Just In
Don't Miss
- News
Assembly election 2023: ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ
- Movies
Ramachari Serial: ರಾಮಾಚಾರಿ ವ್ರತ ಹಾಳು ಮಾಡಿದ ಮಾನ್ಯತಾ!
- Sports
BGT 2023: ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಜಮ್ಮು-ಕಾಶ್ಮೀರದ ಸ್ಪಿನ್ನರ್ಗೆ ಆಹ್ವಾನ ನೀಡಿದ ಆಸ್ಟ್ರೇಲಿಯಾ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ತನಗಳ ತೊಟ್ಟು ಹೆಚ್ಚು ತುರಿಕೆ ಆಗುತ್ತದೆಯೇ ಇದೇ ಕಾರಣಗಳಿರಬಹುದು ನೋಡಿ!
ಮನುಷ್ಯನನ್ನು ಕಾಡುವ ಕೆಲವು ಸಮಸ್ಯೆಗಳನ್ನು ಎಲ್ಲರೆದುರು ಹೇಳಿಕೊಳ್ಳಬಹುದಾದರೂ ಇನ್ನೂ ಕೆಲವು ಆರೋಗ್ಯ ಸಮಸ್ಯೆಗಳನ್ನು ಎಲ್ಲೂ ಹೇಳಿಕೊಳ್ಳಲಾಗದ ಸ್ಥಿತಿಯಾಗಿರುತ್ತದೆ. ಇಂಥಾ ಕೆಲವು ವಿಚಿತ್ರ ಸಮಸ್ಯೆಗಳಲ್ಲಿ ಒಂದು ಸ್ತನದ ತುರಿಕೆ. ಸ್ತನತೊಟ್ಟುಗಳಲ್ಲಿ ತುರಿಕೆ ಎದುರಾದರೆ ತುಂಬಾ ಮುಜುಗರ ಎದುರಿಸಬೇಕಾಗುತ್ತದೆ. ಅದರಲ್ಲೂ ನಾಲ್ಕು ಜನರ ನಡುವೆ ಇದ್ದಾಗ ಈ ನವೆಯನ್ನು ಶಮನಗೊಳಿಸಲಾಗದೇ, ಚಡಪಡಿಕೆ ಎದುರಾಗುತ್ತದೆ.
ಸ್ತನತೊಟ್ಟುಗಳಲ್ಲಿ ತುರಿಕೆ ಎದುರಾಗಲು ಕೆಲವಾರು ಕಾರಣಗಳಿವೆ. ಗರ್ಭಾವಸ್ಥೆ ಎದುರಾದಾಗ ಸ್ತನತೊಟ್ಟುಗಳ ಭಾಗದಲ್ಲಿ ತುರಿಕೆ ಉಂಟಾಗುವುದು ಸಾಮಾನ್ಯ ಹಾಗೂ ಕೆಲವೇ ದಿನಗಳಲ್ಲಿ ಇದು ತಾನಾಗಿಯೇ ಇಲ್ಲವಾಗುತ್ತದೆ. ಇದರ ಹೊರತಾಗಿಯೂ ತುರಿಕೆ ಇದೆ ಎಂದರೆ ಇದಕ್ಕೆ ಇತರ ಕಾರಣಗಳಿರಬಹುದು. ಇಂದಿನ ಲೇಖನದಲ್ಲಿ ಇಂತಹ ಪ್ರಮುಖ ಕಾರಣಗಳನ್ನು ವಿವರಿಸಲಾಗಿದೆ.

