For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಮಶ್ರೂಮ್ ತಿನ್ನಬಹುದೇ? ಇದರಿಂದ ಏನಾದರೂ ತೊಂದರೆ ಇದೆಯೇ?

|

ಮಶ್ರೂಮ್ ಯಾನೆ ಅಣಬೆ ಅಂದರೆ ಹೆಚ್ಚಿನವರಿಗೆ ಪಂಚಪ್ರಾಣ. ಅದರಲ್ಲೂ ಮಶ್ರೂಮ್ ಬಳಸಿಕೊಂಡು ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿಕೊಳ್ಳಬಹುದು. ಮಶ್ರೂಮ್ ಚಿಲ್ಲಿ, ಮಶ್ರೂಮ್ ಮಸಾಲ ಮತ್ತು ಮಶ್ರೂಮ್ ಫ್ರೈ ಹೀಗೆ ಹಲವಾರು ವಿಧದ ಖಾದ್ಯಗಳನ್ನು ಇದರಿಂದ ಮಾಡಿಕೊಳ್ಳಬಹುದು. ಸೂಪ್, ಸಲಾಡ್, ಪಿಜ್ಜಾ ಮತ್ತು ಪಾಸ್ತಾನಗಳಲ್ಲಿ ಹೆಚ್ಚಿನವರು ಮಶ್ರೂಮ್ ನ್ನು ಇಷ್ಟಪಡುವರು. ಮಶ್ರೂಮ್ ಹೆಚ್ಚು ರುಚಿಕರವಾಗಿರುವುದು ಮಾತ್ರವಲ್ಲದೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ.

Mushrooms

ಇದು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಆದರ ಗರ್ಭಿಣಿಯರು ಮಶ್ರೂಮ್ ತಿನ್ನಬೇಕೇ ಎನ್ನುವಂತಹ ಪ್ರಶ್ನೆಗಳು ಸಹಜವಾಗಿಯೇ ಕಾಡುವುದು. ಗರ್ಭದಲ್ಲಿ ಇರುವಂತಹ ಮಗುವಿಗೆ ನೀವು ಸೇವಿಸುವಂತಹ ಆಹಾರದಿಂದ ಪೋಷಕಾಂಶಗಳು ಸಿಗುವುದು. ಇದರಿಂದ ಮಗುವಿನ ಬೆಳವಣಿಗೆಯು ಸರಿಯಾಗಿ ಆಗುವುದು. ಇದರಿಂದಾಗಿ ಗರ್ಭಿಣಿಯರು ತಿನ್ನುವಂತಹ ಆಹಾರದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಗರ್ಭಧಾರಣೆ ವೇಳೆ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂದು ಮುಖ್ಯವಾಗಿ ಗಮನಿಸಬೇಕು. ಗರ್ಭಧಾರಣೆಯ ವೇಳೆ ಮಶ್ರೂಮ್ ಗಳು ಸುರಕ್ಷಿತವೇ ಎಂದು ನೀವು ಈ ಲೇಖನ ಮೂಲಕ ತಿಳಿಯಿರಿ.

ಗರ್ಭಿಣಿಯರು ಮಶ್ರೂಮ್ ತಿನ್ನಬಹುದೇ?

ಗರ್ಭಿಣಿಯರು ಮಶ್ರೂಮ್ ತಿನ್ನಬಹುದೇ?

ಗರ್ಭಧಾರಣೆ ವೇಳೆ ನಿಷಿದ್ಧವಾಗಿರುವಂತಹ ಆಹಾರಗಳಲ್ಲಿ ಮಶ್ರೂಮ್ ಬರುವುದಿಲ್ಲ. ಮಶ್ರೂಮ್ ನಿಮಗೆ ಅಲರ್ಜಿ ಉಂಟು ಮಾಡದೆ ಇದ್ದರೆ ಆಗ ನೀವು ಇದನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಮಶ್ರೂಮ್ ಗಳು ತುಂಬಾ ಸುರಕ್ಷಿತ ಮತ್ತು ಇದನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವ ಮೊದಲು ನೀವು ವೈದ್ಯರ ಸಲಹೆ ಪಡೆಯಬಹುದು. ಇದೇ ವೇಳೆ ಮಶ್ರೂಮ್ ಖರೀದಿಸುವ ಮೊದಲು ನೀವು ಎಲ್ಲಾ ರೀತಿಯ ಕ್ರಮಗಳನ್ನು ಪಾಲಿಸಬೇಕು. ಯಾಕೆಂದರೆ ಕೆಲವೊಂದು ರೀತಿಯ ಅಣಬೆಗಳಲ್ಲಿ ವಿಷಕಾರಿ ಅಂಶಗಳು ಇರುವುದು ಮತ್ತು ಇದರಿಂದ ಗರ್ಭಧಾರಣೆ ಮೇಲೆ ಪರಿಣಾಮ ಉಂಟಾಗಬಹುದು.

