For Quick Alerts
ALLOW NOTIFICATIONS  
For Daily Alerts

ಗರ್ಭವತಿಯಾಗ ಬಯಸುವವರು ವೈದ್ಯರಲ್ಲಿ ಕೇಳಲೇಬೇಕಾದ 7 ಪ್ರಶ್ನೆಗಳು

|

ಹೂವೊಂದು ಬೇಕು ಬಳ್ಳಿ,ಗೆ, ಮಗುವೊಂದು ಬೇಕು ಹೆಣ್ಣಿಗೆ..... ಇದು ಹಳೆಯ ಕನ್ನಡ ಚಲನಚಿತ್ರದ ಹಾಡಿನ ಸಾಲುಗಳು. ಹಾಡು ಹಳೆಯದಾದರೇನು, ಇದರ ಭಾವ ಮಾತ್ರ ಎಂದಿಗೂ ಸತ್ಯ. ತನ್ನದೇ ಆದ ಮಗುವೊಂದನ್ನು ಪಡೆಯುವುದು ಪ್ರತಿ ಹೆಣ್ಣಿನ ಆಶಯವಾಗಿರುತ್ತದೆ. ಆದರೆ ಯಾವ ವಯಸ್ಸಿನಲ್ಲಿ ಮಗುವನ್ನು ಪಡೆಯುವುದು ಎಂಬುದನ್ನು ಮಾತ್ರ ಆಕೆ ಕೆಲವಾರು ಅಂಶಗಳನ್ನು ಆಧರಿಸಿ ನಿರ್ಧರಿಸಬೇಕಾಗುತ್ತದೆ.

7 Questions You Must Ask Your Doctor If You Are Planning For A Baby | Boldsky Kannada

ಸಾಮಾನ್ಯವಾಗಿ ಭಾರತದಲ್ಲಿ ಈ ನಿರ್ಧಾರ ದಂಪತಿಗಳು ಯಾವಾಗ ತಮ್ಮ ಸಂಸಾರವನ್ನು ಸ್ವಂತವಾಗಿ ಹೂಡಲು ಸಾಧ್ಯವೋ ಆಗಲೇ ಕೈಗೊಳ್ಳುತ್ತಾರೆ. ಉಳಿದಂತೆ ಮನೆಯ ಹಿರಿಯ ಸದಸ್ಯರ ಆಶಯವೂ ಈ ನಿರ್ಧಾರಕ್ಕೆ ಕಾರಣವಾಗಬಲ್ಲುದು. ಕಾರಣವೇನೇ ಇರಲಿ, ಒಮ್ಮೆ, ದಂಪತಿಗಳು ತಂದೆ ತಾಯಿಯಾಗ ಬಯಸಿದಾಗ ಇದಕ್ಕೆ ಅಗತ್ಯವಾದ ಮಾಹಿತಿಗಳ ಮಹಾಪೂರವೇ ಹರಿದುಬರುತ್ತದೆ. ವಿಶೇಷವಾಗಿ ಮಹಿಳೆಗೆ ಫಲವತ್ತತೆಯ ದಿನದಿಂದ ತೊಡಗಿ ಯಾವ ಆಹಾರಗಳನ್ನು ಸೇವಿಸಬೇಕು, ಸೇವಿಸಬಾರದು ಎಂಬೆಲ್ಲಾ ಮಾಹಿತಿಗಳು ದೊರಕುತ್ತವೆ.

ಆದರೆ ಈ ಮಾಹಿತಿಗಳಲ್ಲಿ ಹೆಚ್ಚಿನವುಗಳನ್ನು ನಂಬುವಂತಿಲ್ಲ. ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾತ್ರವೇ ನಿಮ್ಮ ಆರೋಗ್ಯದ ಮಾಹಿತಿಗಳನ್ನು ಪರಿಗಣಿಸಿ ಸೂಕ್ತ ಸಲಹೆಯನ್ನು ನೀಡಬಲ್ಲರು.

