For Quick Alerts
ALLOW NOTIFICATIONS  
For Daily Alerts

ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು

|

ಥೈರಾಯ್ಡ್ ಗ್ರಂಥಿ ನಮ್ಮ ಗಂಟಲಿನಲ್ಲಿ ಧ್ವನಿಪೆಟ್ಟಿಗೆಯನ್ನು ಸುತ್ತುವರೆದಿರುವ ಚಿಟ್ಟೆಯಾಕಾರದ ಅಂಗವಾಗಿದ್ದು ಇದರಿಂದ ಸ್ರವಿಸುವ ರಸದೂತ ಹಲವಾರು ಕಾರ್ಯಗಳಿಗೆ ಅಗತ್ಯವಾಗಿದೆ. ಆದರೆ ಈ ಪ್ರಮಾಣ ಅಗತ್ಯಕ್ಕೂ ಹೆಚ್ಚು ಸ್ರವಿಸಿದರೂ (ಹೈಪರ್ ಥೈರಾಯ್ಡಿಸಂ) ಕಷ್ಟ ಮತ್ತು ಅಗತ್ಯಕ್ಕೂ ಕಡಿಮೆ ಸ್ರವಿಸಿದರೂ (ಹೈಪೋಥೈರಾಯ್ಡಿಸಂ) ಕಷ್ಟ.

Undiagnosed Thyroid Problem Can Increase Infertility Risk: Here are the warning signs

ವಿಶೇಷವಾಗಿ ಮಹಿಳೆಯರಲ್ಲಿ ಹೈಪೋಥೈರಾಯ್ಡಿಸಂ ಹೆಚ್ಚಾದಷ್ಟೂ ಗರ್ಭಧಾರಣೆಯ ವರ್ಷಗಳಲ್ಲಿ ಫಲವತ್ತತೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಒಂದು ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಸುಮಾರು ಇಪ್ಪತ್ತು ಶೇಖಡಾದಷ್ಟು ಮಹಿಳೆಯರಿಗೆ ಈ ತೊಂದರೆ ಇದುವರೆಗೂ ಪತ್ತೆಯಾಗದೇ ಉಳಿದಿದೆ.

ಥೈರಾಯ್ಡ್ ರಸದೂತ ದೇಹದ ಜೀವ ರಾಸಾಯನಿಕ ಕ್ರಿಯೆ ಸರಿಯಾಗಿ ಜರುಗಲು ಅಗತ್ಯವಾಗಿದೆ. ಥೈರಾಯ್ಡ್ ಗ್ರಂಥಿಯ ತೊಂದರೆ ಆವರಿಸುವ ಸಾಧ್ಯತೆ ಪುರುಷರಿಗಿಂತಲೂ ಮಹಿಳೆಯರಲ್ಲೇ ಹೆಚ್ಚು.

ಥೈರಾಯ್ಡ್ ತೊಂದರೆ ಮತ್ತು ಬಂಜೆತನ:

ಥೈರಾಯ್ಡ್ ತೊಂದರೆ ಮತ್ತು ಬಂಜೆತನ:

ತಜ್ಞರ ಪ್ರಕಾರ, ಥೈರಾಯ್ಡ್ ಗ್ರಂಥಿಯ ಕಡಿಮೆ ಕ್ಶಮತೆ ಅಥವಾ ಅಗತ್ಯಕ್ಕೂ ಕಡಿಮೆ ರಸದೂತಗಳು ಉತ್ಪತ್ತಿಯಾದರೆ ಇದು ಮಹಿಳೆಯ ಅಂಡೋತ್ಪತ್ತಿ (ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವ ಕ್ರಿಯೆ) ಯ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಗರ್ಭಧಾರಣೆಯ ಸಾಧ್ಯತೆಗಳನ್ನೇ ಏರುಪೇರುಗೊಳಿಸುತ್ತದೆ. ದೇಹದ ಸ್ವಂಯಂಚಾಲಿತ ರೋಗ ನಿರೋಧಕ ವ್ಯವಸ್ಥೆ ಅಥವಾ ಪಿಟ್ಯುಟರಿ ಗ್ರಂಥಿಯ ಏರುಪೇರುಗಳೂ ಹೈಪೋಥೈರಾಯ್ಡಿಸಂಗೆ ಕಾರಣವಾಗುತ್ತವೆ.

