For Quick Alerts
ALLOW NOTIFICATIONS  
For Daily Alerts

ಹೊಸದಾಗಿ ಪೋಷಕರಾಗಿ ಬಡ್ತಿ ಪಡೆದವರು ಹಣಕಾಸಿನ ನಿರ್ವಹಣೆ ಹೇಗೆ ಮಾಡಬೇಕು ಇಲ್ಲಿದೆ ಸಿಂಪಲ್‌ ಟಿಪ್ಸ್

|

ಮೊದಲ ಬಾರಿಗೆ ತಂದೆ-ತಾಯಿ ಆಗುವ ಅನುಭವವೇ ಸುಂದರ. ಇದು ಖುಷಿ, ಸಂಭ್ರಮವನ್ನಷ್ಟೇ ಅಲ್ಲ, ಹೊಸ ಹೊಸ ಜವಾಬ್ದಾರಿಗಳನ್ನು ಹೊತ್ತು ತರುತ್ತದೆ. ಅಂತಹ ಒಂದು ಜವಾಬ್ದಾರಿಗಳಲ್ಲಿ ಹಣಕಾಸಿನ ನಿರ್ವಹಣೆಯೂ ಒಂದು. ಮಗುವಿಗೆ ಒಂದೊಳ್ಳೆ ಭವಿಷ್ಯ ರೂಪಿಸುವ ಜವಾಬ್ದಾರಿ ಪೋಷಕ ಮೇಲಿರುತ್ತದೆ.

Top money management tips for new parents

ಅಂತಹ ಸಂದರ್ಭದಲ್ಲಿ ತಮ್ಮ ಹಣಕಾಸಿನ ಬಗ್ಗೆ ಗಮನವಹಿಸಬೇಕಾಗಿರುವುದು ತುಂಬಾ ಮುಖ್ಯ. ಇಲ್ಲವಾದಲ್ಲಿ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳಬಹುದು. ಹಾಗಾದರೆ, ಹೊಸದಾಗಿ ಪೋಷಕರ ಸ್ಥಾನಕ್ಕೆ ಬಡ್ತಿ ಪಡೆದವರು ಹಣಕಾಸಿನ ವಿಚಾರದಲ್ಲಿ ಗಮನಹರಿಸಬೇಕಾದ ವಿಚಾರಗಳು ಯಾವುವು? ಹಣಕಾಸಿನ ನಿರ್ವಹಣೆ ಹೇಗಿರಬೇಕು ಎಂಬುದನ್ನು ಇಲ್ಲಿ ನೋಡೋಣ.

ಹೊಸ ಪೋಷಕರು ತಮ್ಮ ಹಣಕಾಸು ನಿರ್ವಹಣೆಗಾಗಿ ಪರಿಗಣಿಸಬೇಕಾದ ಕೆಲವು ವಿಷಯಗಳನ್ನು ಈ ಕೆಳಗೆ ನೀಡಲಾಗಿದೆ:

ಮಾಸಿಕ ಬಜೆಟ್ ಯೋಜನೆ (monthly budget planning)

ಮಾಸಿಕ ಬಜೆಟ್ ಯೋಜನೆ (monthly budget planning)

ಹಣಕಾಸು ಸಂಬಂಧಿತ ಯಾವುದೇ ಯೋಜನೆಗೆ ಮುಖ್ಯವಾಗಿ ಮಾಡಬೇಕಾದ ವಿಚಾರವೆಂದರೆ, ಸರಿಯಾದ ಬಜೆಟ್ ಪ್ಲಾನ್ ಮಾಡುವುದು. ಇದು ಹೊಸದಾಗಿ ಪೋಷಕರಾದವರಿಗೂ ಹೊರತಲ್ಲ.. ಮಗುವಾದ ತಕ್ಷಣ ಗಮನವಹಿಸಬೇಕಾದ ಮೊದಲ ವಿಷಯವೆಂದರೆ ಮಾಸಿಕ ಬಜೆಟ್. ನವಜಾತ ಶಿಶುವಿನ ಎಲ್ಲಾ ಅಗತ್ಯತೆಗಳನ್ನು ಮತ್ತು ಇತರ ಪ್ರಮುಖ ವೆಚ್ಚಗಳನ್ನು ಪೂರೈಸಲು ಸರಿಯಾದ ಮಾಸಿಕ ಬಜಟ್ ತಯಾರಿಸುವುದು ತುಂಬಾ ಮುಖ್ಯ. ಇದು ನಿಮ್ಮನ್ನು ದುಂದುವೆಚ್ಚಗಳಿಂದ ದೂರವಿಡುವುದು.

