For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಪ್ರತಿದಿನ ದಿನಕ್ಕೆ ಒಂದಾದರೂ ಬಾಳೆಹಣ್ಣು ತಿನ್ನಬೇಕಂತೆ

|

ಪ್ರತಿಯೊಬ್ಬ ಮಹಿಳೆಗೂ ಗರ್ಭಿಣಿಯಾಗುವುದು ಒಂದು ಸುಂದರ ಹಂತ. ಗರ್ಭಿಣಿ ಮಹಿಳೆಗೆ ಮನೆಯ ಎಲ್ಲಾ ಸದಸ್ಯರು ಸುಲಭ ಪ್ರಸವಕ್ಕೆ ಸಲಹೆಗಳನ್ನು ನೀಡುವುದು ಸಾಮಾನ್ಯ.

Banana

ನಾರ್ಮಲ್ ಹೆರಿಗೆಯಾಗಲು ಬಾಳೆಹಣ್ಣು ಅಡ್ಡಿಪಡಿಸುತ್ತದೆ ಎಂದು ಕೂಡ ಕೆಲವರು ಹೇಳಬಹುದು.ಆದರೆ ಅದು ಕೇವಲ ಮೂಢನಂಬಿಕೆ ಎಂದು ವೈಜ್ಞಾನಿಕವಾಗಿ ಕೂಡ ಸಾಭೀತಾಗಿದೆ.ವಾಸ್ತವವಾಗಿ ಬಾಳೆಹಣ್ಣು ತಿನ್ನುವುದು ಗರ್ಭಿಣಿ ಮಹಿಳೆಯ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಪ್ರೆಗ್ನೆನ್ಸಿ ಯಲ್ಲಿ ಬಾಳೆಹಣ್ಣು ತಿನ್ನುವುದರ ಅನುಕೂಲತೆಗಳು

ಪ್ರೆಗ್ನೆನ್ಸಿ ಯಲ್ಲಿ ಬಾಳೆಹಣ್ಣು ತಿನ್ನುವುದರ ಅನುಕೂಲತೆಗಳು

ಪೌಷ್ಟಿಕ ತಜ್ಞರು ಬಾಳೆಹಣ್ಣಿನ ಪೌಷ್ಟಿಕತೆ ಬಗ್ಗೆ ಮಾಹಿತಿ ನೀಡಿದ್ದಾರೆ.ಬಾಳೆಹಣ್ಣು ಮಲಬದ್ಧತೆ ತಡೆಯುವುದು ಮಾತ್ರವಲ್ಲ ಮಗುವಿನ ಆರೋಗ್ಯಕ್ಕೂ ಹೇಗೆ ಸಹಾಯಕ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬಾಳೆಹಣ್ಣು ಕಬ್ಬಿಣದ ಖಣಜ

ಬಾಳೆಹಣ್ಣು ಕಬ್ಬಿಣದ ಖಣಜ

ಕಬ್ಬಿಣದ ಅಂಶ ಪ್ರತಿಯೊಬ್ಬ ಮಹಿಳೆಗೂ ಮುಖ್ಯ ಆದರೆ ಗರ್ಭವತಿಯಾದ ಸಮಯದಲ್ಲಿ ಇದರ ಅವಶ್ಯಕತೆ ಅಧಿಕವಿರುತ್ತದೆ.ಪ್ರಸವಪೂರ್ವ ತೊಂದರೆಗಳಲ್ಲಿ ಅನಿಮಿಯಾ ಕೂಡ ಒಂದಾಗಿದ್ದು ಇದಕ್ಕೆ ಕಬ್ಬಿಣ ಮತ್ತು ಫೋಲಿಕ್ ಅಂಶವಿರುವ ಆಹಾರವನ್ನು ಸರಿಯಾಗಿ ತೆಗೆದುಕೊಳ್ಳದಿರುವುದೇ ಮುಖ್ಯ ಕಾರಣವಾಗಿದೆ.

ಕಬ್ಬಿಣದ ಅಂಶವನ್ನು ಹೆಚ್ಚಿಸುವುದು ಹೇಗೆ ?

