For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಆಲೂಗಡ್ಡೆ ಸೇವಿಸಬಹುದೇ? ಇದರಿಂದ ಆರೋಗ್ಯಕ್ಕೆ ಸಮಸ್ಯೆ ಇದೆಯೇ?

|

ಗರ್ಭಾವಸ್ಥೆಯಲ್ಲಿ ಏನು ತಿನ್ನಬಹುದು, ಏನು ತಿನ್ನಬಾರದು ಎನ್ನುವುದು ಹೆಣ್ಣು ಮಕ್ಕಳು ಬಹಳ ಎಚ್ಚರವಾಗಿ ಯೋಚಿಸುವಂತಹ ವಿಷಯ. ತಾಯಿಯಾಗುವ ಆ ಸಂತಸದಲ್ಲಿ ಮೈ ಮರೆಯದೆ ಎಚ್ಚರದಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಅದರಲ್ಲೂ ಮೊದಲ ಬಾರಿ ತಾಯಿ ಆಗುತ್ತಿರುವವರು ತಮ್ಮ ತಾಯಿ, ಅಜ್ಜಿ, ಅತ್ತೆ ಎಲ್ಲರ ಸಲಹೆ ಸೂಚನೆಗಳು ಮಾತ್ರವಲ್ಲದೆ ವೈದ್ಯರು ಹೇಳಿದ್ದು ಎಲ್ಲವನ್ನೂ ಚಾಚು ತಪ್ಪದೆ ಪಾಲಿಸಲು ಪ್ರಯತ್ನಿಸುತ್ತಾರೆ.

Potatoes

ಗರ್ಭಾವಸ್ಥೆಯಲ್ಲಿ ನಾಲಿಗೆಗೆ ಏನೇನೋ ತಿನ್ನುವ ಚಪಲವಾಗುತ್ತದೆ. ಸಿಹಿ, ಹುಳಿ, ಖಾರ ಹೀಗೆ ಒಬ್ಬಬ್ಬೊರ ರುಚಿ ಒಂದೊಂದು ತರಹ. ತುಂಬಾ ಜನರಿಗೆ ಬಹಳ ಇಷ್ಟವಾದ ಹಾಗೂ ವಿವಿಧ ರೀತಿಯಲ್ಲಿ ಅಡುಗೆ ಮಾಡಿಕೊಳ್ಳಲು ಬಳಸಬಹುದಾದ ತರಕಾರಿ ಆಲೂಗಡ್ಡೆ. ಇದು ನಮ್ಮ ದಕ್ಷಿಣ ಹಾಗೂ ಉತ್ತರ ಭಾರತದ ಎಲ್ಲಾ ರೀತಿಯ ರುಚಿಗಳಲ್ಲಿ ಬಳಸುವ ಒಂದು ಸಾಮಾನ್ಯ ತರಕಾರಿ. ಅಷ್ಟೇ ಅಲ್ಲದೆ ಆಲೂಗಡ್ಡೆಯಲ್ಲಿ ಅನೇಕಾನೇಕ ಪೋಷಕಾಂಶಗಳು ಸಹ ಇವೆ. ಇವು ನಮ್ಮ ದೇಹಕ್ಕೆ ಬಹಳ ಅನುಕೂಲಗಳನ್ನು ಮಾಡುತ್ತವೆ. ಆಲುಗಡೆಯಲ್ಲಿ ಅನೇಕ ರೀತಿಯ ವಿಟಮಿನ್ ಗಳು ಹಾಗೂ ಪೊಟಾಷಿಯಂ ಇದೆ. ಇದು ನಮ್ಮ ಅರೂಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಗರ್ಭಾವಸ್ಥೆಯಲ್ಲಿ ಸಹ ತಿನ್ನಬಹುದು. ಆದರೂ ಒಂದೊಂದು ಸ್ತ್ರೀ ಯ ಆರೋಗ್ಯ ಬೇರೆಯದೇ ಆಗಿರುತ್ತದೆ ಹಾಗೂ ಇತರ ಅನೇಕ ಅಂಶಗಳು ಗರ್ಭಿಣಿ ಸ್ತ್ರೀಯರಲ್ಲಿ ಗಣಮವಿಟ್ಟುಕೊಳ್ಳಬೇಕಾದ್ದರಿಂದ ಒಂದು ಬಾರಿ ನಿಮ್ಮ ವೈದ್ಯರನ್ನು ಸಹ ಕೇಳಿ ನಂತರ ಆಲೂಗಡ್ಡೆಯನ್ನು ಉಪಯೋಗಿಸುವುದು ಒಳ್ಳೆಯದು.

