For Quick Alerts
ALLOW NOTIFICATIONS  
For Daily Alerts

30ರ ಬಳಿಕ ಗರ್ಭಧಾರಣೆಯಾದರೆ ಎದುರಾಗುವ 6 ಪ್ರಮುಖ ಸಮಸ್ಯೆಗಳು

|

ಆಧುನಿಕ ಜಗತ್ತಿನ ನಾರಿ ತನ್ನ ವೃತ್ತಿ ಹಾಗೂ ಕುಟುಂಬವನ್ನು ನಿಭಾಯಿಸಿಕೊಂಡು ಹೋಗುವ ಮೊದಲು ತನ್ನದೇ ಆಗಿರುವ ಕೆಲವು ಗುರಿಗಳನ್ನು ಈಡೇರಿಸಲು ಬಯಸುವಳು. ಹೀಗಾಗಿ ಆಕೆ ಮದುವೆಯನ್ನು ಕೂಡ ಮುಂದೂಡುತ್ತಾ ಹೋಗುತ್ತಾಳೆ. ಹೆಚ್ಚಾಗಿ ಇಂದಿನ ಮಹಿಳೆಯರು 25 ದಾಟಿದ ಬಳಿಕವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಡುವರು.

 Pregnancy after 30

ಈ ವೇಳಗಾಗಲೇ ಅವರು ತಮ್ಮ ಜೀವನದಲ್ಲಿ ಒಂದು ನಿರ್ದಿಷ್ಟ ಗುರಿ ಮುಟ್ಟಿರುವರು ಮತ್ತು ತಾವು ಬಯಸಿದಂತಹ ಜೀವನ ಸಾಗಿಸಲು ಅವರಿಗೆ ಸಾಧ್ಯವಾಗಿರುವುದು. ಆದರೆ ಇಲ್ಲಿ ಮಹಿಳೆಯರು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಮಗುವನ್ನು ಪಡೆಯಲು ಬಯಸಿದರೆ ಆಗ ಖಂಡಿತವಾಗಿಯೂ ಕೆಲವೊಂದು ಸಮಸ್ಯೆಗಳು ಕಾಡುವುದು.

ಯಾಕೆಂದರೆ 30ರ ಆಸುಪಾಸಿನಲ್ಲಿ ನೀವು ಗರ್ಭಧಾರಣೆಗೆ ಮುಂದಾದರೆ, ಅಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ನೀವು 20ರ ಹರೆಯದಲ್ಲಿ ಗರ್ಭ ಧರಿಸುವುದಕ್ಕೂ 30ರ ಹರೆಯದಲ್ಲಿ ಗರ್ಭಧರಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ಹೀಗಾಗಿ ನೀವು ಎಚ್ಚರಿಕೆ ವಹಿಸಲು ಅದು ಏನು ಎಂದು ನೀವೇ ತಿಳಿಯಿರಿ.

ಅಕಾಲಿಕ ಹೆರಿಗೆ ಅಥವಾ ಗರ್ಭಪಾತ

ಅಕಾಲಿಕ ಹೆರಿಗೆ ಅಥವಾ ಗರ್ಭಪಾತ

ಗರ್ಭಪಾತ ಹಾಗು ಅಕಾಲಿಕ ಹೆರಿಗೆ ಎನ್ನುವುದು ಹೆಚ್ಚಿನ ಮಹಿಳೆಯರಲ್ಲಿ ಕಂಡುಬರುವುದು. ಆದರೆ ನಾವಿಲ್ಲಿ ಹೇಳಲು ಹೊರಟಿರುವುದು 30 ದಾಟಿದ ಮಹಿಳೆಯರಲ್ಲಿ. ಗರ್ಭ ಧರಿಸಿದ ಬಳಿಕ 37 ವಾರಗಳು ಕಳೆಯುವ ಮೊದಲೇ ಹೆರಿಗೆ ಆದರೆ ಇದನ್ನು ಅಕಾಲಿಕ ಹೆರಿಗೆ ಎಂದು ಕರೆಯುವರು. ಇದು ಸಮಯಕ್ಕಿಂತ ಮೊದಲೇ ಮಗುವಿನ ಜನ್ಮ ನೀಡುವುದು ಮತ್ತು ಇದರಿಂದ ಮಗುವಿನ ಬೆಳವಣಿಗೆ ಮೇಲೆ ಪರಿಣಾಮವಾಗಬಹುದು. ಇದನ್ನು ನೀವು ಬೇಗನೆ ಪತ್ತೆ ಮಾಡಿಕೊಂಡರೆ, ಆಗ ಖಂಡಿತವಾಗಿಯೂ ಅಕಾಲಿಕ ಹೆರಿಗೆಯನ್ನು ತಡೆಯಬಹುದಾಗಿದೆ. ಸ್ನಾಯು ಸೆಳೆತ, ನೀರಿನಂತಹ ದ್ರವದ ಡಿಸ್ಚಾರ್ಜ್ ಅಥವಾ ಕೆಂಪು ರಕ್ತ ಹೋಗುವುದು, ಬೆನ್ನು ನೋವು ಇತ್ಯಾದಿಗಳು.

