For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಅನುಕೂಲವಾಗುವ ನಾಲ್ಕು ಉಸಿರಾಟದ ವ್ಯಾಯಾಮಗಳು.

|

ಗರ್ಭಧಾರಣೆ ಎನ್ನುವುದು ಹೆಚ್ಚು ಕಾಳಜಿ ಮತ್ತು ಆರೋಗ್ಯ ದೃಷ್ಟಿಯಿಂದ ಆರೈಕೆಗೆ ಒಳಗಾಗುವ ವಿಶೇಷ ಪ್ರಯತ್ನವನ್ನು ಸೂಚಿಸುತ್ತದೆ. ಜೀವನ ಶೈಲಿಯ ಬದಲಾವಣೆ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವ ಸಂಗತಿಯ ಹೊರತಾಗಿಯೂ ದೈಹಿಕ ವ್ಯಾಯಾಮ ಹಾಗೂ ಉಸಿರಾಟದ ವ್ಯಾಯಾಮದ ಬಗ್ಗೆಯೂ ಸಾಕಷ್ಟು ಕಾಳಜಿ ಹಾಗೂ ಗಮನವನ್ನು ನೀಡಬೇಕಾಗುವುದು. ಗರ್ಭಿಣಿಯರು ನಿಯಮಿತವಾಗಿ ಕೆಲವು ಉಸಿರಾಟದ ವ್ಯಾಯಾಮವನ್ನು ನಿರ್ವಹಿಸುವುದರಿಂದ ಆಮ್ಲಜನಕದ ಸೇವನೆಯನ್ನು ಸುಧಾರಿಸುತ್ತದೆ. ಮಗುವಿಗೆ ಉತ್ತಮ ಪೋಷಣೆ ಮತ್ತು ಆಮ್ಲಜನಕದ ಸೇವನೆಯನ್ನು ಬೆಂಬಲಿಸುತ್ತದೆ. ಉಸಿರು ಪ್ರತಿಯೊಂದು ಜೀವಿಗೂ ಅತ್ಯಗತ್ಯವಾದ ಸಂಗತಿ. ಉಸಿರಾಟದ ತೊಂದರೆ ಅಥವಾ ಉಸಿರಾಟಕ್ಕೆ ಅನುಕೂಲಕರವಲ್ಲದ ವಾತಾವರಣ ಇದೆ ಎಂದಾದರೆ ವ್ಯಕ್ತಿ ಬದುಕಲು ಸಾದ್ಯವಾಗದೆ ಹೋಗುವುದು.

ಇಲ್ಲವೇ ಆರೋಗ್ಯದಲ್ಲಿ ಸಾಕಷ್ಟು ತೊಂದರೆಗಳು ಕಾಣಿಸಿಕೊಳ್ಳುವುದು. ಗರ್ಭದಲ್ಲಿ ಇರುವ ಮಗು ಉಸಿರಾಟ ಕ್ರಿಯೆ ಹಾಗೂ ಆಹಾರಕ್ಕೆ ತಾಯಿಯನ್ನೇ ಅವಲಂಭಿಸಿರುತ್ತದೆ. ಆದ ಕಾರಣಕ್ಕೆ ತಾಯಿ ತನ್ನ ಆರೋಗ್ಯ ಮತ್ತು ಉಸಿರಾಟದ ಕ್ರಿಯೆಯ ಜೊತೆಗೆ ಮಗುವಿನ ಬೆಳವಣಿಗೆಗೆ ಅಗತ್ಯಾದ ಆಹಾರ, ಉಸಿರಾಟ ಕ್ರಿಯೆಯ ವ್ಯಾಯಾಮವನ್ನು ಅನುಸರಿಸುವುದು ಅತ್ಯಗತ್ಯ. ಗರ್ಭದಲ್ಲಿ ಬೆಳವಣಿಗೆ ಕಾಣುತ್ತಿರುವ ಮಗುವಿಗೆ ಬೆಳವಣಿಗೆಗೆ ಅಗತ್ಯವಾದ ಪೋಷಣೆಯನ್ನು ತಾಯಿ ಒದಗಿಸುವುದು ಮಹತ್ತರವಾದ ಸಂಗತಿಯಾಗಿರುತ್ತದೆ.

