For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಲ್ಲಿ ಪಕ್ಕೆಲುಬು ನೋವು: ಕಾರಣ ಮತ್ತು ಪರಿಹಾರ

|

ಗರ್ಭಿಣಿಯರಲ್ಲಿ ಯಾವಾಗ ಮಗುವಿನ ಗಾತ್ರವು ದೊಡ್ಡದಾಗುತ್ತಾ ಸಾಗುತ್ತದೆಯೋ ಆಗ ಮಹಿಳೆಯರ ದೇಹದ ಬೇರೆಬೇರೆ ಭಾಗಗಳಲ್ಲಿ ಒತ್ತಡ ಸೃಷ್ಟಿಯಾಗುತ್ತದೆ. ಹಲವರು ಬೆನ್ನು ನೋವು,ಮಂಡಿ ನೋವು, ಸೊಂಟ ನೋವು ಸೇರಿದಂತೆ ಇನ್ನೂ ಅನೇಕ ರೀತಿಯ ನೋವನ್ನು ಅನುಭವಿಸುತ್ತಾರೆ. ಮೂರನೇ ತ್ರೈಮಾಸಿಕದಲ್ಲಿ ಇರುವಾಗ ಪಕ್ಕೆಲುಬಿನ ಭಾಗದಲ್ಲಿ ಸಣ್ಣ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಈ ಪಕ್ಕೆಲುಬು ನೋವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿಕೊಳ್ಳುವುದರಿಂದಾಗಿ ನಿವಾರಿಸಿಕೊಳ್ಳಬಹುದು. ಹಾಗಾದ್ರೆ ಗರ್ಭಿಣಿಯರಲ್ಲಿ ಪಕ್ಕೆಲುಬಿನಲ್ಲಿ ಕಾಣಿಸಿಕೊಳ್ಳುವ ನೋವನ್ನು ನಿವಾರಿಸುವುದು ಹೇಗೆ? ಇಂತಹ ಕೆಲವು ಸಂಕೀರ್ಣ ವಿಚಾರಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ. ಮುಂದೆ ಓದುವುದನ್ನು ಮರೆಯಬೇಡಿ.

ಪಕ್ಕೆಲುಬಿನ ನೋವು ಕಾಣಿಸಿಕೊಳ್ಳುವುದು ಯಾವಾಗ?

ಪಕ್ಕೆಲುಬಿನ ನೋವು ಕಾಣಿಸಿಕೊಳ್ಳುವುದು ಯಾವಾಗ?

ಹೆಚ್ಚಿನ ಮಹಿಳೆಯರು ಪಕ್ಕೆಲುಬಿನ ನೋವಿನ ಸಮಸ್ಯೆಯನ್ನು 26 ನೇ ವಾರದಲ್ಲಿ ಅನುಭವಿಸುತ್ತಾರೆ. ಕೆಲವು ಮಹಿಳೆಯರು ಸ್ವಲ್ಪ ಬೇಗನೆಯೂ ಈ ಸಮಸ್ಯೆಯನ್ನು ಎದುರಿಸಬಹುದು.

ಗರ್ಭಿಣಿಯರಲ್ಲಿ ಪಕ್ಕೆಲುಬು ನೋವಿನ ಚಿಹ್ನೆಗಳು

ಗರ್ಭಿಣಿಯರಲ್ಲಿ ಪಕ್ಕೆಲುಬು ನೋವಿನ ಚಿಹ್ನೆಗಳು

ಗರ್ಭಿಣಿಯರಲ್ಲಿ ಪಕ್ಕೆಲುಬು ನೋವು ಕಾಣಿಸಿಕೊಳ್ಳುವುದು ಸಾಮಾನ್ಯ ವಿಷಯವೇ ಆದರೂ ಅದನ್ನು ಗುರುತಿಸುವಿಕೆಯೂ ಕೂಡ ಬಹಳ ಮುಖ್ಯ. ಯಾವೆಲ್ಲಾ ಚಿಹ್ನೆಗಳು ಪಕ್ಕೆಲುಬು ನೋವನ್ನು ಸೂಚಿಸುತ್ತದೆ ಎಂಬ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಸ್ತನಗಳ ಕೆಳಭಾಗದಲ್ಲಿ ನೋವು

ಸ್ತನಗಳ ಕೆಳಭಾಗದಲ್ಲಿ ನೋವು

ಸ್ತನಗಳ ಅಡಿಭಾಗದಲ್ಲಿ ನೋವು ಬಹಳವಾಗಿ ಇರುತ್ತದೆ. ಮಗುವು ಯಾವ ಜಾಗದಲ್ಲಿ ಇರುತ್ತದೆಯೋ ಆ ಜಾಗದ ಬದಿಗಳಲ್ಲಿ ನೋವಿರುತ್ತದೆ. ಕುಳಿತುಕೊಂಡಾಗ ನೋವು ತೀವ್ರಗೊಳ್ಳುತ್ತದೆ.

