For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆ ವೇಳೆ ಕಾಡುವ ಚರ್ಮ ಕಪ್ಪಾಗುವ ಸಮಸ್ಯೆ!

By Hemanth
|

ಗರ್ಭಧಾರಣೆ ಎನ್ನುವುದು ತುಂಬಾ ಕಠಿಣ ಸಮಯ. ಇದು ಹಲವಾರು ರೀತಿಯ ಏರಿಳಿತಗಳನ್ನು ಒಳಗೊಂಡಿರುವಂತದ್ದು. ಹಾರ್ಮೋನು ಬದಲಾವಣೆಯಿಂದ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಆಗುವುದು. ಆದರೆ ಇನ್ನು ಕೆಲವು ಸಮಸ್ಯೆಗಳ ಬಗ್ಗೆ ನೀವು ಇದುವರೆಗೆ ಕೇಳಿರಲು ಕೂಡ ಸಾಧ್ಯವಿಲ್ಲ. ಗರ್ಭಧಾರಣೆ ಆಗುವಂತಹ ಮಹಿಳೆಯು ಯಾವುದೇ ವಿಚಾರವನ್ನು ಮುಚ್ಚಿಡಲು ಸಾಧ್ಯವಿಲ್ಲ. ಯಾಕೆಂದರೆ ಹೊಟ್ಟೆ ದೊಡ್ಡದಾಗುವುದು, ಕೆಲವೊಂದು ಸಲ ಚರ್ಮವು ಕಪ್ಪಾಗುವುದು, ನೆರಿಗೆ ಹಾಗೂ ಕಲೆಗಳು ಮೂಡುವುದು ಇತ್ಯಾದಿಗಳು. ಕೆಲವೊಂದು ಲಕ್ಷಣಗಳನ್ನು ಗರ್ಭಿಣಿಯರಿಗೆ ಎಲ್ಲರಿಂದ ಮುಚ್ಚಿಸಲು ಸಾಧ್ಯವಿಲ್ಲ.

ಗರ್ಭಧಾರಣೆ ವೇಳೆ ಚರ್ಮ ಕಪ್ಪಾಗುವುದು

ಗರ್ಭಧಾರಣೆ ವೇಳೆ ಚರ್ಮದಲ್ಲಿ ಕಪ್ಪು ಕಲೆಗಳು ಮೂಡುವ ಬಗ್ಗೆ ತಿಳಿಯಲು ಮುಂದಕ್ಕೆ ಓದಿ.