ವಿಟಮಿನ್ ಬಿ ಪೋಷಕಾಂಶಗಳು ಮಶ್ರೂಮ್ ನಲ್ಲಿದೆ

ವಿಟಮಿನ್ ಬಿ ಪೋಷಕಾಂಶಗಳು ಮಶ್ರೂಮ್ ನಲ್ಲಿದೆ

ಮಶ್ರೂಮ್ ನಲ್ಲಿ ವಿಟಮಿನ್ ಬಿ ಸಂಕಿರ್ಣವಾಗಿರುವ ರಿಬೊಫ್ಲಾವಿನ್(ಬಿ2), ನಿಯಾಸಿನ್(ಬಿ3), ಥೈಮೈನ್(ಬಿ1) ಮತ್ತು ಪಾಂಟೊಥೆನಿಕ್ ಆಮ್ಲ(ಬಿ5) ಅಂಶಗಳು ಇವೆ. ರಿಬೊಫ್ಲಾವಿನ್ ಶಿಶುವಿನ ಮೂಳೆಗಳು ಹಾಗೂ ಸ್ನಾಯುಗಳನ್ನು ಬಲಪಡಿಸಲು ತುಂಬಾ ನೆರವಾಗುವುದು. ಇದರಿಂದ ಶಿಶುವಿನ ಬೆಳವಣಿಗೆ ಆಗುವುದು. ನರಗಳ ಬೆಳವಣಿಗೆ, ಆರೋಗ್ಯಕಾರಿ ಚರ್ಮ ಮತ್ತು ಶಿಶುವಿನ ಸರಿಯಾದ ದೃಷ್ಟಿಗೆ ಇದು ನೆರವಾಗುವುದು.

ವೈದ್ಯರ ಸಲಹೆಯ ಮೇರೆಗೆ ಹಿತಮಿತವಾಗಿ ಮಶ್ರೂಮ್ ತಿನ್ನಬಹುದು

ವೈದ್ಯರ ಸಲಹೆಯ ಮೇರೆಗೆ ಹಿತಮಿತವಾಗಿ ಮಶ್ರೂಮ್ ತಿನ್ನಬಹುದು

ನಿಯಾಸಿನ್ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು. ಇದರಿಂದ ಗರ್ಭಧಾರಣೆ ವೇಳೆ ಕಾಡಬಹುದಾದ ಹೃದಯಾಘಾತದ ಸಮಸ್ಯೆಯು ದೂರವಾಗುವುದು. ಥೈಮೈನ್ ಮಗುವಿನ ಮದುಳಿನ ಬೆಳವಣಿಗೆಗೆ ನೆರವಾಗುವುದು ಮತ್ತು ಶಕ್ತಿ ನೀಡುವುದು. ಇದರಿಂದ ನಿಶ್ಯಕ್ತಿಯು ಕಡಿಮೆಯಾಗುವುದು. ಗರ್ಭಧಾರಣೆ ವೇಳೆ ನಿಶ್ಯಕ್ತಿಯು ಸಾಮಾನ್ಯವಾಗಿರುವುದು. ಪಾಂಟೊಥೆನಿಕ್ ಆಮ್ಲವು ದೇಹದಲ್ಲಿ ಆಹಾರದ ಚಯಾಪಚಯ ಕ್ರಿಯೆಗೆ ತುಂಬಾ ನೆರವಾಗುವುದು. ಇದರಿಂದಾಗಿ ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಯಾಗುವುದು. ಇದರಿಂದ ಗರ್ಭಧಾರಣೆ ವೇಳೆ ಮಶ್ರೂಮ್ ತುಂಬಾ ಒಳ್ಳೆಯ ಆಯ್ಕೆ.

