For Quick Alerts
ALLOW NOTIFICATIONS  
For Daily Alerts

ಇದೇ ಕಾರಣಕ್ಕೆ ಗರ್ಭಧಾರಣೆ ವೇಳೆ ಗಂಟು ನೋವು ಕಾಣಿಸಿಕೊಳ್ಳುವುದು...

By Hemanth
|

ಗರ್ಭಧಾರಣೆಯು ಮಹಿಳೆಯ ಜೀವನದಲ್ಲಿ ವಿಶೇಷವಾಗಿರುವುದು ಮಾತ್ರವಲ್ಲದೆ, ಇದು ಹಲವಾರು ಹೊಸತನ ಉಂಟು ಮಾಡುವುದು. ದೇಹದಲ್ಲಿನ ಬದಲಾವಣೆಗಳು ಇದರಲ್ಲಿ ಪ್ರಮುಖವಾಗಿದೆ. ಗರ್ಭಧಾರಣೆ ವೇಳೆ ಮಹಿಳೆಯು ದೈಹಿಕ ಮತ್ತು ಮಾನಸಿಕವಾಗಿ ಇದಕ್ಕೆ ತಯಾರಾಗಬೇಕು. ದೇಹದಲ್ಲಿನ ಬದಲಾವಣೆ ಹಾಗೂ ಹಾರ್ಮೋನುಗಳ ಬದಲಾವಣೆ ಇದರಲ್ಲಿ ಪ್ರಮುಖವಾಗಿವೆ. ಆದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆಗಳು ಕಾಡುವುದು ಇದೆ. ಇದರಲ್ಲಿ ಗಂಟು ನೋವು ಕೂಡ ಒಂದಾಗಿದೆ. ಹೆಚ್ಚಾಗಿ ಗರ್ಭಿಣಿಯರು ಗಂಟು ನೋವಿನ ಸಮಸ್ಯೆಯನ್ನು ಯಾವಾಗಲೂ ಎದುರಿಸುವರು. ಕೆಲವರಲ್ಲಿ ಬೆನ್ನು ನೋವು ಇರುವುದನ್ನು ನಾವು ಕೇಳಿರುತ್ತೇವೆ. ಆದರೆ ದೇಹದ ಇತರ ಕೆಲವೊಂದು ಭಾಗಗಳಾದ ಗಂಟು, ಮೊಣಕೈ, ಬೆರಳುಗಳು, ಮೊಣಕಾಲು, ತೊಡೆ ಮತ್ತು ಹಿಂಗಾಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು.

ಮಹಿಳೆಯರ ಆರೋಗ್ಯವನ್ನು ಅವಲಂಬಿಸಿಕೊಂಡು ಗಂಟು ನೋವು ಕಾಣಿಸುವುದು. ಆದರೆ ಗರ್ಭಧಾರಣೆ ವೇಳೆ ಆಗುವಂತಹ ಸಂಪೂರ್ಣ ದೈಹಿಕ ಬದಲಾವಣೆಯಿಂದಾಗಿ ಕೆಲವು ಸಾಮಾನ್ಯ ಗಂಟು ನೋವುಗಳು ಬರುವುದು. ದೇಹದ ತೂಕ ಮತ್ತು ದೇಹದ ತೂಕವು ಬೇರೆ ಭಾಗಗಳಿಗೆ ವರ್ಗಾವಣೆಗೊಂಡಿರುವುದು ಇದರಲ್ಲಿ ಪ್ರಮುಖವಾಗಿದೆ. ಹಾರ್ಮೋನು ಬದಲಾವಣೆಗಳು ಇದಕ್ಕೆ ಕಾಣಿಕೆ ನೀಡುವುದು. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಗಂಟು ನೋವಿಗೆ ಕೆಲವೊಂದು ಕಾರಣಗಳನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದರಿಂದ ನಿಮ್ಮಲ್ಲಿ ಗಂಟುನೋವು ಇದ್ದರೆ ಅದನ್ನು ನೀವು ಪತ್ತೆಹಚ್ಚಿ ಬಗೆಹರಿಸಿಕೊಳ್ಳಿ.