  • * ಮುಖದ ಮೇಲೆ ಮೂಡುವಂತಹ ಕಲೆಯನ್ನು ಕ್ಲೋಸ್ಮಾ ಎಂದು ಕರೆಯಲಾಗುತ್ತದೆ. ಕೆಲವೊಂದು ಸಲ ಇದನ್ನು ಗರ್ಭಧಾರಣೆಯ ಗುರುತು ಎನ್ನಲಾಗುವುದು. ಹೆರಿಗೆ ಬಳಿಕ ಇದು ತನ್ನಿಂದತಾನೇ ಮಾಯವಾಗುವುದು.
  • * ಸ್ತನ ತೊಟ್ಟುಗಳು ಹಿಂದಿನಿಂದ ಮತ್ತಷ್ಟು ಕಪ್ಪಾಗುವುದು. ಸ್ತನಗಳ ಸೂಕ್ಷ್ಮತೆಯು ಗರ್ಭಧಾರಣೆಯ ಮೊದಲ ಲಕ್ಷಣಗಳಲ್ಲಿ ಒಂದಾಗಿದೆ. ನೀವು ಮನೆಯಲ್ಲೇ ಗರ್ಭಧಾರಣೆ ಪರೀಕ್ಷೆ ಮಾಡುವುದಕ್ಕೆ ಮೊದಲೇ ಇದರಿಂದ ತಿಳಿಯಬಹುದು.
  • * ಸ್ತನ ತೊಟ್ಟುಗಳ ಸುತ್ತಲಿನ ಸ್ವಲ್ಪ ಕಪ್ಪು ಭಾಗವು ಮತ್ತಷ್ಟು ಕಪ್ಪಾಗುವುದು.
  • * ಜನನೇಂದ್ರಿಯದ ಸುತ್ತಲು ಕಪ್ಪು ಕಲೆಗಳು. ತೊಡೆ ಹಾಗೂ ಕಂಕುಳಿನ ಅಡಿಯಲ್ಲೂ ಕಪ್ಪು ಕಲೆಗಳು ಬರುವುದು.
  • * ಹಿಮ್ಮಡಿ ಮತ್ತು ಕೈಗಳು ಕೆಂಪು ಬಣ್ಣಕ್ಕೆ ಬರುವುದು.
Pregnancy
  • * ಮುಖದಲ್ಲಿನ ಮಚ್ಚೆಗಳು ಮೊದಲು ಕಂಡುಬರದೇ ಇದ್ದರೂ ಗರ್ಭಧಾರಣೆ ಬಳಿಕ ಇದು ಕಡುಕಪ್ಪು ಬಣ್ಣಕ್ಕೆ ತಿರುಗುವುದು.
  • * ಗರ್ಭಧಾರಣೆಯ ತಿಂಗಳುಗಳು ಸಾಗಿದಂತೆ ನಿಮಗೆ ಹೊಟ್ಟಯ ಮೇಲೆ ಕಪ್ಪು ಗೆರೆಗಳು ಕಂಡುಬರುವುದು. ಇದು ಹೆರಿಗೆಯಾದ 3-4 ತಿಂಗಳಲ್ಲಿ ಮಾಯವಾಗುವುದು.
  • * ಕಪ್ಪಗಿರುವವರು ಗರ್ಭಧಾರಣೆ ವೇಳೆ ಮತ್ತಷ್ಟು ಕಪ್ಪಗೆ ಆಗುವಂತಹ ಸಾಧ್ಯತೆಗಳು ಇವೆ.

ಗರ್ಭಧಾರಣೆ ವೇಳೆ ತ್ವಚೆಯು ಕಪ್ಪಾಗುವುದನ್ನು ತಡೆಯುವುದು

ಗರ್ಭಧಾರಣೆ ವೇಳೆ ತ್ವಚೆಯು ಕಪ್ಪಾಗುವುದನ್ನು ಗರ್ಭಧಾರಣೆ ವೇಳೆ ತ್ವಚೆಯು ಕಪ್ಪಾಗುವುದನ್ನು ತಡೆಯಲು ಕೆಲವೊಂದು ವಿಧಾನಗಳನ್ನು ನಿಮಗೆ ಸೂಚಿಸಲಾಗಿದೆ. ಇದನ್ನು ಅನುಸರಿಸಿಕೊಂಡು ಹೋದರೆ ಫಲಿತಾಂಶ ಸಿಗುವುದು