ಗರ್ಭ ಧರಿಸಲು ಹಲವಾರು ಸ್ಥಿತಿಗಳು ಇದಕ್ಕೆ ಪೂರಕವಾಗಿರಬೇಕು. ಆರೋಗ್ಯ, ಫಲವತ್ತತೆ, ಪುರುಷನ ವೀರ್ಯಾಣುಗಳ ಗುಣಮಟ್ಟ, ಇತರ ಅನಾರೋಗ್ಯ ಮೊದಲಾದ ಹತ್ತು ಹಲವು ಮಾಹಿತಿಗಳನ್ನು ವೈದ್ಯರು ಪರಿಗಣಿಸಬೇಕಾಗುತ್ತದೆ. ಆ ಪ್ರಕಾರ, ನೀವು ಸಹಾ ಇದಕ್ಕೆ ಸರಿಯಾದ ತಯಾರಿ ಮಾಡಿಕೊಳ್ಳಬೇಕಾಗುತ್ತದೆ.

ಎಷ್ಟೋ ಬಾರಿ, ದಂಪತಿಗಳಿಗೆ ಕೆಲವು ಮಾಹಿತಿಗಳಿರುವುದಿಲ್ಲ, ಇದರ ಅರಿವೇ ಇಲ್ಲದೇ ಇದನ್ನು ವೈದ್ಯರಲ್ಲಿ ಕೇಳಲೂ ಹೋಗುವುದಿಲ್ಲ. ಎಲ್ಲಿಯವರೆಗೆ ವೈದ್ಯರನ್ನು ನೀವು ಕೇಳುವುದಿಲ್ಲವೋ ವೈದ್ಯರಿಗೆ ನಿಮಗೆ ಈ ಮಾಹಿತಿ ಇದೆಯೋ ಇಲ್ಲವೋ ಎಂಬುದು ಗೊತ್ತಾವುದಾದರೂ ಹೇಗೆ? ಆದ್ದರಿಂದ, ಪ್ರತಿ ದಂಪತಿಗಳೂ ವೈದ್ಯರಲ್ಲಿ ಕೇಳಲೇಬೇಕಾದ ಎಳು ಪ್ರಮುಖ ಪ್ರಶ್ನೆಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಬನ್ನಿ, ನೋಡೋಣ:

ನನಗೆ ನೈಸರ್ಗಿಕವಾಗಿ ಗರ್ಭವತಿಯಾಗಲು ಎಷ್ಟು ಕಾಲಾವಧಿಯ ಅವಶ್ಯಕತೆ ಇದೆ?

ನನಗೆ ನೈಸರ್ಗಿಕವಾಗಿ ಗರ್ಭವತಿಯಾಗಲು ಎಷ್ಟು ಕಾಲಾವಧಿಯ ಅವಶ್ಯಕತೆ ಇದೆ?

ನಿಮ್ಮ ಆರೋಗ್ಯದ ಮಾಹಿತಿಗಳನ್ನು ಪಡೆಯದೇ ಯಾವುದೇ ವೈದ್ಯರಿಗೆ ಈ ಪ್ರಶ್ನೆಗೆ ಸೂಕ್ತ ಉತ್ತರ ನೀಡಲು ಸಾಧ್ಯವಿಲ್ಲ. ಈ ಪ್ರಶ್ನೆಯನ್ನು ಉತ್ತರಿಸಲು ಇತರರು ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಹಾಗಾಗಿ, ಸತತ ಪ್ರಯತ್ನವೇ ಗರ್ಭ ನಿಲ್ಲುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಆದರೆ, ವೈದ್ಯರು ದಂಪತಿಗಳಿಬ್ಬರ ಆರೋಗ್ಯ ಮಾಹಿತಿಯನ್ನು ಪರಿಗಣಿಸಿ ಹೆಚ್ಚು ನಿಖರವಾದ ಫಲವತ್ತತೆಯ ದಿನಗಳನ್ನು ಸೂಚಿಸಿದಾಗ ಈ ದಿನಗಳ ಪ್ರಯತ್ನ ಹೆಚ್ಚಿನ ಫಲ ನೀಡುತ್ತದೆ.

