For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾಗಿರುವಾಗ ಕಾಡುವ ಬೆನ್ನುನೋವು ನಿವಾರಣೆಗೆ ಟಿಪ್ಸ್

|

ಇತ್ತೀಚೆಗೆ ಶೇ.50 ರಿಂದ 70 ರಷ್ಟು ಗರ್ಭಿಣಿ ಮಹಿಳೆಯರು ವಿವಿಧ ರೀತಿಯ ಬೆನ್ನುನೋವಿನಿಂದ ಬಳಲುತ್ತಾರೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಬೆನ್ನುನೋವಿನ ತೀವ್ರತೆ ದೈಹಿಕ ಸ್ಥಿತಿಯನ್ನಾಧರಿಸಿ ಹೆಚ್ಚು ಕಡಿಮೆಯಾಗಿರಬಹುದು. ಆದರೂ ಬೆನ್ನಿನ ಹಿಂದಿನ ಕೆಳಭಾಗದ ಸೊಂಟದಲ್ಲಿ ನೋವು ಜಾಸ್ತಿ ಕಂಡುಬರುತ್ತದೆ. ಗರ್ಭಾವಸ್ಥೆಯ ದ್ವಿತೀಯಾರ್ಧದಲ್ಲಿ ಆರಂಭವಾಗುವ ಬೆನ್ನುನೋವು ದಿನಗಳೆದಂತೆ ತೀವ್ರವಾಗುತ್ತದೆ. ಸೊಂಟದ ವರ್ಟೆಬ್ರೆ (ಕಶೇರುಖಂಡ) ಭಾಗದಲ್ಲಿ ನೋವು ಹೆಚ್ಚಾಗಿರುತ್ತದೆ.

ಗರ್ಭಿಣಿಯರ ಬೆನ್ನು ನೋವಿಗೆ ಕಾರಣಗಳು

ಗರ್ಭಿಣಿಯರ ಬೆನ್ನು ನೋವಿಗೆ ಕಾರಣಗಳು

ಗರ್ಭಾವಸ್ಥೆಯಲ್ಲಿ ಕಾಡುವ ಬೆನ್ನುನೋವಿಗೆ ಹಲವಾರು ಅಂಶಗಳು ಕಾರಣವಾಗಿವೆ. ಗರ್ಭಧರಿಸುವ ಮುನ್ನವೇ ಬೆನ್ನು ನೋವಿನಿಂದ ಬಳಲುತ್ತಿದ್ದ ಹಾಗೂ ತೂಕ ಹೆಚ್ಚಾಗಿರುವ ಹೆಣ್ಣು ಮಕ್ಕಳು ಗರ್ಭಾವಸ್ಥೆಯಲ್ಲಿ ಬೆನ್ನುನೋವು ಅನುಭವಿಸುವ ಸಾಧ್ಯತೆಗಳು ಹೆಚ್ಚು. ಗರ್ಭಾವಸ್ಥೆಯಲ್ಲಿ ಬೆನ್ನು ನೋವು ಬಾಧಿಸಲು ಕಾರಣಗಳೇನು ಎಂಬುದನ್ನು ನೋಡೋಣ:

ಹಾರ್ಮೋನ್‌ಗಳ ಏರುಪೇರು

ಹಾರ್ಮೋನ್‌ಗಳ ಏರುಪೇರು

ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನ್‌ಗಳಿಂದ ಸೊಂಟದ ಭಾಗದ ಅಸ್ಥಿ ಮಜ್ಜೆಗಳು ಮೃದುವಾಗತೊಡಗುತ್ತವೆ ಮತ್ತು ಕೀಲುಗಳ ಸಂದುಗಳು ಸಡಿಲಾಗತೊಡಗುತ್ತವೆ. ಹೆರಿಗೆ ಪ್ರಕ್ರಿಯೆಗೆ ದೇಹವನ್ನು ಸಜ್ಜುಗೊಳಿಸಲು ದೇಹ ನೈಸರ್ಗಿಕವಾಗಿಯೇ ಈ ಬದಲಾವಣೆಗಳನ್ನು ಮಾಡಿಕೊಳ್ಳುತ್ತದೆ. ಈ ಬದಲಾವಣೆಯಿಂದ ಸೊಂಟದ ಆಧಾರ ಕಡಿಮೆಯಾಗಿ ದಿನನಿತ್ಯ ನೋವು ಕಾಡಬಹುದು.

