Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಎದೆಹಾಲು ಉಣ್ಣಿಸುವುದರಿಂದ ತಾಯಿ-ಮಗು ಇಬ್ಬರಿಗೂ ಒಳ್ಳೆಯದು
ಎದೆಹಾಲು ಮಗುವಿನ ಬೆಳವಣಿಗೆಗೆ ಅತ್ಯುತ್ತಮವಾದದ್ದು ಅಥವಾ ಮಗುವಿನ ವಿಕಸನಕ್ಕೆ ಇರುವ ಏಕೈಕ ಆಹಾರ ಎಂದರೆ ಎದೆ ಹಾಲು ಎನ್ನಬಹುದು. ತಾಯಿಯ ದೇಹದಿಂದ ಹೊರ ಬಂದು ಹೊಸ ಪ್ರಪಂಚವನ್ನು ಕಾಣುವಾಗಲೂ ಮಗು ತಾಯಿಯ ಹಾಲನ್ನು ಸೇವಿಸುವುದರ ಮೂಲಕ ತನ್ನ ಬೆಳವಣಿಗೆಯನ್ನು ಕಾಣುತ್ತದೆ. ಪ್ರಕೃತಿ ಸೃಷ್ಟಿಸಿರುವ ಈ ನಿಯಮದಿಂದ ಕೇವಲ ಮಗುವಿನ ಬೆಳವಣಿಗೆಯಷ್ಟೇ ಅಲ್ಲ. ತಾಯಿಯ ಆರೋಗ್ಯದಲ್ಲೂ ಗಣನೀಯವಾದ ಬದಲಾವಣೆ ಉಂಟಾಗುವುದು.
ಎದೆ ಹಾಲು ಕಡಿಮೆ ಇರುವ ತಾಯಂದಿರು ಸೇವಿಸಬೇಕಾದ ಆಹಾರಗಳು
ಕೆಲವರು ತಮ್ಮ ಸೌಂದರ್ಯದ ಪರಿಗಣನೆಯಲ್ಲಿ ಮಗುವಿಗೆ ಬಹುಬೇಗ ಎದೆಹಾಲು ಉಣಿಸುವುದನ್ನು ನಿಲ್ಲಿಸುತ್ತಾರೆ. ಆದರೆ ಅಂತಹ ಮಗು ಮತ್ತು ತಾಯಿ ಆರೋಗ್ಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಮಗುವಿಗೆ ಕಡಿಮೆ ಎಂದರೂ 6-8 ತಿಂಗಳುಗಳ ಕಾಲ ಎದೆ ಹಾಲು ಉಣಿಸುವುದನ್ನು ನಿಲ್ಲಿಸಬಾರದು. 1-2 ವರ್ಷಗಳ ಕಾಲ ಹಾಲುಣಿಸಿದರೆ ಮಗು ಅತ್ಯುತ್ತಮವಾದ ಆರೋಗ್ಯ ಪಡೆದುಕೊಳ್ಳುವುದು. ತಾಯಿಯ ಆರೋಗ್ಯವೂ ಮೊದಲಿನ ಸ್ಥಿತಿಗೆ ಮರುಕಳಿಸುವುದು ಎಂದು ಹೇಳಲಾಗುತ್ತದೆ. ಎದೆಹಾಲು ಉಣಿಸುವುದರಿಂದ ತಾಯಿ ಹಾಗೂ ಮಗುವಿನ ಆರೋಗ್ಯದಲ್ಲಿ ಯಾವೆಲ್ಲಾ ಬದಲಾವಣೆಗಳು ಉಂಟಾಗುತ್ತವೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ....
ಆರೋಗ್ಯಕ್ಕೆ ಒಳ್ಳೆಯದು
ಎದೆಹಾಲು ಮುವಿಗೆ ಅತ್ಯುತ್ತಮವಾದ ಆಹಾರ. ಏಕೆಂದರೆ ಎದೆಹಾಲಿನಲ್ಲಿ ಸೂಕ್ಷ್ಮ ಜೀವಾಣುಗಳ ವಿರುದ್ಧ ಹೋರಾಟ ನಡೆಸುವಂತಹ ಶಕ್ತಿಯಿದೆ. ಎದೆಹಾಲು ಉಣ್ಣುತ್ತಿರುವ ಮಗುವಿನಲ್ಲಿ ಶೀತ, ಸೀನಸ್, ಕಿವಿ ಸೋಂಕು, ಅತಿಸಾರ, ಮಲಬದ್ಧತೆ ಸೇರಿದಂತೆ ಅನೇಕ ಸಮಸ್ಯೆಗಳು ಬರುವುದಿಲ್ಲ.
