಸಾಮಗ್ರಿಗಳು
ಓಟ್ಸ್ - 1 ಕಪ್ (ಹುರಿದಿರಬೇಕು)
ತೊಗರಿಬೇಳೆ- 1/2 ಕಪ್ (ಬೇಯಿಸಿದ್ದು)
ಕ್ಯಾರೆಟ್- 1 (ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ)
ಆಲೂಗಡ್ಡೆ-1 (ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ)
ಹುರಳಿಕಾಯಿ- 8 (ಕತ್ತರಿಸಿಕೊಳ್ಳಿ)
ಕಡಲೆ ಬೀಜ- (10 ಗ್ರಾಂ)
ಟೊಮೊಟೊ- 1 (ಕತ್ತರಿಸಿಕೊಳ್ಳಿ)
ಈರುಳ್ಳಿ- 1 (ಕತ್ತರಿಸಿದ್ದು)
ಅರಿಶಿಣ- 1 ಟೀ ಚಮಚ
ಬೆಲ್ಲ- 1 ಟೀ ಚಮಚ
ಹುಣಸೆಹಣ್ಣು- ಸ್ವಲ್ಪ
ಎಣ್ಣೆ- 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆ:
ಸಾಸಿವೆ- 1 ಚಮಚ
ಕರಿಬೇವು- 1 ಹಿಡಿ
ಎಣ್ಣೆ- 2 ಟೀ ಚಮಚ
ಬಿಸಿಬೇಳೆಬಾತ್ ಪುಡಿ ಮಾಡಲು ಬೇಕಾಗುವ ಸಾಮಗ್ರಿಗಳು
ಕಡಲೆಕಾಳು- 1 ಟೀಚಮಚ
ಉದ್ದಿನಬೇಳೆ- 1 ಟೀಚಮಚ
ಧನಿಯ- 1/2 ಚಮಚ
ಜೀರಿಗೆ- 1 ಚಮಚ
ಮೆಣಸು- 5
ಒಣ ಮೆಣಸಿನಕಾಯಿ- 2
ದಾಲ್ಚಿನ್ನಿ- 1
ಕಾರ್ಡಮೊಮ್- 1
ಏಲಕ್ಕಿ- 1
ಲವಂಗ-1
ಗಸಗಸೆ- 1 ಟೀಚಮಚ
ಒಣಕೊಬ್ಬರಿ- 1 ಟೀಚಮಚ
ಅಕ್ಕಿ- 1/2 ಟೀ ಚಮಚ
ಅರಿಶಿಣ- 1/4 ಟೀ ಚಮಚ
ಸಾಸಿವೆ- 1/2 ಟೀಚಮಚ
ಮೆಂತ್ಯೆ- ಸ್ವಲ್ಪ
ಕರಿಬೇವು- ಸ್ವಲ್ಪ
ಇಂಗು- 1/4 ಟೀಚಮಚ

ಮಾಡುವ ವಿಧಾನ
1. ಮೊದಲಿಗೆ ಹತ್ತು ನಿಮಿಷ ಕುಕ್ಕರ್ ನಲ್ಲಿ ತರಕಾರಿಗಳನ್ನು ಬೇಯಿಸಿಕೊಳ್ಳಿ.
2. ಬೇಳೆಯನ್ನು ಬೇಯಿಸಕೊಳ್ಳಿ.
3. ಈಗ ಮೇಲೆ ತಿಳಿಸಿರುವ ವಿಧಾನದಲ್ಲಿ ಬಿಸಿಬೇಳೆಬಾತ್ ಪುಡಿಯನ್ನು ತಯಾರಿಸಿಕೊಳ್ಳಿ. ಮೊದಲಿಗೆ ಮೇಲೆ ತಿಳಿಸಿರುವ ಎಲ್ಲ ಸಾಮಾನುಗಳನ್ನು ಒಂದು ಚಮಚ ತುಪ್ಪದಲ್ಲಿ 3-4 ನಿಮಿಷ ಹುರಿದುಕೊಳ್ಳಿ. ಹುರಿದ ನಂತರ ಅದು ತಣ್ಣಗಾದ ಮೇಲೆ ಪುಡಿ ಮಾಡಿಕೊಳ್ಳಿ.
4. ಈಗ ಪ್ರತ್ಯೇಕ ಪಾತ್ರೆಯಲ್ಲಿ ಓಟ್ಸ್ ಅನ್ನು 2-3 ನಿಮಿಷ ಸಣ್ಣಗಿನ ಉರಿಯಲ್ಲಿ ಹುರಿದುಕೊಳ್ಳಿ.
5. ಹುರಿದ ಓಟ್ಸ್ ತಣ್ಣಗಾದ ನಂತರ ಅದಕ್ಕೆ ಮಸಾಲೆ ಬೆರೆಸಿ.
6. ಒಂದು ದೊಡ್ಡ ಪಾತ್ರೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಕಾಯಿಸಿ. ಒಗ್ಗರಣೆ ಹಾಕಿ. ಅದಕ್ಕೆ ಕರಿಬೇವು ಎಲೆ ಸೇರಿಸಿ ಹುರಿಯಿರಿ.
7. ಇದಕ್ಕೆ ಈರುಳ್ಳಿ ಸೇರಿಸಿ ಎಲ್ಲವನ್ನು 5 ನಿಮಿಷಗಳವರೆಗೆ ಚೆನ್ನಾಗಿ ಕಲಸಿ.
8. ಈಗ ಅರಿಶಿಣ, ಟೊಮೊಟೊ ಮತ್ತು ಇತರ ತರಕಾರಿಗಳನ್ನು ಸೇರಿಸಿ. ಎಲ್ಲವನ್ನೂ ಕಲಸಿ.
9. ಈಗ ಎಷ್ಟು ಬೇಕೋ ಅಷ್ಟು ನೀರನ್ನು ಸೇರಿಸಿ ಮಿಶ್ರಣವನ್ನು ಸಣ್ಣ ಉರಿಯಲ್ಲಿ ಕುದಿಸಿ.
10. ಇದಕ್ಕೆ ಬೆಲ್ಲ ಸೇರಿಸಿ ಮತ್ತೆ 2 ನಿಮಿಷ ಚೆನ್ನಾಗಿ ಬೆರೆಸಿ.
11. ಈ ಮಿಶ್ರಣ ಸ್ವಲ್ಪ ಬೆಂದ ನಂತರ ಬೇಳೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಇದರೊಂದಿಗೆ ಹುಣಸೇ ಹುಳಿಯನ್ನು ಸೇರಿಸಿ 6 ನಿಮಿಷಗಳವರೆಗೆ ಕುದಿಸಿ.
12. ಈ ಮಿಶ್ರಣಕ್ಕೆ ಬಿಸಿಬೇಳೆ ಬಾತ್ ಪುಡಿ ಮತ್ತು ಉಪ್ಪನ್ನು ಹಾಕಿ ಕುದಿಸಿ.
13. ಸ್ವಲ್ಪ ನೀರು ಸೇರಿಸಿ ಕುದಿಸಿ.
14. ಹೀಗೆ ಸಣ್ಣ ಉರಿಯಲ್ಲಿ 10 ನಿಮಿಷಗಳವರೆಗೆ ಕುದಿಸಿದ ನಂತರ ಒಲೆಯನ್ನು ಆರಿಸಿ.

ಕಾಫಿಯೊಂದಿಗೆ ಓಟ್ಸ್ ಬಿಸಿಬೇಳೆ ಬಾತ್ ಸವಿಯಲು ಸಿದ್ಧ.

Story first published: Friday, November 22, 2013, 16:34 [IST]
X
Desktop Bottom Promotion