For Quick Alerts
ALLOW NOTIFICATIONS  
For Daily Alerts

ಈ ಲಕ್ಷಣಗಳು ನಿಮ್ಮ ಮಕ್ಕಳಲ್ಲಿದ್ದರೆ, ಅವರು ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ ಎಂದರ್ಥ

|

ಬೆಳೆಯುತ್ತಿರುವ ಮಕ್ಕಳಿಗೆ ಪೋಷಕಾಂಶಗಳು ಸಿಗಬೇಕಾಗಿರುವುದು ಬಹುಮುಖ್ಯ. ಇದು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ದೇಹಕ್ಕೆ ಅಗತ್ಯ ಪ್ರಮಾಣದ ಪೋಷಕಾಂಶಗಳನ್ನು ದೊರೆಯದೇ ಇದ್ದಾಗ ಪೌಷ್ಠಿಕಾಂಶದ ಕೊರತೆ ಉಂಟಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಸಮಸ್ಯೆ, ಮೂಳೆಗಳ ಸಮಸ್ಯೆ, ಮೆದುಳಿನ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುವುದು.

ಉತ್ತಮ ಪೋಷಕಾಂಶಗಳನ್ನೊಳಗೊಂಡ ಆಹಾರವನ್ನು ಸೇವಿಸುವಂತೆ ಮಾಡುವುದು ಪೋಷಕರ ಕೈಯಲ್ಲಿದೆ. ಅದೇ ರೀತಿ ಮಕ್ಕಳಲ್ಲಿ ಯಾವುದೇ ನ್ಯೂನತೆಗಳು ಮತ್ತು ರೋಗಲಕ್ಷಣಗಳನ್ನು ಸಹ ಗುರುತಿಸುವ ಜವಾಬ್ದಾರಿ ಅವರದ್ದೇ. ಆದ್ದರಿಂದ ಇಲ್ಲಿ ನಿಮ್ಮ ಮಗುವಿನಲ್ಲಿ ಪೌಷ್ಠಿಕಾಂಶದ ಕೊರತೆಯ ಬಗ್ಗೆ ಎಂದು ನಿಮ್ಮನ್ನು ಎಚ್ಚರಿಸುವ ಪ್ರಮುಖ ಲಕ್ಷಣಗಳ ಬಗ್ಗೆ ವಿವರಿಸಿದ್ದೇವೆ.

ಮಕ್ಕಳು ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಸೂಚಿಸುವ ಲಕ್ಷಣಗಳನ್ನು ಈ ಕೆಳಗೆ ನೀಡಲಾಗಿದೆ:

ಖಿನ್ನತೆ ಅಥವಾ ಆತಂಕದಲ್ಲಿರುವುದು:

ಖಿನ್ನತೆ ಅಥವಾ ಆತಂಕದಲ್ಲಿರುವುದು:

ಪೋಷಕಾಂಶಗಳು ಮೆದುಳಿನ ಆರೋಗ್ಯ ಮತ್ತು ಬುದ್ಧಿಶಕ್ತಿಯನ್ನು ಬೆಂಬಲಿಸುತ್ತವೆ. ಯಾವುದೇ ರೀತಿಯ ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತಿರುವ ಮಕ್ಕಳು ಸಣ್ಣ ಕೆಲಸಕ್ಕೂ ಗಡಿಬಿಡಿ ಮಾಡಿಕೊಳ್ಳುವುದು, ಆತಂಕದಲ್ಲಿರುವಂತೆ ವರ್ತಿಸಬಹುದು ಅಥವಾ ಖಿನ್ನತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಪ್ರೋಟೀನ್ ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುವ ಅಮೈನೋ ಆಮ್ಲಗಳನ್ನು ಹೊಂದಿರುವುದರಿಂದ ಪ್ರೋಟೀನ್ ಸಮೃದ್ಧ ಆಹಾರವನ್ನು ಅವರಿಗೆ ನೀಡಬೇಕು.

ಹಸಿವಿಲ್ಲದಿರುವುದು:

ಹಸಿವಿಲ್ಲದಿರುವುದು:

ನಿಮ್ಮ ಮಗುವಿಗೆ ನಿರಂತರ ಜ್ವರ ಅಥವಾ ಶೀತ ಆದಾಗ ಹಸಿವಿಲ್ಲದಿರುವುದಿಲ್ಲ, ಇದು ದೇಹದಲ್ಲಿ ಸತುವಿನ ಕೊರತೆಯನ್ನು ಸೂಚಿಸುತ್ತದೆ. ಈ ಕೊರತೆಯನ್ನು ನೀಗಿಸಲು ಸತುವಿನ ಅಂಶ ಹೆಚ್ಚಾಗಿರುವ ಆಹಾರವನ್ನು ನೀಡುವುದು ಉತ್ತಮ.

