For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯ ಒತ್ತಡವು ಮಗುವಿನ ಮೇಲೆ ಹೇಗೆ ಪ್ರಭಾವ ಬೀರುವುದು?

By Divya Pandit
|

ಗರ್ಭಾವಸ್ಥೆಯಲ್ಲಿ ಇರುವಾಗ ಸಾಮಾನ್ಯವಾಗಿ ಎಲ್ಲರೂ ಎಚ್ಚರಿಕೆ ಹಾಗೂ ಆರೈಕೆಯಿಂದ ಇರಬೇಕೆಂದು ಸಲಹೆ ನೀಡುತ್ತಾರೆ. ವಿಶೇಷವಾಗಿ ಮಾನಸಿಕ ಹಾಗೂ ದೈಹಿಕವಾಗಿ ಯಾವುದೇ ರೀತಿಯಲ್ಲೂ ಒತ್ತಡಕ್ಕೆ ಒಳಗಾಗ ಬಾರದು ಎಂದು ಹೇಳುವರು. ಏಕೆಂದರೆ ಗರ್ಭಾವಸ್ಥೆಯಲ್ಲಿ ಇರುವಾಗ ಮಹಿಳೆಯ ಮಾನಸಿಕ ಚಿಂತನೆಗಳು ಬಹಳ ಸೂಕ್ಷ್ಮತೆಯನ್ನು ಪಡೆದುಕೊಂಡಿರುತ್ತದೆ. ಸಾಮಾನ್ಯ ಚಿಂತನೆಗಳನ್ನು ಸಹ ಆಕೆ ಆಳವಾಗಿ ಪರಿಗಣಿಸುವ ಸಾಧ್ಯತೆಗಳಿರುತ್ತವೆ. ಹೀಗೆ ಚಿಂತನೆಗಳು ಅಥವಾ ಒತ್ತಡವು ತಾಯಿಯ ಮೇಲೆ ಗಂಭೀರವಾದ ಪರಿಣಾಮ ಬೀರುವುದರ ಜೊತೆಗೆ ಮಗುವಿನ ಬೆಳವಣಿಗೆಯ ಮೇಲೂ ನೇರವಾಗಿ ಪ್ರಭಾವ ಬೀರುವುದು.

ಗರ್ಭಾವಸ್ಥೆಯಲ್ಲಿ ಇರುವಾಗ ತಾಯಿಯ ದೇಹದಲ್ಲಾಗುವ ಬದಲಾವಣೆಗಳು ಸಾಮಾನ್ಯವಾಗಿ ಕೆಲವು ಕಳವಳಗಳನ್ನು ಹುಟ್ಟಿಸುತ್ತಲೇ ಇರುತ್ತವೆ. ಅದರಲ್ಲೂ ವಾಕರಿಕ, ತೂಕ ಹೆಚ್ಚುವುದು, ದೈಹಿಕ ಬದಲಾವಣೆ ಹಾಗೂ ನಿತ್ಯದ ಜೀವನ ಶೈಲಿಯಲ್ಲಿ ಮಾಡಿಕೊಳ್ಳಬೇಕಾದ ಹೊಂದಾಣಿಕೆಗಳು. ಇವು ಕೆಲವು ಕಿರಿಕಿರಿ ಅಥವಾ ಮಾನಸಿಕ ಒತ್ತಡವನ್ನು ಉಂಟುಮಾಡುತ್ತವೆ. ಇಷ್ಟೇ ಅಲ್ಲದೆ ಆರ್ಥಿಕ ಸಮಸ್ಯೆ, ಮನೆಯಲ್ಲಿಯ ರಾಜಕೀಯ, ಹೊಂದಾಣಿಕೆಯ ಸಮಸ್ಯೆಗಳು ಗಂಭೀರ ಒತ್ತಡವನ್ನು ಸೃಷ್ಟಿಸುವುದು.

how does stress affect pregnancy in first trimester

ಇಂತಹ ಸಮಯದಲ್ಲಿ ಹೇಗಿರಬೇಕು? ಅಥವಾ ಹೇಗೆ ಸನ್ನಿವೇಶಗಳನ್ನು ನಿಭಾಯಿಸಿಕೊಳ್ಳಬೇಕು? ಎನ್ನುವುದರ ಬಗ್ಗೆ ಗರ್ಭಿಣಿಯರು ಸೂಕ್ತ ಮಾಹಿತಿಯನ್ನು ಹೊಂದಿರಬೇಕು. ಇಲ್ಲವಾದರೆ ಗರ್ಭದಲ್ಲಿರುವ ಮಗುವಿನ ಮೇಲೆ ಊಹೆಗೂ ನಿಲುಕದ ಪರಿಣಾಮ ಉಂಟಾಗುವುದು. ಹಾಗಾದರೆ ತಾಯಿಯ ಒತ್ತಡದ ಸ್ಥಿತಿಯು ಮಗುವಿನ ಬೆಳವಣಿಗೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಗರ್ಭಿಣಿಯರು ಆದಷ್ಟು ಇಂತಹ 10 ಚಟುವಟಿಕೆಗಳಿಂದ ದೂರವಿರಿ