Most Read: ಆರೋಗ್ಯದ ಕಣಜ, ಸಮೃದ್ಧ ಪೋಷಕಾಂಶ ಭರಿತ ಅಣಬೆ

ವಿಟಮಿನ್ ಡಿ ಪೋಷಕಾಂಶ

ವಿಟಮಿನ್ ಡಿ ಪೋಷಕಾಂಶ

ವಿಟಮಿನ್ ಡಿ ಪೋಷಕಾಂಶವು ಆಹಾರದಲ್ಲಿ ಸಿಗುವುದು ತುಂಬಾ ಕಡಿಮೆ. ಆದರೆ ಮಶ್ರೂಮ್ ನಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ. ವಿಟಮಿನ್ ಡಿ ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಗೆ ನೆರವಾಗುವುದು. ಇದರಿಂದ ಮೂಳೆಗಳು ಹಲ್ಲುಗಳು ಬಲಗೊಳ್ಳುವುದು. ಇದರಿಂದಾಗಿ ಗರ್ಭಿಣಿಯರು ಆಹಾರ ಕ್ರಮದಲ್ಲಿ ಮಶ್ರೂಮ್ ನ್ನು ಸೇರಿಸಿಕೊಳ್ಳಿ.

ಪ್ರೋಟೀನ್ ಮತ್ತು ನಾರಿನಾಂಶಕ್ಕಾಗಿ…

ಪ್ರೋಟೀನ್ ಮತ್ತು ನಾರಿನಾಂಶಕ್ಕಾಗಿ…

ಮಶ್ರೂಮ್ ನಲ್ಲಿ ಪ್ರಮುಖವಾಗಿರುವಂತಹ ಪ್ರೋಟೀನ್ ಇದೆ. ಪ್ರೋಟೀನ್ ಎನ್ನುವುದು ಗರ್ಭದಲ್ಲಿರುವಂತಹ ಶಿಶುವಿನ ಸಂಪೂರ್ಣ ಬೆಳವಣಿಗೆ ಪ್ರಮುಖವಾಗಿ ಬೇಕಾಗಿರುವುದು. ಇದರಿಂದ ಗರ್ಭಧಾರಣೆ ವೇಳೆ ಮಶ್ರೂಮ್ ಸೇವನೆ ಮಾಡಿದರೆ ಅದರಿಂದ ನಿಮ್ಮ ಮಗುವಿನ ಬೆಳವಣಿಗೆಗೆ ಬೇಕಾಗುವಂತಹ ಪೋಷಕಾಂಶವು ಸಿಗುವುದು. ಆದರೆ ಖರೀದಿಸುವ ವೇಳೆ ಎಚ್ಚರಿಕೆ ಅಗತ್ಯ. ಮಶ್ರೂಮ್ ನಲ್ಲಿ ಇರುವಂತಹ ನಾರಿನಾಂಶವು ಗರ್ಭಧಾರಣೆ ವೇಳೆ ದೇಹದಲ್ಲಿ ಸಮತೋಲದಲ್ಲಿ ಇಡುವುದು ಮತ್ತು ಇದರಿಂದ ಮಲಬದ್ಧತೆ, ನಿಶ್ಯಕ್ತಿ, ಗ್ಯಾಸ್ ಇತ್ಯಾದಿ ಸಮಸ್ಯೆಗಳು ನಿವಾರಣೆಯಾಗುವುದು. ಇದರಿಂದ ನೀವು ದಿನವಿಡಿ ಉಲ್ಲಾಸದಿಂದ ಇರಬಹುದು.

ಮಶ್ರೂಮ್ ನಲ್ಲಿ ಕಬ್ಬಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಗಳಿವೆ

ಮಶ್ರೂಮ್ ನಲ್ಲಿ ಕಬ್ಬಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಗಳಿವೆ

ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವಂತಹ ಹಿಮೋಗ್ಲೊಬಿನ್ ನ್ನು ಉತ್ಪತ್ತಿ ಮಾಡಲು ಕಬ್ಬಿನಾಂಶವು ನೆರವಾಗುವುದು. ಗರ್ಭಧಾರಣೆ ವೇಳೆ ಕಬ್ಬಿನಾಂಶವು ಅತೀ ಅಗತ್ಯವಾಗಿರುವುದು. ಯಾಕೆಂದರೆ ಈ ವೇಳೆ ಹೃದಯವು ಹೆಚ್ಚಿನ ರಕ್ತವನ್ನು ಪಂಪ್ ಮಾಡುವ ಮೂಲಕ ಗರ್ಭದಲ್ಲಿರುವಂತಹ ಶಿಶುವಿನ ಬೆಳವಣಿಗೆಗೆ ನೆರವಾಗುವುದು. ನಿಮಗೆ ರಕ್ತಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಆಗ ನೀವು ಮಶ್ರೂಮ್ ನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವ ಮೂಲಕ ರಕ್ತಹೀನತೆ ಸಮಸ್ಯೆ ನಿವಾರಣೆ ಮಾಡಬಹುದಾಗಿದೆ.