  • * ಬಿಸಿಲಿನಲ್ಲಿ ಇರುವಾಗ ನೀವು ಟೋಪಿ ಧರಿಸಿ. ಮುಖಕ್ಕೆ ಒಳ್ಳೆಯ ಗುಣಮಟ್ಟದ ಸನ್ ಸ್ಕ್ರೀನ್ ಬಳಸುವುದನ್ನು ಮರೆಯಬೇಡಿ.
  • * ಉದ್ದಗಿನ ಕೈಯಿರುವ ಮತ್ತು ನೇರವಾಗಿ ಬಿಸಿಲು ತಾಗದೆ ಇರುವಂತಹ ಬಟ್ಟೆಗಳನ್ನು ಧರಿಸಿ. ಇದರಿಂದ ಚರ್ಮ ಕಪ್ಪಾಗುವುದನ್ನು ತಡೆಯಬಹುದು.
  • * ಮಧ್ಯಾಹ್ನ ವೇಳೆ ದೇಹವು ಬಿಸಿಲಿಗೆ ಒಡ್ಡದಂತೆ ನೋಡಿಕೊಳ್ಳಿ. ತುರ್ತಾಗಿ ನಿಮಗೆ ಹೋಗಲೇ ಬೇಕಿದ್ದರೆ ಚರ್ಮವನ್ನು ಸಂಪೂರ್ಣವಾಗಿ ಒದ್ದುಕೊಳ್ಳಿ.
  • * ಕ್ಲೊಸ್ಮಾ ಇದೆಯೆಂದು ವೈದ್ಯರು ನಿಮಗೆ ತಿಳಿಸಿದ್ದರೆ ಆಗ ನೀವು ದಿನಾಲೂ ಸನ್ ಸ್ಕ್ರೀನ್ ಬಳಸಿ. ನೀವು ಹೊರಗಡೆ ಹೋದರೂ, ಹೋಗದೇ ಇದ್ದರೂ ಇದು ಅನಿವಾರ್ಯ. ಸೂರ್ಯನ ಕಿರಣಗಳು ನೇರವಾಗಿ ನಿಮ್ಮ ಮನೆ ಕಿಟಕಿ ಮತ್ತು ಬಾಗಿಲಿನ ಮೂಲಕವಾಗಿ ಒಳಗೆ ಬರಬಹುದು. ಇದರಿಂದ ಚರ್ಮವನ್ನು ರಕ್ಷಿಸಿ.
  • * ಕಲವೊಂದು ಎಣ್ಣೆಗಳನ್ನು ಬಳಸಿಕೊಳ್ಳಲು ಸೂಚಿಸಲಾಗುತ್ತದೆ. ಆದರೆ ಇದು ತುಂಬಾ ಪರಿಣಾಮಕಾರಿ ಎಂದು ಇದುವರೆಗೆ ಸಾಬೀತಾಗಿಲ್ಲ. ಗರ್ಭಧಾರಣೆಯ 12 ವಾರಗಳಲ್ಲಿ ಇಂತಹ ಎಣ್ಣೆಗಳ ಬಳಕೆ ನಿಲ್ಲಿಸಿ. ಎಣ್ಣೆ ಮತ್ತು ಕ್ರೀಮ್ ಗಳ ಬಗ್ಗೆ ವೈದ್ಯರು ನಿಮಗೆ ಒಳ್ಳೆಯ ಸಲಹೆ ನೀಡಬಹುದು.
  • * ಫಾಲಿಕ್ ಆಮ್ಲದಿಂದಾಗಿ ಚರ್ಮದ ಬಣ್ಣವು ಕಡಿಮೆಯಾಗುವುದು ಎಂದು ಕೆಲವು ವೈದ್ಯರು ಹೇಳುತ್ತಾರೆ. ಗರ್ಭಧಾರಣೆ ವೇಳೆ ಫಾಲಿಕ್ ಆಮ್ಲವು ಅತೀ ಅಗತ್ಯ. ನಿಮ್ಮ ಆಹಾರ ಕ್ರಮದಲ್ಲಿ ಫಾಲಿಕ್ ಆಮ್ಲವಿರುವ ಆಹಾರಗಳನ್ನು ಸೇರಿಸಿಕೊಳ್ಳಿ. ನಿಮ್ಮ ವೈದ್ಯರು ಫಾಲಿಕ್ ಆಮ್ಲದ ಮಾತ್ರೆಗಳ ಬಗ್ಗೆ ಕೂಡ ತಿಳಿಸಿಬಹುದು.
  • * ಚರ್ಮದ ಬಣ್ಣ ಕೆಡದಂತೆ ಇರಲು ನೀವು ಸೂರ್ಯನ ನೇರ ಕಿರಣಗಳು ದೇಹದ ಮೇಲೆ ಬೀಳದಂತೆ ನೋಡಿಕೊಳ್ಳಬೇಕು ಎಂದು ತಜ್ಞ ವೈದ್ಯರಾಗಿಡುವ ಡಾ. ಡಿ. ಲೋ ತಿಳಿಸಿದ್ದಾರೆ.

