For Quick Alerts
ALLOW NOTIFICATIONS  
For Daily Alerts

ಅಂಡಾಶಯದ ನಾರುಗಡ್ಡೆಯನ್ನು ಗುಣಪಡಿಸಲು ಆಯುರ್ವೇದದ ವಿಧಾನ

|

ಅಂಡಾಶಯದ ನಾರುಗಡ್ಡೆ ಎಂದರೆ ಅಂಡಾಶಯದ ಒಳಪದರದಲ್ಲಿ ದ್ರವವನ್ನು ತುಂಬಿಕೊಂಡಿರುವ ಚಿಕ್ಕ ಚಿಕ್ಕ ಗಡ್ಡೆಗಳು ದ್ರಾಕ್ಷಿಯಂತೆ ಗೊಂಚಲಾಗಿರುವ ಬೆಳವಣಿಗೆಯಾಗಿದೆ. ಈ ಸ್ಥಿತಿ ಇಂದಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಕಂಡುಬರುತ್ತಿದೆ. ಇವು ಚಿಕ್ಕದಾಗಿದ್ದಾಗ ತಮ್ಮ ಇರುವನ್ನೇ ತೋರ್ಪಡಿಸದೇ ನಿರಪಾಯಕಾರಿಯಾಗಿದ್ದರೂ ಬೆಳವಣಿಗೆ ಪಡೆಯುತ್ತಾ ಹೋದಂತೆ ಕೆಲವು ದ್ರಾಕ್ಷಿಗಳು ಒಡೆದು ಒಳಗಣ ರಸ್ರ ಸ್ರಾವವಾಗುವುದು, ತೀಕ್ಷ್ಣವಾದ ನೋವು ಕಾಣಿಸಿಕೊಳ್ಳುವುದು ಮೊದಲಾದವುಗಳ ಮೂಲಕ ತಮ್ಮ ಇರವನ್ನು ಪ್ರಕಟಿಸುತ್ತವೆ. ಇವುಗಳನ್ನು ನಿವಾರಿಸಲು ಶಸ್ತ್ರಕ್ರಿಯೆಯ ಅಗತ್ಯ ಬೀಳಬಹುದು. ಕೆಲವು ಸಂದರ್ಭಗಳಲ್ಲಿ ಈ ಮೆದುಗಡ್ಡೆಗಳು ಘನರೂಪ ತಾಳಿ ಕ್ಯಾನ್ಸರ್ ಗೂ ಪರಿವರ್ತಿತವಾಗಬಹುದು. ಆದರೆ ಇವುಗಳು ಗಂಭಿರ ಮಟ್ಟ ತಲುಪುವ ಮುನ್ನವೇ ಸೂಕ್ತ ಚಿಕಿತ್ಸೆಯನ್ನು ಪಡೆದರೆ ತಾವಾಗಿಯೂ ಕೃಶವಾಗಿ ಇಲ್ಲವಾಗುವಂತೆ ಮಾಡಬಹುದು. ಈ ಗಡ್ಡೆಗಳಿಗೆ ಆಧುನಿಕ ಆಲೋಪಥಿ ವೈದ್ಯವಿಜ್ಞಾನದಲ್ಲಿ ಕೆಲವರು ಔಷಧಿಗಳಿವೆ. ಪರ್ಯಾಯವಾಗಿ ಆಯುರ್ವೇದದ ಬಳಿಯೂ ಕೆಲವಾರು ಔಷಧಿಗಳಿವೆ ಹಾಗೂ ಇವು ನೈಸರ್ಗಿಕವಾಗಿ ಮತ್ತು ಯಾವುದೇ ಅಡ್ಡ ಪರಿಣಾಮವಿಲ್ಲದೇ ಸುರಕ್ಷಿತವಾಗಿ ಈ ಗಡ್ಡೆಗಳನ್ನು ಗುಣಪಡಿಸುತ್ತದೆ.

