For Quick Alerts
ALLOW NOTIFICATIONS  
For Daily Alerts

ಈ ಯುಗಾದಿ ಗರಿಗರಿ ಬಾಳೆಕಾಯಿ ಬಜ್ಜಿಯೊಂದಿಗೆ ಆಚರಿಸಿ!

|

ಇನ್ನೇನು ಯುಗಾದಿ ಕೆಲವೇ ಕೆಲವು ದಿನಗಳಲ್ಲಿ ನಿಮ್ಮನ್ನು ಸಮೀಪಿಸಲಿದೆ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎಂಬ ಪ್ರಸಿದ್ಧ ಹಾಡನ್ನು ಗುನುಗುನಿಸುವ ಸರದಿ ನಿಮ್ಮದಾಗುತ್ತಿದೆ. ಯುಗಾದಿ ಎಂದರೆ ಆಚರಣೆ. ಈ ಆಚರಣೆಯಲ್ಲಿ ಉತ್ತಮ ಖಾದ್ಯ ಇಲ್ಲವೆಂದಲ್ಲಿ ಆ ಹಬ್ಬ ಸಪ್ಪೆಯಾಗುವುದು ಖಂಡಿತ.

ಅದಕ್ಕಾಗಿ ನಾವಿಂದು ಈ ಲೇಖನದಲ್ಲಿ ಬಿಸಿಬಿಸಿಯಾದ ಗರಿಗರಿ ಬಜ್ಜಿ ತಯಾರಿಯೊಂದಿಗೆ ಬಂದಿದ್ದೇವೆ. ದಕ್ಷಿಣ ಭಾರತದ ವಿಶೇಷ ಖಾದ್ಯ ಬಾಳೆಕಾಯಿ ಬಜ್ಜಿ ಹೆಸರು ನೀವು ಕೇಳಿರಬಹುದು. ಕಾಯಿ ಬಾಳೆಯನ್ನು ಬಳಸಿ ಈ ಗರಿಗರಿಯಾದ ಬಜ್ಜಿಯನ್ನು ತಯಾರಿಸುತ್ತಾರೆ. ಸಂಜೆಯ ಚಹಾದೊಂದಿಗೆ ಸೇವಿಸಲು ಈ ಬಜ್ಜಿ ಹೇಳಿಮಾಡಿಸಿದ್ದು.

ಆದ್ದರಿಂದ ಈ ಗರಿಗರಿಯಾದ ಬಾಳೆಕಾಯಿ ಬಜ್ಜಿಯನ್ನು ಯುಗಾದಿಗಾಗಿ ತಯಾರಿಸಿ ಹಬ್ಬವನ್ನು ಖುಷಿಯಾಗಿ ಮನೆಮಂದಿ ಹಾಗೂ ಬಂಧುಮಿತ್ರರೊಂದಿಗೆ ಚೇತೋಹಾರಿಯಾಗಿ ಆಚರಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಯುಗಾದಿಗಾಗಿ ರುಚಿಯಾದ ಚನ್ನಾ ಉಸಾಲ್ ರೆಸಿಪಿ

Crispy Banana Bajji For Ugadi

ಪ್ರಮಾಣ: 4
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು

ಸಾಮಾಗ್ರಿಗಳು:
.ಬಲಿಯದ ಬಾಳೆಕಾಯಿ - 1 (ಸಿಪ್ಪೆ ಸುಲಿದದ್ದು ಮತ್ತು ಮಧ್ಯಮ ಗಾತ್ರದಲ್ಲಿ ತುಂಡರಿಸಿದ್ದು)
.ಕಡಲೆ ಹಿಟ್ಟು - 1 ಕಪ್
.ಅಕ್ಕಿ ಹುಡಿ - 2 ಸ್ಪೂನ್
.ಸೋಡಾ ಹುಡಿ - ಸ್ವಲ್ಪ
.ಮೆಣಸಿನ ಹುಡಿ - 1/2 ಸ್ಪೂನ್
.ಅಜ್ವೈನ್ - 1ಸ್ಪೂನ್
.ಉಪ್ಪು - ರುಚಿಗೆ ತಕ್ಕಷ್ಟು
.ಕೊತ್ತಂಬರಿ ಸೊಪ್ಪು - 2 ಸ್ಪೂನ್ (ಕತ್ತರಿಸಿದ್ದು)
.ಎಣ್ಣೆ - ಕರಿಯಲು
.ನೀರು 1/2 ಕಪ್

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಯುಗಾದಿ ಸ್ಪೆಶಲ್ ಮಸಾಲಾ ಗರೇಲು ರೆಸಿಪಿ!

ಮಾಡುವ ವಿಧಾನ:
1.ಕಡಲೆ ಹಿಟ್ಟು, ಅಕ್ಕಿಹುಡಿ, ಸೋಡಾ, ಅಜ್ವೈನ್, ಮೆಣಸಿನ ಹುಡಿ, ಉಪ್ಪು, ಕೊತ್ತಂಬರಿ ಸೊಪ್ಪನ್ನು ಜೊತೆಯಾಗಿ ನೀರಿನೊಂದಿಗೆ ಬೌಲ್‌ನಲ್ಲಿ ಮಿಶ್ರ ಮಾಡಿ.

2.ಮೃದುವಾದ ಹಿಟ್ಟನ್ನು ಕಲಸಿಕೊಳ್ಳಿ ಮತ್ತು ಬಾಳೆಕಾಯಿ ತುಂಡನ್ನು ಹಿಟ್ಟಿನಲ್ಲಿ ಅದ್ದಿ.

3.ಪ್ಯಾನ್‌ನಲ್ಲಿ ಕರಿಯಲು ಎಣ್ಣೆ ಬಿಸಿ ಮಾಡಿಕೊಳ್ಳಿ.

4. 4-5 ನಿಮಿಷಗಳ ಕಾಲ ಬಾಳೆಕಾಯಿ ತುಂಡನ್ನು ಮಧ್ಯಮ ಉರಿಯಲ್ಲಿ ಕಾಯಿಸಿಕೊಳ್ಳಿ.

5.ಬಾಳೆಕಾಯಿ ತುಂಡುಗಳು ಎಲ್ಲಾ ಬದಿಯಲ್ಲೂ ಬೆಂದು ಗೋಲ್ಡನ್ ಬಣ್ಣಕ್ಕೆ ತಿರುಗಿದ ನಂತರ, ಅವನ್ನು ಸರ್ವಿಂಗ್ ಪ್ಲೇಟ್‌ಗೆ ವರ್ಗಾಯಿಸಿ.

6.ಇನ್ನಷ್ಟು ಬಾಳೆಕಾಯಿ ಬಜ್ಜಿ ತಯಾರಿಸಲು ಇದೇ ವಿಧಾನವನ್ನು ಅನುಸರಿಸಿ.

English summary

Crispy Banana Bajji For Ugadi

Ugadi is just a few days away and it is time that you gear up with some mouthwatering recipes. Ugadi is the time for celebration and you simply cannot imagine a celebration without good food.
X
Desktop Bottom Promotion