For Quick Alerts
ALLOW NOTIFICATIONS  
For Daily Alerts

ವೈದ್ಯರ ಮೊದಲ ಭೇಟಿ ವೇಳೆ ಗರ್ಭಿಣಿಯರು ಕೇಳಬೇಕಾದ ಪ್ರಶ್ನೆಗಳು

|

ಗರ್ಭ ಧರಿಸಿದಾಗ ಮಹಿಳೆಯು ಸರ್ಗಕ್ಕೆ ಮೂರೇ ಗೇಣು ಎಂದು ಭಾವಿಸುವುದು ಸಹಜ. ಯಾಕೆಂದರೆ ಜೀವನದಲ್ಲಿ ಯಾವತ್ತೂ ಸಿಗದೆ ಇರುವಂತಹ ಸಂಭ್ರಮವು ಆಕೆಗೆ ಈ ಸಮಯದಲ್ಲಿ ಸಿಗುವುದು. ಅಂತಿಮವಾಗಿ ಗರ್ಭ ಧರಿಸಿಯೇ ಬಿಟ್ಟೆನಲ್ಲಾ ಎನ್ನುವಂತಹ ಸಂಭ್ರಮವು ಆಕೆಯಲ್ಲಿ ಇರುವುದು. ಆದರೆ ಗರ್ಭಧಾರಣೆ ಎನ್ನುವುದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ಇದಕ್ಕಾಗಿ ತುಂಬಾ ಶ್ರಮ ಬೇಕಾಗುತ್ತದೆ. ಕೆಲವೊಂದು ಸಲ ನಿಮಗೆ ಆನಂದಭಾಷ್ಪವು ಬಂದರೆ ಇನ್ನು ಕೆಲವೊಂದು ಸಲ ಖಿನ್ನತೆಗೆ ಒಳಗಾಗಿ ದುಃಖಿತರಾಗಬಹುದು. ಗರ್ಭಧಾರಣೆಯು ದೈಹಿಕ ಹಾಗೂ ಮಾನಸಿಕವಾಗಿ ಸವಾಲನ್ನೊಡ್ಡುವ ಸಮಯ. ಭಾವನಾತ್ಮಕವಾಗಿ ಕೆಲವೊಂದು ಏರಿಳಿತಗಳು ಖಂಡಿತವಾಗಿಯೂ ಒಂದು ಅಂತ್ಯವನ್ನು ಕಾಣಲಿದೆ. ಮಗುವಿನ ಮುಖವನ್ನು ಮೊದಲ ಸಲ ನೋಡಿದಾಗ ಖಂಡಿತವಾಗಿಯೂ ನೀವು ಎಲ್ನವನ್ನು ಮರೆತು ಆನಂದದಲ್ಲಿ ಮುಳುಗಿ ಹೋಗುವಿರಿ.

ಗರ್ಭಧಾರಣೆ ವೇಳೆ ಹಲವಾರು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಕಾಡುತ್ತಲಿರಬಹುದು. ಆದರೆ ಇಂದು ಪ್ರತಿಯೊಬ್ಬರು ಮಾಡುವಂತೆ ನೀವು ಕೂಡ ಆಧುನಿಕ ಯುಗದ ಮಹಿಳೆಯಾಗಿದ್ದರೆ ಆಗ ಖಂಡಿತವಾಗಿಯೂ ಇಂಟರ್ನೆಟ್ ನಲ್ಲಿ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತೀರಿ. ಆದರೆ ಈ ನಿಮ್ಮ 40 ವಾರಗಳ ಅವಧಿಯಲ್ಲಿ ವೈದ್ಯರ ಸಲಹೆ ಪಡೆಯುವುದು ಮುಖ್ಯ ಎಂದು ಈ ಲೇಖನದಲ್ಲಿ ಹೇಳುತ್ತೇವೆ. ನೀವು ಪ್ರಸೂತಿ ತಜ್ಞರನ್ನು ಮೊದಲ ಸಲ ಭೇಟಿಯಾಗಲು ಹೋರಬಹುದು.

