ದಿಢೀರ್ ಬಿಸಿ ಬಿಸಿ ರವೆ ಇಡ್ಲಿ, ಆಹಾ ಬೊಂಬಾಟ್ ರುಚಿ!

By: Jaya subramanya
Subscribe to Boldsky

ದಕ್ಷಿಣ ಭಾರತದವರಿಗೆ ಇಡ್ಲಿ ಸಾಂಬಾರ್ ಎಂಬುದು ಹೊಸತರವಾದ ತಿಂಡಿ ಏನಲ್ಲ. ಬದಲಿಗೆ ಅವರು ಹೆಚ್ಚು ಇಷ್ಟಪಡುವ ಖಾದ್ಯವಾಗಿದೆ. ಮಲ್ಲಿಗೆಯಂತಹ ಇಡ್ಲಿಯೊಂದಿಗೆ ಬೆಣ್ಣೆ, ಜೊತೆಗೆ ಬಿಸಿ ಬಿಸಿ ತೊಗರಿ ಬೇಳೆ ಸಾಂಬಾರ್ ಬೆರೆಸಿ ತಿಂದರಂತೂ ಸ್ವರ್ಗಕ್ಕೆ ಮೂರೇ ಗೇಣು ಎಂಬ ಆಹ್ಲಾದ ನಮ್ಮಲ್ಲಿ ಮೂಡುತ್ತದೆ...

ಅಷ್ಟೊಂದು ರುಚಿಯ ಶಕ್ತಿಯನ್ನು ಇಡ್ಲಿ ಪಡೆದುಕೊಂಡಿದೆ. ಚಟ್ನಿ ಮತ್ತು ಸಾಂಬಾರ್ ಇಡ್ಲಿಗೆ ಉತ್ತಮ ಕಾಂಬಿನೇಶನ್ ಎಂದೆನಿಸಿದ್ದು, ಎರಡನ್ನೂ ಇಡ್ಲಿಯೊಂದಿಗೆ ಸೇವಿಸುತ್ತಾರೆ. ಇಡ್ಲಿಯಲ್ಲಿ ಹಲವಾರು ವಿಧಗಳಿದ್ದು ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ, ರವೆ ಇಡ್ಲಿ, ವೆಜಿಟೇಬಲ್ ಇಡ್ಲಿ, ಬೆಣ್ಣೆ ಇಡ್ಲಿ ಹೀಗೆ ಇಡ್ಲಿಯ ನಾನಾ ಹೆಸರುಗಳನ್ನು ಕೇಳಿದರೆ ಬಾಯಲ್ಲಿ ನೀರು ಬರುವುದಂತೂ ನಿಜ. ಬಿಸಿ ಬಿಸಿ ಮಸಾಲ ರವೆ ಇಡ್ಲಿ 

ಇಂದಿನ ಲೇಖನದಲ್ಲಿ ಕೂಡ ಥಟ್ಟನೆ ಬಿಸಿಬಿಸಿಯಾಗಿ ರುಚಿಯಾಗಿ ಮಾಡಲಾಗುವ ರವಾ ಇಡ್ಲಿಯ ಪಾಕ ವಿಧಾನಗಳನ್ನು ತಿಳಿಸಿಕೊಡುತ್ತಿದ್ದೇವೆ. ನೀವು ತರಾತುರಿಯಲ್ಲಿರುವಾಗ ಇಡ್ಲಿ ಸಿದ್ಧಪಡಿಸಬೇಕು ಎಂದಾದಲ್ಲಿ ಆಗ ರವೆ ಇಡ್ಲಿ ಅಥವಾ ರವಾ ಇಡ್ಲಿ ಉತ್ತಮ ಯೋಜನೆಯಾಗಿದೆ. 

Rava Idli
 

ಪ್ರಮಾಣ - 5 ಇಡ್ಲಿಗಳು

*ಸಿದ್ಧತಾ ಸಮಯ - 15 ನಿಮಿಷಗಳು

*ಅಡುಗೆಗೆ ಬೇಕಾದ ಸಮಯ - 10 ನಿಮಿಷಗಳು

ಸಾಮಾಗ್ರಿಗಳು

ಹಿಟ್ಟಿಗಾಗಿ

1. ರವೆ - 1 ಕಪ್

2. ಮೊಸರು - 1/4 ಕಪ್

3. ಕೊತ್ತಂಬರಿ ಸೊಪ್ಪು - 1 ಚಮಚ (ಕತ್ತರಿಸಿದ್ದು)

4. ಫ್ರುಟ್ ಸಾಲ್ಟ್ - 3/4 ಚಮಚ

5. ಉಪ್ಪು - ರುಚಿಗೆ ತಕ್ಕಷ್ಟು      ಬಗೆಬಗೆಯ ಇಡ್ಲಿ ರೆಸಿಪಿ-ನೀವೂ ಒಮ್ಮೆ ಪ್ರಯತ್ನಿಸಿ ನೋಡಿ

ಇತರ ಸಾಮಾಗ್ರಿಗಳು

6. ಎಣ್ಣೆ - 1 ಚಮಚ

7. ತುಪ್ಪ - 1/2 ಚಮಚ

8. ಉದ್ದಿನ ಬೇಳೆ - 1 ಚಮಚ

9. ಸಾಸಿವೆ - 1/2 ಚಮಚ

10. ಗೋಡಂಬಿ - 1 ಚಮಚ (ತುಂಡರಿಸಿದ್ದು)