ತೂಕ ಹೆಚ್ಚಳ

ತೂಕ ಹೆಚ್ಚಳ

ಗರ್ಭಧಾರಣೆ ವೇಳೆ ತೂಕ ಹೆಚ್ಚಳವು ಗಂಟು ನೋವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇದರಿಂದಾಗಿ ತೊಡೆಗಳು, ಮೊಣಕಾಲು ಮತ್ತು ಹಿಂಗಾಲುಗಳಲ್ಲಿ ನೋವು ಕಾಣಿಸುವುದು. ಯಾಕೆಂದರೆ ತೂಕವು ಈ ಭಾಗಗಳಿಗೆ ವಿತರಣೆಯಾಗುವುದು. ಹಾಗಾಗಿ ಇಂತಹ ಸಮಯದಲ್ಲಿ ಕೂಡಲೇ, ನಿಮ್ಮ ಬೆಳವಣಿಗೆಗಳ ಕುರಿತು ನಿಮ್ಮ ವೈದ್ಯರಿಗೆ ತಿಳಿಸಿ, ವಿಶೇಷವಾಗಿ ತೂಕ ಹೆಚ್ಚಾಗುತ್ತಿರುವುದನ್ನು ತಿಳಿಸಲು ಮರೆಯಲೇಬೇಡಿ. ಈ ನಿಟ್ಟಿನಲ್ಲಿ ನಿಮ್ಮ ವೈದ್ಯರು ನಿಮಗೆ ಅಗತ್ಯ ಸಲಹೆಗಳನ್ನು ನೀಡಬಹುದು. ಹಾಗೆಂದು ಪ್ರತಿ ಕಿಲೋ ಗ್ರಾಂ ಹೆಚ್ಚಾದಾಗಲು ಅವರಿಗೆ ತಿಳಿಸುವ ಅಗತ್ಯವಿಲ್ಲ. ಒಂದು ಬೆಳವಣಿಗೆಯ ವರದಿಯನ್ನು ಅವರಿಗೆ ನೀಡಿ. ಸಂಕ್ಷಿಪ್ತವಾಗಿ ಅವರಿಗೆ ವಿವರಿಸಿ. ಅವರು ಅರ್ಥ ಮಾಡಿಕೊಳ್ಳುತ್ತಾರೆ. ಇದು ಒಳ್ಳೆಯ ಸಲಹೆ. ನಿಮಗೆ ತೂಕ ಹೆಚ್ಚಾಗುತ್ತಿರುವ ಕುರಿತು ದೃಢವಾದಾಗ, ಆ ವಿಷಯವನ್ನು ನಿಮ್ಮ ಓರಗೆಯ ಗರ್ಭಿಣಿ ಹೆಂಗಸಿನ ಜೊತೆಗೆ ಹಂಚಿಕೊಳ್ಳಿ. ಇದರಿಂದ ನಿಮಗೆ ಪರಿಸ್ಥಿತಿ ಮನದಟ್ಟಾಗಬಹುದು ಮತ್ತು ನಿಮ್ಮ ಕೆಲವೊಂದು ಸಂಶಯಗಳು ಸಹ ನಿವಾರಣೆಯಾಗಬಹುದು. ಒಂದು ವೇಳೆ ನಿಮಗೆ ಯಾವುದಾದರು ಭೀತಿ ಅಥವಾ ಭಯವಿದ್ದಲ್ಲಿ ಅದು ಸಹ ನಿವಾರಣೆಯಾಗಬಹುದು. ನೆನಪಿಡಿ ಗರ್ಭಿಣಿ ಹೆಂಗಸು ಸರಿಯಾಗಿ ಊಟ ಮಾಡುವುದರಿಂದ ತಾಯಿ ಮತ್ತು ಮಗು ಇಬ್ಬರಿಗು ಒಳ್ಳೆಯ ಆರೋಗ್ಯ ಲಭಿಸುತ್ತದೆ. ಹೀಗೆ ನೀವು ಸೇವಿಸುವ ಆಹಾರವು ನೇರವಾಗಿ ನಿಮ್ಮ ದೇಹದ ತೂಕವನ್ನು ಅಧಿಕಗೊಳಿಸುತ್ತದೆ ಎಂಬುದು ಸುಳ್ಳಲ್ಲ. ಸರ್ವೇಯ ಪ್ರಕಾರ ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಅತಿಯಾದ ತೂಕವನ್ನು ಹೊಂದಿರುವ ಮಹಿಳೆಯರು ಹೆರಿಗೆಯ ಬಳಿಕ ಖಿನ್ನತೆ, ಬೆನ್ನು ನೋವು ಮತ್ತು ಮಾಸಿಕ ಮುಟ್ಟು ದೀರ್ಘವಾಗುವಂತಹ ಅಪಾಯಕ್ಕೆ ಒಳಗಾಗುವ ಸಾಧ್ಯತೆಯಿದೆ. ದೇಹದಲ್ಲಿ ಬೆಳೆದಿರುವ ಅತಿಯಾದ ಕೊಬ್ಬು ಇದಕ್ಕೆ ಕಾರಣವಾಗಿದೆ. ಗರ್ಭಧಾರಣೆ ವೇಳೆ ಅತಿಯಾದ ತೂಕ ಹೊಂದಿರುವುದು ತಾಯಿ ಹಾಗೂ ಮಗುವಿಗೆ ತುಂಬಾ ಅಪಾಯಕಾರಿ ಎಂದು ಸರ್ವೇ ಹೇಳಿದೆ...