ಗರ್ಭಾವಸ್ಥೆ
ಗರ್ಭಾವಸ್ಥೆಯ ಪ್ರತಿ ಹಂತದಲ್ಲಿಯೂ ಗರ್ಭವತಿಯ ದೇಹದಲ್ಲಿ ನೂರಾರು ಬಗೆಯ ರಸದೂತಗಳ ಪ್ರಭಾವ ಎದುರಾಗುತ್ತದೆ. ಪರಿಣಾಮವಾಗಿ ದೇಹದಲ್ಲಿ ಕೆಲವಾರು ಬದಲಾವಣೆಗಳು ಕಂಡುಬರುತ್ತವೆ. ದೈಹಿಕ ಬದಲಾವಣೆಯ ಜೊತೆಗೇ ಮಾನಸಿಕವಾಗಿಯೂ ಈ ರಸದೂತಗಳು ಪ್ರಭಾವ ಬೀರುವ ಕಾರಣ ಮನೋಭಾವದಲ್ಲಿ ಏರುಪೇರು ಕಾಣಿಸಿಕೊಳ್ಳುತ್ತದೆ.
ಬಹುತೇಕ ಎಲ್ಲಾ ಗರ್ಭವತಿಯರಲ್ಲಿ ಕಾಣಿಸಿಕೊಳ್ಳುವ ಅತಿ ಸಾಮಾನ್ಯ ತ್ವಚೆಗೆ ಸಂಬಂಧಿಸಿದ ತೊಂದರೆ ಎಂದರೆ ಸ್ತನತೊಟ್ಟುಗಳ ತುರಿಕೆ. ಇದಕ್ಕೆ ಪ್ರಮುಖ ಕಾರಣ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಅನುಗುಣವಾಗಿ ಗರ್ಭವತಿಯ ದೇಹ ಹಿಗ್ಗುತ್ತಿದ್ದಂತೆಯೇ ಇದಕ್ಕೆ ಅನುಸಾರವಾಗಿ ಚರ್ಮವೂ ಸೆಳೆತಕ್ಕೊಳಗಾಗುತ್ತದೆ. ಹೊಟ್ಟೆಯ ಭಾಗದ ಸ್ಟ್ರೆಚ್ ಮಾರ್ಕ್ಸ್ ಎಂದು ಕರೆಯಲ್ಪಡುವ ಗುರುತುಗಳು ಇದರಲ್ಲಿ ಪ್ರಮುಖವಾಗಿವೆ.

ಸ್ತನಪಾನ
ಇನ್ನೊಂದು ಕಾರಣ ಮಗುವಿಗೆ ಹಾಲೂಡಿಸುವ ಮೂಲಕ ಎದುರಾಗುವ ತುರಿಕೆಯಾಗಿದೆ. ಕೆಲವೊಮ್ಮೆ ಹುಟ್ಟಿದ ಮಗು ಹಾಲು ಕುಡಿಯುವ ಪ್ರಯತ್ನದಲ್ಲಿಯೂ ತುರಿಕೆ ಎನಿಸಬಹುದು. ಕೆಲವೊಮ್ಮೆ ಊದಿಕೊಂಡ ಹಾಲಿನ ಗ್ರಂಥಿಗಳು ಅಥವಾ ಎದೆಹಾಲು ತೊಟ್ಟಿನಿಂದ ಹೊರಬಿದ್ದು ಸ್ತನತೊಟ್ಟಿನ ಭಾಗದಲ್ಲಿ ತಾಕಿದ್ದು ಕೊಂಚ ಹೊತ್ತಿನ ಬಳಿಕ ಒಣಗಿದರೆ ಇದೂ ತುರಿಕೆಗೆ ಕಾರಣವಾಗಬಹುದು. ಸ್ವಚ್ಛತೆಯನ್ನು ಕಾಪಾಡುವ ಮೂಲಕ ಈ ತುರಿಕೆಯನ್ನು ಆದಷ್ಟೂ ಇಲ್ಲವಾಗಿಸಬಹುದು.

