For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾಗಿರುವಾಗ ಹಸ್ತಮೈಥುನ- ನೀವು ತಿಳಿಯಲೇ ಬೇಕಾದ ಸಂಗತಿಗಳು

|

ಹಸ್ತಮೈಥುನ ಎಂದ ಕೂಡಲೇ ನಗುವವರೇ ಹೆಚ್ಚು. ಅದರ ಬಗ್ಗೆ ಸರಿಯಾದ ಜ್ಞಾನ ಹಾಗೂ ತಿಳುವಳಿಕೆ ಇಲ್ಲದೆ ಇರುವಂತಹ ವ್ಯಕ್ತಿಗಳು ಏನೇನು ಕಥೆಗಳನ್ನು ಕಟ್ಟಿ ಅದನ್ನು ಒಂದು ಪಾಪ ಎನ್ನುವಂತೆ ಬಿಂಬಿಸಿದ್ದಾರೆ. ಆದರೆ ನಿಜವಾಗಿಯೂ ಹಸ್ತಮೈಥುನದಿಂದಾಗಿ ಹಲವಾರು ಆರೋಗ್ಯ ಲಾಭಗಳು ಇವೆ. ಈ ಬಗ್ಗೆ ನಾವು ಇದೇ ವಿಭಾಗದಲ್ಲಿ ನಿಮಗೆ ಈಗಾಗಲೇ ತಿಳಿಸಿದ್ದೇವೆ. ಪುರುಷರು ಹೆಚ್ಚಾಗಿ ಹಸ್ತಮೈಥುನ ಮಾಡಿಕೊಳ್ಳುವರು ಎಂದು ಹೇಳಲಾಗುತ್ತದೆ. ಆದರೆ ಮಹಿಳೆಯರು ಕೂಡ ಹಸ್ತಮೈಥುನ ಮಾಡುವರು. ಆದರೆ ಗರ್ಭಿಣಿಯರು ಹಸ್ತಮೈಥುನ ಮಾಡಿಕೊಳ್ಳುವುದು ಸರಿಯೇ ಅಥವಾ ತಪ್ಪೇ ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಹಸ್ತಮೈಥುನ ಎನ್ನುವುದು ಸಹಜ ನೈಸರ್ಗಿಕ ಕ್ರಿಯೆ. ಆದರೆ ಇದನ್ನು ಒಂದು ಚಟ ಎಂದು ಪರಿಗಣಿಸಿರುವ ಕಾರಣದಿಂದಾಗಿ ಆ ವಿಚಾರವಾಗಿ ಚರ್ಚೆಗಳು ನಡೆದಿರುವುದು ತುಂಬಾ ಕಡಿಮೆ. ಇದೇ ಕಾರಣದಿಂದಾಗಿ ಗರ್ಭಿಣಿ ಮಹಿಳೆಯರು ಹಸ್ತಮೈಥುನ ಮಾಡಿಕೊಳ್ಳುವುದು ಸುರಕ್ಷಿತವೇ ಎಂದು ತಿಳಿಯಲು ಚರ್ಚೆಯಲ್ಲಿ ಕೂಡ ಭಾಗಿಯಾಗುವುದಿಲ್ಲ. ಈ ವಿಚಾರದ ಬಗ್ಗೆ ಅವರನ್ನು ಕತ್ತಲಲ್ಲೇ ಇಟ್ಟಿರುವ ಕಾರಣದಿಂದಾಗಿ ಅವರು ತಮ್ಮ ಆಸೆಯಲ್ಲಿ ಅಲ್ಲೇ ಅದುಮಿಟ್ಟುಕೊಳ್ಳುವರು. ಗರ್ಭಧಾರಣೆ ವೇಳೆ ಹಸ್ತಮೈಥುನ ಮಾಡಿಕೊಳ್ಳಬಹುದೇ ಎನ್ನುವ ಪ್ರಶ್ನೆಗೆ ಹೌದು ಎನ್ನುವ ಉತ್ತರ ಬರುವುದು. ಇದು ನೈಸರ್ಗಿಕ ಮತ್ತು ಸುರಕ್ಷಿತವಾಗಿರುವುದು. ತುಂಬಾ ಅಪಾಯಕಾರಿ ಗರ್ಭಧಾರಣೆಗೆ ಒಳಗಾಗಿರದೇ ಇದ್ದರೆ ಇದು ಖಂಡಿತವಾಗಿಯೂ ಸುರಕ್ಷಿತವಾಗಿರುವುದು...

