Just In
- 4 hrs ago
ಸಕ್ಕರೆ ಹಾಕಿದ ಪಾನೀಯ ಕುಡಿದರೆ ಪುರುಷರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚುವುದೇ?
- 7 hrs ago
Horoscope Today 20 Jan 2023: ಶುಕ್ರವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- 17 hrs ago
ಮುಟ್ಟಿನ ಸಮಯದಲ್ಲಿ ಮಹಿಳೆ ಪೂಜೆ ಮಾಡುವಂತಿಲ್ಲ, ಏಕೆ?: ತರ್ಕಬದ್ಧವಾಗಿ ವಿವರಿಸಿದ ಸದ್ಗುರು
- 21 hrs ago
ನಿಮ್ಮ ಗಂಡ ಸದಾ ಫ್ರೆಂಡ್ಸ್-ಫ್ರೆಂಡ್ಸ್ ಅಂತ ಸುತ್ತುತ್ತಾರೆಯೇ?
Don't Miss
- News
ಮಹಿಳೆ ಮೇಲೆ ಮೂತ್ರ ವಿಸರ್ಜನೆ: ಏರ್ ಇಂಡಿಯಾಗೆ 30 ಲಕ್ಷ ರೂ.ದಂಡ, ಪೈಲೆಟ್ಸಗಳ ಪರವಾನಿಗೆ ಅಮಾನತು
- Sports
ಭಾರತ vs ನ್ಯೂಜಿಲೆಂಡ್ 2ನೇ ಏಕದಿನ ಪಂದ್ಯ: ಪಿಚ್ ರಿಪೋರ್ಟ್, ಸಂಭಾವ್ಯ ಆಡುವ ಬಳಗ, ನೇರಪ್ರಸಾರದ ಮಾಹಿತಿ
- Technology
ಈ ಡಿವೈಸ್ಗಳನ್ನು ನೋಡಿದ್ರೆ, ನೀವು ಖಂಡಿತಾ ಹುಬ್ಬೇರಿಸ್ತೀರಾ!..ಬೆಲೆಯೂ ಕಡಿಮೆ!
- Finance
Swiggy layoffs: ಸ್ವಿಗ್ಗಿಯಲ್ಲಿ 600 ಉದ್ಯೋಗಿಗಳ ವಜಾ, ಕಾರಣವೇನು?
- Movies
ಸಿನಿಮಾ ಟೀಕಿಸುವ ಬಿಜೆಪಿ ಕಾರ್ಯಕರ್ತರಿಗೆ ಮೋದಿ ಸಲಹೆ: ಟಾಂಗ್ ನೀಡಿದ ಅನುರಾಗ್ ಕಶ್ಯಪ್
- Automobiles
ಉತ್ತಮ ಮೈಲೇಜ್ ನೀಡುವ 'ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್ಲಿಫ್ಟ್' ಬಿಡುಗಡೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವವರು ಮೆಡಿಟೇರಿಯನ್ ಡಯಟ್ ಪಾಲಿಸಿದರೆ ಒಳ್ಳೆಯದು, ಏಕೆ?
ಇತ್ತೀಚಿನ ವರ್ಷಗಳಲ್ಲಿ ಮಕ್ಕಳಾಗದಿರುವ ಸಮಸ್ಯೆ ಹೆಚ್ಚಾಗುತ್ತಿದೆ. ಮಕ್ಕಳಾಗ ಬೇಕೆಂದರೆ ಮೈ ತೂಕ ಕಡಿಮೆ ಮಾಡಿ, ಆರೋಗ್ಯಕರ ಆಹಾರಕ್ರಮ ಪಾಲಿಸಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಮೆಡಿರೇರಿಯನ್ ಡಯಟ್ ಸಹಕಾರಿ ಎಂದು ಹೇಳಲಾಗುವುದು.
ಈ ಮೆಡಿಟೇರಿಯನ್ ಆಹಾರಕ್ರಮ ಎಂದರೇನು, ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಹೇಗೆ ಸಹಕಾರಿ ಎಂದು ನೋಡೋಣ ಬನ್ನಿ.
ಮೆಡಿಟೇರಿಯನ್ ಎಂದರೇನು?
