For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿರುವಾಗ ಬೆಲ್ಲ ಸೇವಿಸಿದರೆ, ಸಿಗುತ್ತೆ ಈ 5 ಲಾಭಗಳು

|

ಗರ್ಭಾವಸ್ಥೆಯಲ್ಲಿರುವಾಗ ಕೆಲವರು ಸಿಹಿ ತಿನ್ನಲು ಬಯಸಿದರೆ, ಇನ್ನೂ ಕೆಲವರಿಗೆ ಮಸಾಲೆಯುಕ್ತ, ಸ್ಪೈಸಿ ಆಹಾರ ತಿನ್ನಲು ಬಯಸುತ್ತಾರೆ. ನಿಮಗೇನಾದರೂ ಆಗಾಗ್ಗೆ ಸಿಹಿ ಹಾಗೂ ಅರೋಗ್ಯಕರವಾದುದು ತಿನ್ನಬೇಕೆಂಬ ಬಯಕೆಯಾದರೆ, ಬೆಲ್ಲ ಒಂದು ಉತ್ತಮ ಆಯ್ಕೆಯಾಗಿದೆ. ಬೆಲ್ಲ, ಪ್ರತಿಯೊಬ್ಬರಿಗೂ ಆರೋಗ್ಯಕರ ಆಯ್ಕೆಯಾಗಿದ್ದರೂ ಸಹ, ಇದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಅದು ಗರ್ಭಿಣಿಯರಿಗೆ ದುಪ್ಪಟ್ಟು ಪ್ರಯೋಜನವನ್ನು ನೀಡುತ್ತದೆ.

ತಜ್ಞರ ಪ್ರಕಾರ, ಹಾರ್ಮೋನ್ ಅಸಮತೋಲನವನ್ನು ನಿರ್ವಹಿಸುವುದರ ಜೊತೆಗೆ, ಬೆಲ್ಲವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಮತ್ತು ಉರಿಯೂತ ಮತ್ತು ನೋವಿನಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಹಾಗಾದರೆ ಬೆಲ್ಲವು ಗರ್ಭಿಣಿಯರಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಇಲ್ಲಿ ನೋಡೋಣ.

ಗರ್ಭಿಣಿಯರು ಬೆಲ್ಲ ಸೇವಿಸುವುದರಿಂದ ಸಿಗುವ ಲಾಭಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಆರೋಗ್ಯಕರ ರಕ್ತಕಣ ಬೆಳವಣಿಗೆ:

ಆರೋಗ್ಯಕರ ರಕ್ತಕಣ ಬೆಳವಣಿಗೆ:

ಗರ್ಭಾವಸ್ಥೆಗೆ ಮುಖ್ಯವಾದ ಆರೋಗ್ಯಕರ ರಕ್ತ ಕಣಗಳ ಬೆಳವಣಿಗೆಗೆ ಕಬ್ಬಿಣವು ಪ್ರಮುಖ ಪಾತ್ರ ವಹಿಸುತ್ತದೆ. ಬೆಲ್ಲವು ಸಣ್ಣ ಪ್ರಮಾಣದ ಕಬ್ಬಿಣವನ್ನು ಹೊಂದಿದ್ದು, ಒದು ದೈನಂದಿನ ಬಳಕೆಗೆ ಆರೋಗ್ಯಕರವಾಗಿಸುತ್ತದೆ ಮತ್ತು ಸಕ್ಕರೆಗೆ ಉತ್ತಮ ಬದಲಿಯಾಗಿದೆ. ಆದ್ದರಿಂದ ನಿಮ್ಮ ಚಹಾ ಅಥವಾ ಕಾಫಿ ಅಥವಾ ಇನ್ನಾವುದೇ ಸಿಹಿ ತಿನಿಸುಗಳಲ್ಲಿ ಸಕ್ಕರೆ ಬದಲು ಬೆಲ್ಲವನ್ನು ಸೇರಿಸಲು ಪ್ರಯತ್ನಿಸಿ.

