For Quick Alerts
ALLOW NOTIFICATIONS  
For Daily Alerts

ಬೇಸಿಗೆಯ ಉರಿ ಬಿಸಿಲಿನ ಸಂದರ್ಭದಲ್ಲಿ ಆರೋಗ್ಯವಾಗಿರಲು, ಗರ್ಭಿಣಿಯರಿಗೆ ಉಪಯುಕ್ತ ಸಲಹೆಗಳು

|

ಗರ್ಭಾವಸ್ಥೆಯಲ್ಲಿ ಇರುವಾಗ ತಾಯಂದಿರಿಗೆ ಒಂದಿಷ್ಟು ಭಾರ ಹಾಗೂ ಆಯಾಸದ ಅನುಭವ ಆಗುವುದು ಸಹಜ. ಇದರೊಟ್ಟಿಗೆ ಬೇಸಿಗೆಯ ಉರಿ ಮತ್ತು ಸೆಕೆ ಸೇರಿಕೊಂಡಿತು ಎಂದರೆ ಅದೊಂದು ಅಸಹನೀಯ ಸ್ಥಿತಿ ಆಗುವುದು. ಗರ್ಭಾವಸ್ಥೆ ಎಂದಾಗಲೇ ಭಿನ್ನವಾದ ಆರೋಗ್ಯ ಸ್ಥಿತಿ ಹಾಗೂ ಮಾನಸಿಕ ಚಿಂತನೆಗಳು ಇರುತ್ತವೆ. ಜೊತೆಗೆ ಮಗುವಿನ ಆರೋಗ್ಯ ಹಾಗೂ ಬೆಳವಣಿಗೆಯ ಕುರಿತು ಆಗಾಗ ಚಿಂತನೆಗಳು ಕಾಡುವುದು ಸಹಜ. ಇದೆಲ್ಲದುದರ ನಡುವೆ ಋತುಮಾನದ ಕಿರಿಕಿರಿಯನ್ನು ಸಹಿಸಿಕೊಳ್ಳುವುದು ಎಂದರೆ ಗರ್ಭಿಣಿಯರಿಗೆ ಒಂದು ಸವಾಲಿನ ಪರಿಸ್ಥಿತಿ ಆಗಿರುತ್ತದೆ.

ವಾತಾವರಣದಲ್ಲಿ ಉಂಟಾಗುವ ಸೆಕೆ ಮತ್ತು ಉರಿಯು ದೇಹದಲ್ಲಿ ನಿರ್ಜಲೀಕರಣವನ್ನು ಉಂಟುಮಾಡುತ್ತದೆ. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಅದರಲ್ಲೂ ಗರ್ಭಿಣಿಯರಿಗೆ ಉರಿ ಮೂತ್ರ, ಹೊಟ್ಟೆ ಉರಿ, ಮಲ ಗಟ್ಟಿಯಾಗುವ ಸಮಸ್ಯೆ ಅಧಿಕವಾಗಿರುತ್ತದೆ. ಇವು ಸಣ್ಣ ಪುಟ್ಟ ಸಮಸ್ಯೆ ಎನಿಸಿದರೂ ಗರ್ಭಾವಸ್ಥೆಯಲ್ಲಿ ಇರುವಾಗ ಇದೊಂದು ಗಂಭೀರ ಸಮಸ್ಯೆಗಳೇ ಆಗಿರುತ್ತವೆ. ದೇಹದ ಸೂಕ್ಷ್ಮತೆ ಹಾಗೂ ಆರೋಗ್ಯದ ಅಡ್ಡ ಪರಿಣಾಮಗಳು ಮಗುವಿನ ಬೆಳವಣಿಗೆಯ ಮೇಲೆ ಗಂಭೀರ ಸಮಸ್ಯೆಯನ್ನು ಉಂಟುಮಾಡುತ್ತವೆ.