ರಜೋನಿವೃತ್ತಿ
ರಜೋನಿವೃತ್ತಿಯ ದಿನಗಳಲ್ಲಿರುವ ಮಹಿಳೆಯರ ತ್ವಚೆ ಹೆಚ್ಚು ಒಣದಾಗಿರುತ್ತದೆ ಹಾಗೂ ಸುಲಭವಾಗಿ ತುರಿಕೆಗೆ ಒಳಗಾಗುತ್ತದೆ. ದೇಹದ ರಸದೂತಗಳ ಏರುಪೇರಿನ ಜೊತೆಗೇ ತ್ವಚೆಯಲ್ಲಿ ಉತ್ಪತ್ತಿಯಾಗುವ ನೈಸರ್ಗಿಕ ತೈಲಗಳೂ ಕಡಿಮೆ ಉತ್ಪತ್ತಿಯಾಗುವ ಕಾರಣ ದೇಹದ ಎಲ್ಲಾ ಭಾಗದಲ್ಲಿಯೂ ತುರಿಕೆ ಕಾಣಿಸಿಕೊಂಡರೂ ಸೂಕ್ಷ್ಮ ಭಾಗಗಳಾದ ಸ್ತನತೊಟ್ಟುಗಳಲ್ಲಿ ತುರಿಕೆ ಹೆಚ್ಚುತ್ತದೆ.

ಕ್ಯಾಂಡಿಡೈಯಾಸಿಸ್
ಇದು ಶಿಲೀಂಧ್ರದ ಸೋಂಕು ಆಗಿದೆ ಹಾಗೂ ಸ್ತನಪಾನ ಮಾಡಿಸುವ ತಾಯಂದಿರಿಗೆ ಅತಿ ಹೆಚ್ಚಾಗಿ ಬಾಧಿಸುತ್ತದೆ. ಸ್ತನತೊಟ್ಟು ಮತ್ತು ಹಾಲು ಒಸರುವ ತೂತಿನ ಭಾಗದಲ್ಲಿ ಈ ಶಿಲೀಂಧ್ರದ ಸೋಂಕು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಭಾಗದಲ್ಲಿ ಚಿಕ್ಕದಾಗಿ ಹೊಳಪುಳ್ಳ ಪಕಳೆ ಎದ್ದಂತೆ ಚರ್ಮದ ಹೊರಪದರ ಒಣಗುತ್ತದೆ. ಅಲ್ಲದೇ ಹಾಲು ಕುಡಿಸುವಾಗ ತುರಿಕೆಯ ಜೊತೆಗೇ ಚಿಕ್ಕದಾಗಿ ಉರಿಯುವಂತೆಯೂ ಅನ್ನಿಸುತ್ತದೆ. ಸ್ತನತೊಟ್ಟಿನ ತುದಿಭಾಗದಿಂದ ಬುಡದವರೆಗೂ ಚಿಕ್ಕ ಚಿಕ್ಕ ಕೆಂಪಗಿನ ಗುಳ್ಳೆಗಳು ಕಾಣಿಸಿಕೊಂಡು ಅಪಾರ ಉರಿ ತರಿಸಬಹುದು. ತಕ್ಷಣವೇ ಚರ್ಮ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು.

ಕ್ಯಾನ್ಸರ್
ವಿವಿಧ ಕ್ಯಾನ್ಸರ್ ಗಳಿಗೆ ನೀಡಲಾಗುವ ಚಿಕಿತ್ಸೆಯಿಂದಲೂ ತುರಿಕೆ ಎದುರಾಗಬಹುದು. ರೇಡಿಯೇಶನ್ ಥೆರಪಿ ಯಿಂದ ಚರ್ಮ ಅತೀವವಾಗಿ ಒಣಗುತ್ತದೆ. ಅಲ್ಲದೇ ಖೀಮೋಥೆರಪಿಯಲ್ಲಿ ನೀಡಲಾಗುವ ಆಲ್ಕಲಾಯ್ಡುಗಳು ಮತ್ತು ಆಂಟಿ ಮೆಟಾಬೊಲೈಟುಗಳು ಮೊದಲಾದ ಔಷಧಿಗಳು ತೀವ್ರ ತುರಿಕೆ ಈ ಸ್ಥಿತಿಗೆ ಕಾರಣವಾಗುತ್ತವೆ.