ಆಲೂಗಡ್ಡೆಯ ಕೆಲವು ಉಪಯೋಗಗಳು

ಆಲೂಗಡ್ಡೆಯ ಕೆಲವು ಉಪಯೋಗಗಳು

*ಅಸಿಡಿಟಿಯನ್ನು ಕಮ್ಮಿ ಮಾಡುತ್ತದೆ.

ಅಜೀರ್ಣ ಹಾಗೂ ಇತರ ಅಸಿಡಿಟಿ ತೊಂದರೆಗಳನ್ನು ಆಲೂಗಡ್ಡೆ ತಕ್ಷಣ ಕಡಿಮೆ ಮಾಡುತ್ತದೆ. ಬೇಯಿಸಿ ನುಣ್ಣಗೆ ಮೆದ್ದುಕೊಂಡ ಆಲೂಗಡ್ಡೆ ಅಜೀರ್ಣಕ್ಕೆ ಒಳ್ಳೆಯ ಮದ್ದು.

*ಕೊಬ್ಬನ್ನು ಹಿಡಿತದಲ್ಲಿ ಇಡುತ್ತದೆ.

ದೇಹದ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಅನ್ನು ಆಲೂಗಡ್ಡೆಯೂ ಹಿಡಿತದಲ್ಲಿ ಇಡುತ್ತದೆ. ಇದರಲ್ಲಿ ಇರುವ ಜೀರ್ಣವಾಗುವ ಫೈಬರ್ ಹಾಗೂ ವಿಟಮಿನ್ ಸಿ ಈ ಕೆಲಸ ಮಾಡುತ್ತದೆ.

*ನಾರಿನಂಶ ಬಹಳ ಹೆಚ್ಚು:

ಆಲೂಗಡ್ಡೆಯ ನಾರಿನಂಶ ಮಲದ್ಧತೆಯನ್ನು ಕಡಿಮೆ ಮಾಡುತ್ತದೆ. ಆದರ್ಲ್ಲೂ ಗರ್ಭಿಣಿಯರಲ್ಲಿ ಮಲಬದ್ದತೆ ತೊಂದರೆಗಳು ಬಹಳ ಸಾಮಾನ್ಯ. ಇದರ ನಿವಾರಣೆಗೆ ಆಲೂಗಡ್ಡೆ ಉಪಯೋಗಿ.

*ವಿಟಮಿನ್ ಬಿ ಹಾಗೂ ಸಿ ಯ ಆಗರ:

ಆಲೂಗಡ್ಡೆಯಲ್ಲಿ ಇರುವ ವಿಟಮಿನ್ ಗಳು ಗಾಯಗಳನ್ನು ವಾಸಿಮಾಡುವ ಅಂಶ ಹೊಂದಿರುತ್ತವೆ. ನಮ್ಮ ದೇಹದ ರಕ್ಷಣಕವಚವನ್ನು ಗಟ್ಟಿ ಮಾಡುತ್ತವೆ. ಇದೆ ಅಲ್ಲದೆ ನಾವು ಸೇವಿಸುವ ಇತರ ಆಹಾರಗಳಲ್ಲಿನ ಕಬ್ಬಿಣದ ಅಂಶವನ್ನು ಹೀರಿಕೊಳ್ಳುವುದರಲ್ಲಿ ದೇಹಕ್ಕೆ ಸಹಾಯ ಮಾಡುತ್ತದೆ.

MOst Read: ಗರ್ಭಿಣಿಯರು ಮೂಲಂಗಿ ತಿನ್ನಬಹುದು! ಆದರೆ ಇದೆಲ್ಲಾ ಸಂಗತಿಗಳು ನೆನಪಿರಲಿ

ಫಾಲಿಕ್ ಆಸಿಡ್

ಫಾಲಿಕ್ ಆಸಿಡ್

ಗರ್ಭಿಣಿಯರಿಗೆ ಅತಿ ಮುಖ್ಯ ಫಾಲಿಕ್ ಆಸಿಡ್. ಇದು ಭ್ರೂಣದ ಮೆದುಳು ಹಾಗೂ ನರಗಳ ಬೆಳವಣಿಗೆಗೆ ಅತಿ ಮುಖ್ಯ. ಹಾಗೂ ಫಾಲಿಕ್ ಆಸಿಡ್ ಅನ್ನು ಗರ್ಭಿಣಿಯರು ತಮ್ಮ ಮೊದಲನೇ ತಿಂಗಳುಗಳಲ್ಲಿ ಸೇವಿಸಿದರೆ ಅದು ಗರ್ಭಪಾತವಾಗುವ ಅವಕಾಶಗಳನ್ನು ಕಡಿಮೆ ಮಾಡುತ್ತದೆ.

