For Quick Alerts
ALLOW NOTIFICATIONS  
For Daily Alerts

ಅಷ್ಟಕ್ಕೂ ಗರ್ಭಾವಸ್ಥೆಯಲ್ಲಿಯೇ ಮೂತ್ರ ವಿಸರ್ಜನೆ ಏಕೆ ಹೆಚ್ಚುತ್ತದೆ?

|

ಒಂದು ವೇಳೆ ನೀವು ಗರ್ಭವತಿಯಾಗಿದ್ದರೆ ಶೌಚಾಲಯಕ್ಕೆ ಹೋಗುವ ಅವಸರ ಪದೇ ಪದೇ ಎದುರಾಗುವುದು ನಿಮಗೂ ಅನುಭವವಾಗಿರಬಹುದು. ಸಾಮಾನ್ಯ ಸಮಯದಲ್ಲಿ ಎದುರಾಗುವುದಕ್ಕಿಂತಲೂ ಈ ಸಮಯದಲ್ಲಿ ದುಪ್ಪಟ್ಟು ಅಥವಾ ಮೂರು ಪಟ್ಟು ಹೆಚ್ಚು ಬಾರಿ ಧಾವಿಸಿರುತ್ತೀರಿ. ಈ ಪ್ರಶ್ನೆಗೆ ವೈದ್ಯರಿಂದ ದೊರಕುವ ವಿವರಣೆ ಹೀಗಿದೆ: ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹದಲ್ಲಿ ಅಪಾರವಾದ ಬದಲಾವಣೆಗಳಾಗುತ್ತವೆ ಹಾಗೂ ಈ ಬದಲಾವಣೆಗಳಿಗೆ ಅಪಾರ ಪ್ರಮಾಣದ ರಕ್ತಪರಿಚಲನೆಯೂ ಬೇಕಾಗುತ್ತದೆ. ರಕ್ತಪರಿಚಲನೆ ಹೆಚ್ಚಿದಾದ ಸ್ವಾಭಾವಿಕವಾಗಿಯೇ ಮೂತ್ರಪಿಂಡಗಳು ಸಾಮಾನ್ಯಕ್ಕಿಂತಲೂ ಹೆಚ್ಚೇ ರಕ್ತವನ್ನು ಶೋಧಿಸಿ ಕಲ್ಮಶಗಳನ್ನು ಮೂತ್ರಕೋಶದಲ್ಲಿ ಸಂಗ್ರಹಿಸುತ್ತವೆ ಹಾಗೂ ಮೂತ್ರಕೋಶ ಬೇಗಬೇಗನೇ ತುಂಬಿಬಿಡುತ್ತದೆ. ಹಾಗಾಗಿ ತುಂಬಿದ ಮೂತ್ರಕೋಶವನ್ನು ಖಾಲಿಮಾಡಲು ಮೆದುಳು ಮೂತ್ರವಿಸರ್ಜನೆಗೆ ಅವಸರಿಸುವ ಸೂಚನೆಗಳನ್ನು ಒದಗಿಸುತ್ತದೆ.

ಗರ್ಭಾವಸ್ಥೆಯಲ್ಲಿ ಕಾಲು ಊದಿಕೊಂಡಿರುವುದು

ಗರ್ಭಾವಸ್ಥೆಯಲ್ಲಿ ಕಾಲು ಊದಿಕೊಂಡಿರುವುದು

ಕೆಲವೊಮ್ಮೆ, ಗರ್ಭಿಣಿ ತನ್ನ ಪಾದ ಹಾಗೂ ಮೊಣಕಾಲಿನ ಕೆಳಭಾಗದಲ್ಲಿ ಕಾಲುಗಳು ಊದಿಕೊಂಡಿರುವುದನ್ನು ಗಮನಿಸಬಹುದು. ಈ ಮಹಿಳೆಯರು ಇತರ ಗರ್ಭಿಣಿಯರಿಗಿಂತಲೂ ಹೆಚ್ಚಾಗಿ ಶೌಚಾಲಯದತ್ತ ಧಾವಿಸುತ್ತಾರೆ, ಅದರಲ್ಲೂ ರಾತ್ರಿ ಸಮಯದಲ್ಲಿ ಇನ್ನೂ ಹೆಚ್ಚಾಗಿರುತ್ತದೆ. ಇದು ಸುಖನಿದ್ದೆ ಪಡೆಯಲು ಪ್ರಮುಖವಾದ ಅಡ್ಡಿಯಾಗಿದೆ. ಈ ಸ್ಥಿತಿಗೆ ವೈದ್ಯರು ನೀಡುವ ವಿವರಣೆ ಹೀಗಿದೆ: ಪವಡಿಸಿದಾಗ ಗರ್ಭಿಣಿಯ ಕಾಲುಗಳು ದೇಹದ ಮೇಲ್ಭಾಗದ ಮಟ್ಟದಲ್ಲಿರುತ್ತದೆ. ಈಗ ಕಾಲು ಮತ್ತು ಪಾದಗಳಲ್ಲಿ ಸಂಗ್ರಹವಾಗಿದ್ದ ದ್ರವ ಹಿಮ್ಮರಳಿ ಮೂತ್ರಕೋಶವನ್ನು ಬೇಗಬೇಗನೇ ತುಂಬಿಸಿಬಿಡುತ್ತದೆ ಹಾಗೂ ವಿಸರ್ಜನೆಗೆ ಪದೇ ಪದೇ ಅವಸರಿಸುತ್ತದೆ.