ವೈದ್ಯರ ಅಭಿಪ್ರಾಯದ ಪ್ರಕಾರ ತಾಯಿಯ ಮಾನಸಿಕ ಒತ್ತಡದಿಂದ ಮಗುವಿನಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಉಂಟಾಗುತ್ತವೆ.

- ಭ್ರೂಣದ ಹೃದಯ ಬಡಿತ ಹೆಚ್ಚುವುದು.
- ಉರಿಯೂತದ ಪ್ರಕ್ರಿಯೆ ಉಂಟಾಗುವುದು.
- ಭ್ರೂಣದ ತೂಕ ಕಡಿಮೆಯಾಗುವುದು.
- ಮಿದುಳು ಬೆಳವಣಿಗೆಯ ಮೇಲೆ ಪ್ರಭಾವ ಬೀರುವುದು.
- ಗರ್ಭಪಾತದ ಸಾಧ್ಯತೆಗಳು ಹೆಚ್ಚಿರುತ್ತವೆ.

* ಭ್ರೂಣದ ಹೃದಯ ಬಡಿತ ಹೆಚ್ಚುವುದು:

* ಭ್ರೂಣದ ಹೃದಯ ಬಡಿತ ಹೆಚ್ಚುವುದು:

ಸಾಮಾನ್ಯವಾಗಿ ಯಾವುದೇ ವ್ಯಕ್ತಿ ಒತ್ತಡಕ್ಕೆ ಒಳಗಾದಾಗ ದೇಹದಲ್ಲಿ ಹಲವಾರು ಒತ್ತಡದ ಹಾರ್ಮೋನ್ ಬಿಡುಗಡೆಯಾಗುತ್ತವೆ. ಈ ಹಾರ್ಮೋನ್‍ಗಳು ಅಪಾಯವನ್ನು ಸೃಷ್ಟಿಸುತ್ತವೆ ಎಂದು ಹೇಳಲಾಗುವುದು. ದೇಹದಲ್ಲಿ ಉಂಟಾಗುವ ಬದಲಾವಣೆಗಳನ್ನು ತಪ್ಪಿಸಲು ಹೃದಯದ ಬಡಿತವು ಹೆಚ್ಚುವುದು. ಗರ್ಭಾವಸ್ಥೆಯಲ್ಲಿರುವ ಮಹಿಳೆಯಲ್ಲಿ ಈ ಬದಲಾವಣೆ ಉಂಟಾದಾಗ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆ ಅಪಾಯಕಾರಿ ಪರಿಣಾಮ ಬೀರುವುದು. ದೇಹದಲ್ಲಾಗುವ ಹಠಾತ್ ಬದಲಾವಣೆಗಳು ಮಗುವಿನ ಆರೋಗ್ಯದ ಮೇಲೆ ನೇರ ಪ್ರಭಾವ ಬೀರುವುದು.

ಉರಿಯೂತದ ಪ್ರಕ್ರಿಯೆ:

ಉರಿಯೂತದ ಪ್ರಕ್ರಿಯೆ:

