For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಗರ್ಭಿಣಿಯರು ಗೊರಕೆ ಹೊಡೆದರೆ ಮಗುವಿಗೆ ಅಪಾಯ

|

ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹ ಹಲವಾರು ಬದಲಾವಣೆಗಳಿಗೆ ಒಳಪಡುತ್ತದೆ ಹಾಗೂ ಹಲವಾರು ಎಚ್ಚರಿಕೆಗಳನ್ನೂ ವಹಿಸಬೇಕಾಗುತ್ತದೆ. ವಿಶೇಷವಾಗಿ ಗರ್ಭಿಣಿಯ ಆಹಾರಕ್ರಮ ಮತ್ತು ವಿಶ್ರಾಂತಿ ಪಡೆಯುವ ವಿಧಾನ. ಎರಡನೆಯ ತ್ರೈಮಾಸಿಕ ಮುಗಿಯುತ್ತಾ ಬಂದಂತೆ ಗರ್ಭಿಣಿಗೆ ಅಗತ್ಯವಿರುವ ನಿದ್ದೆಯೂ ಹೆಚ್ಚುತ್ತಾ ಹೋಗುತ್ತದೆ. ಸುಸ್ತು ಆವರಿಸಿರುವ ಕಾರಣ ದಿನದ ಅವಧಿಯಲ್ಲಿಯೂ ನಿದ್ದೆ ಬರುತ್ತದೆ. ಈ ನಿದ್ದೆ ಇತರ ಸಮಯದಲ್ಲಿದ್ದಂತೆ ಇರದೇ ತಕ್ಷಣವೇ ಗಾಡನಿದ್ದೆಗೆ ಜಾರುವ ಸುಖನಿದ್ದೆಯಾಗಿದೆ. ಹಾಗಾಗಿ ಇತರ ಸಮಯದಲ್ಲಿ ಎದುರಾಗದಿದ್ದ ಗೊರಕೆ ಈ ಸಮಯದಲ್ಲಿ ಹೆಚ್ಚಾಗುತ್ತದೆ. ಗರ್ಭಾವಸ್ಥೆಯ ಗೊರಕೆ ಪ್ರತಿ ಮೂವರು ಮಹಿಳೆಯರಲ್ಲಿ ಒಬ್ಬರಿಗೆ ಬರುವಷ್ಟು ಸಾಮಾನ್ಯವಾಗಿದೆ.

ಗರ್ಭಾವಸ್ಥೆಯಲ್ಲಿ ಗೊರಕೆ ಏನು? ಹೇಗೆ?

ಗರ್ಭಾವಸ್ಥೆಯಲ್ಲಿ ಗೊರಕೆ ಏನು? ಹೇಗೆ?

