For Quick Alerts
ALLOW NOTIFICATIONS  
For Daily Alerts

ಮಕ್ಕಳಾಗದಿರುವ ಬಗ್ಗೆ ಇರುವ ತಪ್ಪುಕಲ್ಪನೆಗಳಿವು

|

ಇಂದು ಪ್ರಪಂಚದಾದ್ಯಂತ ಬಂಜೆತನವು ಹೆಚ್ಚಾಗಿ ಕಂಡುಬರುತ್ತಿರುವ ಸಮಸ್ಯೆಯಾಗಿದ್ದು ಭಾರತದಲ್ಲೂ 15ಪ್ರತಿಶತದಷ್ಟು ದಂಪತಿಗಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬಂಜೆತನ ಸಮಸ್ಯೆಯನ್ನು ಎದುರಿಸುತ್ತಿರುವ ಕೆಲವರು ಐವಿಎಫ್‌ ಮೂಲಕ ಮಗುವನ್ನು ಪಡೆಯುವ ವಿಧಾನಕ್ಕೆ ಮೊರೆ ಹೋದರೂ ಹಲವಾರು ಮಂದಿ ಇನ್ನೂ ಅದರ ಬಗ್ಗೆ ಅವರಿವಿಲ್ಲದೆ ಈ ಸಮಸ್ಯೆಯನ್ನು ಶಾಪವೆಂಬಂತೆ ಅನುಭವಿಸುತ್ತಾರೆ.

infertility myths

ಅಲ್ಲದೇ ಫಲವತ್ತತೆಗೆ ಸಂಬಂಧಿಸಿದ ಕೆಲವೊಂದು ನಂಬಿಕೆಗಳು, ತಪ್ಪುಗ್ರಹಿಕೆಗಳು ದಂಪತಿಗಳು ಇನ್ನಷ್ಟು ಬಳಲುವಂತೆ ಮಾಡುತ್ತಿದೆ, ಫಲವತ್ತತೆಯ ಚಿಕಿತ್ಸೆ ಪಡೆದುಕೊಳ್ಳುವುದನ್ನು ತಡೆಯುತ್ತಿವೆ. ಆ ತಪ್ಪುಗ್ರಹಿಕೆಗಳೇನು, ನಿಜವಾಗಿಯೂ ಬಂಜೆತನಕ್ಕೆ ಅವು ಕಾರಣವಾಗುತ್ತಾ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

1. ಬಂಜೆತನವು ಸ್ತ್ರೀಯರಿಗೆ ಮಾತ್ರ ಬರುವ ಸಮಸ್ಯೆ

1. ಬಂಜೆತನವು ಸ್ತ್ರೀಯರಿಗೆ ಮಾತ್ರ ಬರುವ ಸಮಸ್ಯೆ

ಹೆಚ್ಚಿನವರು ಬಂಜೆತನಕ್ಕೆ ಮಹಿಳೆಯನ್ನೇ ಹೆಚ್ಚು ದೂಷಿಸುತ್ತಾರೆ. ಆದರೆ ಮಗುವನ್ನು ಹೆರುವ ಜವಾಬ್ದಾರಿ ಮಹಿಳೆಯದ್ದು ಮಾತ್ರವಲ್ಲ, ಪುರುಷ ಸಂಗಾತಿಯ ಸಂತಾನೋತ್ಪತ್ತಿ ಆರೋಗ್ಯವೂ ಅಷ್ಟೇ ಮುಖ್ಯ. ಅಧ್ಯಯನಗಳು ಸುಮಾರು ಮೂರನೇ ಒಂದು ಭಾಗದಷ್ಟು ಬಂಜೆತನವು ಮಹಿಳೆಯರ ಸಂತಾನೋತ್ಪತ್ತಿ ಸಮಸ್ಯೆಯಿಂದ ಉಂಟಾಗುತ್ತವೆ ಎಂದು ತೋರಿಸಿದರೂ, ಮೂರನೇ ಒಂದು ಭಾಗದಷ್ಟು ಪುರುಷರ ಫಲವತ್ತತೆಗೆ ಸಂಬಂಧಿಸಿದ ವಿವಿಧ ಅಂಶಗಳಿಂದ ಉಂಟಾಗುತ್ತದೆ. ಇದನ್ನು ಹೊರತುಪಡಿಸಿ ಇತರ ಕಾರಣಗಳೂ ಬಂಜೆತನಕ್ಕೆ ಕಾರಣವಾಗಬಹುದು. ಬಂಜೆತನವು ಎರಡೂ ಲಿಂಗಗಳನ್ನು ಒಳಗೊಂಡಿರುತ್ತದೆ. ಆದರೆ ಬಂಜೆತನಕ್ಕೆ ಮಹಿಳೆಯರು ಮಾತ್ರ ಕಾರಣ ಎಂದು ದೂಷಿಸುವುದನ್ನು ಬಿಡಬೇಕು.

