Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಗರ್ಭಿಣಿಯರು ಅಪ್ಪಿತಪ್ಪಿಯೂ ಇಂತಹ ಮೂರು ಹಣ್ಣುಗಳನ್ನು ತಿನ್ನಲೇಬಾರದು!
ಹುಟ್ಟುವ ಮಗು ದಂಪತಿಗಳ ಪ್ರೀತಿಯ ಸಂಕೇತವಾಗಿರುತ್ತದೆ. ಗರ್ಭದಿಂದ ಹೊರ ಬಂದು ಜಗತ್ತನ್ನು ಕಾಣುವಾಗ ಅದರ ಆರೋಗ್ಯವು ಉತ್ತಮವಾಗಿರಬೇಕು ಎಂದು ಪ್ರತಿಯೊಬ್ಬ ತಾಯಿಯು ಆಶಿಸುತ್ತಾಳೆ. ಗರ್ಭಾವಸ್ಥೆಯಲ್ಲಿ ತೋರಿದ ನಿರ್ಲಕ್ಷ್ಯ ಅಥವಾ ಅನುಚಿತ ರೀತಿಯ ಆಹಾರವನ್ನು ಸೇವಿಸುವುದರಿಂದ ಹುಟ್ಟುವ ಮಗು ಅನಾರೋಗ್ಯಕ್ಕೆ ಒಳಗಾಗಬಹುದು. ಅಲ್ಲದೆ ಕೆಲವೊಮ್ಮೆ ನಮಗೆ ತಿಳಿಯದಂತೆ ನಾವು ಸೇವಿಸಿರುವ ಆಹಾರದಲ್ಲಿ ದೋಷಗಳು ಉಂಟಾಗಬಹುದು. ಅದು ಮಗುವಿನ ಬೆಳವಣಿಗೆಯಲ್ಲಿ ಅಥವಾ ಆರೋಗ್ಯದಲ್ಲಿ ತೊಂದರೆಯನ್ನುಂಟುಮಾಡಬಹುದು.
ಗರ್ಭಾವಸ್ಥೆಯಲ್ಲಿ ಇರುವಾಗ ಮಹಿಳೆಯರು ಕಬ್ಬಿಣಾಂಶ, ಕ್ಯಾಲ್ಸಿಯಂ, ಪೋಷಕಾಂಶ, ವಿಟಮಿನ್‍ಗಳು, ಸಮೃದ್ಧವಾದ ನಾರಿನ ಅಂಶ, ಹೆಚ್ಚು ನೀರಿರುವ ಪದಾರ್ಥ ಹಾಗೂ ಹಸಿ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಬೇಕು. ಆಗ ತಾಯಿಯ ಮಡಿಲಲ್ಲಿ ಬೆಳೆಯುವ ಮಗುವಿಗೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಜೊತೆಗೆ ಆರೋಗ್ಯಕರ ಜನನ ಹಾಗೂ ಭವಿಷ್ಯವನ್ನು ಮಗು ಪಡೆದುಕೊಳ್ಳುವುದು. ಅದೇ ಬಾಯಿರುಚಿ ಅಥವಾ ಹವ್ಯಾಸದ ಮೇರೆಗೆ ಅನುಚಿತ ಆಹಾರವನ್ನು ಸೇವಿಸಿದರೆ ಮಗುವಿನ ಆರೋಗ್ಯದ ಮೇಲೆ ಪ್ರಭಾವ ಬೀರುವುದು.
ಗರ್ಭಿಣಿಯರ ಆಹಾರದಲ್ಲಿ ಯಾವುದೇ ನಿರ್ದಿಷ್ಟ ಮಿತಿ ಇರುವುದಿಲ್ಲ. ದೈಹಿಕ ಬದಲಾವಣೆಗಳು ಹಾಗೂ ಗರ್ಭದಲ್ಲಿ ದಿನದಿಂದ ದಿನಕ್ಕೆ ವಿಕಾಸ ಕಾಣುವ ಮಗುವಿನಿಂದಾಗಿ ತಾಯಿಗೆ ಹಸಿವಿನ ಸಂವೇದನೆ ಹೆಚ್ಚುವುದು. ಈ ನಿಟ್ಟಿನಲ್ಲಿ ಮನಸ್ಸು ಬಯಸಿದ ತಿಂಡಿ ಹಾಗೂ ಆಹಾರಗಳನ್ನು ಸೇವಿಸುವುದು ಸಹಜ. ಆದರೆ ಹೀಗೆ ಸೇವಿಸುವ ಆಹಾರದಲ್ಲಿ ಪ್ರಮುಖವಾಗಿ ಮೂರು ಬಗೆಯ ಹಣ್ಣುಗಳನ್ನು ತಿನ್ನಬಾರದು. ಅವು ಮಗುವಿನ ಆರೋಗ್ಯದ ಮೇಲೆ ಗಣನೀಯವಾದ ಪ್ರಭಾವ ಬೀರುತ್ತವೆ.
