For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿರುವಾಗ ಮಲಬದ್ಧತೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ.

|

ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಎನ್ನುವುದು ಬಹುತೇಕ ಮಹಿಳೆಯರಿಗೆ ಕಾಡುತ್ತದೆ ಎಂದು ಕೆಲವು ಅಧ್ಯಯನಗಳು ಧೃಡಪಡಿಸಿವೆ. ಮಾನಸಿಕ ಒತ್ತಡ, ದೈಹಿಕ ವ್ಯಾಯಾಮದ ಕೊರತೆ, ಕಡಿಮೆ ಪ್ರಮಾಣದ ನಾರಿನಂಶದ ಆಹಾರ ಸೇವನೆ, ಕಡಿಮೆ ನೀರನ್ನು ಕುಡಿಯುವುದು ಹೀಗೆ ಅನೇಕ ಕಾರಣಗಳಿಂದಾಗಿ ಗರ್ಭಾವಸ್ಥೆಯಲ್ಲಿ ಮಲಬದ್ಧತೆಯು ಪ್ರಚೋದನೆ ಪಡೆದುಕೊಳ್ಳುವುದು. ವಿಸ್ತಾರಗೊಂಡ ಗರ್ಭಾಶಯವು ಕರುಳಿನ ಮೇಲೆ ಒತ್ತಡವನ್ನು ನೀಡುತ್ತದೆ. ಇಂತಹ ಸ್ಥಿತಿ ಉಂಟಾದಾಗ ಸಾಮಾನ್ಯವಾಗಿ ಗರ್ಭಿಣಿಯರಿಗೆ ಮಲಬದ್ಧತೆ ಉಂಟಾಗುವುದು.

ಅಲ್ಲದೆ ಕರುಳಿನ ಸ್ನಾಯುಗಳು ಸಡಿಲಗೊಂಡಾಗ ಅದರ ಚಲನೆಯು ನಿಧಾನವಾಗುವುದು. ಆಗ ಆಹಾರದ ತ್ಯಾಜ್ಯದ ಚಲನೆಯು ನಿಧಾನಗೊಳಿಸುತ್ತದೆ. ಕೆಲವು ಗರ್ಭಿಣಿಯರಲ್ಲಿ ಕಬ್ಬಿಣಾಂಶದ ಕೊರತೆಯಿಂದಾಗಿಯೂ ಮಲಬದ್ಧತೆ ಉಂಟಾಗುವುದು. ಈ ಸಮಸ್ಯೆಯು ಕಪ್ಪು ಮಲಬದ್ಧತೆಯನ್ನು ಉಂಟುಮಾಡುವುದು. ಅವು ಗರ್ಭಾವಸ್ಥೆಯ ಕೊನೆಯ ತಿಂಗಳಲ್ಲಿ ಹೆಚ್ಚಿನ ತೊಂದರೆಯನ್ನುಂಟುಮಾಡಬಹುದು.

Constipation

ಗರ್ಭಾವಸ್ಥೆಯಲ್ಲಿ ಮಲಬದ್ಧತೆಯು ಹೆಚ್ಚು ಅಸಹನೀಯತೆ ಹಾಗೂ ಕಿರಿಕಿರಿಯನ್ನು ಉಂಟುಮಾಡುವುದು. ಎರಡನೆಯ ಮತ್ತು ಮೂರನೆಯ ತ್ರೈಮಾಸಿಕದಲ್ಲಿ ಮಗುವಿನ ಬೆಳವಣಿಗೆ ಗಣನೀಯವಾಗಿ ನಡೆಯುತ್ತಲೇ ಇರುತ್ತವೆ. ಆಗ ಒತ್ತಡಗಳು ಉಂಟಾಗುವುದು ಹಾಗೂ ಮಲಬದ್ಧತೆ ಉಂಟಾಗಲು ಪ್ರಾರಂಭವಾಗುವುದು. ಕೆಲವರು ಈ ಮೊದಲೆ ಅನೇಕ ಮಕ್ಕಳನ್ನು ಹೊಂದಿರುವ ಮಹಿಳೆಯರಲ್ಲೂ ಈ ಸಮಸ್ಯೆ ಉಂಟಾಗಬಹುದು. ಹಾಗಾಗಿ ಗರ್ಭಾವಸ್ಥೆಯಲ್ಲಿ ಇರುವಾಗ ಮಹಿಳೆಯರು ತಮ್ಮ ಆರೋಗ್ಯ ಹಾಗೂ ಆಹಾರ ಕ್ರಮದ ಮೇಲೆ ಹೆಚ್ಚಿನ ಕಾಳಜಿ ಹಾಗೂ ಎಚ್ಚರಿಕೆಯನ್ನು ಹೊಂದಿರಬೇಕು.