ಗರ್ಭದ ಶಿಶುವಿನ ಬೆಳವಣಿಗೆಗೆ ಸಹಕಾರಿ

ಗರ್ಭದ ಶಿಶುವಿನ ಬೆಳವಣಿಗೆಗೆ ಸಹಕಾರಿ

ಆಲೂಗಡ್ಡೆಯಲ್ಲಿ ಅಪಾರ ಪ್ರಮಾಣದ ಕಾಲ್ಶಿಯುಂ, ಪೊಟಾಷಿಯುಂ ಹಾಗೂ ಕಬ್ಬಿಣದ ಅಂಶಗಳು ಇವೆ. ಇವು ಗರ್ಭದಲ್ಲಿರುವ ಶಿಶುವಿನ ಬೆಳವಣಿಗೆಗೆ ಬಹಳ ಸಹಕಾರಿ.

ಕಣ್ಣು ಊತ ಕಡಿಮೆ ಮಾಡುತ್ತದೆ

ಕಣ್ಣು ಊತ ಕಡಿಮೆ ಮಾಡುತ್ತದೆ

ಕಣ್ಣುಗಳ ಕೆಳಗಿನ ಊತ ಗರ್ಭಿಣಿಯರಿಗೆ ಸಾಮಾನ್ಯ ತೊಂದರೆ. ಹಸಿ ಆಲೂಗಡ್ಡೆಯ ಒಂದು ಹೋಳನ್ನು ಬಿಲ್ಲೆಯಕಾರದಲ್ಲಿ ಕತ್ತರಿಸಿ ಕಣ್ಣ ಮೇಲೆ ಹತ್ತು ಅಥವಾ ಹದಿನೈದು ನಿಮಿಷ ಇಟ್ಟುಕೊಂಡರೆ ಈ ಊತ ಕಡಿಮೆ ಆಗುತ್ತದೆ.

ಹೃದಯದ ಕಾಯಿಲೆಗಳಿಗೆ ಬಾಣ

ಹೃದಯದ ಕಾಯಿಲೆಗಳಿಗೆ ಬಾಣ

ಆಲೂಗಡ್ಡೆಯ ಸಿಪ್ಪೆಯಲ್ಲಿ ಅತಿ ಹೆಚ್ಚು ಪೊಟಾಷಿಯುಂ ಇರುತ್ತದೆ. ಇದು ರಕ್ತದ ಒತ್ತಡ ಹಾಗೂ ಹೃದಯಾಘಾತ ವನ್ನು ತಡೆಯುವ ಶಕ್ತಿ ಹೊಂದಿದೆ.

ಗರ್ಭಾವಸ್ಥೆಯಲ್ಲಿ ಆಲೂಗಡ್ದೆಯಿಂದ ಆಗಬಹುದಾದ ತೊಂದರೆಗಳು

ಗರ್ಭಾವಸ್ಥೆಯಲ್ಲಿ ಆಲೂಗಡ್ದೆಯಿಂದ ಆಗಬಹುದಾದ ತೊಂದರೆಗಳು

ಗರ್ಭಾವಸ್ತೆಯಲ್ಲಿ ತೆಗೆದುಕೊಳ್ಳುವ ಆಹಾರದ ವಿಷಯದಲ್ಲಿ ಬಹಳ ಗಮನವಿರಬೇಕು. ನಾವು ಏನನ್ನು ತಿನ್ನುತ್ತೇವೆ ಹಾಗೂ ಎಷ್ಟು ಪ್ರಮಾಣದಲ್ಲಿ ತಿನ್ನುತ್ತೇವೆ ಎಂಬುದು ಬಹಳ ಮುಖ್ಯ. ಒಳ್ಳೆಯದು ಎಂದು ಹೆಚ್ಚಾಗಿಯೂ ತಿನ್ನಬಾರದು.