11. ಜೀರಿಗೆ - 1/2 ಚಮಚ

12. ಕರಿಬೇವಿನೆಸಳು - 4

13. ಹಸಿಮೆಣಸು - 2 ಚಮಚ (ಚಿಕ್ಕದಾಗಿ ಕತ್ತರಿಸಿದ್ದು)

14. ಚಿಟಿಕೆಯಷ್ಟು ಇಂಗು 

Rava Idli At Home procedure
 

ಮಾಡುವ ವಿಧಾನ:

1. ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ರವೆ, ಮೊಸರು ಮತ್ತು ಉಪ್ಪನ್ನು ಸೇರಿಸಿ. ನಿಧಾನವಾಗಿ ನೀರನ್ನು ಸೇರಿಸಿಕೊಂಡು ಹಿಟ್ಟನ್ನು ಮಿಶ್ರ ಮಾಡಿಕೊಳ್ಳಿ ಗಂಟುಗಳು ಆಗದಂತೆ ಕಲಸುತ್ತಿರಿ.

2.ಈಗ, ಇದಕ್ಕೆ ಒಗ್ಗರಣೆ ಮಾಡುವ ಹಂತವಾಗಿದೆ. ಸಣ್ಣ ಪ್ಯಾನ್ ತೆಗೆದುಕೊಂಡು ಅದರಲ್ಲಿ ತುಪ್ಪವನ್ನು ಬಿಸಿ ಮಾಡಿ. ಇದಕ್ಕೆ ಸಾಸಿವೆ, ಉದ್ದಿನಬೇಳೆ, ಕರಿಬೇವಿನೆಸಳು, ಗೇರುಬೀಜ, ಜೀರಿಗೆ, ಇಂಗು ಮತ್ತು ಕರಿಬೇವಿನೆಸಳನ್ನು ಸೇರಿಸಿ ಮತ್ತು ಚೆನ್ನಾಗಿ ಒಗ್ಗರಣೆ ಮಾಡಿ. 

Rava Idli At Home procedure
 

3.ಎಲ್ಲವೂ ಚೆನ್ನಾಗಿ ಹುರಿದ ಮೇಲೆ, ಹಿಟ್ಟಿಗೆ ಒಗ್ಗರಣೆಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಫ್ರುಟ್ ಸಾಲ್ಟ್ ಅನ್ನು ಸೇರಿಸಿ ಮತ್ತು ಸ್ವಲ್ಪ ನೀರು ಮಿಶ್ರ ಮಾಡಿ. ಹಿಟ್ಟಿನಲ್ಲಿ ಹುದುಗು ಉಂಟಾಗುತ್ತದೆ ಮತ್ತು ಚೆನ್ನಾಗಿ ಮಿಶ್ರ ಮಾಡಿ.

4.ಈಗ ಇಡ್ಲಿ ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಹಚ್ಚಿ. ಇಡ್ಲಿ ತಟ್ಟೆಗೆ ಸ್ವಲ್ಪ ಹಿಟ್ಟನ್ನು ಹಾಕಿ ಮತ್ತು ಸ್ಟೀಮರ್‌ನಲ್ಲಿ ತಟ್ಟೆಯನ್ನಿರಿಸಿ. 

Rava Idli At Home procedure
 

5. ಸ್ಟೀಮ್‌ಗಾಗಿ 7-8 ನಿಮಿಷಗಳು ಬೇಕು. ಚಮಚದ ಸಹಾಯದಿಂದ ಇಡ್ಲಿಗಳನ್ನು ಹೊರತೆಗೆಯಿರಿ ಮತ್ತು ಪ್ಲಾಟರ್ ಮೇಲಿರಿಸಿ.

Rava Idli At Home procedure
 

6. ಬಿಸಿಯಾದ ರವಾ ಇಡ್ಲಿ ಸೇವನೆಗೆ ಸಿದ್ಧವಾಗಿದೆ. ಇಡ್ಲಿಯೊಂದಿಗೆ ಬಿಸಿ ಸಾಂಬಾರ್ ಇಲ್ಲವೇ ಚಟ್ನಿ ಉತ್ತಮ ಕಾಂಬಿನೇಶನ್ ಆಗಿದೆ. ಈ ವಿಶಿಷ್ಟ ರೆಸಿಪಿಯನ್ನು ನೀವೂ ಟ್ರೈ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ.

English summary

How To Make Quick Rava Idli At Home

If you are fan of South Indian delicacy, Idlis will surely allure you. If you are looking for a healthy breakfast or evening snacks, Idli is a wonderful option. If you think making Idli is time-consuming, this quick recipe of Rava Idli will break that myth. Here;s how you can make quick rava idlis at home.
Story first published: Tuesday, December 13, 2016, 23:14 [IST]
Please Wait while comments are loading...
Subscribe Newsletter