Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ನೀವು ಗರ್ಭಿಣಿಯಾಗುವ ಸಾಧ್ಯತೆಯು ಸಂಗಾತಿಯ ನಿದ್ರಾವಧಿಯನ್ನು ಅವಲಂಬಿಸಿದೆ !
ಮಹಿಳೆಯೊಬ್ಬಳು ಗರ್ಭಿಣಿಯಾಗಲು ಬಯಸುವ ಸಂದರ್ಭದಲ್ಲಿ ತಾನು ಫಲಿತವಾಗಲು ಸಾಧ್ಯವಿರುವ ಪ್ರಯತ್ನಗಳನ್ನೆಲ್ಲ ಆ ಮಹಿಳೆ ಮಾಡಲಾರಂಭಿಸುತ್ತಾಳೆ. ವಿವಿಧ ರೀತಿಯ ಪೌಷ್ಟಿಕ ಆಹಾರಗಳನ್ನು ಸೇವಿಸುವುದರಿಂದ ಹಿಡಿದು ಹಲವಾರು ಬಗೆಯ ವ್ಯಾಯಾಮಗಳು ಹೀಗೆ ಸಾಧ್ಯವಿರುವ ಪ್ರಯತ್ನಗಳೆಲ್ಲ ಸಾಗುತ್ತವೆ. ಆದರೆ ಮಹಿಳೆಯ ಪುರುಷ ಸಂಗಾತಿಯು ರಾತ್ರಿ ಮಲಗುವ ಅವಧಿಗೂ ಆಕೆ ಗರ್ಭ ಧರಿಸುವ ಸಾಧ್ಯಾಸಾದ್ಯತೆಗಳಿಗೂ ಸಂಬಂಧವಿದೆ ಎಂದರೆ ನೀವು ನಂಬಲೇಬೇಕು. ಇತ್ತೀಚೆಗಿನ ವೈಜ್ಞಾನಿಕ ಅಧ್ಯಯನವೊಂದರ ಪ್ರಕಾರ ಪತ್ನಿ/ಮಹಿಳೆಯು ಗರ್ಭ ಧರಿಸುವ ಸಾಧ್ಯತೆಗಳು ಆಕೆಯ ಪತಿಯ/ ಸಂಗಾತಿಯ ಮಲಗುವ ಅಭ್ಯಾಸಗಳನ್ನು ಬಹಳಷ್ಟು ಅವಲಂಬಿಸಿದೆ ಎಂಬುದು ಕಂಡು ಬಂದಿದೆ.

ಅಧ್ಯಯನದಲ್ಲಿ ತಿಳಿದು ಬಂದ ಮಾಹಿತಿಗಳು ಹೀಗಿವೆ
ಬೋಸ್ಟನ್ ಯುನಿವರ್ಸಿಟಿಯ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಲಾರೆನ್ ವೈಸ್ ಹಾಗೂ ಆಕೆಯ ಸಂಗಡಿಗರ ಸಂಶೋಧಕರ ತಂಡವು ನಡೆಸಿದ ಅಧ್ಯಯನದ ಪ್ರಕಾರ, ರಾತ್ರಿಯ ಹೊತ್ತು ಸುಮಾರು ಏಳರಿಂದ ಎಂಟು ತಾಸು (ಆರೋಗ್ಯಕರ ಪುರುಷನೊಬ್ಬನಿಗೆ ಬೇಕಾದ ನಿದ್ರೆಯ ಸಹಜ ಅವಧಿ) ಉತ್ತಮ ನಿದ್ರೆ ಮಾಡುವ ಪುರುಷನ ವೀರ್‍ಯಾಣುಗಳ ಫಲವತ್ತತೆ ಹಾಗೂ ಚಲನಶೀಲತೆಯು ಉತ್ತಮವಾಗಿರುತ್ತದೆ ಎಂದು ತಿಳಿದು ಬಂದಿದೆ.
