For Quick Alerts
ALLOW NOTIFICATIONS  
For Daily Alerts

ಮೊದಲ ತ್ರೈಮಾಸಿಕದಲ್ಲಿ ಗರ್ಭಿಣಿಯರು ಮನೆಯೊಳಗಿರುವ ಈ ಅಪಾಯಕಾರಿ ವಸ್ತುಗಳಿಂದ ದೂರವಿರಿ

|

ಗರ್ಭಾವಸ್ಥೆಯು ಮಹಿಳೆಯರ ಜೀವನದಲ್ಲಿ ಮಹತ್ವದ ಘಟ್ಟವಾಗಿದ್ದು, ಜೊತೆಗೆ ಅತ್ಯಂತ ಜಾಗರೂಕತೆಯಿಂದ ಇರಬೇಕಾದ ಹಂತವಾಗಿದೆ. ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಇಡೀ ಕುಟುಂಬದ ಜವಾಬ್ದಾರಿಯಾಗಿದೆ.

ಸಾಮಾನ್ಯವಾಗಿ ಮನೆಯೊಳಗೇ ಇರುವಾಗ ಏನೂ ತೊಂದರೆಯಾಗುವುದಿಲ್ಲ ಎಂದು ಭಾವಿಸುತ್ತೇವೆ. ಆದರೆ ಮನೆಯೊಳಗೇ ಇರುವ ಕೆಲವೊಂದು ವಿಷಯಗಳು ಮಗುವಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆದ್ದರಿಂದ ಅವುಗಳಿಂದ ದೂರವಿರುವುದು ಉತ್ತಮ.

ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ಮಗುವಿನ ಜೀವಕೋಶಗಳು ಬೆಳವಣಿಗೆಯಾಗಲು ಪ್ರಾರಂಭಿಸುವಾಗ ಯಾವ ವಿಚಾರಗಳಿಂದ ದೂರವಿರಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಪ್ಲಾಸ್ಟಿಕ್ ಉತ್ಪನ್ನಗಳು:

ಪ್ಲಾಸ್ಟಿಕ್ ಉತ್ಪನ್ನಗಳು:

ಪ್ಲಾಸ್ಟಿಕ್ ನಿಮ್ಮ ಪರಿಸರಕ್ಕೆ ಮಾತ್ರವಲ್ಲ, ನಿಮ್ಮೊಳಗೆ ಬೆಳೆಯುತ್ತಿರುವ ಮಗುವಿಗೂ ಸಹ ಕೆಟ್ಟದ್ದಾಗಿದೆ. ಪ್ಲಾಸ್ಟಿಕ್ ನಲ್ಲಿ ಥಾಲೇಟ್ಗಳಂತಹ ಅಪಾಯಕಾರಿ ರಾಸಾಯನಿಕ ಇದ್ದು, ಅದನ್ನು ಸುಟ್ಟಾಗ ಹೊರಬಂದು ನಿಮ್ಮ ಚರ್ಮ ಸೇರಬಹುದು. ಈ ರಾಸಾಯನಿಕಗಳು, ಭ್ರೂಣಕ್ಕೆ ತೀವ್ರ ತೊಂದರೆಗಳನ್ನು ಉಂಟುಮಾಡಲು ಮತ್ತು ಪುಟ್ಟ ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ.

ಸೌಂದರ್ಯವರ್ಧಕ ಉತ್ಪನ್ನಗಳು:

ಸೌಂದರ್ಯವರ್ಧಕ ಉತ್ಪನ್ನಗಳು:

ನಿಮ್ಮ ಮುಖದ ಮೇಲೆ ಮೇಕಪ್ ಬಳಸುವ ಮೊದಲು ಜಾಗರೂಕರಾಗಿರಿ. ಲಿಪ್ಸ್ಟಿಕ್ ಗಳು, ಶ್ಯಾಂಪೂ, ಟೋನರ್ ಸೇರಿದಂತೆ ಸಾಮಾನ್ಯವಾಗಿ ಬಳಸುವ ಕೆಲವು ಉತ್ಪನ್ನಗಳು ಥಾಲೇಟ್ ಗಳ ಕಣಗಳನ್ನು ಹೊಂದಿರಬಹುದು. ಇದು ಮಗುವಿಗೆ ಹೆಚ್ಚು ಅಪಾಯಕಾರಿ. ಇದು ಮಕ್ಕಳ ಜನ್ಮ ತೂಕಕ್ಕೂ ಹಾನಿಯನ್ನುಂಟುಮಾಡುತ್ತದೆ. ಜೊತೆಗೆ ಗರ್ಭಾವಸ್ಥೆಯ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಅದೇ ರೀತಿ, ಕೆಲವು ಸೌಂದರ್ಯವರ್ಧಕಗಳು ವಿಟಮಿನ್ ಎ ಯ ಸಂಶ್ಲೇಷಿತ ರೂಪವಾದ ರೆಟಿನಾಯ್ಡ್ ಗಳನ್ನು ಒಳಗೊಂಡಿರಬಹುದು. ಇದು ಗರ್ಭಿಣಿಯಾಗಿರುವಾಗ ಬಳಕೆಗೆ ಹಾನಿಕಾರಕವಾಗಿದ್ದು, ಜನ್ಮ ದೋಷಗಳಿಗೆ ಕಾರಣವಾಗಬಹುದು. ಆದ್ದರಿಂದ ತುಂಬಾ ಜಾಗರೂಕರಾಗಿರಿ ಮತ್ತು ಬಳಕೆಗೆ ಮೊದಲು ಲೇಬಲ್ ಓದಿ.