ತಾಯಿಯ ಆರೋಗ್ಯದಲ್ಲಿ ಸುಧಾರಣೆ
ಅನೇಕರಿಗೆ ಇದು ತಿಳಿದಿಲ್ಲ. ಎದೆಹಾಲು ಉಣಿಸುವುದರಿಂದ ತಾಯಿಯ ಆರೋಗ್ಯದಲ್ಲೂ ಸುಧಾರಣೆ ಆಗುವುದು. ಹೃದಯ ಸಮಸ್ಯೆ, ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ನಿವಾರಣೆಗೆ ಸಹಾಯ ಮಾಡುವುದು. ಎದೆಹಾಲು ಉಣಿಸುವಾಗ ಪ್ರೊಲ್ಯಾಕ್ಟಿನ್ ನಂತಹ ಹಾರ್ಮೊನ್‍ಗಳು ಬಿಡುಗಡೆಯಾಗುವುದು. ಇದು ಗರ್ಭಕೋಶದ ಆರೋಗ್ಯವನ್ನು ಸುಧಾರಿಸಲು ಸಹ ಇದು ಸಹಾಯ ಮಾಡುವುದು.
ತಾಯಿಗೆ ಅನುಕೂಲ
ಪ್ರಸವದ ನಂತರ ತಾಯಿ ವಿಟಮಿನ್‍ಗಳನ್ನು, ಕ್ಯಾಲ್ಸಿಯಂ ಮತ್ತು 12 ಗ್ಲಾಸ್ ನಷ್ಟು ನೀರನ್ನು ಸೇವಿಸುತ್ತಾರೆ. ಇದರಿಂದ ತಾಯಿಯ ಆರೋಗ್ಯದಲ್ಲಿ ನೀರಿನಂಶ ಸಮತೋಲನವನ್ನು ಕಾಪಾಡುತ್ತದೆ. ಜೊತೆಗೆ ತಾಯಿಯ ಆರೋಗ್ಯದ ಸುಧಾರಣೆಗೊಂಡು ಹೆಚ್ಚು ಉತ್ಸಾಹದಲ್ಲಿ ಇರುವಂತೆ ಮಾಡುವುದು.
ಮಕ್ಕಳಿಗೆ ದೀರ್ಘಾವಧಿಯ ಲಾಭಗಳು
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಎದೆಹಾಲು ಉಣಿಸುವುದರಿಂದ ಮಗುವಿನ ಜೀವಿತಾವಧಿಯವರೆಗೂ ಅತ್ಯುತ್ತಮ ಆರೋಗ್ಯವನ್ನು ಕೊಡುಗೆಯಾಗಿ ನೀಡುವುದು. ಎದೆಹಾಲನ್ನು ಸೂಕ್ತ ಅವಧಿಯವರೆಗೆ ಸೇವಿಸದ ಮಕ್ಕಳಲ್ಲಿ ಅತಿಯಾದ ತೂಕ, ಬೊಜ್ಜು, ಹದಿಹರೆಯದಲ್ಲಿ ಸಮಸ್ಯೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡಬಹುದು.
ಮಗುವಿನ ಬೆಳವಣಿಗೆಗೆ
ಎದೆಹಾಲು ಮಗುವಿನ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್, ವಿಟಮಿನ್, ಪ್ರೋಟೀನ್ ಮತ್ತು ಕೊಬ್ಬುಗಳು ಸೂಕ್ತ ಪ್ರಮಾಣದಲ್ಲಿ ಇರುತ್ತವೆ. ಇವು ಮಗುವಿನ ಆರೋಗ್ಯಕರವಾದ ಬೆಳವಣಿಗೆಗೆ ಉತ್ತೇಜನ ನೀಡುವುದು. ಅಲ್ಲದೆ ಎದೆಹಾಲಿನಲ್ಲಿ ಕಂಡುಬರುವ ಪ್ರತಿಕಾರಕಗಳು, ಕಿಣ್ವಗಳು ಮತ್ತು ಹಾರ್ಮೋನ್‍ಗಳು ನವಜಾತಶಿಶುಗಳಿಗೆ ಉತ್ತಮ ಆಹಾರವನ್ನು ನೀಡುತ್ತವೆ.