ಕಬ್ಬಿಣದ ಅಂಶವನ್ನು ಹೆಚ್ಚಿಸುವುದು ಹೇಗೆ ?

*ಕಬ್ಬಿಣದ ಅಂಶ ಅಧಿಕವಾಗಿರುವ ತರಕಾರಿಗಳಾದ ಪಾಲಕ್,ಸೂರ್ಯಕಾಂತಿ ಬೀಜಗಳು, ಸೋಯಾಬೀನ್ಸ್,ಒಣ ಹಣ್ಣುಗಳು,ಧಾನ್ಯ ಮತ್ತು ಮೊಟ್ಟೆಯನ್ನು ಹೆಚ್ಚು ಬಳಸಬೇಕು.

*ಕಬ್ಬಿಣದ ಅಂಶ ಅಧಿಕವಾಗಿರುವ ಬಾಳೆಹಣ್ಣು ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿ ಅನಿಮೀಯ ಬರದಂತೆ ತಡೆಯುತ್ತದೆ.

Most Read: ಗರ್ಭಿಣಿಯರು ಮಶ್ರೂಮ್ ತಿನ್ನಬಹುದೇ? ಇದರಿಂದ ಏನಾದರೂ ತೊಂದರೆ ಇದೆಯೇ?

ಫೋಲಿಕ್ ಆಸಿಡ್ ಅಂಶ ಹೇರಳವಾಗಿದೆ

ಫೋಲಿಕ್ ಆಸಿಡ್ ಅಂಶ ಹೇರಳವಾಗಿದೆ

ಗರ್ಭಿಣಿ ಮಹಿಳೆಗೆ ಫೋಲಿಕ್ ಆಸಿಡ್ ನ ಅವಶ್ಯಕತೆ ಅತಿ ಹೆಚ್ಚು,ವೈದ್ಯರು ಕೂಡ ನೀವು ಗರ್ಭಿಣಿ ಎಂಬುದು ತಿಳಿಯುತ್ತಿದ್ದಂತೆ ಫೋಲಿಕ್ ಆಸಿಡ್ ಮಾತ್ರೆಗಳನ್ನು ತೆಗೆದುಕೊಳ್ಳಲು ಹೇಳುತ್ತಾರೆ.ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ನರ,ಬೆನ್ನು ಮೂಳೆ ಮತ್ತು ಮೆದುಳಿನ ಬೆಳವಣಿಗೆಗೆ ಫೋಲಿಕ್ ಆಸಿಡ್ ಅವಶ್ಯಕತೆಯಿದೆ.ಫೋಲಿಕ್ ಆಸಿಡ್ ನ ಅಂಶ ಕಡಿಮೆಯಾದಲ್ಲಿ ಅನೀಮಿಯಾ ಉಂಟಾಗಬಹುದು.

ಫೋಲಿಕ್ ಆಸಿಡ್ ಮಟ್ಟ ಕಡಿಮೆ ಆದಲ್ಲಿ ಏನಾಗಬಹುದು ?

ಫೋಲಿಕ್ ಆಸಿಡ್ ಮಟ್ಟ ಕಡಿಮೆ ಆದಲ್ಲಿ ಏನಾಗಬಹುದು ?

*ಮಗು ಅವಧಿಗೆ ಮುನ್ನ ಜನಿಸಬಹುದು ಮತ್ತು ಮಗುವಿನಲ್ಲಿ ನ್ಯೂನ್ಯತೆ ಕಾಣಿಸಿಕೊಳ್ಳಬಹುದು.ಗರ್ಭದಲ್ಲಿರುವ ಮಗು ಬಾಳೆಹಣ್ಣಿನಲ್ಲಿರುವ ಫೋಲಿಕ್ ಅಂಶವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ ಆದ್ದರಿಂದ ಬಾಳೆಹಣ್ಣು ಸೇವಿಸುವುದು ಆರೋಗ್ಯಕಾರಿ.