2. ಸ್ಖಲನವು ಪುರುಷರಲ್ಲಿ ಫಲವತ್ತತೆಗೆ ಸಂಬಂಧಿಸಿದೆ

2. ಸ್ಖಲನವು ಪುರುಷರಲ್ಲಿ ಫಲವತ್ತತೆಗೆ ಸಂಬಂಧಿಸಿದೆ

ಪುರುಷರು ಆಗಾಗ್ಗೆ ಸ್ಖಲನ ಮಾಡಲು ಸಾಧ್ಯವಾಗುತ್ತದೆ ಆದರೆ ಇದರಿಂದಾಗಿ ಅವರು ಸಂಪೂರ್ಣವಾಗಿ ಫಲವತ್ತಾಗಿದ್ದಾರೆ, ಉತ್ತಮ ಸಂತಾನೋತ್ಪತ್ತಿ ಆರೋಗ್ಯವನ್ನು ಹೊಂದಿದ್ದಾರೆ ಎಂದು ಹೇಳಲಾಗದು. ಸ್ಖಲನದ ಹೊರತಾಗಿಯೂ ಪುರುಷರು ಕಡಿಮೆ ವೀರ್ಯಾಣು ಸಂಖ್ಯೆಯನ್ನು ಹೊಂದಬಹುದು. ಇದು ಗರ್ಭಧಾರಣೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ವೀರ್ಯದ ಗುಣಮಟ್ಟ ಹಾಗೂ ವೀರ್ಯದ ಆಕಾರ ಅಥವಾ ವೀರ್ಯಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳು ಬಂಜೆತನಕ್ಕೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡ ಅಥವಾ ಇತರ ವೈದ್ಯಕೀಯ ಚಿಕಿತ್ಸೆಗಾಗಿ ತೆಗೆದುಕೊಳ್ಳುವ ಔಷಧಿಗಳು ವೀರ್ಯದ ಗುಣಮಟ್ಟವನ್ನು ಕಡಿಮೆ ಮಾಡಬಹುದು. ಇದರಿಂದ ಗರ್ಭಧರಿಸುವ ಸಾಧ್ಯತೆಗಳು ಕಡಿಮೆಯಾಗುತ್ತದೆ.