ಇಂತಹ ಬಿಸಿಯ ವಾತಾವರಣವನ್ನು ಎದುರಿಸುವಾಗ ಗರ್ಭಿಣಿಯರು ವಿಶೇಷ ಕಾಳಜಿ ಹಾಗೂ ಮುನ್ನೆಚ್ಚರಿಕೆಯ ಕ್ರಮವನ್ನು ಅನುಸರಿಸಬೇಕು. ಆಗ ಬಿಸಿಯ ದಗೆ, ಬೆವರಿನ ಕಿರಿಕಿರಿ, ಬಾಯಾರಿಕೆಯ ಸಮಸ್ಯೆಗಳನ್ನು ಬಹಳ ಸುಲಭವಾಗಿ ಎದುರಿಸಬಹುದು. ನೀವು ಸಹ ಗರ್ಭಾವಸ್ಥೆಯಲ್ಲಿ ಇದ್ದೀರಿ ಅಥವಾ ನಿಮ್ಮವರು ಗರ್ಭಾವಸ್ಥೆಯಲ್ಲಿ ಇದ್ದಾರೆ ಎಂದರೆ ಲೇಖನದ ಮುಂದಿನ ಭಾಗದಲ್ಲಿ ವಿವರಿಸಲಾದ ಕೆಲವು ಮಾಹಿತಿಗಳನ್ನು ಪರಿಗಣಿಸಿ. ಬೇಸಿಗೆಯ ಬಿಸಿಯನ್ನು ಸಹ ತಂಪಾಗಿ ಎದುರಿಸಲು ಸಾಧ್ಯವಾಗುವುದು.

ಹೆಚ್ಚು ನೀರನ್ನು ಕುಡಿಯಿರಿ

ಹೆಚ್ಚು ನೀರನ್ನು ಕುಡಿಯಿರಿ

ಬೇಸಿಗೆಯಲ್ಲಿ ಅಧಿಕ ನೀರನ್ನು ಸೇವಿಸುವುದರ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದು ಇತರರಿಗಿಂತ ಮಹಿಳೆಯರಿಗೆ ಹೆಚ್ಚು ಪ್ರಮುಖವಾದ ಸಂಗತಿಯಾಗಿರುತ್ತದೆ. ಬಾಯಾರಿಕೆ ಆಗದೆ ಇದ್ದರೂ ಪದೇ ಪದೇ ನೀರು ಅಥವಾ ದ್ರವ ಪದಾರ್ಥಗಳನ್ನು ಸೇವಿಸುತ್ತಲೇ ಇರಬೇಕು. ರಸ ಭರಿತ ಅಥವಾ ನೀರಿನಿಂದ ಕೂಡಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗದಂತೆ ತಡೆಯಬಹುದು. ಅಲ್ಲದೆ ದೇಹವು ತಂಪಾಗಿರುತ್ತವೆ. ಜೊತೆಗೆ ಪಚನ ಕ್ರಿಯೆಗಳು ಸುಲಭವಾಗಿ ನೆರವೇರುತ್ತವೆ.

ಕೆಫೀನ್ ಪಾನೀಯಗಳನ್ನು ಸೇವಿಸದಿರಿ

ಕೆಫೀನ್ ಪಾನೀಯಗಳನ್ನು ಸೇವಿಸದಿರಿ

ಮೂರನೇ ತ್ರೈ ಮಾಸಿಕದ ಸಮಯದಲ್ಲಿ ಮಗುವು ಸಾಕಷ್ಟು ಬೆಳವಣಿಗೆಯನ್ನು ಪಡೆದುಕೊಂಡಿರುತ್ತದೆ. ಜೊತೆಗೆ ತಾಯಿಯ ಹೊಟ್ಟೆ ಗಾತ್ರ ಹೆಚ್ಚಾಗಿ, ಭಾರವನ್ನು ಹೊಂದಿರುತ್ತದೆ. ಇದರ ಪ್ರಭಾವದಿಂದ ಬಹುತೇಕ ಮಹಿಳೆಯರು ಕೈ ಮತ್ತು ಕಾಲುಗಳಲ್ಲಿ ಊತವನ್ನು ಹೊಂದುತ್ತಾರೆ. ಇದು ರಕ್ತ ಸಂಚಾರ ಸೂಕ್ತವಾಗಿ ನೆರವೇರದೆ ಇದ್ದರೆ ಅಥವಾ ದೇಹದಲ್ಲಿ ನೀರಿನಂಶ ಕಡಿಮೆ ಆದರೆ ಕಾಣಿಸಿಕೊಳ್ಳುವ ಸಾಮಾನ್ಯ ತೊಂದರೆ. ಈ ತೊಂದರೆಯನ್ನು ಹೆಚ್ಚು ನೀರು ಹಾಗೂ ದ್ರವ ಪದಾರ್ಥಗಳ ಸೇವನೆಯಿಂದ ನಿಯಂತ್ರಿಸಬಹುದು. ಬೇಸಿಗೆಯ ಉರಿ ಹಾಗೂ ನೀರಿನ ದಾಹಕ್ಕೆ ಸಂಸ್ಕರಿಸಿದ ಪಾನೀಯಗಳು, ಕೆಫೀನ್ ಪಾನೀಯಗಳನ್ನು ಸೇವಿಸದಿರಿ. ಕೆಫೀನ್ ದೇಹದ ದ್ರವಗಳನ್ನು ಕಡಿಮೆ ಗೊಳಿಸುತ್ತದೆ. ಇದರಿಂದ ಸಾಕಷ್ಟು ಸಮಸ್ಯೆಗಳು ಉದ್ಭವ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