Most Read: ಮಕ್ಕಳಲ್ಲಿ ಕಾಣಿಸುವ ಮಲಬದ್ಧತೆಗೆ ಒಂದಿಷ್ಟು ಸರಳ ಪರಿಹಾರ

ಮಲಬದ್ಧತೆ ಎನ್ನುವುದು ಗರ್ಭಾವಸ್ಥೆಯಲ್ಲಿ ಭೀಕರತೆಯನ್ನು ಉಂಟುಮಾಡುತ್ತದೆ. ಅದು ಕೆಲವೊಮ್ಮೆ ಅಪಾಯಕಾರಿ ಪರಿಣಾಮವನ್ನು ಅಥವಾ ಪರಿಸ್ಥಿತಿಯನ್ನು ತಂದೊಡ್ಡಬಹುದು. ಗುದನಾಳದ ಸುತ್ತಲಿನ ರಕ್ತನಾಳಗಳ ಮೇಲೆ ಒತ್ತಡ ಉಂಟಾಗಬಹುದು. ಮೂಲವ್ಯಾಧಿ ಮತ್ತು ಗುದದ ಬಿರುಕುಗಳಿಗೆ ಕಾರಣವಾಗಬಹುದು ಎಂದು ಪ್ರಸಿದ್ಧ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ವೈದ್ಯರು ಅಭಿಪ್ರಾಯಿಸುತ್ತಾರೆ. ಅದಕ್ಕಾಗಿ ಆ ಸಂದರ್ಭದಲ್ಲಿ ವಿಶೇಷ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಿರುವುದಿಲ್ಲ.

ಗರ್ಭಾವಸ್ಥೆ ಎನ್ನುವುದು ಮಹಿಳೆಯರಿಗೊಂದು ಅದ್ಭುತವಾದ ಜೀವನವನ್ನು ಕಲ್ಪಿಸಿಕೊಡುತ್ತದೆ. ಈ ಸಂದರ್ಭದಲ್ಲಿ ಅನೇಕ ಸಿಹಿಯ ಅನುಭವಗಳು ಹಾಗೂ ಕಹಿಯ ಕ್ಷಣಗಳು ಸಾಮಾನ್ಯವಾಗಿರುತ್ತವೆ. ಹಾಗಾಗಿ ಅವೆರಡನ್ನು ಸಹ ಸಮಾನ ಮನಃಸ್ಥಿತಿಯಲ್ಲಿ ಸ್ವೀಕರಿಸಬೇಕಾಗುವುದು. ಅಂತಹ ಅನುಭವ ಹಾಗೂ ತೊಂದರೆಯಲ್ಲಿ ಮಲಬದ್ಧತೆಯು ಒಂದು. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಾಡುವ ಅನೇಕ ಬದಲಾವಣೆಗಳು ಮಲಬದ್ಧತೆಯ ಮೇಲೆ ಪ್ರಭಾವ ಬೀರುತ್ತದೆ. ಹಾರ್ಮೋನ್ಗಳ ಬದಲಾವಣೆಯು ಮಲಬದ್ಧತೆಯಂತಹ ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಹಾಗಾಗಿ ಆರೋಗ್ಯಕ್ಕೆ ಪೂರಕವಾಗುವ ಹಾಗೂ ಮಲಬದ್ಧತೆ ಉಂಟಾಗದಂತಹ ಮಾರ್ಗ ಅಥವಾ ಪರಿಹಾರ ಕ್ರಮವನ್ನು ಕೈಗೊಳ್ಳಬೇಕು. ಆಗಲೇ ಅದ್ಭುತ ಆರೋಗ್ಯವನ್ನು ಹೊಂದಿರಲು ಸಾಧ್ಯ.