ತೆಗೆದುಕೊಳ್ಳಬೇಕಾದ ಕ್ರಮಗಳು

ನೀವು ಆಹಾರ ಕ್ರಮದ ಬಗ್ಗೆ ಎಚ್ಚರಿಕೆ ವಹಿಸಬೇಕು. ಅದರಲ್ಲೂ ನೀವು ಸೇವಿಸುವ ಆಹಾರ ಗುಣಮಟ್ಟ ಹಾಗೂ ಪ್ರಮಾಣದ ಬಗ್ಗೆ ಗಮನವಿರಲಿ. ಆರೋಗ್ಯಕಾರಿ ಆಹಾರ ಸೇವನೆ ಮಾಡಿ, ಪ್ರಮುಖವಾಗಿ ಅಪರ್ಯಾಪ್ತ ಕೊಬ್ಬು, ವಿಟಮಿನ್ ಡಿ ಮತ್ತು ಡಿಎಚ್ ಎ ಇರುವ ಆಹಾರ ಸೇವನೆ ಮಾಡಿ. ಅನಾರೋಗ್ಯಕರ ಅಭ್ಯಾಸಗಳಾಗಿರುವಂತಹ ಮದ್ಯಪಾನ, ಧೂಮಪಾನ ಇತ್ಯಾದಿಗಳನ್ನು ಬಿಡಬೇಕು ಮತ್ತು ವೈದ್ಯರನ್ನು ಭೇಟಿಯಾಗುತ್ತಿರಬೇಕು. ಅಕಾಲಿಕ ಹೆರಿಗೆಯಾಗುವ ಇತಿಹಾಸ ಹೊಂದಿದ್ದರೆ, ಆಗ ವೈದ್ಯರು ಕೆಲವೊಂದು ಔಷಧಿಗಳನ್ನು ನಿಮಗೆ ಸೂಚಿಸುವರು.

ಗರ್ಭಧಾರಣೆಯ ಮಧುಮೇಹ

ಗರ್ಭಧಾರಣೆಯ ಮಧುಮೇಹ

ಮಧುಮೇಹ ಎನ್ನುವುದು ವಯಸ್ಸಾದ ಬಳಿಕ ಕಾಯಿಲೆ. ಆದರೆ ಕೆಲವೊಮ್ಮೆ ಇದು ಗರ್ಭಧಾರಣೆ ಸಂದರ್ಭದಲ್ಲಿ ಮಹಿಳೆಯರನ್ನು ಕಾಡುವುದು. ಅದರಲ್ಲೂ 30ರ ಹರೆಯದ ಬಳಿಕ ಗರ್ಭ ಧರಿಸಿದವರಲ್ಲಿ ಇದು ಹೆಚ್ಚಾಗಿರುವುದು. ಹೆಚ್ಚಾಗಿ ಶೇ.3ರಿಂದ5ರಷ್ಟು ಗರ್ಭಿಣಿಯರಲ್ಲಿ ಇದು ಕಂಡುಬರುವುದು.

ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣವು ಸಾಮಾನ್ಯವಾಗಿದ್ದರೂ ಗರ್ಭಧಾರಣೆ ವೇಳೆ ಇದು ಹೆಚ್ಚಾಗಬಹುದು. ಇದರ ಯಾವುದೇ ಲಕ್ಷಣಗಳು ನಿಮ್ಮ ಗಮನಕ್ಕೆ ಬರದೇ ಇರಬಹುದು ಮತ್ತು ನೀವು ಕೆಲವೊಂದು ನಿಯಮಿತ ಪರೀಕ್ಷೆ ಮೂಲಕವಾಗಿಯೇ ಇದನ್ನು ತಿಳಿಯಬಹುದು. ನಿಮಗೆ ಅತಿಯಾಗಿ ಹಸಿವು ಅಥವಾ ಬಾಯಾರಿಕೆ ಆಗುತ್ತಲಿದ್ದರೆ ಅಥವಾ ಪದೇ ಪದೇ ಶೌಚಾಲಯಕ್ಕೆ ಹೋಗುತ್ತಲಿದ್ದರೆ ಆಗ ನೀವು ಪರೀಕ್ಷೆ ಮಾಡಿಸಬೇಕು.

ಇದು ಪತ್ತೆಯಾಗದೆ ಇದ್ದರೆ ಆಗ ಮಗುವಿನ ತೂಕವು ಹೆಚ್ಚಾಗುವ ಸಾಧ್ಯತೆ ಇದೆ ಮತ್ತು ಮಗುವಿಗೆ ಕೂಡ ವಯಸ್ಸಾದಂತೆ ಟೈಪ್ 2 ಮಧುಮೇಹವು ಕಂಡುಬರಬಹುದು. ಗರ್ಭಧಾರಣ ಸಂದರ್ಭದಲ್ಲಿ ಮಧುಮೇಹವಿದ್ದರೆ, ಆಗ ಅಧಿಕ ರಕ್ತದೊತ್ತಡ ಸಮಸ್ಯೆಯು ಬರಬಹುದು ಮತ್ತು ಭವಿಷ್ಯದಲ್ಲೂ ನಿಮಗೆ ಮಧುಮೇಹ ಬರಬಹುದು.

ಯಾವ ಮುನ್ನೆಚ್ಚರಿಕೆ ವಹಿಸಬೇಕು?

30ರ ಹರೆಯದ ಬಳಿಕ ನೀವು ಗರ್ಭ ಧರಿಸಲು ನಿರ್ಧರಿಸಿದ್ದರೆ, ಆಗ ನೀವು ಗರ್ಭಧಾರಣೆ ಸಂದರ್ಭದಲ್ಲಿನ ಮಧುಮೇಹವನ್ನು ತಡೆಯಲು ದೇಹವನ್ನು ಮೊದಲೇ ಸಜ್ಜುಗೊಳಿಸಬೇಕು. ಅತಿಯಾದ ತೂಕವಿದ್ದರೆ ಆಗ ನೀವು ತೂಕ ಇಳಿಸಿಕೊಳ್ಳಬೇಕು. ಇದಕ್ಕಾಗಿ ನೀವು ವೈದ್ಯರ ಸಲಹೆ ಪಡೆಯಿರಿ ಮತ್ತು ಅವರ ನೇತೃತ್ವದಲ್ಲಿ ತೂಕ ಇಳಿಸುವ ವಿಧಾನ ಅನುಸರಿಸಿ. ನೀವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇಡಲು ದಿನವಿಡಿ ಸಣ್ಣ ಸಣ್ಣ ಪ್ರಮಾಣದಲ್ಲಿ ತಿನ್ನುತ್ತಾ ಇರಿ. ಮಧುಮೇಹವನ್ನು ನೀವು ವಿವಿಧ ರೀತಿಯ ಪರೀಕ್ಷೆ ಮಾಡಿಕೊಂಡು ಪತ್ತೆ ಹಚ್ಚಬಹುದು.

ಪ್ರಿಕ್ಲಾಂಪ್ಸಿಯಾ

ಪ್ರಿಕ್ಲಾಂಪ್ಸಿಯಾ

ಗರ್ಭಧಾರಣೆ ವೇಳೆ ಮಹಿಳೆಯರಲ್ಲಿ ಕಂಡುಬರುವಂತಹ ತುಂಬಾ ಅಪಾಯಕಾರಿ ಸಮಸ್ಯೆ ಎಂದರೆ ಅದು ಪ್ರಿಕ್ಲಾಂಪ್ಸಿಯಾ, ಇದು ಅಧಿಕ ರಕ್ತದೊತ್ತಡದ ಸಮಸ್ಯೆಯಾಗಿದ್ದು, ಇದು ಬೇರೆ ಅಂಗಾಂಗಗಳಿಗೆ ಕೂಡ ಹಾನಿ ಉಂಟು ಮಾಡಬಹುದು.

