For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ನಿಮ್ಮನ್ನು ಕಾಡಬಹುದಾದ ಕೆಲವೊಂದು ದೈಹಿಕ ಲಕ್ಷಣಗಳು

By
|

ನಿಮ್ಮೊಳಗೆಯೇ ಇನ್ನೊಂದು ಜೀವಕ್ಕೆ ಜನ್ಮ ನೀಡುವಂತಹ ಅನುಭವ ಅನನ್ಯವಾಗಿದ್ದು ಅದಕ್ಕೆ ಯಾವುದೇ ಪರಿಧಿಯನ್ನು ನೀಡಲಾಗುವುದಿಲ್ಲ. ಹೆಣ್ಣು ಈ ಸಂದರ್ಭದಲ್ಲಿ ತಾಯ್ತನದ ಕ್ಷಣವನ್ನು ಆನಂದದಿಂದ ಅನುಭವಿಸುತ್ತಾಳೆ ಮತ್ತು ಆಕೆಗೆ ಇದಕ್ಕಿಂತ ಖುಷಿ ಕೊಡುವ ಸಂಗತಿ ಬೇರಾವುದೂ ಇರುವುದಿಲ್ಲ. ಒಂಭತ್ತು ತಿಂಗಳು ತನ್ನದೇ ಕುಡಿಯನ್ನು ತಮ್ಮ ಉದರದಲ್ಲಿ ಹೊತ್ತುಕೊಂಡು ಆ ಸಂದರ್ಭದಲ್ಲಿ ಅನುಭವಿಸಬೇಕಾದ ಮಾನಸಿಕ ಬೇಗುದಿಗಳನ್ನು ಸಹಿಸಿಕೊಂಡು ಒಂಭತ್ತನೆಯ ತಿಂಗಳಿಗೆ ಜೀವವನ್ನು ರೂಪಿಸುವ ಈ ಹಂತವನ್ನು ಹೆಣ್ಣಿನ ಮರುಜನ್ಮ ಎಂದು ಕರೆಯಲಾಗುತ್ತದೆ.

ನೀವು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ನಿಮಗೆ ಗೊತ್ತಿಲ್ಲದಂತೆ ಕೆಲವೊಂದು ಬದಲಾವಣೆ ಹಾಗೂ ಮಾರ್ಪಾಡುಗಳನ್ನು ನಿಮ್ಮ ದೇಹ ಒಳಗೊಳ್ಳುತ್ತದೆ. ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಇಂತಹ ಬದಲಾವಣೆಗಳಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಬೇಕಾಗುತ್ತದೆ. ನಿಸರ್ಗದ ಕೊಡುಗೆಯೆನಿಸಿದ ತಾಯಿಯಾಗುವ ಅತ್ಯಂತ ಅಮೂಲ್ಯವಾದ ಕ್ಷಣವನ್ನು ಅನ್ನುಭವಿಸಲು ಪ್ರತಿಯೊಬ್ಬ ಮಹಿಳೆಯೂ ಕೂಡ ಬಯಸುವುದು ಸಹಜವಾದುದು. ಹಾಗೆ ಒದಗಿ ಬಂದ ಅವಕಾಶವನ್ನು ಬಳಸಿಕೊಂಡು ತಾಯಿಯಾಗುವ ಅನುಭವವನ್ನು ಹೊಂದುವ ಈ ಪ್ರಕ್ರಿಯೆಯಲ್ಲಿ ಮಹಿಳೆ ಅದೆಷ್ಟೋ ಕಷ್ಟಗಳನ್ನನುಭವಿಸುತ್ತಾಳೆ. ಮಾನಸಿಕ ಮತ್ತು ದೈಹಿಕ ಬದಲಾವಣೆಗಳಿಗೊಳಪಡುವ ಗರ್ಭಿಣಿಯರು ತಮ್ಮೊಳಗೆ ಇನ್ನೊಂದು ಜೀವವನ್ನು ಸಲಹಿ-ಪೋಷಿಸಿ ಅದನ್ನು ಭೂಮಿಗೆ ತರುವಂತಹ ಕಾರ್ಯವನ್ನು ಮಾಡುತ್ತಾಳೆ.

ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಲು ಸಿದ್ಧರಿರುವ ಗರ್ಭಿಣಿ ಮಹಿಳೆಯು ತನ್ನ ಮಗುವಿನ ಬಗೆಗೆ ಅನೇಕ ಕನಸುಗಳನ್ನು ಹೆಣೆದುಕೊಳ್ಳುತ್ತಾ ಹೋಗುತ್ತಿರುತ್ತಾಳೆ. ಈ ಸಂದರ್ಭಗಳಲ್ಲಿ ಗರ್ಭಿಣಿಯರಲ್ಲಿ ಅನಿರೀಕ್ಷಿತವಾಗಿ ಸಂಭವಿಸುವ ಗರ್ಭಪಾತಗಳು ಆಕೆಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ಕುಗ್ಗುವಂತೆ ಮಾಡುತ್ತವೆ.

ಇಂತಹ ಗರ್ಭಪಾತಗಳಿಗೆ ಅನೇಕ ಕಾರಣಗಳಿರುತ್ತವೆ. ಕಾರಣಗಳನ್ನು ಹುಡುಕ ಹೊರಟಾಗ ಗರ್ಭಿಣಿಯರಲ್ಲಿನ ದೈಹಿಕವಾದ ಆಂತರಿಕ ಸಮಸ್ಯೆಗಳು, ಮಹಿಳೆಯರ ಗರ್ಭಕೋಶದಲ್ಲಿನ ದೋಷಗಳು, ಅಪಘಾತಗಳು, ಸೂಕ್ತ ಔಷಧೋಪಚಾರಗಳನ್ನು ಪಡೆಯದೆ ಇರುವುದು, ಒತ್ತಡದಿಂದ ಕೂಡಿದ ಜೀವನಕ್ರಮಗಳು, ಅತಿಯಾದ ದೈಹಿಕ ಆಯಾಸಗಳು, ಅಹಾರ ಕ್ರಮದಲ್ಲಿನ ವ್ಯತ್ಯಾಸಗಳು ಇನ್ನಿತರೆ ಕಾರಣಗಳನ್ನು ಗಮನಿಸಬಹುದಾಗಿದೆ.

ಇಂದಿನ ಲೇಖನದಲ್ಲಿ ಇಂತಹುದೇ ಕೆಲವೊಂದು ಅಂಶಗಳನ್ನು ನಾವು ತಿಳಿಸುತ್ತಿದ್ದು ನೀವು ಗರ್ಭಿಣಿಯಾಗಿರುವ ಅನೂಹ್ಯ ಅನುಭವವನ್ನು ನೀಡುವ ಕೆಲವೊಂದು ಅಂಶಗಳನ್ನು ಇಲ್ಲಿ ತಿಳಿಸುತ್ತಿದ್ದೇವೆ. ನಿಮ್ಮ ದೇಹದಲ್ಲಿ ಈ ಮಾರ್ಪಾಡುಗಳ ಆದಾಗ ನಿಮಗೆ ಗೊತ್ತಿಲ್ಲದಂತೆಯೇ ನೀವು ತಾಯ್ತನ ಸುಖವನ್ನು ಅನುಭವಿಸಲಿದ್ದೀರಿ...

ಉಸಿರಾಟದ ಸಮಸ್ಯೆ

ಉಸಿರಾಟದ ಸಮಸ್ಯೆ

ನಿಮ್ಮ ದೇಹಕ್ಕೆ ಹೆಚ್ಚು ಭಾರವಾಗಿರುವಂತೆ ಇಲ್ಲವೇ ಏನೂ ನಿಮ್ಮ ಉಸಿರಾಟವನ್ನು ತಡೆಹಿಡಿದಂತೆ ನಿಮ್ಮ ಅನುಭವಕ್ಕೆ ಬರುತ್ತದೆ. ನೀವು ಗರ್ಭಿಣಿಯಾಗಿರುವುದು ಇದಕ್ಕೆ ಕಾರಣವಾಗಿರುತ್ತದೆ. ನಿಮ್ಮ ದೇಹದೊಳಗೆ ಇನ್ನೊಂದು ಪುಟ್ಟ ಜೀವ ರೂಪುಗೊಳ್ಳುವುದರಿಂದ ಹೆಚ್ಚಿನ ಆಮ್ಲಜನಕವನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ ಅಂತೆಯೇ ಬಸ್ಸು ಏರುವಾಗ ಇಲ್ಲವೇ ಮೆಟ್ಟಿಲುಗಳನ್ನು ಹತ್ತುವಾಗ ಏದುಸಿರು ಬಿಡುವ ಸಮಸ್ಯೆ ನಿಮ್ಮನ್ನು ಕಾಡಬಹುದು.