ಗರ್ಭಾವಸ್ಥೆಯು ಸುಂದರ ಅನುಭವವನ್ನು ನೀಡಬೇಕು ಎಂದಾದರೆ ಕೆಲವು ಆರೋಗ್ಯಕರ ಹವ್ಯಾಸಗಳನ್ನು ನಾವು ಅನುಸರಿಸಬೇಕು. ಜೊತೆಗೆ ಅನಪೇಕ್ಷಿತವಾಗಿ ಉಂಟಾಗುವ ತೊಂದರೆಗಳಿಗೆ ಸೂಕ್ತ ಕ್ರಮವನ್ನು ಆದಷ್ಟು ಬೇಗ ಕೈಗೊಳ್ಳಬೇಕು. ಇಲ್ಲವಾದರೆ ಅಪಾಯಕಾರಿ ತೊಂದರೆ ಉಂಟಾಗಬಹುದು. ಮಲಬದ್ಧತೆ ಉಂಟಾದಾಗ ಯಾವ ಕ್ರಮ ಕೈಗೊಳ್ಳಬೇಕು? ಅಥವಾ ಪೂರ್ವ ಎಚ್ಚರಿಕೆಯ ಕ್ರಮ ಹೇಗಿರಬೇಕು? ಎನ್ನುವುದರ ಬಗ್ಗೆ ಸಂಕ್ಷಿಪ್ತವಾದ ವಿವರಣೆಯನ್ನು ಲೇಖನದ ಮುಂದಿನ ಭಾಗದಲ್ಲಿ ಪರಿಶೀಲಿಸಿ. ಮಲಬದ್ಧತೆಯನ್ನು ತಡೆಗಟ್ಟಲು ಅಥವಾ ನಿಮಗೆ ಕಾಡುವ ಮಲಬದ್ಧತೆಯಿಂದ ಮುಕ್ತಿಯನ್ನು ಪಡೆಯಲು ಸಾಕಷ್ಟು ಮಾರ್ಗಗಳಿವೆ.

Most Read: ಪ್ರಗ್ನೆನ್ಸಿಯಲ್ಲಿ ಕಾಣಿಸುವ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವ ತಂತ್ರಗಳು

ನಾರಿನಂಶ ಭರಿತ ಆಹಾರ

ಗರ್ಭಿಣಿಯರು ಅಧಿಕ ಪ್ರಮಾಣದಲ್ಲಿ ಹಣ್ಣು ಹಾಗೂ ಹಸಿ ತರಕಾರಿಗಳ ಸೇವನೆಯನ್ನು ಮಾಡಬೇಕು. ಇದರಿಂದ ಅಗತ್ಯವಾದ ಪೋಷಕಾಂಶಗಳು ತಾಯಿಗೆ ಹಾಗೂ ಮಗುವಿಗೆ ಪೂರೈಕೆಯಾಗುವುದು. ಅಗತ್ಯವಾದ ನಾರಿನಂಶ ಲಭ್ಯವಾಗುವುದರ ಜೊತೆಗೆ ರಕ್ತದ ಪ್ರಮಾಣವು ಸಮತೋಲನವನ್ನು ಕಾಯ್ದುಕೊಳ್ಳುತ್ತವೆ.

ಅಧಿಕ ನೀರಿನ ಸೇವನೆ

ಗರ್ಭಿಣಿಯರು ನಿತ್ಯವು ಕನಿಷ್ಠ ಮೂರು ಲೀಟರ್ ನೀರನ್ನು ಸೇವಿಸಬೇಕು. ಇದು ದೇಹದಲ್ಲಾಗುವ ನಿರ್ಜಲೀಕರಣವನ್ನು ತಡೆಯುತ್ತದೆ. ದೇಹದಲ್ಲಿ ಹೆಚ್ಚಿನ ನೀರಿನಂಶ ಉಳಿದುಕೊಳ್ಳುವುದರಿಂದ ಸರಿಯಾದ ಜೀರ್ಣಕ್ರಿಯೆ, ಮಲ-ಮೂತ್ರಗಳ ವಿಸರ್ಜನೆಗೆ ತೊಂದರೆಯನ್ನುಂಟುಮಾಡದು. ಮಗುವಿನ ಹಾಗೂ ತಾಯಿಯ ಆರೋಗ್ಯವನ್ನು ಕಾಪಾಡುವುದು.