ದೀರ್ಘ ಸಮಯದಿಂದಲೂ ಗರ್ಭಿಣಿಯರು ಒತ್ತಡವನ್ನು ಅನುಭವಿಸುತ್ತಾ ಬಂದಿದ್ದರೆ ಹುಟ್ಟಲಿರುವ ಮಕ್ಕಳ ಮೇಲೆ ಉರಿಯೂತ ಉಂಟಾಗುವುದು. ಆರೋಗ್ಯಕರ ಮಗುವಿನ ಬೆಳವಣಿಗೆಗೆ ಎಲ್ಲಾ ಇಂದ್ರೀಯಗಳ ಬೆಳವಣಿಗೆ ಸುಗಮವಾಗಿ ಆಗಬೇಕು. ಆದರೆ ತಾಯಿಯಲ್ಲಿ ಉಂಟಾಗುವ ಒತ್ತಡದಿಂದ ಮಗುವಿನ ಬೆಳವಣಿಗೆಯಲ್ಲಿ ನ್ಯೂನತೆ ಉಂಟಾಗಬಹುದು. ಅಲ್ಲದೆ ಅನೇಕ ಸಂದರ್ಭದಲ್ಲಿ ಬ್ರೂಣವು ಉರಿಯೂತವನ್ನ ಪ್ರತಿಕ್ರಿಯಿಸುತ್ತದೆ ಎಂದು ಹೇಳಲಾಗುವುದು. ಈ ಉರಿಯೂತದ ಪ್ರತಿಕ್ರಿಯೆಯು ಒಂಬತ್ತು ತಿಂಗಳ ಪೂರ್ತಿ ಮುಂದುವರಿಯುತ್ತಲೇ ಹೋಗುವುದು. ನಂತರ ಮಗುವಿನ ಜನನದ ಮೇಲೂ ಪ್ರಭಾವ ಬೀರುವುದು ಎಂದು ಹೇಳಲಾಗುತ್ತದೆ.

ಕಡಿಮೆ ಜನನದ ತೂಕ:

ಕಡಿಮೆ ಜನನದ ತೂಕ:

ಗರ್ಭಾವಸ್ಥೆಯಲ್ಲಿ ಒತ್ತಡ ಉಂಟಾದಾಗ ಕಂಡುಬರುವ ಸಮಸ್ಯೆಗಳಲ್ಲಿ ಇದೂ ಒಂದು. ಹೆಚ್ಚಿನ ಒತ್ತಡ ಉಂಟಾದಾಗ ಭ್ರೂಣಕ್ಕೆ ತನ್ನ ತಾಯಿಯ ದೇಹದಿಂದ ಪೋಷಕಾಂಶಗಳನ್ನು ಸೂಕ್ತ ರೀತಿಯಲ್ಲಿ ಹೀರಿಕೊಳ್ಳಲು ಸಾಧ್ಯವಾಗದು. ಇದರ ಪರಿಣಾಮವಾಗಿ ಮಗುವಿನ ಬೆಳವಣಿಗೆ ಕುಂಟಿತವಾಗುವುದು. ನೈಸರ್ಗಿಕ ರೀತಿಯ ಪ್ರಸವಕ್ಕೂ ಅಡ್ಡಿ ಉಂಟಾಗಬಹುದು. ಇಲ್ಲವೇ ಅಕಾಲಿಕ ಪ್ರಸವ ಉಂಟಾಗುವ ಸಾಧ್ಯತೆಗಳು ಇರುತ್ತವೆ ಎಂದು ವೈದ್ಯರು ಹೇಳುತ್ತಾರೆ. ಸುರಕ್ಷಿತ ಗರ್ಭಾವಸ್ಥೆ ಹಾಗೂ ಉತ್ತಮ ಮಗುವಿನ ಆರೋಗ್ಯಕ್ಕಾಗಿ ಆದಷ್ಟು ಒತ್ತಡದಿಂದ ದೂರ ಉಳಿಯಲು ಪ್ರಯತ್ನಿಸಬೇಕು.

ಭ್ರೂಣದ ಮಿದುಳು ಬೆಳವಣಿಗೆ:

ಭ್ರೂಣದ ಮಿದುಳು ಬೆಳವಣಿಗೆ:

ತಾಯಿಯಲ್ಲಾಗುವ ಒತ್ತಡವು ಮಗುವಿನ ಮಿದುಳು ಬೆಳವಣಿಗೆಯ ಮೇಲೆ ನೇರವಾದ ಪ್ರಭಾವ ಉಂಟಾಗುವುದು ಎಂದು ವೈದ್ಯರು ಹೇಳುತ್ತಾರೆ. ಇದು ಮಗುವಿನ ಮೇಲೆ ದೀರ್ಘ ಕಾಲದ ಪರಿಣಾಮ ಬೀರುವುದು ಎಂದು ಹೇಳಲಾಗುವುದು. ಮಗುವಿನ ಮಿದುಳಿನ ಮೇಲೆ ಉಂಟಾದ ಪ್ರಭಾವಗಳು ಮಗು ಹುಟ್ಟಿದ ತಕ್ಷಣ ತಿಳಿಯದು. ದಿನಕಳೆದಂತೆ ಮಗುವಿನ ಬೆಳವಣಿಗೆ ನಡೆಯುವುದು. ಆಗ ಸಮಸ್ಯೆಗಳನ್ನು ಗುರುತಿಸಬಹುದು. ಇಂತಹ ಮಕ್ಕಳಲ್ಲಿ ಅಧಿಕ ರಕ್ತದ ಒತ್ತಡದಂತಹ ಅಪಾಯ ಉಂಟಾಗಬಹುದು. ಮಕ್ಕಳಲ್ಲಿ ಮಾನಸಿಕ ಬದಲಾವಣೆಗಳು ಚಿಂತನೀಯ ರೀತಿಯಲ್ಲಿ ಉಂಟಾಗುವುದು. ಅಲ್ಲದೆ ಮಕ್ಕಳು ಬೆಳವಣಿಗೆ ಹೊಂದಿದ ನಂತರ ಜೀವನದಲ್ಲೂ ಬಹುಬೇಗ ಅಧಿಕ ಒತ್ತಡಕ್ಕೆ ಒಳಗಾಗುವ ಮಾನಸಿಕ ಶಕ್ತಿಯನ್ನು ಪಡೆದುಕೊಳ್ಳುವರು.