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ

ವಿಸ್ತರಿಸುತ್ತಿರುವ ಗರ್ಭಾಶಯದಿಂದಾಗಿ ನೀವು ಉಸಿರಾಟದ ತೊಂದರೆ ಎದುರಿಸಬೇಕಾಗಬಹುದು. ಇದು ಪಕ್ಕೆಲುಬಿನ ಮೇಲೆ ಒತ್ತಡವನ್ನು ಸೃಷ್ಟಿ ಮಾಡುತ್ತದೆ. ಸಹಜವಾಗಿ ಉಸಿರಾಟ ಮಾಡುವುದಕ್ಕಿಂತ ಉಸಿರಾಟಕ್ಕೆ ಸ್ವಲ್ಪ ಕಷ್ಟ ಪಡಬೇಕಾಗುತ್ತದೆ.

ಭುಜದ ನೋವು

ಭುಜದ ನೋವು

ನೀವು ಭುಜದ ಸಮಸ್ಯೆಯನ್ನು ಎದುರಿಸಬಹುದು. ಭುಜಗಳನ್ನು ಹಲವಾರು ನರಗಳಿಂದ ಡಯಾಫ್ರಾಮ್ ಗೆ ಜೋಡಿಸಲ್ಪಡಲಾಗಿರುತ್ತದೆ.ಇದರ ಮೇಲೆ ಒತ್ತಡ ಬೀಳುವುದರಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ.

ಅಜೀರ್ಣತೆ

ಈ ರೀತಿ ನಿಮ್ಮ ದೇಹದಲ್ಲಿ ಸೀಮಿತ ಸ್ಥಳ ಸೃಷ್ಟಿಯಾಗುವ ಮುನ್ನ ನಿರ್ದಿಷ್ಟ ಸ್ಥಳಗಳಿರುತ್ತದೆ. ಹಾಗಾಗಿ ಹೊಟ್ಟೆ ಹಾಗು ಕರುಳು ಮತ್ತು ಕಿಬ್ಬೊಟ್ಟೆಯ ಅಂಗಗಳ ವಿರುದ್ಧ ಗರ್ಭಾಶಯವು ವಿಸ್ತರಿಸಲು ಪ್ರಾರಂಭಿಸಿದಾಗ ನೀವು ಅಜೀರ್ಣತೆ ಸಮಸ್ಯೆಯನ್ನು ಎದುರಿಸುವ ಸಾಧ್ಯತೆ ಇದೆ.

ಗರ್ಭಿಣಿ ಮಹಿಳೆಯರಿಗೆ ಪಕ್ಕೆಲುಬು ನೋವಿಗೆ ಕಾರಣಗಳೇನು?

ಗರ್ಭಿಣಿ ಮಹಿಳೆಯರಿಗೆ ಪಕ್ಕೆಲುಬು ನೋವಿಗೆ ಕಾರಣಗಳೇನು?

ದೇಹದ ಗಾತ್ರವು ದೊಡ್ಡದಾಗುವುದರ ಪರಿಣಾಮವಾಗಿ ಪಕ್ಕೆಲುಬಿನ ನೋವು ಕಾಣಿಸಿಕೊಳ್ಳುತ್ತದೆ. ಪಕ್ಕೆಲುಬು ನೋವಿಗೆ ಕೆಲವು ಸಾಮಾನ್ಯ ಕಾರಣಗಳನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಹಿಗ್ಗುತ್ತಿರುವ ಗರ್ಭಾಶಯ

ಪಕ್ಕೆಲುಬು ನೋವಿಗೆ ಇರುವ ಪ್ರಮುಖವಾದ ಸಾಮಾನ್ಯ ಕಾರಣವೇನೆಂದರೆ ಹಿಗ್ಗುತ್ತಿರುವ ಗರ್ಭಾಶಯ. ಮಗುವು ಬೆಳವಣಿಗೆಯಾಗುತ್ತಿದ್ದಂತೆ ಪಕ್ಕೆಲುಬುಗಳಲ್ಲಿರುವ ಮಾಂಸಖಂಡಗಳು ಒತ್ತಡಕ್ಕೆ ಬಿದ್ದು ಬಳಲುತ್ತವೆ. ಇದು ಸಣ್ಣ ಮಟ್ಟದ ಸಮಸ್ಯೆಗೆ ಕಾರಣವಾಗಿ ಕೀಲುಗಳ ನೋವು ಕಾಣಿಸಿಕೊಳ್ಳಬಹುದು.