ಹಾಗೆಯೇ ಆಲೂಗಡ್ಡೆಯಲ್ಲಿ ಅನೇಕ ಪೋಷಕಾಂಶಗಳು ಇವೆ ಎಂದು ಹೆಚ್ಚಾಗಿಯೂ ಸೇವಿಸಬಾರದು.

*ಆಲೂಗಡ್ಡೆಯ ಸೇವನೆಯ ಕೆಲವು ತೊಂದರೆಗಳನ್ನು ಈ ಕೆಳಗೆ ನೋಡೋಣ:

ಹಸಿರು ಗಂಟುಗಳು ಅಥವಾ ಹಸಿರು ಮಚ್ಚೆಗಳು ಇರುವ ಆಲೂಗಡ್ಡೆಯಲ್ಲಿ ಕೆಲವು ವಿಷ ಪೂರಿತ ಅಂಶಗಳು ಇರುವ ಅವಕಾಶಗಳು ಇರುತ್ತವೆ. ಇದರಿಂದ ಕೆಲವು ಬಾರಿ ಹೊಟ್ಟೆಯಲ್ಲಿ ಕಷ್ಟವಾಗಿ ವಾಂತಿ ಅಥವಾ ಬೇಧಿ ಆಗಬಹುದು.

ಹೆಚ್ಚು ಆಲೂಗಡ್ಡೆ ಸೇವನೆಯಿಂದ ಕೆಲವರಲ್ಲಿ ಗರ್ಭಾವಸ್ತೆಯಲ್ಲಿ ಬರುವ ಮಧುಮೇಹ ಅಥವಾ ಡಿಯಾಬೆಟಿಸ್ ಬರುವ ಸಾಧ್ಯತೆಗಳು ಹೆಚ್ಚಿವೆ.

* ಹಸಿರು ಆಲೂಗಡ್ಡೆ ಸೇವನೆಯಿಂದ ಹುಟ್ಟು ತೊಂದರೆಗಳು ಆಗುವ ಸಾದ್ಯತೆ ಹೆಚ್ಚಿವೆ.

*ಕೆಲವೊಮ್ಮೆ ಆಲೂಗಡ್ಡೆ ಕೊಳೆತು ಅದು ತಿಳಿಯದೆ ಅಡುಗೆಯಲ್ಲಿ ಬಳಸಿದಾಗ ಅದರಿಂದ ವಿಷಾಹಾರ ಸೇವನೆಯಾಗಿ ಗರ್ಭಿಣಿಯರಲ್ಲಿ ಬಹಳ ತೊಂದರೆಗಳು ಆಗುತ್ತವೆ.

*ಹೆಚ್ಚು ಆಲೂಗಡ್ಡೆ ತಿಂದ ತಾಯಂದಿರ ಮಕ್ಕಳು ಮುಂದೆ ಬೆಳೆದಾಗ ಅವರಲ್ಲಿ ಮಧುಮೇಹ ತೊಂದರೆಗಳು ಕಾಣಿಸಿಕೊಳ್ಳುವ ಅವಕಾಶಗಳು ಇಲ್ಲದೆ ಇಲ್ಲ.

* ದಪ್ಪ ಇರುವ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಹೆಚ್ಚು ಆಲೂಗಡ್ಡೆ ತಿಂದರೆ ಅವರ ಭಾರ ಇನ್ನೂ ಹೆಚ್ಚಾಗಿ ಸ್ಥೂಲಕಾಯ ತರುವ ಇತರ ತೊಂದರೆಗಳು ತಪ್ಪುವುದಿಲ್ಲ.

Most Read: ಇಂತಹ ಲಕ್ಷಣಗಳಿಂದ ಗರ್ಭಿಣಿಯಾಗಿದ್ದನ್ನು ಮುಟ್ಟು ನಿಲ್ಲುವ ಮುನ್ನವೇ ತಿಳಿಯಬಹುದು!