ನಿಮ್ಮ ಸ್ತನಗಳು ಭಾರವಾದಂತೆ ಅನಿಸಬಹುದು

ನಿಮ್ಮ ಸ್ತನಗಳು ಭಾರವಾದಂತೆ ಅನಿಸಬಹುದು

ನಿಮ್ಮ ಸ್ತನದ ಆಕಾರದಲ್ಲಿ ನೀವು ವ್ಯತ್ಯಾಸವನ್ನು ಕಾಣಬಹುದು. ತಾಯ್ತನದ ಸಿದ್ಧತೆಯನ್ನು ಇವುಗಳು ಮಾಡುವುದರಿಂದ ಕೊಂಚ ಭಾರವಾದಂತೆ ನಿಮಗೆ ಅನ್ನಿಸಬಹುದು. ಭಾರವಾದ ಸ್ತನಗಳು ಒಮ್ಮೊಮ್ಮೆ ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು. ಈ ಸಮಯದಲ್ಲಿ ಕ್ರೀಡಾ ಬ್ರಾವನ್ನು ಧರಿಸುವುದು ಉತ್ತಮ ಮತ್ತು ಇದು ಉತ್ತಮ ಬೆಂಬಲವನ್ನು ನಿಮಗೆ ನೀಡುತ್ತದೆ. ಅಂತೆಯೇ ಮೊಲೆ ತೊಟ್ಟು ಬಣ್ಣ ಬದಲಾವಣೆಯನ್ನು ಮಾಡಿಕೊಂಡು ಗಾತ್ರದಲ್ಲಿ ಹಿರಿದಾಗುತ್ತವೆ.

ಆಹಾರದ ಮೇಲೆ ಕಡುಬಯಕೆ

ಆಹಾರದ ಮೇಲೆ ಕಡುಬಯಕೆ

ನಿಮಗೆ ಇಷ್ಟವಾಗದವುಗಳ ಮೇಲೆ ಆಸೆ ಮೂಡಬಹುದು. ಮತ್ತೊಂದೆಡೆ, ಯಾವಾಗಲೂ ಇಷ್ಟಪಡುವುದನ್ನು ನೀವು ತಿರಸ್ಕರಿಸಬಹುದು. ಬಹಳಷ್ಟು ಆಹಾರ ಪದಾರ್ಥಗಳ ವಿಷಯದಲ್ಲಿ ಇದೇ ರೀತಿ ಉಂಟಾಗುತ್ತಿದ್ದರೆ ನೀವು ಗರ್ಭಿಣಿಯಾಗಿರುವ ಕಾರಣ ಇದಾಗಿರಬಹುದು. ಆಹಾರದ ರುಚಿ ಮತ್ತು ತಿನ್ನುವುದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಅನೇಕ ಬಾರಿ, ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ನಿರ್ದಿಷ್ಟ ರೀತಿಯ ಆಹಾರದ ವಾಸನೆಯಿಂದ ಆಕರ್ಷಿತರಾಗುತ್ತಾರೆ ಅಥವಾ ಹಿಂಜರಿಯುತ್ತಾರೆ ಎಂದು ಕಂಡುಬರುತ್ತದೆ.

ನೀವು ಯಾವಾಗಲೂ ಆಯಾಸಗೊಂಡಿರುತ್ತೀರಿ!

ನೀವು ಯಾವಾಗಲೂ ಆಯಾಸಗೊಂಡಿರುತ್ತೀರಿ!