ತಾಯಿ ಸೇವಿಸುವ ಆಹಾರ ಮಗುವಿನ ಬೆಳವಣಿಗೆಯ ಮೇಲೆ ಗಾಢವಾದ ಪ್ರಭಾವ ಬೀರುವುದು. ಹಾಗಾಗಿ ಗರ್ಭಾವಸ್ಥೆಯಲ್ಲಿ ಇರುವಾಗ ಮಹಿಳೆಯರು ಪೋಕಾಂಶ ಭರಿತ ಆಹಾರದ ಮೊರೆ ಹೋಗುತ್ತಾರೆ. ಜೊತೆಗೆ ತಮ್ಮ ದೇಹದಲ್ಲಿ ಉಂಟಾಗುವ ಬದಲಾವಣೆ ಹಾಗೂ ಹಾರ್ಮೋನ್ ವ್ಯತ್ಯಾಸಗಳಿಂದ ತಾಯಿಯ ನಾಲಿಗೆ ರುಚಿ ಬದಲಾವಣೆ ಕಾಣುವುದು. ಅದಕ್ಕೆ ತಕ್ಕದಾದ ರೀತಿಯಲ್ಲಿ ಆಹಾರ ಸೇವಿಸಲು ಬಯಸುವರು. ಅಂತೆಯೇ ವ್ಯಾಯಾಮ ಕ್ರಿಯೆಯನ್ನು ಅನುಸರಿಸಬೇಕು. ಆದರೆ ಬಹುತೇಕ ಗರ್ಭಿಣಿಯರು ವ್ಯಾಯಾಮ ಕ್ರಮವನ್ನು ಅನುಸರಿಸಲು ಹಿಂದೇಟು ಹಾಕುವರು. ಅನುಚಿತ ರೀತಿಯಲ್ಲಿ ಕೈಗೊಳ್ಳುವ ವ್ಯಾಯಾಮ ಕ್ರಿಯೆಯು ಗರ್ಭಾವಸ್ಥೆಯಲ್ಲಿ ಅನುಸರಿಸುವುದು ಅಪಾಯಕಾರಿ.

ವೈದ್ಯರ ಸಲಹೆ ಪಡೆದು ಅನುಕೂಲವಾಗುವಂತಹ ವ್ಯಾಯಾಮ ಕೈಗೊಳ್ಳಿ

ವೈದ್ಯರ ಸಲಹೆ ಪಡೆದು ಅನುಕೂಲವಾಗುವಂತಹ ವ್ಯಾಯಾಮ ಕೈಗೊಳ್ಳಿ

ವೈದ್ಯರ ಸಲಹೆ ಪಡೆದು ಗರ್ಭಾವಸ್ಥೆಗೆ ಸಂಬಂಧಿಸಿದ ಅಥವಾ ಅನುಕೂಲವಾಗುವಂತಹ ವ್ಯಾಯಾಮವನ್ನು ಕೈಗೊಳ್ಳಬೇಕು. ಗರ್ಭಾವಸ್ಥೆಯಲ್ಲಿ ದೇಹವು ಸಾಕಷ್ಟು ಭಾರ ಹಾಗೂ ಆಲಸ್ಯದ ಭಾವನೆಯನ್ನು ಮೂಡಿಸುತ್ತವೆ. ಅಂತಹ ಸಂದರ್ಭದಲ್ಲಿ ಲಘುವಾಗಿ ಅನುಸರಿಸುವ ವ್ಯಾಯಾಮಗಳು ಮಗುವಿಗೆ ಹಾಗೂ ತಾಯಿಯ ಆರೋಗ್ಯ ಸುಧಾರಣೆಗೆ ಸಹಾಯ ಮಾಡುವುದು. ಉಸಿರಾಟಕ್ಕೆ ಸಂಬಂಧಿಸಿದ ಕೆಲವು ವ್ಯಾಯಾಮ ಕ್ರಮವನ್ನು ಅನುಸರಿಸಿದೆ ದೇಹದಲ್ಲಿ

ಆಮ್ಲಜನಕದ ಹರಿವು ಸೂಕ್ತ ರೀತಿಯಲ್ಲಿ ನೆರವೇರುವುದು. ಜೊತೆಗೆ ರಕ್ತದ ಸುಧಾರಿತ ಪ್ರಸರಣಕ್ಕೆ ಸಹಾಯವಾಗುವುದು ಎನ್ನಲಾಗುತ್ತದೆ. ಗರ್ಭಾವಸ್ಥೆಯಲ್ಲಿ ನೀವು ಇದ್ದೀರಿ ಅಥವಾ ನಿಮ್ಮವರು ಇದ್ದಾರೆ ಎಂದರೆ ಅವರು ಉಸಿರಾಟ ಕ್ರಿಯೆಯನ್ನು ಉತ್ತಮ ಗೊಳಿಸಲು ಯಾವ ವ್ಯಾಯಾಮ ಕ್ರಮವನ್ನು ಅನುಸರಿಸುವುದು ಯೋಗ್ಯ ಎನ್ನುವುದು ತಿಳಿದುಕೊಳ್ಳುವುದು ಉಚಿತ. ಅಂತಹ ಹುಡುಕಾಟ ಅಥವಾ ವಿಷಯಗಳನ್ನು ತಿಳಿದುಕೊಳ್ಳುವ ಕಾತುರದಲ್ಲಿ ಇದ್ದೀರಿ ಎಂದಾದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