ಬಲವಾದ ಮೂಳೆಗಳು
ಮಗುವಿಗೆ ಎದೆ ಹಾಲು ಉಣಿಸುವುದರಿಂದ ಮಗುವಿಗೆ ಸೂಕ್ತ ಪ್ರಮಣದ ಕ್ಯಾಲ್ಸಿಯಂ ದೊರೆಯುವುದಲ್ಲದೆ ತಾಯಿಯ ದೇಹದಲ್ಲೂ ಮೂಳೆಗೆ ಅಗತ್ಯವಾದ ಕ್ಯಾಲ್ಸಿಯಂ ಹೀರಲ್ಪಡುತ್ತದೆ. ಇದರಿಂದ ತಾಯಿಯ ಸೊಂಟ ಮತ್ತು ಬೆನ್ನು ಮೂಳೆಗೆ ಸಂಬಂಧಿಸಿದ ಸಮಸ್ಯೆಗಳಿಂದ ದೂರಾಗಬಹುದು.
ರೋಗನಿರೋಧಕ ಶಕ್ತಿ ಹೆಚ್ಚುವುದು
ಕೆಲವು ಅಧ್ಯಯನ ಹಾಗೂ ಸಂಶೋಧನೆಯ ಪ್ರಕಾರ ಕನಿಷ್ಠ 4 ತಿಂಗಳು ಎದೆಹಾಲು ಉಂಡಿರುವ ಮಗುವಿನಲ್ಲಿ ಎಸ್ಜಿಮಾ, ಅಸ್ತಮಾ ಮತ್ತು ಆಹಾರ ಅಲರ್ಜಿಯ ಸಮಸ್ಯೆಗಳು ಕಡಿಮೆಯಾಗುವುದು. ಕಡಿಮೆ ಕೊಬ್ಬು ಹಾಗೂ ಅಧಿಕ ಪ್ರೋಟೀನ್ ರವಾನೆಯಾಗುವುದು. ಅಲ್ಲದೆ ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದು ಎನ್ನಲಾಗುತ್ತದೆ.
ಹಠಾತ್ ಮರಣ ಸಮಸ್ಯೆ
ತಾಯಿ ಮಗುವಿಗೆ ಆರು ತಿಂಗಳುಗಳ ಕಾಲ ಹಾಲು ಉಣಿಸುವುದರಿಂದ ಮಗುವಿಗೆ ಕಾಡುವ ಎಸ್‍ಐಡಿಎಸ್ ಸಮಸ್ಯೆಯನ್ನು ತಡೆಯಬಹುದು. ಈ ಸಮಸ್ಯೆಗೆ ಒಳಗಾದ ಮಗುವು ಹಠಾತ್ ಮರಣ ಹೊಂದುವ ಸಾಧ್ಯತೆ ಇರುತ್ತದೆ. ಉತ್ತಮ ನಿದ್ರೆಯನ್ನು ಕಲ್ಪಿಸುವ ಎದೆ ಹಾಲು ಸುಮಾರು ಶೇ.50 ರಷ್ಟು ಎಸ್‍ಐಡಿಎಸ್ ಸಮಸ್ಯೆಯ ಅಪಾಯವನ್ನು ತಡೆಯುತ್ತದೆ.
ಕ್ಯಾನ್ಸರ್ ಅಪಾಯವನ್ನು ತಡೆಯುವುದು
ಎದೆ ಹಾಲು ಉಣ್ಣುವ ಮಕ್ಕಳಲ್ಲಿ ಕ್ಯಾನ್ಸರ್ ಅಪಾಯವನ್ನು ತಡೆಯಬಹುದು. ಹಾಡ್ಗಿನ್ಸ್ ಕಾಯಿಲೆ ಮತ್ತು ಲಿಂಫೋಬ್ಲಾಸ್ಟಿಕ್ ಲ್ಯುಕೆಮಿಯಾಗಳಂತಹ ರೋಗಗಳ ವಿರುದ್ಧ ಹೋರಾಡಲು ಎದೆಹಾಲು ಸಹಕರಿಸುವುದು ಅಥವಾ ರಕ್ಷಣೆ ನೀಡುವುದು.
ಉತ್ತಮ ಜೀರ್ಣಕ್ರಿಯೆ
ಎದೆಹಾಲು ಉಣ್ಣುವ ಮಕ್ಕಳಲ್ಲಿ ಅತಿಸಾರ ಮತ್ತು ಜೀರ್ಣಕ್ರಿಯೆಯ ಸಮಸ್ಯೆಯು ಉಂಟಾಗದು. ಎದೆಹಾಲಿನಲ್ಲಿ ಪೋಷಕಾಂಶದ ಸಂಯೋಜನೆ ಅತ್ಯುತ್ತಮವಾಗಿರುವುದರಿಂದ ಶಿಶುಗಳಿಗೆ ಆರೋಗ್ಯಕರ ಜೀರ್ಣಕಾರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ.