ಆಲೂಗಡ್ಡೆಯನ್ನು ತಯಾರಿಸಲು ಅಡುಗೆಯ ಈ ಕೆಲವು ವಿಧಾನಗಳನ್ನು ಬಳಸದೆ ಇರುವುದು ಉತ್ತಮ

ಆಲೂಗಡ್ಡೆಯನ್ನು ತಯಾರಿಸಲು ಅಡುಗೆಯ ಈ ಕೆಲವು ವಿಧಾನಗಳನ್ನು ಬಳಸದೆ ಇರುವುದು ಉತ್ತಮ

ಆಲೂಗಡ್ಡೆ ಚಿಪ್ಸ್ ಯಾರಿಗೆ ಇಷ್ಟವಿಲ್ಲ. ಕರುಂ ಕರುಂ ಎಂದು ಬಾಯಲ್ಲಿ ಪುಡಿಯಾಗುವ ಈ ತಿಂಡಿ ಎಣ್ಣೆಯಲ್ಲಿಯೇ ಕರಿದು ತಯಾರಿಸುವುದು. ಇದು ಬಹಳ ಅನಾರೋಗ್ಯಕರ. ಇದರಿಂದ ದೇಹದ ಬೊಜ್ಜು ಹೆಚ್ಚಾಗಿ ಇನ್ನೂ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಗರ್ಭಿಣಿಯರು ಎಣ್ಣೆಯಲ್ಲಿ ಕರಿಯುವ ಯಾವುದೇ ತಿಂಡಿಯಿಂದ ದೂರವಿರುವುದು ಉತ್ತಮ. ಹಾಗೆಯೇ ಇದೆ ಅಲ್ಲದೆ ಈ ಕೆಳಗಿನ ಇತರ ರೀತಿಯಲ್ಲಿ ಆಲೂಗಡ್ಡೆಯನ್ನು ತಯಾರಿಸುವುದನ್ನು ತಪ್ಪಿಸಿ: ಎಣ್ಣೆಯಲ್ಲಿ ಕರಿಯುವ ಫ್ರೆಂಚ್ ಫ್ರೈಸ್ ಅಥವಾ ಫಿಂಗರ್ ಚಿಪ್ಸ್. ಚೀಸ್ ಜೊತೆ ಆಲೂಗಡ್ಡೆಯನ್ನು ಬೇಕ್ ಮಾಡುವುದು.

ಹಸಿರು ಮೊಳಕೆ ಬಂದಿರುವ ಆಲೂಗಡ್ಡೆಯನ್ನು ಗರ್ಭಿಣಿಯರು ಸೇವಿಸಬಹುದೇ?

ಹಸಿರು ಮೊಳಕೆ ಬಂದಿರುವ ಆಲೂಗಡ್ಡೆಯನ್ನು ಗರ್ಭಿಣಿಯರು ಸೇವಿಸಬಹುದೇ?

ಮೂಲತಃ ಆಲೂಗಡ್ಡೆಯು ಭೂಮಿಯ ಒಳಗಡೆ ಬೆಳೆಯುವ ತರಕಾರಿ. ಕೆಲವೊಮ್ಮೆ ಕೆಲವು ಗಡ್ಡೆಗಳು ಮಣ್ಣಿನ ಮೇಲೆ ಬಂದುಬಿಟ್ಟಾಗ ಸೂರ್ಯನ ಕಿರಣಗಳು ತಗುಲಿ ಹೀಗೆ ಹಸಿರು ಮಚ್ಚೆಗಳು ಆಗುತ್ತವೆ. ಇದಕ್ಕೆ ಗಿಡಗಳಲ್ಲಿ ಇರುವ ಕ್ಲೋರೋಫಿಲ್ ಹಾಗೂ ಸೂರ್ಯನ ಕಿರಣಗಳು ಕಾರಣ. ಈ ಪ್ರಕ್ರಿಯೆ ನಡೆಯುವಾಗ ಕೆಲವು ವಿಷಪೂರಿತ ಅಂಶಗಳು ಕೂಡ ಬೆಳವಣಿಗೆ ಆಗುತ್ತವೆ. ಈ ವಿಷಪೂರಿತ ಅಂಶ ಕೆಲವೊಮ್ಮೆ ನಮ್ಮ ದೇಹಕ್ಕೆ ಬಹಳ ಕೆಟ್ಟದು ಉಂಟುಮಾಡುತ್ತದೆ. ನಮ್ಮ ಮೆದುಳು ಹಾಗೂ ನರಗಳಲ್ಲಿ ತೊಂದರೆಯನ್ನು ಮಾಡಿ ಅತ್ಯಂತ ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಇದರಿಂದ ಹಸಿರು ಮಚ್ಚೆಗಳು ಅಥವಾ ಹಸಿರು ಗಂಟುಗಳು ಇರುವ ಆಲೂಗಡ್ಡೆಯನ್ನು ಗರ್ಭಿಣಿಯರು ತಿನ್ನದೆ ಇರುವುದು ಬಹಳ ಮುಖ್ಯ.