ಗರ್ಭಪಾತದ ಸಾಧ್ಯತೆ:

ಗರ್ಭಪಾತದ ಸಾಧ್ಯತೆ:

ಗರ್ಭಾವಸ್ಥೆಯಲ್ಲಿ ಉಂಟಾಗುವ ಒತ್ತಡವು ಗರ್ಭಕೋಶದಲ್ಲಿ ರಾಸಾಯನಿಕ ಹಾನಿಯನ್ನುಂಟುಮಾಡುವುದು ಎಂದು ವೈದ್ಯರು ಹೇಳುತ್ತಾರೆ. ಒತ್ತಡ ಉಂಟಾದಾಗ ಕಾರ್ಟಿಕೋಟ್ರೋಪಿನ್ ಎನ್ನುವ ಹಾರ್ಮೋನ್ ಬಿಡುಗಡೆಯಾಗುವುದು. ಈ ಹಾರ್ಮೋನ್‍ಗಳ ಬದಲಾವಣೆಯಿಂದ ಗರ್ಭಕೋಶದಲ್ಲಿ ಅಧಿಕ ಸಂಕೋಚನವನ್ನು ಉಂಟುಮಾಡುವುದು. ಇದು ಬಹುತೇಕ ಸಂದರ್ಭದಲ್ಲಿ ಗರ್ಭವನ್ನು ಕುಗ್ಗಿಸುವುದು ಅಥವಾ ಗರ್ಭಪಾತಕ್ಕೆ ಕಾರಣವಾಗುವುದು. ಹಾಗಾಗಿ ಬಾಹ್ಯ ಪರಿಸ್ಥಿತಿ ಹೇಗೇ ಇರಲಿ, ನಿಮ್ಮ ಮಗುವಿನ ಬೆಳವಣಿಗೆ ಉತ್ತಮವಾಗಿರಬೇಕು ಎಂದು ನೀವು ಬಯಸುವುದಾದರೆ ಒತ್ತಡದಿಂದ ದೂರ ಇರಲು ಪ್ರಯತ್ನಿಸಿ. ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಹೇಗಿರಬೇಕು ಎನ್ನುವುದರ ಕುರಿತು ಚಿಂತಿಸಿ. ಹಾಗಾದರೆ ಗರ್ಭಾವಸ್ಥೆಯಲ್ಲಿ ಒತ್ತಡವನ್ನು ತಡೆಯುವುದು ಹೇಗೆ?

ಧ್ಯಾನ ಮಾಡಿ

ಧ್ಯಾನ ಮಾಡಿ

*ನಿಮಗೆ ಆರಾಮವೆನಿಸುವ ಭಂಗಿಯಲ್ಲಿ ಚಕ್ಕಲೆಮಕ್ಕಲೆ ಕುಳಿತುಕೊಳ್ಳಿ. ಆರಾಮ ಅನ್ನಿಸದಿದ್ದರೆ ಕುರ್ಚಿಯ ಮೇಲೂ ಕುಳಿತುಕೊಳ್ಳಹುದು. ಸಾಧ್ಯವಾದಷ್ಟು ಬೆನ್ನುಮೂಳೆ ನೆಟ್ಟಗೇ ಇರಲಿ.

*ಮನಸ್ಸು ಸೆಳೆಯುವ ಯಾವುದೇ ವಸ್ತು ಎದುರಿಗಿರದಂತೆ ನೋಡಿಕೂಳ್ಳಿ. ಕಣ್ಣುಮುಚ್ಚಿಕೊಂಡು ನಿಮ್ಮ ಗಮನವನ್ನು ಒಂದು ವಿಷಯದತ್ತ ಕೇಂದ್ರೀಕರಿಸಿ.

