Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬೇಸಿಗೆಯ ಸೆಖೆಯಲ್ಲಿ ಮಗುವನ್ನು ಆರಾಮವಾಗಿರಿಸಿಕೊಳ್ಳುವುದು ಹೇಗೆ?
ಪುಟ್ಟ ಮಗುವೊಂದು ಮನೆಯಲ್ಲಿದ್ದರೆ ಒಂದು ಮುದ್ದಾದ ಮಾತನಾಡುವ ಗೊಂಬೆ ನಮ್ಮ ಜೊತೆ ಇದ್ದಂತೆ . ಅದರ ತುಂಟ ಕಿರು ನಗು ಕೀಟಲೆ ಅಳು ನಮ್ಮನ್ನೂ ಮಗುವಿನಲ್ಲಿ ಮಗುವಾಗಿಸುತ್ತದೆ . ನಾವು ಏನೇ ಕಳೆದುಕೊಂಡರೂ ಆ ಮಗುವಿನ ಜೊತೆ ಇರುವ ಸಂತೋಷದ ಕ್ಷಣಗಳನ್ನು ಮಾತ್ರ ಕಳೆದುಕೊಳ್ಳಲು ಬಯಸುವುದಿಲ್ಲ . ನಾವೂ ಮಗುವಿನ ಜೊತೆ ಆಟವಾಡುತ್ತ ಪ್ರಪಂಚವನ್ನೇ ಮರೆಯುತ್ತೇವೆ . ಒಟ್ಟಿನಲ್ಲಿ ನಮಗೆ ಸಂತೋಷವನ್ನೇ ಕೊಡಲು ಬಂದಿರುವ ಒಂದು ವರದಾನವೇ ನಮ್ಮ ಮನೆಯ ಪುಟ್ಟ ಮಗು . ಆದರೆ ಪಾಪ ಅದಕ್ಕೂ ತನ್ನದೇ ಆದ ಕಷ್ಟ ಸುಖ ಇರುತ್ತವೆ ಅಲ್ಲವೇ ? ಆದರೆ ಬಾಯಿ ಬಿಟ್ಟು ಹೇಳುವುದಕ್ಕೆ ಮಾತಾಗಲೀ ಅಥವಾ ಸನ್ನೆ ಮಾಡಿ ತೋರಿಸುವುದಕ್ಕೆ ಅಷ್ಟು ಬುದ್ಧಿ ಆಗಲೀ ಅದಕ್ಕೆ ಆ ಸಮಯದಲ್ಲಿ ಇರುವುದಿಲ್ಲ . ಅದನ್ನು ನಾವೇ ಅರ್ಥ ಮಾಡಿಕೊಳ್ಳಬೇಕು .
ಅದಕ್ಕೆ ಹಸಿವಾದಾಗ ಹಾಲುಣಿಸಬೇಕು , ಅತ್ತಾಗ ಸಮಾಧಾನ ಮಾಡಬೇಕು , ಚಳಿಯಾದಾಗ ಹೊದಿಸಬೇಕು , ಶೆಕೆಯಾದಾಗ ಗಾಳಿ ಬೀಸಬೇಕು . ಹೀಗೆ ಅನೇಕ ಜವಾಬ್ದಾರಿಗಳು ನಮಗೆ ಮಗು ಹುಟ್ಟುತ್ತಲೇ ಬಂದುಬಿಡುತ್ತವೆ . ನಮಗೆ ಕಷ್ಟವಾದರೂ ಅದನ್ನು ಇಷ್ಟ ಪಟ್ಟು ಮಗುವಿನ ಸಂತೋಷವೇ ನಮ್ಮ ಸಂತೋಷ ಎಂದು ಭಾವಿಸಿ ಮಗುವಿನ ಅಗತ್ಯತೆಗಳನ್ನು ಪೂರೈಸಿ ಖುಷಿಯಿಂದ ಅದರ ಜೊತೆ ಬೆರೆಯಬೇಕು . ಇಂದು ನಾವು ಮಗುವಿಗೆ ಬೇಸಿಗೆಯಲ್ಲಿ ಹೇಗೆಲ್ಲಾ ಆರೈಕೆ ಮಾಡಿದರೆ , ಅದು ನಗುನಗುತ್ತಾ ನಮ್ಮನ್ನೂ ನಗಿಸುತ್ತಾ ಆರಾಮವಾಗಿರುತ್ತದೆ ಎಂಬುದನ್ನು ನೋಡೋಣ .