ಗರ್ಭಧಾರಣೆ ವೇಳೆ ಹಸ್ತಮೈಥುನ ಮಾಡಿಕೊಳ್ಳುವುದು ಸುರಕ್ಷಿತವೇ?

ಗರ್ಭಧಾರಣೆ ವೇಳೆ ಹಸ್ತಮೈಥುನ ಮಾಡಿಕೊಳ್ಳುವುದು ಸುರಕ್ಷಿತವೇ?

ಗರ್ಭಧಾರಣೆ ವೇಳೆ ಹಾರ್ಮೋನು ವೈಪರಿತ್ಯದಿಂದಾಗಿ ದೇಹದಲ್ಲಿ ಕಾಮಾಸಕ್ತಿಯು ಹೆಚ್ಚಾಗುವುದನ್ನು ಕೆಲವು ಮಹಿಳೆಯರಲ್ಲಿ ಕಾಣಬಹುದಾಗಿದೆ. ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟವು ಏರಿಕೆಯಾಗುವ ಕಾರಣದಿಂದಾಗಿ ಲೈಂಗಿಕ ಆಸೆಯು ವೃದ್ಧಿಸುವುದು. ಹಸ್ತಮೈಥುನ ಅಥವಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಈ ಸಮಯದಲ್ಲಿ ಸಹಜ ಕ್ರಿಯೆಯಾಗಿದೆ. ಸ್ನಾಯುಗಳ ಸಂಕೋಚನದಿಂದಾಗಿ ನೀವು ಪರಾಕಾಷ್ಠೆ ತಲುಪಿದ ಬಳಿಕ ಮಧ್ಯಮ ಮಟ್ಟದ ಸೆಳೆತ ಕಾಣಿಸಿಕೊಳ್ಳಬಹುದು. ಬ್ರಾಕ್ಸ್ಟನ್ ಹಿಕ್ಸ್ ಕುಗ್ಗುವಿಕೆ ಉಂಟು ಮಾಡುವುದು, ಇದು ಕಡಿಮೆಯಾಗುವುದು ಮತ್ತು ಅಂತಿಮವಾಗಿ ನಿಲ್ಲುವುದು. ತುಂಬಾ ಬಳಲಿಕೆ ಮತ್ತು ನಿಶ್ಯಕ್ತಿಯಿಂದಾಗಿ ಗರ್ಭಿಣಿಯರು ಲೈಂಗಿಕ ಕ್ರಿಯೆ ಮತ್ತು ಹಸ್ತಮೈಥುನದಲ್ಲಿ ತಮ್ಮ ಆಸಕ್ತಿ ಕಳೆದುಕೊಳ್ಳಬಹುದು.

Most Read:ಗರ್ಭಿಣಿಯಾಗಿರುವಾಗ ಸೆಕ್ಸ್: ಇಂತಹ ಸಮಯದಲ್ಲಿ ಕೇಳಲಾಗುವ ಸಾಮಾನ್ಯ ಪ್ರಶ್ನೆಗಳು

ಗರ್ಭಿಣಿಯರು ಹಸ್ತಮೈಥುನ ಮಾಡಿಕೊಳ್ಳಲು ಕಾರಣಗಳು

ಗರ್ಭಿಣಿಯರು ಹಸ್ತಮೈಥುನ ಮಾಡಿಕೊಳ್ಳಲು ಕಾರಣಗಳು

ಗರ್ಭಧಾರಣೆ ವೇಳೆ ಹಸ್ತಮೈಥುನ ಮಾಡಿಕೊಳ್ಳುವುದರಿಂದ ಸಿಗುವ ಲಾಭಗಳನ್ನು ವಿವರಿಸಲು ಸಾಧ್ಯವಿಲ್ಲ. ಇದರಲ್ಲಿ ಕೆಲವೊಂದು ಈ ರೀತಿಯಾಗಿ ಇದೆ...

