For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ವೀರ್ಯಾಣು ಕಡಿಮೆಯಾಗಲು ಕಾರಣವೇನು? ಚಿಕಿತ್ಸೆಯೇನು?

|

ಮದುವೆಯಾಗಿ ತುಂಬಾ ವರ್ಷಗಳಾಯ್ತು ಮಗುವಾಗಲಿಲ್ಲ ಎಂದಾದರೆ ಸಮಾಜ ಮಹಿಳೆಯಲ್ಲೇ ಏನಾದರೂ ಕೊರತೆ ಇರಬಹುದು ಎಂದು ಹೇಳುತ್ತೆ. ಆದರೆ ಬಂಜೆತನ ಎಂಬುವುದು ಹೆಣ್ಣಿಗೆ ಮಾತ್ರವಲ್ಲ ಗಂಡಿಗೂ ಇರುತ್ತದೆ. ಗಂಡನಲ್ಲಿರುವ ಬಂಜೆತನ ಸಮಸ್ಯೆಯಿಂದಾಗಿ ಮಗುವಾಗುವುದಿಲ್ಲ.

ಆದ್ದರಿಂದ ಮದುವೆಯಾಗಿ ಕೆಲವು ವರ್ಷಗಳಾದರೂ ಮಕ್ಕಳಾಗದಿದ್ದರೆ ಗಂಡ-ಹೆಂಡತಿ ಇಬ್ಬರೂ ಪರೀಕ್ಷೆಗೆ ಒಳಪಟ್ಟರೆ ಯಾರಲ್ಲಿ ಸಮಸ್ಯೆಯಿದೆಯೋ ಅವರು ಚಿಕಿತ್ಸೆ ಪಡೆದರೆ ಮಕ್ಕಳಾಗುವ ಸಾಧ್ಯತೆ ಹೆಚ್ಚು.

ಪುರುಷರಲ್ಲಿ ನಾನಾ ಕಾರಣಗಳಿಂದ ಬಂಜೆತನ ಉಂಟಾಗುತ್ತದೆ. ಪುರುಷರಿಗೆ ಈ ಕಾರಣಗಳಿಂದ ಬಂಜೆತನ ಉಂಟಾಗುವುದು:

ಪುರುಷರಲ್ಲಿ ನಾನಾ ಕಾರಣಗಳಿಂದ ಬಂಜೆತನ ಉಂಟಾಗುತ್ತದೆ. ಪುರುಷರಿಗೆ ಈ ಕಾರಣಗಳಿಂದ ಬಂಜೆತನ ಉಂಟಾಗುವುದು:

1. ವೆರಿಕೋಸಿಲೆ: ಈ ಕಾಯಿಲೆಯಿಂದಾಗಿ ಪುರುಷರಲ್ಲಿ ಬಂಜೆತನ ಹೆಚ್ಚಾಗಿ ಕಂಡು ಬರುತ್ತದೆ. ವೃಷಣದಲ್ಲಿರುವ ನರಗಳಗಳಲ್ಲಿ ಊತ ಉಂಟಾಗಿ ವೆರಿಕೋಸಿಲೆ ಉಂಟಾಗುವುದು. ಈ ರೀತಿಯಾದಾಗ ಸಹಜವಾಗಿ ರಕ್ತ ಸಂಚಾರವಾಗುವಿದಿಲ್ಲ, ಇದರಿಂದ ವೀರ್ಯಾಣುಗಳು ಕಡಿಮೆಯಾಗುವುದು.

2. ಜೀವನಶೈಲಿ: ಅನಾರೋಗ್ಯಕರ ಜೀವನಶೈಲಿ ಬಂಜೆತನಕ್ಕೆ ಕಾರಣವಾಗುವುದು. ತುಂಬಾ ಧೂಮಪಾನ ಮಾಡುವುದು, ಅನಾರೋಗ್ಯಕರ ಆಹಾರಶೈಲಿ, ಮದ್ಯಪಾನ, ತುಂಬಾ ಹೊತ್ತು ಕೆಲಸ ಮಾಡುವುದು, ಅತ್ಯಧಿಕ ಮೈ ತೂಕ, ಸರಿಯಾಗಿ ನಿದ್ದೆಯಿಲ್ಲದಿರುವುದು, ಶಿಫ್ಟ್‌ನಲ್ಲಿ ಕೆಲಸ ಇವೆಲ್ಲಾ ಬಂಜೆತನ ಉಂಟು ಮಾಡುವುದು.

3. ವಯಸ್ಸು: ವಯಸ್ಸಾಗುತ್ತಿದ್ದಂತೆ ವೀರ್ಯಾಣುಗಳ ಸಮಖ್ಯೆ ಕಡಿಮೆಯಾಗುವುದು. ತುಂಬಾ ವಯಸ್ಸಾಗಿದ್ದರೆ ಮಗುವಾಗುವ ಸಾಧ್ಯತೆ ಕಡಿಮೆ.