ಮಗುವಿನ ಸ್ಥಾನ

ಮಗುವಿನ ಸ್ಥಾನ

ಎರಡನೇ ತ್ರೈಮಾಸಿಕ ಮುಗಿಯುತ್ತಿದ್ದಾಗ ಭ್ರೂಣವು ಕೆಳಮುಖವಾಗಿ ತಿರುಗಲು ಪ್ರಾರಂಭಿಸುತ್ತದೆ.ಭ್ರೂಣದ ತಲೆಯು ಯೋನಿ ಕಾಲುವೆಯ ಬದಿಗೆ ತಿರುಗುತ್ತದೆ ಮತ್ತು ಭ್ರೂಣದ ಕಾಲುಗಳು ತಾಯಿಯ ಪಕ್ಕೆಲುಬಿನ ಕಡೆಗೆ ತಿರುಗುತ್ತದೆ. ಇದು ಪಕ್ಕೆಲುಬಿನ ಮೇಲೆ ಒತ್ತಡ ಸೃಷ್ಟಿಸುತ್ತದೆ. ತೋಳು ಮತ್ತು ಕಾಲಿನ ಚಲನೆಗಳು,ಪಕ್ಕೆಲುಬುಗಳಲ್ಲಿ ನೋವಿಗೆ ಕಾರಣವಾಗುತ್ತದೆ.ಈ ರೀತಿಯ ಪಕ್ಕೆಲುಬಿನ ನೋವನ್ನು ನೀವು ಸ್ತನಗಳ ಕೆಳಭಾಗದಲ್ಲಿ ಹೆಚ್ಚಾಗಿ ಅನುಭವಿಸುತ್ತೀರಿ.

 ಎದೆಯುರಿ

ಎದೆಯುರಿ

ಗರ್ಭಿಣಿಯರಲ್ಲಿ ಅನೇಕ ರೀತಿಯ ಹಾರ್ಮೋನುಗಳ ಬದಲಾವಣೆ ಆಗಿ ಮಗುವಿನ ಹುಟ್ಟಿಗೆ ಕಾರಣವಾಗುತ್ತದೆ. ಈ ರೀತಿಯ ಹಾರ್ಮೋನುಗಳ ಬದಲಾವಣೆಯೂ ಕೂಡ ಪಕ್ಕೆಲುಬು ಮತ್ತು ಪೆಲ್ವಿಸ್ ಗಳಲ್ಲಿ ನೋವಿಗೆ ಕಾರಣವಾಗುತ್ತದೆ. ಈ ಸಂದರ್ಬದಲ್ಲಿ ಎದೆಯುರಿಯೂ ಆಗುತ್ತದೆ.

ಸ್ತನಗಳ ಗಾತ್ರದಲ್ಲಿ ಹೆಚ್ಚಳ

ಸ್ತನಗಳ ಗಾತ್ರದಲ್ಲಿ ಹೆಚ್ಚಳ

ಹೆಚ್ಚುತ್ತಿರುವ ಸ್ತನಗಳ ಗಾತ್ರದಿಂದಾಗಿ ಭುಜಗಳ ಬಳಲುವಿಕೆ ಹೆಚ್ಚಾಗುತ್ತದೆ. ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಒತ್ತಡ ಹೆಚ್ಚಾಗುವ ಕಾರಣದಿಂದಾಗಿ ಪಕ್ಕೆಲುಬುಗಳಲ್ಲೂ ಕೂಡ ನೋವು ಕಾಣಿಸುತ್ತದೆ.