ಅಂಡಾಶಯದ ನಾರುಗಡ್ಡೆಯನ್ನು ಗುಣಪಡಿಸಲು ಆಯುರ್ವೇದದ ಸುರಕ್ಷಿತ ವಿಧಾನಗಳು

ಅಂಡಾಶಯದ ನಾರುಗಡ್ಡೆಯನ್ನು ಗುಣಪಡಿಸಲು ಆಯುರ್ವೇದದ ಸುರಕ್ಷಿತ ವಿಧಾನಗಳು

ನಿಸರ್ಗದಲ್ಲಿ ಸಿಗುವ ಕಚ್ಛಾನಾರ ಗುಗ್ಗುಲ, ಪ್ರದ್ರಾಂತಕ ಚೂರ್ಣ ಹಾಗೂ ಚಂದ್ರಪ್ರಭಾ ವಾಟಿ ಮೊದಲಾದವು ಗರ್ಭಾಶಯದ ನಾರುಗಡ್ಡೆಯನ್ನು ಸರಿಪಡಿಸಲು ಸೂಕ್ತವಾದ ಔಷಧಿಗಳಾಗಿವೆ. ಇವು ದೇಹದಲ್ಲಿ ರಸದೂತಗಳ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುವ ಜೊತೆಗೇ ನೋವನ್ನೂ ಕಡಿಎಯಾಗಿಸುತ್ತದೆ ಹಾಗೂ ಏರುಪೇರಾಗಿದ್ದ ಮಾಸಿಕ ಚಕ್ರವನ್ನು ಮತ್ತೊಮ್ಮೆ ಕ್ರಮಬದ್ದಗೊಳಿಸುತ್ತದೆ. ಗರ್ಭಾಶಯದ ನಾರುಗಡ್ಡೆಗೆ ಆಯುರ್ವೇದದಲ್ಲಿ ಲಭ್ಯವಿರುವ ಇನ್ನೊಂದು ಮನೆಮದ್ದು ಎಂದರೆ ಕೆಂಪು ಲವಂಗ (red clover)ಎಂಬ ಮೂಲಿಕೆಯಾಗಿದೆ ಹಾಗೂ ಇದರ ಬಳಕೆ ಹೆಚ್ಚು ವ್ಯಾಪಕವಾಗಿದೆ. ಇವು ಸಹಾ ಅನಿಯಮಿತ ಮಾಸಿಕ ದಿನಗಳನ್ನು ಕ್ರಮಬದ್ದಗೊಳಿಸುತ್ತದೆ ಹಾಗೂ ರಸದೂತಗಳ ಸಮತೋಲನ ಕಾಪಾಡುತ್ತದೆ.

ಆಯುರ್ವೇದ

ಆಯುರ್ವೇದ

Chasteberry,dandelion ಹಾಗೂ black cohosh ಎಂಬ ಹೂವುಗಳನ್ನೂ ಆಯುರ್ವೇದದಲ್ಲಿ ಗರ್ಭಾಶಯದ ನಾರುಗಡ್ಡೆಯನ್ನು ಗುಣಪಡಿಸಲು ಬಳಸಲಾಗುತ್ತದೆ. ಇವು ಸಹಾ ಅನಿಯಮಿತ ಮಾಸಿಕ ದಿನಗಳನ್ನು ಕ್ರಮಬದ್ದಗೊಳಿಸುತ್ತದೆ ಹಾಗೂ ರಸದೂತಗಳ ಸಮತೋಲನ ಕಾಪಾಡುತ್ತದೆ. ದುಂಬಿಗಳ ಕಾಲಿನಲ್ಲಿರುವ ಪರಾಗ ಸಹಾ ಅತ್ಯಂತ ಪೌಷ್ಟಿಕ ಆಹಾರವಾಗಿದೆ ಹಾಗೂ ಆಯುರ್ವೇದ ಈ ಪರಾಗವನ್ನು ಗರ್ಭಾಶಯದ ನಾರುಗಡ್ಡೆಯ ಚಿಕಿತ್ಸೆಗಾಗಿ ಬಳಸುತ್ತದೆ. ಅಲ್ಲದೇ ಇದರ ಸೇವನೆಯಿಂದ ಮಹಿಳೆಯರಲ್ಲಿ ಸಂತಾನೋತ್ಪತ್ತಿಯ ಕ್ಷಮತೆ ಹೆಚ್ಚುತ್ತದೆ.