Questions For Your First OB Appointment

ನಿಮಗೆ ಸ್ವಲ್ಪ ಮಟ್ಟಿನ ಆತಂಕದೊಂದಿಗೆ ಸಂಭ್ರಮವು ಮನೆ ಮಾಡಿದೆ. ಮೊದಲ ಅಲ್ಟ್ರಾಸೌಂಡ್, ಮೊದಲ ಹೃದಯಬಡಿತ...ಹೀಗೆ ಅಮೂಲ್ಯ ರತ್ನವನ್ನು ನೋಡಲು ನೀವು ಏನು ಬೇಕಿದ್ದರೂ ಮಾಡಬಲ್ಲಿರಿ. ಈ ಕೆಲವು ವಾರಗಳಲ್ಲಿ ನಿಮಗೆ ಹೆಚ್ಚಿನವು ಮೊದಲ ಅನುಭವವಾಗಿರುವುದು ಮತ್ತು ನೀವು ಇದನ್ನು ನೆನೆಸಿಕೊಂಡು ಮುಂದೊಂದು ದಿನ ಆನಂದಬಾಷ್ಪ ಹಾಕಲಿದ್ದೀರಿ. ಮೊದಲ ಸಲ ನೀವು ಪ್ರಸೂತಿ ತಜ್ಞರನ್ನು ಭೇಟಿಯಾದ ವೇಳೆ ಈ ಪ್ರಶ್ನೆಗಳನ್ನು ಅವರಿಗೆ ಕೇಳಬಹುದು.

ನಾನು ಇನ್ನು ಎಷ್ಟು ತೂಕ ಹೆಚ್ಚಿಸಿಕೊಳ್ಳಬೇಕು?

ನಾನು ಇನ್ನು ಎಷ್ಟು ತೂಕ ಹೆಚ್ಚಿಸಿಕೊಳ್ಳಬೇಕು?

ಗರ್ಭಧಾರಣೆ ಆಗಿದೆ ಎಂದ ಬಳಿಕ ಹೆಚ್ಚಿನ ಮಹಿಳೆಯರಿಗೆ ಚಿಂತೆಯಾಗುವುದು ಈ ವಿಚಾರದ ಬಗ್ಗೆ. ಗೂಗಲ್ ನಿಮಗೆ ಮೂಲ ಪ್ರಶ್ನೆಗಳಿಗೆ ಉತ್ತರ ನೀಡಬಹುದು. ಆದರೆ ತುಂಬಾ ಹತ್ತಿರದಿಂದ ನಿಮ್ಮನ್ನು ನೋಡಿರುವಂತಹ ಪ್ರಸೂತಿ ತಜ್ಞರು ಸೂಕ್ತ ಉತ್ತರ ನೀಡಬಲ್ಲರು.

ನಾನು ವ್ಯಾಯಾಮ ಮಾಡಬಹುದೇ?

ನಾನು ವ್ಯಾಯಾಮ ಮಾಡಬಹುದೇ?

ನೀವು ಯಾವಾಗಲೂ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು ಮತ್ತು ಈ ಸಮಯದಲ್ಲಿ ಜಿಮ್ ನಿಂದ ದೂರ ಉಳಿಯಬೇಕು ಎಂದು ನಿಮಗೆ ಅನಿಸುತ್ತಲಿದ್ದರೆ. ನಿಮಗೊಂದು ಅಚ್ಚರಿಯು ಎದುರಾಗಲಿದೆ. ಅದೇನೆಂದರೆ ವ್ಯಾಯಾಮವು ನಿಮಗೆ ಹಾಗೂ ನಿಮ್ಮ ಮಗುವಿಗೆ ಸುರಕ್ಷಿತ ಮಾತ್ರವಲ್ಲದೆ, ಇದು ತುಂಬಾ ಲಾಭಕಾರಿಯಾಗಿರಲಿದೆ. ನೀವು ಜಿಮ್ ನಲ್ಲಿ ಅತಿಯಾಗಿ ಭಾರ ಎತ್ತುವಂತಹ ವ್ಯಾಯಾಮವನ್ನು ಮಾಡಬಾರದು. ಆದರೆ ಸಾಮಾನ್ಯವಾದ ಕೆಲವು ವ್ಯಾಯಾಮ ಮಾಡಬಹುದು. ಇದರು ಆರೋಗ್ಯಕ್ಕೆ ಹಾಗೂ ದೇಹಕ್ಕೆ ತುಂಬಾ ಒಳ್ಳೆಯದು. ಇದರಿಂದ ನಿಮಗೆ ಹೆರಿಗೆ ಕೂಡ ಸಾಮಾನ್ಯವಾಗಿ ಆಗುವುದು.

