For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಮೂಲಂಗಿ ತಿನ್ನಬಹುದು! ಆದರೆ ಇದೆಲ್ಲಾ ಸಂಗತಿಗಳು ನೆನಪಿರಲಿ

|

ಗರ್ಭಧಾರಣೆಯ ಸಮಯ ಎನ್ನುವುದು ತುಂಬಾ ಸೂಕ್ಷ್ಮ ಹಾಗೂ ಆರೈಕೆಯ ಸಮಯವಾಗಿರುವುದು. ಈ ವೇಳೆ ಗರ್ಭಿಣಿ ಹಾಗೂ ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಗರ್ಭಧಾರಣೆ ಸಮಯದಲ್ಲಿ ಮಹಿಳೆಯರು ಸಿಕ್ಕಿದೆಲ್ಲವನ್ನೂ ತಿನ್ನುವಂತಿಲ್ಲ. ಯಾಕೆಂದರೆ ಇದರಿಂದ ಮಗುವಿನ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರಬಹುದು. ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಗರ್ಭಧಾರಣೆ ಸಮಯದಲ್ಲಿ ತಿನ್ನುವ ಬಯಕೆಯು ಹೆಚ್ಚಾಗಿರುವುದು. ಯಾಕೆಂದರೆ ಎರಡು ಜೀವಗಳಿಗೆ ಬೇಕಾಗುವ ಆಹಾರ ಸೇವನೆ ಮಾಡಬೇಕಾಗುತ್ತದೆ. ಇದರಿಂದ ಮುಖ್ಯವಾಗಿ ಗರ್ಭಿಣಿಯರು ಪೋಷಕಾಂಶಗಳು ಇರುವಂತಹ ಆಹಾರ ಸೇವನೆ ಮಾಡಬೇಕು.

ಆದರೆ ಕೆಲವೊಂದು ತರಕಾರಿಗಳನ್ನು ಹಸಿಯಾಗಿ ತಿಂದರೆ ಅದರಿಂದ ಗರ್ಭದಲ್ಲಿರುವ ಮಗುವಿನ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ನೀವು ಸಲಾಡ್ ಮೂಲಕ ಹಸಿ ತರಕಾರಿ ಸೇವನೆ ಮಾಡುತ್ತಿದ್ದರೆ ಆಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಯಾಕೆಂದರೆ ಹಸಿ ತರಕಾರಿಗಳಲ್ಲಿ ಇರುವಂತಹ ಕೆಲವೊಂದು ಕೀಟಾಣುಗಳು ಹಾಗೂ ರೋಗಾಣುಗಳು ದೇಹ ಸೇರಿಕೊಳ್ಳುವ ಸಾಧ್ಯತೆಯು ಇರುವುದು. ಅದರಲ್ಲೂ ನೀವು ಹಸಿ ಮೂಲಂಗಿ ತಿಂದರೆ ಅದರಿಂದ ಗರ್ಭದಲ್ಲಿರುವ ಮಗುವಿನ ಆರೋಗ್ಯ ಕೆಡಬಹುದು. ಮೂಲಂಗಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇರುವ ಕಾರಣದಿಂದ ಇದನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಆದಾಗ್ಯೂ ಇದರಿಂದ ಕೆಲವೊಂದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಅಂಶಗಳು ಕೂಡ ಇದೆ. ಗರ್ಭಿಣಿಯರು ಮೂಲಂಗಿ ತಿನ್ನುವುದು ಎಷ್ಟು ಸುರಕ್ಷಿತ ಮತ್ತು ಅದನ್ನು ಯಾವ ರೀತಿ ತಿನ್ನಬಹುದು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