ಮಕ್ಕಳಾಗದವರು ಇಂತಹ ಆಹಾರಗಳನ್ನು ಸೇವಿಸಿದರೆ- ಸಂತಾನಭಾಗ್ಯ ಪಡೆಯುತ್ತಾರೆ

ದ್ರವ ಶೇಖರಣೆ

ದ್ರವ ಶೇಖರಣೆ

ಗರ್ಭಧರಣೆ ವೇಳೆ ದ್ರವ ಶೇಖರಣೆಯು ಹೆಚ್ಚಾಗುವ ಕಾರಣದಿಂದಾಗಿ ಗಂಟು ನೋವು ಕಾಣಿಸಿಕೊಳ್ಳಬಹುದು. ಇದು ಮೊಣಕೈ ಮೇಲೆ ಒತ್ತಡ ಹಾಕಬಹುದು. ಈ ನೋವು ಕೈಗಳಿಗೂ ವಿಸ್ತರಣೆಯಾಗಬಹುದು.

ನಿದ್ರಿಸುವ ಭಂಗಿ

ನಿದ್ರಿಸುವ ಭಂಗಿ

ಗರ್ಭಧಾರಣೆ ವೇಳೆ ಕೇವಲ ದೈಹಿಕ ಬದಲಾವಣೆಗಳು ಆಗುವುದು ಕಾರಣವಲ್ಲ. ನಿದ್ರಿಸುವ ಭಂಗಿ ಕೂದ ಗಂಟು ನೋವಿಗೆ ಕಾರಣವಾಗಬಹುದು. ನೀವು ಎಡಭಾಗದಲ್ಲಿ ಸಂಪೂರ್ಣ ರಾತ್ರಿ ನಿದ್ರೆ ಮಾಡಿದರೆ ಆಗ ತೊಡೆ ಭಾಗದಲ್ಲಿ ನಿಸ್ಪರ್ಶ ಭಾವನೆ ಮತ್ತು ನೋವು ಕಾಣಿಸುವುದು.

ಹೈಪರ್ ಥೈರಾಯಿಡಿಸಂ

ಹೈಪರ್ ಥೈರಾಯಿಡಿಸಂ

ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಹೈಪರ್ ಥೈರಾಯಿಡಿಸಂನ್ನು ಕಡೆಗಣಿಸಲಾಗಿರುತ್ತದೆ. ಹೈಪರ್ ಥೈರಾಯಿಡಿಸಂ ಗರ್ಭಧಾರಣೆ ವೇಳೆ ಕಾಣಿಸಿಕೊಳ್ಳುವ ಗಂಟು ನೋವಿಗೂ ಕಾರಣವಾಗಬಹುದು.

ಹಾರ್ಮೋನು ಬದಲಾವಣೆ

ಹಾರ್ಮೋನು ಬದಲಾವಣೆ

ಗರ್ಭಧಾರಣೆ ವೇಳೆ ಶ್ರೋಣಿಯ ಅಸ್ಥಿರಜ್ಜುಗಳು ಮತ್ತು ಸ್ನಾಯುಗಳು ಆರಾಮವಾಗಿರಲು ಹಾರ್ಮೋನು ಬಿಡುಗಡೆ ಮಾಡಲಾಗುತ್ತದೆ. ಇದರಿಂದಾಗಿ ಗಂಟುಗಳ ಸಮೀಪವಿರುವಂತಹ ಇತರ ಅಸ್ಥಿರಜ್ಜುಗಳು ಮತ್ತು ಸ್ನಾಯುಗಳು ಕೂಡ ಸಡಿಲಗೊಳ್ಳಲು ಕಾರನವಾಗುವುದು. ಇದರಿಂದ ಗಂಟು ನೋವು ಕಾಣಿಸುವುದು.

