For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಆದಷ್ಟು ಇಂತಹ 10 ಚಟುವಟಿಕೆಗಳಿಂದ ದೂರವಿರಿ

|

ಗರ್ಭಾವಸ್ಥೆ ಎಂಬುದು ಹೆಣ್ಣಿನ ಬಾಳಿನಲ್ಲಿ ಅತ್ಯಾನಂದವನ್ನುಂಟು ಮಾಡುವ ಸಮಯವಾಗಿದೆ. ಈ ಸಮಯದಲ್ಲಿ ತನ್ನ ಆರೋಗ್ಯ ಮಾತ್ರವಲ್ಲದೆ ಗರ್ಭದೊಳಗಿರುವ ಕೂಸಿನ ಕಾಳಜಿಯನ್ನು ಆಕೆ ಮಾಡಬೇಕು. ನವಮಾಸವೂ ಆ ಮಗುವನ್ನು ಗರ್ಭದಲ್ಲಿ ಹೊತ್ತು ತನ್ನ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಬೇಕಾಗುತ್ತದೆ. ಕೆಲವೊಂದು ನಿಯಮಗಳನ್ನು ಚಾಚೂ ತಪ್ಪದೆ ಅನುಸರಿಸಬೇಕಾಗುತ್ತದೆ. ಏನು ತಿನ್ನಬೇಕು ಏನು ತಿನ್ನಬಾರದು ಎಂಬುದಾಗಿ ಪಟ್ಟಿ ಮಾಡಿ ಆ ರೀತಿಯೇ ಸೇವಿಸಬೇಕು. ನಿಮಗಿಷ್ಟವಿದ್ದರೂ ಅದು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದಾದ್ದರಿಂದ ಕೆಲವು ಆಹಾರಗಳನ್ನು ಕೆಲವೊಂದು ಚಟುವಟಿಕೆಗಳನ್ನು ನೀವು ಮಾಡಲೇಬಾರದು. ವೈದ್ಯರ ಸಲಹೆಯನ್ನು ಪ್ರತಿಯೊಂದು ಹೆಜ್ಜೆಹೆಜ್ಜೆಯಲ್ಲೂ ಪಡೆದುಕೊಳ್ಳುತ್ತಿರಬೇಕಾಗುತ್ತದೆ.

ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ನಿಮಗೆ ತಿಳಿಯದಂತೆ ನಿಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತಿರುತ್ತವೆ. ಈ ಸಮಯದಲ್ಲಿ ಮನೆಯ ಇತರ ಸದಸ್ಯರುಗಳಿಗಿಂತ ಹೆಚ್ಚಾಗಿ ನೀವು ನಿಮ್ಮ ಗರ್ಭದೊಳಗಿರುವ ಕಂದನಿಗೆ ಹೆಚ್ಚಿನ ಅಸ್ಥೆ ಕಾಳಜಿಯನ್ನು ನೀಡಬೇಕಾಗುತ್ತದೆ. ನಿಮ್ಮ ಆಹಾರದ ಕಡೆಗೆ ಗಮನ ಹರಿಸುವುದರ ಜೊತೆಗೆ ಮದ್ಯಪಾನ, ಧೂಮಪಾನ , ಹೆಚ್ಚಿನ ಕೆಫೀನ್ ಅಂಶಗಳ ಸೇವನೆಯನ್ನು ನೀವು ತ್ಯಜಿಸಬೇಕಾಗುತ್ತದೆ. ಇದರೊಂದಿಗೆ ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ನೀವು ಮಾಡುತ್ತಿದ್ದಲ್ಲಿ ಅದಕ್ಕೆಲ್ಲಾ ಪೂರ್ಣವಿರಾಮ ಇಡುವ ಸಮಯ ಇದಾಗಿದೆ. ಇಂದಿನ ಲೇಖನದಲ್ಲಿ ನಿಮ್ಮ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕಾಗಿ ನೀವು ಏನು ಮಾಡಬೇಕು ಏನು ಮಾಡಬಾರದು ಎಂಬುದನ್ನು ತಿಳಿಸುತ್ತಿದ್ದೇವೆ.

