For Quick Alerts
ALLOW NOTIFICATIONS  
For Daily Alerts

ಗರ್ಭಿಣಿಗೆ ಕೊರೊನಾ ತಗುಲಿದರೆ ಯಾವೆಲ್ಲಾ ಅಪಾಯವಿದೆ ಗೊತ್ತಾ?

|

ಕೊರೊನಾವೈರಸ್‌ ಎಷ್ಟರ ಮಟ್ಟಿಗೆ ಅಪಾಯಾಕಾರಿ ಎಂಬುವುದು ನಮಗೆಲ್ಲಾ ತಿಳಿದಿರುವ ಅಂಶ. ಈ ವೈರಸ್‌ ಗರ್ಭಿಣಿಯರಿಗೆ ತಗುಲಿದರೆ ಮತ್ತಷ್ಟು ಅಪಾಯಕಾರಿ ಎಂಬುವುದಾಗಿ ಸಂಶೋಧನೆ ಹೇಳುತ್ತದೆ.

COVID-19 infection during Pregnancy

ಕೋವಿಡ್‌ 19 ವೈರಸ್‌ ಗರ್ಭಿಣಿಯರಿಗೆ ತಗುಲಿದರೆ ಮಗು ಅಥವಾ ತಾಯಿಗೆ ತೊಂದರೆ ಉಂಟಾಗಬಹುದು. ಅದರಲ್ಲೂ ಪ್ರಿಕ್ಲಾಂಪ್ಸಿಯಾ, ಮಗು ಹೊಟ್ಟೆಯಲ್ಲೇ ಸಾಯುವುದು, ಅವಧಿ ಪೂರ್ವ ಮಗು ಜನಿಸುವುದು ಮುಂತಾದ ತೊಂದರೆ ಉಂಟಾಗುವುದು.

ಹೊಟ್ಟೆಯೊಳಗೆ ಮಗು ಸಾಯುವುದು ಹಾಗೂ ಸಿ ಸೆಕ್ಷನ್ ಜನನ ಸಾಧ್ಯತೆ ಶೇ. 50ರಷ್ಟು ಅಧಿಕ. ಸಂಶೋಧನೆ ಪ್ರಕಾರ ಕೋವಿಡ್‌ 19ನಿಂದ ಅಧಿಕ ರಕ್ತದೊತ್ತಡ, ಮಗು ಹೊಟ್ಟೆಯೊಳಗೆ ಸಾಯುವುದು ಈ ರೀತಿಯ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚು. ಅಲ್ಲದೆ ಜನಿಸಿದ ಮಗುವಿಗೆ ಇಂಟೆನ್ಸಿವ್ ಕೇರ್ ಅಗ್ಯತೆ ಇದೆ.

ಪ್ರಿಕ್ಲಾಂಪ್ಸಿಯಾ ಸಾಧ್ಯತೆ ಹೆಚ್ಚು

ಪ್ರಿಕ್ಲಾಂಪ್ಸಿಯಾ ಸಾಧ್ಯತೆ ಹೆಚ್ಚು

ಸಂಶೋಧಕರ ತಂಡವೊಂದು ನಡೆಸಿದ ಅಧ್ಯಯನದಲ್ಲಿ 438,548 ಗರ್ಭಿಣಿಯರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಕೊರೊನಾವೈರಸ್‌ ತಗುಲಿದರೆ ಅತ್ಯಧಿಕ ರಕ್ತದೊತ್ತಡ ಉಂಟಾಗಿ ಅವಧಿ ಪೂರ್ವ ಹೆರಿಗೆಯಾಗುವುದು ಎಂದು ಈ ಸಂಶೋಧನೆಯಿಂದ ತಿಳಿ

ಉರಿಯೂತದ ಸಮಸ್ಯೆ ಉಂಟು ಮಾಡುತ್ತದೆ

ಉರಿಯೂತದ ಸಮಸ್ಯೆ ಉಂಟು ಮಾಡುತ್ತದೆ

ವೈರಸ್‌ ಸೋಂಕು ತಗುಲಿದ ಗರ್ಭಿಣಿಯರಲ್ಲಿ ರಕ್ತ ನಾಳದಲ್ಲಿ ಉರಿಯೂತ ಸಮಸ್ಯೆ ಕಂಡು ಬರುವುದಾಗಿ ಸಂಶೋಧನೆ ಹೇಳುತ್ತದೆ. ಅಲ್ಲದೆ ಅವಧಿ ಪೂರ್ವ ಮಗುವಿನ ಜನನ, ಕಡಿಮೆ ತೂಕದ ಮಗು ಜನಿಸುವುದು ಮುಂತಾದ ತೊಂದರೆ ಕಂಡು ಬರುವ ಸಾಧ್ಯತೆ ಹೆಚ್ಚು.