ಒಂದು ವೇಳೆ ಮಹಿಳೆಯಲ್ಲಿ ಹೈಪೋಥೈರಾಯ್ಡಿಸಂ ತೊಂದರೆ ಇದ್ದು ಇನ್ನೂ ಪತ್ತೆಯಾಗದೇ ಇದ್ದರೆ ಇದು ಗರ್ಭ ಧರಿಸಿದರೂ ಗರ್ಭಾಪಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಕಡಿಮೆ ಥೈರಾಯ್ಡ್ ಕ್ಷಮತೆ ದೇಹದಲ್ಲಿ ಪ್ರೊಜೆಸ್ಟರಾನ್ ಎಂಬ ಸ್ರ್ತೀ ರಸದೂತವನ್ನೂ ಕಡಿಮೆ ಉತ್ದಾದನೆಯಾಗುವಂತೆ ಮಾಡುತ್ತದೆ. ಈ ರಸದೂತ ಮಾಸಿಕ ಋತುಚಕ್ರ ಹಾಗೂ ಗರ್ಭಧಾರಣೆಗೆ ಅತಿ ಅಗತ್ಯವಾದ ರಸದೂತವಾಗಿದೆ. ಪರಿಣಾಮವಾಗಿ ಮಾಸಿಕ ದಿನಗಳ ಮುನ್ನಾದಿನಗಳ ತೊಂದರೆ (remenstrual syndrome (PMS))ಯೂ ಕಾಡಬಹುದು. ಸುಮಾರು ಎಪ್ಪತ್ತು ಶೇಖಡಾದಷ್ಟು ಮಹಿಳೆಯರಿಗೆ ಈ ತೊಂದರೆ ಕಾಣಿಸಿಕೊಳ್ಳುತ್ತದೆ.

ಗ್ರೇವ್ಸ್ ಕಾಯಿಲೆ (Graves' disease) ಎಂಬ ಸ್ಥಿತಿ ಹೈಪರ್‌ಥೈರಾಯ್ಡಿಸಂ ಗೆ ಅತಿ ಸಾಮಾನ್ಯವಾಗಿ ಕಾರಣವಾಗುತ್ತದೆ. ಇದೊಂದು ಸ್ವಯಂಚಾಲಿತ ರೋಗ ನಿರೋಧಕ ಶಕ್ತಿಯ ಏರುಪೇರಾಗಿದೆ ಹಾಗೂ ಇದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿಯೇ ಥೈರಾಯ್ಡ್ ಗ್ರಂಥಿಯ ಮೇಲೆ ಧಾಳಿ ನಡೆಸಿ ಅಗತ್ಯಕ್ಕೂ ಹೆಚ್ಚು ರಸದೂತ ಉತ್ಪತ್ತಿಯಾಗುವಂತೆ ಮಾಡುತ್ತದೆ. ಒಂದು ವೇಳೆ ಹೈಪರ್‌ಥೈರಾಯ್ಡಿಸಂ ಸ್ಥಿತಿ ಸರಿಯಾದ ಸಮದಯಲ್ಲಿ ಪತ್ತೆಯಾಗದೇ ಹೋದರೆ ಮತ್ತು ಚಿಕಿತ್ಸೆ ಪಡೆಯದೇ ನಿಯಂತ್ರಣ ಮೀರಿದರೆ ಇದೂ ಗರ್ಭಧಾರಣೆಯ ಪ್ರಾರಂಭಿಕ ದಿನಗಳಲ್ಲಿಯೇ ಗರ್ಭಾಪಾತಕ್ಕೆ ಕಾರಣವಾಗುತ್ತದೆ. ಗರ್ಭಾವಸ್ಥೆಯಲ್ಲಿ ಎದುರಾಗುವ ಹೈಪರ್‌ಥೈರಾಯ್ಡಿಸಂ ನಿಂದ ಅಧಿಕ ರಕ್ತದೊತ್ತಡ, ಗರ್ಭದಲ್ಲಿನ ಮಗುವಿನ ಬೆಳವಣಿಗೆ ಕುಂಠಿತಗೊಳ್ಳುವುದು ಹಾಗೂ ಅವಧಿಪೂರ್ವ ಪ್ರಸವ ಮೊದಲಾದ ಕ್ಲಿಷ್ಟತೆಗಳು ಕಾಣಿಸಿಕೊಳ್ಳಬಹುದು. ಪುರುಷರಲ್ಲಿ ಎದುರಾಗುವ ಹೈಪರ್‌ಥೈರಾಯ್ಡಿಸಂ ವೀರ್ಯಾಣುಗಳ ಸಂಖ್ಯೆಯನ್ನು ಅಪಾರವಾಗಿ ಕಡಿಮೆ ಮಾಡಬಹುದು ಹಾಗೂ ಫಲವತ್ತತೆಯನ್ನು ಕುಂದಿಸಬಹುದು.

