For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಕೆಲವೊಮ್ಮೆ ಗೊತ್ತಿಲ್ಲದೇ ಗರ್ಭಪಾತ ಆಗಿಬಿಡಬಹುದು!

By Sushma Charhra
|

ಗರ್ಭಪಾತವು ನಿಜಕ್ಕೂ ಭಾರೀ ದೊಡ್ಡ ಆಘಾತ ನೀಡುವಂತದ್ದು, ಅದರಲ್ಲೂ ಪ್ರಮುಖವಾಗಿ ಯಾರು ತಾಯಿಯಾಗುವ ತವಕದಲ್ಲಿ ಅಧಿಕವಾಗಿರುತ್ತಾರೋ, ಮತ್ತು ಯಾವಾಗ ಇಂತಹ ಒಂದು ಘಟನೆ ಸಂಭವಿಸಿ ಬಿಡುತ್ತದೆಯೋ ನಿಜಕ್ಕೂ ಅದು ಸಂತೋಷವನ್ನು ನಮ್ಮಿಂದ ಕಸಿದುಬಿಡುವಂತಹ ಒಂದು ನಿರಾಶಾದಾಯಕ ಘಟನೆ. ಹಾಗಂತ, ಈ ರೀತಿಯ ಗರ್ಭಪಾತ ಅಥವಾ ಪ್ರಗ್ನೆನ್ಸಿ ಎಂದು ಕರ್ನ್ಫರ್ಮ್ ಆದ ಕೆಲವೇ ದಿನದಲ್ಲಿ ಹೀಗಾಗುವುದು ಒಂದು ಅಸಾಮಾನ್ಯ ಪ್ರಕ್ರಿಯೆಯಲ್ಲ.. ಇದನ್ನು ಮಹಿಳೆಯರ ರಿಪ್ರೊಡಕ್ಷನ್ ಪದ್ದತಿಯ ಒಂದು ಸಹಜ ಭಾಗ ಎಂದೇ ಪರಿಗಣಿಸಬಹುದು.

ಒಂದು ಮಾಹಿತಿಯ ಪ್ರಕಾರ ಹೇಳುವುದಾದರೆ ಕೆಲವು ಗರ್ಭಪಾತಗಳು ಮಹಿಳೆಯರಿಗೆ ತಿಳಿಯದಂತೆಯೇ ನಡೆದು ಹೋಗುತ್ತದೆ.. ಕೆಲವರು ಅವರ ಪೀರೇಡ್ಸ್ ತಡವಾಗಿರುವುದನ್ನು ಗಮನಿಸದೇ ಇದ್ದಿರಬಹುದು. ನಿಜವಾಗಿಯೂ ಆ ಪೀರೇಡ್ಸ್ ತಡವಾಗಿರುವುದೇ ಗರ್ಭಪಾತವೂ ಆಗಿರಬಹುದು. ಪ್ರಮುಖವಾಗಿ ಯಾರು ಗರ್ಭ ಧರಿಸುವ ಯೋಜನೆಯಲ್ಲಿ ಇರುವುದಿಲ್ಲವೋ, ಮತ್ತು ಗರ್ಭವತಿಯಾಗುತ್ತಾರೋ, ಅಂತವರು ಪ್ರಮುಖವಾಗಿ ಹೀಗೆ ಆಗಿರುವುದರ ಪರಿಕಲ್ಪನೆಯಲ್ಲೂ ಇರುವುದಿಲ್ಲ ಮತ್ತು ಗರ್ಭಧಾರಣೆಯ ಟೆಸ್ಟ್ ಕೈಗೊಳ್ಳುವವರೆಗೂ ಅವರಿಗೆ ಇದರ ಅಂದಾಜು ಇರುವುದಿಲ್ಲ.. ಡಾಕ್ಟರ್ ಗಳು ತಿಳಿಸುವಂತೆ, ಅರ್ಧದಷ್ಟು ಗರ್ಭಾವಸ್ಥೆಯು ಮೊದಲ ಮೂರು ತಿಂಗಳು ಮುಗಿಯುವುದರ ಒಳಗೆ ಗರ್ಭಪಾತವಾಗಿ ಹೋಗಿಬಿಡುತ್ತದೆಯಂತೆ.