4. ಅನುವಂಶಿಕ ಕಾಯಿಲೆ:, ಕ್ಲೈನ್ಫೆಲ್ಟರ್ ಸಿಂಡ್ರೋಮ್, ಸಿಸ್ಟಿಕ್ ಫೈಬ್ರೋಸಿಸ್ ಇಂಥ ಅನುವಂಶೀಯ ಸಮಸ್ಯೆಯಿದ್ದರೆ ವೀರ್ಯಾಣುಗಳ ಸಂಖ್ಯೆ ತುಂಬಾ ಕಡಿಮೆ ಇರುವುದು, ಕೆಲವರಲ್ಲಿ ಇರುವುದೇ ಇಲ್ಲ.

5. ಕ್ಯಾನ್ಸರ್ ಅಥವಾ ಕ್ಯಾನ್ಸರ್‌ಗೆ ಚಿಕಿತ್ಸೆ: ಕ್ಯಾನ್ಸರ್ ಚಿಕಿತ್ಸೆ ಪಡೆದಾಗ ಅದು ಸಂತಾನೋತ್ಪತ್ತಿ ಸಾಮಾರ್ಥ್ಯದ ಮೇಲೆ ಪರಿಣಾಮ ಬೀರುವುದು. ಈ ಚಿಕಿತ್ಸೆ ಪಡೆಯುವವರು ತಮ್ಮ ವೀರ್ಯಾಣು ಮೊದಲೇ ಸ್ಟೋರ್ ಮಾಡಿದರೆ ಮುಂದೆ ಫರ್ಟಿಲಿಟಿ ಚಿಕಿತ್ಸೆಯಲ್ಲಿ ಬಳಸಬಹುದು.

ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವುದು ಹೇಗೆ?

ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವುದು ಹೇಗೆ?

* ಮೈ ತೂಕ ನಿಯಂತ್ರಣದಲ್ಲಿರಲಿ

* ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ

* ಧೂಮಪಾನ, ಮದ್ಯಪಾನ ಚಟದಿಂದ ದೂರವಿರಿ

* ತೊಡೆ ಮೇಲೆ ಲ್ಯಾಪ್‌ಟಾಪ್‌ ಇಟ್ಟು ಕೆಲಸ ಮಾಡಬೇಡಿ

* ಆರೋಗ್ಯಕರ ಆಹಾರ ಸೇವಿಸಿ

* ವ್ಯಾಯಾಮ ಮಾಡಿ

ಪುರುಷರ ಬಂಜೆತನ ಚಿಕಿತ್ಸೆ

ಪುರುಷರ ಬಂಜೆತನ ಚಿಕಿತ್ಸೆ

1. ಔಷಧಿಗಳ ಮೂಲಕ ಚಿಕಿತ್ಸೆ

ವಿಟಮಿನ್ ಸಿ, ವಿಟಮಿನ್ ಇ, ಗ್ಲುಟಾಥಿಯೋನ್ ಇಂಥ ಆ್ಯಂಟಿಆಕ್ಸಿಡೆಂಟ್‌ಗಳನ್ನು ನೀಡಿ ಟೆಸ್ಟೋಸ್ಟಿರೋನೆ ಹೆಚ್ಚಿಸಲಾಗುವುದು. ಅಲ್ಲದೆ FSH ಮತ್ತು LH ಹಾರ್ಮೋನ್‌ಗಳ ವೃದ್ಧಿಗೆ Human HCG(Chorionic Gonadotrophin) ಚಿಕಿತ್ಸೆ ನೀಡಲಾಗುವುದು. ಇದರಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚುವುದು.

ಸರ್ಜಿಕಲ್ ಟ್ರೀಟ್ಮೆಂಟ್

ಸರ್ಜಿಕಲ್ ಟ್ರೀಟ್ಮೆಂಟ್

1. ಮೈಕ್ರೋ-TAZ (Microscopic Testicular Sperm Extraction):)

2. ವೆರಿಕೊಸೆಲೆಕ್ಟೊಮಿ

3. ವಾಸೆಕ್ಟಮಿ ರಿವರ್ಸಲ್

ಜೀವನಶೈಲಿಯಲ್ಲಿ ಬದಲಾವಣೆ

ಜೀವನಶೈಲಿಯಲ್ಲಿ ಬದಲಾವಣೆ

ಆರೋಗ್ಯಕರ ಆಹಾರ ಸೇವನೆ, ಪ್ರತಿನಿತ್ಯ ವ್ಯಾಯಾಮ ಮಾಡುವುದು, ಮಾನಸಿಕ ಒತ್ತಡ ಕಡಿಮೆ ಮಾಡುವುದು

English summary

Male Infertility Causes, Symptoms and Treatment in Kannada

Male infertility Causes, Symptoms and Treatment in Kannada, Read on.....
X
Desktop Bottom Promotion