ಹೆಚ್ಚುವರಿ ತೂಕ

ಹೆಚ್ಚುವರಿ ತೂಕ

ಗರ್ಭಿಣಿಯಾದಾಗ ಹೆಚ್ಚಾಗುವ ತೂಕದಿಂದ ಸೊಂಟಕ್ಕೆ ಹೆಚ್ಚಿನ ಬಲ ಬೇಕಾಗುತ್ತದೆ.

ದೈಹಿಕ ಒತ್ತಡ

ಮಗುವಿಗೆ ಜನ್ಮ ನೀಡುವುದು ಮಹಿಳೆಯ ಜೀವನದ ಅತ್ಯಂತ ಪ್ರಮುಖ ಘಟ್ಟಗಳಲ್ಲೊಂದಾಗಿದೆ. ಈ ಪ್ರಕ್ರಿಯೆಯು ಸಹಜವಾಗಿಯೇ ತಾಯಿಯಾಗಲಿರುವವಳಿಗೆ ಒತ್ತಡ ತರುತ್ತದೆ. ದೇಹದ ದುರ್ಬಲ ಅಂಗಗಳಲ್ಲಿ ಒತ್ತಡ ವರ್ಗಾವಣೆಯಾಗಿ ಸೊಂಟ ನೋವು ಹೆಚ್ಚಾಗಬಹುದು. ಗರ್ಭಾವಸ್ಥೆಯಲ್ಲಿ ಬೆನ್ನು ನೋವು ಉಪಶಮನ ಹೇಗೆ?

Most Read: ಇಂತಹ ಲಕ್ಷಣಗಳಿಂದ ಗರ್ಭಿಣಿಯಾಗಿದ್ದನ್ನು ಮುಟ್ಟು ನಿಲ್ಲುವ ಮುನ್ನವೇ ತಿಳಿಯಬಹುದು!

ವ್ಯಾಯಾಮ

ವ್ಯಾಯಾಮ

ಬೆನ್ನು ನೋವು ಕಾಡಿದಾಗ ಸುಮ್ಮನೆ ಹಾಸಿಗೆಯಲ್ಲಿ ಮಲಗಿ ರೆಸ್ಟ್ ಮಾಡಬೇಕೆನ್ನಿಸುವುದು ಸಹಜ. ಆದರೆ ಗರ್ಭಾವಸ್ಥೆಯಲ್ಲಿರುವಾಗ ನಿಯಮಿತವಾಗಿ ವ್ಯಾಯಾಮ ಮಾಡುವುದರ ಮೂಲಕ ಸ್ನಾಯುಗಳನ್ನು ಬಲಪಡಿಸಿಕೊಳ್ಳುವುದು ಅಗತ್ಯವಾಗಿದೆ. ಸರಳವಾದ ವ್ಯಾಯಾಮಗಳಿಂದ ಬೆನ್ನುಹುರಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು. ನಡೆದಾಡುವುದು, ಈಜುವುದು ಹಾಗೂ ನಿಶ್ಚಲ ಸೈಕ್ಲಿಂಗ್ ಮಾಡುವುದು ಸುರಕ್ಷಿತ ವ್ಯಾಯಾಮದ ವಿಧಾನಗಳಾಗಿವೆ. ಸ್ವಿಮಿಂಗ್‌ನಿಂದ ಗರ್ಭಿಣಿಯರ ಕಿಬ್ಬೊಟ್ಟೆ ಹಾಗೂ ಹಿಂಭಾಗದ ಸೊಂಟದ ಸ್ನಾಯುಗಳು ಬಲಶಾಲಿಯಾಗುತ್ತವೆ. ಅಲ್ಲದೆ ನೀರಿನ ಚಲನಶೀಲತೆಯಿಂದ ಸಂದುಗಳು ಹಾಗೂ ಅಸ್ತಿಬಂಧಗಳಲ್ಲಿನ ಒತ್ತಡ ನಿವಾರಣೆಯಾಗುತ್ತದೆ. ಆದಾಗ್ಯೂ ತನಗೆ ಯಾವ ರೀತಿಯ ವ್ಯಾಯಾಮ ಸೂಕ್ತ ಎಂಬುದನ್ನು ತಾಯಿಯಾಗಲಿರುವವಳು ವೈದ್ಯರಿಂದ ಸಲಹೆ ಪಡೆಯುವುದು ಸರಿಯಾದ ಕ್ರಮವಾಗಿದೆ. ಗರ್ಭಾವಸ್ಥೆಯ ದ್ವಿತೀಯಾರ್ಧದ 12 ವಾರಗಳ ಕಾಲ ವಾರಕ್ಕೆ ಮೂರು ಬಾರಿ ವ್ಯಾಯಾಮ ಮಾಡುವ ತಾಯಂದಿರಿಗೆ ಬೆನ್ನು ನೋವಿನ ಬಾಧೆ ಕಡಿಮೆ ಎಂದು ಸಂಶೋಧನಗಳ ಮೂಲಕ ಸಾಬೀತಾಗಿದೆ.