ಮಗುವಿಗೆ ಸರಿಯಾದ ಬಟ್ಟೆಗಳನ್ನೇ ಧರಿಸಿ
ಇದು ಪ್ರತಿಯೊಬ್ಬರೂ ಗಮನಿಸಬೇಕಾದ ಅಂಶ . ನಮ್ಮ ಪುಟ್ಟ ಮಗುವಿಗೆ ಏನು ಬೇಕು , ಏನು ಬೇಡ . ಅದರ ಇಷ್ಟ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಮೊದಲ ಹೆಜ್ಜೆ ಇದು . ಮಗು ನೋಡಲು ಚಂದ ಕಾಣಲು ಅದಕ್ಕೆ ಬಣ್ಣ ಬಣ್ಣದ ಬಟ್ಟೆ ಹಾಕುವುದಷ್ಟೇ ಅಲ್ಲ . ಮಗುವಿಗೆ ಹಾಕುವ ಬಟ್ಟೆ ಅದಕ್ಕೆ ಯಾವುದೇ ಮುಜುಗರವಾಗದಂತೆ ಅದರ ಸುರಕ್ಷತೆ ಮತ್ತು ಅದರ ಆರೋಗ್ಯ ಕಾಪಾಡುವ ಹಾಗಿರಬೇಕು . ಮಗುವಿಗೆ ಬಟ್ಟೆ ಆಯ್ಕೆ ಮಾಡುವುದೂ ಒಂದು ರೀತಿಯ ಕಲೆಯೇ ಸರಿ . ನನಗೆ ಇಂತಹದೇ ಬಟ್ಟೆ ಬೇಕು ಎಂದು ಅದು ಕೇಳುವುದಿಲ್ಲ . ಅದರಿಂದ ಅದಕ್ಕೆ ಬೇಕಾದ ಮತ್ತು ಇಷ್ಟವಾಗುವ ರೀತಿ ಬಟ್ಟೆಯನ್ನು ಸ್ವತಃ ನೀವೇ ಆಯ್ಕೆ ಮಾಡಬೇಕು . ಯಾವ ರೀತಿ ಎಂದರೆ , ಬೇಸಿಗೆಯಲ್ಲಿ ನಿಮ್ಮ ಮಗು ಮನೆಯ ಒಳಗಿದ್ದಾಗ ಸಿಂಥೆಟಿಕ್ ಬಟ್ಟೆಗಳನ್ನು ಹಾಕುವ ಬದಲು ಹಗುರವಾದ ಮತ್ತು ಸಡಿಲವಾದ ಬಟ್ಟೆಗಳನ್ನೇ ಹಾಕಿ . ಇದರಿಂದ ಮಗುವಿಗೆ ಬರುವ ಬೇವರನ್ನು ಬಟ್ಟೆ ಹೀರಿಕೊಳ್ಳುತ್ತದೆ ಮತ್ತು ಮಗುವಿಗೆ ಕೈ ಕಾಲು ಆಡಿಸಲು , ಆಟವಾಡಲು ಯಾವುದೇ ತೊಂದರೆ ಆಗುವುದಿಲ್ಲ . ಅದು ಖುಷಿಯಾಗಿರುತ್ತದೆ . ನೀವು ಮನೆಯ ಹೊರಗಡೆ ನಿಮ್ಮ ಮಗುವನ್ನು ಎತ್ತಿಕೊಂಡು ಹೊರಟಾಗ , ತಿಳಿ ಬಣ್ಣದ ಉದ್ದನೆಯ ಪ್ಯಾಂಟ್ , ಉದ್ದನೆಯ ತೋಳಿರುವ ಅಂಗಿ ಮತ್ತು ತಲೆಯ ಮೇಲೆ ಒಂದು ವಿಶಾಲವಾದ ಅಂಚಿರುವ ಟೋಪಿ ಹಾಕಿ . ಇದರಿಂದ ಸೂರ್ಯನ ಮಧ್ಯಾಹ್ನ ದ ಪ್ರಕಾರವಾದ ಕಿರಣಗಳಿಂದ ನಿಮ್ಮ ಮಗುವಿನ ಚರ್ಮವು ಸನ್ ಬರ್ನ್ ನಂತಹ ಸಂಧರ್ಭದಿಂದ ಹಾಳಾಗುವುದು ತಪ್ಪುತ್ತದೆ.ನಿಮ್ಮ ಮಗುವಿಗೆ ಒಳ್ಳೆಯ ಬಟ್ಟೆ ಆಯ್ಕೆ ಮಾಡುವುದನ್ನು ನೀವು ಕಲಿತರೆ ಖಂಡಿತ ಮಗುವಿನ ಜವಾಬ್ದಾರಿಯ ಮೊದಲನೇ ಪರೀಕ್ಷೆಯಲ್ಲಿ ಪಾಸಾದಂತೆ !!!