ಒತ್ತಡ ನಿವಾರಣೆ

ಒತ್ತಡ ನಿವಾರಣೆ

ಹಸ್ತಮೈಥುನ ಬಳಿಕ ನೀವು ಪರಾಕಾಷ್ಠೆ ತಲುಪಿದ ವೇಳೆ ಆಕ್ಸಿಟಾಸಿನ್ ಎನ್ನುವುದು ದೇಹದಲ್ಲಿ ಬಿಡುಗಡೆಯಾಗುವುದು. ಇದು ನೈಸರ್ಗಿಕ ಒತ್ತಡ ನಿವಾರಕವಾಗಿದೆ.

ಗರ್ಭಧಾರಣೆ ವೇಳೆ ಪರಾಕಾಷ್ಠೆಯು ಉತ್ತಮವಾಗಿರುವುದು

ಗರ್ಭಧಾರಣೆ ವೇಳೆ ಪರಾಕಾಷ್ಠೆಯು ಉತ್ತಮವಾಗಿರುವುದು

ಸಾಮಾನ್ಯ ಪರಾಕಾಷ್ಠೆಗಿಂತ ಗರ್ಭಧಾರಣೆ ವೇಳೆ ಉಂಟಾಗುವ ಪರಾಕಾಷ್ಠೆಯು ಅದ್ಭುತವಾಗಿರುವುದು. ಇದು ಇನ್ನಷ್ಟು ಖುಷಿಯನ್ನು ನೀಡುವುದು.

ಇದು ಲೈಂಗಿಕ ಕ್ರಿಯೆಗೆ ಪರ್ಯಾಯ

ಇದು ಲೈಂಗಿಕ ಕ್ರಿಯೆಗೆ ಪರ್ಯಾಯ

ಹೊಟ್ಟೆ ದೊಡ್ಡದಾಗುತ್ತಾ ಇರುವುದು ಮತ್ತು ಕೆಲವೊಂದು ವೈದ್ಯಕೀಯ ಸ್ಥಿತಿಯಿಂದಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗದಂತೆ ತಡೆಯಬಹುದು ಅಥವಾ ಕಷ್ಟವಾಗಬಹುದು. ಈ ವೇಳೆ ಹಸ್ತಮೈಥುನವು ನೆರವಿಗೆ ಬರುವುದು.

Most Read:ಗಂಡನಿಗೆ ಶೀತ-ನಗಡಿ ಇರುವಾಗ ಸೆಕ್ಸ್ ನಡೆಸುವುದು ಎಷ್ಟು ಸೂಕ್ತ?

ಗರ್ಭಧಾರಣೆಯ ಸಮಸ್ಯೆಗಳನ್ನು ತಡೆಯುವುದು

ಗರ್ಭಧಾರಣೆಯ ಸಮಸ್ಯೆಗಳನ್ನು ತಡೆಯುವುದು

ಗರ್ಭಧಾರಣೆ ವೇಳೆ ಕೆಲವೊಂದು ಸಮಸ್ಯೆಗಳು ಕಾಡುವುದು. ಇದರಲ್ಲಿ ಮಾರ್ನಿಂಗ್ ಸಿಕ್ನೆಸ್, ಪಾದಗಳು ಊತ, ಬೆನ್ನು ನೋವು ಇತ್ಯಾದಿ. ಈ ಎಲ್ಲಾ ಸಮಸ್ಯೆಗಳಿಗೆ ಪರಾಕಾಷ್ಠೆಯು ನೈಸರ್ಗಿಕ ನೋವು ನಿವಾರಕವಾಗಿದೆ.