3. ಮಹಿಳೆಯರು 35 ವರ್ಷ ದಾಟಿದ ನಂತರ ಗರ್ಭಿಣಿಯಾಗೊದು ಕಷ್ಟ

3. ಮಹಿಳೆಯರು 35 ವರ್ಷ ದಾಟಿದ ನಂತರ ಗರ್ಭಿಣಿಯಾಗೊದು ಕಷ್ಟ

33-35 ವರ್ಷಗಳ ನಂತರ ಮಹಿಳೆಯರಲ್ಲಿ ಫಲವತ್ತತೆ ಕ್ಷೀಣಿಸಲು ಪ್ರಾರಂಭಿಸುತ್ತದೆ, ಆದರೆ ಗರ್ಭಿಣಿಯಾದೇ ಇರುವ ಸಾಧ್ಯತೆಗಳಿಲ್ಲ. 35ರ ನಂತರ ಗರ್ಭಧರಿಸಲು ಕಷ್ಟವಾಗಬಹುದು, ಆದರೆ ಅಸಾಧ್ಯವಲ್ಲ. ಇದಲ್ಲದೆ, ಸ್ವಾಭಾವಿಕವಾಗಿ ಗರ್ಭಧರಿಸಲು ಸಮಸ್ಯೆಗಳಿದ್ದರೆ, ಮಹಿಳೆಯರು IVF ನಂತಹ ಕೆಲವು ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನದ ವಿಧಾನಗಳನ್ನು ಪ್ರಯತ್ನಿಸಬಹುದು, ಇದು ಮೊಟ್ಟೆಯ ಬಾಹ್ಯ ಫಲೀಕರಣದಿಂದ ಸಾಧ್ಯವಾಗುತ್ತದೆ, ನಂತರ ಅದನ್ನು ಗರ್ಭದಲ್ಲಿ ಅಳವಡಿಸಲಾಗುತ್ತದೆ. ನೀವು ಇನ್ನೂ ಚಿಕ್ಕವರಿದ್ದಾಗ ಫಲವತ್ತಾಗದ ಮೊಟ್ಟೆ ಅಥವಾ ಫಲವತ್ತಾದ ಭ್ರೂಣವನ್ನು ಘನೀಕರಿಸುವುದು ಇತರ ತಂತ್ರಗಳನ್ನು ಒಳಗೊಂಡಿರುತ್ತದೆ, ಇದರಿಂದಾಗಿ ಭವಿಷ್ಯದಲ್ಲಿ ನೀವು ಸಹಜವಾಗಿ ಗರ್ಭಧರಿಸುವ ಸಾಧ್ಯತೆಗಳು ಕಡಿಮೆಯಾದಾಗ ಫಲವತ್ತಾದ ಘನೀಕರಿಸಿದ ಭ್ರೂಣವನ್ನು ಗರ್ಭಾಶಯದಲ್ಲಿ ಅಳವಡಿಸಬಹುದು.

4. ಗರ್ಭನಿರೋಧಕಗಳು ಬಂಜೆತನಕ್ಕೆ ಕಾರಣವಾಗಬಹುದು

4. ಗರ್ಭನಿರೋಧಕಗಳು ಬಂಜೆತನಕ್ಕೆ ಕಾರಣವಾಗಬಹುದು

ಸತ್ಯ: ಜನನ ನಿಯಂತ್ರಣ ಮಾತ್ರೆಗಳು ನೀವು ತೆಗೆದುಕೊಳ್ಳುವವರೆಗೆ ಗರ್ಭಾವಸ್ಥೆಯನ್ನು ತಡೆಯಲು ಸಹಾಯ ಮಾಡುತ್ತದೆ, ದೀರ್ಘಾವಧಿಯವರೆಗೂ ಇದನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಸಂತಾನೋತ್ಪತ್ತಿ ಆರೋಗ್ಯಕ್ಕೆ ಅಡ್ಡಿಯಾಗುವುದಿಲ್ಲ ಅಥವಾ ಬಂಜೆತನವನ್ನು ಉಂಟುಮಾಡುವುದಿಲ್ಲ. ಮಾತ್ರೆಗಳನ್ನು ನಿಲ್ಲಿಸಿದ ನಂತರ ನಿಮ್ಮ ಋತುಚಕ್ರವು ಹೆಚ್ಚಾಗಿ ಒಂದೆರಡು ತಿಂಗಳೊಳಗೆ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಆದರೆ ದೀರ್ಘಾವಧಿಯವರೆಗೆ ತೆಗೆದುಕೊಂಡು ನಂತರ ನಿಲ್ಲಿಸಿದಲ್ಲಿ ಸಮಸ್ಯೆಗಳನ್ನು ಅನುಭವಿಸಿದರೆ ಸ್ತ್ರೀರೋಗತಜ್ಞರ ಸಲಹೆ ಪಡೆಯಿರಿ.

