Latest Updates
-
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ!
ನೆನಪಿಡಿ ಗರ್ಭಿಣಿಯರು ಅತಿಯಾಗಿ ಆಲೂಗಡ್ಡೆ ಚಿಪ್ಸ್ ತಿನ್ನಲೇಬಾರದು!
ಗರ್ಭಾವಸ್ಥೆ ಎನ್ನುವುದು ಹೆಣ್ಣಿಗೆ ಒಂದು ವಿಶೇಷವಾದ ಸಂದರ್ಭ. ಈ ಸಮಯದಲ್ಲಿ ಹೆಣ್ಣು ತನ್ನ ಮಡಿಲಲ್ಲಿ ಒಂದು ಜೀವವನ್ನು ಹೊತ್ತುಕೊಳ್ಳುವುದರ ಮೂಲಕ ಸಾಕಷ್ಟು ಮಾನಸಿಕ ಹಾಗೂ ದೈಹಿಕ ಬದಲಾವಣೆಯನ್ನು ಅನುಭವಿಸುತ್ತಾಳೆ. ಹಾರ್ಮೋನ್ಗಳ ಬದಲಾವಣೆಯು ಆಕೆಯ ಅಭಿರುಚಿ, ಆಸಕ್ತಿ ಹಾಗೂ ಆಹಾರ ಶೈಲಿಯಲ್ಲಿ ಬದಲಾವಣೆಯನ್ನು ಸೂಚಿಸುವುದು. ಅದಕ್ಕೆ ಅನುಗುಣವಾಗಿ ಗರ್ಭಿಣಿಯರು ತಾವು ಸೇವಿಸುವ ಆಹಾರದಲ್ಲಿ ಅತಿಯಾದ ಹುಳಿ, ಸಿಹಿ, ಖಾರ, ಸಪ್ಪೆ ಹೀಗೆ ವಿವಿಧ ಬಗೆಯ ರುಚಿಕರವಾದ ಆಹಾರವನ್ನು ತಿನ್ನಲು ಬಯಸುತ್ತಾರೆ.
ಗರ್ಭಿಣಿಯರು ಹೆಚ್ಚು ಧೈರ್ಯಶಾಲಿಗಳಾಗಿಯೂ ಬಲಶಾಲಿಗಳಾಗಿಯೂ ಸಾಹಸ ಪ್ರವೃತ್ತಿಯವರಾಗಿಯೂ ಇರುವರೆಂದೂ ಗರ್ಭಾವಸ್ಥೆಯ ಕೊನೆಗೊಂಡ ಮೇಲೂ ಅವರು ಈ ಗುಣಗಳನ್ನು ಹೊಂದಿರುವರೆಂದೂ ಹೇಳಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಗರ್ಭಿಣಿಯರಲ್ಲಿ ಮಾನಸಿಕ ವ್ಯಾಪಾರಗಳು ಸ್ವಲ್ಪಮಟ್ಟಿಗೆ ಏರುಪೇರಾಗುತ್ತವೆ. ಸ್ವಲ್ಪ ಕಿರಿಕಿರಿ-ಶೀಘ್ರ ಕೋಪ-ಸೂಕ್ಷ್ಮಮನಸ್ಕರಾಗಿರುತ್ತಾರೆ.

ಕ್ಷಯ ರೋಗಿಗಳು ಗರ್ಭಿಣಿಯರಾದಾಗ ಅವರಲ್ಲಿ ರೋಗದ ಉಲ್ಬಣ ತಗ್ಗಿನ ಮಟ್ಟದಲ್ಲಿರುತ್ತದೆ. ಆದರೆ ಗರ್ಭಾವಸ್ಥೆ ಕೊನೆಗೊಂಡ ಮೇಲೆ ರೋಗ ತೀಕ್ಷ್ಣತರವಾಗುತ್ತದೆ. ಆದರೆ ಬಲಹೀನ, ರೋಗಿಷ್ಠ ಸೂಕ್ಷ್ಮವ್ಯಕ್ತಿಗಳು, ಅತಿಚಿಕ್ಕ ವಯಸ್ಸಿಯವರು ಮತ್ತು ಅತಿ ಹೆಚ್ಚು ವಯಸ್ಕರು ಗರ್ಭಿಣಿಯರಾದರೆ ಗರ್ಭಾವಸ್ಥೆಯಲ್ಲಿ ಅವರು ಅನೇಕ ಪಿಡುಗುಗಳನ್ನು ಅನುಭವಿಸ ಬೇಕಾಗುತ್ತದೆ. ಹೊಟ್ಟೆ ತೊಳಸು, ವಾಂತಿ, ಕೆಲವು ಬಯಕೆ, ಹಲ್ಲುನೋವು, ಕೆಮ್ಮು ಗರ್ಭಕಾಲದ ಪ್ರಾರಂಭಿಕ ಮೂರು ತಿಂಗಳು ಮತ್ತು ಕೊನೆಯ ತಿಂಗಳು ಮೂತ್ರವಿಸರ್ಜನೆಯಲ್ಲಿ ತೊಂದರೆ, ಕಾಲಿನ ಅಭಿಧಮನಿಗಳು ಊದಿಕೊಂಡು ಕಾಲು ತೊಡೆಗಳಲ್ಲಿ ಊತ, ನೋವು ಉಂಟಾಗುವುದು ಇತ್ಯಾದಿ ಇವರ ಗರ್ಭಾವಸ್ಥೆಯಲ್ಲಿ ಕಂಡುಬರುತ್ತವೆ.
ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆ ಹೊಂದಿದಂತೆ ತಾಯಿಯ ಆಹಾರ ಕ್ರಮದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತವೆ. ಸೇವಿಸುವ ಆಹಾರ ಪದಾರ್ಥಗಳ ಪ್ರಮಾಣವೂ ಹೆಚ್ಚಾಗುವುದು. ಒಂದೇ ಸಮಯದಲ್ಲಿ ಅತಿಯಾಗಿ ಊಟ ಮಾಡುವ ಬದಲು ಆಗಾಗ ಸ್ವಲ್ಪ-ಸ್ವಲ್ಪ ಆಹಾರವನ್ನು ಸೇವಿಸುತ್ತಲೇ ಇರುತ್ತಾರೆ. ಹೀಗೆ ಸೇವಿಸುವ ಆಹಾರವು ಆದಷ್ಟು ಪೌಷ್ಟಿಕಾಂಶ ಒದಗಿಸುವಂತಹ ಆಹಾರಗಳಾಗಿರಬೇಕು. ಉದಾಹರಣೆಗೆ, ಹಣ್ಣುಗಳು, ತರಕಾರಿ, ಸೊಪ್ಪು, ಬೇಯಿಸಿದ ಬೇಳೆ-ಕಾಳುಗಳು, ತಾಜಾ ಹಣ್ಣಿನ ರಸಗಳನ್ನು ಸೇವಿಸಬೇಕು.
ಗರ್ಭಾವಸ್ಥೆಯಲ್ಲಿ ಇರುವಾಗ ತಾವು ಏನನ್ನು ತಿನ್ನುತ್ತಿದ್ದೇವೆ? ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು? ತಾವು ಸೇವಿಸುವ ಆಹಾರ ಪದಾರ್ಥಗಳು ಮಗುವಿನ ಬೆಳವಣಿಗೆಗೆ ಪೂರಕವೇ? ಅನುಚಿತ ಆಹಾರ ಪದಾರ್ಥಗಳು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಹೇಗೆ ಕಳಪೆ ಮಟ್ಟದ ಪ್ರಭಾವ ಬೀರುವುದು? ಒಂದು ಸಣ್ಣ ನಿರ್ಲಕ್ಷ್ಯವು ಯಾವ ಬಗೆಯ ತೊಂದರೆಯನ್ನು ಉಂಟುಮಾಡುವುದು? ಎನ್ನುವಂತಹ ಅನೇಕ ಸಂಗತಿಗಳನ್ನು ತಿಳಿದುಕೊಳ್ಳಬೇಕು. ಆಗಲೇ ಆರೋಗ್ಯ ಪೂರ್ಣ ಗರ್ಭಾವಸ್ಥೆಯ ಅನುಭವವನ್ನು ಹೊಂದಲು ಸಾಧ್ಯ.