ಲಘು ವ್ಯಾಯಾಮ

ಗರ್ಭಿಣಿ ಮಹಿಳೆಯರು ಸದಾ ಮಲಗಿರುವುದು ಅಥವಾ ಅಧಿಕ ಆರಾಮವನ್ನು ಪಡೆಯಬಾರದು. ಲಘುವಾದ ವ್ಯಾಯಾಮ ಹಾಗೂ ಕೆಲಸವನ್ನು ಮಾಡಬೇಕು. ಆಗ ದೇಹದಲ್ಲಿ ಅಂಗಾಂಗಗಳು ಸಂಪೂರ್ಣವಾಗಿ ಕಾರ್ಯನಿರತವಾಗಿ ಇರುತ್ತವೆ. ಜೀರ್ಣ ಕ್ರಿಯೆಯು ಸುಲಲಿತವಾಗಿ ಆಗುವುದು. ಜೊತೆಗೆ ಮಲಬದ್ಧತೆಯಂತಹ ಸಮಸ್ಯೆಯು ಉಂಟಾಗದು.

ಸೂಕ್ತ ವೈದ್ಯರ ತಪಾಸಣೆ

ವೈದ್ಯರು ಸೂಚಿಸುವ ಕಬ್ಬಿಣ ಮತ್ತು ಕ್ಯಾಲ್ಸಿಯಂ ಮಾತ್ರೆಯನ್ನು ಸೇವಿಸಬೇಕು. ಆರೋಗ್ಯದಲ್ಲಿ ಉಂಟಾಗುವ ತೊಂದರೆಗಳಿಗೆ ವೈದ್ಯರ ಸಲಹೆ ಇಲ್ಲದೆ ಯಾವುದೇ ಮಾತ್ರೆ ಹಾಗೂ ಔಷಧವನ್ನು ಸೇವಿಸದಿರಿ. ಅದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಹಾಗೂ ಮಲಬದ್ಧತೆಯನ್ನು ಉಂಟುಮಾಡುವುದು. ಅಲ್ಲದೆ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ.

ಆಯುರ್ವೇದದ ಪರಿಹಾರ

ಗರ್ಭಾವಸ್ಥೆಯಲ್ಲಿ ತಾಯಿಯ ದೇಹದ ಆರೋಗ್ಯ ಹಾಗೂ ಮಗುವಿನ ಆರೋಗ್ಯವು ಅತ್ಯಂತ ಸೂಕ್ಷ್ಮತೆಯನ್ನು ಪಡೆದುಕೊಂಡಿರುತ್ತವೆ. ಅಂತಹ ಸಂದರ್ಭದಲ್ಲಿ ತಾಯಿ ಸೇವಿಸುವ ಆಹಾರ, ಜೀವನ ಕ್ರಮ, ವ್ಯಾಯಾಮ ಹಾಗೂ ಆರೈಕೆಯ ವಿಧಾನವು ಅತ್ಯಂತ ಪ್ರಮುಖವಗಿರುತ್ತವೆ. ಗರ್ಭಾವಸ್ಥೆಯಲ್ಲಿ ಉಂಟಾಗುವ ಮಲಬದ್ಧತೆಗೆ ಕೆಲವು ಮನೆ ಔಷಧಿಗಳು ಸಹಾಯ ಮಾಡುತ್ತವೆ. ಅವು ನೈಸರ್ಗಿಕವಾಗಿ ದೊರೆಯುವ ಉತ್ಪನ್ನಗಳೇ ಆಗಿರುವುದರಿಂದ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಮಗುವಿನ ಬೆಳವಣಿಗೆಗೂ ಯಾವುದೇ ತೊಂದರೆಯನ್ನು ಉಂಟುಮಾಡುವುದಿಲ್ಲ ಎಂದು ಹೇಳಲಾಗುವುದು.

