For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಅರಿಶಿನ ಬೆರೆಸಿದ ಹಾಲು ಕುಡಿಯಬಹುದೇ? ಖಂಡಿತವಾಗಿಯೂ ಮಿತವಾಗಿ ಸೇವಿಸಬಹುದು

|

ಗರ್ಭಧಾರಣೆ ಎನ್ನುವುದು ಮಹಿಳೆಯರಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ಉಂಟು ಮಾಡುವುದು. ಇದರಲ್ಲಿ ಮುಖ್ಯವಾಗಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಕೂಡ ಸೇರಿಕೊಂಡಿದೆ. ಗರ್ಭಧಾರಣೆ ವೇಳೆ ಮಹಿಳೆಯರ ಆಹಾರ ಕ್ರಮವು ಬದಲಾಗುವುದು. ಯಾಕೆಂದರೆ ಕೆಲವು ಆಹಾರಗಳು ಅವರಿಗೆ ಪಥ್ಯವಾಗುವುದು. ಇನ್ನು ಕೆಲವೊಂದು ಆಹಾರಗಳಿಂದ ವಾಕರಿಕೆ ಅಥವಾ ಅಲರ್ಜಿಯು ಉಂಟಾಗಬಹುದು. ಹೀಗಾಗಿ ಗರ್ಭಿಣಿಯರು ತಮಗೆ ಇಷ್ಟವಿರುವುದೆಲ್ಲವನ್ನು ಈ ವೇಳೆ ತಿನ್ನುವಂತಿಲ್ಲ.

ಕೆಲವೊಂದು ನಿರ್ಬಂಧವನ್ನು ಕೂಡ ಹೇರಲಾಗುತ್ತದೆ. ಗರ್ಭಧಾರಣೆ ವೇಳೆ ಮಹಿಳೆಯರು ಸೇವಿಸುವಂತಹ ಕೆಲವೊಂದು ಆಹಾರಗಳ ಕಡೆ ಹೆಚ್ಚಿನ ಗಮನಹರಿಸಬೇಕು. ಗರ್ಭಧಾರಣೆ ವೇಳೆ ಮಹಿಳೆಯರು ಅರಿಶಿನ ಹಾಕಿರುವಂತಹ ಹಾಲನ್ನು ಕುಡಿಯಬಾರದು ಎಂದು ಹೇಳಲಾಗುತ್ತದೆ. ಇದು ಅಸುರಕ್ಷಿತ ಎಂದು ಪರಿಗಣಿಸಲಾಗಿದೆ. ಆದರೆ ಇದು ಸುಳ್ಳು. ಅರಿಶಿನ ಹಾಲಿನ ಬಗ್ಗೆ ಹರಡಿರುವ ಸುಳ್ಳಿನ ಬಗ್ಗೆ ನಾವು ಈ ಲೇಖನದಲ್ಲಿ ಸತ್ಯವನ್ನು ತೆರೆದಿಡಲಿದ್ದೇವೆ. ಇದನ್ನು ನೀವು ಕೂಡ ತಿಳಿದುಕೊಂಡು ಗರ್ಭಿಣಿ ಮಹಿಳೆಯರ ಆಹಾರ ಕ್ರಮದಲ್ಲಿ ಅರಿಶಿನ ಹಾಲನ್ನು ಸೇರಿಸಿಕೊಳ್ಳಿ.

ಚಿಟಿಕೆಯಷ್ಟು ಮಾತ್ರ ಬಳಸಿಕೊಳ್ಳಿ

ಚಿಟಿಕೆಯಷ್ಟು ಮಾತ್ರ ಬಳಸಿಕೊಳ್ಳಿ

ಹೆಚ್ಚಾಗಿ ಜನರು ರಾತ್ರಿ ಮಲಗುವ ಮೊದಲು ಅರಿಶಿನ ಹಾಕಿರುವಂತಹ ಹಾಲನ್ನು ಕುಡಿಯುವ ಅಭ್ಯಾಸ ಮಾಡಿಕೊಂಡಿರುವರು. ಆದರೆ ಗರ್ಭಿಣಿ ಮಹಿಳೆಯರು ಇದರಿಂದ ದೂರವಿರಬೇಕು ಎಂದು ಸಲಹೆ ನೀಡಲಾಗುತ್ತದೆ. ಯಾಕೆಂದರೆ ಇದರ ಪರಿಣಾಮವು ಇದುವರೆಗೆ ಸಾಬೀತು ಆಗಿಲ್ಲ. ನೀವು ಗರ್ಭಧಾರಣೆ ಸಮಯದಲ್ಲಿ ಅರಿಶಿನ ಹಾಲನ್ನು ಕುಡಿಯಲೇಬೇಕು ಎಂದು ನಿರ್ಧಾರ ಮಾಡಿದ್ದರೆ ಆಗ ನೀವು ಒಂದು ಚಿಟಿಕೆ ಅರಿಶಿನವನ್ನು ಹಾಲಿಗೆ ಹಾಕಿ ಕುಡಿಯಿರಿ. ಇದರಿಂದ ನಿಮ್ಮ ಹಾಗೂ ಮಗುವಿಗೆ ಯಾವುದೇ ರೀತಿಯ ಅಪಾಯಗಳು ಎದುರಾಗದಂತೆ ಕಾಪಾಡುವುದು.