Natural Reasons For Miscarriages in kannada

ನೀವು ಕೂಡ ಇದೇ ರೀತಿ ಗರ್ಭ ಧರಿಸಲು ಪ್ರಯತ್ನಿಸಿ, ಗರ್ಭಪಾತವಾಗಿದ್ದರೆ, ಖಂಡಿತವಾಗಿಯೂ ಯಾವೆಲ್ಲ ನೈಸರ್ಗಿಕ ಕಾರಣಗಳಿಂದಾಗಿ ಇದು ಸಂಭವಿಸಿದೆ ಎಂಬುದನ್ನು ಅರಿತುಕೊಳ್ಳಬೇಕು. ಹಾಗಾದ್ರೆ ಲೇಖನದ ಮುಂದಿನ ಭಾಗವನ್ನು ಓದಿ ಮತ್ತು ಕೆಲವು ಸಾಮಾನ್ಯ ಕಾರಣಗಳು ಮತ್ತು ಅದರಿಂದ ಒಮ್ಮೆ ಅಥವಾ ಅದಕ್ಕಿಂತಲೂ ಹೆಚ್ಚು ಬಾರಿ ಗರ್ಭಪಾತವಾಗಿರುವ ಸಾಧ್ಯತೆ ಇರುತ್ತದೆ.

• ಕ್ರೊಮೊಸೋಮಲ್ ಅಸಹಜತೆಗಳು

ಸುಮಾರು ಶೇಕಡಾ 60 ರಷ್ಟು ಗರ್ಭಪಾತವು ಕ್ರೋಮೋಸೋಮಲ್ ಗಳ ಅಸಹಜತೆಯಿಂದಾಗಿ ಸಂಭವಿಸಿರುತ್ತದೆ. ಕ್ರೋಮೋಸೋಮ್ ಎಂದರೆ ಒಂದು ಸಣ್ಣ ಸ್ಟ್ರಕ್ಚರ್ ಆಗಿದ್ದು ಪ್ರತಿಯೊಂದು ಜೀವಕೋಶದಲ್ಲೂ ಕೂಡ ಇರುತ್ತದೆ ಮತ್ತು ಇದು ನಮ್ಮ ಜೀನ್ಸ್ ಗಳನ್ನು ಹೊತ್ತುಕೊಳ್ಳುವ ಜವಾಬ್ದಾರಿಯನ್ನು ಹೊಂದಿದೆ..ಪ್ರತಿಯೊಬ್ಬ ವ್ಯಕ್ತಿಯಲ್ಲೂ 23 ಜೋಡಿಗಳಿರುತ್ತೆ ಮತ್ತು ಒಂದು ಜೋಡಿ ತಂದೆಯಾಗಿದ್ದರೆ ಮತ್ತೊಂದು ಜೋಡಿ ತಾಯಿಯಾಗಿರುತ್ತದೆ. ಯಾವಾಗ ಮೊಟ್ಟೆ ಮತ್ತು ವೀರ್ಯ ಭೇಟಿಯಾದಾಗ ಮತ್ತು ಒಂದು ಅಥವಾ ಇತರ ಅಂತ್ಯವು ತಪ್ಪಾಗಿರುತ್ತದೆ, ಆಗ ಕ್ರೋಮೋಸೋಮ್ ಗಳ ಜೋಡಣೆಯು ಸರಿಯಾದ ಕ್ರಮದಲ್ಲಿ ಇಲ್ಲದೇ ಇರುವ ಸಾಧ್ಯತೆಗಳಿರುತ್ತದೆ. ಇದನ್ನೇ ಭ್ರೂಣವು ರೂಪುಗೊಳ್ಳುವ ಸಂದರ್ಬದ ಕ್ರೋಮೋಸೋಮ್ ಗಳ ಅಸಹಜತೆ ಎಂದು ಕರೆಯಲಾಗುತ್ತೆ. ಈ ರೀತಿಯ ಗರ್ಭಧಾರಣೆಯು ಗರ್ಭಪಾತದಲ್ಲಿ ಅಂತ್ಯಗೊಳ್ಳುತ್ತದೆ.