ಗರ್ಭಾವಸ್ಥೆಯಲ್ಲಿ ಎದುರಾಗುವ ಗೊರಕೆಗೆ ಪ್ರಮುಖ ಕಾರಣವೆಂದರೆ ಕೆಲವು ರಸದೂತಗಳ ಪ್ರಭಾವದಿಂದ ಮೂಗಿನ ಒಳಭಾಗದಲ್ಲಿ ಊದಿಕೊಂಡು ಉಸಿರಾಟದ ದಾರಿ ಕಿರಿದಾಗುವುದು. ಇದು ಸಾಮಾನ್ಯವಾಗಿ ಎರಡನೆಯ ತ್ರೈಮಾಸಿಕದಲ್ಲಿ ಪ್ರಾರಂಭವಾಗುತ್ತದೆ. ಈ ಊತ ಎಚ್ಚರಾಗಿರುವ ಹೊತ್ತಿನಲ್ಲಿ ಕೊಂಚ ಬಿಗಿಯಾಗಿದ್ದು ಉಸಿರಾಟವನ್ನು ಕೊಂಚ ಕಷ್ಟಕರವಾಗಿಸುತ್ತವೆಯೇ ಹೊರತು ಅದುರುವುದಿಲ್ಲ. ಹಾಗಾಗಿ ಎಚ್ಚರಿದ್ದಾಗ ಗೊರಕೆ ಕೇಳಿಸುವುದಿಲ್ಲ. ಆದರೆ ನಿದ್ದೆ ಬಂದ ಬಳಿಕ ಈ ಭಾಗ ಮೆದುಳುಬಳ್ಳಿಯ ನಿಯಂತ್ರಣ ಕಳೆದುಕೊಳ್ಳುವ ಕಾರಣ ಸಡಿಲವಾಗುತ್ತದೆ. ಹಾಗಾಗಿ ಒಳಬರುವ ಗಾಳಿಗೆ ಇದು ತಡೆಯೊಡ್ಡುತ್ತದೆ. ಪರಿಣಾಮವಾಗಿ ಇದು ಮೂಗಿನ ಒಳಭಾಗದಲ್ಲಿಯೇ ಅದುರುತ್ತದೆ ಮತ್ತು ಗೊರಕೆಯ ಸದ್ದು ಕೇಳಿಸುತ್ತದೆ. ಈ ಊತ ಸಾಮಾನ್ಯವಾಗಿ ಮೂಗಿನ ಒಳಭಾಗದ ಮೇಲ್ಭಾಗದಲ್ಲಿ ಸಾಮಾನ್ಯವಾಗಿರುವ ಕಾರಣ ಕುಳಿತಂತೆ ನಿದ್ರಿಸಿದಾಗ ಇರುವುದಕ್ಕಿಂತಲೂ ಮಲಗಿದ್ದಾಗ ಇದರ ಸದ್ದು ಹೆಚ್ಚಾಗಿರುತ್ತದೆ. ಅದಗರ್ಭಿಣಿರಲ್ಲೂ ಗರ್ಭಿಣಿ ಸ್ಥೂಲದೇಹಿಯಾಗಿದ್ದರೆ ಗೊರಕೆ ಇನ್ನೂ ಹೆಚ್ಚಾಗುತ್ತದೆ. ಸ್ಥೂಲದೇಹಿಗಳಲ್ಲಿ ಈ ಭಾಗ ಮತ್ತು ಗಂಟಲಭಾಗದಲ್ಲಿ ಹೆಚ್ಚುವರಿ ಅಂಗಾಂಶವಿದ್ದು ಗೊರಕೆ ತೀವ್ರವಾಗಿಸಲು ತಮ್ಮ ದೇಣಿಗೆಯನ್ನು ನೀಡುತ್ತವೆ.

ಗರ್ಭಿಣಿಯರಿಗೆ ಗೊರಕೆ ಅಪಾಯಕಾರಿ: ಸಂಶೋಧನೆ

ಗರ್ಭಿಣಿಯರಿಗೆ ಗೊರಕೆ ಅಪಾಯಕಾರಿ: ಸಂಶೋಧನೆ

ಗರ್ಭಿಣಿಯರು ಗೊರಕೆ ಹೊಡೆಯುದರಿಂದ ಮಗುಗರ್ಭಿಣಿಯರಿಗೆ ಗೊರಕೆ ಅಪಾಯಕಾರಿ: ಸಂಶೋಧನೆ

ವಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹಲವು ಸಂಶೋಧನೆಗಳು ತಿಳಿಸುತ್ತದೆ. ಈ ಬಗ್ಗೆ ಕೆಲವು ಸಂಶೋಧನೆಗಳ ವರದಿ ಏನು ಹೇಳುತ್ತದೆ?

1. ಅಮೇರಿಕಾದ ಕೋಹಾರ್ಟ್ ಎಂಬ ಸಂಸ್ಥೆ ಈ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 1,673 ಗರ್ಭಿಣಿಯರ ನಿದ್ದೆಯ ಕ್ರಮಗಳನ್ನು ವಿಶ್ಲೇಷಿಸಲಾಯ್ತು. ಇವರಲ್ಲಿ 35% ಮಹಿಳೆಯರಿಗೆ ಗೊರಕೆ ಇದ್ದುದು ಕಂಡುಬಂದಿತು. ಇವರಲ್ಲಿ 26% ಮಹಿಳೆಯರಿಗೆ ಗರ್ಭಾವಸ್ಥೆಗೂ ಮುನ್ನ ಗೊರಕೆಯ ಅಭ್ಯಾಸವಿರಲಿಲ್ಲ ಮತ್ತು 9% ಮಹಿಳೆಯರಲ್ಲಿ ಭಾರೀ ಗೊರಕೆ ಕಂಡುಬಂದಿತ್ತು.