Most Read: ಗರ್ಭಿಣಿಯರು ನಿಯಮಿತವಾಗಿ ಜೇನುತುಪ್ಪದ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು

ಪ್ರಾಣಯಾಮ

ಪ್ರಾಣಯಾಮ

ಆರೋಗ್ಯದ ರಕ್ಷಣೆ ಹಾಗೂ ಸೌಂದರ್ಯ ವೃದ್ಧಿಗೆ ಸಹಾಯ ಮಾಡುವ ಒಂದು ವಿಶೇಷ ವ್ಯಾಯಾಮ ಕ್ರಿಯೆ ಎಂದರೆ ಯೋಗ. ಯೋಗದಲ್ಲಿ ವಿವಿಧ ಆಯಾಮಗಳಿವೆ. ಅವುಗಳಲ್ಲಿ ಪ್ರಾಣಯಾಮವು ಒಂದು. ಇದು ಉಸಿರಾಟ ಕ್ರಿಯೆಗೆ ಉತ್ತಮ ಸಹಕಾರ ನೀಡುವುದು. ಗರ್ಭಾವಸ್ಥೆಯಲ್ಲಿ ಈ ವ್ಯಾಯಾಮವನ್ನು ನಿಯಮಿತವಾಗಿ ಅನುಸರಿಸುವುದರಿಂದ ಆಳವಾದ ಉಸಿರಾಟದ ಮಾದರಿಯು ಅಭಿವೃದ್ಧಿಪಡಿಸಲು ಅನುಮತಿಸುತ್ತದೆ. ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ

ಇರುವಾಗ ಕೆಲವರಿಗೆ ತ್ರರಿತವಾಗಿ ಉಸಿರಾಡಲು ಕಷ್ಟವಾಗುತ್ತದೆ. ಇಲ್ಲವೇ ಆಮ್ಲಜನಕವನ್ನು ಪಡೆದುಕೊಂಡು ಕಾರ್ಬನ್ಡೈಆಕ್ಸೈಡ್ ಅನ್ನು ಬಿಡುಗಡೆಗೊಳಿಸಲು ಸಾಕಷ್ಟು ಸಮಯ ಉಂಟಾಗ ಬಹುದು. ಅಂತಹ ಸಮಸ್ಯೆಗಳ ಪರಿಹಾರಕ್ಕೆ ಪ್ರಾಣಯಾಮ ಉತ್ತಮವಾದದ್ದು. ಪ್ರಾಣಯಾಮವನ್ನು ಅನುಸರಿಸುವುದರಿಂದ ಉಸಿರಾಟವು ಸುಲಭವಾಗುತ್ತದೆ. ಆಮ್ಲಜನಕದ ಸಮತೋನವನ್ನು ನಿರ್ವಹಿಸುವುದು. ಮಗುವಿನ ಉಸಿರಾಟಕ್ಕೂ ಉತ್ತಮ ಸಹಕಾರ ನೀಡುವುದು. ರಕ್ತದ ಪರಿಚಲನೆಯು ಸೂಕ್ತವಾಗಿ ನಿರ್ವಹಣೆ ಯಾಗುವಂತೆ ಮಾಡುವುದು. ಕಾರ್ಬನ್ಡೈಆಕ್ಸೈಡ್ ಮತ್ತು ಆಮ್ಲಜನಕದ ನಡುವೆ ಪರಿಪೂರ್ಣವಾದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯವಾಗುವುದು.