Most Read: ಏಳು ದಿನಗಳ ಕಾಲ ಬ್ರೇಕ್‌ಫಾಸ್ಟ್‌ಗೆ ಕೇವಲ ಮೊಟ್ಟೆಗಳನ್ನು ಮಾತ್ರ ತಿಂದ ಮಹಿಳೆಗೆ ಏನಾಯಿತು ಗೊತ್ತೇ?

ಆರಾಮದಾಯಕ ಬಟ್ಟೆಗಳನ್ನು ಆರಿಸಲು ಆದ್ಯತೆ ನೀಡಿ

ಆರಾಮದಾಯಕ ಬಟ್ಟೆಗಳನ್ನು ಆರಿಸಲು ಆದ್ಯತೆ ನೀಡಿ

ನೀವು ತೊಡುವ ಬಟ್ಟೆಗಳು ಸಹ ನಿಮಗೆ ಕಿರಿಕಿರಿಯನ್ನುಂಟುಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಬಿಗಿಯಾದ ಉಡುಪನ್ನು ಧರಿಸುವುದರಿಂದ ಬೇಸಿಗೆಯಲ್ಲಿ ಆದ್ರ್ರತೆ ಮತ್ತು ಶಾಖವನ್ನು ಹೆಚ್ಚಿಸುತ್ತದೆ. ಹಾರ್ಮೋನ್‍ಗಳ ವ್ಯತ್ಯಾಸಗಳಿಂದಲೂ ಅತಿಯಾದ ಬೆವರುವಿಕೆಯನ್ನು ಹೊಂದುವ ಸಾಧ್ಯತೆಗಳು ಹೆಚ್ಚು. ಈ ಕಾರಣಗಳಿಂದಾಗಿ ಗರ್ಭಿಣಿಯು ಅಧಿಕ ಬೆವರಿನ ಸಮಸ್ಯೆಯನ್ನು ಹೊಂದಿದ್ದರೆ ಮಗವಿಗೆ ಗಾಗೂ ತಾಯಿಗೆ ಆಂತರಿಕ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುವುದು ಅಥವಾ ಪ್ರಾರಂಭವಾಗುತ್ತದೆ.