Most Read: ಗರ್ಭಿಣಿಯಾಗಿರುವಾಗ ಹಸ್ತಮೈಥುನ- ನೀವು ತಿಳಿಯಲೇ ಬೇಕಾದ ಸಂಗತಿಗಳು

ತುರ್ತಾಗಿ ಅಥವಾ ತುರ್ತು ಇಲ್ಲದ ಸಂದರ್ಭದಲ್ಲಿ ನಾನು ಎಲ್ಲಿಗೆ ಭೇಟಿ ನೀಡಬೇಕು?

ತುರ್ತಾಗಿ ಅಥವಾ ತುರ್ತು ಇಲ್ಲದ ಸಂದರ್ಭದಲ್ಲಿ ನಾನು ಎಲ್ಲಿಗೆ ಭೇಟಿ ನೀಡಬೇಕು?

ವೈದ್ಯರ ಕ್ಲಿನಿಕ್ ನ ಸಮಯವು ಗರ್ಭದಲ್ಲಿರುವ ಮಗುವಿಗೆ ತಿಳಿದಿರದ ಕಾರಣದಿಂದಾಗಿ ನಿಮಗೆ ಯಾವುದೇ ತಡರಾತ್ರಿಯಲ್ಲೂ ಸಮಸ್ಯೆಯು ಕಾಣಿಸಿಕೊಳ್ಳಬಹುದು. ಇಂತಹ ಸಮಯದಲ್ಲಿ ನೀವು ಆದಷ್ಟು ಬೇಗನೆ ವೈದ್ಯರನ್ನು ಭೇಟಿಯಾಗಬೇಕು. ನೀವು ಪರೀಕ್ಷೆಗೆ ಹೋದ ವೇಳೆ ಆಸ್ಪತ್ರೆಯಲ್ಲಿ ಒಂದು ತುರ್ತು ದೂರವಾಣಿ ಸಂಖ್ಯೆ ನೀಡಿರುತ್ತಾರೆ. ಇದನ್ನು ಸಂಪರ್ಕಿಸಿದರೆ ನಿಮಗೆ ಸೇವೆಯು ಎಲ್ಲಾ ಸಮಯದಲ್ಲಿ ಲಭ್ಯವಿರುವುದು. ವೃತ್ತಿಪರರು ಕೂಡ ನೀವು ಇದ್ದಲ್ಲಿಗೆ ತಲುಪಿ, ನಿಮಗೆ ಹಾಗೂ ನಿಮ್ಮ ಮಗುವಿಗೆ ಬೇಕಿರುವಂತಹ ನೆರವನ್ನು ನೀಡುವರು.

Most Read: ಗರ್ಭಾವಸ್ಥೆಯಲ್ಲಿ ಹಲಸಿನ ಹಣ್ಣನ್ನು ಸೇವಿಸುವುದು ಒಳ್ಳೆಯದ್ದೇ?

ಆಹಾರಕ್ರಮ ಮತ್ತು ಜೀವನಶೈಲಿಯಲ್ಲಿ ಯಾವ ಬದಲಾವಣೆಗಳನ್ನು ಮಾಡಿಕೊಳ್ಳಬೇಕು?

ಆಹಾರಕ್ರಮ ಮತ್ತು ಜೀವನಶೈಲಿಯಲ್ಲಿ ಯಾವ ಬದಲಾವಣೆಗಳನ್ನು ಮಾಡಿಕೊಳ್ಳಬೇಕು?