ನನಗೆ ಆದಷ್ಟೂ ಬೇಗನೇ ಗರ್ಭವತಿಯಾಗಬೇಕು, ಇದಕ್ಕೇನು ಮಾಡಬೇಕು?

ನನಗೆ ಆದಷ್ಟೂ ಬೇಗನೇ ಗರ್ಭವತಿಯಾಗಬೇಕು, ಇದಕ್ಕೇನು ಮಾಡಬೇಕು?

ನೀವು ಗರ್ಭವತಿಯಾಗಬಯಸಿದ್ದು ಇದನ್ನು ವೈದ್ಯರಿಗೆ ಸ್ಪಷ್ಟವಾಗಿ ಹೇಳಿದರೆ ವೈದ್ಯರು ನಿಮ್ಮ ಮಾಸಿಕ ಋತುಚಕ್ರದ ದಿನಗಳ ವಿವರಗಳನ್ನು ಮೊದಲಾಗಿ ಪರಿಗಣಿಸಿ ಇದರಲ್ಲಿ ಯಾವ ದಿನಗಳು ಹೆಚ್ಚು ಫಲವತ್ತತೆ ಹೊಂದಿರುತ್ತವೆ ಎಂಬುದನ್ನು ಸೂಚಿಸುತ್ತಾರೆ. ನಿಮ್ಮ ಆರೋಗ್ಯ, ತೂಕ ಮೊದಲಾದವುಗಳನ್ನು ಪರಿಗಣಿಸಿ ನಿಮ್ಮ ದೇಹದಲ್ಲಿ ಅಂಡಾಣು ಬಿಡುಗಡೆಯಾಗುವ ದಿನಗಳನ್ನು ಸೂಚಿಸುತ್ತಾರೆ. ಅಗತ್ಯ ಬಿದ್ದರೆ ಕೆಲವು ಔಷಧಿಗಳನ್ನೂ ನೀಡಬಹುದು. ಈ ದಿನಗಳಲ್ಲಿ ನಡೆಸುವ ಸಂಸರ್ಗ ಹೆಚ್ಚಿನ ಫಲ ನೀಡುತ್ತದೆ.

ನಾನು ಗರ್ಭವತಿಯಾಗಲು ನನ್ನ ವಯಸ್ಸು ಅಡ್ಡಿಯಾಗುತ್ತಿದೆಯೇ?

ನಾನು ಗರ್ಭವತಿಯಾಗಲು ನನ್ನ ವಯಸ್ಸು ಅಡ್ಡಿಯಾಗುತ್ತಿದೆಯೇ?

ಸಾಮಾನ್ಯವಾಗಿ ಮೂವತ್ತೈದರ ಬಳಿಕ ಗರ್ಭವತಿಯಾಗುವ ಸಾಧ್ಯತೆ ಕ್ಷೀಣಿಸುತ್ತದೆ ಎಂದು ಅನುಭವಿ ದಾದಿಯರು ತಿಳಿಸುತ್ತಾರೆ. ಅಷ್ಟೇ ಅಲ್ಲ, ಪುರುಷರ ವೀರ್ಯಾಣುಗಳ ಗುಣಮಟ್ಟವೂ ನಲವತ್ತರ ಬಳಿಕ ಕ್ಷೀಣಿಸತೊಡಗುತ್ತದೆ. ಹಾಗಾಗಿ, ದಂಪತಿಗಳು ಆದಷ್ಟೂ ತಾರುಣ್ಯದಲ್ಲಿದ್ದಾಗಲೇ ಈ ಬಗ್ಗೆ ಪ್ರಯತ್ನ ನಡೆಸಬೇಕು. ವಯಸ್ಸಿಗೂ ಫಲವತ್ತತೆಗೂ ನಿಕಟ ಸಂಬಂಧವಿದೆ ಹಾಗೂ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಅನ್ವಯಿಸುತ್ತದೆ. ಮಹಿಳೆಯರ ದೇಹದಲ್ಲಿ ಅಂಡಾಣುಗಳ ಖಜಾನೆ ಬರಿದಾದ ಬಳಿಕ ರಜೋನಿವೃತ್ತಿ ಎದುರಾಗುತ್ತದೆ. ಆದರೆ ಪುರುಷರರಲ್ಲಿ ಜೀವಮಾನವಿಡೀ ವೀರ್ಯಾಣುಗಳ ಉತ್ಪಾದನೆ ಆಗುತ್ತಲೇ ಇರುತ್ತದೆ.

