For Quick Alerts
ALLOW NOTIFICATIONS  
For Daily Alerts

ಪಿ ಸಿ ಓ ಎಸ್ ನಿಂದ ಬಳಲುತ್ತಿದ್ದೀರಾ ? ಈ ವ್ಯಾಯಾಮಗಳು ನಿಮಗೆ ಸಹಕಾರಿ

|

ಒಬ್ಬ ಹೆಣ್ಣು ಮಗಳ ಜೀವನ ಸಾರ್ಥಕ ಆಗುವುದು ಆಕೆ ಮದುವೆಯಾಗಿ ತಾಯಿಯಾಗಿ ತನ್ನ ತಾಯ್ತನದ ಸುಖ ಅನುಭವಿಸಿದಾಗ . ಆದರೆ ಕೆಲವೊಂದು ಗುಪ್ತ ಸಮಸ್ಯೆಗಳು ಅನೇಕರು ತಾಯಿಯಾಗುವುದನ್ನು ಆರಂಭದಲ್ಲೇ ತಡೆಯುತ್ತವೆ . ಗರ್ಭಧಾರಣೆಯ ತಡೆಗೆ ಪಿ ಸಿ ಓ ಎಸ್ ಅಂದರೆ " ಪೋಲಿಸಿಸ್ಟಿಕ್ ಓವರಿ ಸಿಂಡ್ರೋಮ್ " ಕೂಡ ಕಾರಣ . ಇದು ಕೇವಲ ಒಬ್ಬರ ಸಮಸ್ಯೆ ಅಲ್ಲ . ಲಕ್ಷಾಂತರ ಹೆಣ್ಣು ಮಕ್ಕಳು ಇಂತಹ ಸಮಸ್ಯೆಯನ್ನು ಪ್ರತಿದಿನ ನಮ್ಮ ಸುತ್ತ ಮುತ್ತ ಅನುಭವಿಸುತ್ತಿರುತ್ತಾರೆ . ಪಿ ಸಿ ಓ ಎಸ್ ಸಮಸ್ಯೆ ಆರೋಗ್ಯದ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರುವುದಲ್ಲದೆ , ಮಗು ತಾಯಿಯ ಗರ್ಭದಲ್ಲಿ ಬೆಳೆಯುವುದನ್ನು ತಡೆಗಟ್ಟುತ್ತದೆ. ಪಿ ಸಿ ಓ ಎಸ್ ಒಂದು ರೀತಿಯ ಹಾರ್ಮೋನ್ ಅಸ್ವಸ್ಥತೆ ಯಿಂದ ಬರುತ್ತದೆ . ಇದರಿಂದ ಗಣನೀಯವಾಗಿ ದೇಹದ ತೂಕ ಹೆಚ್ಚುತ್ತದೆ , ಮಾನಸಿಕ ಖಿನ್ನತೆ , ಮಕ್ಕಳಾಗದಿರುವಿಕೆ , ಋತುಚಕ್ರ ದುರ್ಬಲಗೊಳ್ಳುವಿಕೆ , ಇಂತಹ ಸಮಸ್ಯೆಗಳು ಕಂಡು ಬರುತ್ತವೆ .

ಪಿ ಸಿ ಓ ಎಸ್ ಆಂಡ್ರೋಜೆನ್ ಹಾರ್ಮೋನ್ ಹೆಚ್ಚುವಂತೆ ಮಾಡಿ ಹೆಂಗಸರಲ್ಲಿ ಪುರುಷತ್ವದ ಗುಣ ಕಾಣಿಸಲು ಆರಂಭವಾಗುತ್ತದೆ . ಜೊತೆಗೆ ಮೈ ಮೇಲೆ ರೋಮ ಬರಲು ಶುರುವಾಗುತ್ತದೆ . ಸ್ತ್ರೀ ಹಾರ್ಮೋನುಗಳು ಅಸಮತೋಲನವಾಗಿ ಅಂಡಾಶಯಗಳ ಉತ್ಪಾದನೆ ಮತ್ತು ವಿಸರ್ಜನೆಯನ್ನೂ ತಡೆಯುತ್ತದೆ . ಇದರಿಂದ ಭ್ರೂಣ ಸಮಸ್ಯೆ ಕಾಡುತ್ತದೆ . " ಏಶಿಯನ್ ಜರ್ನಲ್ ಒಫ್ ಸ್ಪೋರ್ಟ್ಸ್ ಮೆಡಿಸಿನ್ " ತನ್ನ ವರದಿಯಲ್ಲಿ ಹೆಂಗಸರಿಗೆ ಮಕ್ಕಳಾಗದಿರಲು ಈ ಪಿ ಸಿ ಓ ಎಸ್ ಸಮಸ್ಯೆಯೇ ಒಂದು ಬಗೆಯ ಮುಖ್ಯ ಕಾರಣಗಳಲ್ಲೊಂದು . ಅದರಿಂದ ಋತುಚಕ್ರದ ಸಮಯದಲ್ಲಿ ಅಂಡಾಶಯಗಳು ಮೊಟ್ಟೆಗಳನ್ನು ಬಿಡುಗಡೆ ಮಾಡಲು ವಿಫಲವಾಗುತ್ತವೆ . ಇದರಿಂದ ತಾಯ್ತನಕ್ಕೆ ಭಂಗ ತರುತ್ತದೆ ಎಂದು ಹೇಳಿದೆ...