ಆಳವಿಲ್ಲದ ಉಸಿರಾಟ ಕ್ರಿಯೆಯ ವ್ಯಾಯಾಮ

ಆಳವಿಲ್ಲದ ಉಸಿರಾಟ ಕ್ರಿಯೆಯ ವ್ಯಾಯಾಮ

ಒಂದೆಡೆ ಆರಾಮದಾಯಕವಾಗಿ ಕುಳಿತುಕೊಳ್ಳಿ. ದೇಹವನ್ನು ವಿಶ್ರಾಂತವಾಗಿ ಅಥವಾ ಆರಾಮದಾಯಕ ಸ್ಥಿತಿಯಲ್ಲಿ ಇರುವಂತೆ ಇಟ್ಟುಕೊಳ್ಳಿ. ನಂತರ ನಿಧಾನವಾಗಿ ಆಳವಾದ ಉಸಿರನ್ನು ತೆಗೆದುಕೊಳ್ಳಿ. ನಂತರ ನಿಧಾನವಾಗಿ ಬಿಡುತ್ತಾ ಬನ್ನಿ. ಪ್ರತಿ ಬಾರಿಯೂ ಇದೇ ಕ್ರಮವನ್ನು ನಿಧಾನವಾಗಿ ಅನುಸರಿಸಿ.

ಪ್ರತಿಯೊಂದು ಬಾರಿಯೂ ಬಾಯನ್ನು ಅಗಲವಾಗಿ ತೆರೆಯಿರಿ. ಉಸಿರಾಟವನ್ನು ನಿಧಾನವಾಗಿ ಒಳಗೆ ತೆಗೆದುಕೊಳ್ಳುವುದು ಹಾಗೂ ಬಿಡುಗಡೆ ಮಾಡುವ ಕ್ರಿಯೆಯನ್ನು ಅನುಸರಿಸಿ. ಹೀಗೆ ಕಡಿಮೆ ಎಂದರೆ 20 ಬಾರಿ ಮಾಡಿ. ಹೀಗೆ ಸರಳವಾದ ಉಸಿರಾಟ ವ್ಯಾಯಾಮವನ್ನು ನಿಯಮಿತವಾಗಿ ಮಾಡುವುದರಿಂದ ಗರ್ಭಿಣಿಯರಿಗೆ ಸಾಕಷ್ಟು ಆರಾಮದಾಯಕ ಅನುಭವ ಉಂಟಾಗುವುದು. ಜೊತೆಗೆ ಮಗುವಿನ ಬೆಳವಣಿಗೆಗೂ ಅಗತ್ಯವಾದ ಆಮ್ಲಜನಕ ಹಾಗೂ ರಕ್ತದ ಹರಿವು

ಉಂಟಾಗುವುದು.

ಹೊಟ್ಟೆಯಿಂದ ಉಸಿರಾಟ ಕ್ರಿಯೆ

ಹೊಟ್ಟೆಯಿಂದ ಉಸಿರಾಟ ಕ್ರಿಯೆ

ಕಾಲನ್ನು ಮಡಿಚಿ ಒಂದೆಡೆ ಆರಾಮದಾಯಕವಾಗಿ ಕುಳಿತುಕೊಳ್ಳಿ. ನಂತರ ನಿಧಾನವಾಗಿ ಒಮ್ಮೆ ಉಸಿರಾಡಿ. ನಂತರ ಕೆಳಹೊಟ್ಟೆಯಿಂದ ಆಳವಾಗಿ ಉಸಿರಾಟವನ್ನು ಅನುಸರಿಸಬೇಕು. ಗಾಳಿಯಿಂದ ಹೊಟ್ಟೆಯು ಉಬ್ಬುವಂತೆ ಮಾಡಿ. ನಂತರ ಅದೇ ಕ್ರಮದಲ್ಲಿ ಹಾಗೂ ವೇಗದಲ್ಲಿ ಕಾರ್ಬನ್ಡೈಆಕ್ಸೈಡ್ ಅನ್ನು

ಹೊರಹಾಕಿ. ಈ ಕ್ರಿಯೆಯನ್ನು ಅಥವಾ ವ್ಯಾಯಾಮವನ್ನು ಹಾಸಿಗೆಯಲ್ಲಿ ಮಲಗಿಕೊಂಡು ಸಹ ಅನುಸರಿಸಬಹುದು. ಈ ವ್ಯಾಯಾಮ ಕ್ರಿಯೆಯಿಂದ ಆಮ್ಲಜನಕದ ಸೇವನೆಯು ಅಥವಾ ಉಸಿರಾಟ ಕ್ರಿಯೆಯು ಸುಧಾರಣೆಯಾಗುತ್ತದೆ. ಜೊತೆಗೆ ರಕ್ತದ ಪರಿಚಲನೆಯು ಉತ್ತೇಜನಗೊಳ್ಳುವುದು.