ಹಾರ್ಮೋನುಗಳ ಬದಲಾವಣೆ

ಹಾರ್ಮೋನುಗಳ ಬದಲಾವಣೆ

ಗರ್ಭಾಶಯದ ಸಂಕೋಚನಕ್ಕೆ ಅಗತ್ಯವಾದ ಪ್ರೊಜೆಸ್ಟರಾನ್ ಎಂಬ ಹಾರ್ಮೋನ್ ಪಕ್ಕೆಲುಬಿನ ಸ್ನಾಯುಗಳು ಮತ್ತು ಅಸ್ಥಿರಜ್ಜುಗಳನ್ನು ಮೃದುಗೊಳಿಸುತ್ತದೆ, ಇದರಿಂದ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.ಈಸ್ಟ್ರೊಜೆನ್ ಮಟ್ಟದಲ್ಲಿನ ಏರಿಕೆಯು ಪಿತ್ತಗಲ್ಲುಗಳು ರೂಪುಗೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಹಾಗಾಗಿ ಈ ಬದಲಾಣೆಯೂ ಕೂಡ ನೋವನ್ನು ಉಂಟು ಮಾಡುವಷ್ಟು ದೊಡ್ಡ ಮಟ್ಟದಲ್ಲಿ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಒತ್ತಡ

ಒತ್ತಡ

  • ಒತ್ತಡವೂ ಕೂಡ ನೋವಿಗೆ ಕಾರಣವಾಗುತ್ತದೆ. ದೇಹದಲ್ಲಿ ಎಲ್ಲಾ ಕಡೆಗಳಲ್ಲೂ ಕೂಡ ನೋವು ಅನ್ನಿಸಬಹುದು. ಗರ್ಭಿಣಿ ಸ್ತ್ರೀ ಆತಂಕ ಮತ್ತು ಉದ್ವೇಗದಿಂದ ಬಳಲುತ್ತಿರುತ್ತಾರೆ. ಹಾಗಾಗಿ ಅವರು ಪಕ್ಕೆಲುಬಿನ ನೋವನ್ನು ಎದುರಿಸಬೇಕಾಗುತ್ತದೆ.
  • ರೋಗ ನಿರ್ಣಯ

    • ದೈಹಿಕ ಪರೀಕ್ಷೆಯನ್ನು ನಿಮ್ಮ ವೈದ್ಯರು ನಿಮಗಾಗಿ ಮಾಡುತ್ತಾರೆ. ನಿಮ್ಮ ಎಲ್ಲಾ ರೀತಿಯ ಪ್ರಶ್ನೆಗಳನ್ನು ಅವರ ಬಳಿ ನೀವು ಕೇಳುವುದು ಬಹಳ ಸೂಕ್ತ. ಅವರು ನಿಮ್ಮ ರಕ್ತದೊತ್ತಡವನ್ನು ಕೂಡ ಪರೀಕ್ಷಿಸುತ್ತಾರೆ. ನೀವು ಯಾವ ಹಂತದಲ್ಲಿ ಇದ್ದೀರಿ ಎಂಬುದನ್ನು ಪರೀಕ್ಷಿಸಿ ಭ್ರೂಣದ ಟೆಸ್ಟ್ ನ್ನು ಆಗಾಗ ನಡೆಸಲಾಗುತ್ತದೆ. ಇದು ನಿಮ್ಮ ಎಲ್ಲಾ ರೀತಿಯ ನೋವಿನ ಸಮಸ್ಯೆಯನ್ನು ಪರಿಹರಿಸುವುದು ಸಹಾಯ ಮಾಡುತ್ತದೆ. ಅದರಲ್ಲಿ ಪಕ್ಕೆಲುಬಿನ ನೋವಿನ ಸಮಸ್ಯೆ ಕೂಡ ಸೇರಿರುತ್ತದೆ.
    • ನೋವು ಹೆಚ್ಚಿಸುವುದು ಏನು ಗೊತ್ತಾ?

      ನೋವು ಹೆಚ್ಚಿಸುವುದು ಏನು ಗೊತ್ತಾ?

      ಅತೀ ಹೆಚ್ಚು ಅವಧಿಗೆ ಕಾರಿನಲ್ಲಿ ಅಥವಾ ಒಂದೇ ರೀತಿಯಲ್ಲಿ ಕುಳಿತುಕೊಂಡಿರುವುದು ಗರ್ಭಿಣಿ ಸ್ತ್ರೀಯರಿಗೆ ಪಕ್ಕೆಲುಬಿನ ನೋವನ್ನು ಸೃಷ್ಟಿ ಮಾಡುತ್ತದೆ. ವ್ಯಾಯಾಮದ ಬಾಲ್ ಬಳಸಿ ಅಥವಾ ಇತ್ಯಾದಿಗಳಿಂದ ಕೊನೆಯ ಪಕ್ಷ 45 ನಿಮಿಷಗಳಿಗೆ ಒಮ್ಮೆಯಾದರೂ ನಿಮ್ಮ ದೇಹವನ್ನು ಹಿಗ್ಗಿಸುತ್ತಿರಬೇಕು ಎಂದು ವೈದ್ಯರು ಗರ್ಭಿಣಿಯರಿಗೆ ಸಲಹೆ ನೀಡುತ್ತಾರೆ.