* ಭಾರೀಪ್ರಮಾಣದ ಗೊರಕೆ ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಅಂದರೆ ನವಮಾಸ ಪೂರ್ಣಗೊಳ್ಳುವ ಮುನ್ನವೇ ಹೆರಿಗೆಯಾಗುವ ಸಾಧ್ಯತೆ ಇರುತ್ತದೆ

* ಭಾರೀ ಗೊರಕೆ ಇರುವ ಮಹಿಳೆಯರಿಗೆ ಸಿಸೇರಿಯನ್ ಹೆರಿಗೆಯಾಗುವ ಸಾಧ್ಯತೆ ಹೆಚ್ಚು. (ನಿಯೋಜಿತ, ತುರ್ತು ಪರಿಸ್ಥಿತಿಯಲ್ಲ)

* ಗರ್ಭಾವಸ್ಥೆಗೂ ಮುನ್ನ ಗೊರಕೆ ಇಲ್ಲದಿದ್ದು ಗರ್ಭಾವಸ್ಥೆಯಲ್ಲಿ ಭಾರೀ ಗೊರಕೆ ಇರುವ ಮಹಿಳೆಯರಲ್ಲಿ ತುರ್ತು ಪರಿಸ್ಥಿತಿಯ ಸಿಸೇರಿಯನ್ ಹೆರಿಗೆಯಾಗುವ ಸಾಧ್ಯತೆ ಹೆಚ್ಚು.

2. ಮಿಶಿಗನ್ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ ವಾರದಲ್ಲಿ ಮೂರು ಅಥವಾ ಅದಕ್ಕೂ ಹೆಚ್ಚಿನ ರಾತ್ರಿಗಳಲ್ಲಿ ಗೊರಕೆ ಹೊಡೆಯುವ ಗರ್ಭಿಣಿಯರಿಗೆ ಸಿಸೇರಿಯನ್ ಹೆರಿಗೆಯಾಗುವ ಸಾಧ್ಯತೆ ಹೆಚ್ಚು ಹಾಗೂ ಹುಟ್ಟುವ ಮಗುವಿನ ತೂಕವೂ ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ. ಅಲ್ಲದೇ ಗರ್ಭಾವಸ್ಥೆಗೂ ಮುನ್ನ ಗೊರಕೆ ಹೊಡೆಯದ, ಗರ್ಭಾವಸ್ಥೆಯಲ್ಲಿ ಗೊರಕೆ ಹೊಡೆಯುವ ಗರ್ಭಿಣಿಯರ ಗರ್ಭದಲ್ಲಿರುವ ಮಗುವಿನ ಬೆಳವಣಿಗೆ ಸಾಮಾನ್ಯವಾಗಿ ಆಗಬೇಕಾದುದಕ್ಕಿಂತ ಹತ್ತು ಶೇಕಡಾ ಕಡಿಮೆ ಆಗಿರುತ್ತದೆ. ಅಂದರೆ ಈ ಮಗು ಸಾಮಾನ್ಯವಾಗಿ ಪಡೆಯುವ ಬೆಳವಣಿಗೆಯ ಶೇಕಡಾ ತೊಂಭತ್ತು ಭಾಗದಷ್ಟು ಮಾತ್ರವೇ ಪಡೆದಿರುತ್ತದೆ. ಈ ಮಗುವಿನ ಹೆರಿಗೆಯಾಗುವುದರಲ್ಲಿ ಹೆಚ್ಚಾಗಿ ವೈದ್ಯರು ಸಿ ಸೆಕ್ಷನ್ ಅಥವಾ ಸಿಸೇರಿಯನ್ ವಿಧಾನವನ್ನೇ ಆಯ್ದುಕೊಳ್ಳುತ್ತಾರೆ.

ಹಾಗಾದರೆ ಗರ್ಭಿಣಿ ಈ ಸಮಯದಲ್ಲಿ ಏನು ಮಾಡಬೇಕು?

ಹಾಗಾದರೆ ಗರ್ಭಿಣಿ ಈ ಸಮಯದಲ್ಲಿ ಏನು ಮಾಡಬೇಕು?