* ರಕ್ತದೊತ್ತಡ ಸ್ಥಿರಗೊಳಿಸಲು ಸಹಕಾರಿ: ರಕ್ತದ ಏರಿಳಿತದ ಅಸಮತೋಲನ ಎಲ್ಲೆಡೆ ಕಾಡುವ ಸಮಸ್ಯೆ.ದೀರ್ಘಕಾಲದವರೆಗೆ ಅಧಿಕ ರಕ್ತದೊತ್ತಡ ಪ್ರಿಕ್ಲಂಪಿಯ ಮತ್ತಿತರ ತೊಡಕುಗಳನ್ನು ತಂದೊಡ್ಡುತ್ತದೆ.ಆದ್ದರಿಂದ ಸಮ ಪ್ರಮಾಣದ ರಕ್ತದ ಏರಿಳಿತವನ್ನು ಹೊಂದುವುದು ಒತ್ತಡ ಮತ್ತು ಆತಂಕವನ್ನು ನಿಗ್ರಹಿಸಲು ಸಹಕಾರಿ.

ಬಾಳೆಹಣ್ಣು ಇದಕ್ಕೆ ಹೇಗೆ ಸಹಾಯಕ ?

ಬಾಳೆಹಣ್ಣು ಇದಕ್ಕೆ ಹೇಗೆ ಸಹಾಯಕ ?

* ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಅಂಶ ರಕ್ತದ ಏರಿಳಿತ ಸ್ಥಿರವಾಗಿರಿಸಲು ಸಹಕರಿಸುತ್ತದೆ .

*ಇದು ಮಾಂಸಖಂಡಗಳಿಗೆ ವಿಶ್ರಾಂತಿ ನೀಡಿ ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ನಾಯು ಸೆಳೆತ ಮತ್ತು ಬೆನ್ನು,ಕಾಲು ನೋವನ್ನು ತಡೆಯುತ್ತದೆ.

Most Read: ಹೆರಿಗೆ ವೇಳೆ ನರ್ಸ್ ಮಾಡಿದ ಎಡವಟ್ಟು- ತಾಯಿಯ ಹೊಟ್ಟೆಯಲ್ಲಿ ತಲೆ, ಉಳಿದ ಭಾಗ ಹೊರಗೆ!!

ಬಾಳೆಹಣ್ಣು ಮಲಬದ್ಧತೆ ನಿವಾರಿಸುತ್ತದೆ

ಬಾಳೆಹಣ್ಣು ಮಲಬದ್ಧತೆ ನಿವಾರಿಸುತ್ತದೆ

ಗರ್ಭಿಣಿ ಮಹಿಳೆಯರಲ್ಲಿ ಮಲಬದ್ಧತೆ ಕಂಡು ಬರುವುದು ಸಾಮಾನ್ಯ.ಇದರಿಂದಾಗಿ ಅಪಾರವಾದ ಅಸ್ವಸ್ಥತೆಗೊಳಗಾದ ಭಾವನೆ ಹುಟ್ಟುತ್ತದೆ.

ಮಲಬದ್ಧತೆ ತಡೆಯುವುದು ಹೇಗೆ ?

*ಹೊಟ್ಟೆ ಉಬ್ಬರಿಸುವಿಕೆ ಮತ್ತು ಮಲಬದ್ಧತೆ ತಡೆಯಲು ಪ್ರತಿದಿನ ಬಾಳೆಹಣ್ಣು ತಿನ್ನುವುದು ಅನುಕೂಲಕಾರಿ.

*ಬಾಳೆಹಣ್ಣಿನಲ್ಲಿರುವ ನಾರಿನಂಶ ಗರ್ಭಾಶಯದ ಸ್ನಾಯುವನ್ನು ಸಡಿಲಗೊಳಿಸಿ ಮಲಬದ್ಧತೆಯಾಗುವುದನ್ನು ತಡೆಯುತ್ತದೆ.