ನಿಮಗೆ ಹೆಚ್ಚು ಆಯಾಸವಾಗುತ್ತಿದೆ ಎಂದು ಅನಿಸಿದಲ್ಲಿ ಇದಕ್ಕೆ ಕಾರಣ ನಿಮ್ಮ ಗರ್ಭವಸ್ಥೆಯಾಗಿರಬಹುದು. ನೀವು ಹಿಂದೆ ಕೆಲಸ ಮಾಡುತ್ತಿರುವ ಕೆಲಸಗಳನ್ನು ನಿರ್ವಹಿಸಲು ಶಕ್ತಿಯನ್ನು ಹೊಂದಿಲ್ಲದಿದ್ದರೆ ಇದು ವಿಶೇಷವಾಗಿ ಇದೇ ಕಾರಣಕ್ಕಾಗಿ ಆಗಿದೆ. ಹೀಗಾಗಿ, ನೀವು ಸಮಯವನ್ನು ಹೊಂದಿದ್ದರೂ ಸಹ ನಿಮ್ಮ ಕೆಲಸದ ಚಟುವಟಿಕೆಗಳನ್ನು ಮಾಡಲು ಶಕ್ತಿಯನ್ನು ಹೊಂದಿಲ್ಲ, ನೀವು ತುಂಬಾ ಆಯಾಸಗೊಂಡಿದ್ದೀರಿ ಎಂದು ನೀವು ಭಾವಿಸಿದರೆ, ಆ ಸಮಯದಲ್ಲಿ ಗರ್ಭಧಾರಣೆಯ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಉತ್ತಮ.

ವಾಕರಿಕೆ

ವಾಕರಿಕೆ

ಏನೇ ಕಾರಣ ಇಲ್ಲದೆ ಆಗಾಗ್ಗೆ ನಿಮಗೆ ವಾಕರಿಕೆ ಬಂದಂತೆ ಆಗುತ್ತಿದೆ ಎಂದಾದಲ್ಲಿ ಇದಕ್ಕೆ ಕಾರಣ ನೀವು ಗರ್ಭಿಣಿಯಾಗಿದ್ದಿರಬಹುದು. ಗರ್ಭಿಣಿಯಾದಾಗ ಬೆಳಗ್ಗೆ ಮಾತ್ರವೇ ವಾಕರಿಕೆ ಬರುತ್ತದೆ ಎಂಬುದು ಮೂಢನಂಬಿಕೆಯಾಗಿದೆ. ಗರ್ಭಾವಸ್ಥೆಯಲ್ಲಿ ವಾಕರಿಕೆ ನಿಮ್ಮನ್ನು ಯಾವಾಗ ಬೇಕಾದರೂ ಹಿಂಸಿಸಬಹುದು ಮತ್ತು ನಿತ್ರಾಣಗೊಳಿಸಬಹುದು.

ನಿಮ್ಮ ಮಾಸಿಕ ಋತುಚಕ್ರದಲ್ಲಿ ಬದಲಾವಣೆ ಉಂಟಾಗಿದ್ದರೆ

ನಿಮ್ಮ ಮಾಸಿಕ ಋತುಚಕ್ರದಲ್ಲಿ ಬದಲಾವಣೆ ಉಂಟಾಗಿದ್ದರೆ

ಋತುಚಕ್ರದಲ್ಲಿ ಆಗಾಗ್ಗೆ ಬದಲಾವಣೆ ಉಂಟಾಗುವುದು ಸರ್ವೇ ಸಾಮಾನ್ಯವಾಗಿದೆ. ಋತು ಚಕ್ರದಲ್ಲಿ ಸಾಕಷ್ಟು ವಿಳಂಬ ಉಂಟಾಗುತ್ತಿದೆ ಎಂದಾಗ ನಾವು ಇದನ್ನು ಸಾಮಾನ್ಯ ಎಂದು ಪರಿಗಣಿಸುತ್ತೇವೆ. ಆದಾಗ್ಯೂ ವಿಳಂಬಗೊಂಡ ಋತುಚಕ್ರ ಕೂಡ ನೀವು ಗರ್ಭಿಣಿಯಾಗಿರುವುದನ್ನು ಸೂಚಿಸುತ್ತಿರಬಹುದು. ಕಳೆದ ತಿಂಗಳು ನೀವು ಗರ್ಭವತಿಯಾಗಿಲ್ಲ ಎಂದಾದಲ್ಲಿ ಇದಕ್ಕೆ ಕಾರಣ ನಿಮ್ಮ ಭ್ರೂಣವಾಗಿರಬಹುದು.