      ರೋಗ ತಡೆಗಟ್ಟುವ ಕ್ರಮಗಳು

      ರೋಗ ತಡೆಗಟ್ಟುವ ಕ್ರಮಗಳು

      ದೇಹದ ನೋವನ್ನು ನಿಲ್ಲಿಸುವುದಕ್ಕೆ ಈ ಸಮಯದಲ್ಲಿ ಸಾಧ್ಯವಿಲ್ಲದೇ ಇದ್ದರೂ ಕೂಡ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳುವುದಕ್ಕೆ ಕೆಲವು ಮಾರ್ಗಗಳಿವೆ. ಅವುಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತೇವೆ.

      ನಿರಂತರ ವ್ಯಾಯಾಮ ಮಾಡಿ

      ನಿರಂತರ ವ್ಯಾಯಾಮ ಮಾಡಿ

      ನಿರಂತರ ವ್ಯಾಯಾಮ ಮಾಡುವುದರಿಂದಾಗಿ ನೀವು ಪಕ್ಕೆಲುಬಿನ ನೋವನ್ನು ತಡೆಗಟ್ಟಿಕೊಳ್ಳಬಹುದು. ಸರಿಯಾದ ರೀತಿಯಲ್ಲಿ ತೂಕ ಕಾಯ್ದುಕೊಳ್ಳುವುದು ಕೂಡ ಬಹಳ ಮುಖ್ಯ. ಬಿಎಂಐ(ಬಾಡಿ ಮಾಸ್ ಇಂಡೆಕ್ಸ್) ಪ್ರಕಾರ ತೂಕ ಕಾಯ್ದುಕೊಂಡರೆ ಪ್ರಗ್ನೆನ್ಸಿಯಲ್ಲಿ ನೋವಿನ ಸಮಸ್ಯೆಗಳಿಂದ ನಿಮ್ಮನ್ನ ಸಹಿಸಿಕೊಳ್ಳಲು ನೆರವು ನೀಡುತ್ತದೆ.

      ಮೂಳೆ ತಜ್ಞರನ್ನು ಭೇಟಿ ಮಾಡಿ

      ಮೂಳೆ ತಜ್ಞರನ್ನು ಭೇಟಿ ಮಾಡಿ

      ನಮ್ಮ ಮೂಳೆಯ ವ್ಯವಸ್ಥೆಯ ಬಗ್ಗೆ ಮೂಳೆ ತಜ್ಞರಿಗೆ ಉತ್ತಮ ಅನುಭವವಿರುತ್ತದೆ. ಮೂಳೆಗಳ ನೋವಿಗೆ ಸಂಬಂಧಿಸಿದಂತೆ ಗರ್ಭಾವಸ್ಥೆಯಲ್ಲಿ ನೀವು ಅವರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಬಹುದು.

      ಗರ್ಭಾವಸ್ಥೆಯಲ್ಲಿನ ಪಕ್ಕೆಲುಬು ನೋವಿಗೆ ಪರಿಹಾರಗಳು

      ಪಕ್ಕೆಲುಬಿನ ನೋವನ್ನು ಪರಿಹರಿಸುವ ಕೆಲವು ಮಾರ್ಗೋಪಾಯಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

       ನಿಮ್ಮ ಭಂಗಿಯನ್ನು ಹೊಂದಿಸಿಕೊಳ್ಳಿ

      ನಿಮ್ಮ ಭಂಗಿಯನ್ನು ಹೊಂದಿಸಿಕೊಳ್ಳಿ

      ಮುಂದಿನ ಹಂತದಲ್ಲಿ ಅಂದರೆ ತಿಂಗಳು ತುಂಬುತ್ತಿದ್ದಂತೆ ಪಕ್ಕೆಲುಬಿನ ನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ದೇಹ ತೂಕ ಹೆಚ್ಚಾದಂತೆಲ್ಲಾ ನೀವು ನಿಮ್ಮ ಕುಳಿತುಕೊಳ್ಳುವ ಅಥವಾ ಮಲಗುವ ಭಂಗಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಿ. ಮಲಗುವಾಗ ತಾತ್ಕಾಲಿಕ ಪರಿಹಾರ ವ್ಯವಸ್ಥೆಗಳನ್ನು ಉದಾಹರಣೆಗೆ ದಿಂಬುಗಳನ್ನು ಬಳಸುವುದು ಇತ್ಯಾದಿ ನಿಮ್ಮ ಅನುಕೂಲ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದು. ವ್ಯಾಯಾಮದ ಬಾಲ್ ಗಳನ್ನು ಬಳಸಿ