ವೃತ್ತಿ

ವೃತ್ತಿ

ಇಂದಿನ ಆಧುನಿಕ ದಿನಗಳಲ್ಲಿ ಹೆಚ್ಚಾಗಿ ಗರ್ಭಿಣಿಯರು ಕೂಡ ಕೆಲಸ ಮಾಡುವರು. ಅದರಲ್ಲೂ ಕೆಲವರು 9 ತಿಂಗಳ ಕಾಲ ಕೆಲಸ ಮಾಡುವರು. ದೀರ್ಘಕಾಲದ ತನಕ ಕುಳಿತುಕೊಂಡು ಅಥವಾ ನಿಂತುಕೊಂಡು ಕೆಲಸ ಮಾಡುತ್ತಲಿದ್ದರೆ ಆಗ ಗಂಟುನೋವು, ಬೆನ್ನುನೋವು, ಹಿಂಗಾಲಿನ ನೋವು ಕಾಣಿಸುವುದು. ಕೆಲಸ ಮಾಡುವಾಗ ಬರುವ ಬರುವ ಗಂಟು ನೋವನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ.

ವೈದ್ಯಕೀಯ ಇತಿಹಾಸ

ವೈದ್ಯಕೀಯ ಇತಿಹಾಸ

ಗರ್ಭಧಾರಣೆ ವೇಳೆ ಗಂಟು ನೋವು ಕಾಣಿಸಿಕೊಳ್ಳಲು ಕೆಲವು ವೈದ್ಯಕೀಯ ಕಾರಣಗಳು ಇವೆ. ಸಂಧಿವಾತ ಮತ್ತು ಬೆನ್ನಿನ ಸಮಸ್ಯೆ ಇದರಲ್ಲಿ ಪ್ರಮುಖವಾಗಿದೆ. ಗಂಟುನೋವಿನ ಹಿನ್ನೆಲೆಯಿದ್ದರೆ ಆಗ ನೀವು ಅಗತ್ಯ ವೈದ್ಯಕೀಯ ನೆರವು ಪಡೆದುಕೊಳ್ಳು ಮತ್ತು ಇದನ್ನು ನಿಭಾಯಿಸಲು ಅಗತ್ಯ ಕ್ರಮ ತೆಗೆದುಕೊಳ್ಳಿ.

ಗರ್ಭಧಾರಣೆ ವೇಳೆ ಕಾಣಿಸಿಕೊಳ್ಳುವ ಗಂಟುನೋವಿನ ಸಮಸ್ಯೆಯು ಸಾಮಾನ್ಯವಾಗಿರುವುದು ಮತ್ತು ಅದಾಗಿಯೇ ನಿವಾರಣೆಯಾಗುವುದು. ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ವೈದ್ಯಕೀಯ ನೆರವು ಪಡೆಯಬೇಕಾಗುತ್ತದೆ. ಗರ್ಭಧಾರಣೆ ವೇಳೆ ಗಂಟು ನೋವು ಕಾಣಿಸಿಕೊಂಡರೆ ಅದಕ್ಕೆ ಕಾರಣವೇನೆಂದು ತಿಳಿದು ಸೂಕ್ತ ವೈದ್ಯಕೀಯ ಸಲಹೆ ಪಡೆಯಿರಿ.

English summary

Reasons For Joint Pain During Pregnancy

It is true! Pregnancy is the most exciting phase of a woman’s life where she experiences many things that are entirely new for her. But, the dark side of this is that these experiences include many factors that offer uneasiness and discomfort to the woman. Joint pain is one among these. Joint pain is the common complaint of most pregnant women. Even though backache is what comes to our mind while thinking of pain during pregnancy, there are other places in the body that are equally affected. You may experience pain and stiffness in joints such as elbows, fingers, knees, hips and ankles.
X
Desktop Bottom Promotion