ಮೂತ್ರಕೋಶದ ಮೇಲೆ ಒತ್ತಡ ಹೆಚ್ಚುತ್ತದೆ

ಮೂತ್ರಕೋಶದ ಮೇಲೆ ಒತ್ತಡ ಹೆಚ್ಚುತ್ತದೆ

ಈ ಸ್ಥಿತಿಗೆ ಇರುವ ಇನ್ನೊಂದು ಕಾರಣವೆಂದರೆ, ವಿಶೇಷವಾಗಿ ಗರ್ಭಾವಸ್ಥೆಯ ದಿನಗಳು ಮುಂದುವರೆಯುತ್ತಾ ಹೋದಂತೆ, ಗರ್ಭದ ಗಾತ್ರವೂ ಬೆಳೆಯುತ್ತಾ ಹೋಗುತ್ತದೆ ಹಾಗೂ ಇದು ಮೂತ್ರಕೋಶದ ಮೇಲೆ ನಿಧಾನವಾಗಿ ಒತ್ತಡವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಈ ಒತ್ತಡದ ಕಾರಣ ಮೂತ್ರಕೋಶದಲ್ಲಿ ಕೊಂಚವೇ ಮೂತ್ರ ಸಂಗ್ರಹವಾದರೂ ಪೂರ್ತಿ ಸಂಗ್ರಹವಾದಂತಹ ಅನುಭವವಾಗಿ ಮೆದುಳು ಮೂತ್ರವಿಸರ್ಜನೆಯ ಸೂಚನೆಗಳನ್ನು ನೀಡುತ್ತದೆ. ಸಾಮಾನ್ಯವಾಗಿ ಎರಡನೆಯ ತ್ರೈಮಾಸಿಕದಲ್ಲಿ ಅಂದರೆ ಹೆಚ್ಚಿನವರಿಗೆ ಐದನೆಯ ತಿಂಗಳಿನಲ್ಲಿ ಈ ತೊಂದರೆ ಹೆಚ್ಚುತ್ತಾ ಹೆರಿಗೆಯಾಗುವವರೆಗೂ ಮುಂದುವರೆಯುತ್ತದೆ. ಹೆರಿಗೆಯ ದಿನಗಳು ಹತ್ತಿರಾಗುತ್ತಿದ್ದಂತೆಯೇ ಈ ಅವಸರವೂ ಹೆಚ್ಚು ಹೆಚ್ಚಾಗಿ ಆಗುತ್ತಾ ಹೋಗುತ್ತದೆ.

ಗರ್ಭಾವಸ್ಥೆಯಲ್ಲಿ ಎದುರಾಗುವ ಈ ತೊಂದರೆಯ ನಿರ್ವಹಣೆ ಹೇಗೆ?

ಗರ್ಭಾವಸ್ಥೆಯಲ್ಲಿ ಎದುರಾಗುವ ಈ ತೊಂದರೆಯ ನಿರ್ವಹಣೆ ಹೇಗೆ?