Most Read: ಗರ್ಭಿಣಿಯಾಗುವ ಸಾಧ್ಯತೆಯನ್ನು ಹೆಚ್ಚಿಸುವ ಅವಶ್ಯಕ ತೈಲಗಳು

ಕೂರುವ, ನಿಲ್ಲುವ ಹಾಗೂ ಮಲಗುವ ಭಂಗಿಗಳು

ಕೂರುವ, ನಿಲ್ಲುವ ಹಾಗೂ ಮಲಗುವ ಭಂಗಿಗಳು

ದಿನನಿತ್ಯದ ಜೀವನದಲ್ಲಿ ಅನುಸರಿಸುವ ದೈಹಿಕ ಭಂಗಿಗಳ ಬಗ್ಗೆ ಜಾಗರೂಕರಾಗಿದ್ದಲ್ಲಿ ಬೆನ್ನು ನೋವಿನಿಂದ ದೂರವಿರಬಹುದು. ನಿಂತಾಗ ಆದಷ್ಟೂ ನೇರವಾಗಿ ನಿಲ್ಲಬೇಕು. ಹೊಟ್ಟೆಯು ಬೆಳೆದಂತೆ ಗರ್ಭಿಣಿಯರ ಭುಜಗಳು ಇಳಿ ಬೀಳಲಾರಂಭಿಸುತ್ತವೆ. ಇದರಿಂದ ಬೆನ್ನುಹುರಿಯ ಮೇಲೆ ಒತ್ತಡ ಜಾಸ್ತಿಯಾಗಬಹುದು. ಹೀಗಾಗಿ ನಿಲ್ಲುವ ಸಂದರ್ಭ ಬಂದಾಗ ಸತತವಾಗಿ ಜಾಸ್ತಿ ಹೊತ್ತು ನಿಂತೇ ಇರಕೂಡದು. ಆಗಾಗ ಕುರ್ಚಿಯ ಮೇಲೆ ಕುಳಿತು ಭಂಗಿಯನ್ನು ಬದಲಾಯಿಸಿ ವಿರಾಮ ಪಡೆಯಬೇಕು. ಹಾಗೆಯೇ ತನಗೆ ಅನುಕೂಲವಾಗುವ ಮಗ್ಗುಲಿಗೆ ಮಲಗಿ ಆರಾಮ ಪಡೆಯಬೇಕು.

ದೈಹಿಕ ಚಲನೆ

ದೈಹಿಕ ಚಲನೆ

ಏನಾದರೂ ಎತ್ತಿಕೊಳ್ಳಬೇಕಿದ್ದರೆ ಮೊಣಕಾಲು ಊರಿ ಬಾಗಬೇಕು. ವಸ್ತುಗಳು ಭಾರವಾಗಿದ್ದಲ್ಲಿ ಒಬ್ಬರೇ ಎತ್ತುವ ಸಾಹಸ ಮಾಡದೆ ಬೇರೆಯವರಿಂದ ಸಹಾಯ ಪಡೆಯಬೇಕು. ಯಾವುದೇ ಕಾರಣಕ್ಕೂ ಬೆನ್ನಿನ ಮೇಲೆ ಜಾಸ್ತಿ ಒತ್ತಡ ಬೀಳದಂತೆ ಜಾಗೃತಿ ವಹಿಸಬೇಕು. ಬೆಳಗ್ಗೆ ಹಾಸಿಗೆಯಿಂದ ಎದ್ದೇಳುವಾಗ ಮೊದಲು ಮೊಣಕಾಲು ಹಾಗೂ ಚಪ್ಪೆಗಳನ್ನು ಒಂದು ಬದಿಗೆ ತಿರುಗಿಸಿ ಭುಜದ ಶಕ್ತಿಯಿಂದ ಮೇಲೆ ಏಳಬೇಕು. ಈ ಸಂದರ್ಭದಲ್ಲಿ ಮೊಣಕಾಲು ದೇಹಕ್ಕೆ ಸಪೋರ್ಟ್ ನೀಡುವಂತೆ ಮೇಲೇಳಬೇಕು.