ಕಾಲು ಹಾಗೂ ಕೈಗಳು ಊದಿಕೊಳ್ಳೂವುದು, ನೀರು ನಿಲ್ಲುವುದು, ವಾಕರಿಕೆ ಮತ್ತು ತಲೆನೋವು, ದೃಷ್ಟಿ ಮಂದ ಮತ್ತು ಉಸಿರಾಟದಲ್ಲಿ ತೊಂದರೆ ಇವುಗಳು ಕಂಡಬರುವುದು.

ಬೊಜ್ಜು ದೇಹ ಹೊಂದಿದ್ದರೆ ಮತ್ತು ಮೊದಲ ಸಲ ಗರ್ಭ ಧರಿಸಿದರೆ, ಆಗ ನಿಮಗೆ ಇಂತಹ ಸಮಸ್ಯೆಯು ಕಾಡುವುದು ಸಹಜ. ಈ ಸಮಸ್ಯೆಯು ಕಾಡಿದರೆ, ಆಗ ಮಗು ಹಾಗು ನಿಮಗೆ ಹಲವಾರು ತೊಂದರೆ ಕಾಡಬಹುದು. ಅಂಗಾಂಗಳಿಗೆ ಹಾನಿ, ಭ್ರೂಣದ ಬೆಳವಣಿಗೆಗೆ ತೊಂದರೆ ಇತ್ಯಾದಿಗಳು.

ಯಾವ ಮುನ್ನೆಚ್ಚರಿಕೆ ಅಗತ್ಯ

ಈ ಪರಿಸ್ಥಿತಿಯನ್ನು ತಡೆಯಲು ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ನೀವು ತೂಕವನ್ನು ಸಮತೋಲನದಲ್ಲಿ ಇಡಬೇಕು. ಗರ್ಭಧಾರಣೆ ವೇಳೆ ತೂಕ ಹಾಗೂ ರಕ್ತದೊತ್ತಡದ ಬಗ್ಗೆ ಗಮನಿಸುತ್ತಲೇ ಇರಿ. ವೈದ್ಯರ ಸಲಹೆಯಂತೆ ನೀವು ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ದ್ರವಾಂಶ ನೀಡಿ ಮತ್ತು ಕಾಲುಗಳನ್ನು ಮೇಲೆ ಕೆಳಗೆ ಮಾಡುತ್ತಲಿರಿ.

ಮಗುವಿನ ತೂಕ ಕಡಿಮೆ ಆಗಿರುವುದು

ಮಗುವಿನ ತೂಕ ಕಡಿಮೆ ಆಗಿರುವುದು

ಮಗುವು 2500 ಗ್ರಾಂಗಿಂತಲೂ ಕಡಿಮೆ ತೂಕ ಹೊಂದಿದ್ದರೆ, ಇದನ್ನು ಜನನ ವೇಳೆ ತುಂಬಾ ಕಡಿಮೆ ತೂಕದ ಮಗು ಎಂದು ಕರೆಯಲಾಗುತ್ತದೆ. ಇದು ಹೆಚ್ಚಾಗಿ ಅಕಾಲಿಕ ಹೆರಿಗೆ ಆದ ಸಂದರ್ಭದಲ್ಲಿ ಕಂಡುಬರುವುದು. ಗರ್ಭಧಾರಣೆ ಸಂದರ್ಭದಲ್ಲಿ ಎದುರಿಸುವಂತಹ ಕೆಲವೊಂದು ಸಮಸ್ಯೆಗಳಿಂದಾಗಿಯೂ ಮಗುವಿನ ತೂಕವು ಜನನ ವೇಳೆ ಕಡಿಮೆ ಆಗಿರಬಹುದು.