*ಈ ಸಮಯದಲ್ಲಿ ಕೇವಲ ಧನಾತ್ಮಕ ವಿಚಾರಗಳು ಆವರಿಸಲಿ. ಉದಾಹರಣೆಗೆ ನನಗೆ ಹುಟ್ಟಲಿರುವ ಮಗು ಉತ್ತಮ ವ್ಯಕ್ತಿಯಾಗಿದ್ದು ಸಮಾಜದಲ್ಲಿ ಮನ್ನಣೆ ಮತ್ತು ಗೌರವ ಪಡೆಯುತ್ತಾನೆ/ತ್ತಾಳೆ ಇತ್ಯಾದಿ.

*ಪ್ರತಿದಿನ ಒಂದೇ ಸಮಯವನ್ನು ಆಯ್ದುಕೊಂಡು ಆ ಪ್ರಕಾರವೇ ಅನುಸರಿಸಿ. ಇದರಿಂದ ಹೆರಿಗೆಯ ಸಮಯದಲ್ಲಿ ಮಾತ್ರವಲ್ಲ ಮುಂದಿನ ಜೀವನದಲ್ಲಿಯೂ ಒತ್ತಡವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ.

ಸರಳ ವ್ಯಾಯಮ ಮಾಡಿ

ಸರಳ ವ್ಯಾಯಮ ಮಾಡಿ

ಗರ್ಭಾವಸ್ಥೆಯಲ್ಲಿ ದಿನಕ್ಕೆ ಅರ್ಧ ಗಂಟೆಯಾದರೂ ಸರಳ ವ್ಯಾಯಮಗಳನ್ನು ಮಾಡುವುದು ಅಗತ್ಯ. ನಿಯಮಿತವಾಗಿ, ದಿನಕ್ಕೆ ಒಂದು ಸೂಕ್ತ ವೇಳೆಯನ್ನು ನಿಗದಿಪಡಿಸಿ ಆ ವೇಳೆಯನ್ನು ವ್ಯಾಯಾಮಕ್ಕೆ ಮುಡಿಪಾಗಿಡಿ. ಇದರಿಂದ ದೇಹದ ಜೊತೆಗೇ ಮನಸ್ಸಿಗೂ ಮುದ ನೀಡಿದಂತಾಗುತ್ತದೆ. ನಿಯಮಿತ ವ್ಯಾಯಾಮದಿಂದ ದೇಹದಲ್ಲಿ ಒತ್ತಡ ಮತ್ತು ದುಗುಡಕ್ಕೆ ಕಾರಣವಾಗಿರುವ ಕಾರ್ಟಿಸೋಲ್ ಎಂಬ ರಸದೂತದ ಮಟ್ಟ ಕಡಿಮೆಯಾಗುವಂತೆ ಮಾಡಿ ಒತ್ತಡದಿಂದ ಮುಕ್ತರಾಗಬಹುದು.

ಆದಷ್ಟು ವಿಶ್ರಾಂತಿ ತೆಗೆದುಕೊಳ್ಳಿ

ಆದಷ್ಟು ವಿಶ್ರಾಂತಿ ತೆಗೆದುಕೊಳ್ಳಿ

ಗರ್ಭಾವಸ್ಥೆಯಲ್ಲಿ ಸಾಕಷ್ಟು ವಿಶ್ರಾಂತಿ ಅಗತ್ಯ. ದಿನದ ಚಟುವಟಿಕೆಯಲ್ಲಿ ವಿಶ್ರಾಂತಿ ಇಲ್ಲದಿರುವುದು ಮತ್ತು ಅನವರತ ನಿದ್ದೆಯ ಕಾರಣ ಚಡಪಡಿಕೆ, ಮನದಲ್ಲಿ ಋಣಾತ್ಮಕ ಚಿಂತನೆ ಮೊದಲಾದವು ಮೂಡುತ್ತವೆ. ಇವು ಒತ್ತಡಕ್ಕೆ ಕಾರಣವಾಗುತ್ತವೆ. ಆದ್ದರಿಂದ ದಿನಕ್ಕೆ ಸಾಕಷ್ಟು ಕಾಲ ತಡೆಯಿಲ್ಲದ ನಿದ್ದೆ ಮಾಡಿ.

English summary

How Does Stress Affect The Baby In The Womb?

Doctors advise us not to take stress. And specially pregnant women are advised not to take stress at all.An abrupt change in any of the vital parameters of your body will actually prove to be dangerous for your baby. And it may be the reason for low birth weight, issues in fetal brain development and also cause miscarriage.
X
Desktop Bottom Promotion