• ಗರ್ಭಾಶಯದ ಅಸಹಜತೆಗಳು ಮತ್ತು ಅಸಮರ್ಥ ಗರ್ಭಕಂಠಗಳು

ಕೆಲವು ಮಂದಿಯಲ್ಲಿ ಗರ್ಭಾಶಯವು ಅಸಹಜ ಸ್ಥಿತಿಯಲ್ಲಿ ಆಕಾರಗೊಂಡಿರುತ್ತದೆ. ಕೆಲವೊಮ್ಮೆ ಗರ್ಭಾಶಯವು ಭಾಗವಾಗಿರುತ್ತದೆ. ಇದನ್ನು "ಗರ್ಭಾಶಯದ ಸೆಪ್ಟಮ್" ಎಂದು ಉಲ್ಲೇಖಿಸಲಾಗುತ್ತದೆ.

ದುರ್ಬಲ ಅಥವಾ ಅಸಮರ್ಥ ಗರ್ಭಕಂಠವು ಯಶಸ್ವಿ ಗರ್ಭಾವಸ್ಥೆಯನ್ನು ಪಡೆಯುವಲ್ಲಿ ಸಮಸ್ಯೆ ಉಂಟುಮಾಡಬಹುದು. ಮೊದಲ ತ್ರೈಮಾಸಿಕ ಮುಗಿಯುವುದರ ಒಳಗೆ ಭ್ರೂಣವು ಗಾತ್ರದಲ್ಲಿ ಬೆಳೆದಿರುತ್ತದೆ ಮತ್ತು ಇದು ಗರ್ಭಕಂಠವನ್ನು ಉಬ್ಬುಗೊಳಿಸುತ್ತದೆ, ಇಂತಹ ಸಂದರ್ಬದಲ್ಲಿ ಗರ್ಭಕಂಠವು ದುರ್ಬವಿದ್ದರೆ, ಅದು ಭ್ರೂಟವನ್ನು ಇಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಇದನ್ನು ಕೂಡಲೇ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ ಮತ್ತು ಮಹಿಳೆಯು ಪದೇ ಪದೇ ಗರ್ಭಪಾತಕ್ಕೆ ಒಳಗಾಗುತ್ತಿದ್ದಾಗ ಮಾತ್ರ ಗುರುತಿಸಲು ಸಾಧ್ಯವಾಗುತ್ತದೆ. ಆದರೆ ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ ಯಾಕೆಂದರೆ ಇದು ಗರ್ಭಾಶಯದ ಸೆಪ್ಟಮ್ ಶಸ್ತ್ರಚಿಕಿತ್ಸೆ ಮೂಲಕ ಚಿಕಿತ್ಸೆ ಪಡೆಯಬಹುದಾದ ಒಂದು ಸಮಸ್ಯೆಯಾಗಿದೆ. . ಒಂದು ಅಸಮರ್ಥ ಗರ್ಭಕಂಠವನ್ನು ಗರ್ಭಕಂಠದಲ್ಲಿ ಹೊಲಿಗೆ ಹಾಕುವ ಮೂಲಕ ಮುಚ್ಚಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವ0 ಚಿಕಿತ್ಸೆಯೇ ಇದಾಗಿದ್ದು, ಈ ವಿಧಾನವನ್ನು ಸೆರ್ಕ್ಲೇಜ್ ಎಂದು ಕರೆಯಲಾಗುತ್ತದೆ. ಆದರೆ ಈ ಗರ್ಭಧಾರಣೆ ಚಿಕಿತ್ಸೆಯ ನಂತರ ಮುಂದಿನ ಗರ್ಭಧಾರಣೆಯಲ್ಲಿ ಸಂಪೂರ್ಣ ಬೆಡ್ ರೆಸ್ಟ್ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ ಎಂಬುದನ್ನು ಮರೆಯಬೇಡಿ.