ಅಮೆರಿಕಾದ ಅಕಾಡೆಮಿ ಆಫ್ ಡೆರ್ಮಟಾಲಜಿ ಪ್ರಕಾರ ಗರ್ಭಿಣಿ ಮಹಿಳೆಯರ ಬಣ್ಣ ಕಪ್ಪಾಗುವುದು ಕಂಡುಬಂದಿದೆ. ಹೆಚ್ಚಿನ ಸಂದರ್ಭಗಳಲ್ಲಿ ಹೆರಿಗೆ ಬಳಿಕ ಕಪ್ಪಾದ ಚರ್ಮವು ತನ್ನ ಮೂಲ ಬಣ್ಣಕ್ಕೆ ಬರುವುದು. ಕೆಲವು ತಿಂಗಳ ಬಳಿಕ ಕೂಡ ಚರ್ಮದ ಬಣ್ಣ ಕಪ್ಪಾಗಿದ್ದರೆ ಆಗ ನೀವು ಚರ್ಮರೋಗ ವೈದ್ಯರಲ್ಲಿ ಇದನ್ನು ತೋರಿಸುವುದು ಉತ್ತಮ. ಆದರೆ ನೀವು ಮಗುವಿಗೆ ಸ್ತನಪಾನ ಮಾಡಿಸುತ್ತಿರುವ ವೇಳೆ ಬ್ಲೀಚಿಂಗ್ ಮಾಡುವಂತಹ ಕ್ರೀಮ್ ಗಳನ್ನು ಬಳಸಬೇಡಿ. ಹೆರಿಗೆ ಬಳಿಕ ನಿಮಗೆ ಯಾವ ರೀತಿಯ ಕ್ರೀಮ್ ಸೂಕ್ತ ಎಂದು ವೈದ್ಯರು ಸೂಚಿಸುವರು.

ಇದರಿಂದ ವೈದ್ಯರ ಸಲಹೆ ಪಡೆಯಿರಿ. ಚರ್ಮವು ಕಪ್ಪಾಗುವುದು ಹಾಗೆ ಉಳಿದರೆ ಇದು ಮತ್ತೆ ಮೂಲ ಬಣ್ಣಕ್ಕೆ ಬರುವುದಿಲ್ಲ. ಇದಕ್ಕಾಗಿ ನೀವು ಲೇಸರ್ ಚಿಕಿತ್ಸೆ ಮಾಡಿಸಿಕೊಳ್ಳಿ. ಗರ್ಭಧಾರಣೆಯಾದ ಒಂದೇ ದಿನದಲ್ಲಿ ಚರ್ಮ ಕಪ್ಪಾಗುವುದಿಲ್ಲ. ಗರ್ಭಧಾರಣೆ ಅವಧಿ ಮುಂದುವರಿಯುತ್ತಿರುವಂತೆ ಹೀಗೆ ಆಗುವುದು. ಹಾರ್ಮೋನು ಬದಲಾವಣೆಯು ನಿಮ್ಮ ನಿಯಂತ್ರಣದಲ್ಲಿ ಇರದೇ ಇರುವ ಕಾರಣ ಗರ್ಭಧಾರಣೆ ವೇಳೆ ನೀವು ಒಳಗಡೆ ಇರಿ ಮತ್ತು ಬಿಸಿಲಿಗೆ ನೇರವಾಗಿ ಮೈಯೊಡ್ಡಬೇಡಿ. ನಿಮಗೆ ಇಂತಹ ಸಮಸ್ಯೆ ನಿವಾರಣೆ ಮಾಡಲು ಹಲವಾರು ರೀತಿಯ ಚಿಕಿತ್ಸೆಗಳು ಲಭ್ಯವಿದೆ. ಇದರಿಂದ ಹೆಚ್ಚು ಒತ್ತಡಕ್ಕೆ ಒಳಗಾಗಬೇಡಿ.

ಕೆಲವೊಂದು ಸಲಹೆಗಳು
ಗರ್ಭಿಣಿ ಮಹಿಳೆಯರು ಕೆಲವೊಂದು ದುಬಾರಿ ಸ್ನಾನದ ಉತ್ಪನ್ನಗಳನ್ನು ದೂರವಿರಿಸಬೇಕು. ಇದರಲ್ಲಿ ಹಾನಿಕಾರಕ ರಾಸಾಯನಿಕಗಳು ಇವೆ ಮತ್ತು ಇದನ್ನು ಕಡೆಗಣಿಸಲೇಬೇಕು. ಸ್ವಲ್ಪ ಅಗ್ಗದ ಅಥವಾ ಮಧ್ಯಮ ಬೆಲೆಯ ಸ್ನಾನದ ಉತ್ಪನ್ನಗಳಲ್ಲಿ ಸುರಕ್ಷಿತ ರಾಸಾಯನಿಕಗಳಿರುತ್ತದೆ. ಸುರಕ್ಷಿತ ಸ್ನಾನದ ಸೋಪವನ್ನು ಬಳಸುವುದು ತುಂಬಾ ಒಳ್ಳೆಯದು.

