For Quick Alerts
ALLOW NOTIFICATIONS  
For Daily Alerts

ಸೆಟ್ ದೋಸೆ ಹಿಟ್ಟಿನಿಂದ ರುಚಿಕರವಾದ ಪಡ್ಡು

|

ಸೆಟ್ ದೋಸೆಗೆ ಆಡಿಸಿ ಆಗಿರುತ್ತದೆ. ಆಗ ಗಂಡ ಅಥವಾ ಮಕ್ಕಳು ಬಂದು 'ದಿನಾ ದೋಸೆ' ಅಂತ ರಾಗ ಎಳೆದರೆ 'ಅರೆದಿರುವ ಹಿಟ್ಟನ್ನು ಏನು ಮಾಡಲಿ, ನಾನು ಮಾತ್ರ ತಿಂದುಕೊಂಡು ಕೂರುತ್ತೇನೆ' ಅಂತ ಕೋಪಗೊಳ್ಳಬೇಡಿ. ಅದರಿಂದಲೆ ರುಚಿಯಾದ ಪಡ್ಡು ತಯಾರಿಸಿ ಕೊಟ್ಟು ನೋಡಿ. ದೋಸೆ ಬೇಡ ಅಂದವರು ಪಡ್ಡು ರುಚಿಗೆ ನಿಮ್ಮನ್ನು ಹೊಗಳುವಂತೆ ಮಾಡಿ.

ಸೆಟ್ ದೋಸೆ ಹಿಟ್ಟಿಗೆ ಈರುಳ್ಳಿ, ಹಸಿಮೆಣಸು ಇತ್ಯಾದಿಗಳನ್ನು ಸೇರಿಸಿರುವುದಷ್ಟೆ. ಪಡ್ಡು ಬೆಳಗಿನ ತಿಂಡಿ, ಟಿಫಿನ್ ಬಾಕ್ಸ್, ಸಂಜೆಯ ಸ್ನ್ಯಾಕ್ಸ್ ಎಲ್ಲಕ್ಕೂ ಚೆನ್ನಾಗಿರುತ್ತದೆ (ಪಡ್ಡು ಮಾಡುವ ಕಾವಲಿ ಅಂಗಡಿಯಲ್ಲಿ ಸಿಗುತ್ತದೆ).

ಬೇಕಾಗುವ ಸಾಮಗ್ರಿಗಳು:
* ಸೆಟ್ ದೋಸೆ ಹಿಟ್ಟು
* ಸಣ್ಣಗೆ ಹೆಚ್ಚಿದ ಈರುಳ್ಳಿ - 5
* ಸಕ್ಕರೆ
* ಸಣ್ಣಗೆ ಹೆಚ್ಚಿದ ಹಸಿಮೆಣಸು 6 - 7
* ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆಗಳು 15 - 20
* ಬೇಯಿಸಲು ಎಣ್ಣೆ

ಮಾಡುವ ವಿಧಾನ:

1. ಸೆಟ್ ದೋಸೆಯ ವಿಧಾನದಲ್ಲಿಯೇ ಹಿಟ್ಟು ತಯಾರಿಸಿಕೊಂಡು 7 - 8 ಘಂಟೆ ಹುದುಗು ಬರಲು ಬಿಟ್ಟು, ನಂತರ ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ.

2. ನಂತರ ಈ ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

3. ಪಡ್ಡು ಕಾವಲಿಯನ್ನು ಕಾಯಲಿಟ್ಟು, ಪ್ರತಿ ತೂತಿನಲ್ಲೂ 1 ಚಮಚದಷ್ಟು ಎಣ್ಣೆ ಹಾಕಬೇಕು.

4. ಒಂದು ದೊಡ್ಡ ಚಮಚದಲ್ಲಿ ಪಡ್ಡು ಹಿಟ್ಟನ್ನು ತೆಗೆದುಕೊಂಡು, ಎಲ್ಲ ತೂತುಗಳಲ್ಲೂ ಮುಕ್ಕಾಲು ಭಾಗದವರೆಗೆ ಹಾಕಿ. ಪಡ್ಡು ಉಬ್ಬಿ ಬರಲು ಸ್ವಲ್ಪ ಜಾಗ ಬಿಡಿ.

5. ಪಡ್ಡುವಿನ ತಳಭಾಗ ಹೊಂಬಣ್ಣಕ್ಕೆ ಬರುತ್ತಿದ್ದಂತೆ, ಚಮಚದ ಸಹಾಯದಿಂದ ಪಡ್ಡುವನ್ನು ನಿಧಾನಕ್ಕೆ ಮಗುಚಿ ಇನ್ನೊಂದು ಕಡೆಯೂ ಬೇಯಿಸಬೇಕು.

ಬಿಸಿ ಬಿಸಿ ಪಡ್ಡು ತೆಂಗಿನಕಾಯಿ ಚಟ್ನಿ ಜೊತೆ ಸವಿಯಲು ತುಂಬಾ ರುಚಿಯಾಗಿರುತ್ತದೆ.

English summary

Tasty Paddu Recipe | Breakfast Recipe | ರುಚಿಕರವಾದ ಪಡ್ಡು ರೆಸಿಪಿ | ಬೆಳಗಿನ ತಿಂಡಿ ರೆಸಿಪಿ

Paddu is one of the tasty breakfast. To prepare paddu you need not put much effort, how you will prepare for dosa like that only have to prepare, but have to include few more vegetable. Paddu ready.
X
Desktop Bottom Promotion