ಮಗುವಿಗೆ ಸರಿಯಾದ ಗಾಳಿಯ ವ್ಯವಸ್ಥೆ ಮಾಡಿ
ಇದಕ್ಕೆ ಕಾರಣ ಮಗು ಬೆವರುವುದು . ನಾವು ದೊಡ್ಡವರಾದರೆ ನಮ್ಮ ಸುತ್ತಲಿನ ಪರಿಸರದ ಬಿಸಿಯನ್ನು ತಡೆದುಕೊಳ್ಳುತ್ತೇವೆ . ಬೆವರು ಬಂದರೆ ಒರೆಸಿಕೊಂಡು ಸುಮ್ಮನಾಗುತ್ತೇವೆ . ಏಕೆಂದರೆ ನಮ್ಮ ದೇಹದ ಮೇಲೆ ಬಲಿತ ಚರ್ಮವಿದೆ . ಆದರೆ ಮಗುವಿನ ಚರ್ಮ ತುಂಬಾ ಎಳೆಯದು ಮತ್ತು ತುಂಬಾ ಸೂಕ್ಷ್ಮವಾದ ಚರ್ಮ . ಅದಕ್ಕೆ ಸ್ವಲ್ಪ ಅಹಿತಕರ ಎನಿಸಿದರೂ ಅದು ಸಹಿಸಿಕೊಳ್ಳುವುದಿಲ್ಲ . ಅಂದ ಮೇಲೆ ಈ ಬೇಸಿಗೆಯಲ್ಲಿರುವ 35 ಡಿಗ್ರಿ ಉಷ್ಣಾಂಶವನ್ನು ಹೇಗೆ ತಾನೇ ತಡೆದುಕೊಂಡೀತು ? ಆದ್ದರಿಂದ ಮಗುವನ್ನು ಇಷ್ಟು ಬಿಸಿ ವಾತಾವರಣದಲ್ಲಿ ಬಿಡದೆ ಸದಾ ಮಗುವಿನ ಸುತ್ತ ಗಾಳಿಯ ವ್ಯವಸ್ಥೆಯನ್ನು ಅತ್ಯಂತ ತ್ವರಿತವಾಗಿ ಮಾಡುವುದು ಪೋಷಕರಾದ ನಿಮ್ಮ ಕರ್ತವ್ಯ . ಇಲ್ಲಿ ಗಮನಿಸಬೇಕಾದ ವಿಷಯವೆಂದರೆ , ಮಗುವಿನ ಚರ್ಮವು ಸೂಕ್ಷ್ಮವಾಗಿರುವುದರಿಂದ ಅದು ಬಿಸಿಯ ವಾತಾವರಣದಲ್ಲಿ ಇದ್ದರೆ ಅದರ ದೇಹದ ಉಷ್ಣಾಂಶ ಕೂಡ ಹೆಚ್ಚಾಗುತ್ತದೆ .

ಬೇಸಿಗೆ ಪ್ರಿಯವಾದ ಬೇಬಿ ಕ್ಯಾರಿಯರ್ ಅನ್ನೇ ಬಳಸಿ
ಈ ಬೇಸಿಗೆಯಲ್ಲಿ ಮಗುವನ್ನು ನೀವು ಹೊರಗಡೆ ಕಡೆದುಕೊಂಡು ಹೋಗಲು ಬಯಸಿದರೆ , ಆದಷ್ಟು ಸಮ್ಮರ್ ಫ್ರೆಂಡ್ಲಿ ಅಂದರೆ ತಾಪಮಾನ ಸ್ನೇಹಿಯಾದ ಬೇಬಿ ಕ್ಯಾರಿಯರ್ ಅನ್ನೇ ಉಪಯೋಗಿಸಿ . ಏಕೆಂದರೆ ಮಗು ಕ್ಯಾರಿಯರ್ ನಲ್ಲಿದ್ದರೆ ಅದರಲ್ಲಿರುವ ದಪ್ಪ ಬಟ್ಟೆ ಮಗುವನ್ನು ಬಹು ಬೇಗನೆ ಬೆವರುವಂತೆ ಮಾಡಿ ಹೊರಗಿನ ಮತ್ತು ಒಳಗಿನ ಬಿಸಿಗೆ ಅದಕ್ಕೆ ಕಸಿವಿಸಿ ಆಗಲು ಶುರುವಾಗುತ್ತದೆ . ಆದ್ದರಿಂದ ಆದಷ್ಟು ತೆಳುವಾದ ನೈಲಾನ್ ಬಟ್ಟೆಯಿಂದ ಮಾಡಿದ ಬೇಬಿ ಕ್ಯಾರಿಯರ್ ಅನ್ನು ಮಾತ್ರ ಉಪಯೋಗಿಸಿ.