* ಇಸಬ್ಗೋಲ್

ಇದನ್ನು ಸಾಮಾನ್ಯವಾಗಿ ಸ್ಯಾಟ್ ಇಸಬ್ಗೋಲ್ ಎಂದು ಕರೆಯಲಾಗುತ್ತದೆ. ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವುದು. ಒಂದು ಲೋಟ ಬೆಚ್ಚಗಿನ ಹಾಲಿಗೆ ಒಂದು ಟೀ ಚಮಚ ಇಸಬ್ಗೋಲ್ ಸೇರಿಸಿ ಕುಡಿದರೆ ಅದ್ಭುತ ಪ್ರಮಾಣದ ನಾರಿನಂಶ ದೇಹಕ್ಕೆ ದೊರೆಯುವುದು. ಮಲಬದ್ಧತೆಯಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅದ್ಭುತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.

* ದ್ರಾಕ್ಷರಿಷ್ಠ

ಇದನ್ನು ಆಯುರ್ವೇದದ ಒಂದು ಟಾನಿಕ್ ಎಂದು ಕರೆಯಲಾಗುವುದು. ಕರುಳನ್ನು ಸ್ವಚ್ಛಗೊಳಿಸಲು ಹಾಗೂ ಮಲಬದ್ಧತೆಯನ್ನು ತಡೆಯುವಲ್ಲಿ ಉತ್ತಮ ರೀತಿಯ ಕಾರ್ಯ ನಿರ್ವಹಿಸುತ್ತದೆ. ಸಾಮಾನ್ಯವಾಗಿ ಹತ್ತು ಮಿಲಿ ದ್ರಾಕ್ಷರಿಷ್ಠಕ್ಕೆ ಸಮ ಪ್ರಮಾಣದ ನೀರನ್ನು ಸೇರಿಸಿ, ಊಟದ ನಂತರ ಸೇವಿಸಬೇಕು. ಸಮಸ್ಯೆಯನ್ನು ಸುಲಭವಾಗಿ ದೂರಮಾಡುವುದು.

*ತ್ರಿಫಾಲಾ ಚೂರ್ಣ

ತ್ರಿಫಾಲಾ ಮೂರು ಹಣ್ಣುಗಳ ಮಿಶ್ರಣವಾಗಿದೆ - ಆಮ್ಲಾ, ಹರೀಟಕಿ ಮತ್ತು ವಿಭಿಟಕಿ. ದಿನಕ್ಕೆ ಎರಡು ಬಾರಿ ಜೇನುತುಪ್ಪದೊಂದಿಗೆ ತೆಗೆದುಕೊಳ್ಳಿ ಅಥವಾ ಮಲಗುವ ವೇಳೆ ದೈನಂದಿನ ಬಿಸಿ ನೀರಿನಲ್ಲಿ 5 ರಿಂದ 10 ಗ್ರಾಂ ತೆಗೆದುಕೊಳ್ಳಬೇಕು.

*ಸ್ವರ್ಣಕ್ರವ್ಯಾದರಸ

ಈ ಆಯುರ್ವೇದ ಪರಿಹಾರವು ತೀಕ್ಷ್ಣವಾದ ಅಥವಾ ದೀರ್ಘಕಾಲೀನ ರೀತಿಯ ಜೀರ್ಣಕಾರಿ ತೊಂದರೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುತ್ತದೆ. ಇದರ ಸ್ಪಷ್ಟವಾದ ಸಾಮಾನ್ಯ ಡೋಸೇಜ್ ಒಂದು ಗ್ರಾಂನ ಐದನೇ ಒಂದು ಭಾಗವಾಗಿದೆ ಮತ್ತು ನೀರು ಅಥವಾ ಮಜ್ಜಿಗೆಯೊಂದಿಗೆ ಊಟ ಮಾಡಿದ ನಂತರ ದಿನಕ್ಕೆ ಎರಡು ಅಥವಾ ಮೂರು ಬಾರಿ ನೀವು ತೆಗೆದುಕೊಳ್ಳಬಹುದು.