ಹೇರಳವಾದ ಕ್ಯಾಲ್ಸಿಯಂ ಅಂಶವಿದೆ

ಹೇರಳವಾದ ಕ್ಯಾಲ್ಸಿಯಂ ಅಂಶವಿದೆ

ಮಗುವಿನ ಉತ್ತಮ ಬೆಳವಣಿಗೆ ಮತ್ತು ಆರೋಗ್ಯಕರವಾದ ಮೂಳೆಯ ಬೆಳವಣಿಗೆಗೆ ಕ್ಯಾಲ್ಸಿಯಂ ಅಂಶ ಅವಶ್ಯಕ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ.

ಇದಕ್ಕೆ ಬಾಳೆಹಣ್ಣು ಹೇಗೆ ಸಹಾಯಕ ?

* ಬಾಳೆಹಣ್ಣು ಕ್ಯಾಲ್ಸಿಯಂ ಹೇರಳವಾದ ಹಣ್ಣು.

* ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ಕ್ಯಾಲ್ಸಿಯಂ ಅಂಶ ಹೆಚ್ಚುತ್ತದೆ ಮತ್ತು ಭ್ರೂಣದ ಬೆಳವಣಿಗೆಗೆ ಕೂಡ ಸಹಾಯಕ.

ಮಾರ್ನಿಂಗ್ ಸಿಕ್ನೆಸ್ ಕಡಿಮೆ ಮಾಡಲು

ಮಾರ್ನಿಂಗ್ ಸಿಕ್ನೆಸ್ ಕಡಿಮೆ ಮಾಡಲು

ಮೊದಲ ತ್ರೈಮಾಸಿಕದಲ್ಲಿ ಹಾರ್ಮೋನಿನಲ್ಲಿ ಉಂಟಾಗುವ ವ್ಯತ್ಯಾಸದಿಂದಾಗಿ ಗರ್ಭಿಣಿ ಮಹಿಳೆ ವಾಕರಿಕೆ,ವಾಂತಿ ಇಂತಹ ಸಮಸ್ಯೆಗಳಿಂದ ಬಳಲುವುದು ಸಾಮಾನ್ಯ.ಈ ರೀತಿಯಾಗುವುದು ಪ್ಲಾಸೆಂಟಾ ಬೆಳವಣಿಗೆಯ ಲಕ್ಷಣವಾದ್ದರಿಂದ ಉತ್ತಮ ಸೂಚನೆ ಎಂದು ಕೂಡ ಪರಿಗಣಿಸಲಾಗುತ್ತದೆ.ಆದರೂ ಮಾರ್ನಿಂಗ್ ಸಿಕ್ನೆಸ್ ಅನುಭವಿಸುದು ಕೆಲವು ಮಹಿಳೆಯರಿಗೆ ಬಹಳ ಕಿರಿಕಿರಿ ನೀಡಬಹುದು. ಬಾಳೆಹಣ್ಣು ಮಾರ್ನಿಂಗ್ ಸಿಕ್ನೆಸ್ ಅನ್ನು ಕಡಿಮೆ ಮಾಡುತ್ತದೆಯಾದ್ದರಿಂದ ಮೊದಲ ತ್ರೈಮಾಸಿಕದಲ್ಲಿ ಗರ್ಭಿಣಿ ಮಹಿಳೆ ಬಾಳೆಹಣ್ಣು ತಿನ್ನುವುದು ಒಳ್ಳೆಯದು. ನೀವು ಗರ್ಭಿಣಿಯಾಗಿದ್ದಾಗ ಬಾಳೆಹಣ್ಣು ತಿಂದಿದ್ದಿರಾ? ಅಥವಾ ಅದರಿಂದ ದೂರವಿದ್ದಿರಾ?ಈ ಕೆಳಗೆ ಕಾಮೆಂಟ್ ನಲ್ಲಿ ನಮಗೆ ತಿಳಿಸಿ.

English summary

Banana's That You Should Eat Every Day When Pregnant

Pregnancy is among one of the most beautiful phases in a woman’s life. But every family member will start giving you expert tips on how to have a smooth delivery and a healthy baby. Some might even say that you shouldn’t eat bananas as it interferes with the natural,vaginal birth But let me tell you, that’s a myth, which has been busted by science! Various studies have proved that bananas can be really beneficial during pregnancy.
X
Desktop Bottom Promotion