ಸಾವಯವ ಅರಿಶಿನವನ್ನು ಬಳಕೆ ಮಾಡಿಕೊಳ್ಳಿ

ಸಾವಯವ ಅರಿಶಿನವನ್ನು ಬಳಕೆ ಮಾಡಿಕೊಳ್ಳಿ

ನೀವು ಮಾರುಕಟ್ಟೆಯಿಂದ ಖರೀದಿಸುವಂತಹ ಅರಿಶಿನಕ್ಕೆ ಹೆಚ್ಚಾಗಿ ಏನಾದರೂ ಬೆರಕೆ ಮಾಡಿರಬಹುದು. ಇದರ ಬದಲಿಗೆ ನೀವು ಸಾವಯವಾಗಿರುವಂತಹ ಅರಿಶಿನವನ್ನು ಆಯ್ಕೆ ಮಾಡಿ. ಕೆಲವೊಂದು ಉತ್ಪನ್ನಗಳು ಗಿಡಮೂಲಿಕೆಯನ್ನು ಹೊಂದಿರುವುದು ಎಂದು ಹೇಳುತ್ತಾ ಇರುತ್ತದೆ. ಆದರೆ ವೈದ್ಯರು ಹೇಳುವ ಪ್ರಕಾರ ಗರ್ಭಿಣಿಯರು ಗಿಡಮೂಲಿಕೆಯ ಉತ್ಪನ್ನಗಳನ್ನು ಸೇವನೆ ಮಾಡುವುದನ್ನು ಕಡೆಗಣಿಸಬೇಕು. ಯಾಕೆಂದರೆ ಇದು ತುಂಬಾ ಅಸುರಕ್ಷಿತ ಎಂದು ಪರಿಗಣಿಸಲಾಗಿದೆ. ನೀವು ಸಾವಯವಾಗಿ ಸಿಗುವಂತಹ ಅರಿಶಿನವನ್ನು ಖರೀದಿ ಮಾಡಿ ಅದನ್ನು ಹಾಲಿಗೆ ಹಾಕಿಕೊಂಡು ಕುಡಿದರೆ ತುಂಬಾ ಲಾಭವಾಗುವುದು.

Most Read: ಮನೆ ಔಷಧಿ: ಕೆಮ್ಮಿನ ನಿವಾರಣೆಗೆ ಅರಿಶಿನ ಬೆರೆಸಿದ ಮಸಾಲೆ ಹಾಲು

ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಅದ್ಭುತ ಫಲಿತಾಂಶ

ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಅದ್ಭುತ ಫಲಿತಾಂಶ

ಒಂದು ಲೋಟ ಹಾಲಿಗೆ ಸರಿಯಾದ ಪ್ರಮಾಣದಲ್ಲಿ ಅರಿಶಿನವನ್ನು ಹಾಕಿದರೆ ಅದರಿಂದ ನಿಮ್ಮ ದೇಹದ ಮೇಲೆ ಅದ್ಭುತವಾದ ಪರಿಣಾಮಗಳು ಉಂಟಾಗುವುದು. ಹಲವಾರು ಮಂದಿ ಗರ್ಭಿಣಿಯರು ಇದರ ಸೇವನೆಯಿಂದ ದೊಡ್ಡ ಮಟ್ಟದ ಲಾಭ ಪಡೆದುಕೊಂಡಿದ್ದಾರೆ. ಇದರಿಂದ ಅವರ ಕರುಳಿನ ಚಲನೆಯು ಸರಿಯಾಗಿ ಆಗಿದೆ, ಪ್ರತಿರೋಧಕ ಶಕ್ತಿ ಹೆಚ್ಚಿದೆ ಮತ್ತು ರಕ್ತಸಂಚಾರವು ಸರಿಯಾಗಿ ಆಗಿದೆ. ಆದರೆ ನೀವು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿದರೆ ಆಗ ಅದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು.