ಸೊಳ್ಳೆ ದ್ರವೌಷಧಗಳು ಮತ್ತು ನಿವಾರಕಗಳು:

ಸೊಳ್ಳೆ ದ್ರವೌಷಧಗಳು ಮತ್ತು ನಿವಾರಕಗಳು:

ಸೊಳ್ಳೆಗಳ ಕಡಿತದ ವಿರುದ್ಧ ಹೋರಾಡಲು ಸೊಳ್ಳೆ ನಿವಾರಕಗಳು ಸೂಕ್ತವಾಗಿದ್ದರೂ, ಅವು ಗರ್ಭಿಣಿಯರಿಗೆ ಉತ್ತಮವಲ್ಲ. ಅದರಲ್ಲಿರುವ ಕೆಲವು ರಾಸಾಯನಿಕಗಳು ಮಗುವಿಗೆ ಅಪಾಯಕಾರಿ. ಆದ್ದರಿಂದ ಮಗು ಅಭಿವೃದ್ಧಿ ಹೊಂದುತ್ತಿರುವ ಆರಂಭಿಕ ಕೆಲವು ತಿಂಗಳುಗಳಲ್ಲಿ ಇದನ್ನು ತಪ್ಪಿಸಬೇಕು. ಅಸಿಟೋನ್ ಮತ್ತು ಬ್ಲೀಚ್ ನಂತಹ ಇತರ ಕೆಲವು ಶುಚಿಗೊಳಿಸುವ ಉತ್ಪನ್ನಗಳು ಸಹ ಪರಿಣಾಮಕಾರಿಯಾದ ಹಾನಿಯನ್ನುಂಟುಮಾಡಬಹುದು. 3 ವರ್ಷದೊಳಗಿನ ಮಕ್ಕಳು ಈ ಉತ್ಪನ್ನಗಳಿಂದ ದೂರವಿರಬೇಕು. ಬದಲಿಗೆ ನೈಸರ್ಗಿಕ ಪದಾರ್ಥಗಳನ್ನು ಬಳಸಿ.

ವಾಲ್ ಪೇಂಟ್:

ವಾಲ್ ಪೇಂಟ್:

ಗೋಡೆಗೆ ಬಳಿಯುವ ಪೇಂಟ್ ಗಳು ಗರ್ಭಿಣಿಗೆ ಸಾಕಷ್ಟು ಅಪಾಯಕಾರಿ. ಬಣ್ಣಗಳ ಉತ್ಪಾದನೆಯಲ್ಲಿ ಸಾಮಾನ್ಯ ಭಾಗವಾಗಿರುವ ಲೀಡ್ ಎಂಬ ವಿಷಕಾರಿ ರಾಸಾಯನಿಕವು ಸಾಕಷ್ಟು ಮಾರಕವಾಗಿದೆ. ಈ ಸೀಸದ ಅಂಶವು ಮಗು ಜನನ ದೋಷಗಳು ಮತ್ತು ಅಕಾಲಿಕ ಜನನದ ಅಪಾಯವನ್ನು ಹೆಚ್ಚಿಸಬಹುದು. ನಿಮಗೆ ಸಾಧ್ಯವಾದಷ್ಟು ಸೀಸ ಮತ್ತು ಪೇಯಿಂಟ್ ಹತ್ತಿರ ಹೋಗುವುದನ್ನು ತಪ್ಪಿಸಿ.

ಒಳಾಂಗಣ ವಾಯುಮಾಲಿನ್ಯ:

ಒಳಾಂಗಣ ವಾಯುಮಾಲಿನ್ಯ:

ಕೊನೆಯದಾಗಿ, ಒಳಾಂಗಣ ವಾಯುಮಾಲಿನ್ಯವನ್ನು ಪಟ್ಟಿಯಲ್ಲಿ ಸೇರಿಸಬೇಕಾದ ಅಂಶವಾಗಿದೆ. ಒಳಾಂಗಣ ವಾಯುಮಾಲಿನ್ಯವು ಹೊರಾಂಗಣದಂತೆಯೇ ಮಾರಕವಾಗಿದೆ. ನಿಮ್ಮ ಮನೆಯಲ್ಲಿ ಹಲವಾರು ಮಾಲಿನ್ಯಕಾರಕಗಳು ಅಡಗಿಕೊಂಡಿರಬಹುದು.ಅದಕ್ಕಾಗಿ ಉಸಿರಾಡುವ ಗಾಳಿಯನ್ನು ಮರುಬಳಕೆ ಮಾಡುವಂತಹ ಏರ್ ಪ್ಯೂರಿಫೈಯರ್ ಅಥವಾ ಆರ್ದ್ರಕವನ್ನು ಸ್ಥಾಪಿಸಿ. ಇದು ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಸೂಕ್ಷ್ಮಜೀವಿಗಳನ್ನು ಶುದ್ಧೀಕರಿಸುತ್ತದೆ.

English summary

Risky Things Inside Your Home Could Be Harmful During Pregnancy in Kannada

Here we talking about Risky Things Inside Your Home Could Be Harmful During Pregnancy in Kannada, read on
Story first published: Friday, June 4, 2021, 11:48 [IST]
X
Desktop Bottom Promotion