For Quick Alerts
ALLOW NOTIFICATIONS  
For Daily Alerts

ಸಖತ್ ಟೇಸ್ಟಿ ಈ ಆಲೂಗಡ್ಡೆ ಮಸಾಲ ಫ್ರೈ

|
ಎಲ್ಲ ಖಾರದ ಅಡುಗೆಗೂ ಆಲೂಗಡ್ಡೆ ಇದ್ದರೇನೆ ರುಚಿ. ಗ್ಲೂಕೋಸ್ ಹೆಚ್ಚಿರುವ ಈ ಆಲೂಗಡ್ಡೆಯನ್ನ ತಿಂದರೆ ಮಕ್ಕಳಿಗೆ ಚೈತನ್ಯ ವೃದ್ಧಿ. ಆದ್ದರಿಂದ ಹೊಸ ತರಹದ ಈ ಆಲೂಗಡ್ಡೆ ಫ್ರೈ ರೆಸಿಪಿಯನ್ನ ಒಂದು ಸಾರಿ ಟ್ರೈ ಮಾಡಿ ನೋಡಿ. ಈ ಅಡುಗೆಯಲ್ಲಿ ಗೋಡಂಬಿ ಕೂಡ ಇರೋದರಿಂದ ತಿನ್ನಲು ಇನ್ನೂ ಚೆಂದ.

ಇದು ಚಪಾತಿ, ದೋಸೆ, ಪೂರಿ ಎಲ್ಲದಕ್ಕೂ ಸಖತ್ ಕಾಂಬಿನೇಶನ್.

ಬೇಕಾಗುವ ಪದಾರ್ಥಗಳು:
* 250 ಗ್ರಾಂ ಆಲೂಗಡ್ಡೆ
* ಗೋಡಂಬಿ
* ಅರಿಶಿನ, ಉಪ್ಪು, ಕರಿಬೇವು
* ಹಸಿಮೆಣಸಿನ ಕಾಯಿ-5
* ಕೊತ್ತಂಬರಿ ಸೊಪ್ಪು
* ಹಸಿ ಕೊಬ್ಬರಿ ತುರಿ-1 ಬಟ್ಟಲು

ಮಾಡುವ ವಿಧಾನ: ಮೊದಲು ಆಲೂಗಡ್ಡೆ ಸಿಪ್ಪೆ ತೆಗೆದು ಹೆಚ್ಚಿಕೊಳ್ಳಬೇಕು. ಒಂದು ಬಾಣಲೆಗೆ ನೀರು ಹಾಕಿ ಆಲೂಗಡ್ಡೆಯನ್ನು 10 ನಿಮಿಷ ಬೇಯಿಸಬೇಕು. ನಂತರ ನೀರನ್ನು ಬಸಿದು ತಣ್ಣಗಿರುವ ನೀರಿಗೆ ಆಲೂಗಡ್ಡೆ ಹಾಕಬೇಕು. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಹಸಿಮೆಣಸಿನ ಕಾಯಿ ಮತ್ತು ಗೋಡಂಬಿ ಹಾಕಿ ಉರಿದುಕೊಳ್ಳಬೇಕು. ಅದಕ್ಕೆ ಕರಿಬೇವು, ಅರಿಶಿನ ಹಾಕಿ ಕದಡಬೇಕು. ಈಗ ಬೇಯಿಸಿದ ಆಲೂಗಡ್ಡೆಯನ್ನು ಇದಕ್ಕೆ ಸೇರಿಸಬೇಕು.

ಹಸಿಕೊಬ್ಬರಿ, ಉಪ್ಪು ಬೆರೆಸಬೇಕು. ಆಲೂಗಡ್ಡೆ ಬೇಯಿಸುವಾಗಲೂ ಉಪ್ಪು ಹಾಕಿದ್ದರಿಂದ ನೋಡಿಕೊಂಡು ಉಪ್ಪು ಬೆರೆಸಬೇಕು. ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಬೇಕು. ಈಗ ಆಲೂಗಡ್ಡೆ ಸೂಪರ್ ಫ್ರೈ ತಿನ್ನಲು ರೆಡಿಯಾಗಿದೆ.

ಮಾಡಲು ತುಂಬಾ ಸುಲಭವಾಗಿರುವ ಈ ಆಲೂಗಡ್ಡೆ ಫ್ರೈ ಟೇಸ್ಟನ್ನು ಮಿಸ್ ಮಾಡಿಕೊಳ್ಳಲೇಬೇಡಿ...

English summary

Potato Recipe | Potato vegetarian recipe | Special potato fry | ಆಲೂಗಡ್ಡೆ ಖಾದ್ಯಗಳು | ಆಲೂಗಡ್ಡೆ ಸಸ್ಯಾಹಾರ ಖಾದ್ಯ | ವಿಶೇಷ ಆಲೂ ಫ್ರೈ

Potato fry is a tasty dish that can be prepared in a jiffy. This tasty and healthy recipe can be packed for lunch or served as breakfast with chapathi or dosa. You can also serve it to your kid the moment he returns from school.
Story first published: Wednesday, August 3, 2011, 12:31 [IST]
X
Desktop Bottom Promotion