ಹೆಚ್ಚಿನ ಗರ್ಭಿಣಿಯರಿಗೆ ಎದುರಾಗುವ ಗೊರಕೆ ಇತರರಿಗಿಂತಲೂ ಹೆಚ್ಚು ತೊಂದರೆ ಕೊಡುತ್ತದೆ. ಏಕೆಂದರೆ ಗೊರಕೆಯಿಂದ ನಿದ್ದೆ ಸತತವಾಗಿ ಭಂಗಗೊಳ್ಳುತ್ತಾ ಇರುತ್ತದೆ. ಹಾಗಾಗಿ ಈ ಬಗ್ಗೆ ಮುಜುಗರ ವಹಿಸದೇ ನೇರವಾಗಿ ನಿಮ್ಮ ವೈದ್ಯರಲ್ಲಿ ಹೇಳಿಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ ಗರ್ಭಾವಸ್ಥೆಯಲ್ಲಿ ಎದುರಾಗುವ ತಾತ್ಕಾಲಿಕ ಮಧುಮೇಹ (gestational diabetes) ನ ಸೂಚನೆಯನ್ನೂ ಈ ಗೊರಕೆ ನೀಡುತ್ತಿದ್ದಿರಬಹುದು. ಅಲ್ಲದೇ ಸುಖನಿದ್ದೆ ತಡೆತಡೆದು ಬರುವ ಸ್ಲೀಪ್ ಆಪ್ನಿಯಾ ಎಂಬ ತೊಂದರೆಯ ಲಕ್ಷಣವೂ ಆಗಿರಬಹುದು. ಈ ತೊಂದರೆ ಇದ್ದವರಿಗೆ ಸೂಕ್ತ ಪ್ರಮಾಣದಲ್ಲಿ ಆಮ್ಲಜನದ ದೇಹಕ್ಕೆ ದೊರಕುವುದಿಲ್ಲ. ಪರಿಣಾಮವಾಗಿ ಗರ್ಭದಲ್ಲಿರುವ ಮಗುವಿಗೂ ಅವಶ್ಯವಿದ್ದಷ್ಟು ಆಮ್ಲಜನಕ ದೊರಕುವುದಿಲ್ಲ. ವಿಶೇಷವಾಗಿ ಮೂರನೆಯ ತ್ರೈಮಾಸಿಕ ಪ್ರಾರಂಭವಾಗಿದ್ದರೆ ಮತ್ತು ಗರ್ಭಿಣಿ ಸ್ಥೂಲದೇಹಿಯಾಗಿದ್ದರೆ ಈ ಸಂಭವ ಹೆಚ್ಚುತ್ತದೆ. ಈ ತೊಂದರೆ ಮುಂದುವರೆದರೆ ಕ್ಲಿಷ್ಟವಾದ preeclampsia ಎಂಬ ಸ್ಥಿತಿಯನ್ನೂ ಪಡೆಯಬಹುದು. ಹಾಗಾಗಿ, ನೀವು ಸಹಜವಾಗಿರುವುದಕ್ಕಿಂತಲೂ ಹೆಚ್ಚೇ ಗೊರಕೆ ಹೊಡೆಯುತ್ತಿದ್ದರೆ ಅಥವಾ ನಿಮ್ಮ ಗೊರಕೆಯನ್ನು ಮನೆಯ ಹಿರಿಯರು ಗಮನಿಸಿದರೆ ಇದನ್ನು ತಕ್ಷಣವೇ ವೈದ್ಯರ ಗಮನಕ್ಕೆ ತಂದು ಸೂಕ್ತ ಸಲಹೆ ಪಡೆಯಬೇಕು.

ಗರ್ಭಾವಸ್ಥೆಯಲ್ಲಿ ಗೊರಕೆಯನ್ನು ತಡೆಗಟ್ಟಲು ಸಾಧ್ಯವೇ?

ಗರ್ಭಾವಸ್ಥೆಯಲ್ಲಿ ಗೊರಕೆಯನ್ನು ತಡೆಗಟ್ಟಲು ಸಾಧ್ಯವೇ?

ಗರ್ಭಿಣಿಯರು ಈ ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ಈ ತೊಂದರೆಯನ್ನು ಆದಷ್ಟೂ ತಪ್ಪಿಸಬಹುದು.

