For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?

|

ಥೈರಾಯ್ಡ್‌ ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಇದು ಅನುವಂಶೀಯವಾಗಿ ಬರುವುದಾದರೂ ಜೀವನಶೈಲಿಯೇ ಇದಕ್ಕೆ ಪ್ರಮುಖ ಕಾರಣಾಗಿದೆ. ನಮ್ಮ ಕುತ್ತಿಗೆಯಲ್ಲಿರುವ ಥೈರಾಯ್ಡ್ ಗ್ರಂಥಿಯ ಕಾರ್ಯವು ದೇಹದ ಇತರ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದಾಗಿದೆ.

ಈ ಥೈರಾಯ್ಡ್‌ ಗ್ರಂಥಿಯ ಕಾರ್ಯದಲ್ಲಿ ವ್ಯತ್ಯಾಸ ಉಂಟಾದಾಗ ಹೈಪೋಥೈರಾಯ್ಡ್ ಅಥವಾ ಹೈಪರ್‌ಥೈರಾಯ್ಡ್‌ನಂಥ ಸಮಸ್ಯೆ ಉಂಟಾಗುತ್ತದೆ. ಈ ಥೈರಾಯ್ಡ್ ಸಮಸ್ಯೆ ಪುರುಷ, ಮಹಿಳೆಯರಲ್ಲಿ ಕಾಣಿಸಿಕೊಳ್ಳುವುದಾದರೂ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ತುಂಬಾ ಚಿಕ್ಕ ಪ್ರಾಯದಲ್ಲಿ ಕಾಣಿಸಿಕೊಂಡರೆ ಮಕ್ಕಳಾಗುವುದಕ್ಕೂ ತೊಂದರೆ ಉಂಟಾಗಬಹುದು.

ಹೈಪೋಥೈರಾಯ್ಡ್ ಇದ್ದವರಲ್ಲಿ ಗರ್ಭಧಾರಣೆಗೆ ತುಂಬಾ ಸಮಯ ತೆಗೆದುಕೊಳ್ಳುವುದು, ಇನ್ನು ಕೆಲವರಿಗೆ ಗರ್ಭಧಾರಣೆಯಾಗುವುದೇ ಇಲ್ಲ, ಒಂದು ವೇಳೆ ಗರ್ಭಧಾರಣೆಯಾದರೂ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು. ಅಲ್ಲದೆ ಆರೋಗ್ಯಪೂರ್ಣ ಮಗು ಪಡೆಯು ಸಾಧ್ಯತೆಯೂ ಕಡಿಮೆ, ಆದ್ದರಿಂದ ಥೈರಾಯ್ಡ್ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.

ಕೆಲವರಲ್ಲಿ ಮೊದಲಿಗೆ ಥೈರಾಯ್ಡ್‌ ಸಮಸ್ಯೆಯಿಲ್ಲದಿದ್ದರೂ ಗರ್ಭಿಣಿಯಾದಾಗ ಈ ಸಮಸ್ಯೆ ಕಾಣಿಸಿಕೊಳ್ಳುವುದುಂಟು. ಥೈರಾಯ್ಡ್ ಸಮಸ್ಯೆಯಿದ್ದಾಗ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡು, ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಬಗ್ಗೆ ನಿಗಾ ಇಟ್ಟರೆ ಹೆಚ್ಚು ತೊಂದರೆಯಾಗುವುದನ್ನು ತಪ್ಪಿಸಬಹುದು.
ಥೈರಾಯ್ಡ್ ಅನ್ನು ಪರೀಕ್ಷೆ ಮಾಡಿಸಿ ಅದಕ್ಕೆ ತಕ್ಕ ಔಷಧಿ ತೆಗೆದುಕೊಳ್ಳುವುದರಿಂದ ಥೈರಾಯ್ಡ್ ಅನ್ನು ಸಮತೋಲನದಲ್ಲಿ ಇಡಬಹುದು. ಇದರಿಂದ ಗರ್ಭಿಣಿ ತಾಯಿ ಹಾಗೂ ಮಗುವಿಗೆ ಅಪಾಯ ಉಂಟಾಗದಂತೆ ನೋಡಬಹುದು. ಗರ್ಭಧಾರಣೆಗೆ ಮುಂಚೆ ಥೈರಾಯ್ಡ್ ಇದ್ದರೆ ನಿಯಮಿತ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆದುಕೊಂಡರೆ ಗರ್ಭಧಾರಣೆಯಾಗುವ ಸಾಧ್ಯತೆ ಹೆಚ್ಚು.

