For Quick Alerts
ALLOW NOTIFICATIONS  
For Daily Alerts

ಗರ್ಭದ ಚಲನೆಯ ಮೂಲಕ ಮಗುವಿನ ಲಿಂಗವನ್ನು ಊಹಿಸಿ

|

ಅನೇಕ ಹೊರದೇಶಗಳಲ್ಲಿ ತಾಯಿಯ ಗರ್ಭದಲ್ಲಿರುವಾಗಲೇ ಮಗುವಿನ ಲಿಂಗವನ್ನು ತಿಳಿಸಲಾಗುತ್ತದೆ.ಆದರೆ ಭಾರತದಲ್ಲಿ ಭ್ರೂಣದ ಲಿಂಗವನ್ನು ತಿಳಿಯುವುದು ಅಕ್ರಮವಾಗಿದೆ.ಭ್ರೂಣ ಹತ್ಯೆಯಂತಹ ಕೆಟ್ಟ ಪದ್ಧತಿಯನ್ನು ತಡೆಯುವುದಕ್ಕೋಸ್ಕರ ಮಗುವಿನ ಲಿಂಗವನ್ನು ಮೊದಲೇ ತಿಳಿಸುವುದನ್ನು ನಿರ್ಬಂಧಿಸಲಾಗಿದೆ.ಈ ರೀತಿಯ ಸಾಮಾಜಿಕ ಬೇಜವಾಬ್ದಾರಿತನವನ್ನು ನಾವು ಖಂಡಿತ ತಡೆಯಬೇಕು.ಆದಾಗ್ಯೂ ಮಗು ತಾಯಿಯ ಹೊಟ್ಟೆಯಲ್ಲಿರುವಾಗಲೇ ಸಂತೋಷಕ್ಕೋಸ್ಕರ,ಫನ್ ಗೋಸ್ಕರ ಯಾವ ಮಗು ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದಲ್ಲಿ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.ತಾಯಿಯು ತನ್ನ ಹೊಟ್ಟೆಯಲ್ಲಿರುವ ಮಗುವಿನ ಚಲನೆಯನ್ನು ಗಮನಿಸಿ ಯಾವ ಮಗು ಎಂಬುದನ್ನು ಊಹಿಸಬಹುದು ಎನ್ನಲಾಗುತ್ತದೆ. ಹಾಗಿದ್ದರೆ ನಿಮ್ಮ ಬೇಬಿ ಬಂಪ್ ಏನೆನ್ನುತ್ತದೆ ?ಇಲ್ಲಿ ನೋಡೋಣ ಬನ್ನಿ.

Predict Gender By Baby Movements In The Womb

ನಿಮ್ಮ ಮಗುವಿನ ಚಲನೆಯಿಂದ ಯಾವ ಮಗು ಎಂಬುದನ್ನು ಕಂಡುಕೊಳ್ಳಬಹುದು ಎಂಬುದು ನಿಜ.ಆದರೆ ವೈಜ್ಞಾನಿಕವಾಗಿ ಇದನ್ನು ಎಷ್ಟರಮಟ್ಟಿಗೆ ನಂಬಬಹುದು ಎಂಬುದು ಕೂಡ ಅಷ್ಟೇ ಮುಖ್ಯವಾಗುತ್ತದೆ.ಭ್ರೂಣದ ಚಲನೆಯ ಮೂಲಕ ಹೇಗೆ ಮಗುವಿನ ಲಿಂಗವನ್ನು ಅಂದಾಜಿಸಬಹುದು ಎಂಬುದನ್ನು ಇಲ್ಲಿ ಪಟ್ಟಿಮಾಡಲಾಗಿದೆ ಓದಿ ನೋಡಿ.

ಮಗುವಿನ ಚಲನೆ ಬೇಗ ಕಂಡುಬಂದಲ್ಲಿ ಅದು ಗಂಡು ಮಗು

ಮಗುವಿನ ಚಲನೆ ಬೇಗ ಕಂಡುಬಂದಲ್ಲಿ ಅದು ಗಂಡು ಮಗು

ಸಾಮಾನ್ಯವಾಗಿ ಭ್ರೂಣದ ಚಲನೆಯನ್ನು 20 ನೇ ವಾರದಲ್ಲಿ ತಾಯಿಯು ಸರಿಯಾಗಿ ಗ್ರಹಿಸಬಲ್ಲಳು,ಆದರೂ ಕೆಲವು ತಾಯಂದಿರು ತಮ್ಮ 16 ನೇ ವಾರದಲ್ಲೇ ಮಗುವಿನ ಚಲನೆಯನ್ನು ಗ್ರಹಿಸಬಲ್ಲರು.ಈ ರೀತಿ ಮೊದಲೇ ಮಗುವಿನ ಚಲನೆಯನ್ನು ತಾಯಿಯು ಗ್ರಹಿಸುವಷ್ಟು ಮಗು ಚಲಿಸುತ್ತಿದ್ದಲ್ಲಿ ಇದನ್ನು ಗಂಡು ಮಗು ಎಂದು ಊಹಿಸಬಹುದು.