ಅರಿಶಿನ ಹಾಲನ್ನು ನೀವು ಎರಡು ದಿನಕ್ಕೊಮ್ಮೆ ಸೇವಿಸಿ

ಅರಿಶಿನ ಹಾಲನ್ನು ನೀವು ಎರಡು ದಿನಕ್ಕೊಮ್ಮೆ ಸೇವಿಸಿ

ನೀವು ಎಷ್ಟು ಪ್ರಮಾಣದಲ್ಲಿ ಅರಿಶಿನ ಹಾಲನ್ನು ಸೇವಿಸುತ್ತೀರಿ ಎನ್ನುವುದರ ಮೇಲೆ ಗರ್ಭಧಾರಣೆಯ ಮೇಲೆ ಅದರ ಲಾಭಗಳು ಉಂಟಾಗುವುದು. ಒಂದು ಚಿಟಿಕೆ ಅರಿಶಿನ ಹಾಕಿರುವಂತಹ ಒಂದು ಲೋಟ ಬಿಸಿ ಹಾಲನ್ನು ನೀವು ಎರಡು ದಿನಕ್ಕೊಮ್ಮೆ ಕುಡಿಯಬಹುದು ಮತ್ತು ಗರ್ಭಧಾರಣೆ ವೇಳೆ ಕಾಣಿಸಿಕೊಳ್ಳುವ ಕೆಲವು ಸಮಸ್ಯೆಗಳಿಂದ ದೂರವಿರಬಹುದು. ಅರಿಶಿನವು ಗರ್ಭಿಣಿಯರಿಗೆ ಹಲವಾರು ರೀತಿಯ ಲಾಭ ಉಂಟು ಮಾಡುವುದು. ಆದರೆ ಅತಿಯಾಗಿ ಸೇವನೆ ಮಾಡಿದರೆ ಅದರಿಂದ ಅಡ್ಡಪರಿಣಾಮಗಳು ಕೂಡ ಉಂಟಾಗಬಹುದು. ಇದನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಅದರಿಂದ ನಿಮಗೆ ಹಾಗೂ ಗರ್ಭದಲ್ಲಿರುವ ಮಗುವಿಗೆ ತುಂಬಾ ಸಹಕಾರಿಯಾಗುವುದು. ಗರ್ಭಧಾರಣೆ ವೇಳೆ ನೀವು ಆಹಾರ ಕ್ರಮದಿಂದ ಅರಿಶಿನ ಹಾಲನ್ನು ದೂರವಿಡಬೇಕೆಂದಿಲ್ಲ. ಮಿತ ಪ್ರಮಾಣದಲ್ಲಿ ಇದರ ಸೇವನೆ ಮಾಡಿ ಮತ್ತು ಅದರಿಂದ ಸಿಗುವಂತಹ ಲಾಭಗಳನ್ನು ಪಡೆಯಿರಿ.

Most Read: ಗರ್ಭಿಣಿಯರು ಪಪ್ಪಾಯ, ದ್ರಾಕ್ಷಿ ಹಾಗೂ ಅನಾನಸ್ ಹಣ್ಣುಗಳನ್ನು ತಿನ್ನಲೇಬಾರದು!

ಅರಿಶಿನದ ಹಾಲು ತಯಾರಿಸುವ ಬಗೆ ಸುಲಭ ವಿಧಾನ

ಅರಿಶಿನದ ಹಾಲು ತಯಾರಿಸುವ ಬಗೆ ಸುಲಭ ವಿಧಾನ

ಒಂದು ಲೋಟ ಹಸುವಿನ ಹಾಲಿಗೆ ಸುಮಾರು ಅರ್ಧ ಚಮಚದಿಂದ ಒಂದು ಚಮಚದಷ್ಟು ಅರಿಶಿನ ಪುಡಿ ಹಾಕಿ ಕುದಿಯಲು ಪ್ರಾರಂಭವಾದ ಬಳಿಕ ಇಳಿಸಿ ತಣಿಯಲು ಬಿಡಿ. ರುಚಿಗಾಗಿ ಕೊಂಚ ಜೇನನ್ನೂ ಸೇರಿಸಬಹುದು. ಸಾಂಪ್ರಾದಾಯಿಕ ವಿಧಾನ: ಹಸಿಯಾಗಿರುವ ಅರಿಶಿನದ ಕೊಂಬಿನ ಸುಮಾರು ಒಂದು ಇಂಚಿನಷ್ಟು ತುಂಡನ್ನು ಜಜ್ಜಿ ಕುದಿಯುತ್ತಿರುವ ಹಾಲಿನಲ್ಲಿ ಸೇರಿಸಿ. ಈಗ ಉರಿಯನ್ನು ಅತಿಚಿಕ್ಕದಾಗಿ ಮಾಡಿ ಮುಚ್ಚಳ ಮುಚ್ಚದೇ ಸುಮಾರು ಹದಿನೈದು ನಿಮಿಷ ಕುದಿಸಿ. ಬಳಿಕ ಅರಿಶಿನದ ತುಂಡನ್ನು ಸೋಸಿ ತೆಗೆಯಿರಿ. ಈ ಹಾಲನ್ನು ತಣಿದ ಬಳಿಕವೇ ಕುಡಿಯಿರಿ. ಈ ಹಾಲನ್ನು ಮತ್ತೆ ಬಿಸಿ ಮಾಡಬಾರದು.

English summary

Is It Safe To Drink Turmeric Milk During Pregnancy?

Most women are advised not to take turmeric milk during pregnancy because it is considered unsafe. But if you believe it’s a myth then let’s go deep into the fact sheet and check whether turmeric milk should be on your pregnancy diet list or not.
Story first published: Tuesday, January 22, 2019, 13:00 [IST]
X
Desktop Bottom Promotion