ಗರ್ಭಿಣಿಯರೇ ಈ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ತುಂಬಾ ಎಚ್ಚರ

ಗರ್ಭಿಣಿಯರೇ ಈ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ತುಂಬಾ ಎಚ್ಚರ

ಈ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಗರ್ಭಿಣಿಯರು ತುಂಬಾ ಜಾಗ್ರತೆವಹಿಸಬೇಕು. ಜನರ ಗುಂಪು ಇರುವ ಕಡೆ ಓಡಾಡಬಾರದು ಹಾಗೂ ಹೊರಗಡೆ ಹೋಗುವಾಗ ಮಾಸ್ಕ್ ಧರಿಸಬೇಕು.

ಮನೆಯವರೂ ಜಾಗ್ರತೆವಹಿಸಬೇಕು

ಗರ್ಭಿಣಿ ಮನೆಯಲ್ಲಿದ್ದರೆ ಆ ಮನೆಯ ಸದಸ್ಯರೂ ತುಂಬಾ ಜಾಗ್ರತೆವಹಿಸಬೇಕು, ಇನ್ನು ಸ್ವಲ್ಪ ರೋಗ ಲಕ್ಷಣಗಳು ಕಂಡು ಬಂದರೂ ತಕ್ಷಣವೇ ಹೋಂ ಕ್ವಾರೆಂಟೈನ್‌ನಲ್ಲಿದ್ದು ಅವಳಿಗೆ ಸೋಂಕು ತಗುಲದಂತೆ ಎಚ್ಚರವಹಿಸಬೇಕು.

ಒಂದು ವೇಳೆ ಸೋಂಕು ಲಕ್ಷಣ ಕಂಡು ಬಂದರೆ ಏನು ಮಾಡಬೇಕು?

ಒಂದು ವೇಳೆ ಸೋಂಕು ಲಕ್ಷಣ ಕಂಡು ಬಂದರೆ ಏನು ಮಾಡಬೇಕು?

ಕೆಲವು ದಿನಗಳಿಂದ ಜ್ವರ, ಕೆಮ್ಮು ಈ ರೀತಿಯ ಲಕ್ಷಣಗಳು ಕಂಡು ಬಂದರೆ ಹೊರಗಡೆ ಹೋಗಬೇಡಿ, ನಿಮ್ಮ ವೈದ್ಯರಿಗೆ ಕರೆ ಮಾಡಿ ಲಕ್ಷಣಗಳನ್ನು ತಿಳಿಸಿ, ಅವರು ನಿಮಗೆ ನೀಡಿದ ಸಲಹೆಯನ್ನು ಪಾಲಿಸಿ.

ಆತಂಕ ಬೇಡ: ಸಣ್ಣ ಪುಟ್ಟ ಲಕ್ಷಣಗಳು ಕಂಡು ಬಂದರೆ ಕೊರೊನಾವೈರಸ್ ಇರಬಹುದು ಎಂದು ಆತಂಕ ಪಡಬೇಡಿ, ಪರೀಕ್ಷೆ ಮಾಡಿಸಿ. ಗರ್ಭಾವಸ್ಥೆಯಲ್ಲಿ ಕೊರೊನಾವೈರಸ್ ತಗುಲದಂತೆ ಮುಂಜಾಗ್ರತೆವಹಿಸುವುದೇ ಎಲ್ಲಾ ಸಮಸ್ಯೆ ದೂರವಿಡಲು ಇರುವ ಪರಿಹಾರ.

English summary

COVID-19 Infection During Pregnancy Increase Risk Of Stillbirth Peeclampssia

COVID-19 infection during Pregnancy increase risk of stillbirth, peeclampssia read on..
X
Desktop Bottom Promotion