ಪಿ ಸಿ ಓ ಎಸ್ ಸಮಸ್ಯೆ ಇದ್ದ ಮಹಿಳೆಯರು ಇನ್ನು ಭಯಪಡಬೇಡಿ

ಪಿ ಸಿ ಓ ಎಸ್ ಸಮಸ್ಯೆ ಇದ್ದ ಮಹಿಳೆಯರು ಇನ್ನು ಭಯಪಡಬೇಡಿ

ಪಿ ಸಿ ಓ ಎಸ್ ನಿಂದ ಈ ಸಮಸ್ಯೆಯನ್ನು ಯಾರೆಲ್ಲ ಅನುಭವಿಸುತ್ತಿದ್ದೀರೋ , ಅವರುಗಳು ಇನ್ನು ಮುಂದೆ ಸ್ವಲ್ಪ ನಿರಾಳವಾಗಿರಬಹುದು . ಹಲವಾರು ಸಂಶೋಧನೆಗಳಿಂದ ಕೆಲವು ರೀತಿಯ ವ್ಯಾಯಾಮ ಮಾಡುವುದರಿಂದ ದೇಹದ ಅಂಡೋತ್ಪತ್ತಿಯ ಫಲವತ್ತತೆಯನ್ನು ಕಾಯ್ದುಕೊಳ್ಳಬಹುದು ಎಂದು ದೃಢಪಟ್ಟಿದೆ . ಸ್ತೂಲಕಾಯ ಹೊಂದಿರುವವರಿಗೆ ಮಕ್ಕಳಾಗುವ ಸಂಭವ ತೀರಾ ಕಡಿಮೆ . ವ್ಯಾಯಾಮ ಮಾಡುವುದರಿಂದ ಸ್ತೂಲಕಾಯದ ತೊಂದರೆ ಇರುವುದಿಲ್ಲ . ತುಂಬಾ ದಪ್ಪನಾದ ದೇಹ ಹೊಂದಿರುವವರಿಗೆ ಇನ್ಸುಲಿನ್ ನ ಅಗತ್ಯ ಬಹಳ ಇರುತ್ತದೆ . ಏಕೆಂದರೆ ಅವರು ಇನ್ಸುಲಿನ್ ಪ್ರತಿರೋಧ ದಿಂದ ಬಳಲುತ್ತಿರುತ್ತಾರೆ . ಆಗ ಅವರ ದೇಹದಲ್ಲಿರುವ ಪ್ಯಾಂಕ್ರಿಯಾಸ್ ಇನ್ಸುಲಿನ್ ಹೆಚ್ಚು ಉತ್ಪತ್ತಿ ಮಾಡುತ್ತದೆ . ಇನ್ಸುಲಿನ್ ನ ಪ್ರಮಾಣ ಹೆಚ್ಚಾದರೆ ಮೆಟಬೋಲಿಸಂ ನ ಮೇಲೆ ಹೊಡೆತ ಬೀಳುತ್ತದೆ . ಅದರಿಂದ ಅಂಡಾಶಷಯದ ಉತ್ಪತ್ತಿಗೆ ಕಠಿಣ ಸವಾಲು ಎದುರಾಗುತ್ತದೆ . ಅದಲ್ಲದೆ ಅವರ ಸ್ಟೂಲಕಾಯತೆ ಹಾರ್ಮೋನ್ ಇಂಬ್ಯಾಲೆನ್ಸ್ ಮಾಡಲು ಪ್ರಾರಂಭ ಮಾಡುತ್ತದೆ . ಉದಾಹರಣೆಗೆ ದೇಹದಲ್ಲಿನ ಅಂಡಾಶಯಗಳು ಈಸ್ಟ್ರೋಜೆನ್ ಹಾರ್ಮೋನ್ ಉತ್ಪಾದನೆ ಮಾಡುತ್ತವೆ . ದೇಹದ ಇತರೆ ಫ್ಯಾಟ್ ಸೆಲ್ ಗಳೂ ಈ ಹಾರ್ಮೋನನ್ನು ತಯಾರು ಮಾಡುತ್ತವೆ . ದಪ್ಪಗಿರುವವರ ದೇಹದಲ್ಲಿ ಈ ಪ್ರಕ್ರಿಯೆಯಲ್ಲಿ ವ್ಯತ್ಯಯವಾಗಿ ಅಡಿಪೋಸ್ ಟಿಶ್ಯೂ ಈ ಈಸ್ಟ್ರೋಜೆನ್ ಅನ್ನು ಯಥೇಚ್ಛವಾಗಿ ಉತ್ಪತ್ತಿ ಮಾಡುತ್ತದೆ . ಇದರಿಂದಲೂ ಸಹ ಅಂಡೋತ್ಪತ್ತಿಯಲ್ಲಿ ಬಹಳ ತೊಂದರೆ ಉಂಟಾಗುತ್ತದೆ . ಆದ್ದರಿಂದ ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ ಇಂತಹ ಸಮಸ್ಯೆ ತೆಲೆದೋರುವುದಿಲ್ಲ ಮತ್ತು ನಿಮ್ಮ ಅಂಡೋತ್ಪತ್ತಿಯನ್ನು ನೀವು ವಾಪಸ್ ಪಡೆಯಬಹುದು . ನಾವು ಇಲ್ಲಿ ತಿಳಿಸಿರುವ ಹಲವು ಬಗೆಯ ವ್ಯಾಯಮಯುಕ್ತ ಜೀವನ ಕ್ರಮಗಳನ್ನು ಒಬ್ಬ ಫಿಟ್ನೆಸ್ ತಜ್ಞರ ಸಲಹೆ ಮೇರೆಗೆ ನಿಮ್ಮ ಪ್ರತಿನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಿ .

