For Quick Alerts
ALLOW NOTIFICATIONS  
For Daily Alerts

ಎಷ್ಟೋ ಮಹಿಳೆಯರಿಗೆ ಬಂಜೆತನಕ್ಕೆ ಕಾರಣವಾಗುತ್ತಿದೆ ಹಾಸ್ಟೈಲ್ ಯೂಟ್ರಸ್, ಏನಿದು?ಈ ಸಮಸ್ಯೆಗೆ ಪರಿಹಾರವೇನು?

|

ಹಾಸ್ಟೈಲ್‌ ಯೂಟ್ರಸ್‌ ಬಗ್ಗೆ ಕೇಳಿದ್ದೀರಾ? ತುಂಬಾ ಮಹಿಳೆಯರು ಇದರಿಂದಾಗಿ ಬಂಜೆತನ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗೆಯ ಯೂಟ್ರಸ್‌ ಹೊಂದಿರುವವರಲ್ಲಿ ಗರ್ಭಕಂಠದ ನಾಳಗಳು ವೀರ್ಯಾಣುಗಳನ್ನು ಗರ್ಭಾಶಯದೊಳಗಡೆ ಕೊಂಡೊಯ್ಯುಲು ಅಸಮರ್ಥವಾಗುತ್ತವೆ, ಹೀಗಾಗಿ ಗರ್ಭಧಾರಣೆ ಕಷ್ಟವಾಗುವುದು.

Hostile Uterus

ಈ ಹಾಸ್ಟೈಲ್‌ ಯೂಟ್ರಸ್ ಹೇಗೆ ಬಂಜೆತನ ಉಂಟು ಮಾಡುತ್ತದೆ, ಇದಕ್ಕೆ ಚಿಕಿತ್ಸೆ ಇದೆಯೇ ಮುಂತಾದ ವಿವರಗಳನ್ನು ಈ ಲೇಖನದ ಮೂಲಕ ತಿಳಿಯೋಣ:

ಹಾಸ್ಟೈಲ್ ಯೂಟ್ರಸ್‌ನಿಂದಾಗಿ ಬಂಜೆತನ ಹೇಗೆ ಉಂಟಾಗುತ್ತದೆ? ವೀರ್ಯಾಣು ಜನನೇಂದ್ರೀಯ ಮೂಲಕ ಗರ್ಭಕೋಶಕ್ಕೆ ಹೋಗಿ ಅಲ್ಲಿರುವ ಫಲವತ್ತತೆಯ ಅಂಡಾಣು ಜೊತೆ ಸೇರಿ ಭ್ರೂಣ ರೂಪುಗಳ್ಳುತ್ತದೆ.

ಲೈಂಗಿಕಕ್ರಿಯೆ ನಡೆಸಿದಾಗ ಬಿಡುಗಡೆಯಾದ ಅಷ್ಟೂ ವೀರ್ಯಾಣುಗಳು ಅಂಡಾಣುಗಳ ಸಂಪರ್ಕಕಕ್ಕೆ ಬರುವುದಿಲ್ಲ. ದುರ್ಬಲವಾದ ವೀರ್ಯಾಣುಗಳು ಗರ್ಭಕೋಶವನ್ನು ತಲುಪುವುದೇ ಇಲ್ಲ. ಆರೋಗ್ಯಕರವಾದ ವೀರ್ಯಾಣುಗಳು ಜನನೇಂದ್ರೀಯ ಮೂಲಕ ಗರ್ಭಕಂಠ, ನಂತರ ಫಾಲೋಪಿಯನ್ ಟ್ಯೂಬ್ ಸೇರಿ ಭ್ರೂಣ ರೂಪುಗೊಂಡು ನಂತರ ಗರ್ಭಕೋಶಕ್ಕೆ ಜಾರುತ್ತದೆ. ಆದರೆ ಕೆಲವು ಮಹಿಳೆಯರಲ್ಲಿ ಅಸಹಜ ಗರ್ಭಕಂಠದ ಲೋಳೆಗಳನ್ನು ಹೊಂದಿರುತ್ತದೆ, ಇದರಿಂದಾಗಿ ವೀರ್ಯಾಣು ಅಂಡಾಣು ತಲುಪಲು ಕಷ್ಟವಾಗುವುದು, ಇದರಿಂದಾಗಿ ಭ್ರೂಣ ರೂಪುಗೊಳ್ಳುವುದಿಲ್ಲ.

ಇದರ ಬಗ್ಗೆ ಮತ್ತಷ್ಟು ಅರಿಯಲು ಗರ್ಭಕೋಶದ ಲೋಳೆ ಎಂದರೇನು ತಿಳಿಯೋಣ
ಗರ್ಭಕಂಠ ಎನ್ನುವುದು ಗರ್ಭದ ಅತ್ಯಂತ ಕೆಳಗಿನ ಭಾಗ, ಇದು ಜನನೇಂದ್ರೀಯ ಹಾಗೂ ಗರ್ಭಕೋಶದ ನಡುವೆ ಸಂಪರ್ಕ ಹೊಂದಿದೆ. ಗರ್ಭಕಂಠ ಒಂದು ರೀತಿಯ ಲೋಳೆ ಉತ್ಪತ್ತಿ ಮಾಡುತ್ತೆ ಇದನ್ನು ಸರ್ವಿಕಲ್‌ ಮ್ಯೂಕಸ್ ಎಂದು ಕರೆಯಲಾಗುವುದು. ಅಂಡೋತ್ಪತ್ತಿ ಸಮಯದಲ್ಲಿ ಗರ್ಭಕಂಠದಲ್ಲಿರುವ ಈ ಲೋಳೆ ನೀರು-ನೀರಾಗಿ ಬಿಳುಪಿನಂತಾಗುವುದು, ಈ ಲೋಳೆ ಮೂಲಕ ವೀರ್ಯಾಣುಗಳು ಅಂಡಾಣು ತಲುಪಲು ಸಾಧ್ಯವಾಗುವುದು.