ಈ ಕ್ರಿಯೆ ಸ್ವಾಭಾವಿಕವಾಗಿದ್ದು ಇದನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ ಹಾಗೂ ನಿವಾರಿಸಲು ಯತ್ನಿಸಲೂ ಬಾರದು. ಆದರೆ ಶೌಚಲಯಕ್ಕೆ ಧಾವಿಸುವ ಅವಧಿಯನ್ನು ಕೊಂಚವೇ ಹೆಚ್ಚಿಸಿ ಇದರಿಂದ ನಿದ್ದೆ ಮತ್ತು ಆರೋಗ್ಯ ಭಂಗವಾಗದಂತೆ ತಡೆಯಬಹುದು. ಇದಕ್ಕಾಗಿ ವೈದ್ಯರು ಈ ಕೆಳಗಿನ ಸಲಹೆಗಳನ್ನು ನೀಡುತ್ತಾರೆ:

ಮೂತ್ರಕೋಶ ಪೂರ್ಣವಾಗಿ ಬರಿದಾಗುವಂತೆ ನೋಡಿಕೊಳ್ಳಿ

ಮೂತ್ರಕೋಶ ಪೂರ್ಣವಾಗಿ ಬರಿದಾಗುವಂತೆ ನೋಡಿಕೊಳ್ಳಿ

ಪ್ರತಿ ಬಾರಿಯೂ ಮೂತ್ರವಿಸರ್ಜಿಸುವಾಗ ಮೂತ್ರಕೋಶ ಪೂರ್ಣವಾಗಿ ಬರಿದಾಗುವಂತೆ ನೋಡಿಕೊಳ್ಳಿ. ಇದಕ್ಕಾಗಿ ಕೊಂಚ ಮುಂದಕ್ಕೆ ಬಗ್ಗಬೇಕಾಗಿ ಬರಬಹುದು. ಈ ಮೂಲಕ ಮೂತ್ರಕೋಶದಲ್ಲಿ ಉಳಿದಿರುವ ಕೊನೆಯ ಹನಿಯೂ ವಿಸರ್ಜಿಸಲ್ಪಡಲು ನೆರವಾಗುತ್ತದೆ. ಪ್ರತಿ ಬಾರಿಯೂ ಮೂತ್ರಕೋಶ ಪೂರ್ಣವಾಗಿ ಬರಿದಾದಾಗ ಮುಂದಿನ ಬಾರಿ ಬರಲು ಹೆಚ್ಚಿನ ಕಾಲಾವಕಾಶ ದೊರಕುತ್ತದೆ.

ಟೀ, ಮದ್ಯ, ಕಾಫಿ, ಇವೆಲ್ಲವೂ ಮೂತ್ರವರ್ಧಕ ದ್ರವಗಳಾಗಿವೆ. ಇವುಗಳ ಸೇವನೆಯಿಂದ ಮೂತ್ರವಿಸರ್ಜನೆಗೆ ಅವಸರವೂ ಬೇಗಬೇಗನೇ ಆಗುತ್ತದೆ. ಆದ್ದರಿಂದ ಇವುಗಳ ಸೇವನೆಯನ್ನು ಕನಿಷ್ಟ ಪ್ರಮಾಣಕ್ಕಿಳಿಸುವುದೇ ಗರ್ಭಿಣಿಯ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ.