ತೊಡುವ ಬಟ್ಟೆ

ತೊಡುವ ಬಟ್ಟೆ

ದಿನದಿಂದ ದಿನಕ್ಕೆ ಮಗುವಿನ ಬೆಳವಣಿಗೆ ಆಗುತ್ತಿದ್ದಂತೆ ತಾಯಿಯ ದೇಹದ ಗಾತ್ರವು ದೊಡ್ಡದಾಗುತ್ತಾ ಹೋಗುತ್ತದೆ. ಅಂತಹ ಸಂದರ್ಭದಲ್ಲಿ ತೊಡುವ ಬಟ್ಟೆ ಅಥವಾ ಆಯ್ಕೆ ಮಾಡುವ ಉಡುಪುಗಳು ಸಾಕಷ್ಟು ಸಡಿಲ ಹಾಗೂ ಗಾಳಿ ಆಡುವಂತೆ ಇರಬೇಕು. ಹೆಚ್ಚು ಶಾಖವನ್ನು ಹೀರಿಕೊಳ್ಳುವಂತಹ ಬಣ್ಣ ಮತ್ತು ಬಟ್ಟೆಯನ್ನು ಆಯ್ಕೆ ಮಾಡಬಾರದು. ಆದಷ್ಟು ಹತ್ತಿ ಬಟ್ಟೆಯ ಆಯ್ಕೆ ಮಾಡಿಕೊಳ್ಳಬೇಕು. ಹತ್ತಿ ಬಟ್ಟೆಯಲ್ಲಿ ತಂಪಾದ ಹಾಗೂ ಗಾಳಿಆಡುವಂತಹ ಅನುಭವ ನೀಡುತ್ತದೆ. ಹಗುರವಾಗಿರುವ ಹತ್ತಿ ಬಟ್ಟೆಗಳು ಆರಾಮದಾಯಕ ಅನುಭವ ನೀಡುತ್ತವೆ. ಪಾದ ಹಾಗೂ ಕಾಲುಗಳಲ್ಲಿ ಉರಿಯೂತ ಹಾಗೂ ನೋವುಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಮನೆಯಲ್ಲಿ ಓಡಾಡುವಾಗ ಹಿತವೆನಿಸುವಂತಹ ಹಗುರವಾದ ಮತ್ತು ಸಮತಟ್ಟಾದ ಚಪ್ಪಲಿಯ ಆಯ್ಕೆಯನ್ನು ಮರೆಯದಿರಿ.

ಭಾರ ಎತ್ತುವುದು ಹಾಗೂ ನಿಮ್ಮ ಪ್ರಯಾಣ ಎಚ್ಚರಿಕೆಯಿಂದ ಇರಬೇಕು

ಭಾರ ಎತ್ತುವುದು ಹಾಗೂ ನಿಮ್ಮ ಪ್ರಯಾಣ ಎಚ್ಚರಿಕೆಯಿಂದ ಇರಬೇಕು

ಮೂರನೇ ತ್ರೈಮಾಸಿಕಕ್ಕೆ ಕಾಲಿಡುತ್ತಿದ್ದಂತೆಯೇ ಗರ್ಭಿಣಿಯರ ದೇಹವು ಹೆಚ್ಚು ಸೂಕ್ಷ್ಮತೆಯನ್ನು ಪಡೆದುಕೊಂಡಿರುತ್ತದೆ. ಅಂತಹ ಸಮಯದಲ್ಲಿ ಒತ್ತಡದ ಕೆಲಸ ಹಾಗೂ ಭಾರ ಎತ್ತುವಂತಹ ಕೆಲಸ ಮಾಡುವುದರಿಂದ ಮಗುವಿನ ಮೇಲೆ ನೇರ ಪ್ರಭಾವ ಬೀರುವುದು. ಜೊತೆಗೆ ಆಂತರಿಕ ದೇಹದ ಆರೋಗ್ಯದಲ್ಲೂ ತೊಂದರೆ ಉಂಟಾಗುವುದು. ಮನೆಯಲ್ಲಿ ಹೆಚ್ಚು ಓಡಾಟದ ಕೆಲಸ ಮಾಡುವುದು, ಭಾರವಾದ ಚೀಲ ಅಥವಾ ವಸ್ತುವನ್ನು ಎತ್ತುವಂತಹ ಕೆಲಸವನ್ನು ಮಾಡಬಾರದು. ನಿಮಗೆ ಅಗತ್ಯ ವಸ್ತುಗಳನ್ನು ಎತ್ತುವಾಗ ಮನೆ ಮಂದಿಯ ಬಳಿ ಅಥವಾ ನಿಮ್ಮ ಹತ್ತಿರ ಇರುವ ವ್ಯಕ್ತಿಯಿಂದ ಸಹಾಯವನ್ನು ಪಡೆದುಕೊಳ್ಳಿ.