ನಿರ್ಲಕ್ಷಿಸಬಾರದ ಸೂಚನೆಗಳು:

ನಿರ್ಲಕ್ಷಿಸಬಾರದ ಸೂಚನೆಗಳು:

ಥೈರಾಯ್ಡ್ ಗ್ರಂಥಿಯ ತೊಂದರೆಗಳನ್ನು ದೇಹ ಕೆಲವಾರು ಸೂಚನೆಗಳ ಮೂಲಕ ಪ್ರಕಟಿಸುತ್ತದೆ. ಈ ತೊಂದರೆಯನ್ನು ಆದಷ್ಟೂ ಬೇಗನೇ ಪತ್ತೆ ಹಚ್ಚಿದಷ್ಟೂ ಇದನ್ನು ಉಲ್ಬಣಗೊಳ್ಳದಂತೆ ಹಾಗೂ ಶೀಘ್ರವಾಗಿ ಚಿಕಿತ್ಸೆ ನೀಡಿ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸಬಹುದು. ಒಂದು ವೇಳೆ ಈ ಕೆಳಗಿನ ಯಾವುದೇ ಸೂಚನೆಗಳು ಕಂಡುಬಂದಲ್ಲಿ, ತಕ್ಷಣವೇ ನಿಮ್ಮ ಕುಟುಂಬ ವೈದ್ಯರನ್ನು ಭೇಟಿಯಾಗಿ:

ಹೈಪೋಥೈರಾಯ್ಡಿಸಂ ನ ಸೂಚನೆಗಳು:

ಹೈಪೋಥೈರಾಯ್ಡಿಸಂ ನ ಸೂಚನೆಗಳು:

ಆಯಾಸ

ಏಕಾಗ್ರತೆಯ ಕೊರತೆ

ತ್ವಚೆಯ ಒಣಗುವಿಕೆ

ಮಲಬದ್ಧತೆ

ದೇಹ ತಣ್ಣಗಿದ್ದಂತೆ ಅನ್ನಿಸುವುದು

ದೇಹದಲ್ಲಿ ನೀರು ತುಂಬಿಕೊಳ್ಳುವುದು

ಸ್ನಾಯು ಮತ್ತು ಮೂಳೆಸಂಧುಗಳಲ್ಲಿ ನೋವು

ಖಿನ್ನತೆ

ಮಾಸಿದ ದಿನಗಳ ರಕ್ತಸ್ರಾವ ದೀರ್ಘಕಾಲ ಮುಂದುವರೆಯುವುದು

ಹೈಪರ್ ಥೈರಾಯ್ಡಿಸಂನ ಲಕ್ಷಣಗಳು:

ಹೈಪರ್ ಥೈರಾಯ್ಡಿಸಂನ ಲಕ್ಷಣಗಳು:

ನಡುಕ

ಭಯ, ಆತಂಕ

ಹೃದಯ ಬಡಿತದ ವೇಗ ಹೆಚ್ಚುವುದು

ಆಯಾಸ

ಸೆಖೆಯನ್ನು ಸಹಿಸಲು ಸಾಧ್ಯವಾಗದಿರುವುದು

ಮಲವಿಸರ್ಜನೆಯ ಸಂಖ್ಯೆಯಲ್ಲಿ ಹೆಚ್ಚಳ ಕಾಣಿಸಿಕೊಳ್ಳುವುದು

ಅತಿಯಾದ ಬೆವರುವಿಕೆ

ತೂಕದಲ್ಲಿ ಇಳಿಕೆ

ಏಕಾಗ್ರತೆಯ ತೊಂದರೆ

ಕಾಯಿಲೆಯ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ

ಕಾಯಿಲೆಯ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ

ರೋಗಿಯ ವೈದ್ಯಕೀಯ ಇತಿಹಾಸ ಮತ್ತು ದೈಹಿಕ ಪರೀಕ್ಷೆಯ ಬಳಿಕ, ನಿಮ್ಮ ವೈದ್ಯರು ಕೆಲವು ವಿಶೇಷ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಹೇಳುತ್ತಾರೆ. ಇದರಲ್ಲಿ ಟಿ ಎಸ್ ಎಚ್ (TSH (thyroid stimulating hormone) ಪರೀಕ್ಷೆ, ಎದೆಯ ಭಾಗದ ಎಕ್ಸ್ ರೇ, T4 ಅಥವಾ ಥೈರಾಕ್ಸಿನ್ (thyroxin) ಪರೀಕ್ಷೆ ಗಳನ್ನು ಮಾಡಿಸಲು ಹೇಳಬಹುದು. ಜೊತೆಗೇ ರಕ್ತ ಪರೀಕ್ಷೆಯ ಮೂಲಕವೂ ಥೈರಾಯ್ಡ್ ರಸದೂತದ ಮಟ್ಟಗಳನ್ನು ಅಳೆಯಲು ಸೂಚಿಸಬಹುದು. ಇತ್ತೀಚೆಗೆ ಈ ತೊಂದರೆಯನ್ನು ಹೆಚ್ಚು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಲ್ಲಿ ಕಾಣಲಾಗುತ್ತಿದೆ. ಅದೃಷ್ಟವಶಾತ್, ಈ ತೊಂದರೆ ಮಾರಣಾಂತಿಕವಂತೂ ಅಲ್ಲ.

ಶೀಘ್ರ ಪತ್ತೆಹಚ್ಚುವಿಕೆ ಹಾಗೂ ಸೂಕ್ತ ಚಿಕಿತ್ಸೆಯಿಂದ ಈ ತೊಂದರೆಯನ್ನು ಆದಷ್ಟೂ ಬೇಗ ಸರಿಪಡಿಸಲು ಸಾಧ್ಯವಿದೆ. ಆರೋಗ್ಯಕರ ಜೀವನಕ್ರಮ, ತೂಕದಲ್ಲಿ ಇಳಿಕೆ, ಸಾಕಷ್ಟು ನಿದ್ದೆ, ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರಕ್ರಮ ಇವೆಲ್ಲವನ್ನೂ ಮಹಿಳೆಯರು ಅನುಸರಿಸುವುದು ಅಗತ್ಯವಾಗಿದೆ. ಪರೀಕ್ಷೆಗಳ ಫಲಿತಾಂಶ ಹಾಗೂ ಇತರ ವಿವರಗಳನ್ನು ಅನುಸರಿಸಿ ಈ ತೊಂದರೆಗೆ ಕಾರಣ ಏನು ಎಂಬುದನ್ನು ನಿರ್ಧರಿಸಿದ ಬಳಿಕ ಚಿಕಿತ್ಸೆಯನ್ನೂ ವೈದ್ಯರೇ ನಿರ್ಧರಿಸುತ್ತಾರೆ. ರೋಗಿಯ ವಯಸ್ಸು, ಥೈರಾಯ್ಡ್ ಗ್ರಂಥಿಯ ಗಾತ್ರ ಹಾಗೂ ಈಗ ರೋಗಿಯಲ್ಲಿರುವ ಇತರ ತೊಂದರೆಗಳು ಮೊದಲಾದ ಮಾಹಿತಿಗಳನ್ನು ಅನುಸರಿಸಿ ಚಿಕಿತ್ಸೆಯೂ ಪ್ರತಿ ಮಹಿಳೆಗೂ ಭಿನ್ನವಾಗಿರಬಹುದು. ಕೆಲವು ಸ್ಥಿತಿಗಳಲ್ಲಿ, ಶಸ್ತ್ರಚಿಕಿತ್ಸೆಯ ಅಗತ್ಯವೂ ಎದುರಾಗಬಹುದು.