* ಮಲಗುವ ಮುನ್ನ ಮೂಗಿಗೆ ಅಂಟಿಸುವ ನಾಸಲ್ ಸ್ಟ್ರಿಪ್ ಒಂದನ್ನು ಧರಿಸಿಕೊಳ್ಳಿ. ಇದು ಮೂಗಿನ ಹೊಳ್ಳೆಗಳನ್ನು ಅಗಲವಾಗಿ ತೆರೆದು ಗಾಳಿ ಸರಾಗವಾಗಿ ಸಾಗಲು ನೆರವಾಗುತ್ತದೆ. ಇದು ಗರ್ಭಾವಸ್ಥೆಯ ಬಳಕೆಗೆ ಸುರಕ್ಷಿತವಾಗಿದೆ.

* ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಆರ್ದ್ರತೆಯ ಹಬೆಯನ್ನು ಸೇವಿಸಿ ಮಲಗಿ. ಇದರಿಂದ ಮೂಗಿನ ಒಳಗಿನ ಕಫ ಕರಗಿ ಗಾಳಿಯಾಡಲು ಹೆಚ್ಚಿನ ಸ್ಥಳಾವಕಾಶ ದೊರಕುತ್ತದೆ.

* ಎಡಮಗ್ಗುಲಲ್ಲಿಯೇ ಮಲಗಲು ಯತ್ನಿಸಿ. ಇದರಿಂದ ಗರ್ಭಕೋಶದ ಮೇಲೆ ಒತ್ತಡ ಬೀಳುವುದಿಲ್ಲ ಹಾಗೂ ಮೂಗಿನ ಸಡಿಲ ಭಾಗ ಪಕ್ಕಕ್ಕೆ ಸರಿದು ಗಾಳಿಯಾಡಲು ಸಾಧ್ಯವಾಗುತ್ತದೆ.

* ದಿಂಬಿನ ಎತ್ತರವನ್ನು ಹೆಚ್ಚಿಸಿ ಅಥವಾ ತಗ್ಗಿಸಿ, ಇದರಿಂದ ಮೂಗಿನ ನಾಳಗಳು ಸರಾಗವಾಗಿ ಗಾಳಿಯಾಡುವಂತೆ ತೆರೆದುಕೊಳ್ಳಲು ಸಾಧ್ಯವಾಗುತ್ತದೆ.

* ನಿಮ್ಮ ಆಹಾರದಲ್ಲಿನ ಕ್ಯಾಲೋರಿಗಳ ಬಗ್ಗೆ ಗಮನ ಹರಿಸಿ. ನಿಮ್ಮ ತೂಕ ಈಗಾಗಲೇ ಹೆಚ್ಚುತ್ತಿದ್ದು ಹೆಚ್ಚಿನ ಕೊಬ್ಬುಯುಕ್ತ ಆಹಾರದಿಂದ ಸ್ಥೂಲಕಾಯ ಹೆಚ್ಚಬಹುದು. ಸ್ಥೂಲದೇಹವೂ ಗೊರಕೆಯನ್ನು ಪ್ರಚೋದಿಸುವ ಕಾರಣ ಆದಷ್ಟೂ ನಿಮ್ಮ ಆಹಾರಕ್ರಮ ಆರೋಗ್ಯಕರವಾಗಿರಲಿ.

* ಯಾವುದೇ ಸಮಯದಲ್ಲಿ ಹಾನಿಕರವಾಗಿರುವ ಧೂಮಪಾನ, ಮದ್ಯಪಾನಗಳನ್ನು ಮಾಡುವುದಿರಲಿ, ಗರ್ಭಾವಸ್ಥೆಯಲ್ಲಿ ನೆನೆಸಿಕೊಳ್ಳುವುದೂ ಅಪಾಯಕರ!

English summary

Snoring During Pregnancy Can Be Risky For Your Baby

Here's why you're more likely than ever to snore during pregnancy, and what you can do about it. Even if you've never snored before, snoring is fairly common during pregnancy, affecting about 1 in 3 pregnant women. It’s often a major sleep disruptor for you and anyone in your bedroom, which probably means that you and your partner are all ears about what can be done about these nocturnal noises.
X
Desktop Bottom Promotion