ಹೆಚ್ಚು ವಾಕ್ ಮಾಡಿ

ಹೆಚ್ಚು ವಾಕ್ ಮಾಡಿ

ನೀವು ಈಗಾಗಲೇ ವ್ಯಾಯಾಮ ಮಾಡುತ್ತಿದ್ದರೆ ನಿಮ್ಮ ಮುಂಜಾನೆಯನ್ನು ವಾಕಿಂಗ್ ಅಥವಾ ಜಾಗಿಂಗ್ ನಿಂದ ಪ್ರಾರಂಭಿಸಿ . ಇದರಿಂದ ನಿಮ್ಮ ರಕ್ತ ಸಂಚಲನ ಹೆಚ್ಚಾಗುತ್ತದೆ ಮತ್ತು ನಿಮ್ಮ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ . ನಿಮ್ಮ ಸಂತಾನೋತ್ಪತ್ತಿ ಅಂಗಗಳಿಗೂ ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ನಿಮಗೆ ಸಂತಾನವಾಗುವುದರಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ . " ಯೂನಿವರ್ಸಿಟಿ ಒಫ್ ಮ್ಯಾಸಚೂಸೆಟ್ಸ್ ಅಮ್ಹೆರ್ಸ್ಟ್ " ನ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ . ಯಾವ ಹೆಣ್ಣುಮಗಳು ಪಿ ಸಿ ಓ ಎಸ್ ನಿಂದ ಬಳಲುತ್ತಿರುತ್ತಾರೋ ಅಂತಹವರು ತಮ್ಮ ಸಂತಾನ ಭಾಗ್ಯವನ್ನು ವಾಕಿಂಗ್ ಮತ್ತು ಜಾಗಿಂಗ್ ಮಾಡುವುದರಿಂದ ಸುಧಾರಣೆ ಕಾಣಬಹುದು ಎಂದು .