ಗರ್ಭವತಿಯಾಗಬೇಕಾದರೆ ಎಷ್ಟು ದಿನಗಳ ಅಂತರದಲ್ಲಿ ಸಂಸರ್ಗ ನಡೆಸಬೇಕು?

ಗರ್ಭವತಿಯಾಗಬೇಕಾದರೆ ಎಷ್ಟು ದಿನಗಳ ಅಂತರದಲ್ಲಿ ಸಂಸರ್ಗ ನಡೆಸಬೇಕು?

ನಿಮ್ಮ ವೈದ್ಯರು ನಿಮ್ಮ ಫಲವತ್ತತೆಯ ದಿನಗಳ ಬಗ್ಗೆ ನೀಡುವ ವಿವರಗಳನ್ನು ಗಮನಿಸಿ ಈ ದಿನಗಳು ಬರುವ ವಾರದಲ್ಲಿ ಸುಮಾರು ಎರಡರಿಂದ ಮೂರು ಬಾರಿಯಾದರೂ ಕೂಡಬೇಕು. ಈ ದಿನ ವೈದ್ಯರು ತಿಳಿಸಿದ ಫಲವತ್ತತೆಯ ದಿನ ಮತ್ತು ಒಂದು ದಿನ ಬಿಟ್ಟು ಹಿಂದಿನ ಮತ್ತು ಒಂದು ದಿನ ಬಿಟ್ಟು ಮುಂದಿನ ದಿನ ಇರಬೇಕು. ಈ ದಿನಗಳಂದು ಯಾವುದೇ ಗರ್ಭನಿರೋಧಕ ಕ್ರಮಗಳನ್ನು ಅನುಸರಿಸಬಾರದು. ಈ ಪ್ರಶ್ನೆಯನ್ನು ಖಂಡಿತಾ ವೈದ್ಯರಲ್ಲಿ ಕೇಳಿಕೊಂಡು ಅವರು ವಿವರಿಸುವ ದಿನಾಂಕವನ್ನು ಖಚಿತವಾಗಿ ಕ್ಯಾಲೆಂಡರ್ ನಲ್ಲಿ ಗುರುತು ಹಾಕಿಕೊಂಡು ಯಾವುದೇ ಕಾರಣಕ್ಕೂ ಈ ಸಮಯವನ್ನು ತಪ್ಪಿಸಿಕೊಳ್ಳದೇ ಸದುಪಯೋಗಪಡಿಸಿಕೊಳ್ಳಬೇಕು.

ನನ್ನ ಹಿಂದಿನ ಅನಾರೋಗ್ಯಗಳು ಈಗ ಗರ್ಭ ಧರಿಸಲು ಅಡ್ಡಿಯಾಗಬಹುದೇ?

ನನ್ನ ಹಿಂದಿನ ಅನಾರೋಗ್ಯಗಳು ಈಗ ಗರ್ಭ ಧರಿಸಲು ಅಡ್ಡಿಯಾಗಬಹುದೇ?

ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯಲ್ಲಿ ಯಾವುದೇ ತೊಂದರೆಯಾಗದೇ ಇರಲು ಈ ಪ್ರಶ್ನೆಯನ್ನು ಕಡ್ಡಾಯವಾಗಿ ಕೇಳಲೇ ಬೇಕು. ಗರ್ಭ ಧರಿಸುವಿಕೆಗೆ ಕೆಲವಾರು ಆರೋಗ್ಯ ಸಮಸ್ಯೆಗಳು ಅಡ್ಡಿಯಾಗುತ್ತವೆ. ನಿಮ್ಮ ಹಿಂದಿನ ಅನಾರೋಗ್ಯಗಳು ಈಗ ಗುಣವಾಗಿದ್ದರೂ ಇದರ ಪ್ರಭಾವ ಗರ್ಭ ಧರಿಸುವಿಕೆಯ ಮೇಲೆ ಆಗಬಹುದು.

ಹಾಗಾಗಿ ಪ್ರಾಮಾಣಿಕವಾಗಿ ನಿಮ್ಮ ಹಿಂದಿನ ದಿನಗಳಲ್ಲಿ ಎದುರಾಗಿದ್ದ ಅನಾರೋಗ್ಯ ಕಾಯಿಲೆ ಅಥವಾ ಶಸ್ತ್ರಚಿಕಿತ್ಸೆ, ಪೆಟ್ಟು, ಮೊದಲಾದವುಗಳನ್ನು ವೈದ್ಯರಿಗೆ ತಿಳಿಸಬೇಕು. ಕೆಲವು ಮಾಹಿತಿಗಳು ವಂಶವಾಹಿನಿಗಳ ಮೂಲಕವೂ ಹರಿದು ಬರಬಹುದು. ಈ ಬಗ್ಗೆ ಕೇಳಿದರೆ ಈ ಮಾಹಿತಿಯನ್ನೂ ವೈದ್ಯರಿಗೆ ಒದಗಿಸಬೇಕು. ಗರ್ಭ ಧರಿಸುವಿಕೆಗೆ ಅಡ್ಡಿಯಾಗುವ ಕೆಲವು ಸ್ಥಿತಿಗಳೆಂದರೆ ಲೈಂಗಿಕ ರೋಗಗಳು, ಪಿಕೋಸ್ (PCOD ( polycystic ovarian syndrome) ಮತ್ತು ಮುಖ್ಯವಾಗಿ ಪುರುಷರ ವೀರ್ಯಾಣುಗಳ ಸಾಂದ್ರತೆ (ವೀರ್ಯಾಣುಗಳ ಸಂಖ್ಯೆ)

ಗರ್ಭ ಧರಿಸಲು ಪೂರಕವಾಗಿ ನಾನೇನಾದರೂ ವಿಟಮಿನ್ನುಗಳು ಅಥವಾ ಹೆಚ್ಚುವರಿ ಔಷಧಿಗಳನ್ನು ತೆಗೆದುಕೊಳ್ಳಬೇಕೇ?

ಗರ್ಭ ಧರಿಸಲು ಪೂರಕವಾಗಿ ನಾನೇನಾದರೂ ವಿಟಮಿನ್ನುಗಳು ಅಥವಾ ಹೆಚ್ಚುವರಿ ಔಷಧಿಗಳನ್ನು ತೆಗೆದುಕೊಳ್ಳಬೇಕೇ?