ಹೆಚ್ಚಾಗಿ ಆಲೂಗಡ್ಡೆಯನ್ನು ತಿನ್ನುವುದರಿಂದ ಮಧುಮೇಹ ಬರುವ ಸಾಧ್ಯತೆಗಳು ಇವೆಯೆ?

ಹೆಚ್ಚಾಗಿ ಆಲೂಗಡ್ಡೆಯನ್ನು ತಿನ್ನುವುದರಿಂದ ಮಧುಮೇಹ ಬರುವ ಸಾಧ್ಯತೆಗಳು ಇವೆಯೆ?

ಆಲೂಗಡ್ಡೆಯಲ್ಲಿ ಹೆಚ್ಚಿನ ಪಿಷ್ಟ ಅಂಶ ಇದೆ. ಇದು ದೇಹದಲ್ಲಿ ಬಹಳ ಬೇಗ ಜೀರ್ಣವಾಗಿ ದೇಹದಲ್ಲಿ ಗ್ಲೂಕೋಸ್ ಅಂಶವನ್ನು ಹೆಚ್ಚು ಮಾಡುತ್ತವೆ. ಇದರಿಂದ ಮದುಮೇಹದ ಸಾಧ್ಯತೆ ಹೆಚ್ಚಾಗುತ್ತದೆ. ಗರ್ಭಿಣಿ ಸ್ತ್ರೀಯರಲ್ಲಿ ಈ ಸಾಧ್ಯತೆ ಇನ್ನೂ ಹೆಚ್ಚು.

ಒಳ್ಳೆಯ ಆಲೂಗಡ್ಡೆಯನ್ನು ಹೇಗೆ ಆರಿಸಿಕೊಳ್ಳುವುದು?

ಒಳ್ಳೆಯ ಆಲೂಗಡ್ಡೆಯನ್ನು ಹೇಗೆ ಆರಿಸಿಕೊಳ್ಳುವುದು?

ಮಾರುಕಟ್ಟೆಗೆ ಹೋದಾಗ ಎಷ್ಟೋ ಅಂಗಡಿಗಳು ಹಾಗೂ ಎಷ್ಟೆಷ್ಟೋ ರೀತಿಯ ಆಲೂಗಡ್ಡೆಗಳು ಕಾಣಿಸುತ್ತವೆ. ಕೊಳ್ಳುವ ಮುಂಚೆ ಈ ಕೆಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಜಾಗ್ರತೆಯಾಗಿ ಕೊಂಡುಕೊಳ್ಳಿ. ಇದರಿಂದ ನಾವು ಕೆಲವು ಅಪಾಯಗಳನ್ನು ತಪ್ಪಿಸಬಹುದು.

* ಗಟ್ಟಿಯಾದ ಹಾಡು ಒಳ್ಳೆಯ ಆಕಾರ ಇರುವುದು

*ಯಾವುದೇ ತೂತು ಅಥವಾ ಒತ್ತಡ ಇಲ್ಲದೆ ಇರುವುದು

*4. ಕಪ್ಪು ಅಥವಾ ಹಸಿರು ಗಂಟು ಅಥವಾ ಮಚ್ಚೆಗಳು ಇಲ್ಲದೆ ಇರುವುದು

* ಹಾಗೂ ಮನೆಯಲ್ಲಿ ಅಡುಗೆ ಮಾಡುವ ಮುನ್ನ ಚೆನ್ನಾಗಿ ತೊಳೆಯುವುದು.

ಆಲೂಗಡ್ಡೆಯನ್ನು ಸರಿಯಾದ ಪ್ರಮಾಣದಲ್ಲಿ ಹಾಗೂ ಆರೋಗ್ಯಕರ ರೀತಿಯಲ್ಲಿ ಅಡುಗೆ ಮಾಡಿ

ಆಲೂಗಡ್ಡೆಯನ್ನು ಸರಿಯಾದ ಪ್ರಮಾಣದಲ್ಲಿ ಹಾಗೂ ಆರೋಗ್ಯಕರ ರೀತಿಯಲ್ಲಿ ಅಡುಗೆ ಮಾಡಿ

ಬಳಸುವುದರಿಂದ ಗರ್ಭಿಣಿಯರು ಕೂಡ ಸೇವಿಸಬಹುದು. ಆರೋಗ್ಯಕರ ರೀತಿಯಲ್ಲಿ ಆಲೂಗಡ್ಡೆಯನ್ನು ನಮ್ಮ ಆಹಾರದಲ್ಲಿ ಹೇಗೆ ಬಳಸಬಹುದು ಎಂದು ಈ ಕೆಳಗೆ ನೋಡೋಣ. ನಿಮಗಾಗಿ ಕೆಲವು ಆಲೂಗಡ್ಡೆಯ ಅಡುಗೆಗಳು:

*ಬೇಯಿಸಿದ ಆಲೂಗಡ್ಡೆ (ಚೀಸ್ ಇಲ್ಲದೆ)

*ಇತರೆ ತರಕಾರಿ ಅಥವಾ ಮಾಂಸದ ಜೊತೆ ಬೇಯಿಸಿ ಬಳಸುವುದು.

*ಸೂಪ್

*ತರಕಾರಿ ರಸಂ

*ಮ್ಯಾಶ್ ಆಲೂಗಡ್ಡೆ ಇತರೆ ತರಕಾರಿ ಹಾಗೂ ಮಾಸಲಾ ಪದಾರ್ಥಗಳ ಜೊತೆ.

*ಸುಟ್ಟ ಆಲೂಗಡ್ಡೆ. ಈ ಕೆಳಗೆ ಕೆಲವು ಅಡುಗೆಗಳನ್ನು ವಿವರವಾಗಿ ತಿಳಿಸಲಾಗಿದೆ. ನೀವು ಇವುಗಳನ್ನು ತಯಾರಿಸಿ ಆನಂದಿಸಿ.

ಆಲೂಗಡ್ಡೆ ಹಾಗೂ ಈರುಳ್ಳಿ ಸೂಪ್

ಆಲೂಗಡ್ಡೆ ಹಾಗೂ ಈರುಳ್ಳಿ ಸೂಪ್

ಬೇಕಾಗುವ ಸಾಮಗ್ರಿ:

*ಸಣ್ಣಗೆ ಕತ್ತರಿಸಿದ ಆಲೂಗಡ್ಡೆ - ಒಂದು ಕಪ್

*ಒಣ ಮಸಾಲೆ ಮೂಲಿಕೆಗಳು - ಅರ್ಧ ಕಪ್

*ಸಣ್ಣಗೆ ಕತ್ತರಿಸಿದ ಈರುಳ್ಳಿ - ಕಾಲು ಕಪ್

*ಬೆಣ್ಣೆ - ಒಂದು ದೊಡ್ಡ ಚಮಚ

*ತುರಿದ ಕ್ಯಾರೆಟ್ - ಅಲಂಕರಿಸಲು

*ಉಪ್ಪು ಹಾಗೂ ಮೆಣಸು ಪುಡಿ ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಒಂದು ಪ್ರೆಷರ್ ಕುಕ್ಕರ್ ನಲ್ಲಿ ಬೆಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ ಕತ್ತರಿಸಿದ ಈರುಳ್ಳಿ ಅನ್ನು ಹಾಕಿ ಎರಡು ನಿಮಿಷ ಚೆನ್ನಾಗಿ ಕಲಸಿ.

*ಅದಕ್ಕೆ ಕತ್ತರಿಸಿದ ಆಲೂಗಡ್ಡೆ ತುಂಡುಗಳನ್ನು ಹಾಕಿ ಚೆನ್ನಾಗಿ ಐದು ನಿಮಿಷ ಕಲೆಸಿ.

*ಇದಕ್ಕೆ ಒಂದೂವರೆ ಕಪ್ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಮೂರು ವಿಷಲ್ ಬರುವ ವರೆಗೂ ಬೇಯಿಸಿ.

*ಇದು ತಣ್ಣಗಾದ ಮೇಲೆ ಚೆನ್ನಾಗಿ ನುಣ್ಣಗೆ ಆಗುವ ವರೆಗೂ ಮಿದಿಯಿರಿ.

*ಈ ಮಿಶ್ರಣವನ್ನು ಒಂದು ಬಾಣಲೆಗೆ ಹಾಕಿ, ಒಣಗಿದ ಮಾಸಲಾ ಮೂಲಿಕೆಗಳು, ಉಪ್ಪು, ಮೆಣಸು ಪುಡಿ ಹಾಗೂ ಇನ್ನೂ *ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಕುದಿಸಿ.