ಲೀಲಾಜಾಲವಾಗಿ ನೀರಿನಲ್ಲಿ ಈಜುವುದನ್ನು ಮರೆಯಬೇಡಿ

ಲೀಲಾಜಾಲವಾಗಿ ನೀರಿನಲ್ಲಿ ಈಜುವುದನ್ನು ಮರೆಯಬೇಡಿ

ಹೌದು ನೀರಿನಲ್ಲಿ ಈಜುವುದು ಕೂಡ ದೇಹಕ್ಕೆ ಒಂದು ರೀತಿಯ ವ್ಯಾಯಾಮ ಇದ್ದಂತೆ. ಈಜುವಿಕೆಗೂ ನಿಮಗೆ ಮಕ್ಕಳಾಗುವುದಕ್ಕೂ ಯಾವುದೇ ನೇರವಾದ ಸಂಬಂಧ ಇಲ್ಲ. ಬದಲಿಗೆ ಇದರಿಂದ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಸರಾಗವಾಗುತ್ತದೆ ಮತ್ತು ಇದರಿಂದ ಪರೋಕ್ಷವಾಗಿ ನೀವು ಮಗು ಮಾಡಿಕೊಳ್ಳಲು ದೈಹಿಕವಾಗಿ ಸದೃಢವಾಗುತ್ತೀರಿ. ತೂಕ ಕಡಿಮೆ ಮಾಡಿಕೊಳ್ಳುವವರು ಕೂಡ ಈಜುವುದನ್ನು ಅಭ್ಯಾಸ ಮಾಡಿಕೊಳ್ಳಬಹುದು . " ಫರ್ಟಿಲಿಟಿ ಸೊಸೈಟಿ ಒಫ್ ಆಸ್ಟ್ರೇಲಿಯಾ " ದ ಅಂದಾಜಿನ ಪ್ರಕಾರ ಪ್ರತಿದಿನ 30 ನಿಮಿಷಗಳ ಈಜು ನಿಮ್ಮ ದೇಹದ ಫಲವತ್ತತೆಯನ್ನು ಬಲ ಪಡಿಸುತ್ತದೆ

ಸ್ಟ್ರೆಂಥ್ ಟ್ರೈನಿಂಗ್

ಸ್ಟ್ರೆಂಥ್ ಟ್ರೈನಿಂಗ್

ಸ್ಟ್ರೆಂಥ್ ಟ್ರೈನಿಂಗ್ ಇತ್ತೀಚಿಗೆ ಜನಪ್ರಿಯತೆ ಪಡೆಯುತ್ತಿರುವ ಒಂದು ವ್ಯಾಯಾಮ . ವ್ಯಾಯಾಮ ಶಾಲೆಯಲ್ಲಿನ ವ್ಯಾಯಾಮ ಶಿಕ್ಷಕರು ಅವರವರ ದೇಹದ ಪ್ರಕೃತಿಗೆ ಅನುಗುಣವಾಗಿ ಪ್ರತಿದಿನ ಇಷ್ಟು ನಿಮಿಷಗಳ ಸ್ಟ್ರೆಂಥ್ ಟ್ರೈನಿಂಗ್ ಅಗತ್ಯ ಎಂದು ಸೂಚಿಸುತ್ತಾರೆ . ಸ್ಟ್ರೆಂಥ್ ಟ್ರೈನಿಂಗ್ ನಿಂದ ದೇಹ ಸದೃಢವಾಗಿ ಮಾಂಸ ಖಂಡಗಳು ಗಟ್ಟಿಮುಟ್ಟಾಗುವುದಲ್ಲದೆ ಮಾನಸಿಕ ಒತ್ತಡವನ್ನೂ ಕಡಿಮೆ ಮಾಡುತ್ತದೆ . ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ , ಮಾನಸಿಕ ಒತ್ತಡ ಕೂಡ ಮಕ್ಕಳಾಗದಿರುವಿಕೆಗೆ ಒಂದು ಬಹು ಮುಖ್ಯ ಕಾರಣ. ಅನೇಕ ಅಧ್ಯಯನಗಳ ಪ್ರಕಾರ ನೀವು ಯಾವಾಗ ಈ ರೀತಿಯ ವ್ಯಾಯಾಮ ಮಾಡಿ ನಿಮ್ಮ ದೇಹವನ್ನು ದಂಡಿಸಿ ಶಕ್ತಿವಂತರಾಗುತ್ತೀರೋ ಆಗಲೇ ನೀವು ಖುಷಿಯಾಗುತ್ತೀರಿ ಮತ್ತು ನಿಮ್ಮ ಮಾನಸಿಕ ಒತ್ತಡ ಕೂಡ ದೂರಾಗುತ್ತಾ ಹೋಗುತ್ತದೆ . ಇದರಿಂದ ಹೆಂಗಸರಿಗೆ ಮಕ್ಕಳಾಗುವುದಕ್ಕೆ ಉಂಟಾಗಿರುವ ತಡೆಗೋಡೆ ತೆಗೆದಂತಾಗುತ್ತದೆ . ಈ ರೀತಿಯ ವ್ಯಾಯಾಮಗಳನ್ನು ಸರಿಯಾದ ಕ್ರಮದಲ್ಲಿ ಪ್ರತಿನಿತ್ಯ ಒಬ್ಬ ಫಿಟ್ನೆಸ್ ತರಬೇತುದಾರರ ಸಲಹೆಯಂತೆ ಪಾಲಿಸಬೇಕು . ಇಲ್ಲದಿದ್ದರೆ ಟೆಸ್ಟೊ ಸ್ಟೆರೊನ್ ಹಾರ್ಮೋನ್ ನ ಅಧಿಕ ಉತ್ಪಾದನೆಗೆ ಕಾರಣವಾಗುತ್ತದೆ .