ಮಕ್ಕಳನ್ನು ಪಡೆಯಲು ಬಯಸುತ್ತಿರುವ 790 ಜೋಡಿಗಳನ್ನು ವೈಸ್ ಹಾಗೂ ಆಕೆಯ ತಂಡದವರು ಅಧ್ಯಯನಕ್ಕೊಳಪಡಿಸಿದ್ದರು. ಅವರ ನಿದ್ರೆಯ ಹವ್ಯಾಸ ಹಾಗೂ ಜೀವನಶೈಲಿಯ ಬಗ್ಗೆ ವಿಭಿನ್ನ ಪ್ರಶ್ನೆಗಳನ್ನು ಜೋಡಿಗಳಿಗೆ ಕೇಳಲಾಯಿತು. ಇದರ ನಂತರ ಒಂದು ವರ್ಷದವರೆಗೆ ಜೋಡಿಗಳ ಮೇಲೆ ಗಮನವಿಟ್ಟು ಅವರು ಫಲಿತವಾಗುವ ಅವಧಿಯನ್ನು ಪರಿಶೀಲಿಸಲಾಯಿತು. ಸಂಗ್ರಹಿಸಿದ ಮಾಹಿತಿಗಳನ್ನು ತುಲನೆ ಮಾಡಿ ನೋಡಿದಾಗ ದಿನಕ್ಕೆ ಆರು ತಾಸು ಅಥವಾ ಅದಕ್ಕೂ ಕಡಿಮೆ ಅವಧಿ ಮಲಗುವವರು ಹಾಗೂ ಅತಿ ಹೆಚ್ಚು ಮಲಗುವ (ಒಂಭತ್ತು ತಾಸು ಅಥವಾ ಹೆಚ್ಚು) ಪುರುಷರ ಸಂಗಾತಿಗಳು ದಿನಕ್ಕೆ ಎಂಟು ತಾಸು ಮಲಗುವ ಪುರುಷರ ಸಂಗಾತಿಗಳಿಗಿಂತ ಗರ್ಭಿಣಿಯರಾಗುವ ಸಾಧ್ಯತೆಗಳು ಕಡಿಮೆಯಾಗಿದ್ದು ಕಂಡು ಬಂದಿತು.
ಅಲ್ಲದೆ ನಿದ್ರಾಹೀನತೆ ಹಾಗೂ ಇನ್ನಿತರ ನಿದ್ರಾ ಸಂಬಂಧಿ ಸಮಸ್ಯೆಗಳನ್ನು ಹೊಂದಿರುವ ಪುರುಷರ ಸಂಗಾತಿಗಳು ಬೇಗ ಫಲಿತವಾಗುವ ಸಾಧ್ಯತೆಗಳು ಕಡಿಮೆಯಾಗಿರುವುದು ಸಹ ಬೆಳಕಿಗೆ ಬಂದಿತು. ಹಾಗಾದರೆ ಪುರುಷರ ನಿದ್ರೆಗೂ ಅವರ ಮಹಿಳಾ ಸಂಗಾತಿಯು ಗರ್ಭಿಣಿಯಾಗುವುದಕ್ಕೂ ನಿಜವಾದ ಕಾರಣ ಏನೆಂಬುದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲಾಯಿತು. ಪುರುಷರ ನಿದ್ರಾ ಅಭ್ಯಾಸಕ್ಕೂ ಹಾಗೂ ಅವರ ದೇಹದಲ್ಲಿ ಬಿಡುಗಡೆಯಾಗುವ ಟೆಸ್ಟೊಸ್ಟಿರಾನ್ ಹಾರ್ಮೋನ್‌ಗಳಿಗೂ ನೇರ ಸಂಬಂಧವಿದೆ. ಇದೇ ಅಂಶವು ಅವರ ಸಂಗಾತಿಯು ಗರ್ಭ ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ತಿಳಿದು ಬಂದಿತು. ಈ ಸಂಶೋಧನೆಯಲ್ಲಿ ಟೆಸ್ಟೊಸ್ಟಿರಾನ್ ಮಟ್ಟಗಳನ್ನು ನಿಖರವಾಗಿ ಅಳೆಯದಿದ್ದರೂ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಹಾರ್ಮೋನ್‌ಗಳ ಪಾತ್ರ ಬಹು ಮುಖ್ಯವಾಗಿದೆ ಎಂಬುದು ಮಾತ್ರ ಸ್ಪಷ್ಟವಾಗಿದೆ.
ಇನ್ನೂ ಕೆಲವು ಕಾರಣಗಳು ಹೀಗಿವೆ
ಮೇಲ್ನೋಟಕ್ಕೆ ಗೋಚರಿಸದ ಆರೋಗ್ಯ ಸಮಸ್ಯೆಗಳು ನಿದ್ರಾವಸ್ಥೆ ಹಾಗೂ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತವೆ. ಒಟ್ಟಾರೆಯಾಗಿ ಈ ಸಂಶೋಧನೆಯ ಪ್ರಕಾರ ಒಂದು ವೇಳೆ ನೀವು ಬೇಗನೆ ಸಂತಾನದ ಅಪೇಕ್ಷೆ ಹೊಂದಿದ್ದಲ್ಲಿ ಸಂಗಾತಿಗಳಿಬ್ಬರು ಮೊದಲಿಗೆ ಉತ್ತಮ ಆರೋಗ್ಯವನ್ನು ಹೊಂದುವುದು ಅಗತ್ಯ. ಜೊತೆಗೆ ಅವಶ್ಯಕವಿರುವಷ್ಟು ನಿದ್ರೆ ಮಾಡಿ ಸಂತಾನೋತ್ಪತ್ತಿಯ ಸಾಧ್ಯತೆಗಳನ್ನು ಹೆಚ್ಚಿಕೊಳ್ಳಬಹುದು.



Click it and Unblock the Notifications