ಮಗುವಿನ ಆರೋಗ್ಯವನ್ನು ಗರ್ಭದಲ್ಲಿರುವಾಗಲೇ ಹಾಳುಮಾಡುವಂತಹ ಆ ಮೂರು ಹಣ್ಣುಗಳು ಯಾವವು? ಅವುಗಳ ಪ್ರಭಾವ ಏನು? ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಗರ್ಭಿಣಿಯರು ಏಕೆ ಆ ಹಣ್ಣುಗಳಿಂದ ದೂರವಿರಬೇಕು? ಎನ್ನುವಂತಹ ಅನೇಕ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿದ್ದರೆ ಸೂಕ್ತ ಮಾಹಿತಿ ಪಡೆಯಲು ಮುಂದಿನ ಭಾಗವನ್ನು ಓದಿ...
ಹೆಚ್ಚು ಹಾಲನ್ನು ಕುಡಿಯಿರಿ
ಎಲುಬುಗಳು ಗಟ್ಟಿಯಾಗಿರಲು ಹಾಲು ಅತ್ಯಮೂಲ್ಯ. ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಮೂಳೆ ಬೆಳವಣಿಗೆ ಉತ್ತಮವಾಗಿ ಆಗಬೇಕು ಎಂದರೆ ಕ್ಯಾಲ್ಸಿಯಂ ಭರಿತ ಆಹಾರವನ್ನು ಸೇವಿಸಬೇಕು. ಹಾಗಾಗಿ ಎರಡುಪಟ್ಟು ಹೆಚ್ಚು ಕಾಲ್ಸಿಯಂ ಅಗತ್ಯವಿರುತ್ತದೆ. ಹೆಚ್ಚೆಚ್ಚು ಹಾಲು ಸೇವಿಸುವುದರಿಂದ ಅಗತ್ಯವಾದ ಕ್ಯಾಲ್ಸಿಯಂ ಮಗುವಿಗೆ ದೊರೆಯುವುದು. ಹಾಲಿನ ಉತ್ಪನ್ನಗಳನ್ನು ಸಹ ಸೇವಿಸಬಹುದು.
Most Read: ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಆದಷ್ಟು ಬೀಟ್‌ರೂಟ್ ಸೇವಿಸಬೇಕು
ಹಸಿ ತರಕಾರಿಗಳನ್ನು ಸೇವಿಸಿ
ಹಸಿರು ತರಕಾರಿಗಳು ಹಾಗೂ ಸೊಪ್ಪುಗಳು ಜೀವಸತ್ವ, ಖನಿಜಗಳು ಮತ್ತು ನಾರಿನಂಶಗಳನ್ನು ಸಮೃದ್ಧವಾಗಿ ಪಡೆದುಕೊಂಡಿವೆ. ಕರುಳಿನ ಚಲನೆಗಳನ್ನು ನಿಯಮಿತವಾಗಿ ನಿರ್ವಹಿಸಲು ನಾರಿನಂಶ ಅತ್ಯಗತ್ಯ. ಕರುಳಿನ ನೈಸರ್ಗಿಕ ಕ್ರಿಯೆಗಳು ಬೆಳೆಯುತ್ತಿರುವ ಮಗುವಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ತರಕಾರಿ ಸೇವನೆಯಿಂದ ಬಲಬದ್ಧತೆಯಂತಹ ಸಮಸ್ಯೆಗಳನ್ನು ನೀವು ದೂರ ಇಡಬಹುದು.
ಕೆಲವು ಹಣ್ಣುಗಳನ್ನು ದೂರ ಇಡಬೇಕು
ಕೆಲವು ಹಣ್ಣುಗಳು ಅಧಿಕ ಪ್ರಮಾಣದ ವಿಟಮಿನ್, ಖನಿಜ ಹಾಗೂ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಅವುಗಳಿಂದ ದೊರೆಯುವ ಪೋಷಕಾಂಶಗಳು ಮಗುವಿನ ಆರೋಗ್ಯದ ಮೇಲೆ ಋಣಾತ್ಮಕ ಪ್ರಭಾವ ಬೀರುವುದು. ಹಾಗಾಗಿ ಕೆಲವು ಹಣ್ಣುಗಳನ್ನು ಗರ್ಭಾವಸ್ಥೆಯಲ್ಲಿ ಸೇವಿಸದೆ ಇರುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ.