ಆದರೆ ಕೆಲವು ಮಹಿಳೆಯರು ತಾವು ಗರ್ಭಾವಸ್ಥೆಯಲ್ಲಿ ಇದ್ದೇವೆ ಎನ್ನುವುದರ ಕುರಿತು ಹೆಚ್ಚಿನ ಕಾಳಜಿಯನ್ನು ಹೊಂದುವುದಿಲ್ಲ. ಬದಲಿಗೆ ಮನಸ್ಸಿಗೆ ಬಂದ ತಿಂಡಿ ಹಾಗೂ ಬಾಯಿಗೆ ರುಚಿ ನೀಡುವ ಆಹಾರವನ್ನು ಸೇವಿಸಲು ಮುಂದಾಗುತ್ತಾರೆ. ಅದರಲ್ಲೂ ಕೆಲವು ಮಹಿಳೆಯರಿಗೆ
ಗರ್ಭಾವಸ್ಥೆಯಲ್ಲಿ ಕುರುಕಲು ತಿಂಡಿ, ಚಿಪ್ಸ್ ಗಲಂತಹ ಆಹಾರವು ಹೆಚ್ಚು ರುಚಿಯನ್ನು ನೀಡುವುದು. ಹಾಗಾಗಿಯೇ ಆಗಾಗ ಆಲೂಗಡ್ಡೆಯ ಚಿಪ್ಸ್ ಸೇರಿದಂತೆ ಇನ್ನಿತರ ಕುರುಕಲು ತಿಂಡಿಯನ್ನು ನಿಧಾನವಾಗಿ ಸೇವಿಸುತ್ತಲೇ ಇರುತ್ತಾರೆ ಎನ್ನಲಾಗುವುದು. ಇತ್ತೀಚೆಗೆ ಗರ್ಭಿಣಿಯರು ಸೇವಿಸುವ ಆಹಾರಗಳ ಕುರಿತು ಒಂದು ಅಧ್ಯಯನ ಹಾಗೂ ಸಂಶೊಧನೆಯನ್ನು ನಡೆಸಲಾಯಿತು. ಅದರ ಪ್ರಕಾರ ಕುರುಕಲು ತಿಂಡಿ, ಎಣ್ಣೆಯ ಪದಾರ್ಥ ಹಾಗೂ ಚಿಪ್ಸ್ ಅತ್ಯಂತ ಅಪಾಯಕಾರಿ ಎಂದು ತಿಳಿದು ಬಂದಿದೆ. ಅದರಲ್ಲೂ ಆಲೂಗಡ್ಡೆಯ ಚಿಪ್ಸ್ಆ ರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುವುದು. ಅತಿಯಾದ ಆಲೋಗಡ್ಡೆ ಚಿಪ್ಸ್ ಸೇವಿಸಿದರೆ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ತೀವ್ರತರದ ಪರಿಣಾಮ ಉಂಟಾಗುವುದು ಎನ್ನುವುದನ್ನು ದೃಢಪಡಿಸಿದೆ. ಅಲ್ಲದೆ ಭ್ರೂಣದ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುವುದು.
ಅಧ್ಯಯನದ ಪ್ರಕಾರ:
ಇತ್ತೀಚೆಗೆ ನಡೆಸಿರುವ ಅಧ್ಯಯನದ ಪ್ರಕಾರ ಒಮೆಗಾ 6 ಮತ್ತು ಲಿನೋಲಿಯಿಕ್ ಆಮ್ಲವು ಗರ್ಭಿಣಿಯರ ಆರೋಗ್ಯದ ಮೇಲೆ ತೀವ್ರತರವಾದ ಪರಿಣಾಮ ಉಂಟುಮಾಡುವುದು. ಈ ಎರಡು ಅಂಶಗಳು ಆಹಾರದಲ್ಲಿ ಅಥವಾ ದೇಹದಲ್ಲಿ ಹೆಚ್ಚಿನ ಪ್ರಮಾಣ ಕಂಡುಬಂದರೆ ಉರಿಯೂತ ಉಂಟಾಗುವುದು. ದೇಹಕ್ಕೆ ಅಗತ್ಯವಾದ ಲಿನೋಲಿಯಿಕ್ ಪ್ರಮಾಣ ಮೂರು ಪಟ್ಟು ಹೆಚ್ಚಾಯಿತು ಎಂದಾದರೆ ಗರ್ಭ ಹಾಗೂ ಭ್ರೂಣದ ಮೇಲೆ ಗಂಭೀರ ಪ್ರಭಾವ ಬೀರುವುದು. ಅಲ್ಲದೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಅಥವಾ ಕಾಯಿಲೆಗಳು ಕಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಹೇಳಲಾಗಿದೆ.
ಅಧ್ಯಯನ ಕೈಗೊಂಡವರು:
ಈ ಅಧ್ಯಯನವನ್ನು "ದಿ ಜರ್ನಲ್ ಆಫ್ ಫಿಸಿಯೋಲಜಿ" ಪ್ರಕಟಿಸಿದೆ. ಗರ್ಭಿಣಿಯರು ತಮ್ಮ ಆಹಾರ ಕ್ರಮದಲ್ಲಿ ಸಾಕಷ್ಟು ಕಾಳಜಿ ಹಾಗೂ ಎಚ್ಚರಿಕೆಯನ್ನು ಹೊಂದಿರಬೇಕು. ಮಗುವಿನ ಬೆಳವಣಿಗೆ ಹಾಗೂ ತಾಯಿಯ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶ ಹಾಗೂ ವಿಟಮಿನ್ಗಳು ದೊರೆಯಬೇಕು. ಈ ಪೌಷ್ಟಿಕಾಂಶವು ಅಗತ್ಯಕ್ಕೂ ಮೀರಿ ಹೆಚ್ಚಾದರೆ ಅದು ಸಹ ಭ್ರೂಣದ ಬೆಳವಣಿಗೆ ಹಾಗೂ ತಾಯಿಯ ಆರೋಗ್ಯದಲ್ಲಿ ಸಾಕಷ್ಟು ತೊಂದರೆಯನ್ನು ತಂದೊಡ್ಡುವುದು.