ಮುನ್ನೆಚ್ಚರಿಕೆಗಳು

ಜೀವನಶೈಲಿ ಹಾಗೂ ಆರೋಗ್ಯದಲ್ಲಿ ನೀವು ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಬೇಕು. ನಿಮಗೆ ಹಾಗು ಮಗುವಿಗೆ ಸಮಸ್ಯೆ ಉಂಟು ಮಾಡುವಂತಹ ಯಾವುದೇ ಕೆಟ್ಟ ಅಭ್ಯಾಸಗಳು ನಿಮಗೆ ಇದ್ದರೆ, ಅದನ್ನು ನೀವು ಬಿಡಬೇಕು. ಆಹಾರ ಮತ್ತು ವ್ಯಾಯಾಮದ ಕಡೆಗೆ ಹೆಚ್ಚು ಗಮನ ನೀಡಿ. ನೀವು ಪ್ರತೀ ಸಲ ವೈದ್ಯರನ್ನು ಭೇಟಿ ಮಾಡಲು ಮರೆಯಬೇಡಿ. ನಿಮ್ಮ ಗರ್ಭಧಾರಣೆ ಬೆಳವಣಿಗೆ ಬಗ್ಗೆ ಗಮನವಿರಲಿ.

ಸಿಸೇರಿಯನ್ ಹೆರಿಗೆ

ಸಿಸೇರಿಯನ್ ಹೆರಿಗೆ

ವಯಸ್ಸಾದ ಬಳಿಕ ಗರ್ಭ ಧರಿಸಿದರೆ, ಅದರಿಂದ ಸಿಸೇರಿಯನ್ ಹೆರಿಗೆಯ ಸಾಧ್ಯತೆಯು ಹೆಚ್ಚಾಗಿರುವುದು. 30ರ ಹರೆಯದಲ್ಲಿ ಗರ್ಭ ಧರಿಸಿದರೆ ಆಗ ಸಿಸೇರಿಯನ್ ಹೆರಿಗೆ ಆಗುವಂತಹ ಸಾಧ್ಯತೆಯು ಶೇ.20ರಷ್ಟು ಹೆಚ್ಚಾಗಿ ಇರುವುದು. ಭ್ರೂಣದ ತೊಂದರೆ ಹೆಚ್ಚಾಗುವುದು ಅಥವಾ ದೀರ್ಘಕಾಲದ ಎರಡನೇ ಹಂತದ ಹೆರಿಗೆ ಸಮಸ್ಯೆಗಳು ಬರಬಹುದು.

ಮುನ್ನೆಚ್ಚರಿಕೆ ಏನು?

ಸಿಸೇರಿಯನ್ ಹೆರಿಗೆಯನ್ನು ಯಾವಾಗಲೂ ತಡೆಯಲು ಆಗದು. ಆದರೆ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ನೀವು ತೆಗೆದುಕೊಳ್ಳಬಹುದು. ಇವುಗಳೆಂದರೆ ನೀವು ಆರೋಗ್ಯ ಹಾಗೂ ಚಟುವಟಿಕೆಯಿಂದ ಇರುವುದು, ಮೂರನೇ ತ್ರೈಮಾಸಿಕದಲ್ಲಿ ಯಾವುದೇ ಸಮಸ್ಯೆಗಳು ಬರದಂತೆ ತಡೆಯುವುದು. ನಿಮ್ಮ ಆಹಾರ ಮತ್ತು ವ್ಯಾಯಾಮವು ಇಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೆರಿಗೆ ನೋವು ಬಂದರೆ, ಆಗ ನೀವು ಆದಷ್ಟು ಸಾಮಾನ್ಯ ಹೆರಿಗೆಗೆ ಪ್ರಯತ್ನಿಸುವುದು ತುಂಬಾ ಒಳ್ಳೆಯದು.