ಸದಾ ಚಡಪಡಿಕೆ:

ಸದಾ ಚಡಪಡಿಕೆ:

ಚಡಪಡಿಕೆ ಅಥವಾ ಹೈಪರ್ ಆಕ್ಟಿವಿಟಿ ಸಾಮಾನ್ಯವಾಗಿ ಉತ್ತಮ ಲಕ್ಷಣ ಎಂದು ಪರಿಗಣಿಸಲಾಗುತ್ತದೆ. ಆದರೆ ಹೈಪರ್ಆಕ್ಟಿವ್ ಮಕ್ಕಳು ಕಳಪೆ ಜೀರ್ಣಕ್ರಿಯೆಯನ್ನು ಹೊಂದಿರುತ್ತಾರೆ. ಇದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುವುದಿಲ್ಲ. ಕೃತಕ ಆಹಾರ ಬಣ್ಣಗಳು ಮಕ್ಕಳಲ್ಲಿ ಹೈಪರ್ಆಕ್ಟಿವಿಟಿಗೆ ಕಾರಣವಾಗುತ್ತವೆ ಎಂದು ಸಂಶೋಧನೆ ಹೇಳುವುರಿಂದ ಅದನ್ನು ಬಳಸುವುದನ್ನು ತಪ್ಪಿಸಬೇಕು. ಮೊಸರು, ಪಪ್ಪಾಯಿ ಮತ್ತು ಮಜ್ಜಿಗೆಯಂತಹ ಆಹಾರಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಬೊಜ್ಜು:

ಬೊಜ್ಜು:

ಪೌಷ್ಠಿಕಾಂಶದ ಕೊರತೆಯು ಸಾಮಾನ್ಯವಾಗಿ ಬೊಜ್ಜುಗೆ ಕಾರಣವಾಗುತ್ತದೆ, ಏಕೆಂದರೆ ಮಗು ಪೌಷ್ಟಿಕ ಆಹಾರವನ್ನು ಸೇವಿಸದಿದ್ದಾಗ, ಅವರ ದೇಹವು ಹಸಿದುಕೊಂಡಿರುತ್ತದೆ. ಇದು ಬೊಜ್ಜಿಗೆ ಕಾರಣವಾಗುವುದು. ಇದನ್ನು ತಡೆಗಟ್ಟಲು, ಸಮತೋಲಿತ ಆಹಾರವನ್ನು ಸೇವಿಸಬೇಕು. ಇದು ಸರಿಯಾದ ಪೋಷಣೆಯನ್ನು ಹೊಂದಿದ್ದು, ಸ್ಥೂಲಕಾಯದಿಂದ ಮಕ್ಕಳನ್ನು ರಕ್ಷಿಸುತ್ತದೆ.

ಒಣ ಚರ್ಮ ಅಥವಾ ಕೂದಲು:

ಒಣ ಚರ್ಮ ಅಥವಾ ಕೂದಲು:

ನಿಮ್ಮ ಮಗುವಿಗೆ ಒಣ ಚರ್ಮ ಅಥವಾ ಕೂದಲು ಇದ್ದರೆ, ಅವರಲ್ಲಿ ಕೊಬ್ಬು ಕರಗಿಸುವ ವಿಟಮಿನ್ ಗಳ ಕೊರೆತೆ ಇದೆ ಎಂದರ್ಥ. ಆದ್ದರಿಂದ ಈ ಪೌಷ್ಠಿಕಾಂಶದ ಕೊರತೆಯಿಂದ ರಕ್ಷಿಸಲು ಉತ್ತಮ ಗುಣಮಟ್ಟದ ಕೊಬ್ಬು ಕರಗುವ ವಿಟಮಿನ್ ಗಳನ್ನು ನೀಡುವ ಬಾದಾಮಿ, ಮೊಟ್ಟೆ, ಬ್ರೊಕೊಲಿ ಮುಂತಾದವುಗಳನ್ನು ಆಹಾರದಲ್ಲಿ ಒದಗಿಸುವುದು ಅವಶ್ಯಕ.

ಶಕ್ತಿ ಇಲ್ಲದಿರುವುದು:

ಶಕ್ತಿ ಇಲ್ಲದಿರುವುದು:

ಕಡಿಮೆ ಶಕ್ತಿಯು ಕಬ್ಬಿಣದ ಕೊರತೆಯನ್ನು ಸೂಚಿಸುತ್ತದೆ. ಇದು ಒಂದು ವಿಚಾರಕ್ಕೆ ಗಮನ ನೀಡಲು ಆಗದಿರುವುದು, ಮರೆವು, ಗೊಂದಲಗಳಂತಹ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಬೀಜಗಳು, ದ್ವಿದಳ ಧಾನ್ಯಗಳು, ಡ್ರೈ ಫ್ರೂಟ್ಸ್, ಮಾಂಸ ಮುಂತಾದ ಆಹಾರವನ್ನು ಮಕ್ಕಳಿಗೆ ನೀಡಬೇಕು. ಅದು ಅವರ ದೇಹದಲ್ಲಿ ಕಬ್ಬಿಣದ ಅಗತ್ಯವನ್ನು ಪೂರೈಸುತ್ತದೆ.

ಮೂಳೆ ನೋವು:

ಮೂಳೆ ನೋವು:

ವಿಟಮಿನ್ ಡಿ ಕೊರತೆಯು ಮೂಳೆ ನೋವು, ಮೂಳೆಯ ಕುಂಠಿತ ಬೆಳವಣಿಗೆ, ಸ್ನಾಯು ಸೆಳೆತ ಮತ್ತು ಮೂಳೆಗಳ ಮೃದುತ್ವಕ್ಕೆ ಕಾರಣವಾಗುತ್ತದೆ. ಆರೋಗ್ಯಕರ ರೋಗನಿರೋಧಕ ಶಕ್ತಿಯನ್ನು ಪಡೆಯಲು ಸರಿಯಾದ ಕ್ಯಾಲ್ಸಿಯಂ ಮತ್ತು ಸಾಕಷ್ಟು ವಿಟಮಿನ್ ಡಿಯನ್ನು ಮಕ್ಕಳಿಗೆ ಒದಗಿಸುವುದು ಮುಖ್ಯ.

English summary

Signs Of Nutritional Deficiencies In Children in Kannada

Here we talking about Signs Of Nutritional Deficiencies In Children in Kannada, read on
X
Desktop Bottom Promotion