Most Read: ಗರ್ಭಿಣಿಯರ ಬೆನ್ನೇರಿ ಕಾಡುವ ಪಿಸಿಓಎಸ್ ಎಂಬ ಪೆಡಂಭೂತ

ಜಿನ್ಸೆಂಗ್, ದೊಡ್ಡ ಜೀರಿಗೆ ಹಾಗೂ ಸೇಜ್ ಎಲೆಗಳು

ಜಿನ್ಸೆಂಗ್, ದೊಡ್ಡ ಜೀರಿಗೆ ಹಾಗೂ ಸೇಜ್ ಎಲೆಗಳು

ಇದರ ಜೊತೆಗೇ ಅಕ್ರೋಟು, ಮುಳ್ಳುಕೊಂಬು ಬೀಜ (red chestnuts),ಗೋಕ್ಷುರ (thistles),ಕಾಡು ಸುವರ್ಣಗಡ್ಡೆ (wild yam) ಕಾಡು ಓಟ್ಸ್ (wild oats) ಮೊದಲಾದ ಒಣಫಲಗಳೂ ಗರ್ಭಾಶಯದ ಗಡ್ಡೆಗಳನ್ನು ನಿವಾರಿಸುವ ಕ್ಷಮತೆ ಹೊಂದಿದ್ದು ಆಯುರ್ವೇದದ ಚಿಕಿತ್ಸೆಯಲ್ಲಿ ಬಳಕೆಯಾಗುತ್ತಿವೆ. ಅಲ್ಲದೇ ಜಿನ್ಸೆಂಗ್, ದೊಡ್ಡ ಜೀರಿಗೆ ಹಾಗೂ ಸೇಜ್ ಎಲೆಗಳು ಸಹಾ ಮಹಿಳೆಯರಲ್ಲಿ ರಸದೂತಗಳ ಅಸಮತೋಲನವನ್ನು ಸರಿಪಡಿಸಿ ಈ ಗಡ್ಡೆಗಳಾಗದಂತೆ ತಡೆಯುತ್ತವೆ. ಅಲ್ಲದೇ ಬಿಸಿಮಾಡಿದ ಹರಳೆಣ್ಣೆಯನ್ನು ಮಸಾಜ್ ಮಾಡಿ ಹಚ್ಚಿಕೊಳ್ಳುವುದರಿಂದಲೂ ಗರ್ಭಾಶಯದ ಗಡ್ಡೆಗಳನ್ನು ಗುಣಪಡಿಸಬಹುದು.