ಝುಮ್ಬಾ ಟ್ರೈ ಮಾಡಿ

ಝುಮ್ಬಾ ಟ್ರೈ ಮಾಡಿ

ನಿಮ್ಮ ದೇಹದ ಪಲವತ್ತತೆ ನಿಮ್ಮ ದೇಹದ ತೂಕದ ಮೇಲೆ ಅವಲಂಬಿತವಾಗಿರುವುದರಿಂದ ಅದರ ಬಗ್ಗೆ ಹೆಚ್ಚು ಗಮನ ಹರಿಸಬೇಕು . ಆದರೆ ಅದಕ್ಕಾಗಿ ವ್ಯಾಯಾಮ ಮಾಡಬೇಕೆಂದರೆ ಕೆಲವರಿಗೆ ಇಷ್ಟವಾಗದೇ ಹೋಗಬಹುದು ಅಥವಾ ಬೋರ್ ಹೊಡೆಯಬಹುದು. ಅಂತಹವರು ಇದರಿಂದ ಬದಲಾವಣೆ ಬಯಸಿದರೆ ತಪ್ಪೇನಿಲ್ಲ. ಅವರಿಗಾಗಿಯೇ ಏರೋಬಿಕ್ಸ್ ನಂತಹ ಚಟುವಟಿಕೆಗಳು ತಲೆಯೆತ್ತಿರುವುದು. ನಿಮಗೆ ಡಾನ್ಸ್ ನಲ್ಲಿ ಆಸಕ್ತಿ ಇದ್ದಾರೆ ಝುಮ್ಬಾ ನಿಮ್ಮ ಮೊದಲ ಆಯ್ಕೆ. ಇದರಿಂದ ನಿಮ್ಮ ದೇಹದ ತೂಕ ಕಡಿಮೆ ಆಗುವುದಲ್ಲದೆ, ನಿಮ್ಮ ಖುಷಿಯ ಜೊತೆಗೆ ನಿಮ್ಮ ಗರ್ಭಧಾರಣೆಗೆ ಸಹಾಯಕವಾಗುತ್ತದೆ .