ಮಗುವಿನ ದೇಹದಲ್ಲಿ ನೀರಿನಂಶ ಕಡಿಮೆ ಆಗದಂತೆ ನೋಡಿಕೊಳ್ಳಿ
ಬಿರು ಬೇಸಿಗೆಯ ಅತಿ ಹೆಚ್ಚು ತಾಪಮಾನಕ್ಕೆ ನಮ್ಮ ದೇಹದಲ್ಲಿರುವ ನೀರಿನಂಶವೇ ಬೆವರಿನ ರೀತಿಯಲ್ಲಿ ಬತ್ತಿ ಹೋಗುತ್ತಿರುತ್ತದೆ . ಇನ್ನು ಆ ಮಗುವಿನ ಪಾಡು ಕೇಳಬೇಕೆ ? ಅದಕ್ಕಂತೂ ಹೇಳುವ ಹಾಗೂ ಇಲ್ಲ . ಬಿಡುವ ಹಾಗೂ ಇಲ್ಲ ಅನ್ನುವಂತಾಗಿರುತ್ತದೆ ಅದರ ಪರಿಸ್ಥಿತಿ . ಅದು ಸಪ್ಪೆ ಮುಖ ಮಾಡಿಕೊಂಡು ಸುಮ್ಮನಿರುತ್ತದೆ ಅಷ್ಟೇ . ಆದರೆ ನಮಗೆ ಮಗು ಬೆವರುತ್ತಿದೆ ಎಂದು ತಿಳಿಯುವುದು ಹೇಗೆ ? ಮೊದಲು ಅದರ ಹಣೆಯನ್ನು ಗಮನಿಸಬೇಕು . ಮಗು ಬೆವರುತ್ತಿದ್ದರೆ ಸಣ್ಣ ಸಣ್ಣ ಬೆವರ ಹನಿಗಳು ಅದರ ಹಣೆಯ ಮೇಲೆ ಕಂಡು ಬರುತ್ತವೆ . ಒಂದು ವೇಳೆ ಇಲ್ಲಿಯೂ ಗೊತ್ತಾಗದಿದ್ದರೆ , ಮಗುವಿನ ಚರ್ಮ ಎಲ್ಲಿ ಮುಟ್ಟಿದರೂ ಬಿಸಿಯಾಗಿರುತ್ತದೆ , ಜೋರಾಗಿ ಉಸಿರಾಡುತ್ತಿರುತ್ತದೆ ಮತ್ತು ಚಡಪಡಿಸುತ್ತಿರುತ್ತದೆ . ಆದ್ದರಿಂದ ಈ ಲಕ್ಷಣಗಳನ್ನು ಅರ್ಥ ಮಾಡಿಕೊಂಡು ಬೇರೆ ದಿನಗಳಿಗೆ ಹೋಲಿಸಿದಂತೆ ಶೇಕಡಾ 50 ರಷ್ಟು ನೀರನ್ನು ಬೇಸಿಗೆ ದಿನಗಳಲ್ಲಿ ಹೆಚ್ಚಾಗಿ ನಿಮ್ಮ ಮಗುವಿಗೆ ಕುಡಿಸಬೇಕು.

ಸನ್ ಸ್ಕ್ರೀನ್ ಉಪಯೋಗಿಸುವುದು ಮರೆಯಬೇಡಿ
ಮಗುವನ್ನು ಬಿಸಿಲಲ್ಲಿ ಕರೆದೊಯ್ಯಬೇಕಾದರೆ ಅದಕ್ಕೆ ಸನ್ ಸ್ಕ್ರೀನ್ ತೊಡಿಸುವುದನ್ನು ಮರೆಯಬೇಡಿ . ಏಕೆಂದರೆ ಮಗುವಿನದು ಅತ್ಯಂತ ಸೂಕ್ಷ್ಮವಾದ , ನಯವಾದ ಮತ್ತು ತೆಳುವಾದ ಚರ್ಮ . ಬಿಸಿಲು ನೇರವಾಗಿ ಮಗುವನ್ನು ತಾಗಿದರೆ ಮಗುವಿನ ಆರೋಗ್ಯದಲ್ಲಿ ಗಂಭೀರವಾದ ಏರು ಪೇರುಗಳಾಗಬಹುದು . ಆದ್ದರಿಂದ ಸನ್ ಸ್ಕ್ರೀನ್ ಅನ್ನು ಒಂದು ರಕ್ಷಾ ಕವಚವನ್ನಾಗಿ ಉಪಯೋಗಿಸಿ . ಆದರೆ ಮಗು 6 ತಿಂಗಳ ಒಳಗಿನದಾದರೆ ಸನ್ ಸ್ಕ್ರೀನ್ ನ ಬಳಕೆ ಬೇಡ .



Click it and Unblock the Notifications
