For Quick Alerts
ALLOW NOTIFICATIONS  
For Daily Alerts

ನೈಸರ್ಗಿಕವಾಗಿ ಗರ್ಭಧಾರಣೆಯಾಗಬೇಕೆ? ಈ 13 ಅಂಶಗಳನ್ನು ಗಮನಿಸಿ

|

ಕೆಲವರಿಗೆ ಅನಿಸಬಹುದು ಗರ್ಭಿಣಿಯಾಗುವುದರಲ್ಲಿ ಏನು ವಿಶೇಷವಿದೆ. ಹೆಣ್ಣು-ಗಂಡು ಕೂಡಿದ ಮೇಲೆ ಮಕ್ಕಳಾಗುವುದು ಸಹಜವಲ್ವಾ ಎಂದು ಕೆಲವರಿಗೆ ಅನಿಸಬಹುದು. ಆದರೆ ನೈಸರ್ಗಿಕ ವಿಧಾನದಲ್ಲಿ ಗರ್ಭಧಾರಣೆಯಾಗುವುದರ ಹಿಂದೆ ಎಷ್ಟೆಲ್ಲಾ ಅಂಶಗಳಿವೆ ಎಂಬುವುದು ಮಕ್ಕಳಿಗೆ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿರುವ ದಂಪತಿಗಳಿಗೆ ಗೊತ್ತಿರುತ್ತದೆ.

Trying To Get Pregnant? These 13 Tips May Help You

ಒಂದು ಮಹಿಳೆ ಗರ್ಭಧಾರಣೆಯಾಗಲು ಪುರುಷನ ವೀರ್ಯವೊಂದೇ ಸಾಕಾಗುವುದಿಲ್ಲ, ಇನ್ನು ಅನೇಕ ಅಂಶಗಳು ಪರಿಣಾಮ ಬೀರುತ್ತದೆ. ಆಕೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯ, ಆಕೆಯ ಪತಿಯ ಸಂತಾನೋತ್ಪತ್ತಿ ಸಾಮಾರ್ಥ್ಯ, ಮಾನಸಿಕ ಒತ್ತಡ, ಜೀವನಶೈಲಿ ಇವೆಲ್ಲವೂ ಪ್ರಭಾವ ಬೀರುತ್ತದೆ.

ಹಿಂದಿನ ಕಾಲಕ್ಕೆ ಹೋಲಿಸಿದರೆ ಇತ್ತೀಚೆಗೆ ಮಕ್ಕಳಾಗದಿರುವ ಸಮಸ್ಯೆ ಹೆಚ್ಚಾಗಿಯೇ ಕಂಡು ಬರುತ್ತಿದೆ, ಗಂಡ-ಹೆಂಡತಿ ಇಬ್ಬರೂ ಆರೋಗ್ಯವಾಗಿರುತ್ತದೆ, ವೈದ್ಯರು ಪರೀಕ್ಷೆ ಮಾಡಿ ಏನೂ ತೊಂದರೆಯಿಲ್ಲ ಎಂದಿರುತ್ತಾರೆ, ಆದರೆ ಗರ್ಭಧಾರಣೆ ಸಾಧ್ಯವಾಗಿರುವುದಿಲ್ಲ.

ಡಿಪ್ರೊಡೆಕ್ಟಿವ್ ಬಯೋಲಜಿ ಮತ್ತು ಎಂಡೋಕ್ರಿನೋಲಜಿ ಜರ್ನಲ್‌ ವರದಿ ಪ್ರಕಾರ ಶೇ. 10-15ರಷ್ಟು ದಂಪತಿಗಳು ಬಂಜೆತನ ಸಮಸ್ಯೆ ಎದುರಿಸುತ್ತಿದ್ದಾರೆ. ವಿಶ್ವದಲ್ಲಿ ಇದುವರೆಗೆ 80 ಮಿಲಿಯನ್ ಮಹಿಳೆಯರು ಬಂಜೆತನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಮಸ್ಯೆ ಹೇಳಿದೆ. ಅದರಲ್ಲೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.