*ವಿಹಾರ ಧಾಮದಲ್ಲಿ ಸಾಹಸ ಕಾರ್ಯಗಳಿದ್ದರೆ ಅದನ್ನು ಮಾಡಬೇಡಿ
* ಕ್ರೀಡೆಗಳಲ್ಲಿ ಭಾಗವಹಿಸಬೇಡಿ
* ಸೈಕಲ್ ಸವಾರಿ ಬೇಡ
* ಭಾರ ಎತ್ತುವ ವ್ಯಾಯಾಮ ಇಲ್ಲವೇ ನಿಮ್ಮ ಗರ್ಭಕ್ಕೆ ಪರಿಣಾಮವನ್ನುಂಟು ಮಾಡುವ ವ್ಯಾಯಾಮಗಳನ್ನು ಮಾಡದಿರಿ
* ಬಿಸಿ ನೀರಿನ ಸ್ನಾನ ಬೇಡ
* ಓಡುವುದು ಬೇಡ
*ಕಷ್ಟದ ಭಂಗಿಗಳಿರುವ ವ್ಯಾಯಾಮಗಳನ್ನು ಮಾಡಬೇಡಿ
*ನಿಮ್ಮ ದೇಹಕ್ಕೆ ಕಷ್ಟವಾಗಿರುವ ಯಾವುದೇ ಚಟುವಟಿಕೆಗಳನ್ನು ನಡೆಸದಿರಿ
*ಕುದುರೆ ಸವಾರಿ ಬೇಡ
*ಹೈಕಿಂಗ್ ಮಾಡುವುದು ಬೇಡ

1.ಸಾಹಸ ಕ್ರಿಯೆಗಳಲ್ಲಿ ಭಾಗವಹಿಸುವುದು

1.ಸಾಹಸ ಕ್ರಿಯೆಗಳಲ್ಲಿ ಭಾಗವಹಿಸುವುದು

ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿ ಸಾಹಸ ಕ್ರೀಡೆಗಳು, ಏರುವುದು, ಹತ್ತುವುದು, ನೀರಾಟ ಮೊದಲಾದ ಚಟುವಟಿಕೆಗಳಿರುತ್ತವೆ. ನಿಮ್ಮ ಗರ್ಭಾವಸ್ಥೆಯಲ್ಲಿ ಇಂತಹ ಕ್ರಿಯೆಗಳನ್ನು ನೀವು ಮಾಡಲೇಬಾರದು. ರೋಲರ್ ಕೋಸ್ಟರ್ ಸವಾರಿ, ನೀರಿನಾಟ ಮತ್ತು ಒಮ್ಮೆಲೆ ನಿಲ್ಲುವಿಕೆಗಳನ್ನು ಒಳಗೊಂಡಿರುವ ಚಟುವಟಿಕೆಗಳನ್ನು ಮಾಡಬೇಡಿ. ಇದರಿಂದ ಗರ್ಭಪಾತ ಅಥವಾ ನಿಮ್ಮ ಮಗುವಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

2.ಕ್ರೀಡೆಗಳಲ್ಲಿ ಭಾಗವಹಿಸದಿರಿ

2.ಕ್ರೀಡೆಗಳಲ್ಲಿ ಭಾಗವಹಿಸದಿರಿ

ಎಲ್ಲಾ ರೀತಿಯ ಕ್ರೀಡೆಗಳು ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚು ಹಾನಿಕಾರಕವಾಗಿರುತ್ತವೆ. ಕ್ರೀಡೆಗಳಲ್ಲಿ ಭಾಗವಹಿಸದಿರಿ. ಫುಟ್‌ಬಾಲ್, ಕ್ರಿಕೆಟ್ ಮತ್ತು ವಾಲಿಬಾಲ್‌ನಂತಹ ಕ್ರೀಡೆಗಳು ಗರ್ಭಾವಸ್ಥೆಯಲ್ಲಿ ಆಡಲೇಬಾರದು.