ತಾಯಿಯು ತೂಕ ಇಳಿಸಲು ಸಹಾಯ ಮಾಡುವುದು
ಗಣನೀಯವಾಗಿ ಎದೆಹಾಲು ಉಣಿಸುವುದರಿಂದ ತಾಯಿಯ ದೇಹದಲ್ಲಿರುವ ಹೆಚ್ಚುವರಿ ಕೊಬ್ಬುಗಳನ್ನು ಇಳಿಸಬಹುದು. ಜೊತೆಗೆ ಗರ್ಭಧಾರಣೆಯ ಪೂರ್ವದಲ್ಲಿರುವ ದೈಹಿಕ ಆರೋಗ್ಯವನ್ನು ತಾಯಿ ಪುನಃ ಪಡೆದುಕೊಳ್ಳಬಹುದು. ತಾಯಿ ಸಾಮಾನ್ಯವಾಗಿ ದಿನಕ್ಕೆ 400-500 ಕ್ಯಾಲೋರಿಗಳ ಅವಶ್ಯಕತೆ ಇರುತ್ತದೆ. ಎದೆಹಾಲು ಉಣಿಸುವುದರಿಂದ 500ರಷ್ಟು ಕ್ಯಾಲೋರಿಯನ್ನು ಇಳಿಸಬಹುದು ಎಂದು ಹೇಳಲಾಗುತ್ತದೆ.
ಮಧುಮೇಹದ ಅಪಾಯವನ್ನು ಕಡಿಮೆ ಮಾಡುವುದು
ಎದೆಹಾಲು ಉಣಿಸುವು ಕ್ರಿಯೆಯಿಂದ ತಾಯಿ ಮಧುಮೇಹದ ಸಮಸ್ಯೆಯಿಂದ ದೂರ ಸರಿಯಬಹುದು. ಈ ಪ್ರಕ್ರಿಯೆಯು ಮಗು ಮತ್ತು ತಾಯಿಯಲ್ಲಿ ಟೈಪ್ 1 ಮತ್ತು ಟೈಪ್2 ರಂತಹ ಮಧುಮೇಹವನ್ನು ತಡೆಯುತ್ತದೆ. ಮಧುಮೇಹ ಬಂದರೆ ನರಗಳ ಹಾನಿ, ಮೂತ್ರಪಿಂಡದ ಹಾನಿ, ಕಣ್ಣಿನ ಹಾನಿ, ಹೃದಯ ಸಮಸ್ಯೆ, ಸೇರಿದಂತೆ ಇನ್ನಿತ ಸಮಸ್ಯೆಗಳು ಕಾಡಬಹುದು.
ಉತ್ತಮ ದೃಷ್ಟಿಯನ್ನು ಪಡೆಯಬಹುದು
ಎದೆಹಾಲು ಉಣಿಸುವುದರಿಂದ ಮಗುವಿನ ದೃಷ್ಟಿ ಶಕ್ತಿಯು ಉತ್ತಮವಾಗುವುದು. ಕೆಲವು ಸಂಶೋಧನೆಯ ಪ್ರಕಾರ ಎದೆಹಾಲು ಉಣ್ಣುತ್ತಿರುವ ಮಕ್ಕಳಲ್ಲಿ ದೃಷ್ಟಿ ಸಮಸ್ಯೆಯು ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಎಂದು ಹೇಳಲಾಗಿದೆ.
ಪ್ರಸವದ ನಂತರದ ಆರೋಗ್ಯ
ಪ್ರಸವದ ನಂತರ ತಾಯಿಯ ದೇಹದಲ್ಲಿ ರಕ್ತ ಹೀನತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಜೊತೆಗೆ ಗರ್ಭಾಶಯದ ಗಾತ್ರವು ಹಿಗ್ಗಿರುತ್ತದೆ. ಎದೆಹಾಲು ಉಣ್ಣಿಸುವುದರಿಂದ ತಾಯಿಯ ದೇಹಕ್ಕೆ ಅಗತ್ಯವಾದ ರಕ್ತದ ಪ್ರಮಾಣ ಮರುಕಳಿಸುವುದು. ಜೊತೆಗೆ ಗರ್ಭಾಶಯವು ಕುಗ್ಗುವುದರ ಜೊತೆಗೆ ಆರೋಗ್ಯಕರವಾಗಿರುವುದು.