ತುರ್ತು ನಿಧಿಯನ್ನು ಸ್ಥಾಪಿಸುವುದು(Emergency Fund)

ತುರ್ತು ನಿಧಿಯನ್ನು ಸ್ಥಾಪಿಸುವುದು(Emergency Fund)

ನೀವು ಮನೆಯಲ್ಲಿ ಮಗು ಇರುವುದರಿಂದ ಯಾವಾಗ ತುರ್ತು ಪರಿಸ್ಥಿತಿ ಎದುರಾಗಬಹುದು ಎಂಬುದು ಊಹಿಸುವುದು ಅಸಾಧ್ಯ. ಯಾವಾಗ ಬೇಕಾದರು ವೈದ್ಯರ ಅನಿವಾರ್ಯತೆ ಬರಬಹುದು. ಆದ್ದರಿಂದ ಅ ಸಮಯಕ್ಕೆ ಅಗತ್ಯವಿರುವಷ್ಟು ಹಣ ನಿಮ್ಮಲ್ಲಿ ಸದಾಕಾಲ ಇರುವುದು ತುಂಬಾ ಮುಖ್ಯ. ಆದ್ದರಿಂದ ಇಂತಹ ತುರ್ತು ಪರಿಸ್ಥಿತಿಗಳಿಗಾಗಿ ಸ್ವಲ್ಪ ಮಟ್ಟದ ಹಣವನ್ನು ತೆಗೆದಿಡುವುದು ಇಂತಹ ಸನ್ನಿವೇಶವನ್ನು ಸುಲಭವಾಗಿ ಎದುರಿಸಲು ಸಹಾಯ ಮಾಡುವುದು. ಈ ತುರ್ತು ನಿಧಿಯು ಹೊಸ ಪೋಷಕರಿಗೆ ಯಾವುದೇ ಆರ್ಥಿಕ ಒತ್ತಡವಿಲ್ಲದೇ ಬದುಕಲು ಸಹಕರಿಸುವುದು.

ವೆಚ್ಚಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ

ವೆಚ್ಚಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ

ಹೊಸ ಪೋಷಕರು ತಮ್ಮ ಮಗುವಿಗೆ ಎಲ್ಲದಕ್ಕಿಂತ ಉತ್ತಮವಾದದ್ದನ್ನು ನೀಡಲು ಪ್ರಯತ್ನಿಸುವುದು ಸಾಮಾನ್ಯ. ಇದು ಆಟಿಕೆ, ಬಟ್ಟೆಯಿಂದ ಹಿಡಿದು, ಮಲಗುವ ಮಂಚದಂಹತ ವಸ್ತುಗಳವರೆಗೆ ಎಲ್ಲವನ್ನು ಉತ್ತಮವಾದುದ್ದನ್ನೇ ಹುಡುಕುತ್ತಾರೆ. ಇದು ಅನಗತ್ಯ ಖರ್ಚಿಗೆ ಕಾರಣವಾಗುತ್ತದೆಯೇ ಹೊರತು, ಇದರಿಂದ ನಿಮ್ಮ ಮಗುವಿಗೆ ಯಾವುದೇ ಪ್ರಯೋಜನವಾಗಲಾರದು ಎಂಬುದನ್ನು ನೆನಪಿಟ್ಟುಕೊಳ್ಳಿ. ಏಕೆಂದರೆ ಮಗುವಿಗೆ ದುಬಾರಿ ವಸ್ತುಗಳ ಅಗತ್ಯವಿರೋದಿಲ್ಲ. ಆರೋಗ್ಯಕರ ಹಾಗೂ ಸಂತೋಷದ ವಾತಾವರಣ ಸಿಕ್ಕರೆ ಸಾಕು. ಆದ್ದರಿಂದ, ಅನಗತ್ಯ ವೆಚ್ಚಗಳು ಮತ್ತು ದುಂದುವೆಚ್ಚಗಳಿಂದ ದೂರವಿರುವುದು ಉತ್ತಮ.

