For Quick Alerts
ALLOW NOTIFICATIONS  
For Daily Alerts

ಎಲ್ಲಾ ಗರ್ಭಪಾತದಲ್ಲಿ ರಕ್ತಸ್ರಾವವಾಗಲ್ಲ, ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರ ಸಂಪರ್ಕಿಸಿ

|

ಗರ್ಭಿಣಿ ಎಂದು ಗೊತ್ತಾದಾಗ ಮನಸ್ಸಿನಲ್ಲಿ ಏನೋ ಒಂದು ಸಂಭ್ರಮ, ಬರಲಿರುವ ಪುಟ್ಟ ಜೀವದ ಬಗ್ಗೆ ಸಾಕಷ್ಟು ನಿರೀಕ್ಷೆ. ವೈದ್ಯರು ಮೊದಲ 3 ತಿಂಗಳು ಸ್ವಲ್ಪ ಜಾಗ್ರತೆಯಿಂದ ಇರಲು ಹೇಳುತ್ತಾರೆ, ನಾವು ಆ ಮಗುವಿನ ಬಗ್ಗೆ ಸಾಕಷ್ಟು ಕನಸು ಕಾಣುತ್ತೇವೆ. ಆದರೆ ಆ ಮಗು ಗರ್ಭದಲ್ಲಿಯೇ ಇಲ್ಲವಾದರೆ ಮನಸ್ಸಿಗೆ ತುಂಬಾನೇ ನೋವಾಗುತ್ತೆ.

Miscarriage without bleeding

ಸಾಮಾನ್ಯವಾಗಿ ರಕ್ತಸ್ರಾವ ಪ್ರಾರಂಭವಾದಾಗ ಗರ್ಭಪಾತವಾಗಿರಬಹುದೇ ಎಂಬ ಸಂದೇಹ ಮೂಡುತ್ತದೆ, ಆದರೆ ಗರ್ಭಪಾತವಾದ ಎಲ್ಲರಿಗೆ ರಕ್ತಸ್ರಾವವಾಗುವುದಿಲ್ಲ ಆದ್ದರಿಂದ ಕೆಲವರಿಗೆ ಗರ್ಭಪಾತವಾಗಿರುವ ವಿಷಯ ಒಂದೆರಡು ದಿನ ಗೊತ್ತಾಗುವುದೇ ಇಲ್ಲ.

ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ

ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ

ಗರ್ಭಿಣಿಯಾದಾಗ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತೆ. ವಾಂತಿ, ಸುಸ್ತು ಈ ರೀತಿ ಪ್ರೆಗ್ನೆನ್ಸಿ ಸಿಕ್‌ನೆಸ್‌ ಇರುತ್ತದೆ, ಅವುಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಗಮನಿಸಿ, ಇದ್ದಕ್ಕಿದ್ದಂತೆ ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ:

* ಗರ್ಭಾವಸ್ಥೆಯಲ್ಲಿ ಕಂಡು ಬರುತ್ತಿರುವ ಲಕ್ಷಣಗಳು ಕಂಡು ಬಾರದೇ ಇದ್ದಾಗ

* ಪ್ರೆಗ್ನೆನ್ಸಿ ಟೆಸ್ಟ್ ಮಾಡಿದಾಗ ನೆಗೆಟಿವ್ ಅಂತ ಬಂದರೆ

* ವಾಂತಿ, ತಲೆಸುತ್ತು, ಬೇಧಿ

* ಕಂದು ಬಣ್ಣದ ಅಥವಾ ಕೆಂಪು-ಬಿಳಿ ಮಿಶ್ರಿತ ದ್ರವ ಜನನೇಂದ್ರೀಯದಿಂದ ಬರುತ್ತಿದ್ದರೆ

* ತುಂಬಾ ಕಿಬ್ಬೊಟ್ಟೆ ನೋವು

* ತುಂಬಾ ಸುಸ್ತು

 ಗರ್ಭಪಾತವಾಗಿದೆ ಎಂದು ತಿಳಿಯುವುದು ಹೇಗೆ?

ಗರ್ಭಪಾತವಾಗಿದೆ ಎಂದು ತಿಳಿಯುವುದು ಹೇಗೆ?