ನಿದ್ರಿಸಲು ನಿಮಗೆ ನೆರವಾಗುವುದು

ನಿದ್ರಿಸಲು ನಿಮಗೆ ನೆರವಾಗುವುದು

ಹೊಟ್ಟೆ ಬೆಳೆಯುತ್ತಿರುವ ಕಾರಣದಿಂದಾಗಿ ನಿದ್ರೆಗೆ ದೊಡ್ಡ ಸಮಸ್ಯೆಯಾಗುವುದು. ಈ ವೇಳೆ ನೀವು ಹಸ್ತಮೈಥುನದಿಂದ ಪರಾಕಾಷ್ಠೆ ತಲುಪಿ ರಕ್ತದೊತ್ತಡ ಕಡಿಮೆ ಮಾಡಿಕೊಳ್ಳಬಹುದು ಮತ್ತು ಎಂಡ್ರೊಪಿನ್ ಬಿಡುಗಡೆಯಿಂದಾಗಿ ನಿದ್ರೆಗೆ ನೆರವಾಗುವುದು.

ಹೆರಿಗೆ ಸುಲಭವಾಗಿಸುವುದು

ಹೆರಿಗೆ ಸುಲಭವಾಗಿಸುವುದು

ಬಲಿಷ್ಠವಾಗಿರುವ ಶ್ರೋಣಿಯ ಪದರವು ಹೆರಿಗೆ ವೇಳೆ ತುಂಬಾ ನೆರವಿಗೆ ಬರುವುದು. ಹಸ್ತಮೈಥುನ ಮತ್ತು ಪರಾಕಾಷ್ಠೆಯು ಶ್ರೋಣಿಯ ಪದರವನ್ನು ಬಲಪಡಿಸುವುದು.

ದೇಹವನ್ನು ಪ್ರೀತಿಸಲು ನೆರವಾಗುವುದು

ದೇಹವನ್ನು ಪ್ರೀತಿಸಲು ನೆರವಾಗುವುದು

ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗುವ ಕಾರಣದಿಂದಾಗಿ ನೀವು ಅದರೊಂದಿಗಿನ ಸಂಪರ್ಕ ಕಡಿದು ಕೊಳ್ಳುವಂತೆ ಆಗಬಹುದು. ಹಸ್ತಮೈಥುನ ಮತ್ತು ನಿಮ್ಮನ್ನು ನೀವು ತೋರ್ಪಡಿಸಿಕೊಳ್ಳುವ ಕಾರಣದಿಂದಾಗಿ ನೀವು ಮತ್ತೆ ದೇಹದೊಂದಿಗೆ ಸಂಪರ್ಕ ಸಾಧಿಸುವಿರಿ ಮತ್ತು ಅದನ್ನು ಪ್ರೀತಿಸಲು ಆರಂಭಿಸುವಿರಿ.

ಗರ್ಭಿಣಿಯರಿಗೆ ಹಸ್ತಮೈಥುನದ ಭಿನ್ನತೆಗಳು

ಗರ್ಭಿಣಿಯರಿಗೆ ಹಸ್ತಮೈಥುನದ ಭಿನ್ನತೆಗಳು

ಈ ಎಲ್ಲಾ ರೀತಿಯ ಲಾಭಗಳು ನಿಮಗೆ ಸಿಗುವ ಕಾರಣದಿಂದಾಗಿ ನಿಮಗೋಸ್ಕರ ಅಗತ್ಯವಿರುವಂತಹ ವಿಶ್ರಾಂತಿ ಹಾಗೂ ಸ್ವಪ್ರೀತಿಯನ್ನು ಖಂಡಿತವಾಗಿಯೂ ನೀಡುವಿರಿ. ಕೆಲವೊಂದು ಭಿನ್ನತೆಗಳಿಂದಾಗಿ ಹಸ್ತಮೈಥುನದ ಅನುಭವವನ್ನು ಮತ್ತಷ್ಟು ಉತ್ತಮವಾಗಿಸಬಹುದು.