• ರೋಗನಿರೋಧಕ ಅಸ್ವಸ್ಥತೆ

ಕೆಲವೊಮ್ಮೆ ಮಹಿಳಾ ದೇಹವು ವೀರ್ಯವನ್ನು ತಮ್ಮದಲ್ಲದ ಶರೀರವೆಂದು ಕಾಣಲು ಆರಂಭಿಸುತ್ತದೆ ಮತ್ತು ಇದರ ಪ್ರತಿರಕ್ಷಣಾ ವ್ಯವಸ್ಥೆಗೆ ತಕ್ಕಂತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಯಾವಾಗ ಇದು ಸಂಭವಿಸುತ್ತದೆಯೋ, ಆಗ ಭ್ರೂಣವು ಮಹಿಳೆಯ ದೇಹದಿಂದ ಸ್ವೀಕರಿಸ್ಪಡುವುದಿಲ್ಲ. ಇದನ್ನೇ ರೋಗನಿರೋಧಕ ಅಸ್ವಸ್ಥತೆ ಅಥವಾ ಆಂಟಿಫಸ್ಫೋಲಿಪಿಡ್ ಪ್ರತಿಕಾಯಗಳು ಎಂದು ಕರೆಯಲ್ಪಡುತ್ತವೆ. ಇದು ಅದರ ಸ್ವಂತ ಅಂಗಾಂಶಗಳನ್ನೇ ಆಕ್ರಮಿಸುತ್ತದೆ ಮತ್ತು ಭ್ರೂಣವನ್ನೂ ಸೇರಿಸಿ ಆಕ್ರಮಿಸುತ್ತದೆ. ಇದರ ಫಲಿತಾಂಶ ಗರ್ಭಪಾತವಾಗಿರುತ್ತದೆ. ಆದರೆ ಇದು ಅಷ್ಟು ಸಾಮಾನ್ಯವಲ್ಲ, ಇಂತಹ ರೋಗಿಗಳನ್ನು ವೈದ್ಯರು ಕೂಡಲೇ ಚಿಕಿತ್ಸೆಗೆ ಒಳಪಡಿಸುತ್ತಾರೆ ಹೆಪರೀನ್ ಬಳೆಕೆ ಮಾಡಿ ರಕ್ತವನ್ನು ತೆಳುಗೊಳಿಸಲಾಗುತ್ತೆ ಮತ್ತು ಇತರೆ ಸ್ಟಿರಾಯ್ಡ್ ಗಳನ್ನೂ ಕೂಡ ಬಳಕೆ ಮಾಡಲಾಗುತ್ತೆ.

• ಥೈರಾಯ್ಡ್ ಮತ್ತು ಅನಿಯಂತ್ರಿತ ಮಧುಮೇಹ

ಮಹಿಳೆಯು ಥೈರಾಯ್ಡ್ ಅನ್ನು ಹೊಂದಿದ್ದಾಗ ಅಥವಾ ಅನಿಯಂತ್ರಿತ ಮಧುಮೇಹವನ್ನು ಹೊಂದಿರುವಾಗ ಅನಾನುಕೂಲವಾದ ಗರ್ಭಾಶಯದ ಪರಿಸರವು ಉಂಟಾಗುತ್ತದೆ. ಇಂತಹ ಪರಿಸರವು ಭ್ರೂಣವು ಬದುಕುಳಿಯಲು ಬಹಳ ಕಷ್ಟ ಪಡಬೇಕಾದ ಸಂದರ್ಭವನ್ನು ಎದುರಿಸುವಂತೆ ಮಾಡುತ್ತದೆ. ಇದು ಆಗದಂತೆ ತಡೆಯಬೇಕಾದರೆ, ನೀವು ಚಿಕಿತ್ಸೆಗೆ ಒಳಗಾಗಬೇಕು ಮತ್ತು ಜೀವನಶೈಲಿಯನ್ನು ಬದಲಿಸಿಕೊಳ್ಳಲು ನಿಮ್ಮ ವೈದ್ಯರು ನಿಮಗೆ ಸಲಹೆಗಳನ್ನು ನೀಡಬಹುದು.ವೈದ್ಯರು ಸೂಚಿಸುವ ಚಿಕಿತ್ಸೆಗೆ ಒಳಪಟ್ಟು ಮಧುಮೇಹವನ್ನು ನಿಯಂತ್ರಣಕ್ಕೆ ತರಬೇಕು ಮತ್ತು ಥೈರಾಯ್ಡ್ ಸಮಸ್ಯೆಯನ್ನು ಸರಿಯಾಗ ಚಿಕಿತ್ಸೆಯ ಮೂಲಕ ಸರಿಪಡಿಸಿಕೊಂಡರೆ ಸಮಸ್ಯೆಯಿಂದ ದೂರವಾಗಬಹುದು. ಬೇಗನೆ ತಾಯಿಯಾಗಲು ಸಾಧ್ಯವಾಗುತ್ತೆ.

• ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್)

ಗರ್ಭಪಾತವು ಮರುಕಳಿಸುತ್ತಲೇ ಇರಲು ಇರುವ ಪ್ರಮುಖ ಕಾರಣಗಳಲ್ಲಿ ಇದೂ ಒಂದುಸ ಯಾವ ಮಹಿಳೆಯರಿಗೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್ ) ಅಥವಾ ಹೆಚ್ಚಿನ ಮಟ್ಟದ ಟೆಸ್ಟೋಸ್ಟೆರಾನ್ ( ಪುರುಷ ಹಾರ್ಮೋನುಗಳು) ಇರುತ್ತೋ ಅವರಿಗೆ ಗರ್ಭಪಾತ ಸಾಮಾನ್ಯ.,ಇದು ಸಾಮಾನ್ಯವಾಗಿ ನಿಮ್ಮ ಮುಟ್ಟಿನ ಸಮಯದಲ್ಲಿ ವ್ಯತ್ಯಯ ಮತ್ತು ಅನಿಯಮಿತ ಅಂಡೋತ್ಪತ್ತಿಗೂ ಕೂಡ ಕಾರಣವಾಗಿರುತ್ತದೆ. ಯಾವ ಮಹಿಳೆಯರು ಡಯಾಬಿಟಿಕ್ ಆಗಿರುವುದಿಲ್ಲವೋ, ಅವರಿಗೂ ಕೂಡ ಪಿಸಿಓಎಸ್ ನ ಕಾರಣದಿಂದಾಗಿ ಇನ್ಸುಲಿನ್ ಪ್ರಮಾಣದಲ್ಲಿ ವ್ಯತ್ಯಯ ಕಾಣಿಸಬಹುದು. ಇದು ಎಂಡೊಮೆಟ್ರಿಯಲ್ ಪದರದ ಸರಿಯಾದ ಪರಿಪಕ್ತಿಯನ್ನು ತಡೆಯುತ್ತದೆ. ಪಿಸಿಓಎಸ್ ನಿಂದ ಗುರುತಿಸಲ್ಪಟ್ಟಿರುವ ಮಹಿಳೆಯರು ಇದನ್ನು ಸರಿಪಡಿಸಲು ಚಿಕಿತ್ಸೆ ಪಡೆಯಬೇಕಾಗುತ್ತದೆ. ಆಗ ಮಾತ್ರ ಗರ್ಭಧಾರಣೆ ಸಲೀಸಾಗುತ್ತದೆ.