ಮಶ್ರೂಮ್ ನಲ್ಲಿ ಕಬ್ಬಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಗಳಿವೆ

ಮಶ್ರೂಮ್ ನಲ್ಲಿ ಕಬ್ಬಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಗಳಿವೆ

ಅಣಬೆಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಫ್ರೀ ರ್ಯಾಡಿಕಲ್ ನಿಂದಾಗಿ ಕಾಣಿಸಿಕೊಳ್ಳುವಂತಹ ಕಾಯಿಲೆಗಳಿಂದ ದೇಹವನ್ನು ಕಾಪಾಡುವುದು. ಇದರಿಂದ ಪ್ರತಿರೋಧಕ ವ್ಯವಸ್ಥೆಯು ಬಲಗೊಳ್ಳುವುದು ಮತ್ತು ಗರ್ಭಧಾರಣೆ ವೇಳೆ ಕಾಣಿಸಿಕೊಳ್ಳುವ ಸಾಮಾನ್ಯ ಕಾಯಿಲೆಗಳಿಂದ ರಕ್ಷಿಸುವುದು.

Most Read: ದೇಹದ ರಕ್ತ ಶುದ್ಧೀಕರಿಸುವ ಇಂತಹ ಆಹಾರಗಳನ್ನು ದಿನಾ ಮಿಸ್ ಮಾಡದೇ ಸೇವಿಸಿ

ಹೊರಗಡೆ ಬೆಳೆದಿರುವಂತಹ ಅಣಬೆಗಳ ಬಗ್ಗೆ ಎಚ್ಚರವಿರಲಿ

ಹೊರಗಡೆ ಬೆಳೆದಿರುವಂತಹ ಅಣಬೆಗಳ ಬಗ್ಗೆ ಎಚ್ಚರವಿರಲಿ

ಈ ಮೇಲೆ ಹೇಳಿರುವಂತಹ ಆರೋಗ್ಯ ಲಾಭಗಳ ಹೊರತಾಗಿ ಮಶ್ರೂಮ್ ನಲ್ಲಿ ಪೊಟಾಶಿಯಂ, ಸತು ಮತ್ತು ಸೆಲೆನಿಯಂ ಇದೆ. ಇದು ಗರ್ಭದಲ್ಲಿರುವ ಮಗುವಿನ ಸರಿಯಾದ ಬೆಳವಣಿಗೆಗೆ ನೆರವಾಗುವುದು. ಇದರಿಂದಾಗಿ ಮಶ್ರೂಮ್ ನಿಂದ ನಿಮ್ಮ ದೇಹಕ್ಕೆ ಯಾವುದೇ ರೀತಿಯ ಹಾನಿಯಾಗದು. ಗರ್ಭಧಾರಣೆ ವೇಳೆ ನೀವು ಮಶ್ರೂಮ್ ಸೇವನೆ ಮಾಡಬಹುದು. ಆದರೆ ಈ ಮೊದಲು ಹೇಳಿರುವಂತೆ ನೀವು ಅಣಬೆ ಖರೀದಿ ಮಾಡುವ ವೇಳೆ ಎಚ್ಚರಿಕೆ ವಹಿಸಿಕೊಳ್ಳಿ. ಹೊರಗಡೆ ಬೆಳೆದಿರುವಂತಹ ಅಣಬೆಗಳು ಕೂಡ ಸಿಗುವುದು. ಇದರಲ್ಲಿ ವಿಷಕಾರಿ ಅಂಶಗಳು ಇರುವಂತಹ ಸಾಧ್ಯತೆಗಳು ಇವೆ. ಇದರಿಂದ ಸೇವನೆಗೆ ಯೋಗ್ಯವಾಗಿರುವ ಅಣಬೆ ಖರೀದಿ ಮಾಡಿ.

English summary

Is It Safe To Eat Mushrooms During Pregnancy?

Do you love mushrooms in your soups, salads, pizzas, and pastas? Do you enjoy mushroom curries? Mushroom are irresistibly tasty if cooked right, and you must be now wondering if you can continue relishing your favourite mushroom dishes any more as your pregnancy test has shown positive results. Your unborn baby gets nutrition from what you eat, which directly affects its growth and development, which makes every pregnant woman careful for what she should eat and she should not during their pregnancy. Let us find out if mushrooms are safe during pregnancy.
X
Desktop Bottom Promotion