 ಮೂಲಂಗಿಯಲ್ಲಿ ಇರುವಂತಹ ಆರೋಗ್ಯ ಲಾಭಗಳು

ಮೂಲಂಗಿಯಲ್ಲಿ ಇರುವಂತಹ ಆರೋಗ್ಯ ಲಾಭಗಳು

ನಿಮ್ಮ ಆಹಾರದಲ್ಲಿ ಒಂದು ಮೂಲಂಗಿಯನ್ನು ದಿನಕ್ಕೆ ಸೇವಿಸಿದರೆ ಆಗ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಬೇಕಾಗುವಂತಹ ಎಲ್ಲಾ ರೀತಿಯ ಪೋಷಕಾಂಶಗಳು ಸಿಗುವುದು. ಮೂಲಂಗಿಯಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ. ಗರ್ಭಿಣಿಯರಿಗೆ ಈ ಸಮಯದಲ್ಲಿ ಕ್ಯಾಲ್ಸಿಯಂ ಅಗತ್ಯವಾಗಿ ಬೇಕು. ಇದರಿಂದ ಮಗುವಿನ ಮೂಳೆಗಳು ಹಾಗೂ ಸ್ನಾಯುಗಳು ಬೆಳವಣಿಗೆಯಾಗಲು ನೆರವಾಗುವುದು. ಗರ್ಭಿಣಿಯರಿಗೆ ಬೇಕಾಗಿರುವ ಕ್ಯಾಲ್ಸಿಯಂನ್ನು ಮೂಲಂಗಿಯು ಒದಗಿಸಿಕೊಡುವುದು. ಮೂಲಂಗಿಯಲ್ಲಿ ಫಾಲಿಕ್ ಆಮ್ಲವು ಸಮೃದ್ಧವಾಗಿದೆ ಮತ್ತು ಇದು ಗರ್ಭಿಣಿಯರಿಗೆ ಪ್ರಮುಖವಾಗಿ ಬೇಕಾಗಿರುವಂತಹ ಪೋಷಕಾಂಶವಾಗಿದೆ. ಫಾಲಿಕ್ ಆಮ್ಲವು ಸರಿಯಾದ ಪ್ರಮಾಣದಲ್ಲಿ ಇದ್ದರೆ ಆಗ ಹುಟ್ಟುವಾಗ ಕಾಣಿಸಿಕೊಳ್ಳುವ ಅಂಗವೈಕಲ್ಯದಿಂದ ಮಗುವನ್ನು ಕಾಪಾಡುವುದು. ಇದರೊಂದಿಗೆ ಮೂಲಂಗಿಯಲ್ಲಿ ಪ್ರಮುಖವಾಗಿ ಪೊಟಾಶಿಯಂ, ಕಬ್ಬಿನಾಂಶ ಮತ್ತು ವಿಟಮಿನ್ ಸಿ ಕೂಡ ಇದೆ. ಇದು ಗರ್ಭಿಣಿ ಮಹಿಳೆಯರಿಗೆ ಅಗತ್ಯವಾಗಿ ಬೇಕಾಗಿರುವಂತಹ ಪೋಷಕಾಂಶಗಳಾಗಿವೆ.

ಗರ್ಭಧಾರಣೆ ವೇಳೆ ಮೂಲಂಗಿಯು ಒಳ್ಳೆಯದೇ?

ಗರ್ಭಧಾರಣೆ ವೇಳೆ ಮೂಲಂಗಿಯು ಒಳ್ಳೆಯದೇ?

ಹಲವಾರು ಪೋಷಕಾಂಶಗಳನ್ನು ಹೊಂದಿರುವಂತಹ ಮೂಲಂಗಿಯನ್ನು ಗರ್ಭಧಾರಣೆ ವೇಳೆ ಸೇವನೆ ಮಾಡುವುದರಿಂದ ಅಪಾಯವು ಎದುರಾಗಬಹುದು ಎಂದು ಕೇಳಿ ನಿಮಗೆ ಅಚ್ಚರಿಯಾಗಬಹುದು. ಗರ್ಭಧಾರಣೆಯ ಸಮಯದಲ್ಲಿ ಮಗುವಿನ ಬೆಳವಣಿಗೆಯು ಮುಖ್ಯ ಅಂಶವಾಗಿರುವುದು ಮತ್ತು ಇದು ತುಂಬಾ ಸೂಕ್ಷ್ಮ ಸಮಯವಾಗಿರುವುದು. ಕೊಲೊರಾಡೊ ಸ್ಟೇಟ್ ಯೂನಿವರ್ಸಿಟಿ ಪ್ರಕಾರ, ಗರ್ಭಧಾರಣೆ ವೇಳೆ ಅನಾರೋಗ್ಯಕ್ಕೆ ಒಳಗಾಗುವಂತಹ ಮಹಿಳೆಯ ಪ್ರತಿರೋಧಕ ಶಕ್ತಿಯು ತುಂಬಾ ಕುಗ್ಗಿರುವುದು. ವಿಷಕಾರಿಯಾಗಿರುವ ಮಣ್ಣಿನಲ್ಲಿ ಬೆಳೆದಿರುವಂತಹ ಆಹಾರವು ಕೂಡ ವಿಷಕಾರಿಯಾಗಿರಬಹುದು. ಹಸಿ ತರಕಾರಿಯಲ್ಲಿರುವಂತಹ ಕೀಟಾಣುಗಳು ದೇಹದೊಳಗೆ ಸಾಗಿ ಅದರಿಂದ ಸೋಂಕು ಹರಡಬಹುದು.