ಮಗು ಆರೋಗ್ಯಕಾರಿಯಾಗಿ ಇರಬೇಕೆಂದರೆ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಆಲ್ಕೋಹಾಲ್ ಗೆ ಗುಡ್ ಬೈ ಹೇಳುವುದರೊಂದಿಗೆ ಧೂಮಪಾನ ಮುಕ್ತವಾಗಿರುವಂತಹ ಜೀವನ ಸಾಗಿಸಬೇಕು. ಆಹಾರ ವಿಚಾರಕ್ಕೆ ಬಂದರೆ ಆಗ ನೀವು ಜೀವನಪೂರ್ತಿ ತುಂಬಾ ಆರೋಗ್ಯಕಾರಿ ಎಂದು ಭಾವಿಸಿ ತಿಂದುಕೊಂಡು ಬಂದಿರುವಂತಹ ಆಹಾರವು ಈ ಸಮಯಲ್ಲಿ ಮಗುವಿಗೆ ಹಾನಿಯನ್ನು ಉಂಟು ಮಾಡಬಹುದು. ಗರ್ಭಧಾರಣೆ ವೇಳೆ ತಿನ್ನಬಾರದ ಕೆಲವೊಂದು ಆಹಾರಗಳ ಬಗ್ಗೆ ನಿಮಗೆ ವೈದ್ಯರು ಸೂಚಿಸಲಿರುವರು. ಈ ಬಗ್ಗೆ ಅವರು ನಿಮಗೆ ವಿವರಣೆ ಕೂಡ ನೀಡುವ ಕಾರಣದಿಂದಾಗಿ ಮುಂದಿನ ಸಲ ನೀವು ಅದನ್ನು ಸೇವಿಸುವ ಬದಲು ಕಡೆಗಣಿಸಬೇಕು.

ಕೆಲವೊಂದು ಔಷಧಿಗಳು ಸುರಕ್ಷಿತವೇ?

ಕೆಲವೊಂದು ಔಷಧಿಗಳು ಸುರಕ್ಷಿತವೇ?

ಸಾಮಾನ್ಯವಾಗಿ ತಲೆನೋವಿಗೆ ತೆಗೆದುಕೊಳ್ಳುವಂತಹ ಮಾತ್ರೆಯು ಗರ್ಭಧಾರಣೆ ಸಮಯದಲ್ಲಿ ಮಗುವಿನ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ನೀವು ಸೇವಿಸುವಂತಹ ಪ್ರತಿಯೊಂದು ಮಾತ್ರೆ ಹಾಗೂ ಔಷಧಿ ಬಗ್ಗೆ ವೈದ್ಯರೊಂದಿಗೆ ಚರ್ಚಿಸಬೇಕು. ಮಗುವಿಗೆ ಯಾವುದೇ ರೀತಿಯ ಹಾನಿಯಾಗದಂತೆ ವೈದ್ಯರು ನಿಮಗೆ ಬೇರೆ ಮಾತ್ರೆ ಅಥವಾ ಔಷಧಿಯನ್ನು ಸೂಚಿಸುವರು.

ಇದು ನಿಮಗೆ ನೀಡಿರುವಂತಹ ಐದು ಸಲಹೆಗಳು. ನಿಮ್ಮ ಮನಸ್ಸಿನಲ್ಲಿ ಇರುವಂತಹ ಪ್ರಶ್ನೆಗಳಿಗೆ ವೈದ್ಯರಿಂದ ಉತ್ತರ ಪಡೆಯಿರಿ. ಗರ್ಭಧಾರಣೆ ವೇಳೆ ನೆನಪಿನ ಶಕ್ತಿ ಕೂಡ ಕುಂದುವ ಕಾರಣದಿಂದಾಗಿ ಒಂದು ಪೆನ್ ತೆಗೆದುಕೊಂಡು ಕಾಗದದ ಮೇಲೆ ಬರೆದುಕೊಳ್ಳಿ. ಇದನ್ನು ಬಳಿಕ ನೀವು ವೈದ್ಯರಿಗೆ ತಿಳಿಸಿ. ಮೊದಲ ಸಲ ಪ್ರಸೂತಿತಜ್ಞರನ್ನು ಭೇಟಿಯಾಗುವ ವೇಳೆ ಯಾವುದೇ ಪ್ರಶ್ನೆಗಳು ಬಾಕಿ ಉಳಿಯದಂತೆ ನೋಡಿಕೊಳ್ಳುವುದು ಅತೀ ಅಗತ್ಯವಾಗಿದೆ.

English summary

Questions For Your First OB Appointment

While you wait for your first OB appointment, you're going to be filled with excitement with a dash of anxiety. Questions regarding weight, exercise and other concerns lingering on your mind right now have you to be cleared, and this list comes in handy when you're prepping for your first OB appointment.
X
Desktop Bottom Promotion