ಆಗಾಗ್ಗೆ ಮೂತ್ರ ವಿಸರ್ಜನೆ

ಆಗಾಗ್ಗೆ ಮೂತ್ರ ವಿಸರ್ಜನೆ

ಗರ್ಭಾವಸ್ಥೆಯಲ್ಲಿ, ದೇಹವು ಹಲವಾರು ಹೆಚ್ಚುವರಿ ದ್ರವಗಳನ್ನು ಉತ್ಪಾದಿಸುತ್ತದೆ ಮತ್ತು ನಿಮ್ಮ ಮೂತ್ರಕೋಶವು ಹೆಚ್ಚಿನ ಸಮಯವನ್ನು ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ, ನೀವು ಸಾಮಾನ್ಯವಾಗಿ ಹೋಗುವುದಕ್ಕಿಂತ ಅಧಿಕವಾಗಿ ಶೌಚಾಲಯಕ್ಕೆ ಮೂತ್ರವಿಸರ್ಜಿಸಲು ಹೋಗುತ್ತಿರಬಹುದು. ನೀವು ಗರ್ಭಿಣಿಯಾಗಿರುವುದೇ ಇದಕ್ಕೆ ಕಾರಣವಾಗಿರಬಹುದು. ನೀವು ಹೆಚ್ಚು ನೀರು ಕುಡಿದದ್ದರಿಂದ ಈ ರೀತಿ ಉಂಟಾಗಿದೆ ಎಂಬುದಾಗಿ ಭಾವಿಸದೆ ಕೂಡಲೇ ಗರ್ಭಧಾರಣೆ ಪರೀಕ್ಷೆಯನ್ನು ಮಾಡಿಸಿಕೊಳ್ಳಿ.

ಭಯಾನಕ ಸೆಳೆತಗಳು

ಭಯಾನಕ ಸೆಳೆತಗಳು

ನಿಮ್ಮ ಮುಟ್ಟಿನ ಸಮಯದಲ್ಲಿ ಈ ರೀತಿಯ ಸೆಳೆತಕ್ಕೆ ನೀವು ಒಳಗಾಗಿದ್ದು ನಿಮ್ಮ ಅನುಭವಕ್ಕೆ ಬಂದಿರಬಹುದು. ಅದೇ ಎಂಬುದಾಗಿ ಹೆಚ್ಚಿನ ಮಹಿಳೆಯರು ಈ ಸೆಳೆತವನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಗರ್ಭಧಾರಣೆಯ ಸಮಯದಲ್ಲಿ ಈ ಸೆಳೆತಗಳು ನಿರಂತರವಾಗಿ ಬರುತ್ತವೆ ಏಕೆಂದರೆ ಇನ್ನೊಂದು ಜೀವಕ್ಕಾಗಿ ನಿಮ್ಮ ಸಂತಾನೋತ್ಪತ್ತಿ ಅಂಗಗಳನ್ನು ಸಿದ್ಧಪಡಿಸುತ್ತಿರುವುದಕ್ಕೆ ಈ ನೋವು ನಿಮ್ಮನ್ನು ಕಾಡುತ್ತದೆ.

ನಿಮ್ಮ ಮೂಡ್ ಬದಲಾಗುತ್ತಿರುತ್ತದೆ

ನಿಮ್ಮ ಮೂಡ್ ಬದಲಾಗುತ್ತಿರುತ್ತದೆ

ನಿಮ್ಮ ಸಹೋದ್ಯೋಗಿ ಇಲ್ಲವೇ ಪತಿ, ಕುಟುಂಬದವರೊಂದಿಗೆ ನೀವು ಕೋಪವನ್ನು ಪ್ರದರ್ಶಿಸುತ್ತಿರುತ್ತೀರಿ. ಹೆಚ್ಚಿನ ಒತ್ತಡಕ್ಕೆ ಒಳಗಾಗದಂತೆ ನೀವು ಕಾಣುತ್ತೀರಿ. ಅಂತೆಯೇ ಕೋಪದಲ್ಲಿ ನೀವು ಭುಸುಗುಡಬಹುದು. ನಿಮ್ಮ ಹಾರ್ಮೋನುಗಳ ಕಾರಣದಿಂದ ಈ ರೀತಿ ನಿಮಗೆ ಸಂಭವಿಸುತ್ತಿರಬಹುದು.