ಹೂಡಿಕೆಗಳನ್ನು ಹೆಚ್ಚೆಚ್ಚು ಮಾಡಿ

ಹೂಡಿಕೆಗಳನ್ನು ಹೆಚ್ಚೆಚ್ಚು ಮಾಡಿ

ಇಂದಿನ ಕಾಲದಲ್ಲಿ ಹೂಡಿಕೆ ಮಾಡುವುದು ನಿಮ್ಮ ಹಾಗೂ ಮಗುವಿನ ದೃಷ್ಟಿಯಿಂದ ಬಹಳ ಒಳ್ಳೆಯದು. ಇದು ನಿಮ್ಮ ಮಗುವಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಸಹಾಯ ಮಾಡುವುದು. ಆದ್ದರಿಂದ ಹಲವಾರು ಹೂಡಿಕೆಗಳನ್ನು ಮಾಡಿ. ಹೆಚ್ಚಿನ ತಜ್ಞರು ಮಗುವಿನ ಶಿಕ್ಷಣ ಯೋಜನೆಗಳಿಗಾಗಿ ಅವರು ಹುಟ್ಟಿದ ಸಮಯದಿಂದ ಹೂಡಿಕೆ ಮಾಡಲು ಸಲಹೆ ನೀಡುತ್ತಾರೆ. ಇದು ಪೋಷಕರಿಗೆ ತಮ್ಮ ಮಗುವಿನ ಶಿಕ್ಷಣಕ್ಕಾಗಿ ಮತ್ತು ಅವರ ಭವಿಷ್ಯವನ್ನು ಭದ್ರಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಆರೋಗ್ಯ ವಿಮೆ, ಜೀವ ವಿಮಾ ರಕ್ಷಣಾ ವಿಮೆಯಲ್ಲಿ ಹೂಡಿಕೆ ಮಾಡಿ. ಇದು ನಿಮ್ಮ ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರುವುದು.

ನಿವೃತ್ತಿಯ ಯೋಜನೆ:

ನಿವೃತ್ತಿಯ ಯೋಜನೆ:

ಮಗುವಿಗೆ ಉತ್ತಮ ಭವಿಷ್ಯವನ್ನು ರೂಪಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ, ಆದರೆ, ತಮ್ಮ ನಿವೃತ್ತಿಯ ಜೀವನಕ್ಕೆ ಯೋಜನೆ ಮಾಡುವುದು ಸಹ ಅಷ್ಟೇ ಮುಖ್ಯವಾಗಿದೆ. ಅದನ್ನು ಆರಂಭದಿಂದಲೇ ಮಾಡಿದರೆ ಉತ್ತಮ. ವಯಸ್ಸಾದ ಬಳಿಕ ಆರಂಭಿಸುವುದು ಸರಿಯಲ್ಲ. ಆದ್ದರಿಂದ, ನವಜಾತ ಶಿಶುವಿನ ಭವಿಷ್ಯವನ್ನು ಭದ್ರಪಡಿಸುವುದರೊಂದಿಗೆ ನಿವೃತ್ತಿಯ ಯೋಜನೆ ಮತ್ತು ಉತ್ತಮ ಹೂಡಿಕೆಗಳನ್ನು ಮಾಡುವಲ್ಲಿಯೂ ಸಹ ಪ್ರಾಮುಖ್ಯತೆಯನ್ನು ನೀಡಬೇಕು ಎಂಬುದನ್ನು ನೆನಪಿಟ್ಟುಕೊಳ್ಳಿ. ಇದು ನಿಮ್ಮ ನಿವೃತ್ತಿಯ ಜೀವನವನ್ನ ಸುಲಭವಾಗಿ ಕಳೆಯದಲು ಸಹಕರಿಸುವುದು.

English summary

Money Management Tips For New Parents in Kannada

Here we talking about Essential Money Management Tips for New Parents, read on
X
Desktop Bottom Promotion