ಒಂದು ವೇಳೆ ನೀವು ಗರ್ಭ ಧರಿಸಲು ಬಯಸುತ್ತಿರುವ ಮಹಿಳೆಯಾಗಿದ್ದರೆ ಇದಕ್ಕೂ ಮುನ್ನು ರಕ್ತಪರೀಕ್ಷೆ ಮಾಡಿಸಿಕೊಂಡು ಥೈರಾಯ್ಡ್ ಗ್ರಂಥಿಯ ತೊಂದರೆಯೇನೂ ಇಲ್ಲವೆಂದು ಖಚಿತಪಡಿಸಿಕೊಳ್ಳುವುದು ಅಗತ್ಯ. ಒಂದು ವೇಳೆ ಇದ್ದರೂ, ಆದಷ್ಟೂ ಬೇಗನೇ ಚಿಕಿತ್ಸೆ ಪಾರಂಭಿಸುವ ಮೂಲಕ ಈ ತೊಂದರೆ ಸಾಮಾನ್ಯ ಸ್ಥಿತಿಗಳಿಗೆ ಮರಳುವ ಸಾಧ್ಯತೆ ಹೆಚ್ಚುತ್ತದೆ ಹಾಗೂ ಗರ್ಭಧರಿಸುವ ಸಾಧ್ಯತೆಯೂ ಹೆಚ್ಚುತ್ತದೆ.

ಕಷ್ಟಕಾರ್ಪಣ್ಯದಿಂದ ಮುಕ್ತಿ ಹೊಂದಲು ದಾರಿ ದೀಪ:

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಕೇಂದ್ರ

ತುಳುನಾಡಿನ ಕರಾವಳಿಯ ದೈವಶಕ್ತಿ ಜ್ಯೋತಿಷ್ಯರು

ಸ್ತ್ರೀ-ಪುರುಷ ಪ್ರೇಮವಿಚಾರ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ,

ಅತ್ತೆ-ಸೊಸೆ ಕಿರಿಕಿರಿ, ವಶೀಕರಣ, ಸಂತಾನಯೋಗ, ಇತ್ಯಾದಿ ಸಮಸ್ಯೆಗಳಿಗೆ,

ಅಷ್ಟಮಂಗಳ ಪ್ರಶ್ನೆ, ತಾಂಬೂಲ ಪ್ರಶ್ನೆ, ಜಾತಕ ವಿಶ್ಲೇಷಣೆ ಮಾಡಿ ನಿಮ್ಮ

ಇಷ್ಟಾರ್ಥ ಕಾರ್ಯಗಳಿಗೆ 5 ದಿನದಲ್ಲಿ ಪರಿಹಾರ ಶತಸಿದ್ದ.

ಮನೆಯ ವಿಳಾಸ: ನಂ.86, ಸಂಪಿಗೆ ರಸ್ತೆ, ಮಲ್ಲೇಶ್ವರಂ ಮೊ: 9945515555

English summary

Undiagnosed Thyroid Problem Can Increase Infertility Risk: Here are the warning signs

Undiagnosed thyroid problem can increase infertility risk: Here are the warning signs, read on...
X
Desktop Bottom Promotion