ಹೈಪೋಥೈರಾಯ್ಡ್ ಲಕ್ಷಣಗಳು

ಹೈಪೋಥೈರಾಯ್ಡ್ ಲಕ್ಷಣಗಳು

ಹೈಪೋಥೈರಾಯ್ಡ್ ಎಂದರೆ ಥೈರಾಯ್ಡ್ ಹಾರ್ಮೋನ್‌ಗಳನ್ನು ಅತೀ ಕಡಿಮೆ ಅಥವಾ ಉತ್ಪಾದಿಸದೇ ಇರುವುದು. ಅನುಂಶೀಯವಾಗಿ, ಅಟೋಇಮ್ಯೂನ್ ಕಾಯಿಲೆ ಇರುವವರಲ್ಲಿ ಥೈರಾಯ್ಡ್ ಸಮಸ್ಯೆ ಚಿಕ್ಕ ಪ್ರಾಯದಲ್ಲಿ ಕಂಡು ಬರುವುದು. ಇದಕ್ಕೆ ಪ್ರಾರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆದುಕೊಂಡರೆ ಬಂಜೆತನ ಉಂಟಾಗುವುದನ್ನು ತಡೆಗಟ್ಟಬಹುದು.

ಹೈಪೋಥೈರಾಯ್ಡ್ ಲಕ್ಷಣಗಳು

* ಮೈ ತೂಕ ಹೆಚ್ಚುವುದು

* ಅನಿಯಮಿತ ಮುಟ್ಟು

* ಕೂದಲು ಉದುರುವುದು

* ಸುಸ್ತು, ಉದಾಸೀನ

* ಮೈ ಕೈ ನೋವು

* ತಲೆಸುತ್ತು

*ಏಕಾಗ್ರತೆಗೆ ತೊಂದರೆ

*ಸ್ನಾಯು ಸೆಳೆತ

* ತಂಪಾದ ವಾತಾವರಣ ಸಹಿಸಲು ಅಸಾಧ್ಯ

 ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಪರೀಕ್ಷೆ ಅವಶ್ಯಕವೇ?

ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಪರೀಕ್ಷೆ ಅವಶ್ಯಕವೇ?

ಹೌದು, ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಬಹುದಾಗಿದೆ. ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಇದ್ದು ಅದಕ್ಕೆ ಚಿಕಿತ್ಸೆ ಪಡೆಯದೇ ಹೋದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು, ಅಲ್ಲದೆ ಮಗು ಜನಿಸಿದರೆ ಆ ಮಗುವಿನ ಆರೋಗ್ಯದಲ್ಲಿ ನ್ಯೂನತೆ ಕಂಡು ಬರುವುದು.

ಆದ್ದರಿಂದ ಗರ್ಭಿಣಿಯರು TSH ಪರೀಕ್ಷೆ ಮಾಡಿಸಬೇಕು. ಇದನ್ನು ಗರ್ಭಧಾರಣೆಯಾದ ಮೊದಲ ತಿಂಗಳಿನಲ್ಲಿ ಪರೀಕ್ಷೆ ಮಾಡಿಸಿ. ಮಗುವಿನ ಹಾಗೂ ತಾಯಿಯ ಆರೋಗ್ಯಕ್ಕೆ ಥೈರಾಯ್ಡ್ ಹಾರ್ಮೋನ್ ಅವಶ್ಯಕವಾಗಿದೆ.