ಗರ್ಭಾವಸ್ಥೆಯ ಆರಂಭದಿಂದ ಅಂತ್ಯದ ವರೆಗೂ ಸಾಕಷ್ಟು ಕಾಳಜಿಯನ್ನು ನಿರ್ವಹಿಸಬೇಕಾಗುತ್ತದೆ. ದೂರದೂರದ ಸ್ಥಳಗಳಿಗೆ ಪದೇ ಪದೇ ಪ್ರಯಾಣ ಬೆಳೆಸುವುದು ಸೂಕ್ತವಲ್ಲ. ಇದರಿಂದಲೂ ಮಗುವಿನ ಆರೋಗ್ಯ ಹಾಳಾಗುವುದು. ಕೆಲವೊಮ್ಮೆ ದೈಹಿಕ ಒತ್ತಡ ಉಂಟಾಗುವುದರಿಂದಲೂ ಅಕಾಲಿಕ ಪ್ರಸವ ಉಂಟಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಆದಷ್ಟು ದೂರದ ಪ್ರದೇಶಕ್ಕೆ ಹಾಗೂ ಬಿಸಿಲಲ್ಲಿ ಓಡಾಡುವ ಕೆಲಸವನ್ನು ತಪ್ಪಿಸಿ. ಆದಷ್ಟು ಮನೆಯಲ್ಲಿಯೇ ವಿಶ್ರಾಂತಿ ಹಾಗೂ ಆರಾಮದಾಯಕ ಅನುಭವ ಹೊಂದಲು ಆದ್ಯತೆ ನೀಡಿ.

ವಿಶ್ರಾಂತಿಗೆ ನೀವು ಮೊದಲ ಆದ್ಯತೆ ನೀಡಬೇಕು

ವಿಶ್ರಾಂತಿಗೆ ನೀವು ಮೊದಲ ಆದ್ಯತೆ ನೀಡಬೇಕು

ಗರ್ಭಾವಸ್ಥೆ ಎನ್ನುವುದು ಅತ್ಯಂತ ಸೂಕ್ಷ್ಮ ಹಾಗೂ ವಿಶೇಷವಾದ ಹಂತವಾಗಿರುವುದರಿಂದ ಸಾಕಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳಬೇಕು. ಗರ್ಭಿಣಿಯರು ಸಹ ವಿಶ್ರಾಂತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಲಾಗುವುದು. ಅದರಲ್ಲೂ ವಿಶೇಷವಾಗಿ ಬೇಸಿಗೆಯ ಸಮಯದಲ್ಲಿ ಉಂಟಾಗುವ ಉರಿ, ಬೆವರಿನ ಕಿರಿಕಿರಿ ಹಾಗೂ ಆಯಾಸದ ಭಾವನೆಯು ಹೆಚ್ಚಾಗಿರುತ್ತದೆ. ಅಂತಹ ಸಮಯದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ, ಆದಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳಲು ಆದ್ಯತೆ ನೀಡಬೇಕು. ಇದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವು ಆರಾಮದಾಯಕ ಸ್ಥಿತಿಯಲ್ಲಿ ಇರುತ್ತದೆ. ನೀವು ಹೆಚ್ಚು ವಿಶ್ರಾಂತಿ ಪಡೆಯುವುದರಿಂದ ಮಗುವಿನ ಚಟುವಟಿಕೆ ಹೆಚ್ಚಾಗಿರುತ್ತದೆ. ಅಂತಹ ಸಂದರ್ಭದಲ್ಲಿ ನೀವು ಸಹ ಅದನ್ನು ಗಮನಿಸಬಹುದು ಅಥವಾ ಅನುಭವಿಸಬಹುದು. ನಿತ್ಯವೂ ಲಘುವಾದ ವ್ಯಾಯಾಮ, ಪೌಷ್ಠಿಕ ಆಹಾರ, ರಸ ಭರಿತ ಹಣ್ಣು-ತರಕಾರಿಗಳ ಸೇವನೆ, ಹಾಲು ಮತ್ತು ಮಜ್ಜಿಗೆಯ ಬಳಕೆ, ವೈದ್ಯರು ಸಲಹೆ ನೀಡಿರುವ ಔಷಧಗಳ ಸೇವನೆಗಳನ್ನು ಸೂಕ್ತವಾಗಿ ಅನುಸರಿಸಬೇಕು. ಆಗ ಗರ್ಭಾವಸ್ಥೆಯು ಹೆಚ್ಚು ಆನಂದದಾಯಕ ಹಾಗೂ ಸುಂದರವಾದ ಅನುಭವಗಳ ಮೂಲಕ ಕಳೆಯಬಹುದು.