ಚೀನೀ ವೈದ್ಯ ಪದ್ಧತಿಯಲ್ಲಿ ಜನಪ್ರಿಯ್ರವಾದ ಡಾಂಗ್ ಕ್ವಾಯಿ ಎಂಬ ಮೂಲಿಕೆ

ಚೀನೀ ವೈದ್ಯ ಪದ್ಧತಿಯಲ್ಲಿ ಜನಪ್ರಿಯ್ರವಾದ ಡಾಂಗ್ ಕ್ವಾಯಿ ಎಂಬ ಮೂಲಿಕೆ

ಚೀನೀ ವೈದ್ಯ ಪದ್ಧತಿಯಲ್ಲಿ ಜನಪ್ರಿಯ್ರವಾದ ಡಾಂಗ್ ಕ್ವಾಯಿ ಎಂಬ ಮೂಲಿಕೆಯಲ್ಲಿಯೂ ದೇಹದ ರಸದೂತಗಳ ಅಸಮತೋಲನವನ್ನು ಸರಿಪಡಿಸುವ ಗುಣವಿದೆ ಹಾಗೂ ತನ್ಮೂಲಕ ಏರುಪೇರಾಗಿದ್ದ ಮಾಸಿಕ ದಿನಗಳನ್ನೂ ಕ್ರಮಬದ್ಧಗೊಳಿಸುತ್ತದೆ ಹಾಗೂ ಗಡ್ಡೆಗಳಾಗದಂತೆ ತಡೆಯುತ್ತದೆ. ಲಿಕೋರೈಸ್ (Liquorice) ಅಥವಾ ಜ್ಯೇಷ್ಠ ಮಧುವಿನ ಬೇರಿನ ರಸದಿಂದ ತಯಾರಿಸಿದ ಕಪ್ಪು ಪದಾರ್ಥಕ್ಕೆ ಅಡ್ರಿನಲಿನ್ ಗ್ರಂಥಿಯ ಮೇಲೆ ಪ್ರಭಾವ ಬೀರುವ ಗುಣವಿದೆ ಹಾಗೂ ತನ್ಮೂಲಕ ದೇಹದ ರಸದೂತಗಳ ಸಮತೋಲನವನ್ನು ಕಾಪಾಡಲು ನೆರವಾಗುತ್ತದೆ. ಅಲ್ಲದೇ ಗರ್ಭಾಶಯದಲ್ಲಿರುವ ನಾರುಗಡ್ಡೆಗಳನ್ನು ಕರಗಿಸಿ ಇಲ್ಲವಾಗಿಸುವ ಕ್ಷಮತೆಯನ್ನೂ ಹೊಂದಿದೆ.

ಈರುಳ್ಳಿ

ಈರುಳ್ಳಿ

ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಟ್ಯಾಂಪೋನ್ ಒಂದರ ರೂಪದಲ್ಲಿ ಜನನಾಂಗದೊಳಗೆ ಧರಿಸಿಕೊಳ್ಳುವ ಮೂಲಕವೂ ಗರ್ಭಾಶಯದಲ್ಲಿರುವ ನಾರುಗಡ್ಡೆಗಳನ್ನು ನಿವಾರಿಸಲು ಸಾಧ್ಯವಿದೆ. ಇದಕ್ಕಾಗಿ ನೀರುಳ್ಳಿಯನ್ನೊಂದನ್ನು ಚಿಕ್ಕದಾಗಿ ಕೊಚ್ಚಿ ಜೇನಿನಲ್ಲಿ ಸುಮಾರು ಹನ್ನೆರಡು ಘಂಟೆಯ ಕಾಲ ನೆನೆಸಿಡಿ. ರಾತ್ರಿ ಮಲಗುವ ಮುನ್ನ ಈ ನೀರುಳ್ಳಿಯನ್ನು ಟ್ಯಾಂಪೋನ್ ನಂತೆ ಜನನಾಂಗದೊಳಗೆ ಧರಿಸಿ ಇಡಿಯ ರಾತ್ರಿ ಹಾಗೇ ಇರಲು ಬಿಡಿ. ಈ ವಿಧಾನವನ್ನು ಸತತವಾಗಿ ಹತ್ತು ದಿನಗಳವರೆಗೆ ಮುಂದುವರೆಸಿ. ಅಲ್ಲದೇ ತಾಜಾ ಹಣ್ಣುಗಳು, ಹಸಿಯಾಗಿ ತಿನ್ನಬಹುದಾದ ತರಕಾರಿಗಳು, ದ್ವಿದಳಧಾನ್ಯಗಳು, ಬೆಳ್ಳುಳ್ಳಿ, ಇಡಿಯ ಧಾನ್ಯಗಳು ಸಹಾ ಆರೋಗ್ಯವನ್ನು ವೃದ್ದಿಸುವ ಜೊತೆಗೇ ನೋವು ಮತ್ತು ಅಹಿತಕರ ಭಾವನೆಯನ್ನು ತೊಡೆದು ಹಾಕುತ್ತವೆ. ಅಲ್ಲದೇ ಕೆಫೀನ್ ಇರುವ ಆಹಾರಗಳು, ಮದ್ಯ, ಮೊಟ್ಟೆಗಳು, ಕೆಂಪು ಮಾಂಸ, ಕೊಬ್ಬುಯುಕ್ತ ಆಹಾರಗಳು, ಬಿಳಿ ಸಕ್ಕರೆ ಹಾಗೂ ಸಂಸ್ಕರಿತ ಆಹಾರಗಳನ್ನು ಸೇವಿಸದಿರಿ, ಏಕೆಂದರೆ ಈ ಆಹಾರಗಳು ತೊಂದರೆಯನ್ನು ಮರುಕಳಿಸುವಂತೆ ಮಾಡಬಹುದು.