ಥೈರಾಯ್ಡ್ ಔಷಧಿ ಹಾಗೂ ವಿಟಮಿನ್ಸ್ ಜೊತೆಗೆ ತೆಗೆದುಕೊಳ್ಳಬೇಡಿ

ಥೈರಾಯ್ಡ್ ಔಷಧಿ ಹಾಗೂ ವಿಟಮಿನ್ಸ್ ಜೊತೆಗೆ ತೆಗೆದುಕೊಳ್ಳಬೇಡಿ

ಥೈರಾಯ್ಡ್ ಮಾತ್ರೆ ತೆಗೆದುಕೊಂಡು 4-5 ಗಂಟೆಯ ಬಳಿಕ ವಿಟಮಿನ್ಸ್ ಸಪ್ಲಿಮೆಂಟ್‌ ತೆಗೆದುಕೊಳ್ಳಬೇಕು. ಇವುಗಳನ್ನು ಜೊತೆಗೆ ತೆಗೆದುಕೊಂಡರೆ ವಿಟಮಿನ್‌ ಸಪ್ಲಿಮೆಂಟ್ಸ್ ನಮ್ಮ ದೇಹ ಥೈರಾಯ್ಡ್ ಹಾರ್ಮೋನ್ ಚಿಕಿತ್ಸೆ ಸರಿಯಾಗಿ ಬಳಸಿಕೊಳ್ಳದಂತೆ ತಡೆಗಟ್ಟುತ್ತದೆ.

ಸ್ಪೆಷಲ್ ಕೇರ್ ಅಗ್ಯತ

ಸ್ಪೆಷಲ್ ಕೇರ್ ಅಗ್ಯತ

ಹೈಪೋಥೈರಾಯ್ಡ್ ಸಮಸ್ಯೆ ಇದ್ದರೆ ವೈದ್ಯರು ಆ ಗರ್ಭಿಣಿ ಮಹಿಳೆಯ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು. ಏಕೆಂದರೆ ರಕ್ತದೊತ್ತಡ, ಕಡಿಮೆ ತೂಕ ಮಗು ಹುಟ್ಟುವುದು, ಜೀವ ಇಲ್ಲದ ಮಗುವಿಗೆ ಜನ್ಮ ನೀಡುವುದು, ಹೆರಿಗೆಯ ಬಳಿಕ ರಕ್ತ ಹೀನತೆ ಈ ರೀತಿಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚು.

ಅಲ್ಲದೆ ಥೈರಾಯ್ಡ್ ಸಮಸ್ಯೆಯಿದ್ದರೆ ಮಗುವಿನ ಮೆದುಳಿನ ಬೆಳವಣಿಗೆ ಸರಿಯಾದ ರೀತಿ ಇರುವುದಿಲ್ಲ. ಆದ್ದರಿಂದ ಈ ಅಪಾಯವನ್ನು ತಡೆಗಟ್ಟಲು ಗರ್ಭಾವಸ್ಥೆಯಲ್ಲಿ ಥೈರಾಯ್ಡ್‌ ಸಮಸ್ಯೆಗೆ ಸರಿಯಾದ ಚಿಕಿತ್ಸೆ ಪಡೆದುಕೊಂಡರೆ ಈ ರೀತಿಯ ಅಪಾಯಗಳನ್ನು ತಡೆಗಟ್ಟಬಹುದಾಗಿದೆ.