5. ಹೆಚ್ಚು ವಯಸ್ಸಾದವರಿಗೆ ಮಾತ್ರ ಬಂಜೆತನ ಉಂಟಾಗುತ್ತದೆ

5. ಹೆಚ್ಚು ವಯಸ್ಸಾದವರಿಗೆ ಮಾತ್ರ ಬಂಜೆತನ ಉಂಟಾಗುತ್ತದೆ

ನಿಮ್ಮ ವಯಸ್ಸಾದಂತೆ ಬಂಜೆತನದ ಸಾಧ್ಯತೆಗಳು ಹೆಚ್ಚಾಗುತ್ತವೆ, ವಿಶೇಷವಾಗಿ ನೀವು 33-35 ವರ್ಷಗಳನ್ನು ದಾಟಿದಾಗ, ಆದರೂ, ಬಂಜೆತನವು ಕಿರಿಯ ವಯಸ್ಸಿನ ಪುರುಷರು ಮತ್ತು ಮಹಿಳೆಯರನ್ನು ಸಹ ಕಾಡಬಹುದು, ಅವರ ಇಪ್ಪತ್ತನೇ ವಯಸ್ಸಿನಲ್ಲಿ. ಪಿಸಿಓಎಸ್, ಎಂಡೊಮೆಟ್ರಿಯೊಸಿಸ್ ಅಥವಾ ವ್ಯಕ್ತಿಯ ಒಟ್ಟಾರೆ ಆರೋಗ್ಯವನ್ನು ಒಳಗೊಂಡಿರುವ ಯಾವುದೇ ಇತರ ಸಮಸ್ಯೆಗಳಂತಹ ಕೆಲವು ಸಂತಾನೋತ್ಪತ್ತಿ ಅಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಕಿರಿಯ ಜನರಲ್ಲಿ ಬಂಜೆತನ ಉಂಟಾಗಬಹುದು. ಪುರುಷರೂ ಹಾಗೂ ಮಹಿಳೆಯರಲ್ಲಿ ಅತಿಯಾದ ತಂಬಾಕು ಸೇವನೆ, ಧೂಮಪಾನ, ಆಲ್ಕೋಹಾಲ್ ಜೊತೆಗೆ ಕಳಪೆ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿಯನ್ನು ಒಳಗೊಂಡಿರುವವರಲ್ಲಿ, ಕಳಪೆ ಜೀವನಶೈಲಿ ಅಳವಡಿಸಿಕೊಂಡಿರುವ ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನದ ಸಾಧ್ಯತೆಗಳನ್ನು ಹೆಚ್ಚಿಸಬಹುದು.

ಬಂಜೆತನ ಸಮಸ್ಯೆಗಳು ಮತ್ತು ಮಿಥ್ಯೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು, ಬಂಜೆತನ ಅಥವಾ ಗರ್ಭಧಾರಣೆಯಂತಹ ಸಮಸ್ಯೆಗಳು ಅಥವಾ ನಿಮ್ಮ ಅಥವಾ ನಿಮ್ಮ ಸಂಗಾತಿಯ ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಇತರ ಸಮಸ್ಯೆಗಳ ಬಗ್ಗೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಸ್ವಯಂ-ಔಷಧಿ ಮಾಡಿಕೊಳ್ಳುವುದು ಅಥವಾ ಇತರರ ಮಾತುಗಳನ್ನು, ಸಲಹೆಗಳನ್ನು ಅಳವಡಿಸಿಕೊಳ್ಳುವುದು ಮಾಡದಿರಿ. ಗರ್ಭಧರಿಸುವಲ್ಲಿ ಸಮಸ್ಯೆಗಳು ಎದುರಾದರೆ ವೈದ್ಯರ ಸಲಹೆ ಪಡೆಯುವುದು ಎಲ್ಲಕ್ಕಿಂತ ಉತ್ತಮ.

English summary

Common Myths About Infertility Busted in Kannada

These are common myths about infertility busted, read on...
X
Desktop Bottom Promotion