ಗರ್ಭ ಧರಿಸಲು ಅವಶ್ಯವಿರುವ ವಾತಾವರಣವನ್ನು ದೇಹ ಪಡೆಯಲು ವೈದ್ಯರು ಕೆಲವು ಔಷಧಿಗಳನು ಸೂಚಿಸಬಹುದು. ವಿಶೇಷವಾಗಿ ಫೋಲಿಕ್ ಆಮ್ಲ ಇರುವ ಔಷಧಿಗಳು, ಕ್ಯಾಲ್ಸಿಯಂ ಗುಳಿಗೆಗಳು, ವಿಟಮಿನ್ ಬಿ6 ಗುಳಿಗೆಗಳನ್ನು ಸೇವಿಸಲು ನೀಡಬಹುದು. ಗರ್ಭ ಧರಿಸಿದ ಬಳಿಕವೂ ಇವುಗಳ ಸೇವನೆಯನ್ನು ಮುಂದುವರೆಸಲು ಸೂಚಿಸಬಹುದು. ಇವೆಲ್ಲವೂ ಆರೋಗ್ಯಕರ ಗರ್ಭಾವಸ್ಥೆ ಮತ್ತು ಆರೋಗ್ಯಕರ ಮಗುವಿನ ಜನನಕ್ಕೆ ನೆರವಾಗುತ್ತವೆ.

ಗರ್ಭ ಧರಿಸಿದ ಬಗ್ಗೆ ಖಚಿತ ಮಾಹಿತಿ ಪಡೆಯಲು ಯಾವಾಗ ಪರೀಕ್ಷಿಸಿಕೊಳ್ಳಬೇಕು?

ಗರ್ಭ ಧರಿಸಿದ ಬಗ್ಗೆ ಖಚಿತ ಮಾಹಿತಿ ಪಡೆಯಲು ಯಾವಾಗ ಪರೀಕ್ಷಿಸಿಕೊಳ್ಳಬೇಕು?

ಫಲವತ್ತತೆಯ ದಿನಗಳ ಪ್ರಯತ್ನದ ಬಳಿಕ ನಿಮ್ಮ ಆ ತಿಂಗಳ ಮಾಸಿಕ ದಿನಗಳು ಬರುವವರೆಗೂ ಆದಷ್ಟೂ ತಾಳ್ಮೆ ವಹಿಸಬೇಕು. ಮೆಟ್ಟಿಲು ಇಳಿಯುವುದು, ನೆಗೆತ, ವಾಹನದ ಪ್ರಯಾಣದಲ್ಲಿ ಆಗುವ ಕುಲುಕಾಟ ಮೊದಲಾದವುಗಳನ್ನು ಮಾಡಲೇ ಬಾರದು. ಈ ದಿನಗಳು ಸಂಭವಿಸದೇ ಒಂದು ವಾರ ಕಳೆದ ಬಳಿಕ ಪರೀಕ್ಷಿಸಿಕೊಳ್ಳಬೇಕು. ಇದನ್ನು ಪರೀಕ್ಷಿಸಲು ನಿಮ್ಮ ರಕ್ತದಲ್ಲಿ ಅಥವಾ ಮೂತ್ರದಲ್ಲಿ ಹೆಚ್ ಸಿ ಜಿ ( human chorionic gonadotropin (HCG) ಎಂಬ ಅಂಶ ಇದೆಯೇ ಎಂಬುದನ್ನು ಸೂಕ್ತ ಉಪಕರಣದ ಮೂಲಕ ಸ್ವತಃ ಪರೀಕ್ಷಿಸಿಕೊಳ್ಳಬಹುದು. ಏಳು ದಿನ ಏಕೆಂದರೆ ಗರ್ಭ ಧರಿಸಿದ್ದರೆ ಈ ರಾಸಾಯನಿಕ ಪತ್ತೆಯಾಗುವಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗಲು ಇಷ್ಟು ಸಮಯ ಬೇಕಾಗುತ್ತದೆ. ವೈದ್ಯರೂ ಸೂಕ್ತ ಪರೀಕ್ಷೆಗಳ ಮೂಲಕ ನೀವು ಗರ್ಭ ಧರಿಸಿರುವುದನ್ನು ಖಚಿತಪಡಿಸಬಹುದು.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary

One Must Ask This Questions Those Who are Planing For Baby

If you are planing for baby you must ask this questions to doctor
Story first published: Friday, March 6, 2020, 19:12 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X