For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳಿಗೆ ಲೆಮನ್ ಓಟ್ಸ್ ರೆಸಿಪಿ

|

ಇಂದು ವಿಶ್ವ ಮಧುಮೇಹ ದಿನ. ಮಧುಮೇಹ ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದಿನ. ಮಧುಮೇಹವನ್ನು ತಡೆಗಟ್ಟಲು ಮಾಡಬೇಕಾದ ಎರಡು ಪ್ರಮುಖ ಕಾರ್ಯಗಳೆಂದರೆ 1. ಒಳ್ಳೆಯ ಆಹಾರಕ್ರಮ 2. ವ್ಯಾಯಾಮ.

ಮಧುಮೇಹಿಗಳು ಕಟ್ಟುನಿಟ್ಟಿನ ಆಹಾರಕ್ರಮ ಪಾಲಿಸಬೇಕು, ಹಾಗಂತ ಪಥ್ಯದ ಆಹಾರ ತಿನ್ನಬೇಕೆಂದಲ್ಲ, ಆರೋಗ್ಯಕರವಾದ ಆಹಾರವನ್ನು ರುಚಿಯಾಗಿ ಮಾಡಿ ತಿನ್ನಬೇಕು. ಇಲ್ಲಿ ನಾವು ಓಟ್ಸ್ ಅನ್ನು ರುಚಿಕರವಾಗಿ ಮಾಡುವ ವಿಧಾನ ಹೇಳಿದ್ದೇವೆ ನೋಡಿ:

Lemon Oats Recipe For Diabetics

ಬೇಕಾಗುವ ಪದಾರ್ಥಗಳು
ಓಟ್ಸ್ 1 ಕಪ್
ನೀರು ಅರ್ಧ ಕಪ್
ನಿಂಬೆ ರಸ 1 ಚಮಚ
ಚಿಟಿಕೆಯಷ್ಟು ಅರಿಶಿಣ ಪುಡಿ
ಸಾಸಿವೆ ಅರ್ಧ ಚಮಚ
ಬೇಳೆ 1 ಚಮಚ
ಹಸಿ ಮೆಣಸಿನಕಾಯಿ 2, 1ಒಣ ಮೆಣಸು
ಎಣ್ಣೆ
ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ:

* ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ಕಡಲೆ ಬೇಳೆಯನ್ನು ಹಾಕಿ ಅದು ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಹಸಿ ಮೆಣಸಿನಕಾಯಿ, ಒಣ ಮೆಣಸು, ಕರಿ ಬೇವಿನ ಎಲೆ ಹಾಕಿ, ಚಿಟಕೆಯಷ್ಟು ಇಂಗು ಹಾಕಿ, ಒಮ್ಮೆ ಸೌಟ್ ನಿಂದ ಆಡಿಸಿ.

* ಈಗ ಅದಕ್ಕೆ ಅರಿಶಿಣ ಪುಡಿ ಹಾಕಿ, ನೀರು ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ. ನೀರು ಕುದಿಯಲಾರಂಭಿಸಿದಾಗ ಓಟ್ಸ್ ಹಾಕಿ ಮಿಕ್ಸ್ ಮಾಡಿ ಸಾಧಾರಣ ಉರಿಯಲ್ಲಿ ಬೇಯಿಸಿ.

* ಓಟ್ಸ್ ಬೆಂದ ನಂತರ ಅದನ್ನು ಉರಿಯಿಂದ ಇಳಿಸಿ, ನಿಂಬೆ ರಸ ಹಿಂಡಿದರೆ ರುಚಿಯಾದ ಓಟ್ಸ್ ಸವಿಯಲು ರೆಡಿ.

English summary

Lemon Oats Recipe For Diabetics

Diabetics should eat healthy in order for their sugar levels to be regularised. This morning, Boldsky gives you one of the best diabetic recipes you can prepare to celebrate World Diabetes Day. Lemon oats is one of the recipes you should try out this morning.
X
Desktop Bottom Promotion