ಆದ್ದರಿಂದ ದಂಪತಿ ಮಗುವಿಗಾಗಿ ಪ್ರಯತ್ನಿಸುವಾಗ ಕೆಲವೊಂದು ಅಂಶಗಳನ್ನು ಗಮನಿಸುವುದು ಒಳ್ಳೆಯದು. ಇಲ್ಲಿ ನಾವು ನೈರ್ಸಗಿಕ ವಿಧಾನದಲ್ಲಿ ಮಗು ಬೇಕೆನ್ನುವವರು ಗಮನಿಸಬೇಕಾದ ಅಂಶಗಳ ಬಗ್ಗೆ ಹೇಳಿದ್ಧೇವೆ ನೋಡಿ...

1. ನಿಮ್ಮ ಮುಟ್ಟಿನ ಅವಧಿಯನ್ನು ಟ್ರ್ಯಾಕ್‌ ಮಾಡಿ

1. ನಿಮ್ಮ ಮುಟ್ಟಿನ ಅವಧಿಯನ್ನು ಟ್ರ್ಯಾಕ್‌ ಮಾಡಿ

ಸಾಮಾನ್ಯವಾಗಿ ಮಹಿಳೆಯರಿಗೆ ತಿಂಗಳ ಮುಟ್ಟಿನ ಅಂತರ 26-28 ದಿನಗಳಾಗಿರುತ್ತದೆ. ಅನಿಯಮಿತ ಮುಟ್ಟಿನ ಸಮಸ್ಯೆ ಇರುವವರಿಗೆ ಈ ಅವಧಿಯಲ್ಲಿ ವ್ಯತ್ಯಾಸ ಉಂಟಾಗುವುದು. ಮಗು ಬೇಕೆಂದು ಬಯಸುವವರು ಮುಟ್ಟಾದ ಬಳಿಕ ಫಲವತ್ತತೆ ಸಮಯದಲ್ಲಿ ಅಂದರೆ ಅಂಡೋತ್ಪತ್ತಿ ಬಿಡುಗಡೆಯಾಗುವ ಸಮಯದಲ್ಲಿ ಮಿಲನಕ್ರಿಯೆ ಮಾಡಿದರೆ ಗರ್ಭ ನಿಲ್ಲುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಓವ್ಯೂಲೇಶನ್ ಕ್ಯಾಲೆಂಡರ್ ಪಾಲಿಸಿ. ಮುಟ್ಟಾದ 14 ದಿನ ಅದು ನಿಮ್ಮ ಅಂಡೋತ್ಪತ್ತಿ ಸಮಯವಾಗಿರುತ್ತದೆ.

2.ಆಗಾಗ ಮಿಲನ ಕ್ರಿಯೆ ನಡೆಸಿ

2.ಆಗಾಗ ಮಿಲನ ಕ್ರಿಯೆ ನಡೆಸಿ

ನ್ಯೂ ಇಂಗ್ಲೆಂಡ್ ಜರ್ನಲ್ ಆಫ್‌ ಮೆಡಿಸಿನ್ ಪ್ರಕಟಿಸಿದ ಅಧ್ಯಯನ ವರದಿ ಪ್ರಕಾರ ಮುಟ್ಟಾದ 6 ನೇ ದಿನದಿಂದ ಅಂಡೋತ್ಪತ್ತಿ ಸಮಯದವರೆಗೆ ಪ್ರತಿದಿನ ಮಿಲನಕ್ರಿಯೆ ನಡೆಸಿದರೆ ಗರ್ಭಧಾರಣೆಯಾಗುವ ಸಾಧ್ಯತೆ ಹೆಚ್ಚಿದೆ ಎಂದಿದೆ.