ಮೆಡಿಟೇರಿಯನ್ ಆಹಾರ ಪದ್ಧತಿ ಎಂದರೆ ಬರೀ ಸಸ್ಯಾಹಾರಗಳನ್ನು ಮಾತ್ರ ಸೇವಿಸುವುದು. ಸಸ್ಯಾಹಾರ ಎಂದರೆ ಇದರಲ್ಲಿ ಹಾಲಿನ ಉತ್ಪನ್ನಗಳು, ಚಿಕನ್, ಮೊಟ್ಟೆ ಇವುಗಳನ್ನು ಮಿತಿಯಲ್ಲಿ ಬಳಸಬೇಕು. ಸೊಪ್ಪು, ಹಣ್ಣುಗಳು, ದ್ವಿದಳ ಧಾನ್ಯಗಳು, ಬೀನ್ಸ್, ಕಾಳುಗಳು ಇವುಗಳನ್ನಷ್ಟೇ ಬಳಸುವುದು.
ಮೆಡಿಟೇರಿಯನ್ ಆಹಾರ ಪಡೆಯುವುದರಿಂದ ಹಲವಾರು ಪ್ರಯೋಜನಗಳಿವೆ ಎಂಬುವುದು ಈಗಾಗಲೇ ಸಾಬೀತಾಗಿದೆ. ಈ ಆಹಾರಕ್ರಮ ಪಾಲಿಸುವುದರಿಂದ ಮೈ ತೂಕ ಕಡಿಮೆಯಾಗುವುದು, ನೆನಪಿನ ಶಕ್ತಿ ಹೆಚ್ಚುವುದು, ಆರೋಗ್ಯ ವೃದ್ಧಿಸುವುದು. ಈ ಮೆಡಿಟೇರಿಯನ್ ಆಹಾರಕ್ರಮ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಹೇಗೆ ಸಹಕಾರಿ ಎಂದು ನೋಡೋಣ ಬನ್ನಿ:
ಪುರುಷರಲ್ಲಿ ವೀರ್ಯಾಣು ಸಂಖ್ಯೆ ಹೆಚ್ಚಿಸುತ್ತೆ, ಮಹಿಳೆಯರಿಗೆ ಅಂಡಾಣು ಬಿಡುಗಡೆಗೆ ಸಹಕಾರಿ
ಮಕ್ಕಳಾಗದಿರುವುದಕ್ಕೆ ಮಹಿಳೆಯರೇ ಕಾರಣವಲ್ಲ, ಪುರುಷರಲ್ಲಿ ಬಂಜೆತನದ ಸಮಸ್ಯೆ ಇದ್ದರೂ ಮಕ್ಕಳಾಗಲ್ಲ. ಪುರುಷ ಹಾಗೂ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಈ ಮೆಡಿಟೇರಿಯನ್ ಆಹಾರಕ್ರಮ ಸಹಕಾರಿ ಎಂಬುವುದು ಆಸ್ಟ್ರೇಲಿಯಾದಲ್ಲಿ ನಡೆಸಿದ ಸಂಶೋಧನೆಯಲ್ಲಿ ಸಾಬೀತಾಗಿದೆ. ಇನ್ನು ಆಸ್ಟ್ರೇಲಿಯಾದಲ್ಲಿ(UniSA) ನಡೆದ ಅಧ್ಯಯನ ವರದಿ ಕೂಡ ಇದನ್ನೇ ಹೇಳಿದೆ. ಯಾರು ಮೆಡಿಟೇರಿಯನ್ ಆಹಾರಕ್ರಮ ಪಾಲಿಸುತ್ತಾರೋ ಅವರಿಗೆ ಗರ್ಭಧಾರಣೆಗೆ ಸುಲಭವಾಗುವುದು ಎಂದು ಹೇಳಿದೆ.
ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ತಡೆಗಟ್ಟಲು ಸಹಕಾರಿ
ಯಾರಿಗೆ ಅನಿಯಮಿತ ಮುಟ್ಟಿನ ಸಮಸ್ಯೆ ಇದೆಯೋ ಅವರಲ್ಲಿ ಬಹುತೇಕ ಜನರಿಗೆ ಗರ್ಭಧಾರಣೆಗೆ ತೊಂದರೆಯಾಗುವುದು. ಅದೇ ಮೆಡಿಟೇರಿಯನ್ ಡಯಟ್ ಪಾಲಿಸಿದರೆ ಈ ಬಗೆಯ ಅನಿಯಮಿತ ಮುಟ್ಟಿನ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ಋತುಚಕ್ರದಲ್ಲಿ ಸಮಸ್ಯೆ ಇಲ್ಲದಿದ್ದರೆ ಅಂಡಾಣುಗಳ ಉತ್ಪತ್ತಿಗೆ ತೊಂದರೆಯಾಗುವುದು. ಋತುಚಕ್ರ ಸರಿಯಾಗಲು ಈ ಮೆಡಿಟೇರಿಯನ್ ಡಯಟ್ ಸಹಕಾರಿ.
ಮೈ ತೂಕ ಕಡಿಮೆ ಮಾಡಲು ತುಂಬಾನೇ ಸಹಕಾರಿ
ಇನ್ನು ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವವರಿಗೆ ಮೈ ತೂಕ ಕಡಿಮೆ ಮಾಡಿಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ, ಮೈ ತೂಕ ಕಡಿಮೆ ಮಾಡಿಕೊಳ್ಳಲು ಮೆಡಿಟೇರಿಯನ್ ಡಯಟ್ ಸಹಕಾರಿ. ಇದರಲ್ಲಿ ಕೊಬ್ಬಿನಂಶದ ಬಳಕೆ ಕಡಿಮೆ ಇರುವುದರಿಂದ ಮೈ ತೂಕ ಬೇಗನೆ ಕಡಿಮೆಯಾಗುವುದು. ಇದರಿಂದ ಕುಡ ಗರ್ಭಧಾರಣೆಯ ಸಾಧ್ಯತೆ ಹೆಚ್ಚುವುದು.
ಮೆಡಿಡೇರಿಯನ್ ಡಯಟ್ ಹೇಗೆ ಪಾಲಿಸಬೇಕು?
ಹಾಗೆ ನೋಡುವುದಾದರೆ ಮೆಡಿಟೇರಿಯನ್ ಡಯಟ್ ಅನ್ನುವುದು ಆಹಾರಕ್ರಮವಲ್ಲ, ಬದಲಿಗೆ ಪ್ರಜ್ಞಾಪೂರ್ವಕವಾಗಿ ತಿನ್ನುವ ಒಂದು ವಿಧಾನ.
ಮೆಡಿಟೇರಿಯನ್ ಡಯಟ್‌ನಲ್ಲಿ ಹೇಗೆ ತಿನ್ನಬೇಕು?
ಯಾವುದನ್ನು ಹೆಚ್ಚು ತಿನ್ನಬೇಕು?
ತರಕಾರಿ, ಸೊಪ್ಪು, ಹಣ್ಣುಗಳು, ಕಾಳುಗಳು, ಧಾನ್ಯಗಳು, ಬೀನ್ಸ್, ನಟ್ಸ್ ಇವುಗಳನ್ನು ಹೆಚ್ಚಾಗಿ ತಿನ್ನಬೇಕು
* ಯಾವುದನ್ನು ಮಿತವಾಗಿ ತಿನ್ನಬೇಕು:
ಮೀನು, ಚಿಕನ್, ಮೊಟ್ಟೆ ಇವುಗಳನ್ನು ಮಿತವಾಗಿ ತಿನ್ನಿ.
* ಯಾವುದನ್ನು ಕಡಿಮೆ ತಿನ್ನಬೇಕು?
ಕೆಂಪು ಮಾಂಸ, ಸಿಹಿ ಪದಾರ್ಥಗಳು ಇವುಗಳನ್ನು ಮಿತವಾಗಿ ತಿನ್ನಬೇಕು
ಯಾವುದನ್ನು ತಿನ್ನಬಾರದು?
ಸಕ್ಕರೆ ಹಾಕಿದ ಪದಾರ್ಥಗಳು, ಸಂಸ್ಕರಿಸಿದ ಆಹಾರ, ಫ್ರೋಜನ್ ಆಹಾರ, ರೆಡಿಮೇಡ್ ಫುಡ್ಸ್, ರೆಡಿ ಟು ಕುಕ್ ಫುಡ್ಸ್ ಇವುಗಳನ್ನು ತಿನ್ನಬಾರದು.