      ವ್ಯಾಯಾಮದ ಬಾಲ್ ಗಾಗಿ ವ್ಯಯ ಮಾಡಿ. ಬಾಲ್ ನಲ್ಲಿ ವ್ಯಾಯಾಮ ಮಾಡಿ. ಆಗಾಗ ಇವುಗಳನ್ನು ಬಳಸಿ ನಿಮ್ಮ ದೇಹವನ್ನು ಹಿಗ್ಗಿಸುತ್ತಿರಿ. ಪಕ್ಕೆಲುಬಿನ ಮಾಂಸಖಂಡಗಳನ್ನು ಹಿಗ್ಗಿಸುವುದರಿಂದಾಗಿ ನೋವಿನ ಶಮನ ಮಾಡಿಕೊಳ್ಳಬಹುದು.

      ಬೆಚ್ಚಗಿನ ಅಥವಾ ತಣ್ಣನೆಯ ವಸ್ತುಗಳಿಂದ ಒತ್ತುವುದು

      ಬೆಚ್ಚಗಿನ ಅಥವಾ ತಣ್ಣನೆಯ ವಸ್ತುಗಳಿಂದ ಒತ್ತುವುದು

      ನೋವಿನ ಜಾಗದಲ್ಲಿ ಸ್ವಲ್ಪ ಬೆಚ್ಚಗಿನ ಇಲ್ಲವೇ ತಣ್ಣನೆಯ ಒತ್ತುವಿಕೆಯೂ ಆರಾಮದಾಯಕವೆನಿಸತ್ತದೆ. ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಕೂಡ ರಿಲ್ಯಾಕ್ಸ್ ನೀಡುತ್ತದೆ.

      ದೇಹಕ್ಕೆ ಬೆಂಬಲ ನೀಡಿ

      ದೇಹಕ್ಕೆ ಬೆಂಬಲ ನೀಡಿ

      ದೇಹಕ್ಕೆ ನಿಮ್ಮ ಬೆಂಬಲದ ಅಗತ್ಯತೆ ಗರ್ಭಾವಸ್ಥೆಯಲ್ಲಿ ಅಧಿಕವಾಗಿರುತ್ತದೆ. ನಿಮ್ಮ ದೇಹಕ್ಕೆ ಸಪೋರ್ಟ್ ನೀಡುವಂತಹ ಹಲವು ವಸ್ತುಗಳು ಬೇಕಾಗುತ್ತದೆ. ಉದಾಹರಣೆಗೆ ನರ್ಸಿಂಗ್ ಬ್ರಾಗಳು, ಗರ್ಭಾವಸ್ಥೆಗಾಗಿಯೇ ಲಭ್ಯವಿರುವ ದಿಂಬುಗಳು, ಸರಿಯಾದ ರೀತಿಯಲ್ಲಿ ಕುಳಿತುಕೊಳ್ಳುವುದಕ್ಕೆ ಸಹಾಯ ಮಾಡುವಂತಹ ವಸ್ತುಗಳು. ಹೀಗೆ. ಪ್ರಗ್ನೆನ್ಸಿ ಬೆಲ್ಟ್ ನ್ನು ಕೂಡ ಖರೀದಿಸಬಹುದು.

      ಸಡಿಲ ಉಡುಪು ಧರಿಸಿ

      ಸಡಿಲ ಉಡುಪು ಧರಿಸಿ

      ಹಿಡಿದುಕೊಂಡಿರುವಂತಹ ಬಟ್ಟೆಗಳನ್ನು ಧರಿಸಬೇಡಿ. ಆದಷ್ಟು ನಿಮ್ಮ ಬಟ್ಟೆ ಮೈಗಂಟುವಂತೆ ಇಲ್ಲದೇ ಇರುವುದು ಒಳ್ಳೆಯದು. ಹಿಡಿಯುವಂತಹ ಬಟ್ಟೆಗಳು ನಿಮ್ಮ ಸ್ತನಗಳನ್ನು ಒತ್ತುವುದರಿಂದಾಗಿ ನೋವು ಹೆಚ್ಚಾಗಬಹುದು. ಸಡಿಲವಾದ ಬಟ್ಟೆಗಳನ್ನು ಧರಿಸುವುದರಿಂದಾಗಿ ನಿಮ್ಮ ಚರ್ಮವು ರಿಲ್ಯಾಕ್ಸ್ ಫೀಲ್ ಮಾಡುತ್ತದೆ ಮತ್ತು ನಿಮಗೆ ನೋವು ಕಡಿಮೆ ಇರುತ್ತದೆ.