Most Read: ಬಾಡಿ ಹೀಟ್ ಕಡಿಮೆ ಮಾಡಲು ಸೇವಿಸಬಹುದಾದ ಬೇಸಿಗೆಯ ಆಹಾರಗಳು ಮತ್ತು ಪಾನೀಯಗಳು

ಗರ್ಭಾವಸ್ಥೆಯಲ್ಲಿ ಕೈ-ಕಾಲುಗಳ ನೋವು

ಗರ್ಭಾವಸ್ಥೆಯಲ್ಲಿ ಕೈ-ಕಾಲುಗಳ ನೋವು

ಗರ್ಭಾವಸ್ಥೆಯಲ್ಲಿ ಕೈ-ಕಾಲುಗಳ ನೋವು, ಮರಗೆಟ್ಟುವಿಕೆ, ಒಣ ಕೆಮ್ಮು, ತಲೆ ಸುತ್ತು, ಆಯಾಸ, ಪಾದಗಳಲ್ಲಿ ಉರಿ, ಕಿರಿಕಿರಿಯ ಭಾವನೆಗಳು ಕಾಡುವುದು ಸಹಜ. ಅವೆಲ್ಲದಕ್ಕೂ ಪರಿಹಾರ ನೀಡುವ ಕ್ರಮವೆಂದರೆ ಮಾನಸಿಕ ಹಾಗೂ ದೈಹಿಕವಾಗಿ ಆದಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳುವುದು. ಮಾನಿಕವಾಗಿಯೂ ನೆಮ್ಮದಿ ಹಾಗೂ ಆರಾಮದಾಯಕ ಅನುಭವವನ್ನು ಹೊಂದಿದ್ದರೆ ದೈಹಿಕವಾಗಿ ಅನೇಕ ಸಮಸ್ಯೆಗಳನ್ನು ದೂರ ಇಡಬಹುದು. ಹಾಗೆಯೇ ದೈಹಿಕವಾಗಿಯೂ ಆರೋಗ್ಯವಾಗಿದ್ದರೆ ಮಾನಸಿಕವಾಗಿ ಯಾವುದೇ ಚಿಂತನೆ ಇರದು. ಹಾಗಾಗಿ ಸೂಕ್ತ ಹಾಗೂ ಆರಾಮದಾಯಕವಾದ ವಿಶ್ರಾಂತಿಗೆ ಹೆಚ್ಚಿನ ಆದ್ಯತೆಯನ್ನು ನೀಡಲು ಮರೆಯದಿರಿ. ಗರ್ಭಾವಸ್ಥೆ ಎನ್ನುವುದು ಮಹಿಳೆಯರಿಗೊಂದು ವಿಶೇಷವಾದ ಅನುಭವ ನೀಡುತ್ತದೆ. ಜೊತೆಗೆ ಜೀವನವನ್ನು ಶ್ರೇಷ್ಠ ಎನ್ನುವ ಭಾವನೆಯತ್ತ ಕೊಂಡೊಯ್ಯುವುದು. ಇಂತಹ ಒಂದು ವಿಶೇಷ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಹಾಗೂ ಆರೈಕೆಯನ್ನು ಕೈಗೊಳ್ಳುವುದು ಉತ್ತಮ. ಇದು ನಿಮಗೆ ಜೀವನ ಪರ್ಯಂತ ಸುಂದರ ನೆನಪು ಹಾಗೂ ಅನುಭವವಾಗಿ ಉಳಿಯುವಂತೆ ಮಾಡುವುದು.

English summary

Useful tips for Pregnant women health during summer

Being pregnant in one of the hottest seasons can be overwhelming. There sure are several downsides to being pregnant in the hot and sticky season, but there are a few things you can do to survive the summer while you are pregnant.
X
Desktop Bottom Promotion