ಗರ್ಭಾವಸ್ಥೆಯಲ್ಲಿ ಹೆಚ್ಚಿನ ನೀರಿನ ಸೇವನೆ ಅತಿ ಅಗತ್ಯ

ಗರ್ಭಾವಸ್ಥೆಯಲ್ಲಿ ಹೆಚ್ಚಿನ ನೀರಿನ ಸೇವನೆ ಅತಿ ಅಗತ್ಯ

ಗರ್ಭಾವಸ್ಥೆಯಲ್ಲಿ ಹೆಚ್ಚಿನ ನೀರಿನ ಸೇವನೆ ಇತರ ಸಮಯಕ್ಕಿಂತಲೂ ಹೆಚ್ಚೇ ಅಗತ್ಯವಾಗಿದೆ ಹಾಗೂ ಗರ್ಭಿಣಿಯ ಮತ್ತು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಈ ನೀರು ತುಂಬಾ ಅಗತ್ಯ. ಆದರೆ ನೀರಿನ ಸೇವನೆಯನ್ನು ದಿನದ ಅವಧಿಯಲ್ಲಿ ಹೆಚ್ಚಾಗಿಸಿ ರಾತ್ರಿ ಮಲಗುವ ಮುನ್ನ ಕನಿಷ್ಟವಾಗಿಸುವ ಮೂಲಕ ರಾತ್ರಿ ಹೊತ್ತಿನಲ್ಲಿ ಮೂತ್ರವಿಸರ್ಜನೆಗೆ ಅವಸರವಾಗುವುದು ಕಡಿಮೆಯಾಗುತ್ತದೆ. ವೈದ್ಯರ ಸಲಹೆಯ ಪ್ರಕಾರ ಹಗಲಿನಲ್ಲಿ ಅಗತ್ಯ ಪ್ರಮಾಣದ ನೀರು ಕುಡಿಯಿರಿ ಹಾಗೂ ರಾತ್ರಿ ಮಲಗುವ ಮುನ್ನ ಎರಡು ಘಂಟೆಗೆ ಮೊದಲು ನೀರು ಕುಡಿಯಿರಿ ಹಾಗೂ ಮಲಗುವ ಮುನ್ನ ಮೂತ್ರವಿಸರ್ಜಿಸಿ ಮಲಗಿ. ಇದರಿಂದ ನಿದ್ದೆಗೆ ಭಂಗವಾಗುವುದಿಲ್ಲ. ಆದರೆ ನೆನಪಿರಲಿ, ದಿನಕ್ಕೆ ಎಂಟು ಲೋಟಗಳ ಕನಿಷ್ಟ ನೀರಿನ ಸೇವನೆ ಗರ್ಭಿಣಿಗೂ ಅಗತ್ಯ!

ಒಂದು ವೇಳೆ ಮನೆಯಿಂದ ಹೊರಹೋಗುವಾಗ ಅಥವಾ ಮಲಗುವ ಮುನ್ನ ಮೂತ್ರವಿಸರ್ಜನೆಗೆ ಅವಸರವಾಗದೇ ಇದ್ದರೂ ಸರಿ, ಶೌಚಾಲಯಕ್ಕೆ ತೆರಳಿ ಮೂತ್ರಕೋಶವನ್ನು ಪೂರ್ಣವಾಗಿ ಬರಿದು ಮಾಡಿಯೇ ಮುಂದುವರೆಯಿರಿ. ಹಾಗೂ ಮನೆಯಲ್ಲಿರುವ ಸಮಯದಲ್ಲಿ ನಿಮ್ಮ ಮನೆಯಲ್ಲಿರುವ ಶೌಚಾಲಯವೊಂದು ತುರ್ತು ಪರಿಸ್ಥಿತಿಗೆ ತಲುಪಲು ಸಾಧ್ಯವಾಗುವಷ್ಟು ಹತ್ತಿರದಲ್ಲಿರುವಂತೆ ನೋಡಿಕೊಳ್ಳಿ.

ಸೀನುವಾಗ ಮೂತ್ರ ಸೋರಿಕೆಯಾಗಬಹುದು

ಸೀನುವಾಗ ಮೂತ್ರ ಸೋರಿಕೆಯಾಗಬಹುದು

* ಗರ್ಭಾವಸ್ಥೆಯಲ್ಲಿ ಕೆಮ್ಮು ಹಾಗೂ ಸೀನು ಸೀನುವಾಗಲೂ ಕೊಂಚ ಪ್ರಮಾಣದ ಮೂತ್ರ ಸೋರಿಕೆಯಾಗಬಹುದು. ಇದು ಕೆಲವೊಮ್ಮೆ ಮುಜುಗರವುಂಟುಮಾಡಬಹುದಾದರೂ ಪ್ರತಿ ಗರ್ಭಿಣಿಗೆ ಎದುರಾಗುವ ಸ್ವಾಭಾವಿಕ ಕ್ರಿಯೆಯಾಗಿದ್ದು ಇದರಿಂದ ಯಾವುದೇ ತೊಂದರೆಯಿಲ್ಲ. ಆದರೆ ನಾಲ್ಕು ಜನರ ನಡುವೆ ಇರುವಾಗ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ಈ ಪರಿಸ್ಥಿತಿ ಹೆಚ್ಚೇ ಮುಜುಗರ ತರಿಸಬಹುದು. ಆದ್ದರಿಂದ ಗರ್ಭಿಣಿ ಪ್ರತಿ ಬಾರಿ ಹೊರಹೋಗುವಾಗಲೂ ಮರೆಯದೇ ಸ್ಯಾನಿಟರಿ ಪ್ಯಾಡ್ ಧರಿಸಲು ಮರೆಯಬಾರದು. ಇಂದಿನ ದಿನಗಳಲ್ಲಿ ಗರ್ಭಿಣಿಯರ ನೆರವಿಗೆ ಸೋರದೇ ಇರುವ ಒಳ ಉಡುಪುಗಳೂ (leak-proof panties) ದೊರಕುತ್ತಿವೆ. ಇವುಗಳ ಬಳಕೆಯೂ ಸೂಕ್ತವಾಗಿದೆ. ಕೆಲವು ಗರ್ಭಿಣಿಯರಿಗೆ ಮೂತ್ರವಿಸರ್ಜನೆಯ ಮೇಲೆ ನಿಯಂತ್ರಣವಿಲ್ಲದೇ ಅನೈಚ್ಛಿಕವಾಗಿ ಮೂತ್ರವಿಸರ್ಜನೆಯಾಗಬಹುದು. (ತಡವಯಸ್ಸಿನಲ್ಲಿ ಗರ್ಭಧರಿಸಿದ ಮಹಿಳೆಯರನ್ನು ಈ ಸ್ಥಿತಿ ಹೆಚ್ಚಾಗಿ ಕಾಡುತ್ತದೆ) ಈ ತೊಂದರೆ ಇದ್ದರೆ ವೈದ್ಯಕೀಯ ಪ್ರಮಾಣಿತ ಮೂತ್ರವನ್ನು ಹೀರಿಕೊಳ್ಳುವ ದಿಂಬು (Urinary incontinence pad) ಗಳನ್ನು ವೈದ್ಯರ ಸಲಹೆಯ ಮೇರೆಗೆ ಧರಿಸಬೇಕು. ವಿಶೇಷವಾಗಿ ಮನೆಯಿಂದ ಹೊರಹೋಗುವಾಗ ಈ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ಮರೆಯಬಾರದು.