ಸೋಂಕನ್ನು ತಡೆಗಟ್ಟುವುದು:

ಸೋಂಕನ್ನು ತಡೆಗಟ್ಟುವುದು:

ಗರ್ಭಾವಸ್ಥೆಯಲ್ಲಿ ಬೆಲ್ಲವನ್ನು ತಿನ್ನುವುದರಿಂದ ನಿಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ ಜೊತೆಗೆ ದೇಹದಿಂದ ರಕ್ತವನ್ನು ಅಶುದ್ಧಗೊಳಿಸುವ ತ್ಯಾಜ್ಯ ಮತ್ತು ವಿಷವನ್ನು ತೆಗೆದುಹಾಕುತ್ತದೆ. ಇದು ಅನೇಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಜನರಿಗೆ ಸಹ ಇದು ಪ್ರಯೋಜನಕಾರಿಯಾಗಿದೆ.

ದೇಹದಲ್ಲಿ ನೀರು ಸಂಗ್ರಹಣೆಯಾಗುವುದನ್ನು ಕಡಿಮೆ ಮಾಡುವುದು:

ದೇಹದಲ್ಲಿ ನೀರು ಸಂಗ್ರಹಣೆಯಾಗುವುದನ್ನು ಕಡಿಮೆ ಮಾಡುವುದು:

ಗರ್ಭಾವಸ್ಥೆಯಲ್ಲಿ ದೇಹದಲ್ಲಿ ನೀರಿನ ನಿಶ್ಚಲತೆಯು ಸಾಮಾನ್ಯ ಸಮಸ್ಯೆಯಾಗಿದೆ, ಇದನ್ನು ಗುಣಪಡಿಸಲು ಬೆಲ್ಲವು ಸಹಾಯಕವಾಗಿದೆ ಎಂದು ಸಾಬೀತಾಗಿದೆ. ಬೆಲ್ಲದಲ್ಲಿ ಮಧ್ಯಮ ಪ್ರಮಾಣದಲ್ಲಿ ಪೊಟ್ಯಾಸಿಯಮ್ ಮತ್ತು ಸೋಡಿಯಂ ಇರುವುದರಿಂದ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಮೂಲಕ ದೇಹದಲ್ಲಿ ನೀರು ಸಂಗ್ರಹವಾಗುವುದನ್ನು ಕಡಿಮೆ ಮಾಡುವುದು.

ಜೀರ್ಣಕ್ರಿಯೆಯನ್ನು ಉತ್ತೇಜಿಸುವುದು:

ಜೀರ್ಣಕ್ರಿಯೆಯನ್ನು ಉತ್ತೇಜಿಸುವುದು:

ಗರ್ಭಾವಸ್ಥೆಯಲ್ಲಿ ನೀವು ಮಲಬದ್ಧತೆ ಮತ್ತು ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಬೆಲ್ಲವು ಸೂಕ್ತವಾದ ಮದ್ದಾಗಿದೆ. ಬೆಲ್ಲವು ಸಕ್ಕರೆಯ ನೈಸರ್ಗಿಕ ರೂಪವಾಗಿದ್ದು ಅದು ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಉಂಟುಮಾಡುತ್ತದೆ. ಇದು ಸರಿಯಾದ ಜೀರ್ಣಕ್ರಿಯೆಯನ್ನು ಉತ್ತೇಜಿಸಿ, ಮಲಬದ್ಧತೆಯನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ

ಮೂಳೆಗಳನ್ನು ಆರೋಗ್ಯವಾಗಿಡುವುದು:

ಮೂಳೆಗಳನ್ನು ಆರೋಗ್ಯವಾಗಿಡುವುದು:

ಬೆಲ್ಲದಲ್ಲಿ ಮೆಗ್ನೀಸಿಯಮ್ ಇರುವುದರಿಂದ ಇದರ ಸೇವನೆಯಿಂದ ತಿನ್ನುವುದರಿಂದ ಮೂಳೆಗಳು ಮತ್ತು ಕೀಲುಗಳು ಬಲಗೊಳ್ಳುತ್ತವೆ. ಆದ್ದರಿಂದ ಗರ್ಭಿಣಿಯರು ಬೆಲ್ಲ ಸೇವಿಸಿ. ಆದರೆ, ನಿಮ್ಮ ಆಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ.

English summary

Benefits Of Eating Jaggery During Pregnancy in Kannada

Here we talking about Benefits Of Eating Jaggery During Pregnancy in Kannada, read on
Story first published: Wednesday, March 2, 2022, 10:43 [IST]
X
Desktop Bottom Promotion