*ತ್ರಿವೃತ್ ಲೆಹ್ಯಾ:

ಒಂದು ನಿರುಪದ್ರವ ವಿರೇಚಕ ಎಂದು ಒಪ್ಪಿಕೊಂಡಿರುವ, ನಿಯಮಿತವಾಗಿ ಬಳಸಿದಾಗ ಈ ಮುದ್ದೆಗಟ್ಟಿರುವ ಔಷಧವು ಜಾಮ್-ರೀತಿಯ ಸ್ಥಿರತೆಯನ್ನು ಹೊಂದಿದ್ದು ಮಲಬದ್ಧತೆಯನ್ನು ನಿವಾರಿಸುತ್ತದೆ. ಸಾಮಾನ್ಯವಾಗಿ, 6 ರಿಂದ 12 ಗ್ರಾಂಗಳಷ್ಟು ಪ್ರಮಾಣದಲ್ಲಿ ಬಳಸಲಾಗುವ ಡೋಸೇಜ್ ಬಿಸಿ ನೀರಿನಿಂದ ಮಲಗುವ ಮೊದಲು ತೆಗೆದುಕೊಳ್ಳಬೇಕು.

ಆಯುರ್ವೇದವು ಅನಾರೋಗ್ಯದ ಚಿಕಿತ್ಸೆಯ ಒಂದು ಪ್ರಾಚೀನ ವ್ಯವಸ್ಥೆಯಾಗಿದ್ದು, ವೇದಗಳಲ್ಲಿ ಇದರ ಬೇರುಗಳನ್ನು ಹೊಂದಿದೆ. ಈ ಸೂತ್ರಗಳ ಹೊರತಾಗಿ, ಕರುಳಿನ ಚಲನೆಯನ್ನು ಪ್ರೋತ್ಸಾಹಿಸುವ ಹಲವಾರು ಗಿಡಮೂಲಿಕೆಗಳ ಪರಿಹಾರವನ್ನು ಸಹ ಇದು ಸೂಚಿಸುತ್ತದೆ. ತೆಂಗಿನ ಎಣ್ಣೆ ಸೇವನೆಯಿಂದ ಮಲಬದ್ಧತೆಯನ್ನು ನಿವಾರಿಸಬಹುದು. ಬೇಲದ ಹಣ್ಣು ಎಂಬುದು ಆಯುರ್ವೇದ ಔಷಧವಾಗಿದ್ದು, ದೇಹದಿಂದ ತ್ಯಾಜ್ಯವನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ. ಅಂತೆಯೇ, ಹರಳೆಣ್ಣೆ, ಚಿಕೋರಿ, ಹರಿಟಕ್ ಮತ್ತು ರೂಹರ್ಬ ನಿಧಾನವಾದ ಕರುಳಿನ ಪಚನಕ್ರಿಯೆಗೆ ನೈಸರ್ಗಿಕ ಪರಿಹಾರಗಳಾಗಿವೆ.

ಮುನ್ನೆಚ್ಚರಿಕೆ

ಗರ್ಭಾವಸ್ಥೆಯು ಅತ್ಯಂತ ಪ್ರಮುಖ ಹಾಗೂ ಸೂಕ್ಷ್ಮತೆಯನ್ನು ಹೊಂದಿರುವ ಹಂತವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಹಾಗೂ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕಾಗುವುದು. ಹಾಗಾಗಿ ಯಾವುದೇ ಮನೆ ಔಷಧಿ, ಆಯುರ್ವೇದದ ಔಷಧ ಅಥವಾ ಇನ್ಯಾವುದೇ ಕ್ರಮವನ್ನು ಕೈಗೊಳ್ಳುವ ಮೊದಲು ನಿಮ್ಮ ವೈದ್ಯರಲ್ಲಿ ಸರಿಯಾದ ಸಲಹೆ ಪಡೆದುಕೊಳ್ಳಬೇಕು. ವೈದ್ಯರ ಸಲಹೆ ಇಲ್ಲದೆ ಯಾವುದೇ ಕ್ರಮವನ್ನು ಅನುಸರಿಸಬೇಡಿ. ಆಗ ಆತಂಕಕಾರಿ ಸನ್ನಿವೇಶಗಳನ್ನು ಎದುರಿಸಬೇಕಾಗುವುದು.

English summary

Constipation During Pregnancy: foods and tips to follow

Constipation during pregnancy can mainly be uncomfortable. In the second and third trimesters, it could become a bigger problem due to the pressure exerted by the growing uterus. Add to this, the prenatal vitamins and one can only imagine what happens. The chances of constipation during pregnancy are more in women who have experienced it previously.The risk gets enhanced if mother-to-be has a predisposition to it.
X
Desktop Bottom Promotion