ಸತತ ಮೂತ್ರವಿಸರ್ಜನೆ ಸಾಮಾನ್ಯ

ಸತತ ಮೂತ್ರವಿಸರ್ಜನೆ ಸಾಮಾನ್ಯ

ಗರ್ಭಾವಸ್ಥೆಯಲ್ಲಿ ಸತತ ಮೂತ್ರವಿಸರ್ಜನೆ ಸಾಮಾನ್ಯವಾಗಿದ್ದು ಗರ್ಭಿಣಿ ಈ ಬಗ್ಗೆ ಚಿಂತಿಸಬಾರದು. ಆದರೆ, ಒಂದು ವೇಳೆ ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು, ಉರಿ ಅಥವಾ ಮೂತ್ರದಲ್ಲಿ ರಕ್ತ ಮಿಶ್ರಣವಾಗಿದ್ದಂತೆ ಅಥವಾ ಹೆಪ್ಪುಗಟ್ಟಿದ ಮೂತ್ರದ ತುಣುಕುಗಳು ಕಂಡುಬಂದರೆ ಮಾತ್ರ ತಡಮಾಡದೇ ನಿಮ್ಮ ಕುಟುಂಬವೈದ್ಯರಲ್ಲಿ ಈ ಬಗ್ಗೆ ವಿವರಣೆಯನ್ನು ನೀಡಬೇಕು. ಈ ಸೂಚನೆಗಳು ಕಂಡುಬಂದರೆ ಮಾತ್ರ ವೈದ್ಯರು ಕೆಲವು ಪರೀಕ್ಷೆಗಳ ಮೂಲಕ ಇದಕ್ಕೆ ಕಾರಣವನ್ನು ಕಂಡುಕೊಳ್ಳುತ್ತಾರೆ ಹಾಗೂ ಗರ್ಭಿಣಿ ಮತ್ತು ಗರ್ಭದಲ್ಲಿರುವ ಮಗುವಿಗೆ ಯಾವುದೇ ಸೋಂಕು ಉಂಟಾಗದಂತೆ ಎಚ್ಚರಿಕೆ ವಹಿಸಲು ಅಗತ್ಯ ಔಷಧಿ ಹಾಗೂ ಕ್ರಮಗಳನ್ನು ಸೂಚಿಸುತ್ತಾರೆ. ಗರ್ಭಿಣಿ ತಪ್ಪದೇ ವೈದ್ಯರ ಸೂಚನೆಗಳನ್ನು ಪಾಲಿಸಬೇಕು.

Read more about: health pregnancy
English summary

How to cope with frequent urination during pregnancy

Visiting the toilet is one of the most common problems faced during pregnancy. Since pregnant women can not control their pee due to many factors, it is also not advised to control urine for a long time during pregnancy. If you want o control your pee, try to lean forward, this is an immediate relief.
Story first published: Monday, May 7, 2018, 14:49 [IST]
X
Desktop Bottom Promotion