ಪಪ್ಪಾಯ
ಪಪ್ಪಾಯ ಮಲಬದ್ಧತೆಯನ್ನು ನಿವಾರಿಸುವಲ್ಲಿ ಸಹಾಯ ಮಾಡುವ ಹಣ್ಣು ಎಂದು ಹೇಳಲಾಗುತ್ತದೆ. ಆದರೆ ಇದನ್ನು ಗರ್ಭಾವಸ್ಥೆಯಲ್ಲಿ ಇರುವಾಗ ಸೇವಿಸಬಾರದು ಎಂದು ಹೇಳಲಾಗುವುದು. ಅದರಲ್ಲೂ ಮೊದಲ ತ್ರೈಮಾಸಿಕದ ಸಂದರ್ಭದಲ್ಲಿ ಇದನ್ನು ಸೇವಿಸುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚುವುದು. ಬಲಿಯದ/ಕಾಯಿ ಪಪ್ಪಾಯದಲ್ಲಿ ಆಕ್ಸಿಟೋಸಿನ್ (ಹಾಲು ಮತ್ತು ಗರ್ಭಾಶಯದ ಸಂಕೋಚನವನ್ನು ಉತ್ಪಾದಿಸುವ ಹಾರ್ಮೋನ್) ಸಕ್ರಿಯಗೊಳಿಸುವ ಕಿಣ್ವಗಳನ್ನು ಒಳಗೊಂಡಿರುತ್ತದೆ. ಇದನ್ನು ಹೆಚ್ಚು ತಿಂದರೆ ಗರ್ಭಪಾತ ಉಂಟಾಗುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗುವುದು. ಹಾಗಾಗಿ ಗರ್ಭಿಣಿಯರು ಇದನ್ನು ತಿನ್ನದೆ ಇರುವುದು ಉತ್ತಮ ಎಂದು ಹೇಳಲಾಗುವುದು.
Most Read: ಲೋಹದ ತಟ್ಟೆಗಳಿಂದ ಆಹಾರ ಸೇವಿಸಿದರೆ ಸಿಗುವ ಆರೋಗ್ಯಕಾರಿ ಲಾಭಗಳು
ಅನಾನಸ್
ಇದೊಂದು ಉಷ್ಣವಲಯದ ಅತ್ಯುತ್ತಮವಾದ ಹಣ್ಣು ಎಂದು ಹೆಳಲಾಗುವುದು. ಇವರು ಅತ್ಯುತ್ತಮ ಜೀವಸತ್ವ, ಖನಿಜ ಮತ್ತು ಕರಗದ ಫೈಬರ್‍ನೊಂದಿಗೆ ತುಂಬಿರುತ್ತದೆ ಎಂದು ಹೇಳಲಾಗುವುದು. ಆದರೆ ಇದನ್ನು ಗರ್ಭಿಣಿಯರು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಾರದು. ಇದರಲ್ಲಿ ಆಮ್ಲೀಯ ಗುಣ ಅಧಿಕವಾಗಿರುವುದರಿಂದ ಹೊಟ್ಟೆಯಲ್ಲಿ ಉರಿಯುಂಟಾಗಬಹುದು. ಅಲ್ಲದೆ ಎದೆಯುರಿಯಂತಹ ಸಮಸ್ಯೆಗಳು ಉದ್ಭವವಾಗುವುದು. ಗರ್ಭಾವಸ್ಥೆಯ ಆರಂಭದ ಹಂತದಲ್ಲಿ ಇದನ್ನು ಸೇವಿಸುವುದರಿಂದ ಗರ್ಭಪಾತ ಅಥವಾ ಗರ್ಭಾಶಯದ ಕುಗ್ಗುವಿಕೆ ಉಂಟಾಗಬಹುದು. ಈ ಹಣ್ಣಿನಲ್ಲಿ ಇರುವ ಬ್ರೈನೊಲೆನ್ ಎನ್ನುವ ಗುಣವು ಗರ್ಭಪಾತ ಉಂಟಾಗುವಂತೆ ಮಾಡುವುದು.