Most Read:ದೇವರು ಕನಸಿನಲ್ಲಿ ಬಂದರೆ, ಇದರ ಅರ್ಥ ಏನು ಗೊತ್ತೇ?

ಸೆಕ್ಸ್ ಆಟಿಕೆ ಬಳಸಿ

ಸೆಕ್ಸ್ ಆಟಿಕೆ ಬಳಸಿ

ಗರ್ಭಧಾರಣೆ ವೇಳೆ ಸೆಕ್ಸ್ ಆಟಿಕೆಗಳನ್ನು ಬಳಸಿಕೊಳ್ಳುವುದು ನಿಮಗೆ ಹಾಗೂ ಮಗುವಿಗೆ ತುಂಬಾ ಸುರಕ್ಷಿತವಾಗಿರುವುದು. ನೀವು ವಯಬ್ರೇಟರ್ ಬಳಸಿಕೊಂಡು ಸ್ವಲ್ಪ ಮಟ್ಟಿಗೆ ನಿಮ್ಮನ್ನು ಉತ್ತೇಜಿಸಿಕೊಳ್ಳಬಹುದು.

ಸೆಕ್ಸ್ ಆಟಿಕೆಗಳು ಸ್ವಚ್ಛವಾಗಿರಲಿ

ಸೆಕ್ಸ್ ಆಟಿಕೆಗಳು ಸ್ವಚ್ಛವಾಗಿರಲಿ

ಯಾವುದೇ ರೀತಿಯ ಸೋಂಕುಗಳು ಬರದಂತೆ ತಡೆಯಲು ನೀವು ಸೆಕ್ಸ್ ಆಟಿಕೆಗಳನ್ನು ಶುದ್ಧ ಹಾಗೂ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿರುವುದು. ಯಾಕೆಂದರೆ ನಿಮ್ಮ ಹೊಟ್ಟೆಯಲ್ಲಿ ಈಗ ಮಗು ಕೂಡ ಇದ್ದು, ಅದರ ಆರೋಗ್ಯದ ಕಡೆಗೂ ನೀವು ಗಮನಹರಿಸಬೇಕಾಗಿದೆ. ನೀವು ಇದನ್ನು ಬಿಸಿ ನೀರು ಮತ್ತು ಸೋಪ್ ಹಾಕಿ ತೊಳೆದ ಬಳಿಕ ಒಣಗಿಸಿ, ಒಣವಾಗಿರುವ ಜಾಗದಲ್ಲಿ ಇಟ್ಟುಬಿಡಿ.

ಲ್ಯೂಬ್ರಿಕೆಂಟ್ ಬಳಸಿ

ಲ್ಯೂಬ್ರಿಕೆಂಟ್ ಬಳಸಿ

ಸೆಕ್ಸ್ ಆಟಿಕೆ ಅಥವಾ ಕೈಬೆರಳನ್ನು ನೀವು ಬಳಸಿಕೊಳ್ಳುವ ಮೊದಲು ಸರಿಯಾದ ರೀತಿಯ ಲ್ಯೂಬ್ರಿಕೆಂಟ್ ಬಳಸಿ. ಹೆಚ್ಚಿನ ಮಹಿಳೆಯರಲ್ಲಿ ಯೋನಿಯು ಒಣಗುವಂತಹ ಸಮಸ್ಯೆಯು ಸಾಮಾನ್ಯವಾಗಿರುವುದು ಮತ್ತು ಲ್ಯೂಬ್ರಿಕೆಂಟ್ ಹಚ್ಚಿಕೊಳ್ಳುವ ಕಾರಣದಿಂದಾಗಿ ನಿಮ್ಮ ಅನುಭವವನ್ನು ಮತ್ತಷ್ಟು ಉತ್ತಮವಾಗಿಸುವುದು.

ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ

ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ

ದೇಹದಲ್ಲಿ ಕೆಲವೊಂದು ರೀತಿಯ ಬದಲಾವಣೆಗಳು ಆಗಿರುವ ಕಾರಣದಿಂದಾಗಿ ಹಸ್ತಮೈಥುನದ ಅನುಭವವು ಹಿಂದಿಗಿಂತ ಸ್ವಲ್ಪ ಅಥವಾ ತುಂಬಾ ಭಿನ್ನವಾಗಿ ಇರಬಹುದು. ಕೆಲವೊಂದು ನಿಮಗೆ ಅಷ್ಟು ಖುಷಿಯನ್ನು ನೀಡದೇ ಇರಬಹುದು ಅಥವಾ ಹಿಂದೆ ಖುಷಿ ನೀಡದೆ ಇದ್ದದ್ದು ಈಗ ಖುಷಿ ನೀಡಬಹುದು. ಜನನೇಂದ್ರಿಯದ ಭಾಗಕ್ಕೆ ಹೆಚ್ಚಿನ ರಕ್ತಸಂಚಾರವು ಆಗುವ ಕಾರಣದಿಂದಾಗಿ ಅದು ತುಂಬಾ ಸೂಕ್ಷ್ಮವಾಗಿರುವದು ಮತ್ತು ಸರಿಯಾದ ತೀವ್ರತೆ ಮತ್ತು ಸ್ಪರ್ಶದಿಂದ ನೀವು ಹಸ್ತಮೈಥುನದಲ್ಲಿ ತೊಡಗಿಕೊಳ್ಳುವುದು ಅತೀ ಮುಖ್ಯವಾಗಿರುವುದು.

Most Read:28ರ ಹರೆಯದ ಕಾಮುಕನಿಂದಾಗಿ ಮೂಕ ಪ್ರಾಣಿ ಆಡು ಬಲಿ ಆಯಿತು

ವಿಭಿನ್ನ ಭಂಗಿಗಳನ್ನು ಪ್ರಯತ್ನಿಸಿ ನೋಡಿ

ವಿಭಿನ್ನ ಭಂಗಿಗಳನ್ನು ಪ್ರಯತ್ನಿಸಿ ನೋಡಿ

ನಿಮ್ಮ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗಿರುವ ಕಾರಣದಿಂದ ಮತ್ತು ಹೊಟ್ಟೆ ಕೂಡ ದೊಡ್ಡದಾಗಿರುವುದರಿಂದ ನೀವು ಮೊದಲು ಪ್ರಯೋಗಿಸುತ್ತಿದ್ದ ಭಂಗಿಯು ಸರಿಯಾಗಿ ಹೊಂದಿಕೊಳ್ಳದೆ ಇರಬಹುದು. ಇದರಿಂದ ನೀವು ಯಾವುದೇ ಅಪಾಯವು ಇಲ್ಲದೆ ಇರುವಂತಹ ಬೇರೆ ಯಾವುದೇ ಭಂಗಿಯನ್ನು ಪ್ರಯತ್ನಿಸಿ ನೋಡಿ. ಬೆನ್ನಿನ ಮೇಲೆ ಮಲಗುವುದು ಗರ್ಭಧಾರಣೆ ವೇಳೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಾಗಿ ನೀವು ಒಂದು ಬದಿಗೆ ಮಲಗಿ.

ಸ್ನಾನ ಮಾಡಿ

ಸ್ನಾನ ಮಾಡಿ

ಗರ್ಭಧಾರಣೆ ವೇಳೆ ಸ್ನಾನ ಮಾಡುವುದು ತುಂಬಾ ಶಮನ ನಿಡುವುದು. ನೀವು ಬೆನ್ನಿಗಾಗಿ ಬಿಸಿ ನೀರಿನ ಸ್ನಾನ ಮಾಡಬಹುದು. ಈ ವೇಳೆ ನೀರು ಹೆಚ್ಚು ಬಿಸಿಯಾಗಿ ಇರಬಾರದು. ಇದರಿಂದಾಗಿ ನಿಮಗೆ ಯಾವುದೇ ಸಮಸ್ಯೆಯಿದ್ದರೂ ನಿವಾರಣೆ ಆಗುವುದು ಮತ್ತು ಪರಾಕಾಷ್ಠೆ ಬೇಗನೆ ತಲುಪಲು ನೆರವಾಗುವುದು.