Most Read: ರಾತ್ರಿ ಮಲಗುವ ಮುನ್ನ, ಹೀಗೆ ಮಾಡಿದರೆ, ಮುಂಜಾನೆ ಎದ್ದಾಗ ಮುಖ ಕಾಂತಿಯುತವಾಗಿರುತ್ತದೆ

ಮಗು ಹೆಚ್ಚು ಚಟುವಟಿಕೆಯಿಂದಿದ್ದರೆ ಅದು ಹೆಣ್ಣು

ಮಗು ಹೆಚ್ಚು ಚಟುವಟಿಕೆಯಿಂದಿದ್ದರೆ ಅದು ಹೆಣ್ಣು

ಮಗುವು ಭ್ರೂಣದಲ್ಲಿ ಲವಲವಿಕೆಯಿಂದಿದ್ದು ಹೆಚ್ಚು ಚಲನೆಯಿದ್ದರೆ ಅದನ್ನು ಹೆಣ್ಣು ಮಗು ಎಂದು ಹೇಳಲಾಗುತ್ತದೆ. ಹೆಣ್ಣು ಭ್ರೂಣವು ಗಂಡು ಭ್ರೂಣಕ್ಕಿಂತ ಹೆಚ್ಚು ಬಲಯುತವಾಗಿರುತ್ತದೆ ಎಂಬುದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ.ಹೆಣ್ಣು ಭ್ರೂಣವು xx ವರ್ಣತಂತು (ಕ್ರೋಮೋಸೋಮ್ ) ಹೊಂದಿದ್ದು ಗಂಡು ಭ್ರೂಣಕ್ಕಿಂತ ಹೆಚ್ಚು ಅಚಲವಾಗಿರುತ್ತದೆ ಎನ್ನಲಾಗುತ್ತದೆ. ಇದರಿಂದಾಗಿಯೇ ಹೆಣ್ಣು ಮಗು ಗರ್ಭದಲ್ಲಿ ಗಂಡು ಮಗುವಿಗಿಂತ ಹೆಚ್ಚು ಚಟುವಟಿಕೆಯಿಂದ ಚಲಿಸುತ್ತದೆ.ಸಾಮಾನ್ಯವಾಗಿ ಗರ್ಭದಲ್ಲಿರುವ ಮಗು ಅರ್ಧ ಗಂಟೆಯಲ್ಲಿ ಮೂರು ಬಾರಿ ಚಲಿಸುತ್ತದೆ. ಅದಕ್ಕಿಂತ ಹೆಚ್ಚು ಬಾರಿ ಸರಿದಾಡುವುದು ಗಮನಕ್ಕೆ ಬಂದರೆ ಬಹುಶಃ ಅದು ಹೆಣ್ಣು ಮಗುವಿರಬಹುದು ಎಂದು ಊಹಿಸಬಹುದು.

Most Read: ಗರ್ಭಿಣಿಯರು ಮಶ್ರೂಮ್ ತಿನ್ನಬಹುದೇ? ಇದರಿಂದ ಏನಾದರೂ ತೊಂದರೆ ಇದೆಯೇ?

ಗಂಡು ಮಗು ಗರ್ಭದಲ್ಲಿ ಸರಿದಾಡುವುದಕ್ಕಿಂತ ಹೆಚ್ಚು(ಕಿಕ್) ಒದೆಯುತ್ತದೆ

ಗಂಡು ಮಗು ಗರ್ಭದಲ್ಲಿ ಸರಿದಾಡುವುದಕ್ಕಿಂತ ಹೆಚ್ಚು(ಕಿಕ್) ಒದೆಯುತ್ತದೆ

ಮಗು ಭ್ರೂಣದಲ್ಲಿರುವಾಗ ಚಲಿಸುತ್ತಿರುವುದು ಮತ್ತು ಒದೆಯುತ್ತಿರುವುದನ್ನು ಕಂಡುಹಿಡಿಯುವುದು ಸುಲಭ.ಹೆಣ್ಣು ಮಗು ಹೆಚ್ಚು ಚಲಿಸಿದರೆ ಗಂಡು ಮಗುವಾಗಿದ್ದಲ್ಲಿ ಗರ್ಭದಲ್ಲಿರುವಾಗಲೇ ಫೂಟ್ ಬಾಲ್ ಆಟಕ್ಕೆ ಅಭ್ಯಾಸ ಪ್ರಾರಂಭಿಸಿರುತ್ತದೆ.ಅಂದರೆ ಗಂಡು ಮಗು ಹೆಣ್ಣು ಮಗುವಿಗಿಂತ ಹೆಚ್ಚು ಕಿಕ್ ಮಾಡುತ್ತದೆ ಎನ್ನಲಾಗುತ್ತದೆ.ಅದಲ್ಲದೆ ಮಗುವಿನ ಚಲನೆಯು ಭ್ರೂಣದ ಅಳವಡಿಕೆ ಮತ್ತು ಪ್ಲಾಸೆಂಟಾದ ಸ್ಥಾನದ ಮೇಲೆ ಅವಲಂಬಿಸಿರುತ್ತದೆ. ಆದ್ದರಿಂದ ಮಗುವಿನ ಲಿಂಗವನ್ನು ಭ್ರೂಣದ ಚಲನೆಯ ಮೂಲಕ ಪತ್ತೆ ಹಚ್ಚುವುದನ್ನು ಕೇವಲ ಫನ್ ಆಗಿ ತೆಗೆದುಕೊಳ್ಳಿ, ಇದೇ ನೂರಕ್ಕೆ ನೂರರಷ್ಟು ಸತ್ಯವಾಗಬೇಕು ಎಂದೇನಿಲ್ಲ.

English summary

Predict Gender By Baby Movements In The Womb

In most countries abroad, it is a common practice to reveal the gender of the child that is in the mother's womb. However, it is illegal in India due to the evil practice of female foeticide. We must refrain from such socially irresponsible practices but if you want to predict your baby's gender just for fun, then we can help you. Did you know that baby movements in the womb are a huge factor in predicting the gender of the baby?
X
Desktop Bottom Promotion