      ಮಸಾಜ್ ಗಳನ್ನು ಟ್ರೈ ಮಾಡಿ ನೋಡಿ

      ನಿಮ್ಮ ದೇಹಕ್ಕೆ ಮಸಾಜ್ ಮಾಡುವುದು ಬಹಳ ಸುಲಭವಾಗಿರುವ ಮತ್ತು ಪರಿಣಾಮಕಾರಿಯಾಗಿರುವ ವಿಧಾನವಾಗಿದೆ. ಆನ್ ಲೈನ್ ನಲ್ಲಿ ನೀವು ಸರಳವಾಗಿರುವ ಕೆಲವು ಮಸಾಜ್ ಟೆಕ್ನಿಕ್ ಗಳನ್ನು ಹುಡುಕಬಹುದು ಮತ್ತು ಅದನ್ನು ಹೇಗೆ ಮಾಡಬೇಕು ಎಂಬುದನ್ನೂ ಕೂಡ ಕಲಿಯಬಹುದು. ನಿಮ್ಮವರ ಬಳಿ ಇಲ್ಲವೇ ಪಾರ್ಲರ್ ನಲ್ಲಿಯೂ ಇವುಗಳನ್ನು ಮಾಡಿಸಿಕೊಳ್ಳುವುದಕ್ಕೆ ಸಾಧ್ಯ.

      ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?

      ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?

      ಹೆಚ್ಚಿನ ಕೇಸ್ ಗಳಲ್ಲಿ ಪಕ್ಕೆಲುಬಿನ ನೋವು ಎಂದರೆ ನಿಮ್ಮ ದೇಹದಲ್ಲಿ ಗರ್ಭಾವಸ್ಥೆಯಲ್ಲಿ ಆಗುವ ಬದಲಾವಣೆಗಳಿಂದಲೇ ಆಗಿರುತ್ತದೆ. ಆದರೆ ನೋವು ಅದಕ್ಕೂ ಮೀರಿದ್ದೂ ಆಗಿರಬಹುದು.

      ಪ್ರಿಕ್ಲಾಂಪ್ಸಿಯಾ

      ಇದು ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಸ್ಥಿತಿಯಾಗಿದೆ. ಇದರಲ್ಲಿ ತೀರ್ವ ತರಹದ ಹೊಟ್ಟೆ ನೋವು,ಮೂತ್ರದಲ್ಲಿ ಹೆಚ್ಚುವರಿ ಪ್ರೋಟೀನ್,ಅಧಿಕ ರಕ್ತದೊತ್ತಡ,ಪಕ್ಕೆಲುಬಿನ ನೋವು ಇದರಲ್ಲಿ ಕಾಣಿಸಿಕೊಳ್ಳುತ್ತದೆ.

      HELLP ಸಿಂಡ್ರೋಮ್

      HELLP ಸಿಂಡ್ರೋಮ್

      ತೀವ್ರವಾದ ಪಕ್ಕೆಲುಬಿನ ನೋವಿನ ಜೊತೆಗೆ ಇದರಲ್ಲಿ ವಾಂತಿ,ವಾಕರಿಕೆ,ತಲೆತಿರುಗುವಿಕೆ,ತಲೆ ನೋವಿನ ಸಮಸ್ಯೆ ಇರುತ್ತದೆ. ಒಂದು ವೇಳೆ ಈ ಎಲ್ಲಾ ಸಮಸ್ಯೆಗಳು ಅಧಿಕವಾದರೆ ನೀವು ಕೂಡಲೇ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು.

      ಬಡ್-ಚಿಯಾರಿ ಸಿಂಡ್ರೋಮ್

      ಬಡ್-ಚಿಯಾರಿ ಸಿಂಡ್ರೋಮ್

      ಇದು ಅತ್ಯಂತ ಅಪರೂಪದ ಕೇಸ್ ಆಗಿದ್ದು ಇದರಲ್ಲಿ ಯಕೃತ್ತಿನಲ್ಲಿ ರಕ್ತನಾಳಗಳಲ್ಲಿ ಬೆಳವಣಿಗೆಯಾಗುವಂತೆ ಮಾಡುತ್ತದೆ.ಇದು ಯಕೃತ್ತಿನ ಹಾನಿಯನ್ನು ಮಾಡುತ್ತದೆ. ಅಷ್ಟೇ ಅಲ್ಲ ಪಕ್ಕೆಲುಬಿನ ನೋವಿಗೂ ಕಾರಣವಾಗುತ್ತದೆ. ಇದು ಗರ್ಭಾವಸ್ಥೆಯಲ್ಲಿಯೇ ಇರುವ ಅತ್ಯಂತ ವಿರಳವಾಗಿರುವ ಪ್ರಕರಣವಾಗಿರುತ್ತದೆ.