ಹೆರಿಗೆಯ ಬಳಿಕ ಥೈರಾಯ್ಡ್ ಆರೈಕೆ

ಹೆರಿಗೆಯ ಬಳಿಕ ಥೈರಾಯ್ಡ್ ಆರೈಕೆ

ಥೈರಾಯ್ಡ್‌ ಇರುವ ಮಹಿಳೆ ಹೆರಿಗೆಯಾದ ಬಳಿಕ ಪೋಸ್ಟ್‌ಮಾರ್ಟಂ ಥೈರಾಯ್ಡ್‌ಟಿಸ್ ಸಮಸ್ಯೆ ಕಂಡು ಬರುವುದು ಸಹಜ. ಇದರಿಂದ ಹಲವು ರೀತಿಯ ತೊಂದರೆಗಳು ಉಂಟಾಗುತ್ತದೆ. ಹೆರಿಗೆಯ ಬಳಿಕ ಥೈರಾಯ್ಡ್‌ಟಿಸ್ ಸಮಸ್ಯೆ ಹೆರಿಗೆಯಾಗಿ 3-6 ತಿಂಗಳಿನ ಒಳಗೆ ಕಂಡು ಬರುತ್ತದೆ. ಅಟೋಇಮ್ಯೂನೆ ಸಮಸ್ಯೆ ಇರುವವರಲ್ಲಿ ಇದು ಕಂಡು ಬರುವ ಸಾಧ್ಯತೆ ಹೆಚ್ಚು.

ಹೆರಿಗೆಯ ಬಳಿಕ ಥೈರಾಯ್ಡ್ ಸಮಸ್ಯೆಯಿದ್ದರೆ ಕಂಡು ಬರುವ ಲಕ್ಷಣಗಳು

* ನಿದ್ರಾಹೀನತೆ

* ಭಯ

* ತುಂಬಾ ಕಿರಿಕಿರ ಸ್ವಭಾವ

* ತೀವ್ರವಾದ ಎದೆ ಬಡಿತ

* ತಲೆಸುತ್ತು

* ನಿಶ್ಯಕ್ತಿ

* ಒಣತ್ವಚೆ

* ಮಲಬದ್ಧತೆ

*ಮೈಕೈ ನೋವು

ಹೈಪೋಥೈರಾಯ್ಡ್ ಸಮಸ್ಯೆ ಮಗುವಿಗೆ ಎದೆಹಾಲು ಕೊಡುವುದು ತೊಂದರೆ ಉಂಟಾಗುವುದು

ಹಾರ್ಮೋನ್‌ ರೀಪ್ಲೇಸ್‌ಮೆಂಟ್ ಚಿಕಿತ್ಸೆ ಪಡೆಯುವುದರಿಂದ ಈ ಸಮಸ್ಯೆ ಗುಣ ಪಡಿಸಬಹುದು.

 ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮತೋಲನದಲ್ಲಿ ಇಡಲು ಏನು ಮಾಡಬೇಕು?

ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮತೋಲನದಲ್ಲಿ ಇಡಲು ಏನು ಮಾಡಬೇಕು?

* ಬ್ರೊಕೋಲಿ, ಹೂಕೋಸು, ಎಲೆಕೋಸು ಈ ರೀತಿಯ ಆಹಾರಗಳು ಥೈರಾಯ್ಡ್ ಹಾರ್ಮೋನ್‌ ಸಮತೋಲನದಲ್ಲಿಡಲು ಸಹಕಾರಿ.

* ಅಯೋಡಿನ್ ಇರು ಆಹಾರ ಸೇವಿಸಬೇಕು.

* ಕೊಬ್ಬಿನಂಶ ಕಡಿಮೆ ಇರು ಮಾಂಸಾಹಾರ ಸೇವನೆ ಒಳ್ಳೆಯದು.

* ಗರ್ಭಾವಸ್ಥೆಯಲ್ಲಿ ನಡೆಯುವ ವ್ಯಾಯಾಮ ಮಾಡುವುದು ಒಳ್ಳೆಯದು.

* ಧ್ಯಾನ, ಉಸಿರಾಟದ ವ್ಯಾಯಾಮ ಇವು ಕೂಡ ಸಹಕಾರಿ.

English summary

Thyroid During Pregnancy: Everything You Need To Know About The Condition in Kannada

Thyroid during pregnancy: Everything you need to know about the condition in Kannada, read on.
Story first published: Wednesday, January 27, 2021, 12:18 [IST]
X
Desktop Bottom Promotion