3.ಸೈಕಲ್ ಸವಾರಿ ಮಾಡಬೇಡಿ

3.ಸೈಕಲ್ ಸವಾರಿ ಮಾಡಬೇಡಿ

ಸೈಕಲ್ ಸವಾರಿ ಅತ್ಯದ್ಭುತ ವ್ಯಾಯಾಮವಾಗಿದೆ. ಮೂರನೇ ತ್ರೈಮಾಸಿಕದಲ್ಲಿ ನಿಮಗೆ ಸೈಕಲ್ ಸವಾರಿಯ ಹುಚ್ಚಿದ್ದರೂ ಈ ಕ್ರಿಯೆಗೆ ಇಳಿಯಬೇಡಿ. ಸೈಕಲ್ ಸವಾರಿ ಮಾಡುವಾಗ ಸೈಕಲ್ ನಿರ್ವಹಣೆಯನ್ನು ಮಾಡುವುದು ಗರ್ಭಕ್ಕೆ ದುಷ್ಪರಿಣಾಮವನ್ನುಂಟು ಮಾಡಬಹುದು. ಅದಲ್ಲದೆ ನೀವು ನಿಯಂತ್ರಣ ತಪ್ಪಿ ಕೆಳಕ್ಕೆ ಬೀಳುವ ಸಾಧ್ಯತೆ ಕೂಡ ಇರುತ್ತದೆ.

4.ಭಾರ ಎತ್ತುವ ವ್ಯಾಯಾಮಗಳನ್ನು ಮಾಡಬೇಡಿ

4.ಭಾರ ಎತ್ತುವ ವ್ಯಾಯಾಮಗಳನ್ನು ಮಾಡಬೇಡಿ

ಗರ್ಭಾವಸ್ಥೆಯಲ್ಲಿ ಸಕ್ರಿಯರಾಗಿರುವುದು ಒಳ್ಳೆಯ ವಿಷಯವೇ. ಆದರೆ ಈ ಸಮಯದಲ್ಲಿ ಯಾವುದೇ ಭಾರ ಎತ್ತುವ ವ್ಯಾಯಾಮಗಳನ್ನು ಮಾಡಬೇಡಿ. ಹೊಟ್ಟೆಯ ಮೇಲೆ ಮಲಗಿ ಮಾಡುವ ವ್ಯಾಯಾಮಗಳನ್ನು ಅನುಸರಿಸದಿರಿ. ಹೆಚ್ಚು ನೋವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ.

5.ಬಿಸಿ ನೀರಿನ ಸ್ನಾನ ಮಾಡದಿರಿ

5.ಬಿಸಿ ನೀರಿನ ಸ್ನಾನ ಮಾಡದಿರಿ

ಹಾಟ್ ಟಬ್‌ನಲ್ಲಿ ಸ್ನಾನ ಮಾಡುವುದು ಅನಾರೋಗ್ಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಮಗುವಿನ ಆರೋಗ್ಯದ ಮೇಲೆ ಇದು ಹಾನಿಯನ್ನುಂಟು ಮಾಡಬಹುದು. ಸೌನಾ ಅಥವಾ ಹಾಟ್ ಬಾತ್ ನಿಮ್ಮ ಆರೋಗ್ಯದ ಮೇಲೆ ಹಾನಿಯನ್ನು ಉಂಟು ಮಾಡಿ ಮಗುವಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಉಗುರು ಬೆಚ್ಚಗಿನ ನೀರಿನ ಸ್ನಾನ ಉತ್ತಮ

6.ಜಾಗಿಂಗ್ ಬೇಡ

6.ಜಾಗಿಂಗ್ ಬೇಡ

ಎರಡನೆಯ ಮತ್ತು ಮೂರನೆಯ ಮಾಸಿಕದಲ್ಲಿ ಓಡುವುದು, ನೆಗೆಯುವುದು ಮೊದಲಾದ ಕ್ರಿಯೆಗಳನ್ನು ಮಾಡಬೇಡಿ. ಓಟದಲ್ಲಿ ಹೆಚ್ಚಿನ ನಿಯಂತ್ರಣ ಬೇಕಾಗಿರುತ್ತದೆ ಈ ಸಮಯದಲ್ಲಿ ನಮ್ಮ ದೇಹ ಒಗ್ಗುವುದಿಲ್ಲ. ಆದ್ದರಿಂದ ಓಡುವುದನ್ನು ಮಾಡದಿರಿ. ಇದರಿಂದ ಗರ್ಭಪಾವಾಗುವ ಸಾಧ್ಯತೆ ಇರುತ್ತದೆ.