ಚರ್ಮ ಬಿಳಿಯಾಗಿಸುವ ಉತ್ಪನ್ನಗಳಿಂದ ದೂರವಿರಿ
ಚರ್ಮ ಬಿಳಿಯಾಗಿಸುವ ಉತ್ಪನ್ನಗಳು ಇವುಗಳಲ್ಲಿ ಅನೇಕ ರಾಸಾಯನಿಕ ಪದಾರ್ಥಗಳಿದ್ದು, ಇವು ನಿಮ್ಮ ಶಿಶುವನ್ನು ಹಾನಿಗೀಡು ಮಾಡಬಲ್ಲವು. ಅ೦ತಹ ಕ್ರೀಮ್‪‌ಗಳಿಗೆ ಒ೦ದು ಉದಾಹರಣೆಯೆ೦ದರೆ ಹೈಡ್ರೊಕ್ವಿನೋನ್ ಕ್ರೀಮ್‌ಗಳು.ಈ ಕ್ರೀಮ್‌ಗಳನ್ನು ತ್ವಚೆಯ ಕಲೆಗಳ ನಿವಾರಣೆಗೆ ಹಾಗೂ ತನ್ಮೂಲಕ ತ್ವಚೆಯನ್ನು ತಿಳಿಗೊಳಿಸಿಕೊಳ್ಳುವುದಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಗರ್ಭಿಣಿಯರು ಬಳಸಬಾರದ ತ್ವಚೆಗೆ ಸ೦ಬ೦ಧಿಸಿದ ಕ್ರೀಮ್‌ಗಳ ಪೈಕಿ ಇದೂ ಕೂಡಾ ಒ೦ದು.

ಶಾಂಪೂಗಳು
ತಲೆಹೊಟ್ಟು ಮತ್ತು ಫಂಗಲ್ ಅನ್ನು ನಿವಾರಿಸುವಂತಹ ಕೆಲವೊಂದು ಶಾಂಪೂಗಳಲ್ಲಿ ಇರುವಂತಹ ರಾಸಾಯನಿಕವು ಗರ್ಭಿಣಿ ಮಹಿಳೆಯರಿಗೆ ತುಂಬಾ ಹಾನಿಕಾರವಾಗಿರುವ ಕಾರಣದಿಂದಾಗಿ ಇದನ್ನು ಕಡೆಗಣಿಸಿ. ಇದರಲ್ಲಿನ ರಾಸಾಯನಿಕವು ತಲೆಬುರುಡೆಯ ಮೂಲಕ ರಕ್ತವನ್ನು ಸೇರಿಕೊಳ್ಳಬಹುದು.

ಸುಗಂಧದ್ರವ್ಯ ಮತ್ತು ಡಿಯೋ
ಸುಗಂಧದ್ರವ್ಯ ಮತ್ತು ಡಿಯೋದಲ್ಲಿರುವ ಆಲ್ಕೋಹಾಲ್ ಮತ್ತು ರಾಸಾಯನಿಕಗಳು ನಿಮ್ಮ ಚರ್ಮದ ಮೂಲಕವಾಗಿ ರಕ್ತವನ್ನು ಸೇರಿಕೊಳ್ಳುವುದು. ಅತಿಯಾಗಿ ಇದನ್ನು ಬಳಸಿದರೆ ಅದರಿಂದ ಗರ್ಭಿಣಿ ಮಹಿಳೆಯರ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

English summary

How Common Is Skin Darkening During Pregnancy?

Some of the pregnancy symptoms when hidden do not bother you much, but there are some that cannot be hidden - like your bulging tummy and for many to-be-moms the issue with skin darkening. Appearance of blotches, along with patches and lines, is one of the symptoms of pregnancy whose visibility you cannot hide much. Read on to know more about the darkened patches that you might develop during pregnancy.
X
Desktop Bottom Promotion