ತಲೆಸುತ್ತು ಬಂದಂತೆ ನಿಮಗನ್ನಿಸಬಹುದು

ತಲೆಸುತ್ತು ಬಂದಂತೆ ನಿಮಗನ್ನಿಸಬಹುದು

ನಿಮಗೆ ಆಗಾಗ್ಗೆ ತಲೆಸುತ್ತು ಬಂದಂತೆ ತಲೆತಿರುಗಿದ ಅನುಭವ ನಿಮ್ಮನ್ನು ಕಾಡಬಹುದು. ಈ ಸಮಯದಲ್ಲಿ ಅಧಿಕ ರಕ್ತದೊತ್ತಡ ಮತ್ತು ಮಾನಸಿಕ ಒತ್ತಡ ನಿಮ್ಮನ್ನು ತಲೆತಿರುಗುವಂತೆ ಮಾಡಬಹುದು. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ನೀವು ಹೆಚ್ಚು ನೀರು ಕುಡಿಯುತ್ತೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಹಸಿವೆ ಆಗದಿದ್ದರೂ ಸಾಕಷ್ಟು ಆಹಾರಗಳನ್ನು ಸೇವಿಸಿ. ಗರ್ಭಿಣಿಯಾಗುವ ನಿರೀಕ್ಷೆಯಲ್ಲಿರುವವರು ಈ ಮೇಲಿನ ಎಲ್ಲಾ ದೈಹಿಕ ಬದಲಾವಣೆಗಳಿಗೊಳಪಡುವುದಷ್ಟೇ ಅಲ್ಲದೆ ಮಾನಸಿಕ ಬದಲಾವಣೆಗಳಿಗೂ ಕೂಡ ತನ್ನನ್ನು ತಾನು ತಯಾರಿಗೊಳಿಸಬೇಕಾಗುತ್ತದೆ. ದೈಹಿಕ ಬದಲಾವಣೆಗಳು ನಿರಂತರವಾಗಿ ಆಗುತ್ತಿರುವ ಈ ದಿನಗಳಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ ಮಾನಸಿಕ ಒತ್ತಡಗಳು, ಚಿಂತೆಗಳು ದೇಹದ ಮೇಲೆಯೂ ಕೂಡ ಪ್ರಭಾವವನ್ನು ಬೀರುತ್ತಿರುತ್ತವೆ. ಗರ್ಭಾವಸ್ಥೆಯ ಮೊದಲ ದಿನಗಳಲ್ಲಿ ತಾಯಿಯ ದೇಹಸ್ಥಿತಿ ಸೂಕ್ಷ್ಮವಾಗಿರುವುದರಿಂದ ಆದಷ್ಟು ಜಾಗರೂಕತೆಯನ್ನು ವಹಿಸುವುದು ಮುಖ್ಯವಾದುದು. ಒತ್ತಡಗಳಿಂದ ಮತ್ತು ಆಯಾಸಗಳಿಂದ ತಮ್ಮನ್ನು ದೂರವಿರಿಸಿಕೊಳ್ಳುವುದರೊಂದಿಗೆ, ನಿಯಮಿತ ಸುಲಭ ಗರ್ಭಿಣಿಯರ ವ್ಯಾಯಾಮಗಳು ಮತ್ತು ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಸೂಕ್ತ ಧ್ಯಾನ ಇತ್ಯಾದಿಗಳನ್ನು ಮಾಡುವುದು ಈ ಸಮಯದಲ್ಲಿ ಸೂಕ್ತವೆನಿಸುತ್ತವೆ.

English summary

Symptoms of Pregnancy: Signs You Must Know

Even among that section of mankind (the type whom we call women), there is a vast population who are not able to bring another life to the planet. While the reason for the same may vary from societal restrictions to that of personal choices, the fact remains that those women who are able to conceive and get pregnant are indeed very fortunate. Thus, if you are somebody who is at the risk of being pregnant, read this article to know about the ten signs that you have been ignoring, which are a clear indication of a pregnant self.
X
Desktop Bottom Promotion