ಹಸ್ತಮೈಥುನ ವೇಳೆ ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಹಸ್ತಮೈಥುನ ವೇಳೆ ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಹಸ್ತಮೈಥುನವು ಹಲವಾರು ಲಾಭಗಳನ್ನು ಗರ್ಭಿಣಿಯರಿಗೆ ನೀಡುವುದು. ಆದರೆ ಇದನ್ನು ಪ್ರಯೋಗಿಸುವ ಮೊದಲು ಕೆಲವೊಂದು ಮುನ್ನೆಚ್ಚರಿಕೆಯನ್ನು ನೀವು ತೆಗೆದುಕೊಳ್ಳುವುದು ಅತೀ ಅಗತ್ಯವಾಗಿರುವುದು. ಮುನ್ನೆಚ್ಚರಿಕೆ ತೆಗೆದುಕೊಂಡರೆ ಯಾವುದೇ ರೀತಿಯ ಸಮಸ್ಯೆಯಿಂದ ಮುಕ್ತರಾಗಬಹುದು.

ಸೆಕ್ಸ್ ಆಟಿಕೆಗಳು ಸ್ವಚ್ಛವಾಗಿ ಇದೆಯಾ ಎಂದು ದೃಢಪಡಿಸಿಕೊಳ್ಳಿ ಮತ್ತು ನಿಮಗೆ ಹಾಗೂ ಮಗುವಿಗೆ ಯಾವುದೇ ಸೋಂಕು ಬರದಂತೆ ನೀವು ಮುನ್ನೆಚ್ಚರಿಕೆ ವಹಿಸಿ. ಯಾವುದೇ ರೀತಿಯ ಬಾಹ್ಯ ವಸ್ತುಗಳನ್ನು ನೀವು ಹಸ್ತಮೈಥುನ ಮಾಡಿಕೊಳ್ಳಲು ಬಳಸಬೇಡಿ. ಇದರಿಂದ ಬ್ಯಾಕ್ಟೀರಿಯಾ ಅಥವಾ ವೈರಸ್ ಬರಬಹುದು. ಸಣ್ಣ ಸಾಮಗ್ರಿಗಳು ಯೋನಿಯೊಳಗಡೆ ಉಳಿದುಕೊಳ್ಳುವ ಸಾಧ್ಯತೆಯು ಹೆಚ್ಚಾಗಿ ಇರುವುದು. ಹರಿತವಾಗಿರುವ ವಸ್ತುಗಳು ಯೋನಿಯ ಗೋಡೆಗಳಿಗೆ ಹಾನಿ ಉಂಟು ಮಾಡಬಹುದು.

ಹಸ್ತಮೈಥುನ ವೇಳೆ ಯಾವುದೇ ನೋವು ಅಥವಾ ಅಸಾಮಾನ್ಯತೆ ಕಂಡುಬಂದರೆ ಆಗ ನೀವು ತಕ್ಷಣ ಇದನ್ನು ನಿಲ್ಲಿಸಿಬಿಡಿ. ನೋವು ಮರುಕಳಿಸುತ್ತಾ ಇದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆದುಕೊಳ್ಳುವುದು ಉತ್ತಮ.

English summary

masturbating while pregnancy-things you must know

During pregnancy, some women find that their libido increases due to hormonal changes. An increase in the level of oestrogen and progesterone will likely boost your sexual appetite. Engaging in masturbation and even sex during this time is completely safe. You may experience mild cramps once you achieve an orgasm due to muscle contractions. This can further cause Braxton Hicks contractions which decreases and eventually stops. It is also possible that due to intense nausea and fatigue, some women may lose their interest in sex or masturbation.
Story first published: Wednesday, February 6, 2019, 12:50 [IST]
X
Desktop Bottom Promotion