7.ಯೋಗದಲ್ಲಿ ಕಷ್ಟಭಂಗಿಗಳನ್ನು ಅಭ್ಯಸಿಸಬೇಡಿ

7.ಯೋಗದಲ್ಲಿ ಕಷ್ಟಭಂಗಿಗಳನ್ನು ಅಭ್ಯಸಿಸಬೇಡಿ

ನಿಮ್ಮನ್ನು ಹೆಚ್ಚು ಶಾಂತಗೊಳಿಸುವ ಅಭ್ಯಾಸವಾಗಿದೆ ಯೋಗ. ನಿಮ್ಮನ್ನು ಇದು ಶಾಂತಗೊಳಿಸಿ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಗರ್ಭಾವಸ್ಥೆಯಲ್ಲಿ ನೀವು ಯೋಗವನ್ನು ಅಭ್ಯಸಿಸಬಹುದು. ಆದರೆ ಕಷ್ಟವಾಗಿರುವ ಭಂಗಿಗಳನ್ನು ಮಾಡದಿರಿ.

 8.ಮನೆಯ ಸ್ವಚ್ಛತೆ ಮಾಡದಿರಿ

8.ಮನೆಯ ಸ್ವಚ್ಛತೆ ಮಾಡದಿರಿ

ಗರ್ಭಾವಸ್ಥೆಯಲ್ಲಿ ಎಲ್ಲಾ ಕೆಲಸಗಳನ್ನು ಮಾಡುವುದು ಸರಳ ಹೆರಿಗೆಗೆ ಅನುಕೂಲವಾಗಿರುತ್ತದೆ. ಆದರೆ ಮನೆಗೆಲಸ ಮಾಡುವಾಗ ಎತ್ತುವುದು, ಎಳೆಯುವುದು ಮೊದಲಾದ ಕೆಲಸಗಳನ್ನು ಮಾಡದಿರಿ. ಮನೆಯ ಇತರ ಸದಸ್ಯರು ಈ ಕೆಲಸಗಳನ್ನು ಮಾಡುತ್ತಾರೆ. ನೀವು ಆದಷ್ಟು ನಿಮ್ಮ ಆರೋಗ್ಯಕ್ಕೆ ಹೆಚ್ಚು ಗಮನ ನೀಡಬೇಕು. ಅದರಲ್ಲೂ ಮನೆಯ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಅತಿ ಹೆಚ್ಚಾಗಿ ಬಗ್ಗುವಂತಹ ಕೆಲಸಗಳನ್ನು ಮಾಡಕೂಡದು. ಏಕೆಂದರೆ ಈ ಪರಿ ಬಗ್ಗುವುದರಿಂದ sciatic nerve ಅಥವಾ ಬೆನ್ನುಮೂಳೆಯ ಕೆಳಭಾಗದಿಂದ ಕಾಲಿಗೆ ಧಾವಿಸುವ ನರದ ಮೇಲೆ ಹೆಚ್ಚಿನ ಒತ್ತಡ ಬಿದ್ದು ಈ ನರವನ್ನು ಘಾಸಿಗೊಳಿಸಬಹುದು.

9.ಕುದುರೆ ಸವಾರಿ ಮಾಡಬೇಡಿ

9.ಕುದುರೆ ಸವಾರಿ ಮಾಡಬೇಡಿ

ಕೆಲವರಿಗೆ ಕುದುರೆ ಸವಾರಿ ಮಾಡುವ ಅಭ್ಯಾಸವಿರುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಕುದುರೆ ಸವಾರಿ ಮಾಡುವುದು ನಿಮ್ಮ ಗರ್ಭಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆ ಹೆಚ್ಚು.

10. ಹೈಕಿಂಗ್ ಮಾಡಬೇಡಿ

10. ಹೈಕಿಂಗ್ ಮಾಡಬೇಡಿ

ನಮ್ಮ ದೇಹಕ್ಕೆ ಉತ್ತಮ ಚಟುವಕೆಯನ್ನು ನೀಡುವ ಕ್ರಿಯೆಯಾಗಿದೆ ಹೈಕಿಂಗ್. ಆದರೆ ಹೈಕಿಂಗ್ ಸಮಯದಲ್ಲಿ ನೀವು ಬೀಳುವ, ಏಟು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ನಿಮ್ಮ ಮಗುವಿಗೆ ಹಾನಿಯುಂಟಾಗುವುದು ಹೆಚ್ಚು.