ಇಲಿಗಳ ಮೇಲೆ ಪ್ರಯೋಗ
ಇಲಿಗಳ ಮೇಲೆ ಪ್ರಯೋಗ ಮಾಡುವುದರ ಮೂಲಕ ಸಾಕಷ್ಟು ಮಾಹಿತಿಯನ್ನು ಪಡೆದುಕೊಳ್ಳಲಾಯಿತು. ಗರ್ಭಾವಸ್ಥೆಯಲ್ಲಿ ಇರುವ ಇಲಿಗಳಿಗೆ ಲಿನೋಲಿಯಿಕ್ ಆಸಿಡ್ ಯಾವ ರೀತಿಯ ಪ್ರಭಾವ ಬೀರುವುದು ಎನ್ನುವುದನ್ನು ಮೊದಲು ಪರಿಶೀಲಿಸಿದರು. ಅಗತ್ಯವಾದ ಲಿನೋಲಿಯಿಕ್ಆ ಮ್ಲ ಹಾರ್ಮೋನ್ಗಳನ್ನು ನಿಯಂತ್ರಿಸುತ್ತದೆ. ಮಗುವಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಗರ್ಭಾಶಯದ ಸಂಕೋಚಕ್ಕೆ ಸಹಾಯ ಮಾಡುವುದು. ಪಿತ್ತ ಜನಕಾಂಗದಲ್ಲಿ ಉರಿಯೂತ ಪ್ರೋಟೀನ್ಗಳ ಬದಲಾವಣೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಸಹ ನಿಯಂತ್ರಣದಲ್ಲಿ ಇಡುತ್ತದೆ. ಅದೇ ಈ ಆಮ್ಲದ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾದರೆ ಮಗುವಿನ ಬೆಳವಣಿಗೆ ಹಾಗೂ ತಾಯಿಯ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುವುದು ಎನ್ನುವುದು ಸಾಭೀತಾಗಿದೆ.
ಗರ್ಭಾವಸ್ಥೆಯಲ್ಲಿ ಇರುವ ಮಹಿಳೆಯರು ಈ ಆಹಾರಗಳಿಂದಲೂ ದೂರ ಇರುವುದು ಉತ್ತಮ.
* ಗರ್ಭಾವಸ್ಥೆಯಲ್ಲಿ ಇರುವಾಗ ಮದ್ಯ ಸೇವನೆಯನ್ನು ಅಪ್ಪಿತಪ್ಪಿಯೂ ಮಾಡಬಾರದು. ಅದು ಮಗುವಿನ ಮಿದಿಳು ಬೆಳವಣಿಗೆಯ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮ ಉಂಟಾಗುವುದು.
* ದಿನವಿಡೀ ಕೆಫಿನ್ ಭರಿತವಾದ ಪೇಯ ಹಾಗೂ ಆಹಾರವನ್ನು ಸೇವಿಸಬಾರದು.
* ಗರ್ಭಿಣಿಯರಿಗೆ ಹಣ್ಣುಗಳು ಉತ್ತಮವಾಗಿದ್ದರೂ ಪಪ್ಪಾಯ ಹಾಗೂ ಅನಾನಸ್ ಹಣ್ಣುಗಳಿಂದ ಆದಷ್ಟು ದೂರ ಇರಿ.
* ಮಾಂಸಾಹಾರಿಗಳು ಕಚ್ಚಾ ಮೊಟ್ಟೆ ಸೇವನೆಯನ್ನು ಮಾಡದಿರಿ.
* ಮಕ್ಯುರಿಯಿಂದ ಮೀನುಗಳು ಕೂಡಿರುವುದರಿಂದ ಗರ್ಭಾವಸ್ಥೆಯಲ್ಲಿ ಮಿತವಾಗಿ ಸೇವಿಸಬೇಕು.
* ಹಸಿ ಮಾಂಸ, ಹಸಿ ಹಾಲು, ಸುಚಿಯಾಗದಿರುವ ಸೊಪ್ಪು-ಹಣ್ಣುಗಳನ್ನು ಸೇವಿಸಬಾರದು. ಇವುಗಳು ಹೆಚ್ಚು ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ.



Click it and Unblock the Notifications