      ಲಿವರ್ ಕ್ಯಾನ್ಸರ್

      ಲಿವರ್ ಕ್ಯಾನ್ಸರ್

      ಯಕೃತ್ತಿನ ಕ್ಯಾನ್ಸರ್ ಹೊಂದಿರುವ ಅಥವಾ ಪಿತ್ತಜನಕಾಂಗದ ಕ್ಯಾನ್ಸರ್ ಹೊಂದಿರುವ ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಯಕೃತ್ತಿನ ಬೆಳವಣಿಗೆಯು ಉತ್ತೇಜಿಸಲ್ಪಡುತ್ತದೆ ಎಂಬುದಕ್ಕೆ ಕೆಲವು ಸಾಕ್ಷ್ಯಗಳು ಲಭ್ಯವಾಗಿದೆ. ಗೆಡ್ಡೆಯ ಬೆಳವಣಿಗೆಯು ಈ ಕಾರಣದಿಂದಾಗಿ ಮೇಲಕ್ಕೆ ತಳ್ಳಲ್ಪಡುತ್ತದೆ. ಹಾಗಾಗಿ ನೋವಿನ ಪ್ರಮಾಣದಲ್ಲೂ ಅಧಿಕವಾಗುತ್ತದೆ. ಪಕ್ಕೆಲುಬಿನ ನೋವನ್ನು ವೈದ್ಯರು ಪರೀಕ್ಷಿಸಬೇಕಾಗುವ ಅಗತ್ಯತೆ ಇರುತ್ತದೆ.

      ಗರ್ಭಧಾರಣೆಯ 36 ನೇ ವಾರದಲ್ಲಿ, ನಿಮ್ಮ ಮಗು ಜನನದ ತಯಾರಿಗಾಗಿ ಸ್ತನದ ಮೂಳೆಯ ಕೆಳಗೆ ಶ್ರೋಣಿಯ ಕುಹರದೊಳಗೆ ಬೀಳುತ್ತದೆ. ಇದು ನಿಮ್ಮ ಪಕ್ಕೆಲುಬಿನ ನೋವಿನಿಂದ ಪರಿಹಾರ ನೀಡುತ್ತದೆ. ಆದರೆ ಅದು ಸಂಭವಿಸುವವರೆಗೆ, ಈ ಸಮಸ್ಯೆಯ ಬಗ್ಗೆ ನೀವು ಎಷ್ಟು ಸಾಧ್ಯವೋ ಅಷ್ಟು ಸಂಶೋಧನೆ ಮಾಡುವುದು ಮತ್ತು ಕಲಿಯುವುದು ಒಳ್ಳೆಯದು. ಸಣ್ಣ ನೋವಾಗಿದ್ದರೆ ತಾಯ್ತನಕ್ಕಾಗಿ ಸಹಿಸಿಕೊಳ್ಳಿ. ಗರ್ಭಧಾರಣೆಯ ಪಕ್ಕೆಲುಬು ನೋವಿನಿಂದ ಪರಿಹಾರ ಪಡೆಯಲು ಸಾಧ್ಯವಿದೆ. ನಿಮ್ಮ ಸ್ತ್ರೀರೋಗತಜ್ಞರನ್ನು ನಿಯಮಿತವಾಗಿ ಭೇಟಿ ಮಾಡಿ ಮತ್ತು ಯಾವುದೇ ಅಹಿತಕರ ಬೆಳವಣಿಗೆಗಳ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿ. ನೆನಪಿಡಿ, ಆರೋಗ್ಯವಂತ ತಾಯಿ ಎಂದರೆ ಆರೋಗ್ಯವಂತ ಮಗು.

English summary

Rib Pain During Pregnancy: Reasons, Signs and Treatment in kannada

Here we are discussing about Rib Pain During Pregnancy: Reasons, Signs and Treatment in kannada. rib pain can be relieved with correct posture, stretching and exercising. Read on to find out what rib pain is and how you can manage it. Read more.
X
Desktop Bottom Promotion