*ಇದಕ್ಕೆ ನಂತರ ಕ್ಯಾರೆಟ್ ತುರಿ ಹಾಕಿ ಅಲಂಕರಿಸಿ.

*ಈ ಸೂಪ್ ಕುಡಿಯಲು ಸಿದ್ದ.

ಆಲೂಗಡ್ಡೆ ಸಲಾಡ್ / ಕೋಸಂಬರಿ

ಆಲೂಗಡ್ಡೆ ಸಲಾಡ್ / ಕೋಸಂಬರಿ

ಬೇಕಾಗುವ ಸಾಮಗ್ರಿ:

*ಬೇಯಿಸಿ ತುಂಡು ಮಾಡಿದ ಆಲೂಗಡ್ಡೆ - 8

*ಆಪಲ್ ಸಿಡಾರ್ ವಿನಿಗರ್ - ಎರಡು ಚಮಚ

*ಸಕ್ಕರೆ - ಎರಡು ಚಮಚ

*ಮಾಯೋನೀಸ್ - ಒಂದೂವರೆ ಕಪ್

*ಉಪ್ಪು - ರುಚಿಗೆ ತಕ್ಕಷ್ಟು

*ಎಲ್ಲೊ ಮಸ್ಟರ್ಡ್ - ಒಂದು ಚಮಚ

*ಮೆಣಸು ಪುಡಿ - ಒಂದು ಚಮಚ

*ಬೆಳ್ಳುಳ್ಳಿ ಪುಡಿ - ಒಂದು ಚಮಚ

*ಈರುಳ್ಳಿ ಹೋಳುಗಳು - ಒಂದು ಕಪ್

*ಬೇಯಿಸಿದ ಮೊಟ್ಟೆ - 5

*ಒಣ ಮೆಣಸಿನ ತುರಿ - ಸ್ವಲ್ಪ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಆಲೂಗಡ್ಡೆಯ ಸಿಪ್ಪೆ ಸುಲಿದು ಬೇಯಿಸಿ.

*ಬೆಂದ ನಂತರ ಅದನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ.

*ಇದಕ್ಕೆ ಇತರ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕಲಸಿ

*ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು ಹಾಕಿಕೊಳ್ಳಿ.

*ಬೇಯಿಸಿದ ಮೊಟ್ಟೆಯನ್ನು ಕೂಡ ಬಿಲ್ಲೆಗಳಂತೆ ಕತ್ತರಿಸಿಕೊಂಡು ಇದಕ್ಕೆ ಹಾಕಿ ಕಲೆಸಿಕೊಳ್ಳಿ.

*ಈ ಮಿಶ್ರಣದ ಮೇಲೆ ಒಣ ಮೆಣಸಿನಕಾಯಿ ತುರಿಯನ್ನು ಹಾಕಿದರೆ ಈ ಸಲಾಡ್ ತಯಾರಾಗುತ್ತದೆ.

*ಆಲೂಗಡ್ಡೆಯಲ್ಲಿ ಅನೇಕ ರೀತಿಯ ಪೋಷಕಾಂಶಗಳು ಇವೆ. ಇದರಿಂದ ಗರ್ಭಿಣಿಯರು ತಪ್ಪದೆ ಆಲೂಗಡ್ಡೆಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದು ಗರ್ಭದ ಒಳಗಿರುವ ಶಿಶುವಿನ ಬೆಳವಣಿಗೆಗೆ ಬಹಳ ರೀತಿಯಲ್ಲಿ ಸಹಕಾರಿ ಕೂಡ. *ಆದರೆ ಹಿತವಾಗಿ ಹಾಗೂ ಮಿತವಾಗಿ ಸೇವಿಸುವುದು ಉತ್ತಮ. ಹಾಗೆಯೇ ಅಡುಗೆ ಮಾಡುವ ರೀತಿಯಲ್ಲಿಯೂ ಎಚ್ಚರ ವಹಿಸಿ ಆರೋಗ್ಯಕರ ರೀತಿಯಲ್ಲಿ ಮಾಡಿಕೊಂಡರೆ ಇನ್ನೂ ಉತ್ತಮ.

English summary

Is It Safe To Eat Potatoes During Pregnancy?

Potato is filled with nutrients that your body requires during pregnancy; hence if you are craving potatoes during pregnancy, you are free to have some. Although, it’s best to consult your doctor or nutritionist before consuming it.
X
Desktop Bottom Promotion