Most Read:ಕೇಳಿ ಇಲ್ಲಿ, ಮೂಲಂಗಿ ಎಂದಾಕ್ಷಣ ಮುಖ ಸಿಂಡರಿಸಬೇಡಿ!

ಗರ್ಭಧಾರಣೆ ವೇಳೆ ಮೂಲಂಗಿಯು ಒಳ್ಳೆಯದೇ?

ಗರ್ಭಧಾರಣೆ ವೇಳೆ ಮೂಲಂಗಿಯು ಒಳ್ಳೆಯದೇ?

ಹಸಿ ತರಕಾರಿಗಳನ್ನು ತೊಳೆಯದೆ ಹಾಗೆ ಸೇವನೆ ಮಾಡುವ ಪರಿಣಾಮವಾಗಿ ಕೆಲವೊಂದು ಗಂಭೀರ ರೂಪದ ಸೋಂಕುಗಳಾಗಿರುವ ಸಾಲ್ಮೊನೆಲ್ಲಾ ಮತ್ತು ಇಕೊಲಿ ಕಾಣಿಸಿಕೊಳ್ಳಬಹುದು. ಜ್ವರ ಮತ್ತು ನಿರ್ಜಲೀಕರಣವು ಈ ಸೋಂಕುಗಳಿಗೆ ಸಂಬಂಧಿಸಿರುವಂತಹ ಕೆಲವೊಂದು ಸಾಮಾನ್ಯ ಲಕ್ಷಣಗಳಾಗಿರುವುದು. ಈ ಸೋಂಕುಗಳು ಗರ್ಭದಲ್ಲಿರುವ ಮಗುವಿನ ಮೇಲೆ ನೇರ ಪರಿಣಾಮ ಬೀರಬಹುದು. ಕೆಲವೊಂದು ಸಂದರ್ಭದಲ್ಲಿ ಸೋಂಕು ಅತಿಯಾಗಿ ಕಾಡಿದರೆ ಅದರಿಂದ ಗರ್ಭಪಾತ, ಸಾವು ಮತ್ತು ಅಕಾಲಿಕ ಹೆರಿಗೆ ಆಗಬಹುದು.

 ಪಾಲಿಸಬೇಕಾಗಿರುವ ಸುರಕ್ಷಿತ ಕ್ರಮಗಳು

ಪಾಲಿಸಬೇಕಾಗಿರುವ ಸುರಕ್ಷಿತ ಕ್ರಮಗಳು

ಸೋಂಕು ಬರುವ ಭೀತಿಯಿಂದಾಗಿ ನೀವು ಮೂಲಂಗಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ಹೇಳಲಾಗುತ್ತಿಲ್ಲ. ಯಾಕೆಂದರೆ ಗರ್ಭಧಾರಣೆ ವೇಳೆ ಬೇಕಾಗುವಂತಹ ಪೋಷಕಾಂಶಗಳು ಈ ತರಕಾರಿಯಲ್ಲಿದೆ. ಇದಕ್ಕಾಗಿ ನೀವು ಕೆಲವೊಂದು ಪ್ರಮುಖ ಸುರಕ್ಷಿತ ಕ್ರಮಗಳನ್ನು ಪಾಲಿಸಿಕೊಂಡು ಹೋಗಬೇಕಾಗಿದೆ. ಅದರಲ್ಲೂ ಮೂಲಂಗಿ ಮತ್ತು ಕೆಲವು ಹಸಿ ತರಕಾರಿಗಳನ್ನು ತಿನ್ನುವ ವೇಳೆ ನೀವು ಕೆಲವು ಮುನ್ನೆಚ್ಚರಿಕೆ ವಹಿಸಬೇಕು. ಹಸಿ ತರಕಾರಿಗಳು ಅಥವಾ ಮೂಲಂಗಿಯನ್ನು ಸಲಾಡ್ ರೂಪದಲ್ಲಿ ನೀವು ತಿನ್ನುವಿರಾದರೆ ಆಗ ತೆಗೆದುಕೊಳ್ಳಬೇಕಾದ ಸುರಕ್ಷಿತ ಕ್ರಮಗಳನ್ನು ನೀವು ಈ ಕೆಳಗೆ ತಿಳಿಯಿರಿ.

1.ತರಕಾರಿಗಳನ್ನು ಸರಿಯಾಗಿ ಶುದ್ಧ ನೀರಿನಿಂದ ತೊಳೆಯಿರಿ ಮತ್ತು ಅದರ ಮೇಲಿರುವಂತಹ ಕೊಳೆ ತೆಗೆಯಿರಿ. ಸರಿಯಾಗಿ ತೊಳೆಯದೆ ಇರುವಂತಹ ಹಸಿ ತರಕಾರಿಗಳನ್ನು ಯಾವತ್ತೂ ಸೇವಿಸಬೇಡಿ.