ಏಕೋ ಏನೋ ಸರಿಯಿಲ್ಲ ಎಂದು ನಿಮಗೇ ಅನಿಸಲಾರಂಭಿಸುತ್ತದೆ, ಕೂಡಲೇ ವೈದ್ಯರ ಬಳಿ ಹೋಗಿ ಪರೀಕ್ಷಿಸಿ. ಅವರು ಹೆಚ್‌ಸಿಜಿ ಪರೀಕ್ಷೆ ಮಾಡಿ ನೋಡುತ್ತಾರೆ ಆಗ ಮಗು ಜೀವಂತವಾಗಿ ಇದೆಯೇ, ಇಲ್ಲವೇ ಎಂದು ತಿಳಿಯುತ್ತದೆ.

 ಗರ್ಭಪಾತವಾದಾಗ ಏನು ಮಾಡಬೇಕು?

ಗರ್ಭಪಾತವಾದಾಗ ಏನು ಮಾಡಬೇಕು?

ಗರ್ಭಕೋಶದಲ್ಲಿ ಭ್ರೂಣದ ಅಂಶ ಉಳಿಯಬಾರದು. ಇಳಿದರೆ ಸೋಂಕು ಉಂಟಾಗಿ ತೊಂದರೆಯಾಗುವುದು, ಆದ್ದರಿಂದ ವೈದ್ಯರನ್ನು ಹೊಟ್ಟೆಯನ್ನು ಕ್ಲೀನ್‌ ಮಾಡುವಂತೆ ಹೇಳುತ್ತಾರೆ. ಕೆಲವರಿಗೆ ಟ್ಯಾಬ್ಲೆಟ್‌ ನೀಡುತ್ತಾರೆ, ಭ್ರೂಣ ಕರಗಿ ರಕ್ತಸ್ರಾವದ ಮೂಲಕ ಹೊರ ಹೋಗುತ್ತೆ, ಕಲವರಿಗೆ ಹೊಟ್ಟೆಯನ್ನು ಸ್ವಚ್ಛ ಮಾಡಿಸಬೇಕಾಗುತ್ತೆ. ಗರ್ಭಪಾತ ಮಾಡಿಸಿದ ಮೇಲೆ ಎರಡು ವಾರ ಅಥವಾ ಒಂದು ತಿಂಗಳಾದ ಮೇಲೆ ಬಂದು ಸ್ಕ್ಯಾನಿಂಗ್‌ ಮಾಡಿಸುವಂತೆ ಸೂಚಿಸುತ್ತಾರೆ, ತಪ್ಪದೇ ಮಾಡಿ.

ನಂತರ ಮಗುವಿಗೆ ಯಾವಾಗ ಪ್ಲ್ಯಾನಿಂಗ್ ಮಾಡಬಹುದು?

ನಂತರ ಮಗುವಿಗೆ ಯಾವಾಗ ಪ್ಲ್ಯಾನಿಂಗ್ ಮಾಡಬಹುದು?

ನಿಮ್ಮ ದೇಹದ ಸ್ಥಿತಿ ನಿಮ್ಮ ವೈದ್ಯರಿಗೆ ಗೊತ್ತಿರುತ್ತದೆ, ಅವರು ಈ ಕುರಿತು ನಿಮಗೆ ಸಲಹೆ ನೀಡುತ್ತಾರೆ. ಒಮ್ಮೆ ಗರ್ಭಪಾತವಾದ ಮೇಲೆ ಕನಿಷ್ಠ 6 ತಿಂಗಳು ಗ್ಯಾಪ್‌ ನೀಡಿ ಮಗುವಿಗಾಗಿ ಪ್ರಯತ್ನಿಸಿದರೆ ಒಳ್ಳೆಯದು, ಏಕೆಂದರೆ ಗರ್ಭಪಾತವಾದಾಗ ದೇಹವೂ ಬಳಲಿರುತ್ತದೆ. ಆದ್ದರಿಂದ ಗಂಡ-ಹೆಂಡತಿ ಜೊತೆಯಾಗಿ ವೈದ್ಯರ ಬಳಿ ಹೋಗಿ ಸಲಹೆ-ಸೂಚನೆ ಪಡೆಯಿರಿ.

English summary

Miscarriage without bleeding: Signs, Symptoms and diagnosis in Kannada

Miscarriage without bleeding: Here are silent Signs of miscarriage, Symptoms and diagnosis read on....
Story first published: Thursday, November 10, 2022, 12:23 [IST]
X
Desktop Bottom Promotion