Most Read: ಗರ್ಭಾವಸ್ಥೆಯಲ್ಲಿ ಹಲಸಿನ ಹಣ್ಣನ್ನು ಸೇವಿಸುವುದು ಒಳ್ಳೆಯದ್ದೇ?

ಎದೆಯಿಂದ ಉಸಿರಾಡುವುದು

ಎದೆಯಿಂದ ಉಸಿರಾಡುವುದು

ನಿಂತುಕೊಂಡು ನಿಮ್ಮ ಪಾದಗಳನ್ನು ಪರಸ್ಪರ ಸಮಾನಾಂತರವಾಗಿ ಇರಿಸಿ. ನಿಮ್ಮ ಬಾಯಿಯನ್ನು ಮುಚ್ಚಿ ಮತ್ತು 10 ರವರೆಗೆ ಆಳವಾದ ಉಸಿರನ್ನು ಎಣಿಸಿ. ನಿಮ್ಮ ಎದೆಯ ಮೇಲೆ ನಿಮ್ಮ ಕೈಗಳನ್ನು ಇರಿಸಿ. ಎದೆಯ ಮೇಲೆ ಇಟ್ಟುಕೊಂಡ ಕೈಗಳಿಂದ ಒತ್ತಡ ಹಾಗೂ ಭಾರ ಉಂಟಾಗದಂತೆ ನೋಡಿಕೊಳ್ಳಬೇಕು. ನೀವು ಉಸಿರಾಡುವಂತೆ, ನಿಮ್ಮ ಶ್ವಾಸಕೋಶಗಳು ವಿಸ್ತರಿಸುವುದರಿಂದ ನಿಮ್ಮ ಕೈ ಚಲನೆಯ ಹೊರಹೊಮ್ಮುತ್ತದೆ. ಕೆಲವು ಸೆಕೆಂಡುಗಳ ಕಾಲ ನಿಮ್ಮ ಉಸಿರನ್ನು ಹಿಡಿದಿಟ್ಟು ನಿಧಾನವಾಗಿ ಬಿಡಿ. ತಾಜಾ ಗಾಳಿಯನ್ನು ಉಸಿರಾಡುವಾಗ ನೀವು ಉಸಿರಾಡುವಷ್ಟು ಸಮಯ ತೆಗೆದುಕೊಳ್ಳಿ. ಉತ್ತಮ ಫಲಿತಾಂಶಗಳಿಗಾಗಿ ನಿಯಮಿತವಾಗಿ ಈ ವ್ಯಾಯಾಮವನ್ನು ಕೈಗೊಳ್ಳಿ. ಆದಾಗ್ಯೂ, ನೀವು ಗರ್ಭಿಣಿ ಯಾಗಿದ್ದಾಗ ಆಳವಾದ, ತ್ವರಿತ, ಬಲಶಾಲಿಯಾದ ಉಸಿರನ್ನು ತೆಗೆದುಕೊಳ್ಳಬೇಕು. ಬಾಸ್ರಿಕಾ ಮತ್ತು ಕಪಾಲಾಭತಿ ಗಳಂತಹ ತಂತ್ರಗಳನ್ನು ಗರ್ಭಾವಸ್ಥೆಯಲ್ಲಿ ಶಿಫಾರಸು ಮಾಡಲಾಗುವುದಿಲ್ಲ. ತ್ವರಿತವಾಗಿ ಮತ್ತು ಶಕ್ತಿಯುತವಾಗಿ ಉಸಿರಾಡಲು ನೀವು ಮಸುಕಾದ, ಬೆಳಕು-ತಲೆಯ ಮತ್ತು ಡಿಜ್ಜಿಯನ್ನು ಅನುಭವಿಸ ಬಹುದು. ಈ ವ್ಯಾಯಾಮಗಳನ್ನು ಮಾಡಿದ ನಂತರ ನೀವು ಅನಾನುಕೂಲತೆಯನ್ನು ಅನುಭವಿಸಿದರೆ ನೀವು ತಕ್ಷಣವೇ ನಿಲ್ಲಿಸಬೇಕು ಅಥವಾ ನಿಮ್ಮ ವೈದ್ಯರಿಂದ ಸಲಹೆ ಪಡೆಯಬೇಕು.

English summary

Breathing Exercises for Pregnant Women

Pregnancy demands extra care and special efforts to stay healthy. Apart from making lifestyle changes and developing healthy habits, every pregnant woman should also regularly perform some breathing exercises. Such exercises can improve oxygen intake, circulation and support the body's normal functioning so as to provide better nutrition and oxygen to the baby.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X