3. ಧೂಮಪಾನ ಮಾಡಬೇಡಿ

3. ಧೂಮಪಾನ ಮಾಡಬೇಡಿ

ಆಧುನಿಕ ಜೀವನಶೈಲಿ ಕೆಲವರಿಗೆ ಧೂಮಪಾನ ಚಟವನ್ನು ಕೂಡ ಬೆಳೆಸಿರುತ್ತದೆ. ಇದು ಮಹಿಳೆ ಹಾಗೂ ಪುರುಷ ಇಬ್ಬರ ಸಂತಾನೋತ್ಪತ್ತಿ ಸಾಮಾರ್ಥ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು.

4. ಮದ್ಯಪಾನ

4. ಮದ್ಯಪಾನ

ಧೂಮಪಾನದಂತೆ ಮದ್ಯಪಾನ ಕೂಡ ಸಂತಾನೋತ್ಪತ್ತಿ ಸಾಮಾರ್ಥ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು. ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ ಮದ್ಯಪಾನ ತುಂಬಾಮ ಮಾಡದಿರುವುದು ಒಳ್ಳೆಯದು. ಇನ್ನು ಮಹಿಳೆಯರು ಗರ್ಭಧಾರಣೆ ಬಯಸುತ್ತಿದ್ದರೆ ಮದ್ಯಪಾನ ಮಾಡದೇ ಇರುವುದು ಒಳ್ಳೆಯದು.

5. ನಿದ್ದೆ ಮಾಡಿ

5. ನಿದ್ದೆ ಮಾಡಿ

ಇನ್ನು ನಿಮ್ಮ ನಿದ್ದೆಯ ಅಭ್ಯಾಸ ಕೂಡ ನಿಮ್ಮ ಸಂತಾನೋತ್ಪತ್ತಿ ಸಾಮಾರ್ಥ್ಯ ಮೇಲೆ ಪ್ರಭಾವ ಬೀರುವುದು. ರಾತ್ರಿ ಸರಿಯಾಗಿ ನಿದ್ದೆ ಬಾರದೆ ಒದ್ದಾಡುವ ಹಾಗೂ ಅತಿ ಕಡಿಮೆ ನಿದ್ದೆ ಮಾಡುವ ಪುರುಷರಿಗೆ ಸಂತಾನೋತ್ಪತ್ತಿ ಸಾಮಾರ್ಥ್ಯ ಕುಗ್ಗುವುದು ಎಂದು ಅಧ್ಯಯನಗಳು ಹೇಳಿವೆ.

 6. ಪೋಷಕಾಂಶವಿರುವ ಆಹಾರ ಸೇವಿಸಿ

6. ಪೋಷಕಾಂಶವಿರುವ ಆಹಾರ ಸೇವಿಸಿ

ಇನ್ನು ನಿಮ್ಮ ಆಹಾರಶೈಲಿ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ಜಂಕ್‌ಫಡ್ಸ್, ತಂಪು ಪಾನೀಯ ಇವುಗಳಿಂದ ದೂರವಿರಿ. ಆರೋಗ್ಯಕರ ಆಹಾರಕ್ರಮ ಪಾಲಿಸಿ. ನಿಮ್ಮ ಆಹಾರದಲ್ಲಿ ಪೋಷಕಾಂಶಗಳು ಅಧಿಕವಿರಲಿ. ಇನ್ನು ಆರೋಗ್ಯಕರ ಆಹಾರಕ್ರಮ ತೂಕ ಹೆಚ್ಚಾಗುವುದನ್ನು ತಡೆಯುವಲ್ಲಿ ಕೂಡ ಸಹಕಾರಿ.