2.ತರಕಾರಿ ಮೇಲಿರುವ ಮಣ್ಣು ಮತ್ತು ಕೊಳೆ ತೆಗೆಯಲು ನೀವು ಒಂದು ಶುದ್ಧ ಬ್ರಷ್ ತೆಗೆದುಕೊಂಡು ಅದರಿಂದ ಸ್ಕ್ರಬ್ ಮಾಡಿ.

3.ತರಕಾರಿ ಅಥವಾ ಮೂಲಂಗಿ ಸೇವನೆ ಮಾಡುವ ಮೊದಲು ಅದನ್ನು ಬೇಯಿಸಿ ಅಥವಾ ಹಬೆಯಲ್ಲಿಡಿ. ಬಿಸಿಯಿಂದಾಗಿ ಸೋಂಕು ಉಂಟು ಮಾಡುವ ಕೀಟಾಣುಗಳು ಸಾಯುವುದು ಮತ್ತು ಇದರಿಂದ ತರಕಾರಿಗಳನ್ನು ಸುರಕ್ಷಿತವಾಗಿ ಸೇವಿಸುವಂತೆ ಆಗುವುದು.

4.ಮೂಲಂಗಿಯನ್ನು ನೀವು ಸೂಪ್ ಅಥವಾ ಬೇರೆ ಯಾವುದೇ ರೀತಿಯ ಪದಾರ್ಥಕ್ಕೆ ಹಾಕಿಕೊಂಡು ಸೇವನೆ ಮಾಡಬಹುದು.

5.ನೀವು ಮೂಲಂಗಿಯನ್ನು ಕತ್ತರಿಸಿಕೊಳ್ಳುವ ಮೊದಲು ಚಾಕು ಮತ್ತು ಕತ್ತರಿಸುವ ಜಾಗವನ್ನು ಶುದ್ಧವಾಗಿಡಿ.

Most Read:ನಿತ್ಯ ಮೂಲಂಗಿ ಜ್ಯೂಸ್ ಕುಡಿದರೆ, ಯಾವ ಕಾಯಿಲೆಯೂ ಬರುವುದಿಲ್ಲ...

 ಪಾಲಿಸಬೇಕಾಗಿರುವ ಸುರಕ್ಷಿತ ಕ್ರಮಗಳು

ಪಾಲಿಸಬೇಕಾಗಿರುವ ಸುರಕ್ಷಿತ ಕ್ರಮಗಳು

ಈ ಎಲ್ಲಾ ಕ್ರಮಗಳನ್ನು ಪಾಲಿಸಿಕೊಂಡು ನೀವು ಮೂಲಂಗಿ ಸೇವನೆ ಮಾಡಿದರೆ ಅದರಿಂದ ನಿಮಗೆ ಎಲ್ಲಾ ರೀತಿಯ ಪೋಷಕಾಂಶಗಳು ದೇಹಕ್ಕೆ ಸಿಗುವುದು. ಗರ್ಭಿಣಿಯರು ಮೂಲಂಗಿ ಸೇವನೆ ಮಾಡುವ ಮೊದಲು ವೈದ್ಯರ ಸಲಹೆ

ಪಡೆದುಕೊಳ್ಳಬಹುದು. ಸ್ವಚ್ಛತೆ ಕ್ರಮಗಳನ್ನು ಪಾಲಿಸಿಕೊಂಡು ಹೋದರೆ ಆಗ ನಮಗೆ ಕೆಲವೊಂದು ರೀತಿಯ ಸೋಂಕನ್ನು ತಡೆಯಲು ಸಾಧ್ಯವಾಗುವುದು. ನೀವು ಮೂಲಂಗಿ ಜ್ಯೂಸ್ ಅಥವಾ ಹಸಿ ಮೂಲಂಗಿಯನ್ನು ಗರ್ಭಧಾರಣೆ ವೇಳೆ ತಿಂದಿದ್ದರೆ ಅದರ ಬಗ್ಗೆ ನಮಗೆ ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

English summary

Is It Safe To Eat Radish During Pregnancy?

Are you expecting and planning to treat yourself and your baby to some healthy soups and salads? Are you aware that most raw vegetables including radish can spell danger for the little one in your womb? Radishes are a must-have during pregnancy for its nutritional value. However, it can pose a few health hazards too. Read on to know whether it is safe to eating radish during pregnancy or not. Also, find a few handy tips to munch on one safely.
X
Desktop Bottom Promotion