ಅಪಸ್ಥಾನೀಯ ಗರ್ಭಧಾರಣೆ

ಅಪಸ್ಥಾನೀಯ ಗರ್ಭಧಾರಣೆ

ಸಾಮಾನ್ಯವಾಗಿ 35ರಿಂದ 44ರ ಹರೆಯದಲ್ಲಿ ಗರ್ಭಧಾರಣೆ ಮಾಡಿದಂತಹ ಮಹಿಳೆಯರಲ್ಲಿ ಇಂತಹ ಸಮಸ್ಯೆಯು ಕಂಡುಬರುವುದು. ಇಲ್ಲಿ ಅಂಡಾಣುವು ಗರ್ಭಕೋಶವನ್ನು ಬಿಟ್ಟು ಹೊರಗೆ ಬೆಳೆಯವುದು. ಇದರಿಂದಾಗಿ ಅಂಡಾಣುವು ಸರಿಯಾಗಿ ಬೆಳೆಯುವುದಿಲ್ಲ ಮತ್ತು ಇದಕ್ಕೆ ಚಿಕಿತ್ಸೆ ನೀಡುವುದು ಅನಿವಾರ್ಯ. ವಯಸ್ಸು ಅಲ್ಲದೆ ಇದಕ್ಕೆ ಬೇರೆ ಕಾರಣಗಳೆಂದರೆ ಹೊಟ್ಟೆ ಅಥವಾ ಶ್ರೋಣಿ ಭಾಗದಲ್ಲಿನ ಶಸ್ತ್ರಚಿಕಿತ್ಸೆ, ಗರ್ಭಪಾತ ಮತ್ತು ಫಲವತ್ತತೆಗೆ ಔಷಧಿ ಸೇವನೆ. ನಿಮಗೆ ನಿಶ್ಯಕ್ತಿ ಅಥವಾ ಬಳಲಿಕೆ, ಹೊಟ್ಟೆಯಲ್ಲಿ ಚುಚ್ಚಿದಂತಹ ನೋಡುವ ಕಂಡುಬರುತ್ತಿದ್ದರೆ ಅಥವಾ ರಕ್ತಸ್ರಾವವಾಗುತ್ತಲಿದ್ದರೆ ಆಗ ನೀವು ಇದಕ್ಕೆ ಪರೀಕ್ಷೆ ಮಾಡಿಸಿಕೊಳ್ಳಬೇಕು.

ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಅಪಸ್ಥಾನೀಯ ಗರ್ಭಧಾರಣೆ ಸಂದರ್ಭದಲ್ಲಿ ಯಶಸ್ವಿಯಾಗಿ ಹೆರಿಗೆ ಆಗುವುದು ತುಂಬಾ ಕಡಿಮೆ. ಇದಕ್ಕೆ ನೀವು ಕೆಲವೊಂದು ಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದು. ಅಪಸ್ಥಾನೀಯ ಗರ್ಭಧಾರಣೆ ತಡೆಯಲು ಯಾವುದೇ ವಿಧಾನಗಳು ಇಲ್ಲದೆ ಇದ್ದರೂ ನಿಮಗೆ ಯಾವುದೇ ಲಕ್ಷಣಗಳು ಕಂಡುಬಂದರೆ ಆಗ ನೀವು ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಶ್ರೋಣಿ ಭಾಗದ ನೋವು, ರಕ್ತಸ್ರಾವ, ಭುಜದ ನೋವು ಮತ್ತು ಅತಿಯಾದ ರಕ್ತಸ್ರಾವ, ಲಘು ತಲೆನೋವು, ಹೊಟ್ಟೆ ನೋವು ಮತ್ತು ಆಘಾತ ಇತ್ಯಾದಿಗಳು ಇದ್ದರೆ ಪರೀಕ್ಷೆ ಮಾಡಿಸಿ. ಗರ್ಭಪಾತವು ತುಂಬಾ ಕಠಿಣ, ಆದರೆ ಅಪಸ್ಥಾನೀಯ ಗರ್ಭಧಾರಣೆ ವೇಳೆ ನಿಮ್ಮ ಆರೋಗ್ಯ ಹಾಗೂ ಜೀವವು ಕೂಡ ತೊಂದರೆಗೆ ಸಿಲುಕುವುದು.

30 ಹರೆಯದಲ್ಲಿ ಗರ್ಭಧಾರಣೆ ಮಾಡುವುದು ಕೆಲವರಿಗೆ ತುಂಬಾ ಸುಲಭವಾಗಿ ಕಂಡುಬರುವುದು. ಆದರೆ ಇದಲ್ಲಿ ಕೆಲವೊಂದು ಸಮಸ್ಯೆಗಳು ಇರುವುದು. ನೀವು ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕು. ಆರೋಗ್ಯಕಾರಿ ಆಹಾರ ಕ್ರಮ ಪಾಲಿಸಿ, ನಿಯಮಿತ ವ್ಯಾಯಾಮ ಮತ್ತು ಒತ್ತಡದಿಂದ ದೂರವಿರಿ. ಇದರಿಂದ ನಿಮ್ಮ ಗರ್ಭಧಾರಣೆ ಸಂದರ್ಭವು ಸುಗಮವಾಗಿರುವುದು.

English summary

Common Pregnancy Complications after 30 in Kannada

If you plan to get pregnant after 30 may have to face many complication. Here we mention what are complications and what are are precaution one must take during pregnancy, have a look.
X
Desktop Bottom Promotion