ಆದರೆ ಹೆಚ್ಚಿನವರಿಗೆ ಇದು ತಿಳಿದಿರುವುದಿಲ್ಲ, ಯಾವುದೇ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಮಕ್ಕಳಾಗುತ್ತೆ ಎಂದು ಭಾವಿಸಿರುತ್ತಾರೆ, ಆದರೆ ಅಂಡೋತ್ಪತ್ತಿ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಮಾತ್ರ ಗರ್ಭಧಾರಣೆ ಸಾಧ್.

ಗರ್ಭಕಂಠದ ಲೋಳೆ ಆರೋಗ್ಯ ಯಾವಾಗ ಹಾಳಾಗುತ್ತೆ
ತುಂಬಾ ಮಾನಸಿಕ ಒತ್ತಡದ ಬದುಕು, ಪೋಷಕಾಂಶದ ಆಹಾರದ ಕೊರತೆ, ಕಾಫಿ, ನಿಕೋಟಿನ್, ಮೂತ್ರ ಸೋಂಕು ಅಲ್ಲದೆ ಗರ್ಭಕಂಠದ ಲೋಳೆಯಲ್ಲಿ ಅಸಹಜ ಬದಲಾವಣೆಯಿಂದಾಗಿ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ, ಆಗ ಗರ್ಭಕಂಠದ ಲೋಳೆ ವೀರ್ಯಾಣುಗಳನ್ನು ಅಂಡಾಣುಗಳ ಸಂಪರ್ಕಕ್ಕೆ ತರಲು ಅಸಮರ್ಥವಾಗುತ್ತದೆ, ಈ ಕಾರಣಕ್ಕೆ ಗರ್ಭಧಾರಣೆಯಾಗುವುದಿಲ್ಲ.

ಲೈಂಗಿಕ ಕ್ರಿಯೆಯಲ್ಲಿ ಲ್ಯೂಬ್ರಿಕಾಂಟ್‌ ಬಳಸಿದರೂ ಅಪಾಯ
ಕೆಲವರು ಲೈಂಗಿಕ ಕ್ರಿಯೆ ನಡೆಸುವಾಗ ಲ್ಯೂಬ್ರಿಕಾಂಟ್ ಬಳಸುತ್ತಾರೆ, ಇದು ಜನನೇಂದ್ರೀಯದ pH ಬದಲಾವಣೆ ಮಾಡುತ್ತದೆ. ಇದರಿಂದ ಸ್ವಾಭಾವಿಕವಾಗಿ ಉಂಟಾಗುವ ಗರ್ಭಕಮಠದ ಲೋಳೆ ಉತ್ಪತ್ತಿಯಾಗದೆ ವೀರ್ಯಾಣುಗಳು ಅಂಡಾಣು ಸಮೀಪಸಲು ಕಷ್ಟವಾಗುವುದು.

ಗರ್ಭಕಂಠದ ಲೋಳೆ ಅಸಹಜವಿದ್ದರೆ
* ವೀರ್ಯಾಣು ಅಂಡಾಣುವಿನ ಸಂಪರ್ಕಕ್ಕೆ ಬರಲು ಸಾಧ್ಯವಾಗಲ್ಲ
* ಇದರಿಂದ ಆರೋಗ್ಯಕರ ವೀರ್ಯಾಣುಗಳ ಸತ್ತು ಹೋಗುತ್ತವೆ.

ಹಾಸ್ಟೈಲ್‌ ಯೂಟ್ರಸ್‌ ಸಮಸ್ಯೆ ಇದೆ ಎಂದು ತಿಳಿಯುವುದು ಹೇಗೆ?
ಒಂದು ವೇಳೆ ದಂಪತಿ ತುಂಬಾ ಸಮಯದಿಂದ ಮಗುವಿಗಾಗಿ ಪ್ರಯತ್ನಿಸಿ ಗರ್ಭಧಾರಣೆಯಾಗದೇ ಹೋದಾಗ ತಜ್ಞರ ಬಳಿ ಪರೀಕ್ಷೆ ಮಾಡಿಸಿದರೆ ನಿಖರ ಕಾರಣ ತಿಳಿಯುತ್ತೆ.

ಹಾಸ್ಟೈಲ್‌ ಯೂಟ್ರಸ್‌ಗೆ ಲಭ್ಯವಿರುವ ಚಿಕಿತ್ಸೆಯೇನು?
* ಕೃತಕ ಗರ್ಭಧಾರಣೆ
* IUI ಅಥವಾ Intrauterine insemination ( ವೀರ್ಯಾಣುಗಳನ್ನು ನೇರವಾಗಿ ಅಂಡಾಣುವಿನ ಜೊತೆ ಹಾಕುವುದು)
* ಅಥವಾ ಐವಿಎಫ್‌ ಮೂಲಕ ಮಗುವಿಗೆ ಪ್ರಯತ್ನಿಸುವುದು ಮಾಡಿದರೆ ಗರ್ಭಧಾರಣೆಯಾಗಬಹುದು.

English summary

What is Hostile Uterus? Know Meaning, How It lead to infertility, Symptoms & Treatment in kannada

Hostile Uterus: What is Hostile Uterus, how it link to infertility, what are the solution or this problem, read on....
X
Desktop Bottom Promotion