ಅತಿಯಾಗಿ ಹಣ್ಣಾದ ಮಾವು
ಗರ್ಭಾವಸ್ಥೆಯಲ್ಲಿ ಮಾಗಿದ ಮಾವಿನ ಹಣ್ಣನ್ನು ತಿನ್ನುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಕೊನೆಯ ತ್ರೈಮಾಸಿಕದ ಅವಧಿಯಲ್ಲಿ ತಿನ್ನದೆ ಇರುವುದು ಸೂಕ್ತ ಎಂದು ಸಲಹೆ ನೀಡಲಾಗುವುದು. ಮಾವಿನ ಹಣ್ಣಿನಲ್ಲಿ ಅಧಿಕ ಪ್ರಮಾಣದ ಸಕ್ಕರೆಯ ಅಂಶವಿರುತ್ತದೆ. ಇದು ಮಧುಮೇಹ ಪ್ರೇರಿತ ಸ್ಥಿತಿಗೆ ಕಾರಣವಾಗಬಹುದು. ಗರ್ಭಾವಸ್ಥೆಯ ಕೊನೆಯ ತ್ರೈಮಾಸಿಕದ ಅವಧಿಯಲ್ಲಿ ರಕ್ತದಲ್ಲಿ ಒತ್ತಡ ಹಾಗೂ ಸಕ್ಕರೆಯ ಅಂಶ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಗರ್ಭವು ಕುಗ್ಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅಲ್ಲದೆ ಸಾಮಾನ್ಯ ಪ್ರಸವಕ್ಕೂ ಅಡಚಣೆ ಉಂಟುಮಾಡುವುದು. ಮಾವಿನ ಹಣ್ಣಿನಲ್ಲಿ ಇರುವ ಅಧಿಕ ಸಕ್ಕರೆ ಅಂಶವು ಮಗುವನ್ನು ಬಹುಬೇಗ ಬೆಳೆಯುವಂತೆ ಮಾಡುತ್ತದೆ. ಮಗು ಅಧಿಕ ತೂಕವನ್ನು ಹೊಂದಿದರೆ ಸಾಮಾನ್ಯ ಪ್ರಸವಕ್ಕೆ ತೊಂದರೆಯಾಗುವುದು.
Most Read: ಚಿಕನ್- ಮಟನ್‌ಗಿಂತಲೂ ಇಂತಹ ಸಸ್ಯಾಹಾರಿ ಆಹಾರಗಳು ತುಂಬಾನೇ ಆರೋಗ್ಯಕಾರಿ
ಸುರಕ್ಷಿತವಾಗಿರಬೇಕು
ಸಾಮಾನ್ಯವಾಗಿ ಎಲ್ಲಾ ದಂಪತಿಗಳು ಒಂಬತ್ತು ತಿಂಗಳುಗಳ ಕಾಲ ಗರ್ಭದಲ್ಲಿ ಇರುವ ಮಗು ಪ್ರಸವದ ನಂತರವೂ ಆರೋಗ್ಯವಾಗಿರಬೇಕು ಎಂದು ಬಯಸುತ್ತಾರೆ. ಅಂತಹ ಬಯಕೆಗಳು ಈಡೇರಬೇಕು ಎಂದರೆ ಗರ್ಭಾವಸ್ಥೆಯಲ್ಲಿ ಇರುವಾಗ ಸಮತೋಲಿತ ಆಹಾರ, ವ್ಯಾಯಾಮ, ಅನುಚಿತ ಆಹಾರ ಪದಾರ್ಥಗಳ ಮೇಲೆ ನಿರ್ಬಂಧವನ್ನು ಹೊಂದಿರಬೇಕು. ಅದರಲ್ಲೂ ಕೆಲವು ಆಹಾರ ಪದಾರ್ಥಗಳು ಹಾಗೂ ಹಣ್ಣುಗಳು ನಿಮ್ಮ ಮತ್ತು ಮಗುವಿನ ಆರೋಗ್ಯದಲ್ಲಿ ಕೆಟ್ಟ ಪರಿಣಾಮ ಬೀರುವುದು. ಅವುಗಳಿಂದ ಆದಷ್ಟು ದೂರ ಇರಲು ಪ್ರಯತ್ನಿಸಬೇಕು. ಆಗಲೇ ಆರೋಗ್ಯಕರವಾದ ಪ್ರಸವ ಹಾಗೂ ಮಗುವನ್ನು ಪಡೆಯಬಹುದು ಎಂದು ಸಲಹೆ ನೀಡಲಾಗುವುದು.