ಸರಿಯಾದ ಚಪ್ಪಲಿ ಧರಿಸಿ

ಸರಿಯಾದ ಚಪ್ಪಲಿ ಧರಿಸಿ

ಗರ್ಭಿಣಿಯಾಗಿರುವಾಗ ಎತ್ತರ ಹಿಮ್ಮಡಿಯ (ಹೈಹೀಲ್ಡ್) ಚಪ್ಪಲಿಗಳನ್ನು ಧರಿಸಬಾರದು. ಚಪ್ಪಟೆ ಹಿಮ್ಮಡಿಯ ಚಪ್ಪಲಿಗಳನ್ನು ಧರಿಸಿ ಆದಷ್ಟೂ ಕಾಲಿನ ಮೇಲೆ ಒತ್ತಡ ಬೀಳದಂತೆ ಜಾಗೃತಿ ವಹಿಸಬೇಕು.

ಬೆನ್ನೆಲುಬು ಮಸಾಜ್

ಬೆನ್ನೆಲುಬು ಮಸಾಜ್

ಚಿರೊಪ್ರಾಕ್ಟಿಕ್ ಕೇರ್ (Chiropractic care) ಎಂದು ಕರೆಯಲಾಗುವ ಬೆನ್ನೆಲುಬು ಮಸಾಜ್ ತೆಗೆದುಕೊಳ್ಳುವುದರಿಂದ ಬೆನ್ನುಹುರಿಯನ್ನು ಸರಿಯಾದ ಸ್ಥಿತಿಯಲ್ಲಿಡಬಹುದು ಹಾಗೂ ಇದರಿಂದ ಗರ್ಭಾವಸ್ಥೆಯ ಬೆನ್ನು ನೋವಿಗೆ ಸಾಕಷ್ಟು ಉಪಶಮನ ಪಡೆಯಬಹುದು. ಹೊಟ್ಟೆಯಲ್ಲಿ ಮಗು ದೊಡ್ಡದಾದಂತೆ ಒಟ್ಟಾರೆ ದೇಹದ ತೂಕ ಹೆಚ್ಚಾಗುತ್ತದೆ. ಇದರಿಂದ ದೇಹದ ನಿಲುವಿನ ಭಂಗಿಯಲ್ಲಿ ಮಾರ್ಪಾಟಾಗಿ ಬೆನ್ನುಹುರಿಯ ಮೇಲೂ ಪರಿಣಾಮವಾಗುತ್ತದೆ. ಆದರೆ ಬೆನ್ನೆಲುಬು ಮಸಾಜ್‌ನಿಂದ ಬೆನ್ನುಹುರಿಯನ್ನು ಸುಸ್ಥಿತಿಯಲ್ಲಿಟ್ಟು ಬೆನ್ನು ನೋವು ಬಾರದಂತೆ ತಡೆಯಬಹುದು.

ಹೆರಿಗೆ ಬೆಲ್ಟ್

ಹೆರಿಗೆ ಬೆಲ್ಟ್

ಹೆರಿಗೆ ಬೆಲ್ಟ್ (ಮ್ಯಾಟರ್ನಿಟಿ ಬೆಲ್ಟ್) ಧರಿಸುವುದರಿಂದ ಕಿಬ್ಬೊಟ್ಟೆ ಹಾಗೂ ಬೆನ್ನಿನ ಕೆಳಭಾಗಕ್ಕೆ ಬೇಕಾದ ಹೆಚ್ಚುವರಿ ಆಧಾರವನ್ನು ನೀಡಲು ಸಹಾಯವಾಗುತ್ತದೆ. ಹೆಚ್ಚುವರಿ ತೂಕದಿಂದ ಬರಬಹುದಾದ ಬೆನ್ನುನೋವನ್ನು ಹೆರಿಗೆ ಬೆಲ್ಟ್ ಕಡಿಮೆ ಮಾಡುತ್ತದೆ. ದಿನದಲ್ಲಿ ಕೆಲ ಹೊತ್ತು ಮಾತ್ರ ಹೆರಿಗೆ ಬೆಲ್ಟ್ ಧರಿಸಬೇಕು. ಆದಾಗ್ಯೂ ನಿಮಗೆ ಹಾಗೂ ನಿಮ್ಮ ಮಗುವಿನ ಆರೋಗ್ಯಕ್ಕೆ ಬೆಲ್ಟ್ ಧರಿಸುವುದು ಸೂಕ್ತವೆ ಎಂಬ ಬಗ್ಗೆ ವೈದ್ಯರ ಸಲಹೆ ಪಡೆದೇ ಮುಂದುವರೆಯಿರಿ.

English summary

Tips-to-prevent-backaches-during-pregnancy

Back pain during pregnancy can be due to a number of factors. Women who had prior back pain before pregnancy or are overweight face higher risks of back pain. These are the other more common causes of back pain or discomfort during pregnancy.
Story first published: Friday, December 21, 2018, 13:11 [IST]
X
Desktop Bottom Promotion