7.ಆರೋಗ್ಯಕರ ತೂಕ ಹೊಂದಿ

7.ಆರೋಗ್ಯಕರ ತೂಕ ಹೊಂದಿ

ಗರ್ಭಧಾರಣೆಗೆ ಪ್ರಯತ್ನಿಸುವ ಮುನ್ನ ಬೊಜ್ಜು ಮೈಯಿದ್ದರೆ ಅದನ್ನು ಕರಗಿಸಲು ಪ್ರಯತ್ನಿಸಿ. ಒಬೆಸಿಟಿ ಕೂಡ ಬಂಜೆತನಕ್ಕೆ ಒಂದು ಕಾರಣವಾಗಿದೆ. ಅತೀ ಕಡಿಮೆ ಮೈ ತೂಕ ಹೊಂದಿರುವವರು ತಮ್ಮ ಮೈ ತೂಕ ಹೆಚ್ಚಿಸಿಕೊಳ್ಳಬೇಕು. ಸಮತೂಕದ ಮೈಕಟ್ಟು ಆರೋಗ್ಯಕರ ಮಗುವನ್ನು ಪಡೆಯಲು ಸಹಕಾರಿ.

8. ಕೆಫೀನ್ ಕಡಿಮೆ ತೆಗೆದುಕೊಳ್ಳಿ

8. ಕೆಫೀನ್ ಕಡಿಮೆ ತೆಗೆದುಕೊಳ್ಳಿ

ಅತೀ ಹೆಚ್ಚು ಕಾಫಿ, ಟೀ ಕುಡಿಯುವ ಅಭ್ಯಾಸವಿದ್ದರೆನ ಅದಕ್ಕೆ ಗುಡ್‌ಬೈ ಹೇಳುವುದು ಒಳ್ಳೆಯದು. ಅತೀ ಹೆಚ್ಚು ಕೆಫೀನ್ ಅಂಶ ಕೂಡ ಒಳ್ಳೆಯದಲ್ಲ. ಕೆಫೀನ್‌ ಅಂಶ ಅಧಿಕವಾದರೆ ಇದು ಸಂತಾನೋತ್ಪತ್ತಿ ಸಾಮಾರ್ಥ್ಯ ಕಡಿಮೆ ಮಾಡುವುದು.

9. ಕಠಿಣವಾದವ್ಯಾಯಾಮ ಮಾಡಿ

9. ಕಠಿಣವಾದವ್ಯಾಯಾಮ ಮಾಡಿ

ನೀವು ಫಿಟ್ನೆಸ್‌ಗಾಗಿ ಕಠಿಣವಾದ ವ್ಯಾಯಾಮ ಮಾಡುತ್ತಿದ್ದರೆ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದರೆ ಅಂಥ ವ್ಯಾಯಾಮಗಳನ್ನು ಮಾಡಬೇಡಿ. ನಿಮ್ಮ ಎಕ್ಸ್‌ಪರ್ಟ್ ಸಲಹೆ ಕೇಳಿ ಸುಲಭವಾದಗರ್ಭಕೋಶಕ್ಕೆ ಹೆಚ್ಚು ಒತ್ತಡ ಬೀಳದಿರುವ ವ್ಯಾಯಾಮ ಮಾಡಿ.

10. ವಯಸ್ಸಿನ ಬಗ್ಗೆಯೂ ಗಮನವಿರಲಿ

10. ವಯಸ್ಸಿನ ಬಗ್ಗೆಯೂ ಗಮನವಿರಲಿ

ವಯಸ್ಸು ಹೆಚ್ಚಾಗುತ್ತಿದ್ದಂತೆ ಗರ್ಭಧಾರಣೆಯಾಗುವ ಸಾಧ್ಯತೆ ಕೂಡ ಕಡಿಮೆಯಾಗುವುದು. ಆದ್ದರಿಂದ 30 ವರ್ಷದ ಒಳಗೆ ಮಗುವನ್ನು ಪಡೆಯುವುದು ಒಳ್ಳೆಯದು. ತುಂಬಾ ಸಮಯದಿಂದ ಮಗುವಿಗಾಗಿ ಪ್ರಯತ್ನಿಸಿ ಸಾಧ್ಯವಾಗದೇ ಇದ್ದರೆ, ವಯಸ್ಸು 30 ಸಮೀಪಿಸುತ್ತಿದ್ದರೆ ತಡಮಾಡಬೇಡಿ, ವೈದ್ಯರ ಸಲಹೆ ಕೇಳಿ.

11. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ

11. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ

ಇನ್ನು ನೀವು ಗರ್ಭಿಣಿಯಾಗಲು ನಿಮ್ಮ ಮಾನಸಿಕ ಸ್ಥಿತಿ ಕೂಡ ಮುಖ್ಯವಾಗಿರುತ್ತದೆ. ತುಂಬಾ ಮಾನಸಿಕ ಒತ್ತಡದ ಕೆಲಸ, ವಾತಾವರಣ ಇವೆಲ್ಲಾ ನಿಮ್ಮ ತಾಯ್ತನದ ಸಾಮಾರ್ಥ್ಯ ಮೇಲೆ ಕೆಟ್ಟ ಪರಿಣಾಮ ಬೀರುವುದು. ಧ್ಯಾನ ಮಾಡಿ, ಯೋಗ ಮಾಡಿ, ಸಂಗೀತ ಕೇಳಿ ಇವುಗಳ ಮೂಲಕ ಮಾನಸಿಕ ಒತ್ತಡ ಹೊರಹಾಕಿ.

12. ಮಾದಕದ್ರವ್ಯ ಸೇವಿಸಬೇಡಿ

12. ಮಾದಕದ್ರವ್ಯ ಸೇವಿಸಬೇಡಿ

ಮಾದಕದ್ರವ್ಯ ಕೂಡ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಅಲ್ಲದೆ ಇದು ಸಂತಾನೋತ್ಪತ್ತಿ ಸಾಮಾರ್ಥ್ಯ ಕಡಿಮೆ ಮಾಡುತ್ತದೆ. ಪುರುಷರಲ್ಲಿ ಟೆಸ್ಟೋಸ್ಟಿರೋನೆ ಕಡಿಮೆ ಮಾಡಿ ಬಂಜೆತನ ಸಮಸ್ಯೆ ಉಂಟು ಮಾಡುವುದು.

13. ವೈದ್ಯರನ್ನು ಭೇಟಿ ಮಾಡಿ

13. ವೈದ್ಯರನ್ನು ಭೇಟಿ ಮಾಡಿ

ವರ್ಷಗಳಿಂದ ಮಗುವಿಗಾಗಿ ಪ್ರಯತ್ನಿಸುತ್ತಿದ್ದು ಗರ್ಭಧಾರಣೆಯಾಗದೇ ಇದ್ದರೆ ಮಹಿಳೆಯ ಸಮಸ್ಯೆ ಎಂದು ಹೇಳಲು ಸಾಧ್ಯವಿಲ್ಲ, ಕೆಲವೊಮ್ಮೆ ಪುರುಷನಲ್ಲಿನ ದೋಷದಿಂದ ಗರ್ಭಧಾರಣೆಯಾಗಿರುವುದಿಲ್ಲ. ಆದ್ದರಿಂದ ಇಬ್ಬರು ತಮ್ಮ ಫಲವತ್ತತೆ ಸಾಮಾರ್ಥ್ಯ ತಿಳಿದುಕೊಳ್ಳಲು ವೈದ್ಯರನ್ನು ಭೇಟಿ ಮಾಡಿ, ಪರೀಕ್ಷೆ ಮಾಡಿಸಿ. ಅವರು ನೀಡಿದ ಸಲಹೆ ಸೂಚನೆಗಳನ್ನು ಪಾಲಿಸಿ.

ಹೀಗೆ ಮಾಡುವುದರಿಂದ ಗರ್ಭಧಾರಣೆಯಾಗುವ ಸಾಧ್ಯತೆ ಹೆಚ್ಚು.

English summary

Trying To Get Pregnant? These 13 Tips May Help You

The American Society of Reproductive Medicine (ASRM) defines infertility as the failure to conceive after one or more years of attempts of natural fertilisation. A couple can plan their pregnancy by following some tips that we have here for a better result.
X
Desktop Bottom Promotion