11.ಗುಡಿಸುವುದು, ಬಟ್ಟೆ ಒಣಗಿಸುವುದು ಇವುಗಳನ್ನೆಲ್ಲಾ ಮಾಡಬೇಡಿ

11.ಗುಡಿಸುವುದು, ಬಟ್ಟೆ ಒಣಗಿಸುವುದು ಇವುಗಳನ್ನೆಲ್ಲಾ ಮಾಡಬೇಡಿ

ಗುಡಿಸುವುದು, ಭಾರವಾದ ವಸ್ತುಗಳನ್ನು ಮೇಲಿಡುವುದು, ಬಟ್ಟೆ ಒಣಗಿಸುವುದು ಗರ್ಭಾವಸ್ಥೆಯಲ್ಲಿ ದೇಹದ ಪ್ರಮುಖ ಗಂಟುಗಳು ಮತ್ತು ಮಡಚುವ ಮೂಳೆಗಳ ಭಾಗಗಳು ಕೊಂಚ ಮೆತ್ತಗಾಗುತ್ತವೆ. ಆದ್ದರಿಂದ ಇತರ ಸಮಯದಲ್ಲಿ ಸುಲಭವಾಗುತ್ತಿದ್ದ ಕೆಲಸಗಳು ಈಗ ಕಷ್ಟವಾಗುತ್ತವೆ. ಆದ್ದರಿಂದ ಈ ಕೆಲಸಗಳಿಗೆಲ್ಲಾ ಮನೆಯವರ ಅಥವಾ ಕೆಲಸದವರ ಸಹಾಯ ಪಡೆಯುವುದು ಒಳ್ಳೆಯದು. ಗುಡಿಸುವುದು, ಭಾರವಾದ ವಸ್ತುಗಳನ್ನು ಮೇಲಿಡುವುದು, ಬಟ್ಟೆ ಒಣಗಿಸುವುದು ಮೊದಲಾದ ಕೆಲಸಗಳಿಗೆ ಸಹಾಯ ಪಡೆದುಕೊಳ್ಳುವುದೇ ಜಾಣತನವಾಗಿದೆ.

12. ಬೆಕ್ಕಿನ ಸಂಗ ಬಿಟ್ಟು ಬಿಡಿ!

12. ಬೆಕ್ಕಿನ ಸಂಗ ಬಿಟ್ಟು ಬಿಡಿ!

ಒಂದು ವೇಳೆ ನಿಮ್ಮ ಮನೆಯಲ್ಲಿ ಸಾಕಿರುವ ಬೆಕ್ಕು ಇದ್ದರೆ ಬೆಕ್ಕಿನ ಸಂಗ ಈ ಸಮಯದಲ್ಲಿ ಸಲ್ಲದು. ವಿಶೇಷವಾಗಿ ಬೆಕ್ಕಿನ ಉಚ್ಛಿಷ್ಟವನ್ನು ಸ್ವಚ್ಛಗೊಳಿಸುವುದಿರಲಿ, ಬಳಿಗೂ ಸುಳಿಯಕೂಡದು. ಏಕೆಂದರೆ ಇದರಲ್ಲಿ ಕೆಲವು ಪರಾವಲಂಬಿ ಕ್ರಿಮಿಗಳಿದ್ದು ಗರ್ಭಿಣಿಗೆ ಮಾರಕವಾಗುತ್ತವೆ. ಅಷ್ಟೇ ಅಲ್ಲ, ಬೆಕ್ಕಿನ ಕೂದಲು ಯಾವುದೇ ಕಾರಣಕ್ಕೂ ಆಹಾರ ಅಥವಾ ನೀರಿನ ಮೂಲಕ ದೇಹ ಪ್ರವೇಶಿಸಬಾರದು. ಇದು ಭಾರೀ ಅಲರ್ಜಿಕಾರಕವಾಗಿದ್ದು ಗರ್ಭಿಣಿಯ ಆರೋಗ್ಯವನ್ನು ಕೆಡಿಸಬಹುದು.

English summary

Things That You Must Not Do When Pregnant

Pregnancy is that time of a woman's life when the unborn baby becomes the centre of all concern. You watch what you eat, how you move, what you read and even your emotions are closely monitored. It is all for a good reason. The tiny life that is taking root within you can be affected by every little thing you do or sometimes, don't do. Your life changes dramatically once you get pregnant and this change may not feel very pleasant. Your friends, family and your doctor will advise you about the things you must eat and drink to make sure that your baby has the best chance to flourish in your womb.
X
Desktop Bottom Promotion