• ಬ್ಯಾಕ್ಟೀರಿಯಾಗಳ ಸೋಂಕು

ಕೆಲವು ರೀತಿಯ ಬ್ಯಾಕ್ಟೀರಿಯಾಗಳು ಸಂತಾನೋತ್ಪತ್ತಿ ಟ್ರಾಕ್ ನಲ್ಲಿರುವುದು ಕೂಡ ಕೆಟ್ಟ ಪರಿಣಾವನ್ನು ಉಂಟು ಮಾಡುತ್ತದೆ. ಈ ಬ್ಯಾಕ್ಟೀರಿಯಾಗಳು (ಉದಾಹರಣೆಗೆ ಮೈಕೋಪ್ಲಾಸ್ಮಾ ಹೋಮಿನಿಸ್ ಮತ್ತು ಯುರೇಪ್ಲಾಸ್ಮಾ ಯುರಿಯಲಿಟಿಕಮ್) ಜನನಾಂಗದ ಪ್ರದೇಶಗಳಲ್ಲಿ ವಾಸಿಸುತ್ತವೆ ಮತ್ತು ಗರ್ಭಪಾತಗಳ ಅಪಾಯವನ್ನು ಹೆಚ್ಚಿಸಬಹುದು. ಯಾವಾಗ ಈ ಬ್ಯಾಕ್ಟೀರಿಯಾಗಳಿಂದ ಸೋಂಕು ಹರಡುತ್ತದೆಯೋ ಆಗ ಎಂಡೊಮೆಟ್ರಿಯಮ್ ಊತವು ಭ್ರೂಣವನ್ನು ಅಭಿವೃದ್ಧಿಪಡಿಸುವುದನ್ನು ತಡೆಯುತ್ತದೆ. ಈ ಸೋಂಕಿಗೆ ಆಂಟಿ ಬಯೋಟಿಕ್ಸ್ ಗಳ ಮುಖಾಂತರ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ.

• ಜೀವನಶೈಲಿ

ಆನಾರೋಗ್ಯಕಾರಿ ಜೀವನಶೈಲಿಯೂ ಕೂಡ ನೀವು ಗರ್ಭಧರಿಸುವ ಸಂದರ್ಬದಲ್ಲಿ ನಿಮ್ಮನ್ನು ಸಮಸ್ಯೆಗೆ ದೂಡಬಹುದು.. ಯಾವಾಗಲೂ ನಿಮ್ಮ ಗರ್ಭಧಾರಣೆ ಯಶಸ್ವಿಯಾಗದಂತೆ ಮಾಡುವ ಸಾಧ್ಯತೆಗಳಿರುತ್ತದೆ. ಸ್ಮೋಕಿಂಗ್ ಮಾಡುವವರಲ್ಲಿ ಗರ್ಭಪಾತದ ಸಾಧ್ಯತೆಗಳು ಧೂಮಪಾನ ಮಾಡದವರಿಗಿಂತ ಹೆಚ್ಚಿರುತ್ತದೆ. ನಿಕೋಟಿನ್ ಅಂಶವು ಯಾವಾಗ ಪ್ಲಾಸೆಂಟಾ ಮುಖಾಂತರ ಪ್ರವಹಿಸಲ್ಪಡುತ್ತದೆಯೋ ಆಗ ಭ್ರೂಣದ ಬೆಳವಳಿಗೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಅರ್ಥಾತ್ ಭ್ರೂಣಕ್ಕೆ ರಕ್ತಸಂಚಾರವಾಗುವುದಲ್ಲಿ ಯಡವಟ್ಟು ಸಂಭವಿಸುತ್ತದೆ. ಅತಿಯಾಗಿ ಡ್ರಿಂಕ್ಸ್ ಮಾಡುವವರಲ್ಲೂ ಕೂಡ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಗರ್ಭಪಾತದ ಮೊದಲ ಚಿಹ್ನೆ ಎಂದರೆ ಅತಿಯಾದ ನೋವು ಮತ್ತು ಅಧಿರವಾಗಿ ರಕ್ತಸ್ರಾವವಾಗುವುದೇ ಆಗಿದೆ. ನೀವು ಈ ರೀತಿಯ ಗರ್ಭಪಾತವಾಗುವುದನ್ನು ಗಮನಿಸಿದರೆ, ಆದಷ್ಟು ಬೇಗನೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.

English summary

Natural Reasons For Miscarriages

Miscarriages can get quite depressing, especially if you have been eagerly waiting to conceive, and then when it finally happens, the joy does not last long. Although going by what most obstetricians say, miscarriages or early pregnancy loss is not uncommon. It should be considered as normal part of female reproduction. If you are trying to conceive or have had a miscarriage, you surely would want to know the top natural reasons that lead to a miscarriage. Read on to know and understand about the most common reasons of a single or a recurrent miscarriage.
Story first published: Tuesday, June 19, 2018, 11:23 [IST]
X
Desktop Bottom Promotion