ಯೋಗ ಮಾಡಿ ಮಗುವಿನ ಭಾಗ್ಯ ಪಡೆಯಿರಿ

ಯೋಗ ಮಾಡಿ ಮಗುವಿನ ಭಾಗ್ಯ ಪಡೆಯಿರಿ

ಯೋಗ ಒಂದು ರೀತಿಯ ಪವಾಡವೇ ಸರಿ . ಪ್ರತಿಯೊಂದು ದೈಹಿಕ ಸಮಸ್ಯೆಗೂ ಯೋಗದಲ್ಲಿ ಪರಿಹಾರವಿದೆ ಎಂದು ಎಲ್ಲರಿಗೂ ಗೊತ್ತು . ಅಂದ ಮೇಲೆ ಪಿ ಸಿ ಓ ಎಸ್ ಗೆ ಪರಿಹಾರವಿಲ್ಲವೇ ? ಖಂಡಿತ ಇದೆ . ಯೋಗಾಸನಗಳು ದೇಹದಲ್ಲಿನ ಹಾರ್ಮೋನ್ ಸಮತೋಲನಕ್ಕೆ ತರುತ್ತವೆ . ಏಕೆಂದರೆ ಹಾರ್ಮೋನ್ ಸಮತೋಲನ ಮೇಲೆ ಹೇಳಿದಂತೆ ಹೊಟ್ಟೆಯಲ್ಲಿ ಮಗುವಿನ ಬೆಳವಣಿಗೆಗೆ ಬಹಳ ಸಹಕಾರಿ . ಯೋಗ ಮಾಡುವುದರಿಂದ ನಿಮ್ಮ ಗರ್ಭಕೋಶದ ಸುತ್ತ ರಕ್ತ ಸಂಚಾರ ಬಹಳ ಚೆನ್ನಾಗಿರುತ್ತದೆ . ಅದಲ್ಲದೆ ಯೋಗದಿಂದ ಒತ್ತಡ ಕಡಿಮೆ ಆಗುತ್ತದೆ ಮತ್ತು ನೀವು ಗರ್ಭ ಧರಿಸಲು ಸಹಾಯಕ ವಾಗುತ್ತದೆ . ಕೆಲವೊಂದು ಯೋಗಗಳಾದ ಭ್ರಮರಿ ಪ್ರಾಣಾಯಾಮ , ವಿಪರೀತ ಕರಣಿ ,ಪಶ್ಚಿಮೋತ್ತಾನಾಸನ ಮತ್ತು ಭುಜಂಗಾಸನ ಗಳನ್ನೂ ನೀವು ಪ್ರಯತ್ನಿಸಬಹುದು .

ತೈ ಚಿ ಒಮ್ಮೆ ಪ್ರಯತ್ನಿಸಿ

ತೈ ಚಿ ಒಮ್ಮೆ ಪ್ರಯತ್ನಿಸಿ

ಇದು ಕೇಳಲು ಹೊಸ ಪದ . ಆದರೆ ಚೀನಾದಲ್ಲಿ ಬಹಳ ಪ್ರಖ್ಯಾತಿ ಪಡೆದಿರುವ ಒಂದು ಮನಸ್ಸು ಮತ್ತು ದೇಹದ ಒತ್ತಡ ನಿವಾರಿಸುವ ತಂತ್ರ . " ಜರ್ನಲ್ ಒಫ್ ಅಪ್ಲೈಡ್ ನರ್ಸಿಂಗ್ ರಿಸರ್ಚ್ " ನ ವರದಿಯಲ್ಲಿ ಹೇಳಿರುವಂತೆ ಯಾರು ಹೆಚ್ ಐ ವಿ ಮತ್ತು ಪಿ ಸಿ ಓ ಎಸ್ ನಿಂದ ಬಳಲುತ್ತಿದ್ದಾರೋ ಅವರು ಈ ತೈ ಚಿ ವ್ಯಾಯಾಮ ವನ್ನು ಒಮ್ಮೆ ಮಾಡಿದ ಮೇಲೆ ಅವರ ಒತ್ತಡ ಬಹಳ ಕಡಿಮೆ ಆಗಿತ್ತು . ಅಲ್ಲಿ ಕೆಲವೊಂದು ಬಾರಿ ಭಾಗವಹಿಸಿದವರೂ ಕೂಡ ಅವರ ಮಾನಸಿಕ ಕಾರ್ಯಚಟುವಟಿಕೆ ಈಗ ಉತ್ತಮವಾಗಿದೆ ಎಂಬ ಸಂದೇಶವನ್ನು ಕೊಟ್ಟರು . ಆದ್ದರಿಂದ ನೀವು ಗರ್ಭಿಣಿಯಾಗಲು ಯೋಚಿಸುತ್ತಿದ್ದರೆ ಈ ತೈ ಚಿ ವ್ಯಾಯಾಮವನ್ನು ನಿಮ್ಮ ಜೀವನ ಕ್ರಮದಲ್ಲಿ ಅಳವಡಿಸಿಕೊಳ್ಳಿ .

English summary

Is PCOS affecting your fertility? These exercises will help

PCOS is a hormonal disorder that decreases your chance of getting pregnant. While consulting a physician is a must to tackle the condition, some exercises may boost your fertility if you are suffering from PCOS.Millions of women across the world suffer from Polycystic Ovary Syndrome (PCOS), which has significant health impacts. However, the most common complaint against this condition is that it affects fertility. PCOS is a hormonal disorder that can lead to delayed or prolonged menstrual periods.
Story first published: Thursday, May 16, 2019, 20:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more