Most Read: ವೈದ್ಯರ ಮೊದಲ ಭೇಟಿ ವೇಳೆ ಗರ್ಭಿಣಿಯರು ಕೇಳಬೇಕಾದ ಪ್ರಶ್ನೆಗಳು

ಆಹಾರದಲ್ಲಿ ಸಾಕಷ್ಟು ಪ್ರಮಾಣದ ನಾರು ಇರುವಂತೆ ನೋಡಿಕೊಳ್ಳಬೇಕು

ಆಹಾರದಲ್ಲಿ ಸಾಕಷ್ಟು ಪ್ರಮಾಣದ ನಾರು ಇರುವಂತೆ ನೋಡಿಕೊಳ್ಳಬೇಕು

ಗರ್ಭಾಶಯದಲ್ಲಿ ನಾರುಗಡ್ಡೆ ಇರುವ ಮಹಿಳೆಯರು ತಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದ ನಾರು ಇರುವಂತೆ ನೋಡಿಕೊಳ್ಳುವುದೂ ಇನ್ನೊಂದು ಅಗತ್ಯತೆಯಾಗಿದೆ. ಹಾಗೂ ವಿಟಮಿನ್ ಎ, ಸಿ. ಮತ್ತು ಈ ಇರುವ ಹೆಚ್ಚುವರಿ ಔಷಧಿಗಳನ್ನೂ ಸೇವಿಸಬೇಕಾಗುತ್ತದೆ. ಅಲ್ಲದೇ ಆಯುರ್ವೇದೀಯ ಚಿಕಿತ್ಸೆ ಸುಲಭ ಮತ್ತು ಅಗ್ಗವೂ ಆಗಿದ್ದು ಯಾವುದೇ ಅಡ್ಡಪರಿಣಾಮವನ್ನು ಹೊಂದಿರುವುದಿಲ್ಲ. ಆದರೂ, ಈ ತೊಂದರೆಯ ಇರುವಿಕೆಯ ಬಗ್ಗೆ ತಿಳಿದ ಬಳಿಕ ಅಥವಾ ಗುಣವಾದ ಬಳಿಕ ಮತ್ತೊಮ್ಮೆ ಎದುರಾಗಿರುವ ಅನುಮಾನ ಎದುರಾದರೆ ಯಾವುದೇ ಚಿಕಿತ್ಸೆಯನ್ನು ತಾವಾಗಿಯೇ ಪ್ರಾರಂಭಿಸದೇ ಕೇವಲ ಆರೋಗ್ಯ ತಜ್ಞರು ಅಥವಾ ವೈದ್ಯರ ಸಲಹೆ ಪಡೆದೇ ಮುಂದುವರೆಯಬೇಕು.

English summary

Ayurvedic Cure for Ovarian Cyst

Ovarian cysts are small sacs filled with fluid that develop in the ovaries of women. This condition has become very common in females of all ages nowadays. Most cysts are harmless until they develop problems such as bleeding, rupturing or pain and may require surgical removal. In certain cases however, ovarian cysts can become malignant or cancerous. Besides modern allopathic medicines, a wide range of ayurvedic cures for ovarian cyst are available to treat this condition naturally and safely.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more